Thursday, October 28, 2010

ಕೃಷಿ ಮಾಧ್ಯಮ ಕೇಂದ್ರದ ದಶಮಾನೋತ್ಸವ

ಕೃಷಿ ಮಾಧ್ಯಮ ಕೇಂದ್ರದ ದಶಮಾನೋತ್ಸವ

ಕೃಷಿಕಪರ ಪತ್ರಿಕೋದ್ಯಮ - ಎರಡು ದಶಕದ ಈಚೆಗಿನ ಎದ್ದು ಕಾಣಿಸತೊಡಗಿದ ಪರಿಕಲ್ಪನೆ. ಕೃಷಿಯ ಕುರಿತು ವಿಜ್ಞಾನಿಗಳೇ ಬರೆಯಬೇಕು ಎಂದಿದ್ದ ಸ್ಥಿತಿಯನ್ನು ಬದಲಿಸಿ, ರೈತರೂ ತಮ್ಮ ಅನುಭವದ ಮೂಸೆಯಿಂದ ಬರೆಯಬಹುದೆಂದು ಅಡಿಕೆ ಪತ್ರಿಕೆ ತೋರಿಕೊಟ್ಟಿತು.

ಈ ಹಾದಿಯಲ್ಲೀಗ ಕೃಷಿ ಮಾಧ್ಯಮ ಕೇಂದ್ರ (ಕಾಮ್ - CAM - Centre for Agricultural Media) ) ದೊಡ್ಡ ಹೆಜ್ಜೆ ಇಟ್ಟಿದೆ. ಮುಖ್ಯವಾಹಿನಿ ಪತ್ರಿಕೆಗಳಿಗೆ 'ಸೆಡ್ಡು ಹೊಡೆಯದೆ' ರೈತರ ದನಿಯಾಗಿ ಪತ್ರಕರ್ತರನ್ನು ರೂಪಿಸುತ್ತಿದೆ.


ಈಗ ಕೃಷಿ ಮಾಧ್ಯಮ ಕೇಂದ್ರಕ್ಕೆ ದಶಮಾನೋತ್ಸವ ಸಂಭ್ರಮ.


ದಶಮಾನೋತ್ಸವ ಸಮಾರಂಭ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ದೇವವೃಂದದಲ್ಲಿ ಅಕ್ಟೋಬರ್ 31, 2010 ಭಾನುವಾರ ಬೆಳಿಗ್ಗೆ 10 ಗಂಟೆಗೆ ಆರಂಭವಾಗಲಿದೆ.

ಸಮಾರಂಭದ ಆಮಂತ್ರಣ ಪತ್ರಿಕೆ ಇಲ್ಲಿದೆ. ಮೇಲಿನ ಚಿತ್ರದ ಮೇಲೆ ಕ್ಲಿಕ್ ಮಾಡಿ ಕಾಮ್ ನಡೆದುಬಂದ 10 ವರ್ಷಗಳ ಹಾದಿಯ ಸಿಂಹಾವಲೋಕನ ಮಾಡಿ.

-ನೆತ್ರಕೆರೆ ಉದಯಶಂಕರ




Wednesday, October 20, 2010

Forestry Students cooking on road..!

Forestry Students cooking

on Road..!



Forestry College students of Sirsi Forestry College of  Dharwad Agriculture University and Forestry College Ponnampet of Bangalore University who were on strike since 27 August 2010, now cooking on the road / college premises as the mess was closed down by the University managements.

The students are on roads pressing their demand to make BSc (Forestry) the minimum educational qualifications for the posts of ACF and RFO.

They are demanding to consider their degree which is of 4 years during which they are taught on Forestry Management and Wildlife Management etc.

Click the images to read story of Forestry College Students and their demand.

