Monday, June 28, 2010

ಇಂದಿನ ಇತಿಹಾಸ History Today ಜೂನ್ 19

ಇಂದಿನ ಇತಿಹಾಸ

ಜೂನ್ 19

ಸರೋದ್ ಮಾಂತ್ರಿಕ ಉಸ್ತಾದ್ ಅಲಿ ಅಕ್ಬರ್ ಖಾನ್ (88) ಅವರು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದ ತಮ್ಮ ಸಂಗೀತ ಶಾಲೆಯಲ್ಲಿ ಈದಿನ ಬೆಳಗ್ಗೆ ನಿಧನರಾದರು. ಅವರು ಪತ್ನಿ ಮೇರಿ, ಮೂವರು ಪುತ್ರರು, ಒಬ್ಬ ಪುತ್ರಿ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದರು.

2009: ಐವರು ಪ್ರಯಾಣಿಕರು ಮತ್ತು ಯುದ್ಧ ಸಾಮಗ್ರಿ ಇದ್ದ ರಷ್ಯಾದ ಸೇನಾ ಕಾರ್ಗೊ ಎಎನ್-124 ವಿಮಾನವೊಂದು ಈದಿನ ರಾತ್ರಿ ಪಾಕಿಸ್ಥಾನದ ಮೂಲಕ ಭಾರತದ ವಾಯುಗಡಿಯನ್ನು ಉಲ್ಲಂಘಿಸಿ ಒಳಪ್ರವೇಶಿಸಿತು. ಸೂಕ್ತ ಮುನ್ಸೂಚನೆ ಇಲ್ಲದೆ ವಾಯು ಗಡಿ ಉಲ್ಲಂಘಿಸಿದ್ದರಿಂದ ಭಾರತದ ವಾಯುಪಡೆ ವಿಮಾನಗಳು ರಷ್ಯಾ ವಿಮಾನವನ್ನು ಸುತ್ತುವರಿದು ಅದನ್ನು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಇಳಿಸಿದವು.

2009: 'ಶಸ್ತ್ರಾಸ್ತ್ರ ತ್ಯಜಿಸಿ ಮಾತುಕತೆಗೆ ಬನ್ನಿ' ಎಂಬ ಕೇಂದ್ರ ಸರ್ಕಾರದ ಕರೆಯನ್ನು ಧಿಕ್ಕರಿಸಿ, ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಲಾಲ್‌ಗಡ ಪ್ರದೇಶವನ್ನು ನಕ್ಸಲೀಯರು ನಿಯಂತ್ರಣಕ್ಕೆ ತೆಗೆದುಕೊಂಡು, ಅದನ್ನು 'ವಿಮೋಚನಾ ವಲಯ' ಎಂದು ಘೋಷಿಸಿದರು. ಸ್ಥಳೀಯ ಬುಡಕಟ್ಟು ಜನರ ಪ್ರಬಲ ಬೆಂಬಲದೊಂದಿಗೆ ಹೋರಾಟಕ್ಕೆ ಇಳಿದ ನಕ್ಸಲೀಯರು ಹಾಗೂ ಅವರನ್ನು ಹಿಮ್ಮೆಟ್ಟಿಸಲು ಹೊರಟ ಅರೆಸೇನಾ ಪಡೆಗಳಿಂದಾಗಿ ಲಾಲ್‌ಗಢದಲ್ಲಿ ಹಿಂಸಾಚಾರ ಭುಗಿಲೆದ್ದಿತು. ಬಂಡುಕೋರರ ಪ್ರಾಬಲ್ಯವನ್ನು ಶತಾಯಗತಾಯ ಬಗ್ಗುಬಡಿಯಲು ನಿರ್ಧರಿಸಿದ ಪಡೆಗಳು, ರಾಜ್ಯ ಪೊಲೀಸರ ನೆರವಿನೊಂದಿಗೆ ಕಾರ್ಯಾಚರಣೆಯನ್ನು ತೀವ್ರಗೊಳಿಸಿದವು.

2009: ತ್ವರಿತ ಹಾಗೂ ಪಾರದರ್ಶಕ ತನಿಖೆಗಾಗಿ ದೇಶದ ಎಲ್ಲಾ ಪೊಲೀಸ್ ಠಾಣೆಗಳ ಮಧ್ಯೆ ಸಂಪರ್ಕ ಏರ್ಪಡಿಸುವ 2000 ಕೋಟಿ ರೂಪಾಯಿಗಳ ಯೋಜನೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ ನೀಡಿತು. ಅಪರಾಧ ಮತ್ತು ಅಪರಾಧಿಗಳ ಜಾಡಿನ ಜಾಲ ಮತ್ತು ವ್ಯವಸ್ಥೆಯನ್ನು ಮಾಹಿತಿ ತಂತ್ರಜ್ಞಾನದ ಮೂಲಕ ಜಾರಿ ಮಾಡಲಾಗುತ್ತಿದೆ. 11ನೇ ಪಂಚವಾರ್ಷಿಕ ಯೋಜನೆಯಲ್ಲಿ ಈ ಹೊಸ ವ್ಯವಸ್ಥೆಯನ್ನು ಅಳವಡಿಸಲಾಗಿದ್ದು, ಇದರ ಜಾರಿಗೆ ಪ್ರಧಾನಿ ಅವರ ಅಧ್ಯಕ್ಷತೆಯ ಕೇಂದ್ರ ಸಚಿವ ಸಂಪುಟದ ಆರ್ಥಿಕ ವ್ಯವಹಾರಗಳ ಸಮಿತಿ ಒಪ್ಪಿಗೆ ನೀಡಿದೆ. ಇ-ಆಡಳಿತದ ಮೂಲಕ ಎಲ್ಲಾ ಪೊಲೀಸ್ ಠಾಣೆಗಳ ಮಧ್ಯೆ ಸಂಪರ್ಕ ಏರ್ಪಡಿಸುವುದೇ ಈ ಯೋಜನೆಯ ಉದ್ದೇಶ ಎಂದು ಗೃಹ ಸಚಿವ ಪಿ. ಚಿದಂಬರಂ ತಿಳಿಸಿದರು.

2009: ಸರೋದ್ ಮಾಂತ್ರಿಕ ಉಸ್ತಾದ್ ಅಲಿ ಅಕ್ಬರ್ ಖಾನ್ (88) ಅವರು ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದ ತಮ್ಮ ಸಂಗೀತ ಶಾಲೆಯಲ್ಲಿ ಈದಿನ ಬೆಳಗ್ಗೆ ನಿಧನರಾದರು. ಅವರು ಪತ್ನಿ ಮೇರಿ, ಮೂವರು ಪುತ್ರರು, ಒಬ್ಬ ಪುತ್ರಿ ಹಾಗೂ ಲಕ್ಷಾಂತರ ಅಭಿಮಾನಿಗಳನ್ನು ಅಗಲಿದರು. ಕಳೆದ ನಾಲ್ಕು ವರ್ಷಗಳಿಂದ ಮೂತ್ರಪಿಂಡ ತೊಂದರೆಯಿಂದ ಬಳಲುತ್ತಿದ್ದ ಅವರು ಡಯಾಲಿಸಿಸ್ ಚಿಕಿತ್ಸೆ ಪಡೆಯುತ್ತಿದ್ದರು. ನಾಲ್ಕು ತಿಂಗಳಿಂದ ತೀವ್ರ ಅನಾರೋಗ್ಯದಿಂದ ಹಾಸಿಗೆ ಹಿಡಿದಿದ್ದರು. ಭಾರತದಲ್ಲಿ ಹಾಗೂ ವಿದೇಶಗಳಲ್ಲಿ ಭಾರತೀಯ ಸಂಗೀತದ ಪ್ರಚಾರಕ್ಕೆ ಬಹುದೊಡ್ಡ ಕೊಡುಗೆ ನೀಡಿರುವ ಅವರಿಗೆ ಪದ್ಮಭೂಷಣ, ಪದ್ಮವಿಭೂಷಣ ಮುಂತಾಗಿ ಹಲವಾರು ಪ್ರಶಸ್ತಿಗಳು ಲಭಿಸಿದ್ದವು. ಅವರ ತಂದೆ ಪದ್ಮ ವಿಭೂಷಣ, ಆಚಾರ್ಯ ಡಾ.ಅಲ್ಲಾವುದ್ದೀನ್ ಖಾನ್ ಅವರೂ 'ಉತ್ತರ ಭಾರತದ ಈ ಶತಮಾನದ ಶ್ರೇಷ್ಠ ಸಂಗೀತ ತಜ್ಞ' ಎಂಬ ಹೆಸರು ಗಳಿಸಿದ್ದರು. ಕಳೆದ ಐದು ದಶಕಗಳಿಂದ ಭಾರತೀಯ ಶಾಸ್ತ್ರೀಯ ಸಂಗೀತದಲ್ಲಿ ಬಹುದೊಡ್ಡ ಹೆಸರಾಗಿದ್ದ ಅಲಿ ಅಕ್ಬರ್ ಖಾನ್, ಕರ್ನಾಟಕದ ರಾಜೀವ್ ತಾರಾನಾಥ್ ಸೇರಿದಂತೆ ಅನೇಕ ಶಿಷ್ಯಂದಿರನ್ನು ಹೊಂದಿದ್ದರು. 1922ರಲ್ಲಿ ಪೂರ್ವ ಬಂಗಾಳದ ಕೊಮಿಲಾ ಜಿಲ್ಲೆಯ ಶಿವಪುರದಲ್ಲಿ (ಈಗಿನ ಬಾಂಗ್ಲಾದೇಶ) ಹುಟ್ಟಿದ ಅವರು ಮೂರರ ಎಳೆ ವಯಸ್ಸಿನಲ್ಲೇ ತಂದೆಯಿಂದ ಹಿಂದುಸ್ಥಾನಿ ಗಾಯನ ಮತ್ತು  ಚಿಕ್ಕಪ್ಪ ಫಕೀರ್ ಅಫ್ತಾಬುದ್ದಿನರಿಂದ ಡ್ರಂ ಬಾರಿಸುವುದನ್ನು ಕಲಿತರು. ತಂದೆಯಿಂದಲೇ ಇತರ ವಾದ್ಯಗಳನ್ನು ನುಡಿಸುವುದನ್ನೂ ಅಭ್ಯಾಸ ಮಾಡಿದರು. ಆದರೆ ಬಳಿಕ ಅವರ ಒಲವು ಸಿತಾರ್‌ನತ್ತ ಹೆಚ್ಚು ಕೇಂದ್ರೀಕೃತವಾಯಿತು. 25 ತಂತಿಗಳ ಸರೋದ್ ನುಡಿಸುವುದರಲ್ಲಿ ಹೊಂದಿದ ಪರಿಣತಿಯಿಂದಾಗಿ ಜಗತ್ತಿನಾದ್ಯಂತ ಸಂಗೀತ ವಲಯದಲ್ಲಿ ಅವರ ಖ್ಯಾತಿ ಹಬ್ಬಿತ್ತು. ಕ್ಯಾಲಿಫೋರ್ನಿಯಾದಲ್ಲಿಯೇ ನೆಲೆಸಿದ ಬಳಿಕ ಅಮೆರಿಕ ಸಹಿತ ಪಾಶ್ಚಿಮಾತ್ಯ ದೇಶಗಳಲ್ಲಿ ಅವರ ಕಛೇರಿಗಳು ತುಂಬ ಜನಪ್ರಿಯವಾಗಿದ್ದವು. ಅಲ್ಲಿಯೇ ಸಂಗೀತ ಶಾಲೆಯನ್ನು ನಡೆಸಿ ಸಾವಿರಾರು ವಿದ್ಯಾರ್ಥಿಗಳಿಗೆ ಅವರು ಗುರುಗಳಾಗಿದ್ದರು. ಜಗದ್ವಿಖ್ಯಾತ ವಯಲಿನ್ ವಾದಕ ಯೆಹುದಿ ಮೆನುಹಿನ್ ಇವರ ಸಿತಾರ್ ವಾದನದಿಂದ ಪ್ರಭಾವಿತರಾಗಿ 'ಜಗತ್ತಿನ ಅತಿ ಶ್ರೇಷ್ಠ ಸಂಗೀತಗಾರ' ಎಂದು ಕರೆದಿದ್ದರು. 1991ರಲ್ಲಿ ಮೆಕಾರ್ಥರ್ ಫೌಂಡೇಷನ್ನಿನ ಫೆಲೊಶಿಪ್ ಪಡೆದ ಮೊದಲ ಭಾರತೀಯ ಅವರು. 1970ರಿಂದ 1998ರ ಮಧ್ಯೆ ಐದು ಸಲ ಅವರು ಗ್ರಾಮಿ ಪ್ರಶಸ್ತಿಗೆ ನಾಮಕರಣ ಹೊಂದಿದ್ದರು. 13ರ ಹರೆಯದಲ್ಲಿ ಅಲಹಾಬಾದಿನಲ್ಲಿ ಮೊದಲ ಕಛೇರಿ ನೀಡುವ ಮೂಲಕ ಸುದ್ದಿ ಮಾಡಿದ ಅವರು, 20ರ ಹರೆಯದಲ್ಲಿ ಮೊದಲ ಗ್ರಾಮಾಫೋನ್ ರೆಕಾರ್ಡಿಂಗ್ (ಎಚ್‌ಎಂವಿ) ಮಾಡಿದ್ದರು. ಮರುವರ್ಷ ಜೋಧ್‌ಪುರದ ಮಹಾರಾಜರ ಆಸ್ಥಾನ ಸಂಗೀತಗಾರರಾಗಿಯೂ ನೇಮಕಗೊಂಡಿದ್ದರು. ಏಳು ವರ್ಷ ಕಾಲ ಅಲ್ಲಿದ್ದಾಗ  ಅವರಿಗೆ ಉಸ್ತಾದ್ ಸಹಿತ ಹಲವು ಬಿರುದುಗಳು ಲಭಿಸಿದವು. ಸುಮಾರು 20 ವರ್ಷಗಳ ಕಾಲ ಪ್ರತಿದಿನ 18 ಗಂಟೆಗಳ ಅಭ್ಯಾಸ ಮಾಡಿದ ಅವರು, 1972ರಲ್ಲಿ ತಂದೆಯವರು ತೀರಿಕೊಂಡ ಬಳಿಕ ಅವರ ಘರಾಣಾ ಪರಂಪರೆಯನ್ನೇ ಮುಂದುವರಿಸಿದರು. ಅವರ ತಂದೆ ರಾಂಪುರ ಮತ್ತು ಮೈಹರ್‌ನ ಬಾಬಾ ಅಲ್ಲಾವುದ್ದೀನ್ ಸೇನಿ ಘರಾಣಾಕ್ಕೆ ಸೇರಿದವರು. 1955ರಲ್ಲಿ ಜಾಗತಿಕ ವಯೋಲಿನ್ ಮಾಂತ್ರಿಕ ಯೆಹುದಿ ಮೆನುಹಿನ್ ಮನವಿಯ ಮೇರೆಗೆ ಅಮೆರಿಕಕ್ಕೆ ಭೇಟಿ ನೀಡಿದ ಖಾನ್, ನ್ಯೂಯಾರ್ಕಿನ ಮಾಡರ್ನ್ ಆರ್ಟ್ ಮ್ಯೂಸಿಯಂನಲ್ಲಿ  ಕಛೇರಿ  ನೀಡಿ ಜಗದ್ವಿಖ್ಯಾತರಾದರು. ಭಾರತೀಯ ಶಾಸ್ತ್ರೀಯ ಸಂಗೀತದ ಮೊದಲ ಪಾಶ್ಚಿಮಾತ್ಯ ಎಲ್‌ಪಿ ರೆಕಾರ್ಡಿಂಗ್ ಮಾಡಿದ ದಾಖಲೆಯೂ ಅವರ  ಹೆಸರಲ್ಲಿದೆ. ಅಲ್ಲಿನ ಟೆಲಿವಿಷನ್‌ಗಳಲ್ಲೂ ಕಾರ್ಯಕ್ರಮ ನೀಡಿದ ಮೊದಲ ಭಾರತೀಯರು. 1956ರಲ್ಲಿ  ಕೋಲ್ಕತದಲ್ಲಿ ಅಲಿ ಅಕ್ಬರ್ ಕಾಲೇಜ್ ಆಫ್ ಮ್ಯೂಸಿಯಂ ಸ್ಥಾಪಿಸಿದ ಅವರು,  1967ರಲ್ಲಿ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಸಂಗೀತ ಶಾಲೆ ಸ್ಥಾಪಿಸಿದರು. ಅಲ್ಲಿನ  ಸಂಗೀತ ಶಾಲೆಯಲ್ಲಿ ಪಾಶ್ಚಿಮಾತ್ಯ ದೇಶಗಳ ನೂರಾರು ವಿದ್ಯಾರ್ಥಿಗಳಿದ್ದರು. ಸ್ವಿಜರ್ಲೆಂಡಿನಲ್ಲೂ ಅವರ ಶಾಲೆಯ ಶಾಖೆ ಆರಂಭವಾಗಿತ್ತು. ಆಸ್ಟ್ರೇಲಿಯಾ, ಲಂಡನ್‌ಗಳಲ್ಲೂ ಅವರು ಜನಪ್ರಿಯರಾಗಿ ಜನಪ್ರಿಯರಾಗಿದ್ದರು.

2009: ಉಪ್ಪಿನಂಗಡಿಯ ಪ್ರಾಥಮಿಕ ಆರೋಗ್ಯ ಕೇಂದ್ರ ವ್ಯಾಪ್ತಿಯಲ್ಲಿ ಡೆಂಗೆ ಜ್ವರ ಕಾಣಿಸಿಕೊಂಡು, ನೆಕ್ಕಿಲಾಡಿ ಗ್ರಾಮದ ಬೋಳಂತಿಲ ನಿವಾಸಿ ಜೆಸಿಂತಾ ರೆಬೆಲ್ಲೋ (38) ಮೃತರಾದರು.

2009: ಆಂಗ್ಲಮಾಧ್ಯಮ ಶಾಲೆಗಳಿಗೆ ಅನುಮತಿ ನೀಡುವಂತೆ ಕಳೆದ ಏಪ್ರಿಲ್ 6ರಂದು ಏಕ ಸದಸ್ಯ ಪೀಠ ನೀಡಿರುವ ತೀರ್ಪಿಗೆ ತಡೆಯಾಜ್ಞೆ ನೀಡಬೇಕು ಎಂಬ ರಾಜ್ಯ ಸರ್ಕಾರದ ಮನವಿಯನ್ನು ಹೈಕೋರ್ಟಿನ ವಿಭಾಗೀಯ ಪೀಠ ತಿರಸ್ಕರಿಸಿತು. ಮುಖ್ಯನ್ಯಾಯಮೂರ್ತಿ ಪಿ.ಡಿ. ದಿನಕರನ್ ಮತ್ತು ನ್ಯಾಯಮೂರ್ತಿ ವಿ.ಜಿ.ಸಭಾಹಿತ ಅವರನ್ನು ಒಳಗೊಂಡ ವಿಭಾಗೀಯ ಪೀಠ ನೀಡಿರುವ ಆದೇಶದಿಂದಾಗಿ ಸರ್ಕಾರಕ್ಕೆ ಹಿನ್ನಡೆಯಾಯಿತು.