-Nethrakere Udaya Shankara

Thursday, October 14, 2010

ಸೋತ ಭಿನ್ನಮತ, ಬಿಜೆಪಿಗೆ ಬಹುಮತ

ಸೋತ ಭಿನ್ನಮತ, ಬಿಜೆಪಿಗೆ ಬಹುಮತ

ಬೆಂಗಳೂರು: ರಾಜ್ಯಪಾಲರ ಸಲಹೆ ಮೇರೆಗೆ ಈದಿನ (14 ಅಕ್ಟೋಬರ್ 2010) ಕರ್ನಾಟಕ ರಾಜ್ಯ ವಿಧಾನಸಭೆಯಲ್ಲಿ ನಡೆದ ಎರಡನೇ ವಿಶ್ವಾಸ ಮತಯಾಚನೆಯಲ್ಲಿ 106 ಮತಗಳನ್ನು ಗಳಿಸುವ ಮೂಲಕ ಬಿ.ಎಸ್. ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರವು ತನ್ನ ಬಹುಮತವನ್ನು ಸಾಬೀತು ಪಡಿಸಿತು.

ಅಕ್ಟೋಬರ್ 11ರಂದು ನಡೆದ ವಿಶ್ವಾಸಮತಯಾಚನೆ ಸಂದರ್ಭದಲ್ಲಿ ತೀವ್ರ ಗೊಂದಲ, ಪ್ರತಿಭಟನೆ ಮಧ್ಯೆ ಧ್ವನಿ ಮತದ ಮೂಲಕ ಯಡಿಯೂರಪ್ಪ ಅವರು ಗೆದ್ದಿರುವುದಾಗಿ ವಿಧಾನ ಸಭಾಧ್ಯಕ್ಷ ಕೆ.ಜಿ.ಬೋಪಯ್ಯ ಪ್ರಕಟಿಸಿದ್ದರು. ಆದರೆ ಈದಿನ ಸಂಪೂರ್ಣ ಶಾಂತಿಯುತ ವಾತಾವರಣದಲ್ಲಿ ಕಲಾಪ ನಡೆದು ವಿಶ್ವಾಸಮತ ಪರವಾಗಿ 106 ಮತಗಳು ಬಂದರೆ, ವಿರುದ್ದವಾಗಿ  100 ಮತಗಳು ಬಂದವು.

 ಕಲಾಪ ಆರಂಭವಾಗುತ್ತಿದ್ದಂತೆಯೇ ಮಾತನಾಡಿದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಅವರು ಈದಿನದ ವಿಶ್ವಾತ ಮತ ಯಾಚನೆಯನ್ನು ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನಲೆಯಲ್ಲಿ ಮುಂದೂಡಬೇಕು ಎಂದು ಮನವಿ ಮಾಡಿದರು.

ಆದರೆ ವಿಧಾನ ಸಭಾಧ್ಯಕ್ಷರು ವಿರೋಧ ಪಕ್ಷ ನಾಯಕರ ಮನವಿಯನ್ನು ತಳ್ಳಿ ಹಾಕಿದರು. ವಿಧಾನಸಭಾಧ್ಯಕ್ಷರ ಸೂಚನೆಯ ಮೇರೆಗೆ ಒಂದು ವಾಕ್ಯದ ವಿಶ್ವಾಸ ಮತ ಯಾಚನೆಯ ನಿರ್ಣಯವನ್ನು ಮುಖ್ಯಮಂತ್ರಿ ಮಂಡಿಸಿದರು.

ವಿಧಾನಸಭಾಧ್ಯಕ್ಷರು ನಿರ್ಣಯವನ್ನು ಧ್ವನಿಮತಕ್ಕೆ ಹಾಕಿದಾಗ ವಿರೋಧಿ ಸದಸ್ಯರು ಮತವಿಭಜನೆಗೆ ಆಗ್ರಹ ಮಾಡಿದ್ದನ್ನು ಅನುಸರಿಸಿ ನಿರ್ಣಯವನ್ನು ಮತ ವಿಭಜನೆಗೆ ಹಾಕಲಾಯಿತು. ನಿರ್ಣಯದ ಪರ ಹಾಗೂ ವಿರುದ್ಧ ಮತ ಚಲಾಯಿಸಿದವರ ತಲೆ ಎಣಿಕೆಯ ಬಳಿಕ ಸಭಾಧ್ಯಕ್ಷರು ಫಲಿತಾಂಶವನ್ನು ಪ್ರಕಟಿಸಿ, ಬಳಿಕ ಸದನವನ್ನು ಅನಿರ್ದಿಷ್ಟಾವಧಿಗೆ ಮುಂದೂಡಿದರು.

ಬಿಜೆಪಿಯಿಂದ ಅನರ್ಹಗೊಂಡಿದ್ದ 11 ಮಂದಿ ಹಾಗೂ  ಐವರು ಪಕ್ಷೇತರರು ಕಲಾಪದಲ್ಲಿ ಪಾಲ್ಗೊಂಡಿರಲಿಲ್ಲ. ಜನತಾದಳದ ಅಶ್ವಥ್ ಹಾಗೂ ಬಿಜೆಪಿಯ ಮಾನಪ್ಪ ವಜ್ಜಲ್ ಗೈರು ಹಾಜರಾಗಿದ್ದರು.

Friday, October 1, 2010

ಗೋಕರ್ಣದಲ್ಲಿ ‘ಕೋಟಿ ರುದ್ರ', ಬೆಂಗಳೂರಿಗರೂ ಸಿದ್ಧ

ಗೋಕರ್ಣದಲ್ಲಿ ‘ಕೋಟಿ ರುದ್ರ',

ಬೆಂಗಳೂರಿಗರೂ ಸಿದ್ಧ



ರುದ್ರ ಅಂದರೆ ಯಾರು? 'ದಂ ಸಂಸಾರ ದುಃಖಮ್ ದ್ರಾವ ಯತ್ ಇತಿ ರುದ್ರಃ' ಅಂದರೆ 'ಯಾರು ಜಗತ್ತಿನ ದುಃಖಗಳೆಲ್ಲವನ್ನೂ ನಿವಾರಿಸುತ್ತಾನೋ ಆತ ರುದ್ರ' ಎಂದು ಅರ್ಥ. ಮೂರುಕಣ್ಣುಗಳ ಜಟಾಧಾರಿ ಕೈಲಾಸವಾಸಿ ಶಿವನೇ ಈ ರುದ್ರ. ರುದ್ರನ ಬಗೆಗೆ ಇರುವ ಹಲವಾರು ವರ್ಣನೆಗಳಲ್ಲಿ ಇದು ಒಂದು. ಈತ ಲಯಕರ್ತ (ಅಂತ್ಯ ಉಂಟುಮಾಡುವವ) ಕೂಡಾ. 

ಪ್ರಣವ (ಓಂಕಾರ ರೂಪ), ಸತ್ಯ, ಕಲ್ಪದ ಆರಂಭದಲ್ಲಿ ಬ್ರಹ್ಮನಿಗೆ ವೇದ ಕೊಟ್ಟವ, ಶಬ್ದದ ಮೂಲ (ಕಾರಣಕರ್ತ), ಪ್ರಾಣ ಸ್ವರೂಪ, ಬೆಳಕು, ತೇಜಸ್ಸು ಇತ್ಯಾದಿಗಳೆಲ್ಲವೂ ರುದ್ರನ ಸ್ವರೂಪಗಳೇ. ಶಕ್ತಿಯನ್ನು ಸೆಳೆದುಕೊಳ್ಳುವಂತಹ ಸಾಮರ್ಥ್ಯ ಉಳ್ಳವನೂ ರುದ್ರನೇ.