2009: ಶಿಕ್ಷಣದ ಸುಧಾರಣೆಗಾಗಿ ರಾಷ್ಟ್ರೀಯ ಜ್ಞಾನ ಆಯೋಗ ಮಾಡಿರುವ ಶಿಫಾರಸುಗಳನ್ನು ಜಾರಿಗೊಳಿಸುವ ನಿಟ್ಟಿನಲ್ಲಿ ನೀಲನಕ್ಷೆಯನ್ನು ಮೊದಲು ಬಿಡುಗಡೆ ಮಾಡಿರುವ ಹೆಗ್ಗಳಿಕೆಗೆ ದೆಹಲಿ ರಾಜ್ಯ ಪಾತ್ರವಾಯಿತು. ರಾಷ್ಟ್ರೀಯ ಜ್ಞಾನ ಆಯೋಗದ ಅಧ್ಯಕ್ಷ ಸ್ಯಾಮ್ ಪಿತ್ರೋಡಾ, ದೆಹಲಿ ವಿಧಾನಸಭೆಯಲ್ಲಿ  ದಾಖಲೆಯನ್ನು ಬಿಡುಗಡೆ ಮಾಡಿದ ಸಂದರ್ಭದಲ್ಲಿ ಈ ವಿಚಾರವನ್ನು ಬಹಿರಂಗ ಪಡಿಸಿದರು.

2009: ವಿಶ್ವದ ಅತ್ಯಂತ ಹಿರಿಯ ತೊಮೊಜಿ ತನಬೆ ಹೃದಯ ವೈಫಲ್ಯದಿಂದ ದಕ್ಷಿಣ ಜಪಾನಿನಲ್ಲಿ ನಿಧನ ಹೊಂದಿದರು. ಅವರಿಗೆ 113ವರ್ಷ ವಯಸ್ಸಾಗಿತ್ತು. ಜನವರಿ 2007ರಲ್ಲಿ ಗಿನ್ನೆಸ್ ವಿಶ್ವ ದಾಖಲೆ ಪುಸ್ತಕದಲ್ಲಿ ತನಬೆಯನ್ನು ವಿಶ್ವದ ಅತ್ಯಂತ ಹಿರಿಯ ಎಂದು ದಾಖಲಿಸಲಾಗಿತ್ತು. ಮೇ ತಿಂಗಳಲ್ಲಿ ಅಸ್ವಸ್ಥರಾಗಿದ್ದ ಅವರು ಆನಂತರ ಚೇತರಿಸಿಕೊಂಡಿರಲಿಲ್ಲ. ತನಬೆ ಬೆಳಿಗ್ಗೆ 5.30ಕ್ಕೆ ಎದ್ದು ಉಪಹಾರ ಸೇವಿಸುವ ಮುನ್ನ ಪತ್ರಿಕೆ  ಓದುತ್ತಿದ್ದರು. ದಿನಕ್ಕೆ ಮೂರು ಸಲ ಊಟ ಸೇವಿಸುತ್ತಿದ್ದ ಅವರು ಮಧ್ಯಾಹ್ನದ ಒಂದು ಲೋಟ ಹಾಲು ಕುಡಿಯುತ್ತಿದ್ದರು. ತಮ್ಮ ದೀರ್ಘ ಆಯಸ್ಸಿನ ಗುಟ್ಟು 'ಕುಡಿತದಿಂದ ಹಾಗೂ ಧೂಮಪಾನದಿಂದ ದೂರವಿರುವುದು' ಎಂದು ಹೇಳುತ್ತಿದ್ದರು. ಸಾವಿಗೆ ಮುಂಚೆ ಅವರು ತಮ್ಮ ಎಂಟು ಮಕ್ಕಳ ಪೈಕಿ ಒಬ್ಬ ಮಗ ಹಾಗೂ ಸೊಸೆಯೊಂದಿಗೆ ಇದ್ದರು. ಈಗಿನ ಹೊಸ ಅತ್ಯಂತ ಹಿರಿಯ ಜಪಾನಿನ ವ್ಯಕ್ತಿ ಪಶ್ವಿಮ ಕ್ಯೊಟೊ ಪ್ರಾಂತ್ಯದಲ್ಲಿ ಇದ್ದು ಆತನ ವಯಸ್ಸು 112. ಅತ್ಯಂತ ಹಿರಿಯ ಮಹಿಳೆ ದಕ್ಷಿಣ ಓಕಿನಾವಾದಲ್ಲಿದ್ದು ಆಕೆಗೆ 114 ವರ್ಷ. ಸರ್ಕಾರ ನೀಡಿರುವ ಅಂಕಿಅಂಶದ ಪ್ರಕಾರ  ಜಪಾನಿನಲ್ಲಿ ನೂರು ವರ್ಷ ತುಂಬಿದವರ ಸಂಖ್ಯೆ ಅಕ್ಟೋಬರಿನಲ್ಲಿ 41,000ಕ್ಕೆ ತಲುಪಿದೆ. ಜಪಾನಿನಲ್ಲಿ ಜನರ ಸರಾಸರಿ ಆಯಸ್ಸು 85 ವರ್ಷವಾಗಿದ್ದು ಇದು ವಿಶ್ವದಲ್ಲೇ ಅತಿಹೆಚ್ಚು ಎನ್ನಲಾಯಿತು.

2009: ಪಕ್ಷದೊಳಗಿನ ಭಿನ್ನಮತೀಯರ ಒತ್ತಡಕ್ಕೆ ಮಣಿದು ತೆಲಂಗಾಣ ರಾಷ್ಟ್ರೀಯ ಸಮಿತಿ ಅಧ್ಯಕ್ಷ ಕೆ.ಚಂದ್ರಶೇಖರ ರಾವ್ ರಾಜೀನಾಮೆ ನೀಡಿದರು. ಮಾಜಿ ಕೇಂದ್ರ ಸಚಿವರೂ ಆದ ಅವರು ತಮ್ಮ ರಾಜೀನಾಮೆ ಪತ್ರವನ್ನು ಈದಿನ ಸಂಜೆ ಪಕ್ಷದ ಕೇಂದ್ರ ಕಚೇರಿ ತೆಲಂಗಾಣ ಭವನಕ್ಕೆ ಕಳುಹಿಸಿಕೊಟ್ಟರು. ಇತ್ತೀಚೆಗೆ ನಡೆದ ಲೋಕಸಭಾ ಮತ್ತು ವಿಧಾನಸಭಾ ಚುನಾವಣೆಗಳಲ್ಲಿ ಪಕ್ಷವು ತೀವ್ರ ಹಿನ್ನಡೆ ಅನುಭವಿಸಿದ ಕಾರಣ ಅವರ ರಾಜೀನಾಮೆಗೆ ಪಕ್ಷದಲ್ಲಿ ಒತ್ತಡ ಹೆಚ್ಚಾಗಿತ್ತು.

2008: ಕನ್ನಡದ ಹೆಸರಾಂತ ಹಿರಿಯ ನಟಿ ಬಿ.ಸರೋಜಾದೇವಿ, ಗಾನಕೋಗಿಲೆ ಲತಾ ಮಂಗೇಶ್ಕರ್, ನಟ ದಿಲೀಪ್ ಕುಮಾರ್ ಹಾಗೂ ನಿರ್ದೇಶಕ ತಪನ್ ಸಿನ್ಹಾ ಅವರನ್ನು ಕೇಂದ್ರ ಸರ್ಕಾರವು ಜೀವಮಾನ ಸಾಧನೆ ಪ್ರಶಸ್ತಿಗೆ ಆಯ್ಕೆ ಮಾಡಿತು. 60ನೇ ಸ್ವಾತಂತ್ರ್ಯೋತ್ಸವ ಆಚರಣೆ ಹಿನ್ನೆಲೆಯಲ್ಲಿ ಇವರನ್ನು ಈ ಪ್ರಶಸ್ತಿಗೆ  ಆಯ್ಕೆ ಮಾಡಲಾಯಿತು.

2007: ತನ್ನ ಅತ್ಯುನ್ನತ ಪ್ರಶಸ್ತಿ `ಆಫೀಸರ್ ಆಫ್ ದಿ ಆರ್ಡರ್ ಆಫ್ ಆರ್ಟ್ಸ್ ಅಂಡ್ ಲೆಟರ್ಸ್' ಗೆ ಹಿಂದಿ ನಟ ಶಾರುಖ್ ಖಾನ್ ಅವರನ್ನು ಫ್ರಾನ್ಸ್ ಆಯ್ಕೆ ಮಾಡಿತು. ಹಿಂದಿ ಸಿನಿಮಾ ರಂಗಕ್ಕೆ ಮತ್ತು ಭಾರತ- ಫ್ರಾನ್ಸ್ ಸಹಕಾರ ವರ್ಧನೆಗೆ ಶಾರುಖ್ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಪ್ರಶಸ್ತಿಗೆ ಅವರನ್ನು ಆಯ್ಕೆ ಮಾಡಲಾಯಿತು.

2007: ಅಟ್ಲಾಂಟಿಸ್ ಗಗನನೌಕೆಯು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದ (ಐಎಸ್ಎಸ್) ಧಕ್ಕೆಯಿಂದ ಕಳಚಿಕೊಂಡು ಭೂಮಿಯತ್ತ ಪ್ರಯಾಣ ಬೆಳೆಸಿತು. `ಐಎಸ್ಎಸ್' ನಲ್ಲಿ ಆರು ತಿಂಗಳು ತಂಗಿದ್ದ ಭಾರತೀಯ ಸಂಜಾತೆ ಸುನೀತಾ ವಿಲಿಯಮ್ಸ್ ಸೇರಿದಂತೆ 7 ಗಗನ ಯಾತ್ರಿಗಳು ಅಟ್ಲಾಂಟಿಸ್ ನೌಕೆಯಲ್ಲಿ ಭೂಮಿಯತ್ತ ಹೊರಟರು. ಏಳು ಗಗನಯಾತ್ರಿಗಳನ್ನು ಹೊತ್ತು ಜೂನ್ 8ರಂದು ಅಂತರಿಕ್ಷದತ್ತ ಪ್ರಯಾಣ ಬೆಳೆಸಿದ್ದ ಅಟ್ಲಾಂಟಿಸ್ ಜೂನ್ 10ರಂದು ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣ ತಲುಪಿತ್ತು. `ಐಎಸ್ಎಸ್' ನಲ್ಲಿ ಸುನೀತಾ ಬದಲಿಗೆ ಕಾರ್ಯನಿರ್ವಹಿಸಲು ನಿಯೋಜಿತರಾಗಿದ್ದ ಕ್ಲೆಟನ್ ಅಂಡರ್ ಸನ್ ಸಹ ಇದರಲ್ಲಿ ಪಯಣಿಸಿದ್ದರು.

2007: ಯುದ್ಧಾ ನಂತರ ಇರಾಕಿನ `ಸುರಕ್ಷಿತ ವಲಯ'ದಲ್ಲಿ ಕಂಡು ಬರುತ್ತಿರುವ ದಿನ ನಿತ್ಯದ ಜನಜೀವನದ ಬಗ್ಗೆ ಅನಿವಾಸಿ ಭಾರತೀಯ ರಾಜೀವ್ ಚಂದ್ರಶೇಖರ್ ರಚಿಸಿರುವ `ಇಂಪೀರಿಯಲ್ ಲೈಫ್ ಇನ್ ದ ಎಮೆರಾಲ್ಡ್ ಸಿಟಿ' (ಹವಳದ ನಗರದಲ್ಲಿನ ಭವ್ಯ ಬದುಕು) ಕೃತಿ, ಕಥೆಯೇತರ ವಿಭಾಗದಲ್ಲಿ ಬ್ರಿಟನ್ನಿನ ಅತ್ಯುನ್ನತ ಪ್ರಶಸ್ತಿಯಾದ `ಬಿಬಿಸಿ ಫೋರ್ ಸ್ಯಾಮ್ಯುಯೆಲ್ ಜಾನ್ಸನ್ ಪ್ರಶಸ್ತಿಗೆ ಆಯ್ಕೆಯಾಯಿತು. `ವಾಷಿಂಗ್ಟನ್ ಪೋಸ್ಟ್' ಪತ್ರಿಕೆಯ ಬಾಗ್ದಾದ್ ಬ್ಯೂರೊದ ಮಾಜಿ ಮುಖ್ಯಸ್ಥ ಚಂದ್ರಶೇಖರ್, ರಕ್ಷಿತ ವಲಯದಲ್ಲಿ ಅಮೆರಿಕನ್ನರ ಗೂಡಿನೊಳಗಿನ ಬದುಕು ಮತ್ತು ರಕ್ಷಿತ ವಲಯದ ಆಚೆ ಇರಾಕ್ ಜನತೆಯ ಗೊಂದಲ, ಅರಾಜಕತೆಯ ಬದುಕನ್ನು ಇಲ್ಲಿ ಚಿತ್ರಿಸಿದ್ದಾರೆ. ಸದ್ದಾಂ ಹುಸೇನ್ ಅವರನ್ನು 2003ರಲ್ಲಿ ಅಧಿಕಾರದಿಂದ ಪದಚ್ಯುತಗೊಳಿಸಿದ ನಂತರ ಇರಾಕಿನಲ್ಲಿ ಆಡಳಿತ ನಡೆಸಿದ  ಸರ್ಕಾರದ ವೈಫಲ್ಯಗಳನ್ನೂ ಈ ಕೃತಿಯಲ್ಲಿ ಪಟ್ಟಿ ಮಾಡಲಾಗಿದೆ. 18ನೇ ಶತಮಾನದ ನಿಘಂಟು ರಚನೆಕಾರ ಮತ್ತು ಪ್ರಬಂಧ ರಚನೆಕಾರ ಸ್ಯಾಮುಯೆಲ್ ಜಾನ್ಸನ್ ಹೆಸರಿನಲ್ಲಿ ನೀಡಲಾಗುವ ಪ್ರಶಸ್ತಿಯನ್ನು ಪ್ರಚಲಿತ ವಿದ್ಯಮಾನ, ಇತಿಹಾಸ, ರಾಜಕೀಯ, ವಿಜ್ಞಾನ, ಕ್ರೀಡೆ, ಪ್ರವಾಸ, ಜೀವನಚರಿತ್ರೆ ವಿಭಾಗದಲ್ಲಿನ ಅತ್ಯುತ್ತಮ ಸಾಹಿತ್ಯ ಕೃತಿಗಳಿಗೆ ನೀಡಲಾಗುತ್ತಿದೆ. ಪ್ರಶಸ್ತಿ 30 ಸಾವಿರ ಪೌಂಡ್ ನಗದು ಹೊಂದಿದೆ.

 2007: ಸಿಂಗೂರು ಯೋಜನೆಯಲ್ಲಿ ಭೂಮಿ ಕಳೆದುಕೊಂಡ ರೈತರಿಗೆ ಆರ್ಥಿಕ ಪುನರ್ ವಸತಿ ಕಲ್ಪಿಸುವುದಾಗಿ ಪಶ್ಚಿಮ ಬಂಗಾಳ ಸರ್ಕಾರ ಘೋಷಿಸಿತು. ಇದೇ ವೇಳೆ, ಭೂಮಿ ನೀಡಲು ಇಚ್ಛಿಸದ ರೈತರ ಜಮೀನನ್ನು ಮರಳಿ ನೀಡಬೇಕೆನ್ನುವ ತೃಣಮೂಲ ಕಾಂಗ್ರೆಸ್ ಬೇಡಿಕೆಯನ್ನು ಸರ್ಕಾರ ತಿರಸ್ಕರಿಸಿತು. ಈಗ ನೀಡಲಾಗುವ ಆರ್ಥಿಕ ಪುನರ್ ವಸತಿ ಪ್ಯಾಕೇಜ್ನಡಿ ಯೋಜನೆಯ ನಿರಾಶ್ರಿತರಿಗೆ ಕೆಲವು ತರಬೇತಿಗಳನ್ನು ಆರಂಭಿಸಲಾಗುವುದು ಮತ್ತು ಟಾಟಾ ಮೋಟಾರ್ಸ್ ಯೋಜನೆಯಲ್ಲಿ ಉದ್ಯೋಗ ಕಲ್ಪಿಸಲಾಗುವುದು ಎಂದು ರಾಜ್ಯದ ಕೈಗಾರಿಕಾ ಸಚಿವ ನಿರುಪಮ್ ಸೇನ್ ವಿವರಿಸಿದರು.

 2007: ವಿಚಾರವಾದಿ, ಪ್ರಗತಿಪರ ಚಿಂತಕ ಪ್ರೊ.ಕೆ.ರಾಮದಾಸ್ (66) ಈದಿನ ಬೆಳಿಗ್ಗೆ ಸುಮಾರು 5 ಗಂಟೆಗೆ ಮೈಸೂರಿನಲ್ಲಿ ನಿಧನರಾದರು. ಅವರಿಗೆ ಶ್ವಾಸಕೋಶದ ಕ್ಯಾನ್ಸರ್ ಇರುವುದು 20 ದಿನಗಳ ಹಿಂದಷ್ಟೇ ಪತ್ತೆಯಾಗಿತ್ತು. ಬೆಂಗಳೂರಿನ ಕಿದ್ವಾಯಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಿದ್ದ ಅವರು, ಈದಿನ ಬೆಳಗಿನ ಜಾವ ತೀವ್ರ ಸುಸ್ತಿನ ಬಳಿಕ ಕೊನೆಯುಸಿರೆಳೆದರು. ಲೇಖಕಿಯೂ ಆಗಿರುವ ಆರ್. ನಿರ್ಮಲಾ ಇವರು ಪ್ರೊ.ಕೆ. ರಾಮದಾಸ್ ಅವರ ಪತ್ನಿ. 1941ರ ಮಾರ್ಚ್ 26ರಂದು ಕಳಸದಲ್ಲಿ ಹುಟ್ಟಿದ್ದ ರಾಮದಾಸ್ ಬಾಲ್ಯದಲ್ಲೇ ತಂದೆ ಶಿವಯ್ಯ ಅವರನ್ನು ಕಳೆದುಕೊಂಡವರು. ತಾಯಿ ಮಂಜಮ್ಮ ದುಡಿದು ಅವರನ್ನು ಬೆಳೆಸಿ, ಓದಿಸಿದರು. ಹೊಸನಗರದಲ್ಲಿದ್ದ ರಾಮದಾಸ್ ಕಾಲೇಜು ಓದಲು ಮೈಸೂರಿಗೆ ಬಂದು ಮೈಸೂರಿನವರೇ ಆದರು. ಪ್ರೊ. ರಾಮದಾಸ್ ಅವರ ಅಂತ್ಯಸಂಸ್ಕಾರ ಚಾಮುಂಡಿಬೆಟ್ಟದ ತಪ್ಪಲಿನಲ್ಲಿರುವ ಅನಿಲ ಚಿತಾಗಾರದಲ್ಲಿ ಯಾವುದೇ ಧಾರ್ಮಿಕ ವಿಧಿ-ವಿಧಾನಗಳಿಲ್ಲದೆ ಸಂಜೆ 5.55ಕ್ಕೆ ನೆರವೇರಿತು. ಮೈಸೂರಿನಲ್ಲಿ ಯುವಜನ ಸಮಾಜವಾದಿ ಚಳವಳಿ, ಗೋಕಾಕ್ ಚಳವಳಿ, ಕನ್ನಡದ ಹೋರಾಟ, ದಲಿತ ಚಳವಳಿ ಮತ್ತು ಕಾವೇರಿ ಹೋರಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರಾಮದಾಸ್, ಲಂಕೇಶ್ ಅವರ ಸಾವಿನ ಬಳಿಕವೂ `ಕರ್ನಾಟಕ ಪ್ರಗತಿರಂಗದ ವಕ್ತಾರ'ರಾಗಿ ಉಳಿದವರು.

 2007: ಖ್ಯಾತ ವಿಜ್ಞಾನಿ ಪ್ರೊ. ಸಿ.ಎನ್. ಆರ್ ರಾವ್ ಅವರಿಗೆ ಆಕ್ಸ್ ಫರ್ಡ್ ವಿಶ್ವ ವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ನೀಡಿ ಗೌರವಿಸಿತು. ಈ ಗೌರವಕ್ಕೆ ಪಾತ್ರರಾದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ರಾವ್ ಅವರದಾಯಿತು.

2006: ಮುಖ್ಯಮಂತ್ರಿಯಾದ ನಾಲ್ಕು ತಿಂಗಳ ಬಳಿಕ ಎಚ್. ಡಿ. ಕುಮಾರಸ್ವಾಮಿ ಅವರು ಈದಿನ ರಾತ್ರಿ ತಮ್ಮ ಅಧಿಕೃತ ನಿವಾಸ `ಅನುಗ್ರಹ'ಕ್ಕೆ ಪ್ರವೇಶ ಮಾಡಿದರು. ಹೊಸನಗರದ ಶ್ರೀ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು ನೀಡಿರುವ ಅಪರೂಪದ ದೇಶೀಯ `ಘಿರ್' ತಳಿಗೆ ಸೇರಿದ ಗೋವು ನಂದಿನಿ ಮತ್ತು ಕರು ರಾಮನನ್ನು ಮನೆಯೊಳಗೆ ತುಂಬಿಸಿಕೊಳ್ಳುವ ಮೂಲಕ ಮುಖ್ಯಮಂತ್ರಿ ಔಪಚಾರಿಕವಾಗಿ ಹೊಸ ಮನೆಗೆ ಕಾಲಿಟ್ಟರು. ಸ್ವಾಮೀಜಿ ಅವರು ಈ ಸಂದರ್ಭದಲ್ಲಿ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು.

2006: ನಲ್ವತ್ತನಾಲ್ಕು ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಆಯಕಟ್ಟಿನ ನಾಥು ಲಾ ಪಾಸ್ ಮೂಲಕ ಜುಲೈ 6ರಿಂದ ಗಡಿ ವ್ಯಾಪಾರ ಪುನರಾರಂಭಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಬೀಜಿಂಗಿನಲ್ಲಿ ಸಮ್ಮತಿಸಿದವು.

1997: ಕಾರ್ಗೊ ಹಡಗು ಮುಂಬೈ ಬಳಿ ಸಮುದ್ರದಲ್ಲಿ ಮುಳುಗಿ ನಾಲ್ವರು ಮೃತರಾಗಿ 20 ಜನ ಕಣ್ಮರೆಯಾದರು.

1995: ಭಾರತ ಮತ್ತು ಅಮೆರಿಕ ವ್ಯಾಪಾರ ವ್ಯವಹಾರ ಒಪ್ಪಂದಕ್ಕೆ ಸಹಿ ಹಾಕಿದವು.

1981: ಭಾರತದ ಸಂಪರ್ಕ ಉಪಗ್ರಹ `ಆ್ಯಪಲ್' ನ್ನು ಹೊತ್ತ ಯುರೋಪಿನ ಏರಿಯನ್ ರಾಕೆಟನ್ನು ಫ್ರೆಂಚ್ ಗಯಾನಾದ ಅಂತರಿಕ್ಷ ನೆಲೆ ಕೊವುರೋನಿಂದ ಯಶಸ್ವಿಯಾಗಿ ಹಾರಿಸಲಾಯಿತು.

1978: ಲಾರ್ಡ್ಸ್ ಮೈದಾನದಲ್ಲಿ ಪಾಕಿಸ್ಥಾನದ ವಿರುದ್ಧ ನಡೆದ ಪಂದ್ಯದಲ್ಲಿ ಒಂದೇ ಟೆಸ್ಟಿನಲ್ಲಿ ಸೆಂಚುರಿ (108 ರನ್) ಬಾರಿಸುವುದರ ಜೊತೆಗೆ 8 ವಿಕೆಟ್ಗಳನ್ನು ಬೀಳಿಸಿದ (8-34) ಮೊತ್ತ ಮೊದಲ ಕ್ರಿಕೆಟಿಗ ಎಂಬ ಹೆಗ್ಗಳಿಕೆಗೆ ಇಂಗ್ಲೆಂಡಿನ ಇಯಾನ್ ಬಾಥಮ್ ಪಾತ್ರರಾದರು.

1974: ಕಲಾವಿದ ರೂಪ ಡಿ. ಬಿಜೂರ್ ಜನನ.

 1966: ಶಿವಸೇನೆ ಸ್ಥಾಪನೆ.

1956: ಕಲಾವಿದ ಎಲ್. ಬಸವರಾಜ್ ಜಾನೆ ಜನನ.

1953: ಗೂಢಚರ್ಯೆಗಾಗಿ ಅಮೆರಿಕದ ಇಬ್ಬರು ನಾಗರಿಕರಾದ ಜ್ಯೂಲಿಯಸ್ ಮತ್ತು ಈಥೆಲ್ ರೋಸೆನ್ ಬರ್ಗ್ ಅವರನ್ನು ಸಿಂಗ್ ಸಿಂಗ್ ಸೆರೆಮನೆಯಲ್ಲಿ ಮರಣದಂಡನೆಗೆ ಗುರಿಪಡಿಸಲಾಯಿತು. ಅಮೆರಿಕದಲ್ಲಿ ಗೂಢಚರ್ಯೆಗಾಗಿ ಮರಣದಂಡನೆಗೆ ಗುರಿಯಾದ ಮೊದಲ ಅಮೆರಿಕನ್ ಪ್ರಜೆಗಳು ಇವರು. ತಮ್ಮ ಕೈಗೆ ಬಂದಿದ್ದ ಸೋವಿಯತ್ ಸೇನಾ ರಹಸ್ಯಗಳನ್ನು ಸೋವಿಯತ್ ಒಕ್ಕೂಟಕ್ಕೆ ಹಿಂದಿರುಗಿಸಲು ಯತ್ನಿಸಿದರೆಂಬ ಆಪಾದನೆ ಅವರ ಮೇಲಿತ್ತು.

1953: ಕಲಾವಿದ ಅಶೋಕ ಅಕ್ಕಿ ಟಿ. ಜನನ.

1947: ಸಲ್ಮಾನ್ ರಷ್ದಿ ಜನ್ಮದಿನ. ಆಂಗ್ಲೋ ಇಂಡಿಯನ್ ಕಥೆಗಾರರಾದ ಇವರು ಇಸ್ಲಾಂಗೆ ಸಂಬಂಧಿಸಿದಂತೆ ಬರೆದ `ಸಟಾನಿಕ್ ವರ್ಸಸ್' ಕಥೆ 1989ರಲ್ಲಿ ಇರಾನಿನ ಮುಸ್ಲಿಮರ ಕೋಪಕ್ಕೆ ತುತ್ತಾಯಿತು. ಅವರು ರಷ್ದಿಗೆ `ಮರಣದಂಡನೆ' ವಿಧಿಸಿರುವುದಾಗಿ ಘೋಷಿಸಿದರು. ಇವರ `ಮಿಡ್ನೈಟ್  ಚಿಲ್ಡ್ರನ್ಸ್' ಕೃತಿಗೆ ಬೂಕರ್ ಪ್ರಶಸ್ತಿ ಲಭಿಸಿದೆ.

1940: ಸಂಗೀತಗಾರನ ಮನೆತನದಲ್ಲಿ ಬೆಳೆದ ಖ್ಯಾತ ಸಂಗೀತಗಾರ ಡಿ.ಎನ್. ಗುರುದತ್ ಅವರು ಡಿ.ಕೆ. ನಾಗಣ್ಣ- ಅಶ್ವತ್ಥ ಲಕ್ಷ್ಮಮ್ಮ ದಂಪತಿಯ ಮಗನಾಗಿ ಬೆಂಗಳೂರಿನಲ್ಲಿ ಜನಿಸಿದರು.

1931: ರಾಜಕಾರಣಿ ನಂದಿನಿ ಸತ್ಪತಿ ಜನನ.

1901: ಖ್ಯಾತ ಗಣಿತ ಶಾಸ್ತ್ರಜ್ಞ ರಾಜ್ ಚಂದ್ರ ಬೋಸ್ ಜನನ.

1867: ಮೆಕ್ಸಿಕೊದ ದೊರೆ ಮ್ಯಾಕ್ಸಿಮಿಲಿಯನ್ ನ್ನು ಬೆನಿಟೋ ಜುವಾರೆಜ್ ನ ಪಡೆಗಳು ಗುಂಡಿಟ್ಟು ಕೊಂದವು. ಆತನ ಪುಟ್ಟ ಸೇನೆ 1867ರ ಮೇ 15ರಂದು ಸೋತ ಬಳಿಕ ಈ ಘಟನೆ ನಡೆಯಿತು. ವಿಕ್ಟರ್ ಹ್ಯೂಗೊ, ಜಿಸೆಪ್ ಗ್ಯಾರಿಬಾಲ್ಡಿ ಮತ್ತು ಯುರೋಪಿನ ಹಲವಾರು ದೊರೆಗಳು ಮ್ಯಾಕ್ಸಿಮಿಲಿಯನ್ ನ್ನು ಕ್ಷಮಿಸುವಂತೆ ಮನವಿ ಮಾಡಿದರೂ ಆತನ ಮರಣದಂಡನೆಗೆ ಆದೇಶ ನೀಡಿದ ಜುವಾರೆಜ್ ಮೇಲೆ ಅವು ಯಾವ ಪರಿಣಾಮವನ್ನೂ ಬೀರಲಿಲ್ಲ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday, June 26, 2010

ಇಂದಿನ ಇತಿಹಾಸ History Today ಜೂನ್ 18

ಇಂದಿನ ಇತಿಹಾಸ

ಜೂನ್ 18

ಅಪಾರ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರ ಹರ್ಷೋದ್ಗಾರಗಳ ನಡುವೆ ವಿ. ಸೋಮಣ್ಣ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರಿಗೆ ವಸತಿ, ಮುಜರಾಯಿ ಖಾತೆ ನೀಡಲಾಯಿತು.

2009: ರಾಜ್ಯದ ಮೊದಲ ಖಾಸಗಿ ವಿಶ್ವವಿದ್ಯಾಲಯ ಸ್ಥಾಪನೆಗೆ ಸಚಿವ ಸಂಪುಟ ಸಭೆ ಅನುಮೋದನೆ ನೀಡಿತು, ಈ ಸಂಬಂಧದ ಮಸೂದೆಯನ್ನು ಮುಂಬರುವ ವಿಧಾನಮಂಡಲದ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಯಿತು. ಪ್ರತಿಷ್ಠಿತ ಅಜೀಂ ಪ್ರೇಮ್‌ಜಿ ಪ್ರತಿಷ್ಠಾನ ಸ್ಥಾಪಿಸುವ ಖಾಸಗಿ ವಿಶ್ವವಿದ್ಯಾಲಯ ಸಂಬಂಧದ ಮಸೂದೆಯನ್ನು ಮುಂಬರುವ ಅಧಿವೇಶನದಲ್ಲಿ ಮಂಡಿಸಲು ತೀರ್ಮಾನಿಸಲಾಗಿದೆ ಎಂದು ಸಂಪುಟ ಸಭೆ ನಂತರ ಸಚಿವ ಎಸ್. ಸುರೇಶ್‌ಕುಮಾರ್ ತಿಳಿಸಿದರು.

2009: ಅಪಾರ ಸಂಖ್ಯೆಯ ಅಭಿಮಾನಿಗಳು, ಬೆಂಬಲಿಗರ ಹರ್ಷೋದ್ಗಾರಗಳ ನಡುವೆ ವಿ. ಸೋಮಣ್ಣ ಅವರು ಸಂಪುಟ ದರ್ಜೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದರು. ಅವರಿಗೆ ವಸತಿ, ಮುಜರಾಯಿ ಖಾತೆ ನೀಡಲಾಯಿತು. ಸಚಿವ ಸ್ಥಾನ ತ್ಯಾಗ ಮಾಡಿದ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಹಾಗೂ ನೂತನ ಮುಜರಾಯಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನಕ್ಕೆ ನೇಮಕ ಮಾಡಲಾಯಿತು.

2009: ಉತ್ತರಪ್ರದೇಶದ 400ಕ್ಕೂ ಹೆಚ್ಚು ಪೊಲೀಸರು ಸುಮಾರು 52 ಗಂಟೆಗಳ ಕಾಲ ಕಾರ್ಯಾಚರಣೆ ನಡೆಸಿ, ಕುಖ್ಯಾತ ಡಕಾಯಿತ ಘನಶ್ಯಾಮ್ ಕೇವತ್ ಎಂಬಾತನನ್ನು ಗುಂಡಿಕ್ಕಿ ಕೊಂದ ಘಟನೆ ಚಿತ್ರಕೂಟ ಬಳಿ ಸಂಭವಿಸಿತು. ಇದಕ್ಕೂ ಮುನ್ನ, ಡಕಾಯಿತ ತನ್ನ ಬಂದೂಕಿನಿಂದ ಗುಂಡು ಹಾರಿಸಿ ನಾಲ್ವರು ಪೊಲೀಸರನ್ನು ಹತ್ಯೆ ಮಾಡಿ, ಹಲವರನ್ನು ಗಾಯಗೊಳಿಸಿ, ನಂತರ ಪರಾರಿಯಾಗಲು ಯತ್ನಿಸಿದ್ದ. ಆದರೆ ಅಪಾರ ಸಂಖ್ಯೆಯಲ್ಲಿದ್ದ ಪೊಲೀಸರು ಕಟ್ಟಡದಿಂದ ಕಟ್ಟಡಕ್ಕೆ ಹಾರುತ್ತಾ ತಪ್ಪಿಸಿಕೊಳ್ಳಲು ಯತ್ನಿಸಿದ್ದ ಆತನನ್ನು ಸುತ್ತುವರಿದು, ಗುಂಡಿಟ್ಟು ಕೊಂದರು. ಮೃತ ಕೇವತ್ ಉತ್ತರಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ದೊಡ್ಡ ತಂಡವನ್ನು ಕಟ್ಟಿಕೊಂಡು ಡಕಾಯಿತಿ ನಡೆಸುತ್ತಾ, ಸುಮಾರು 12ಕ್ಕೂ ಹೆಚ್ಚು ಕೊಲೆ, ಅಪಹರಣ, ಮತ್ತಿತರ ಹಲವಾರು ಅಪರಾಧಗಳನ್ನು ಎಸಗಿದ್ದ.

2009: ಹೃದ್ರೋಗ ದೂರವಿಡಬೇಕೆ? ಹಾಗಾದರೆ, ದಿನಕ್ಕೊಂದು ಬಟ್ಟಲು ಬ್ಯ್ಲಾಕ್ ಟೀ ಸೇವಿಸಿ ಸಾಕು- ಇದು ಇಟಲಿಯ ಎಲ್‌ಅಕ್ವಿಲಾ ವಿ.ವಿ.ಯ ಸಂಶೋಧಕರ ಸಲಹೆ. ಬ್ಯ್ಲಾಕ್ ಟೀ  ಕುಡಿದರೆ ರಕ್ತನಾಳಗಳ ಕ್ರಿಯೆ ಚುರುಕಾಗುವುದಷ್ಟೇ ಅಲ್ಲದೆ ರಕ್ತದ ಒತ್ತಡ ಮತ್ತು ನಾಳಗಳ ಬಿಗಿತ ತಗ್ಗುತ್ತದೆ. ಇದು ಹೃದಯವನ್ನು ಸುಸ್ಥಿತಿಯಲ್ಲಿಡಲು ಸಹಕಾರಿ ಎಂಬುದು ಅವರ ವಿವರಣೆ. 19 ಆರೋಗ್ಯವಂತ ಪುರುಷರನ್ನು ಐದು ವಾರಗಳ ಕಾಲ ಹಲವು ಪ್ರಯೋಗಗಳು- ಪರೀಕ್ಷೆಗಳಿಗೆ ಒಳಪಡಿಸಿದಾಗ ಇದು ಖಚಿತಪಟ್ಟಿದೆ ಎಂದೂ ವಿಜ್ಞಾನಿಗಳು ತಿಳಿಸಿದರು.