ರುದ್ರನ ಕುರಿತ ಮೊದಲ ಪ್ರಾರ್ಥನೆ ಕಂಡು ಬರುವುದು ಋಗ್ವೇದದಲ್ಲಿ. ಅದನ್ನು ರಚಿಸಿದ್ದು ಕಣ್ವ ಮಹರ್ಷಿಗಳೆಂದು ಪ್ರತೀತಿ. ಪಂಚಾಕ್ಷರಿ ಮಂತ್ರದ ಮೂಲಕವೂ ರುದ್ರನನ್ನು ಆರಾಧಿಸಬಹುದು.

ರುದ್ರನ ಪ್ರಾರ್ಥನೆಗಳಲ್ಲಿ ಅತ್ಯಂತ ಶ್ರೇಷ್ಠ ಪ್ರಾರ್ಥನೆ ಎಂಬ ಹೆಗ್ಗಳಿಕೆ ಶ್ರೀರುದ್ರಮ್ ಎಂಬ ಪ್ರಾರ್ಥನಾ ರೂಪದ ಮಂತ್ರಕ್ಕಿದೆ.

ತೈತ್ತರೀಯ ಸಂಹಿತೆಯ ನಾಲ್ಕು ಮತ್ತು ಏಳನೇ ಅಧ್ಯಾಯಗಳಲ್ಲಿ ಬರುವ ಈ ಪ್ರಾರ್ಥನಾ ಮಂತ್ರ ಕೃಷ್ಣ ಯಜುರ್ವೇದದಲ್ಲಿ ಇದೆ. 'ನಮಃ' ಎಂಬುದಾಗಿ ಕೊನೆಗೊಳ್ಳುವ 'ನಮಕಮ್' ಮತ್ತು 'ಚ ಮೇ' ಎಂಬುದಾಗಿ ಕೊನೆಗೊಳ್ಳುವ 'ಚಮಕಮ್' ಎಂಬ ಎರಡು ಭಾಗಗಳಲ್ಲಿ ಮಾಡುವ 'ರುದ್ರ ಪಠಣ' ಕೇಳಲು ಅತ್ಯಂತ ಸುಶ್ರಾವ್ಯವಾದ ಪ್ರಾರ್ಥನೆ.

'ನಮಕಮ್' ಭಯಭೀತರನ್ನಾಗಿ ಮಾಡುವ ರೌದ್ರರೂಪವನ್ನು ಮರೆತು ಶಾಂತ ಸ್ವರೂಪನಾಗಿ ನಮಗೆ ಒಳ್ಳೆಯದನ್ನು ಮಾಡು ಎಂಬುದಾಗಿ ಪ್ರಾರ್ಥಿಸುವ ಭಾಗವಾಗಿದ್ದರೆ, 'ಚಮಕಮ್' ರುದ್ರನ ಪ್ರಾರ್ಥನೆಯಿಂದ ಆಗುವ ಒಳಿತುಗಳನ್ನು ಪಟ್ಟಿ ಮಾಡುವುದರ ಜೊತೆಗೆ ಸ್ವಯಂ ನಿಯಂತ್ರಿಸಿಕೊಂಡು ಸಿಟ್ಟನ್ನು ಕ್ಷಣಕಾಲ ಮರೆತು ನಮ್ಮನ್ನು ಆಶೀರ್ವದಿಸು ಎಂದು ಬೇಡುತ್ತದೆ.

ಶಿವಪುತ್ರನಾದ ಗಣಪತಿಯಿಂದಲೇ ಪ್ರತಿಷ್ಠಾಪಿತವಾದ ಗೋಕರ್ಣದಲ್ಲಿನ 'ಆತ್ಮಲಿಂಗ'ನಿಗೆ 24-7-2009ರ ಅಕ್ಷಯ ತೃತೀಯಾ ದಿನದಿಂದ 'ರುದ್ರ ಪಾರಾಯಣ' ನಡೆಯುತ್ತಿದೆ.

ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ  'ರುದ್ರ ಪಾರಾಯಣ' ನಡೆಯುತ್ತಿರುವುದು ಜಗತ್ತಿನಲ್ಲಿ ಇದೇ ಪ್ರಥಮ. ಭಯೋತ್ಪಾದನೆ, ಪ್ರಾಕೃತಿಕ ವಿಕೋಪಗಳಂತಹ ಕಷ್ಟಗಳನ್ನು ಪರಿಹರಿಸಿ ಜಗತ್ ಕಲ್ಯಾಣ ಆಗಬೇಕೆಂಬ ಆಶಯದೊಂದಿಗೆ ಇಲ್ಲಿ 'ಕೋಟಿ ರುದ್ರ' ಸಮರ್ಪಣೆಯ ಮಹಾಸಂಕಲ್ಪವನ್ನು ತೊಟ್ಟಿದ್ದಾರೆ ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ. ಕಳೆದ ಒಂದೂವರೆ ವರ್ಷದಲ್ಲಿ  ಇಲ್ಲಿ 14 ಲಕ್ಷ ರುದ್ರಾರ್ಪಣೆ ಆಗಿದೆ ಎನ್ನುತ್ತಾರೆ ಕೋಟಿ ರುದ್ರ ಮಹಾಸಮಿತಿಯ ಡಾ. ಸೀತಾರಾಮ ಪ್ರಸಾದ.

ಇದೀಗ ಬೆಂಗಳೂರಿನಲ್ಲಿ ಸುಮಾರು 10,000ದಷ್ಟು ಸಂಖ್ಯೆಯಲ್ಲಿ ಇರುವ ರುದ್ರಾಧ್ಯಾಯಿಗಳು, ಅರ್ಚಕರು, ಪುರೋಹಿತರು ದೊಡ್ಡ ಪ್ರಮಾಣದಲ್ಲಿ ಗೋಕರ್ಣಕ್ಕೆ ತೆರಳಿ 'ಕೋಟಿ ರುದ್ರ' ಸಮರ್ಪಣೆಯಲ್ಲಿ ಪಾಲ್ಗೊಳ್ಳಲು ಸಜ್ಜಾಗುತ್ತಿದ್ದಾರೆ.

ರುದ್ರಾಧ್ಯಾಯಿಗಳಿಗೆ ಮಾಹಿತಿ ಸಭೆ


ಗೋಕರ್ಣಕ್ಕೆ ತೆರಳುವ ಈ ರುದ್ರಾಧ್ಯಾಯಿಗಳಿಗೆ 'ಕೋಟಿ ರುದ್ರ' ಕಾರ್ಯಕ್ರಮ ಹಾಗೂ ಅಲ್ಲಿನ ವ್ಯವಸ್ಥೆಗಳ ಬಗ್ಗೆ ವಿವರಿಸಲು ಲಿಂಗರಾಜಪುರ ಸಮೀಪದ ಕಾಚರಕನಹಳ್ಳಿ ಎಚ್.ಬಿ.ಆರ್ ಬಡಾವಣೆಯ ಕೋದಂಡರಾಮ ದೇವಸ್ಥಾನದಲ್ಲಿ ಕೋಟಿ ರುದ್ರ ಮಹಾಸಮಿತಿ 2-10-2010 ಶನಿವಾರ ಮಧ್ಯಾಹ್ನ 2.30ಕ್ಕೆ ಸಭೆ ಕರೆದಿದೆ.

ಹೊರನಾಡು ಅನ್ನಪೂರ್ಣೇಶ್ವರಿ ದೇವಸ್ಥಾನದ ಧರ್ಮಕರ್ತ, ಕೋಟಿ ರುದ್ರ ಮಹಾಸಮಿತಿಯ ಅಧ್ಯಕ್ಷ ಭೀಮೇಶ್ವರ ಜೋಷಿ ಪಾಲ್ಗೊಳ್ಳುವರು. ಮಾಹಿತಿಗೆ: 98450 02455.

-ನೆತ್ರಕೆರೆ ಉದಯಶಂಕರ

Advertisement