2009: ಭೋಪಾಲ್ ಅನಿಲ ದುರಂತ ಸಂತ್ರಸ್ತರ ಆರ್ಥಿಕ ಪುನಃಶ್ಚೇತನಕ್ಕೆ ಶೀಘ್ರವೇ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಅಮೆರಿಕದ ಸುಮಾರು 20 ಕಾಂಗ್ರೆಸ್ ಸದಸ್ಯರು (ಸಂಸದರು) ಡೋವ್ ಕೆಮಿಕಲ್ ಕಂಪೆನಿಗೆ (ಈಗ ಯೂನಿಯನ್ ಕಾರ್ಬೈಡ್ ಒಡೆತನ ಹೊಂದಿರುವ) ಸೂಚನೆ ನೀಡಿದರು. ಸಂತ್ರಸ್ತರಿಗೆ ವೈದ್ಯಕೀಯ ಹಾಗೂ ಆರ್ಥಿಕ ನೆರವು ನೀಡಬೇಕು. ಕಾರ್ಖಾನೆ ಇದ್ದ ಸ್ಥಳದ  ಸುತ್ತಮುತ್ತ ಕಲುಷಿತಗೊಂಡಿರುವ ಮಣ್ಣು ಹಾಗೂ ಅಂತರ್ಜಲವನ್ನು ಶುಚಿಗೊಳಿಸಲು ಕ್ರಮ ತೆಗೆದುಕೊಳ್ಳಬೇಕೆಂದು ಡೌ ಕಂಪೆನಿ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಂಡ್ರೂ ಲೈವ್‌ರಿಸ್ ಅವರಿಗೆ ಬರೆದ ಪತ್ರದಲ್ಲಿ ಸಂಸದರು ತಿಳಿಸಿದರು.

2009: ಸಂಶೋಧಕರಿಗೆ ಜಾಗತಿಕ ಮಟ್ಟದಲ್ಲಿ ನಡೆದ ಅಪರೂಪದ ಘಟನೆಗಳನ್ನು ಒದಗಿಸುವ ಹಿನ್ನೆಲೆಯಲ್ಲಿ  ಮೊದಲ ಬಾರಿಗೆ ಲಂಡನ್ನಿನ ಬ್ರಿಟಿಷ್ ಲೈಬ್ರರಿ 1857 ರಲ್ಲಿ ನಡೆದ ಭಾರತದ ಮೊದಲ ಸ್ವಾತಂತ್ರ ಸಂಗ್ರಾಮ ಸೇರಿದಂತೆ 19ನೇ ಶತಮಾನ ಮತ್ತು 20ನೇ ಶತಮಾನದ ಪತ್ರಿಕೆಗಳ ಎರಡು ದಶಲಕ್ಷ ಪುಟಗಳನ್ನು ಕಂಪ್ಯೂಟರಿನಲ್ಲಿ ಅಳವಡಿಸಿರುವುದಾಗಿ ಪ್ರಕಟಿಸಿತು. ಚಾರ್ಲ್ಸ್ ಡಿಕನ್ಸ್ ಮತ್ತು ಥ್ಯಾಕರೇ ಸೇರಿದಂತೆ 19ನೇ ಶತಮಾನದ ಖ್ಯಾತ ಬರಹಗಾರರ ಬರಹಗಳು, ಬ್ರಿಟನ್ನಿನ 49 ರಾಷ್ಟ್ರೀಯ ಪತ್ರಿಕೆಗಳ ವರದಿಗಳ ಪುಟಗಳನ್ನು ಆನ್‌ಲೈನಿನಲ್ಲಿ ನೋಡಬಹುದು. ಇದುವರೆಗೆ ಲೈಬ್ರರಿಯಲ್ಲಿ ಹಾರ್ಡ್‌ಕಾಪಿಯಲ್ಲಿ ಮಾತ್ರ ದೊರೆಯುತ್ತಿದ್ದ ಇದನ್ನು ವೆಬ್‌ಸೈಟ್‌ನಲ್ಲಿ ವೀಕ್ಷಿಸಬಹುದು.

2009: ಉದ್ದೀಪನ ಮದ್ದು ಹೊಂದಿದ್ದ ಆರೋಪದಲ್ಲಿ ಬಂಧಿತರಾಗಿದ್ದ ಕುಸ್ತಿಪಟು ಜಗದೀಶ್ ಸಿಂಗ್ ವಿರುದ್ಧ ಕ್ರೀಡಾ ಇಲಾಖೆ ಕ್ರಮ ಕೈಗೊಂಡಿತು. ಮೊದಲ ಹೆಜ್ಜೆಯಾಗಿ ಜಗದೀಶ್ ಅವರಿಗೆ 1998ರಲ್ಲಿ ನೀಡಲಾಗಿದ್ದ 'ಅರ್ಜನ ಪ್ರಶಸ್ತಿ'ಯನ್ನು ಹಿಂದಕ್ಕೆ ಪಡೆಯಲಾಯಿತು. ದೇಶದ ಉನ್ನತ ಕ್ರೀಡಾ ಪ್ರಶಸ್ತಿಯ ಘನತೆ ಕಾಪಾಡುವ ಉದ್ದೇಶದಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಕ್ರೀಡಾ ಇಲಾಖೆ ಸ್ಪಷ್ಟಪಡಿಸಿತು.

2009: ಗರ್ಭಿಣಿ ಮಹಿಳೆ ಮತ್ತು ಮೂರು ವರ್ಷದ ಹೆಣ್ಣು ಮಗುವನ್ನು ಜಿಆರ್‌ಪಿ ಪೊಲೀಸರಿಬ್ಬರು ಚಲಿಸುತ್ತಿದ್ದ ರೈಲಿನಿಂದ ಹೊರತಳ್ಳಿದ ಪರಿಣಾಮ ಆಕೆ ಮೃತಳಾಗಿ, ಮಗು ಗಾಯಗೊಂಡ ದಾರುಣ ಘಟನೆ ಉತ್ತರಪ್ರದೇಶದ ಲಖೀಂಪುರ ಖೇರಿ ಜಿಲ್ಲೆಯಲ್ಲಿ ಘಟಿಸಿತು. ಮಾಲಿನಿಗೊಂಡ ಪ್ರಯಾಣಿಕರ ರೈಲಿನಲ್ಲಿ ಈ ಘಟನೆ ಜರುಗಿತು. ಮೃತ ಮಹಿಳೆಯನ್ನು ಕವಿತಾ ಎಂದು ಗುರುತಿಸಲಾಯಿತು. ಕವಿತಾ ಅವರ ಪತಿ ದಿನೇಶ್ ರೈಲಿನಲ್ಲಿ ಸೈಕಲ್ ಹಾಕಿದ ಪರಿಣಾಮ ಅವರಿಂದ ಜಿಆರ್‌ಪಿ ಪೊಲೀಸರು ಹಣ ಕೇಳಿದರು. ಈ ಸಂಬಂಧ ಗಲಾಟೆ ಪ್ರಾರಂಭವಾಗಿ, ಜಿಆರ್‌ಪಿ ಪೊಲೀಸರು ದಿನೇಶ್ ಅವರ ಪತ್ನಿ ಕವಿತಾ ಹಾಗೂ ಮಗುವನ್ನು ಚಲಿಸುತ್ತಿದ್ದ ರೈಲಿನಿಂದ ಹೊರ ತಳ್ಳಿದರು ಎಂದು ರೈಲ್ವೆ ಪೊಲೀಸರು ತಿಳಿಸಿದರು.

2008: ಗುಜ್ಜರ್ ಜನಾಂಗಕ್ಕೆ ವಿಶೇಷ ಪ್ರತ್ಯೇಕ ಹಿಂದುಳಿದ ವರ್ಗಗಳ ವಿಭಾಗದಲ್ಲಿ ಶೇಕಡಾ ಐದರಷ್ಟು ಮೀಸಲಾತಿ ನೀಡಲು ರಾಜಸ್ಥಾನ ಸರ್ಕಾರ ಒಪ್ಪುವುದರೊಂದಿಗೆ ಒಂದು ತಿಂಗಳಿಂದ ನಡೆಯುತ್ತಿದ್ದ ಮೀಸಲಾತಿ ಚಳವಳಿಗೆ ತೆರೆ ಬಿದ್ದಿತು. ಈ ವರ್ಷಾಂತ್ಯದಲ್ಲಿ ನಡೆಯುವ ವಿಧಾನಸಭಾ ಚುನಾವಣೆಯನ್ನು ದೃಷ್ಟಿಯಲ್ಲಿ ಇಟ್ಟುಕೊಂಡ ಸರ್ಕಾರ ಮೇಲ್ಜಾತಿ ಬಾಹ್ಮಣ, ರಜಪೂತ್, ವೈಶ್ಯರು ಮತ್ತು ಕಾಯಸ್ಥ ವರ್ಗದ ಅತೀ ಬಡವರಿಗೆ ಶೇಕಡಾ 14ರಷ್ಟು ಮೀಸಲಾತಿ ನೀಡಲು ನಿರ್ಧರಿಸಿತು.

2007: ಅಮೆರಿಕದ ಪ್ರಜೆಯಾಗಿರುವ ಭಾರತೀಯ ಸಂಜಾತೆ ಬಾಲಾ ಕೃಷ್ಣಮೂರ್ತಿ  ಅವರು ತಂತ್ರಜ್ಞಾನ ಅಭಿವೃದ್ಧಿಗೆ ನೀಡಲಾಗುವ ಎಂಜೆಲ್ ಬರ್ಗರ್ ರೊಬೋಟಿಕ್ಸ್ (ಯಂತ್ರ ಮಾನವ ವಿಜ್ಞಾನ) ಪ್ರಶಸ್ತಿಗೆ ಭಾಜನರಾದ ಮೊದಲ ಮಹಿಳೆ ಎಂಬ ಗೌರವಕ್ಕೆ ಪಾತ್ರರಾದರು. ಏವೋಲಿನ್ ಇಂಕ್ ಸ್ಥಾಪಕ ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಬಾಲಾ ಕೃಷ್ಣಮೂರ್ತಿ ಅವರು ಕಳೆದ 25 ವರ್ಷಗಳಿಂದ ವಿವಿಧ ತಂತ್ರಾಂಶ, ಸಂಪರ್ಕಜಾಲ ಮತ್ತು ಯಂತ್ರ ಮಾನವ ವಿಜ್ಞಾನದ ಅಭಿವೃದ್ಧಿಗೆ ಪೂರಕವಾದ ಅನೇಕ ಸಾಫ್ಟ್ ವೇರ್ ಅಭಿವೃದ್ಧಿಗೊಳಿಸಿದ್ದು, ಈ ಸಾಧನೆಗಾಗಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು.

2007: ಗಿನ್ನೆಸ್ ವಿಶ್ವ ದಾಖಲೆಗಳ ಪುಸ್ತಕದಿಂದ ಅಧಿಕೃತ ಪ್ರಮಾಣ ಪತ್ರ ಪಡೆಯುವುದರೊಂದಿಗೆ  ಜಪಾನಿನ 111 ವರ್ಷದ ತೊಮೊಜಿ ತನಾಬೆ ಅವರು ಅಧಿಕೃತವಾಗಿ ವಿಶ್ವದ ಅತ್ಯಂತ ವೃದ್ಧ ಎಂಬ ಹೆಗ್ಗಳಿಕಗೆ ಪಾತ್ರರಾದರು.

2007: ಲಂಡನ್ನಿನಲ್ಲಿ ನಡೆದ ಬಿಗ್ ಬ್ರದರ್ ರಿಯಾಲಿಟಿ ಶೋ ಸಂದರ್ಭದಲ್ಲಿ ಜನಾಂಗೀಯ ನಿಂದನೆಗೆ ಒಳಗಾಗಿದ್ದ ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರು ಅದೇ ಲಂಡನ್ ನಗರದಲ್ಲಿ ತನ್ನದೇ ಹೆಸರಿನ ಪರಿಮಳ ದ್ರವ್ಯ ಬಿಡುಗಡೆ ಮಾಡಿದರು. ಇದರಿಂದಾಗಿ ಶಿಲ್ಪಾ ಅವರು ಹಾಲಿವುಡ್ಡಿನ ಖ್ಯಾತ ತಾರೆಯರಾದ ಜೆನಿಫರ್ ಲೋಪೆಜ್, ಪ್ಯಾರಿಸ್ ಹಿಲ್ಟನ್ ಅವರಿಗೆ ಸರಿ ಸಮಾನವಾಗಿ ಕಾಣಿಸಿಕೊಂಡರು.

2007: ಅಟ್ಲಾಂಟಿಸ್ ಅಂತರಿಕ್ಷ ಯಾನದ ಅಂಗವಾಗಿ ಅಮೆರಿಕದ ಇಬ್ಬರು ಗಗನಯಾತ್ರಿಗಳು ಕೊನೆಯ ಬಾರಿ ಅಂತರಿಕ್ಷ ನಡಿಗೆ ಕೈಗೊಂಡರು. ಇದರೊಂದಿಗೆ ಅಟ್ಲಾಂಟಿಸ್ ನೌಕೆ ಭೂಮಿಗೆ ವಾಪಸಾಗಲು ಸಜ್ಜಾಯಿತು.

2007: ಬಾಂಗ್ಲಾದೇಶದ ಸ್ಥಾಪನೆಗೆ ಕಾರಣರಾದ ಷೇಕ್ ಮುಜಿಬುರ್ ರಹಮಾನ್ ಅವರನ್ನು ಕೊಂದು ತಲೆ ಮರೆಸಿಕೊಂಡು ಅಮೆರಿಕದಲ್ಲಿದ್ದ ನಿವೃತ್ತ ಸೇನಾ ಅಧಿಕಾರಿ ಮೇಜರ್ ಎ.ಕೆ. ಮೊಹಿಯ್ದುದೀನ್ ಭಾರಿ ಭದ್ರತೆಯ ಮಧ್ಯೆ ಬಾಂಗ್ಲಾದೇಶಕ್ಕೆ ವಾಪಸಾದ. ಆತನನ್ನು ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ಹಾಜರು ಪಡಿಸಿದ ಬಳಿಕ ಢಾಕಾ ಸೆಂಟ್ರಲ್ ಜೈಲಿಗೆ ಕಳುಹಿಸಲಾಯಿತು.

2007: ತಾರಾ ಅಯ್ಯರ್ ಅವರು ಪೋರ್ಚುಗಲ್ಲಿನ ಮೊಂಟೆ ಮೋರ್- ಒ - ನೋವಾದಲ್ಲಿ ಮುಕ್ತಾಯವಾದ ಹತ್ತು ಸಾವಿರ ಅಮೆರಿಕನ್ ಡಾಲರ್ ಮೊತ್ತದ ಬಹುಮಾನ ಐಟಿ ಎಫ್ ಮಹಿಳಾ ಟೆನಿಸ್ ಟೂರ್ನಿಯ ಸಿಂಗಲ್ಸ್ ಪ್ರಶಸ್ತಿ ಪಡೆದುಕೊಂಡರು.

2007: ಕಾಂಗ್ರೆಸ್ ಮತ್ತು ಬಿಜೆಪಿಗೆ ಪರ್ಯಾಯ ಶಕ್ತಿಯನ್ನು ಹುಟ್ಟು ಹಾಕುವ ನಿಟ್ಟಿನಲ್ಲಿ ಎಂಟು ಪ್ರಾದೇಶಿಕ ಪಕ್ಷಗಳು ಚೆನ್ನೈಯಲ್ಲಿ ಸಭೆ ಸೇರಿ `ಸಂಯುಕ್ತ ರಾಷ್ಟ್ರೀಯ ಪ್ರಗತಿಪರ ಮೈತ್ರಿಕೂಟ' (ಯುಎನ್ಪಿಎ) ಹೆಸರಿನಲ್ಲಿ ಹೊಸದಾಗಿ ತೃತೀಯ ರಂಗ ರಚಿಸಿಕೊಂಡವು. ಎಐಎಡಿಎಂಕೆ ನಾಯಕಿ ಜಯಲಲಿತಾ ಅವರ ನಿವಾಸದಲ್ಲಿ ಈ ಸಭೆ ನಡೆಯಿತು.

2006: ಕಳೆದ 44 ವರ್ಷಗಳಿಂದ ಮುಚ್ಚಲ್ಪಟ್ಟಿದ್ದ ಆಯಕಟ್ಟಿನ `ನಾಥು ಲಾ ಪಾಸ್' ಮೂಲಕ ಜುಲೈ 6ರಿಂದ ಗಡಿ ವ್ಯಾಪಾರ ಪುನರಾರಂಭಿಸುವ ಐತಿಹಾಸಿಕ ಒಪ್ಪಂದಕ್ಕೆ ಭಾರತ ಮತ್ತು ಚೀನಾ ಸಮ್ಮತಿಸಿದವು. ಈ ಮಾರ್ಗವನ್ನು ತೆರೆಯುವುದರಿಂದ ಗಡಿ ಮುಚ್ಚಿದ್ದ ಏಷ್ಯಾದ ಎರಡು ಬೃಹತ್ ರಾಷ್ಟ್ರಗಳ ಪರ್ವತ ಪ್ರಾಂತ್ಯಗಳ ಸ್ಥಳೀಯ ಆರ್ಥಿಕತೆ ಮತ್ತು ದ್ವಿಪಕ್ಷೀಯ ವ್ಯಾಪಾರ ವೃದ್ಧಿಗೆ ಹೆಚ್ಚಿನ ನೆರವಾಗಲಿದೆ. ಈ ಸಂಬಂಧ ಒಪ್ಪಂದಕ್ಕೆ ಸಹಿ ಹಾಕಲಾಗಿದ್ದು, ಇದು ಎರಡೂ ರಾಷ್ಟ್ರಗಳ ಗಡಿಭಾಗದಲ್ಲಿ ವಾಸಿಸುವ ಜನರಿಗೆ 1991, 1992 ಹಾಗೂ 2003ರ ಗಡಿ ವ್ಯಾಪಾರ ಒಪ್ಪಂದದಲ್ಲಿ ಪ್ರಸ್ತಾಪಿಸಲಾದ ಸುಮಾರು 30 ವಸ್ತುಗಳನ್ನು ರಫ್ತು ಮಾಡಿಕೊಳ್ಳಲು ಅವಕಾಶ ಕಲ್ಪಿಸಿದೆ.

2006: ಸತತ 30 ಗಂಟೆಗಳ ಕಾಲ ಮೃದಂಗ ನುಡಿಸುವ ಮೂಲಕ ಕೇರಳದ ಪಾಲಕ್ಕಾಡಿನ ಯುವ ಕಲಾವಿದ ವಿನೀತ್ (17) ಶಾರದಾ ಪೀಠ ಪ್ರವಚನ ಮಂದಿರದಲ್ಲಿ ವಿಶೇಷ ಸಾಧನೆ ಮೆರೆದರು.

1980: ಭಾರತದ ಶಕುಂತಲಾದೇವಿ ಅವರು ಲಂಡನ್ನಿನ ಇಂಪೀರಿಯಲ್ ಕಾಲೇಜಿನ ಕಂಪ್ಯೂಟರ್ ವಿಭಾಗದಲ್ಲಿ 13 ಅಂಕಿಗಳ ಎರಡು ಸಂಖ್ಯೆಯನ್ನು ತೆಗೆದುಕೊಂಡು ಕೇವಲ 28 ಸೆಕೆಂಡುಗಳಲ್ಲಿ ಅವುಗಳನ್ನು ಗುಣಿಸಿ ಉತ್ತರ ಹೇಳಿದರು. ಅವರು ತೆಗೆದುಕೊಂಡಿದ್ದ ಸಂಖ್ಯೆಗಳು: 7,686,369,774,870 ಮತ್ತು 2,465,099,745,779. ಈ ಎರಡು ಸಂಖ್ಯೆಗಳನ್ನು ಗುಣಿಸಿ ಆಕೆ ನೀಡಿದ ಸಮರ್ಪಕ ಉತ್ತರ: 18,947,668,177,995,426,462,773,730.

1968: ವೈವಿಧ್ಯಮಯ ಕಲಾಕೃತಿಗಳ ಮೂಲಕ ಅಂತಾರಾಷ್ಟ್ರೀಯ ಮನ್ನಣೆ ಗಳಿಸಿರುವ ಎಸ್. ಮಂಜುನಾಥ ಆಚಾರ್ಯ ಅವರು ಎಸ್. ಶಂಕರನಾರಾಯಣಾಚಾರ್ಯ- ಸಿದ್ದಮ್ಮ ದಂಪತಿಯ ಮಗನಾಗಿ ಕೋಲಾರ ಜಿಲ್ಲೆ ಮುಳಬಾಗಲು ತಾಲ್ಲೂಕಿನ ಶಿವಾರ ಪಟ್ಟಣದಲ್ಲಿ ಜನಿಸಿದರು.

1942: ಶಂಶ ಐತಾಳ ಜನನ.

1939: ಚಂದ್ರಶೇಖರ ಪಾಟೀಲ (ಚಂಪಾ) ಜನನ.

1928: ಬಿ.ಎಸ್. ಅಣ್ಣಯ್ಯ ಜನನ.

1928: ವಿಮಾನಯಾನಿ ಅಮೇಲಿಯಾ ಈಯರ್ ಹಾರ್ಟ್ ಅಟ್ಲಾಂಟಿಕ್ ಸಾಗರದ ಮೇಲಿನಿಂದ ವಿಮಾನ ಮೂಲಕ ಕ್ರಮಿಸಿದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಆಕೆ ನ್ಯೂಫೌಂಡ್ ಲ್ಯಾಂಡಿನಿಂದ ವೇಲ್ಸ್ ವರೆಗೆ  ವಿಮಾನದಲ್ಲಿ ಪೈಲಟ್ ವಿಲ್ಮರ್ ಸ್ಟಲ್ಜ್ ಜೊತೆಗೆ ಪ್ರಯಾಣಿಕಳಾಗಿ 21 ಗಂಟೆಗಳ ಕಾಲ ಪಯಣಿಸಿದರು.

1918: ಸಾಹಿತಿ ಸಿದ್ಧಯ್ಯ ಪುರಾಣಿಕ ಜನನ.

1912: ವಿಶಿಷ್ಟ ನವೋದಯ ಕಥೆಗಾರರೆಂದು ಖ್ಯಾತಿ ಪಡೆದಿದ್ದ ಅಶ್ವತ್ಥ ನಾರಾಯಣ ರಾವ್ ಅವರು ಸೋಮಯ್ಯ- ಲಕ್ಷ್ಮಮ್ಮ ದಂಪತಿಯ ಪುತ್ರನಾಗಿ ಮೈಸೂರಿನಲ್ಲಿ ಜನಿಸಿದರು.

1817: ಜಂಗ್ ಬಹದ್ದೂರ್ (1817-1877) ಜನ್ಮದಿನ. 1846ರಿಂದ 1877ರವರೆಗೆ ನೇಪಾಳದ ಪ್ರಧಾನಮಂತ್ರಿ ಹಾಗೂ ಆಡಳಿತಗಾರನಾಗಿದ್ದ ಈತ ರಾಣಾ ವಂಶವನ್ನು ಪ್ರಧಾನಮಂತ್ರಿಗಳ ವಂಶವಾಗಿ ಪ್ರತಿಷ್ಠಾಪಿಸಿದ. 1951ರವರೆಗೂ ಪ್ರಧಾನಮಂತ್ರಿಗಳ ಹುದ್ದೆ ಈ ವಂಶದಲ್ಲೇ ಮುಂದುವರಿಯಿತು.

1815: ವೆಲ್ಲಿಂಗ್ಟನ್ನಿನ ಮೊದಲ ಡ್ಯೂಕ್ ಆರ್ಥರ್ ವೆಲ್ಲೆಸ್ಲ್ಲೆ ಮತ್ತು ಪ್ರಷಿಯಾದ ಜನರಲ್ ಗ್ಲೆಭರ್ಡ್ ಬ್ಲುಚರ್ ಒಟ್ಟಾಗಿ ಬ್ರಸೆಲ್ಸಿನಿಂದ ದಕ್ಷಿಣಕ್ಕೆ ನಾಲ್ಕು ಕಿ.ಮೀ. ದೂರದ ವಾಟರ್ಲೂನಲ್ಲಿ ನೆಪೋಲಿಯನ್ ಬೋನಪಾರ್ಟೆ ವಿರುದ್ಧ ಹೋರಾಡಿ ಆತನನ್ನು ಸೋಲಿಸಿದರು. ನಾಲ್ಕು ದಿನಗಳ ಬಳಿಕ ನೆಪೋಲಿಯನ್ ಎರಡನೇ ಬಾರಿಗೆ ಪದತ್ಯಾಗ ಮಾಡಿದ.

1769: ರಾಬರ್ಟ್ ಸ್ಟೀವರ್ಟ್ ವೈಕೌಂಟ್ ಕ್ಯಾಸೆಲ್ ರೀಗ್ (1769-1822) ಜನ್ಮದಿನ. ಬ್ರಿಟಿಷ್ ವಿದೇಶಾಂಗ ಕಾರ್ಯದರ್ಶಿಯಾಗಿದ್ದ ಈತ ವಿಯೆನ್ನಾ ಕಾಂಗೆಸ್ಸಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದ. ವಿಯೆನ್ನಾ ಕಾಂಗ್ರೆಸ್ 1815ರಲ್ಲಿ ಯುರೋಪಿನ ನಕ್ಷೆಯನ್ನು ಬದಲಾಯಿಸಿತು.

1633: ಕೊಂಕಣಿ ಭಾಷಾ ನಿಘಂಟು ತಯಾರಕ ರೆವೈರು ಡಿಗೊ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Thursday, June 24, 2010

ಇಂದಿನ ಇತಿಹಾಸ History Today ಜೂನ್ 17

ಇಂದಿನ ಇತಿಹಾಸ 

ಜೂನ್ 17

 ಬೆಂಬಲಿಗರ ರಂಪಾಟ, ತೀವ್ರ ವಿರೋಧದ ನಡುವೆ ಮುಜರಾಯಿ ಮತ್ತು ವಸತಿ ಖಾತೆ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

2009: ರೈಲಿನಲ್ಲಿದ್ದ ಪ್ರಯಾಣಿಕರನ್ನು ಮಾರಕಾಸ್ತ್ರಗಳಿಂದ ಬೆದರಿಸಿ ಡಕಾಯತಿ ನಡೆಸಿದ್ದ ಆರು ಜನರ ಪೈಕಿ ಇಬ್ಬರನ್ನು ಧಾರವಾಡದ ರೈಲ್ವೆ ನಿಲ್ದಾಣದಲ್ಲಿ ಹಾಗೂ ಇನ್ನಿಬ್ಬರನ್ನು ಲೋಂಡಾದಲ್ಲಿ ಪೊಲೀಸರು  ನಸುಕಿನ ಜಾವ ಬಂಧಿಸಿದರು. ಧಾರವಾಡ ರೈಲ್ವೆ ನಿಲ್ದಾಣದಲ್ಲಿ ನಾಲ್ವರು ಡಕಾಯಿತರು ಕಲ್ಲು ತೂರಿ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಪೊಲೀಸರು ಗುಂಡು ಹಾರಿಸಿ ಇಬ್ಬರನ್ನು ಬಂಧಿಸಿದರು. ಬಂಧಿತರಿಂದ ಎರಡು ಮೊಬೈಲ್ ಸೆಟ್‌ಗಳು, 2000 ರೂ. ನಗದು ಹಾಗೂ ಮಾರಕಾಸ್ತ್ರಗಳನ್ನು ವಶಪಡಿಸಿ ಕೊಳ್ಳಲಾಯಿತು. ಹುಬ್ಬಳ್ಳಿಯ ರಾಮನಗರದ ನಾಗರಾಜ ಬಾಬು ಪವಾರ (18), ಧಾರವಾಡ ತಾಲ್ಲೂಕಿನ ಪುಡಕಲಟ್ಟಿ ಗ್ರಾಮದ ಸಂತೋಷ ಬಸಯ್ಯ ಪೂಜಾರ (19) ಬಂಧಿತರು. ಪವಾರ ಕಾಲಿಗೆ ಎರಡು ಗುಂಡುಗಳು ತಾಗಿದರೆ, ಸಂತೋಷನ ಕಾಲಿಗೆ ಒಂದು ಗುಂಡು ತಾಗಿತು.

2009: ರಾಜ್ಯದ ವಿವಿಧೆಡೆ ಸುರಿದ ಮಳೆ ಹಾಗೂ ಸಿಡಿಲಿನ ಅಬ್ಬರಕ್ಕೆ ಒಟ್ಟು ಏಳು ಮಂದಿ ಬಲಿಯಾದರು. ಗುಲ್ಬರ್ಗ ಜಿಲ್ಲೆಯಲ್ಲಿ ಸಿಡಿಲು ಬಡಿದು ಐವರು ಮೃತರಾದರು. ಬಾಗಲಕೋಟೆಯ ಗದ್ದನಕೇರಿಯಲ್ಲಿ ಒಬ್ಬ ವೃದ್ಧೆ ಮನೆ ಕುಸಿತದಿಂದ ಸಾವಿಗೀಡಾದರು. ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯ ಬ್ಯಾಕೋಡ ಗ್ರಾಮದ ಬಳಿ ಬಾಲಕನೊಬ್ಬ ಹಳ್ಳ ದಾಟುವಾಗ ನೀರು ಪಾಲಾದ. ಗುಲ್ಬರ್ಗ ತಾಲ್ಲೂಕಿನ ಭೂಪಾಲತೆಗನೂರ ಹೊಲವೊಂದರಲ್ಲಿ ಕೆಲಸ ಮಾಡುತ್ತಿದ್ದ  ಚಂದ್ರಕಾಂತ ಜಟ್ಟೆಪ್ಪ (25) ಹಾಗೂ ಅನಿಲ್ ಕುಪೇಂದ್ರ (19) ಎಂಬವರು ಮಳೆಯಿಂದ ರಕ್ಷಣೆ ಪಡೆಯಲು ಮರದ ಕೆಳಗೆ ಆಶ್ರಯ ಪಡೆದಾಗ ಸಿಡಿಲು ಬಡಿದು ಸ್ಥಳದಲ್ಲಿಯೇ ಮೃತರಾದರು. ಅಫಜಲಪೂರ ತಾಲ್ಲೂಕಿನ ಚಿಂಚೋಳಿ ಗ್ರಾಮದಲ್ಲಿ ಮದುವೆ ಸಮಾರಂಭದಲ್ಲಿ ಪಾಲ್ಗೊಂಡು ಮರಳುತ್ತಿದ್ದ ಮಾಶಾಳ ಗ್ರಾಮದ ಕಾಶಿನಾಥ ಭೀಮಶಾ ಭಜಂತ್ರಿ (55) ಹಾಗೂ ಗುಲ್ಬರ್ಗ ಸಂತ್ರಸವಾಡಿಯ ರಾಣಪ್ಪ ಭೀಮಶಾ ಚೌಧ (56) ಸಿಡಿಲಿಗೆ ಬಲಿಯಾದರು.

2009: ವಿಶ್ವದ ಬಹುದೊಡ್ಡ ಸೇನಾಪಡೆಯ ಮುಖ್ಯಸ್ಥರೂ ಆದ ಅಧ್ಯಕ್ಷ ಬರಾಕ್ ಒಬಾಮ ಅವರ ಮೇಲೆ 'ಬಂಡುಕೋರ'ನೊಬ್ಬ 'ದಾಳಿ' ನಡೆಸಿದ! ಕೂಡಲೇ 'ಕಠೋರ' ನಿರ್ಧಾರ ಕೈಗೊಂಡ ಅವರು ಆ ಉಗ್ರನನ್ನು ಕ್ಷಣಮಾತ್ರದಲ್ಲಿ ಹೊಸಕಿ ಹಾಕಿದರು! ಈ ಆಕ್ರಮಣ ನಡೆದದ್ದು ಸದಾ ಸರ್ಪಗಾವಲಿರುವ ಶ್ವೇತಭವನದಲ್ಲಿ.  ಈ ಭಯೋತ್ಪಾದಕ ಯಾರು ಗೊತ್ತೆ? ನೊಣದ ಜಾತಿಗೆ ಸೇರಿದ ಒಂದು ಕ್ರಿಮಿ! ಸಿಎನ್‌ಬಿಸಿ ಸುದ್ದಿವಾಹಿನಿಗೆ ಸಂದರ್ಶನ ನೀಡುತ್ತಿದ್ದ ವೇಳೆ ಒಬಾಮ ಅವರನ್ನು ನೊಣ ಸುತ್ತುವರೆಯಿತು.  'ಇಲ್ಲಿಂದ ತೊಲಗು' ಎಂದು ಅವರು 'ಆಜ್ಞೆ'ಯಿತ್ತರೂ ಅದು 'ಕೇರ್' ಮಾಡಲಿಲ್ಲ. ಕೊನೆಗೆ ಒಬಾಮ ಹಿಂಸೆಯ ಹಾದಿ ತುಳಿದು 'ವೈರಿ ಸಂಹಾರ' ನಡೆಸಿದರು. ಕ್ಷಣಾರ್ಧದಲ್ಲಿ ನಡೆದ ಈ 'ಯುದ್ಧ'ವನ್ನು ಇಡಿಯಾಗಿ ಕ್ಯಾಮರಾಗಳು ಸೆರೆಹಿಡಿದವು. ನಂತರ ಸಂದರ್ಶಕರನ್ನು ಉದ್ದೇಶಿಸಿ ಒಬಾಮಾ 'ಈಗ ನಾವು ಯಾವ ಪ್ರಶ್ನೆಯಲ್ಲಿದ್ದೆವು? ಬಹಳಾ ಚೆನ್ನಾಗಿತ್ತಲ್ಲ. ನಾನು ನೊಣ ಹಿಡಿದೆ' ಎಂದರು.

2009: ಬೆಂಬಲಿಗರ ರಂಪಾಟ, ತೀವ್ರ ವಿರೋಧದ ನಡುವೆ ಮುಜರಾಯಿ ಮತ್ತು ವಸತಿ ಖಾತೆ ಸಚಿವ ಎಸ್.ಎನ್.ಕೃಷ್ಣಯ್ಯ ಶೆಟ್ಟಿ ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

2009: ಮುಂಬೈ ಸೂಚ್ಯಂಕ ವಹಿವಾಟಿನಲ್ಲಿ 435 ಅಂಶಗಳಷ್ಟು ಕುಸಿತ ಕಂಡಿತು. ಇದು ಈ ವರ್ಷದ ನಾಲ್ಕನೇ ಅತಿ ದೊಡ್ಡ ಕುಸಿತ. ಸದ್ಯದ ಆರ್ಥಿಕ ಬಿಕ್ಕಟ್ಟು ಸರಿಹೋಗಲು ದೀರ್ಘ ಸಮಯ ಬೇಕಾಗಬಹುದು ಎಂದು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರು ಹೇಳಿದ್ದು ಹೂಡಿಕೆದಾರರಲ್ಲಿ ಮತ್ತಷ್ಟು ಆತಂಕ ಸೃಷ್ಟಿಸಿ ಈ ಕುಸಿತಕ್ಕೆ ಕಾರಣವಾಯಿತು. ದಿನದ ಕೊನೆಯ ಅರ್ಧ ಗಂಟೆ ವಹಿವಾಟಿನಲ್ಲಿ ಒತ್ತಡಕ್ಕೆ ಒಳಗಾದ ಹೂಡಿಕೆದಾರರು ಲಾಭ ಮಾಡಿಕೊಳ್ಳಲು ಭಾರಿ ಪ್ರಮಾಣದಲ್ಲಿ ಷೇರುಗಳನ್ನು ಮಾರಾಟ ಮಾಡಿದರು. 435.07 ಅಂಶಗಳಷ್ಟು ಕುಸಿತ ಕಂಡು 14,522.84 ಅಂಶಗಳಿಗೆ ಸೂಚ್ಯಂಕ ಸ್ಥಿರಗೊಂಡಿತು.

2009: ನೀವು ಅಕಾಲ ನರೆ ಸಮಸ್ಯೆಗೆ ತುತ್ತಾಗಿದ್ದೀರಾ? ಅದಕ್ಕೆ ಕಾರಣ ಮಾನಸಿಕ ಒತ್ತಡ ಎಂದು ಸಂಶೋಧನೆಯೊಂದು ತಿಳಿಸಿತು. ತೀವ್ರ ಒತ್ತಡದಿಂದಾಗಿ ಡಿಎನ್‌ಎಗೆ ತೊಂದರೆಯಾಗಿ ಕೂದಲನ್ನು ಕಪ್ಪಗಿರಿಸುವ ಜೀವಕೋಶಗಳು ಉತ್ಪತ್ತಿಯಾಗುವುದಿಲ್ಲ. ಹೀಗಾಗಿ  ಒತ್ತಡದಿಂದ ದೂರವಿದ್ದಷ್ಟೂ ನರೆ  ಆವರಿಸುವುದಿಲ್ಲ ಎಂದು ಟೋಕಿಯೊ ವೈದ್ಯಕೀಯ ಮತ್ತು ದಂತವಿಜ್ಞಾನ ವಿಶ್ವವಿದ್ಯಾಲಯದ ಎಮಿ ನಿಶಿಮುರಾ ಪ್ರಕಟಿಸಿದರು. ಜೀವಕೋಶವೊಂದು ಪ್ರತಿ ದಿನ 1 ಲಕ್ಷಕ್ಕೂ ಹೆಚ್ಚು ಡಿಎನ್‌ಎ ನಾಶಕಗಳ ವಿರುದ್ಧ ಹೋರಾಡುತ್ತದೆ. ಇಂಥ ಜೀವಕೋಶಗಳು ನಾಶವಾದರೆ ಡಿಎನ್‌ಎ ಗುಣಮಟ್ಟ ಕೂಡ ಕುಸಿಯುತ್ತದೆ. ಹೆಚ್ಚಾಗಿ ಒತ್ತಡದಿಂದ ಡಿಎನ್‌ಎ ಶಕ್ತಿ ಕುಗ್ಗುತ್ತದೆ ಎಂದು ನಿಶೀಮೊರಾ ತಿಳಿಸಿದರು. ಈ ಸಂಶೋಧನೆಯ ವರದಿ ಸೆಲ್ ಜರ್ನಲ್‌ನಲ್ಲಿ ಪ್ರಕಟವಾಯಿತು.

2009: ವಿಖ್ಯಾತ ವಿಜ್ಞಾನಿ ಸ್ಟೀಫನ್ ಹಾಕಿಂಗ್ ಪ್ರತಿಪಾದಿಸಿದ 'ಹಾಕಿಂಗ್ ವಿಕಿರಣ'ಗಳು ವಾಸ್ತವವಾಗಿಯೂ ಅಸ್ತಿತ್ವದಲ್ಲಿವೆಯೇ ಎಂಬುದನ್ನು ಪತ್ತೆಹಚ್ಚಲು ನೆರವಾಗುವ 'ಕೃತಕ ಕಪ್ಪುಕುಳಿ'ಯನ್ನು ತಾವು ಸೃಷ್ಟಿಸಿರುವುದಾಗಿ ವಿಜ್ಞಾನಿಗಳು ಲಂಡನ್‌ನಲ್ಲಿ  ಪ್ರಕಟಿಸಿದರು. ಶೂನ್ಯಕ್ಕಿಂತ ಅತ್ಯಂತ ಕಡಿಮೆ ಮಟ್ಟಕ್ಕೆ ತಂಪು ಮಾಡಿದ ರುಬಿಡಿಯಮ್ ಪರಮಾಣುಗಳನ್ನು ಶಬ್ದಕ್ಕಿಂತ ಹೆಚ್ಚಿನ ವೇಗದಲ್ಲಿ ಕಾಂತಕ್ಷೇತ್ರದೆಡೆಗೆ ಸೆಳೆಯವ ಮೂಲಕ ಕೃತಕ ಕಪ್ಪುಕುಳಿಗಳನ್ನು ಸೃಷ್ಟಿಸಬಹುದು ಎಂದು ಟೆಕ್ನಿಯಾನ್- ಇಸ್ರೇಲ್ ತಾಂತ್ರಿಕ ಸಂಸ್ಥೆಯ ವಿಜ್ಞಾನಿಗಳು ಹೇಳಿದರು. ವಸ್ತುವಿನ ದ್ರವ್ಯರಾಶಿ ಅತ್ಯಧಿಕ ಮಟ್ಟಕ್ಕೆ ಸಂಚಯವಾಗಿ ಇಡೀ ದ್ರವ್ಯರಾಶಿ ಏಕೈಕ ಬಿಂದುವಿನಲ್ಲಿ ಸಾಂದ್ರವಾದಾಗ ಸೃಷ್ಟಿಯಾಗುವ ಕಪ್ಪು ಕುಳಿಗಳು ಕಾಲಕ್ರಮೇಣ ಅಗೋಚರವಾಗುವ ಗುಣಲಕ್ಷಣ ಹೊಂದಿವೆ ಎಂದು 30 ವರ್ಷಗಳ ಹಿಂದೆ ಹಾಕಿಂಗ್ ಸಿದ್ಧಾಂತ ಮಂಡಿಸಿದ್ದರು.

 2009: ಒಂದು ತಿಂಗಳಿನಿಂದ ತಮ್ಮ ದೇಶದಲ್ಲಿ ಭಾರತೀಯ ವಿದ್ಯಾರ್ಥಿಗಳ ಮೇಲೆ ನಡೆದ ದಾಳಿಗಳಿಗೆ ಜನಾಂಗೀಯ ದ್ವೇಷ ಕಾರಣ ಎಂಬುದನ್ನು ಭಾರತದಲ್ಲಿನ ಆಸ್ಟ್ರೇಲಿಯಾದ ರಾಯಭಾರಿ ಜಾನ್ ಮೆಕಾರ್ತಿ ಒಪ್ಪಿಕೊಂಡರು. ಇಂತಹ ಘಟನೆಗಳನ್ನು ಕೊನೆಗಾಣಿಸಿ ಭವಿಷ್ಯದಲ್ಲಿ ಅವು ಮರುಕಳಿಸದಂತೆ ಮಾಡಲು ಸರ್ಕಾರ ಎಲ್ಲಾ ಅಗತ್ಯ ಕ್ರಮಗಳನ್ನೂ ಕೈಗೊಂಡಿದೆ ಎಂದು ಅವರು ಹೇಳಿದರು.

2009: ವಿಧಾನಪರಿಷತ್ತಿನ ಪ್ರತಿಪಕ್ಷದ ನಾಯಕರಾಗಿದ್ದ ಹಿರಿಯ ಸಮಾಜವಾದಿ ಎಂ.ಪಿ.ಈಶ್ವರಪ್ಪ (81) ಈದಿನ ಹೃದಯಾಘಾತದಿಂದ ನಿಧನರಾದರು. ಕರ್ನಾಟಕ ಸೋಷಿಯಲಿಸ್ಟ್ ಪಕ್ಷದ ಸ್ಥಾಪಕರಲ್ಲಿ ಒಬ್ಬರಾಗಿದ್ದ  ಅವರು 1963ರಿಂದ 67ರವರೆಗೆ ಪರಿಷತ್ತಿನಲ್ಲಿ ವಿರೋಧ ಪಕ್ಷದ ನಾಯಕರಾಗಿದ್ದರು. ನಂತರ ಅವರು ಕಾಂಗ್ರೆಸ್ ಪಕ್ಷ ಸೇರಿದರು. ಅವರು ಕರ್ನಾಟಕ ಗೃಹ ಮಂಡಲಿಯ ಅಧ್ಯಕ್ಷರಾಗಿ, ಓಎನ್‌ಜಿಸಿ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು.

2009: ಕಂಪ್ಲಿಗೆ ಸಮೀಪದ ನಂ.10 ಮುದ್ದಾಪುರ ಗ್ರಾಮದ ಬಯಲಾಟ ನಿರ್ದೇಶಕರಾಗಿದ್ದ ಎಚ್. ಪಂಪಾಪತಿ ಮಾಸ್ತರ್ (65) ಹೃದಯಾಘಾತದಿಂದ ಮೃತರಾದರು. ಪಂಪಾಪತಿ ಇಲ್ಲಿಯವರೆಗೆ 150 ಬಯಲಾಟಗಳ ನಿರ್ದೇಶನ ಮಾಡಿದ್ದರು. ಜತೆಗೆ ಸಂಗೀತ ನಿರ್ದೇಶಕರಾಗಿಯೂ ಕೆಲಸ ನಿರ್ವಹಿಸಿದ್ದರು. 30 ಬಯಲಾಟಗಳಲ್ಲಿ ಸ್ವತಃ ಅಭಿನಯಿಸಿದ್ದಲ್ಲದೆ, 30ಕ್ಕೂ ಹೆಚ್ಚು ಬಯಲಾಟಗಳಲ್ಲಿ ಮಹಿಳಾ ಪಾತ್ರಗಳಲ್ಲಿ ಅಭಿನಯಿಸಿ ಈ ಭಾಗದಲ್ಲಿ ಎಲ್ಲಾ ಬಯಲಾಟಪ್ರಿಯರ ಮನಸೂರೆಗೊಂಡಿದ್ದರು.

2009: ಉದ್ದೀಪನಾ ಮದ್ದು ಸೇವಿಸಿದ್ದನ್ನು ಒಪ್ಪಿಕೊಂಡ ಸೈಕ್ಲಿಸ್ಟ್ ಟೇಲರ್ ಹ್ಯಾಮಿಲ್ಟನ್ ಮೇಲೆ ಅಮೆರಿಕಾದ ಉದ್ದೀಪನಾ ಮದ್ದು ತಡೆ ಘಟಕವು (ಯುಎಸ್‌ಎಡಿಎ) ಎಂಟು ವರ್ಷಗಳ ಅವಧಿಗೆ ನಿಷೇಧ ಹೇರಿತು. 38 ವರ್ಷ ವಯಸ್ಸಿನ ಹ್ಯಾಮಿಲ್ಟನ್ ಮದ್ದು ಸೇವಿಸಿ ಸ್ಪರ್ಧಿಸಿದ್ದಾಗಿ ಯುಎಸ್‌ಎಡಿಎ ಮುಂದೆ ತಪ್ಪೊಪ್ಪಿಕೊಂಡಿದ್ದರು. ಆದ್ದರಿಂದ ಅವರ ವಿರುದ್ಧ ಶಿಕ್ಷೆಯನ್ನು ಪ್ರಕಟಿಸಲಾಯಿತು. 8 ವರ್ಷಗಳ ನಿಷೇಧದಿಂದಾಗಿ ಹ್ಯಾಮಿಲ್ಟನ್ ಅವರ ಕ್ರೀಡಾ ಭವಿಷ್ಯವೇ ಕೊನೆಗೊಂಡಂತಾಯಿತು. 2004ರ ಒಲಿಂಪಿಕ್ ಕ್ರೀಡಾಕೂಟದಲ್ಲಿ ಸ್ವರ್ಣ ಗೆದ್ದಿದ್ದ ಹ್ಯಾಮಿಲ್ಟನ್ ಕಳೆದ ಏಪ್ರಿಲ್‌ನಲ್ಲಿಯೇ ತಾವು ಬಳಸುವ ಔಷಧಿಯಲ್ಲಿ ನಿಷೇಧಿತ ಮದ್ದಿನ ಅಂಶವಿದೆ ಎನ್ನುವುದನ್ನು ಪ್ರಕಟಿಸಿದ್ದರು.

2008: ವಿತರಣೆ ಚೀಟಿ ಪಡೆದರೂ ರಸಗೊಬ್ಬರ ನೀಡುತ್ತಿಲ್ಲ ಎಂದು ಆರೋಪಿಸಿ ದಾವಣಗೆರೆಯ ಗಾಂಧಿ ವೃತ್ತದಲ್ಲಿ  ರೈತರು ದಿಡೀರ್ ಪ್ರತಿಭಟನೆ ನಡೆಸಿದರು.

2007: ತೆರೆ ಕಂಡ ಮೊದಲ ದಿನವೇ 60 ಲಕ್ಷ ರೂಪಾಯಿ (5,60,00 ರಿಂಗೆಟ್ಸ್) ಸಂಗ್ರಹಿಸುವ ಮೂಲಕ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ `ಶಿವಾಜಿ' ಮಲೇಷ್ಯಾದಲ್ಲೂ ಹಿಂದಿನ ದಾಖಲೆ ಮುರಿದು ಹೊಸ ದಾಖಲೆ ಸೃಷ್ಟಿಸಿತು.

2007: ಬಾಲಿವುಡ್ ನಟಿ ಶಿಲ್ಪಾ ಶೆಟ್ಟಿ ಅವರನ್ನು ಎಚ್ಐವಿ/ಏಡ್ಸ್ ಬಗ್ಗೆ ಜಾಗೃತಿ ಉಂಟುಮಾಡಲು ಅವರು ನೀಡಿದ ಕೊಡುಗೆಯನ್ನು ಪರಿಗಣಿಸಿ `ಸಿಲ್ವರ್ ಸ್ಟಾರ್' ಪ್ರಶಸ್ತಿ ನೀಡಿ ಗೌರವಿಸಲಾಯಿತು. ಲಂಡನ್ನಿನ ಬ್ರಿಟನ್ ವಿದೇಶ ಮತ್ತು ಕಾಮನ್ವೆಲ್ತ್ ಕಚೇರಿಯ ದರ್ಬಾರ್ ಕೋರ್ಟಿನಲ್ಲಿ ಈದಿನ ರಾತ್ರಿ ನಡೆದ ಕಾರ್ಯಕ್ರಮದಲ್ಲಿ ಬ್ರಿಟನ್ ಸಂಸತ್ತಿನ ಕೆಳಮನೆನಾಯಕ ಜಾಕ್ ಸ್ಟ್ರಾ 31ರ ಹರೆಯದ ಶಿಲ್ಪಾ ಅವರಿಗೆ ಪ್ರಶಸ್ತಿ ಪ್ರದಾನ ಮಾಡಿದರು. ಲೇಬರ್ ಪಕ್ಷದ ಸಂಸದ ಕೀತ್ ವಾಜ್ ಅವರು ಚುನಾಯಿತಗೊಂಡ 20ನೇ ವರ್ಷಾಚರಣೆಯ ಪ್ರಯುಕ್ತ ಸಮಾರಂಭ ಏರ್ಪಡಿಸಲಾಗಿತ್ತು

2007: ಸ್ಕಾಟ್ಲೆಂಡಿನ 22 ವರ್ಷ ವಯಸ್ಸಿನ ಹವ್ಯಾಸಿ ಫುಟ್ಬಾಲ್ ಆಟಗಾರ ಅಲೆಕ್ಸ್ ಮೆಕ್ ಗ್ರೆಗೊರ್ ಅವರು ಪಂದ್ಯದ ಆರಂಭದ ಮೂರೇ ನಿಮಿಷದ ಅವಧಿಯಲ್ಲಿ `ಹ್ಯಾಟ್ರಿಕ್' ಸಾಧನೆ ಮಾಡಿ, ಗಿನ್ನೆಸ್ ವಿಶ್ವ ದಾಖಲೆಗೆ ಸೇರ್ಪಡೆಯಾದರು. ಲಂಡನ್ನಿನ ಫುಟ್ಬಾಲ್ ಲೀಗ್ ಪಂದ್ಯವೊಂದರಲ್ಲಿ ಕುಲ್ಲೆನ್ ಕ್ಲಬ್ ವಿರುದ್ಧ ಬಿಷಪ್ ಮಿಲ್ ವಿಲ್ಲಾ ಕ್ಲಬ್ ತಂಡದ ಪರವಾಗಿ ಆಡಿದ ಅಲೆಕ್ಸ್ ತೀರ ಕಡಿಮೆ ಅವಧಿಯಲ್ಲಿ ಮೂರು ಬಾರಿ ಚೆಂಡನ್ನು ಗುರಿ ಮುಟ್ಟಿಸಿ, ಗಮನ ಸೆಳೆದರು. ಶೌಚಾಲಯ ದುರಸ್ತಿ ಮಾಡುವ ಉದ್ಯೋಗಿಯಾದ ಅಲೆಕ್ಸ್ ಈ ಪಂದ್ಯದಲ್ಲಿ ಒಟ್ಟು ನಾಲ್ಕು ಗೋಲು ಗಳಿಸಿದರು. ವಿಜಯ ಸಾಧಿಸಿದ ಬಿಷಪ್ ಮಿಲ್ ಪರ ಹನ್ನೊಂದು ಗೋಲುಗಳು ದಾಖಲಾದವು. ಈ ಸಾಧನೆಯೊಂದಿಗೆ ಅಲೆಕ್ಸ್ ಹೆಸರು ಗಿನ್ನೆಸ್ ವಿಶ್ವ ದಾಖಲೆ ಪುಸ್ತಕ ಸೇರಿತು.

2007: ಮರಗಳನ್ನು ಸ್ಥಳಾಂತರಿಸುವ ಬೆಂಗಳೂರು ಮೆಟ್ರೊ ರೈಲು ನಿಗಮ (ಬಿಎಂಆರ್ಸಿಎಲ್)ದ ಯೋಜನೆ  ಯಶಸ್ಸಿನತ್ತ ಸಾಗುವ ಸಾಧ್ಯತೆ ಕಂಡುಬಂದಿತು. ಎಂ.ಜಿ.ರಸ್ತೆಯಿಂದ ಪಕ್ಕದ ಮಾಣಿಕ್ ಷಾ ಪೆರೇಡ್ ಮೈದಾನಕ್ಕೆ ಸ್ಥಳಾಂತರಗೊಳಿಸಲಾದ ಐದು ಮರಗಳಲ್ಲಿ ಮೂರರಲ್ಲಿ ಹೊಸ ಚಿಗುರು ಮೂಡಿದ್ದು ಬೆಳಕಿಗೆ ಬಂದಿತು. ಮರಗಳ ಸ್ಥಳಾಂತರ ಕಾರ್ಯ ಮೇ 28ರಿಂದ ಪ್ರಾರಂಭವಾಗಿತ್ತು. ಮೊದಲ ದಿನ ಸತತ ಆರು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಕ್ರೇನ್ಗಳ ಸಹಾಯದಿಂದ ತುಬುಯಿಯಾ ರೋಸಾ ಜಾತಿಯ ಒಂದು ಮರವನ್ನು ಸ್ಥಳಾಂತರ ಮಾಡಲಾಗಿತ್ತು. ಬಳಿಕ ಹಂತ ಹಂತವಾಗಿ ಎಂ.ಜಿ. ರಸ್ತೆಯಿಂದ ಈ ಮೈದಾನಕ್ಕೆ ಒಟ್ಟು ಐದು ಮರಗಳನ್ನು ಸ್ಥಳಾಂತರಿಸಲಾಗಿತ್ತು. ಚೆನ್ನೈನ `ಲ್ಯಾಂಡ್ ಸ್ಕೇಪ್ ಆರ್ಕಿಟೆಕ್ಟ್ಸ್' ಸಂಸ್ಥೆಯ ಸಿಬ್ಬಂದಿ ಈ ಕೆಲಸವನ್ನು ನಿರ್ವಹಿಸಿದ್ದರು. ಬೆಂಗಳೂರು ಪರಿಸರ ಸಂಘ ಮತ್ತು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗಳು ಮರಗಳನ್ನು ಸ್ಥಳಾಂತರಿಸುವ ಕಾರ್ಯಕ್ಕೆ ಸಹಭಾಗಿತ್ವ ನೀಡಿದ್ದವು.

2007: ಪುಣೆಯ ಗ್ರಾಮವೊಂದರಲ್ಲಿ ಇಕ್ಕಟ್ಟಾದ ಕೊಳವೆಬಾವಿಯೊಳಗೆ ಬಿದ್ದ ಶಿರೂರ್ ತಾಲ್ಲೂಕಿನ ವಡಗಾಂವ್ ರಸಾಯಿ ಗ್ರಾಮದ ಬಾಲಕ ಸೋನು ಶಿವಾಜಿ ದೇಶಮುಖ್ ಎಂಬ ಐದು ವರ್ಷದ ಬಾಲಕನನ್ನು ಮೇಲಕ್ಕೆ ಕರೆತರಲಾಯಿತು. ಆದರೆ ಆತ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದ. ಈತ 150 ಅಡಿ ಆಳದ ಕೊಳವೆಬಾವಿಯಲ್ಲಿ ಬಿದ್ದು, 20 ಅಡಿ ಅಂತರದಲ್ಲೇ ಸಿಕ್ಕಿಹಾಕಿಕೊಂಡ. ಏಳು ತಾಸುಗಳ ಹರಸಾಹಸದ ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನನ್ನು ರಕ್ಷಿಸಿ ಮೇಲಕ್ಕೆ  ಕರೆತಂದು ಆಸ್ಪತ್ರೆಗೆ ಸೇರಿಸಲಾಗಿತ್ತು.

2007: ಆಫ್ಘಾನಿಸ್ಥಾನದ ರಾಜಧಾನಿ ಕಾಬೂಲಿನಲ್ಲಿ ಸಂಭವಿಸಿದ ಮೂರು ಸ್ಫೋಟಗಳಲ್ಲಿ ಪೊಲೀಸರು ಸೇರಿ ಒಟ್ಟು 35 ಜನ ಬಲಿಯಾದರು. ಈ ಕೃತ್ಯಕ್ಕೆ ತಾನೇ ಕಾರಣ ಎಂದು ತಾಲಿಬಾನ್ ಉಗ್ರಗಾಮಿಗಳು ಘೋಷಿಸಿದರು.

 2006: ದುಬೈಯಲ್ಲಿ ನಡೆದ ಐಐಎಫ್ಐ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಂಜಯ ಲೀಲಾ ಬನ್ಸಾಲಿ ನಿರ್ದೇಶನದ ಹಿಂದಿ ಚಿತ್ರ `ಬ್ಲ್ಯಾಕ್' ಪ್ರಶಸ್ತಿಗಳನ್ನು ಕೊಳ್ಳೆ ಹೊಡೆಯಿತು. ಉತ್ತಮ ಚಿತ್ರ, ಉತ್ತಮ ನಿದರ್ೆಶಕ, ಉತ್ತಮ ನಟ (ಅಮಿತಾಭ್ ಬಚ್ಚನ್), ಉತ್ತಮ ನಟಿ (ರಾಣಿ ಮುಖರ್ಜಿ), ಉತ್ತಮ ಪೋಷಕ ನಟಿ (ಆಯೇಷಾ ಕಪೂರ್), ಉತ್ತಮ ಛಾಯಾಗ್ರಹಣ, ಉತ್ತಮ ಸಂಕಲನ, ಉತ್ತಮ ಧ್ವನಿ ಗ್ರಹಣ ಮತ್ತು ಉತ್ತಮ ಹಿನ್ನೆಲೆ ಸಂಗೀತ ಪ್ರಶಸ್ತಿಗಳು `ಬ್ಲ್ಯಾಕ್'ಗೆ ಲಭಿಸಿದವು.

2006: ಮರಾಠಿಯ ಹೆಸರಾಂತ ಸಂಗೀತಗಾರ ಸ್ನೇಹಲ್ ಭಾಟ್ಕರ್ ಮತ್ತು ಹಿಂದಿಯ ಪ್ರಸಿದ್ಧ ಹಿನ್ನೆಲೆ ಗಾಯಕ ಮನ್ನಾ ಡೇ ಅವರನ್ನು 2004-05ನೇ ಸಾಲಿನ ಪ್ರತಿಷ್ಠಿತ ಲತಾ ಮಂಗೇಶ್ಕರ್ ಪ್ರಶಸ್ತಿಗೆ ಮಹಾರಾಷ್ಟ್ರ ಸರ್ಕಾರವು ಆಯ್ಕೆ ಮಾಡಿತು.

1980: ಅಮೆರಿಕದ ಟೆನಿಸ್ ಆಟಗಾರ್ತಿ ವೀನಸ್ ವಿಲಿಯಮ್ಸ್ ಜನನ.

1973: ಭಾರತದ ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಜನ್ಮದಿನ. ಇವರು ಮಹೇಶ್ ಭೂಪತಿ ಅವರೊಂದಿಗೆ ಫ್ರೆಂಚ್ ಓಪನ್, ವಿಂಬಲ್ಡನ್ ಡಬಲ್ಸ್ ಪ್ರಶಸ್ತಿಗಳನ್ನು ಗೆದ್ದುಕೊಂಡವರು.

1972: ವಾಟರ್ ಗೇಟ್ ಕಟ್ಟಡದಲ್ಲಿದ್ದ ಡೆಮಾಕ್ರಟಿಕ್ ಪಾರ್ಟಿ ನ್ಯಾಷನಲ್ ಕಮಿಟಿಯ ಕೇಂದ್ರ ಕಚೇರಿಗೆ ನುಗ್ಗಿದ್ದಕ್ಕಾಗಿ ಐವರನ್ನು ವಾಷಿಂಗ್ಟನ್ ಪೊಲೀಸರು ಬಂಧಿಸಿದರು. ಈ ಪ್ರಕರಣ ಉಲ್ಬಣಿಸುತ್ತಾ ಹೋಗಿ `ವಾಟರ್ಗೇಟ್ ಹಗರಣ' ಎಂದೇ ಖ್ಯಾತಿ ಪಡೆಯಿತು. ಅಷ್ಟೇ ಅಲ್ಲ 1974ರಲ್ಲಿ ಅಮೆರಿಕದ ಅಧ್ಯಕ್ಷ ರಿಚರ್ಡ್ ನಿಕ್ಸನ್ ರಾಜೀನಾಮೆಯೊಂದಿಗೆ ಪರ್ಯವಸಾನಗೊಂಡಿತು.

1950: ಷಿಕಾಗೋದಲ್ಲಿ ಮೊದಲ ಬಾರಿಗೆ ಮೂತ್ರಪಿಂಡ ಕಸಿ ಚಿಕಿತ್ಸೆ.

1939: ವಿಚಾರವಾದಿ, ಚಿಂತಕ, ಸಾಹಿತಿ ಡಾ. ಜಿ. ರಾಮಕೃಷ್ಣ ಅವರು ಸುಬ್ರಹ್ಮಣ್ಯಂ- ನರಸಮ್ಮ ದಂಪತಿಯ ಪುತ್ರನಾಗಿ ಮಾಗಡಿ ಬಳಿಯ ಕೆಂಪಸಾಗರದಲ್ಲಿ ಜನಿಸಿದರು.

1933: ಭಾರತದಲ್ಲಿ ಅಸಹಕಾರ ಚಳವಳಿ ಮುಕ್ತಾಯ.

1929: ಟೈಗ್ರನ್ ವಿ. ಪೆಟ್ರೋಸಿಯನ್ (1924-84) ಜನ್ಮದಿನ. ಈ ಸೋವಿಯತ್ ಚೆಸ್ ಗ್ರ್ಯಾಂಡ್ ಮಾಸ್ಟರ್ 1963ರಲ್ಲಿ ಜಾಗತಿಕ ಚೆಸ್ ಚಾಂಪಿಯನ್ ಶಿಪ್ ಗೆದ್ದುಕೊಂಡರು. 1969ರಲ್ಲಿ ತನ್ನ ಜನ್ಮದಿನದಂದೇ ಬೋರಿಸ್ ಸ್ಪಾಸ್ಕಿ ಎದುರು ಸೋತು ವಿಶ್ವ ಚೆಸ್ ಚಾಂಪಿಯನ್ ಶಿಪ್ ಕಳೆದುಕೊಂಡರು.

1917: ಅಹಮದಾಬಾದಿನ ಸಬರಮತಿ ಆಶ್ರಮದ ಹೃದಯಕುಂಜದಲ್ಲಿ ಮಹಾತ್ಮ ಗಾಂಧಿ ಮತ್ತು ಕಸ್ತೂರಿಬಾ ವಾಸ ಆರಂಭ.

1867: ಗ್ಲಾಸ್ಗೋದಲ್ಲಿ ಜೋಸೆಫ್ ಲಿಸ್ಟರ್ ತನ್ನ ಸಹೋದರಿ ಇಸಬೆಲ್ಲಾಳಿಗೆ ಸೆಪ್ಟಿಕ್ (ನಂಜು) ನಿರೋಧಕ ನೀಡಿ ಮೊತ್ತ ಮೊದಲ ಶಸ್ತ್ರಚಿಕಿತ್ಸೆ ನಡೆಸಿದ.

1858: ಗ್ವಾಲಿಯರ್ ಸಮೀಪದ ಕೊತಾಹ್-ಕಿ-ಸರಾಯ್ ರಣಾಂಗಣದಲ್ಲಿ ಅಶ್ವದಳ ಸೈನಿಕನಂತೆ ವೇಷ ಧರಿಸಿ ಹೋರಾಡುತ್ತಿದ್ದ ಝಾನ್ಸಿ ರಾಣಿ ಲಕ್ಷ್ಮೀಬಾಯಿ ಬ್ರಿಟಿಷ್ ಸೈನಿಕ ಹುಸ್ಸಾರ್ನಿಂದ ಹತರಾದರು. ಹುಸ್ಸಾರ್ ಗೆ ತನ್ನಿಂದ ಹತಳಾದ ವ್ಯಕ್ತಿ ಯಾರೆಂದು ಗೊತ್ತಿರಲಿಲ್ಲ. ಆಕೆ ಲಕ್ಷ್ಮೀಬಾಯಿ ಎಂದು ಅರಿವಾಗುತ್ತಿದ್ದಂತೆಯೇ ಜನರಲ್ ಹ್ಯೂಗ್ ರೋಸ್ `ಇಲ್ಲಿ ಮಲಗಿರುವುದು ಬಂಡುಕೋರರ ನಡುವಿನ ಏಕೈಕ ಪುರುಷ' ಎಂದು ಹೇಳಿ ಆಕೆಗೆ ಗೌರವ ಸಲ್ಲಿಸಿದ.

1674: ಶಿವಾಜಿಯ ತಾಯಿ ಜೀಜಾಬಾಯಿ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Tuesday, June 22, 2010

ಇಂದಿನ ಇತಿಹಾಸ History Today ಜೂನ್ 16

ಇಂದಿನ ಇತಿಹಾಸ

ಜೂನ್ 16

ನಕಲಿ ಪಾಸ್‌ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಜಗತ್ತಿನ ಅಬು ಸಲೇಂ ವಿರುದ್ಧ ಭೋಪಾಲ್‌ನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು.

2009: ಪಾಕ್ ನೆಲದಿಂದ ಭಾರತದ ಮೇಲೆ ನಡೆಯುವ ಭಯೋತ್ಪಾದನಾ ಕೃತ್ಯಗಳಿಗೆ ತಡೆಯೊಡ್ಡುವಂತೆ ಪ್ರಧಾನಿ ಮನಮೋಹನ್‌ಸಿಂಗ್ ಆ ದೇಶದ ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ಅವರಿಗೆ ರಷ್ಯಾದ ಯೆಕಾಟರಿನ್‌ಬರ್ಗ್‌ನಲ್ಲಿ ಕಟುವಾಗಿ ಹೇಳಿದರು. ಶಾಂಘೈ ಸಹಕಾರ ಸಂಘಟನೆಯ ಶೃಂಗಸಭೆಯಲ್ಲಿ ಜರ್ದಾರಿ ಅವರೊಂದಿಗೆ 40 ನಿಮಿಷಗಳ ಕಾಲ ನಡೆದ ಮುಖಾಮುಖಿ ಮಾತುಕತೆಯಲ್ಲಿ ಪ್ರಧಾನಿ ಈ ಸಂದೇಶ ನೀಡಿದರು. ನವೆಂಬರ್ 26ರಂದು ಮುಂಬೈ ಮೇಲೆ ನಡೆದ ಭಯೋತ್ಪಾದನಾ ದಾಳಿಯ ನಂತರ ಇದೇ ಮೊದಲ ಬಾರಿ ನೆರೆಯ ದೇಶಗಳ ನಾಯಕರು ಮಾತುಕತೆ ನಡೆಸಿದ್ದರಿಂದ ಈ ಭೇಟಿ ಭಾರಿ ಮಹತ್ವ ಪಡೆಯಿತು.

2009: ನಕಲಿ ಪಾಸ್‌ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ಜಗತ್ತಿನ ಅಬು ಸಲೇಂ ವಿರುದ್ಧ ಭೋಪಾಲ್‌ನ ಚೀಫ್ ಜ್ಯುಡಿಷಿಯಲ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದಲ್ಲಿ ದೋಷಾರೋಪ ಪಟ್ಟಿ ಸಲ್ಲಿಸಲಾಯಿತು.

2009: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹೀನಾಯ ಸೋಲು ಅನುಭವಿಸಿದ ನಂತರ ತಮ್ಮನ್ನು ರಾಜ್ಯಸಭೆಯ ಪ್ರತಿಪಕ್ಷ ನಾಯಕರನ್ನಾಗಿ ನೇಮಿಸಿದ್ದರ ಕ್ರಮಬದ್ಧತೆಯನ್ನು ಹಲವು ಹಿರಿಯ ನಾಯಕರು ಪ್ರಶ್ನಿಸಿದ ಬೆನ್ನಲ್ಲೇ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ಅರುಣ್ ಜೇಟ್ಲಿ ರಾಜೀನಾಮೆ ಸಲ್ಲಿಸಿದರು. ತಮ್ಮನ್ನು ರಾಜ್ಯಸಭೆಯ ಪ್ರತಿಪಕ್ಷ ನಾಯಕರಾಗಿ ನೇಮಿಸಿರುವ ಹಿನ್ನೆಲೆಯಲ್ಲಿ 'ಒಬ್ಬರಿಗೆ ಒಂದು ಹುದ್ದೆ' ನಿಯಮದ ಅನ್ವಯ ಪಕ್ಷದ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುತ್ತಿರುವುದಾಗಿ ಜೇಟ್ಲಿ ಪತ್ರದಲ್ಲಿ ಸ್ಪಷ್ಟಪಡಿಸಿದರು.

2009: ರೈಲ್ವೆ ಖಾತೆ ರಾಜ್ಯ ಸಚಿವ ಕೆ.ಎಚ್.ಮುನಿಯಪ್ಪ ಅವರಿಗೆ ಕರ್ನಾಟಕದ ರೈಲ್ವೆ ಸುರಕ್ಷತೆ ಹಾಗೂ ಸುಭದ್ರತೆ ಜತೆಗೆ ಆಂಧ್ರ, ಗುಜರಾತ್, ರಾಜಸ್ತಾನ್, ಹಿಮಾಚಲ ಪ್ರದೇಶ, ಹರಿಯಾಣ ಹಾಗೂ ಮಧ್ಯ ಪ್ರದೇಶ ರೈಲ್ವೆ ಅಭಿವೃದ್ಧಿ ಹೊಣೆ ವಹಿಸಲಾಯಿತು. ರೈಲ್ವೆ ಸಚಿವೆ ಮಮತಾ ಬ್ಯಾನರ್ಜಿ, ಮುನಿಯಪ್ಪ ಹಾಗೂ ಮತ್ತೊಬ್ಬ ರಾಜ್ಯ ಸಚಿವ ಇ ಅಹಮದ್ ಅವರಿಗೆ ಹೊಣೆಗಾರಿಕೆ ಹಂಚಿಕೆ ಮಾಡಿ ಆದೇಶ ಹೊರಡಿಸಿದರು.

2009: ಪಶ್ಚಿಮ ಬಂಗಾಳದ ಇಟಾಬೆರಿಯಾದಲ್ಲಿನ ಸಿಪಿಎಂ ಪಕ್ಷದ ಕಚೇರಿಯಲ್ಲಿ ಶಸ್ತ್ರಾಸ್ತ್ರ ಹಾಗೂ ಸ್ಫೋಟಕಗಳನ್ನು ವಶಪಡಿಸಿಕೊಂಡ ಹಿನ್ನೆಲೆಯಲ್ಲಿ ಅಲ್ಲಿಗೆ ಬಂದ ಉದ್ರಿಕ್ತ ಜನ ಕಚೇರಿಯನ್ನು ಧ್ವಂಸಗೊಳಿಸಿದರು. ಪಕ್ಷದ ಕಚೇರಿಯ ಒಳಗಡೆ ಶಸ್ತ್ರಾಸ್ತ್ರಗಳನ್ನು ಇರಿಸಲಾಗಿದೆ ಎಂಬ ಸಾರ್ವಜನಿಕರ ಮಾಹಿತಿ ಆಧರಿಸಿ ತಪಾಸಣೆ ನಡೆಸಿದಾಗ ಶಸ್ತ್ರಾಸ್ತ್ರ, ಸ್ಫೋಟಕಗಳು ಪತ್ತೆಯಾಗಿದ್ದವು. ಮೂರು ಗನ್‌ಗಳು, ಬಾಂಬುಗಳಿದ್ದ  ಒಂದು ಪೆಟ್ಟಿಗೆ, 100 ಸುತ್ತು ಗುಂಡುಗಳು ಮತ್ತು ಒಂದು ಚೀಲದ ತುಂಬ ಬಾಂಬ್ ತಯಾರಿಸುವ ಸಾಧನಗಳು ತಪಾಸಣೆ ಕಾಲದಲ್ಲಿ ಸಿಕ್ಕಿದ್ದವು. ಪೋಲಿಸರು ಕಚೇರಿಯನ್ನು ಮೊಹರು ಮಾಡಿ ಅಲ್ಲಿಂದ ತೆರಳಿದ ಬಳಿಕ ಉದ್ರಿಕ್ತ ಜನರು ಕಟ್ಟಡವನ್ನು ಧ್ವಂಸಗೊಳಿಸಿದರು.

2009: ಮಂಗಳೂರು ಸಮೀಪ ಹೊಸ ಪ್ರಭೇದದ ಕಪ್ಪೆ ಪತ್ತೆಯಾಗಿದೆ ಎಂದು ಸೇಂಟ್ ಅಲೋಶಿಯಸ್ ಕಾಲೇಜಿನ ಪ್ರಾಣಿಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಹರೀಶ್ ಜೋಶಿ ಮತ್ತು ಸಹ ವಿಜ್ಞಾನಿಗಳು ಪ್ರಕಟಿಸಿದರು. ಕಪ್ಪೆ ಪತ್ತೆಯಲ್ಲಿ ಪ್ರಮುಖ ಪಾತ್ರ ವಹಿಸಿದ ಅಲೋಶಿಯಸ್ ಕಾಲೇಜಿಗೆ ಗೌರವ ಸೂಚಕವಾಗಿ ಈ ಪ್ರಭೇದಕ್ಕೆ 'ಯಪಿಕ್ಲ್ಟಿಸ್ ಅಲೋಸ್ಸಿ' ಎಂದು ಹೆಸರಿಡಲಾಯಿತು. ದೇಶದಲ್ಲಿ 260 ಪ್ರಭೇದದ ಕಪ್ಪೆಗಳಿವೆ. ಜೀವವೈವಿಧ್ಯ ದೃಷ್ಟಿಯಿಂದ ಸೂಕ್ಷ್ಮ ಪ್ರದೇಶ ಎನಿಸಿರುವ ಪಶ್ಚಿಮ ಘಟ್ಟ ಮತ್ತು ಬಯಲು ಪ್ರದೇಶದಲ್ಲೇ 140 ಪ್ರಭೇದ ಪತ್ತೆಯಾಗಿವೆ ಎಂದು ಹರೀಶ್ ಜೋಶಿ ತಿಳಿಸಿದರು. ಬಾಹ್ಯಗುಣ, ಜೀವಕೋಶದ ವಂಶವಾಹಿನಿ ಕಣ ಹಾಗೂ ನಿರ್ದಿಷ್ಟ ವಟರುಗುಟ್ಟುವ ಶಬ್ದಗಳ ಗುಣವಿಶೇಷ ಅಧ್ಯಯನದಿಂದ ಹೊಸ ಪ್ರಭೇದದ ಕಪ್ಪೆ ಗುರುತಿಸಲಾಗುತ್ತದೆ. ಈ ಕಪ್ಪೆಯ ಗುಣವಿಶೇಷ ವಿವರ ಒಳಗೊಂಡ ಪ್ರಬಂಧ ಪ್ಯಾರಿಸ್‌ನ 'ಎಲಿಟಸ್' ಅಂತರರಾಷ್ಟ್ರೀಯ ವಿಜ್ಞಾನ ಸಂಚಿಕೆಯಲ್ಲಿ ಪ್ರಕಟವಾಗಿದೆ ಎಂದು ವಿವರಿಸಿದರು. ಡಾ.ಜೋಶಿ ತಂಡ ಮತ್ತು ಜಪಾನಿನ ಫುಕುವಾಕೊ ವಿಶ್ವವಿದ್ಯಾಲಯದ ಪ್ರೊಫೆಸರ್ ಡಾ.ಕುರುಮೋಟೊ ಜಂಟಿ ಶೋಧನೆ ಹೊಸ ಪ್ರಭೇದದ ಕಪ್ಪೆ ಬೆಳಕಿಗೆ ತಂದಿತು.

2008: ಸಮುದ್ರದ ನೀರು ಹಾಗೂ ಸವಳು ನೀರನ್ನು ಕಡಿಮೆ ವೆಚ್ಚದಲ್ಲಿ ಕುಡಿಯುವ ನೀರನ್ನಾಗಿ ಪರಿವರ್ತಿಸುವ ಕುರಿತು ಕರ್ನಾಟಕ ವಿಶ್ವವಿದ್ಯಾಲಯದ ಭೌತ ರಸಾಯನ ಶಾಸ್ತ್ರದ ಪಾಲಿಮರ್ ವಿಜ್ಞಾನ ವಿಭಾಗದಿಂದ ಅಮೆರಿಕದ ಪೇಟೆಂಟಿಗೆ ಸಲ್ಲಿಸಿದ್ದ ಸಂಶೋಧನೆಗೆ ಜಾಗತಿಕ ಮಟ್ಟದಲ್ಲಿ ಮೊದಲನೇ ರ್ಯಾಂಕ್ ದೊರಕಿತು. ಜಗತ್ತಿನಲ್ಲಿಯೇ ಪೇಟೆಂಟ್ ರ್ಯಾಂಕಿಂಗಿನಲ್ಲಿ ಮೊದಲ ಸ್ಥಾನ ಪಡೆದ್ದದರಿಂದ ಕವಿವಿ ಮುಕುಟಕ್ಕೆ ಮತ್ತೊಂದು ಗರಿ ಇಟ್ಟಂತಾಯಿತು. ಇಡೀ ರಾಜ್ಯದ ಇತಿಹಾಸದಲ್ಲಿಯೇ ಕವಿವಿ ಪೇಟೆಂಟ್ ರ್ಯಾಂಕಿಂಗಿನಲ್ಲಿ ಮೊದಲನೇ ಸ್ಥಾನ ಪಡೆದದ್ದು ಇದೇ ಮೊದಲು.

2007: ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಹೊಸ ಇತಿಹಾಸ ನಿರ್ಮಿಸಿದರು. ಅಂತಾರಾಷ್ಟ್ರೀಯ ಬಾಹ್ಯಾಕಾಶ ಕೇಂದ್ರದಲ್ಲಿ ಅತಿಹೆಚ್ಚು ದಿನಗಳನ್ನು ಕಳೆದ ಮಹಿಳೆ ಎಂಬ ಗೌರವಕ್ಕೆ ಅವರು ಪಾತ್ರರಾದರು. ಭಾರತೀಯ ಕಾಲಮಾನ ಬೆಳಗ್ಗೆ 11.17ರ ವೇಳೆ ಸುನೀತಾ ಈ ದಾಖಲೆಗೆ ಭಾಜನರಾದರು. ಅಮೆರಿಕದ ಗಗನಯಾತ್ರಿ ಶಾನನ್ ಲುಸಿದ್ 1996ರಲ್ಲಿ ಬಾಹ್ಯಾಕಾಶ ಕೇಂದ್ರದಲ್ಲಿ 188 ದಿನ ಮತ್ತು 4 ಗಂಟೆಗಳನ್ನು ಕಳೆದದ್ದು ಈವರೆಗಿನ ದಾಖಲೆಯಾಗಿತ್ತು. ಸುನೀತಾ ಅದನ್ನು ಈದಿನ ಮುರಿದರು. 2006ರ ಡಿಸೆಂಬರ್ 10ರಿಂದ ಬಾಹ್ಯಾಕಾಶ ಕೇಂದ್ರವಾಸಿಯಾದ ಸುನೀತಾ ದಾಖಲೆ ಮಾಡುತ್ತಿರುವುದು ಇದೇ ಮೊದಲಲ್ಲ. ಈ ವರ್ಷದ ಆರಂಭದಲ್ಲಿ 29 ಗಂಟೆ ಮತ್ತು 17 ನಿಮಿಷಗಳ ಕಾಲ ಬಾಹ್ಯಾಕಾಶ ನಡಿಗೆ ಕೈಗೊಂಡು ನೂತನ ದಾಖಲೆ ಮಾಡಿದ್ದರು. ಈ ಗೌರವ ಗಗನಯಾತ್ರಿ ಕ್ಯಾಥರಿನ್ ತಾರ್ನ್ ಟನ್ ಅವರ ಹೆಸರಲ್ಲಿ ಇತ್ತು. ಬಾಹ್ಯಾಕಾಶ ಕೇಂದ್ರದಲ್ಲಿ ಇದ್ದುಕೊಂಡೇ ಮ್ಯಾರಥಾನ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಮೂಲಕ ಏಪ್ರಿಲ್ ತಿಂಗಳಲ್ಲಿ ಸುನೀತಾ ಮತ್ತೊಂದು ದಾಖಲೆ ಸ್ಥಾಪಿಸಿದ್ದರು.

2007: ಭಾರತೀಯ ಕ್ರಿಕೆಟ್ ಆಟಗಾರ ದೊಡ್ಡ ನರಸಯ್ಯ ಗಣೇಶ್ ಈದಿನ ಮುಸ್ಸಂಜೆ ಕ್ರಿಕೆಟ್ಟಿಗೆ ವಿದಾಯ ಹೇಳಿದರು. ನಾಲ್ಕು ಟೆಸ್ಟ್ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದ ಗಣೇಶ್ ಐದು ವಿಕೆಟ್ ಪಡೆದಿದ್ದರು. ಜಿಂಬಾಬ್ವೆ ವಿರುದ್ಧ ಆಡಿದ ಏಕೈಕ ಏಕದಿನ ಪಂದ್ಯದಲ್ಲಿ ಒಂದು ವಿಕೆಟ್ ಗಳಿಸಿದ್ದರು.  104 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ ಅವರು 29.42 ಸರಾಸರಿಯಲ್ಲಿ 365 ವಿಕೆಟ್ ಕಬಳಿಸಿದ್ದರು.

2007: ನೈಜೀರಿಯಾದ ಉಗ್ರಗಾಮಿಗಳು ತಾವು ಅಪಹರಿಸಿದ್ದ 10 ಮಂದಿ ಭಾರತೀಯರನ್ನು ಬಿಡುಗಡೆ ಮಾಡಿದ್ದಾರೆ ಎಂದು ಎಂದು ಭದ್ರತಾ ಮೂಲಗಳು ಪ್ರಕಟಿಸಿದವು. ಹದಿನೈದು ದಿನಗಳ ಹಿಂದೆ ಈ 10 ಮಂದಿಯನ್ನು ಅಪಹರಿಸಲಾಗಿತ್ತು.

2007: ಭಾರತೀಯ ಮೂಲದ ಬರಹಗಾರ ಸಲ್ಮಾನ್ ರಷ್ದಿ ಅವರನ್ನು ಇಂಗ್ಲೆಂಡಿನ ರಾಣಿ ಎರಡನೇ ಎಲಿಜಬೆತ್ ಅವರು ಪ್ರತಿಷ್ಠಿತ `ನೈಟ್ಹುಡ್' ಪದವಿಗೆ ಆಯ್ಕೆ ಮಾಡಿದರು. ಸಾಹಿತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಯನ್ನು ಪರಿಗಣಿಸಿ ಈ ಗೌರವ ನೀಡಲಾಯಿತು.

2007: ಮುಸ್ಲಿಂ ಪ್ರತ್ಯೇಕವಾದಿಗಳು ಮತ್ತು ಫಿಲಿಪ್ಪೀನ್ಸ್ ಸರ್ಕಾರದ ಮಧ್ಯೆ ಸಂಧಾನಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಿಲ್ವೆಸ್ಟರ್ ಅಘಬ್ಲೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಇದರಿಂದ ಶಾಂತಿ ಸ್ಥಾಪನೆಯ ಯತ್ನಕ್ಕೆ ಹಿನ್ನಡೆಯಾಯಿತು.

2006: ಭಾರತದ ಹೆಸರಾಂತ ಚಿತ್ರ ನಿರ್ದೇಶಕ ಅಡೂರು ಗೋಪಾಲಕೃಷ್ಣನ್ ಅವರಿಗೆ ಭಾರತೀಯ ಚಿತ್ರರಂಗಕ್ಕೆ ನೀಡಿದ ಕೊಡುಗೆಗಾಗಿ `ಪ್ರತಿಷ್ಠಿತ ಕ್ರಿಸ್ಟಲ್ ಪಿರಮಿಡ್' ಪ್ರಶಸ್ತಿ ಲಭಿಸಿತು. ದಕ್ಷಿಣ ಏಷ್ಯ ಸಿನೆಮಾ ಪ್ರತಿಷ್ಠಾನವು ಸ್ಥಾಪಿಸಿರುವ ಈ ಪ್ರಶಸ್ತಿಯನ್ನು ಲಂಡನ್ನಿನ ನೆಹರೂ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಭಾರತೀಯ ಹೈಕಮೀಷನರ್ ಕಮಲೇಶ ಶರ್ಮಾ ಪ್ರದಾನ ಮಾಡಿದರು.

2006: ಇಂಧನ ಕ್ಷೇತ್ರದ ಬ್ರಿಟನ್ನಿನ ಮುಂಚೂಣಿ ಸಂಸ್ಥೆ ಪವರ್ ಜೆನ್ ಭಾರತದಲ್ಲಿರುವ ತನ್ನ ಎಲ್ಲ ಕಾಲ್ ಸೆಂಟರುಗಳನ್ನು ಮುಚ್ಚಲು ನಿರ್ಧರಿಸಿತು. ಹೊರಗುತ್ತಿಗೆಯಿಂದ ಗ್ರಾಹಕರಿಗೆ ಕಿರಿಕಿರಿ ಆಗುತ್ತಿರುವ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗುತ್ತಿದ್ದು ಇನ್ನು ಮುಂದೆ ಸಂಸ್ಥೆಯ ಎಲ್ಲ 60 ಲಕ್ಷ ಗ್ರಾಹಕರಿಗೂ ಬ್ರಿಟನ್ನಿನಲ್ಲೇ ಉತ್ತರಿಸಲು ವ್ಯವಸ್ಥೆ ಮಾಡಲಾಗುವುದು ಎಂದು ಸಂಸ್ಥೆ ಪ್ರಕಟಿಸಿತು.

2006: ಭಾರಿ ವಾದ ವಿವಾದಕ್ಕೆ ಕಾರಣವಾದ ಬೆಂಗಳೂರು- ಮೈಸೂರು ಇನ್ ಫ್ರಾಸ್ಟ್ರಕ್ಚರ್ ಕಾರಿಡಾರ್ ಯೋಜನೆಯ (ಬಿಎಂಐಸಿ) ಭಾಗವಾದ ಕೆಂಗೇರಿ- ತಲಘಟ್ಟಪುರಕ್ಕೆ ಸಂಪರ್ಕ ಕಲ್ಪಿಸುವ ಹೊರ ವರ್ತುಲ ರಸ್ತೆ (ಫರಿಫೆರಲ್ ರಸ್ತೆ) ಸರ್ಕಾರದ ವಿರೋಧದ ಮಧ್ಯೆಯೇ ಈದಿನ ಸಾರ್ವಜನಿಕರ ಸೇವೆಗೆ ಮುಕ್ತವಾಯಿತು. 9 ಕಿ.ಮೀ. ಉದ್ದದ ಈ ರಸ್ತೆಯನ್ನು 58 ಪುಟಾಣಿಗಳು ಟೇಪು ಕತ್ತರಿಸಿ ಉದ್ಘಾಟಿಸಿದರು. 98 ವರ್ಷದ ರಾಮಕ್ಕ ಜ್ಯೋತಿ ಬೆಳಗಿ ಕಾರ್ಯಕಮಕ್ಕೆ ಚಾಲನೆ ನೀಡಿದರು.

2006: ವಿಶ್ವದ ಅತ್ಯಂತ ಕಿರಿಯ ಕಾರ್ಯ ನಿರ್ವಹಣಾ ಅಧಿಕಾರಿ (ಸಿಇಓ) ಸುಹಾಸ ಗೋಪಿನಾಥ ಅವರು ತಮ್ಮ `ಗ್ಲೋಬಲ್ ಇಂಕ್' ಕಂಪೆನಿಯ ಕೇಂದ್ರ ಕಚೇರಿಯನ್ನು ಕ್ಯಾಲಿಫೋರ್ನಿಯಾದಿಂದ ತಮ್ಮ ತಾಯ್ನೆಲವಾದ ಬೆಂಗಳೂರಿಗೆ ಸ್ಥಳಾಂತರಿಸುವುದಾಗಿ ಬೆಂಗಳೂರಿನಲ್ಲಿ ಈದಿನ ಪ್ರಕಟಿಸಿದರು. ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರು ಕಚೇರಿಗೆ ಸ್ಥಳಾವಕಾಶ ಒದಗಿಸುವುದಾಗಿ ಭೇಟಿ ಕಾಲದಲ್ಲಿ ಭರವಸೆ ಕೊಟ್ಟದ್ದನ್ನು ಅನುಸರಿಸಿ ಗೋಪಿನಾಥ ಈ ನಿರ್ಧಾರ ಕೈಗೊಂಡರು. ಭಾರತದಲ್ಲಿ 18 ವರ್ಷವಾಗದ ವಿನಃ ಕಂಪೆನಿ ಆರಂಭಿಸಲು ಸಾಧ್ಯವಿಲ್ಲವಾದ ಕಾರಣ 2000 ದಲ್ಲಿ, 14ನೇ ವಯಸ್ಸಿನಲ್ಲಿ ಗೋಪಿನಾಥ ಅವರು ಕ್ಯಾಲಿಫೋರ್ನಿಯಾದಲ್ಲಿ ತಮ್ಮ `ಗ್ಲೋಬಲ್ ಇಂಕ್' ನ್ನು ಸ್ಥಾಪಿಸಿದ್ದರು. ಪ್ರಸ್ತುತ 13 ರಾಷ್ಟ್ರಗಳಲ್ಲಿ ತನ್ನ ಶಾಖೆಗಳನ್ನು ಹೊಂದಿರುವ ಈ ಕಂಪೆನಿಯಲ್ಲಿ 2006ರ ವೇಳೆಗೆ 600ಕ್ಕೂ ಹೆಚ್ಚು ಜನ ದುಡಿಯುತ್ತಿದ್ದರು.

1990: ಮುಂಬೈಯಲ್ಲಿ 42 ಸೆಂ.ಮೀ. ದಾಖಲೆ ಮಳೆ. 1986ರಲ್ಲಿ 41 ಸೆಂ.ಮೀ. ಮಳೆ ಒಂದೇ ದಿನ ಸುರಿದಿತ್ತು.

1977: ಲಿಯೋನಿದ್ ಬ್ರೆಜ್ನೇವ್ ಯುಎಸ್ಎಸ್ಆರ್ (ಸೋವಿಯತ್ ಒಕ್ಕೂಟ) ಅಧ್ಯಕ್ಷರಾದರು.

1974: ಸಾಹಿತಿ ಗವಿಸಿದ್ದ ಎನ್. ಬಳ್ಳಾರಿ ಜನನ.

1963: ಸೋವಿಯತ್ ಗಗನಯಾನಿ  ವಾಲೆಂಟಿನಾ ತೆರೆಸ್ಕೋವಾ ಬಾಹ್ಯಾಕಾಶಕ್ಕೆ ತೆರಳಿದ ಮೊತ್ತ ಮೊದಲ ಮಹಿಳೆಯಾದರು. ಬಾಹ್ಯಾಕಾಶ ನೌಕೆ ವೊಸ್ತೋಕ್ 6 ಮೂಲಕ ಅವರು ಬಾಹ್ಯಾಕಾಶಕ್ಕೆ ಏರಿದರು.

1961: ಸೋವಿಯತ್ ಬ್ಯಾಲೆ ನೃತ್ಯಪಟು ರುಡೋಲ್ಫ್ ನ್ಯೂರೆಯೆವ್ ತಮ್ಮ ತಂಡವು ಪ್ಯಾರಿಸ್ಸಿನಲ್ಲಿ ಇದ್ದಾಗ ಪಶ್ಚಿಮಕ್ಕೆ ರಾಷ್ಟ್ರಾಂತರ ಮಾಡಿದರು.

1950: ಹಿಂದಿ ಚಿತ್ರನಟ ಮಿಥುನ್ ಚಕ್ರವರ್ತಿ ಜನನ.

1946: ಮಧ್ಯಂತರ ಸರ್ಕಾರ ರಚನೆಗೆ ಭಾರತೀಯ ನಾಯಕರನ್ನು ಬ್ರಿಟನ್ ಲಂಡನ್ನಿಗೆ ಆಹ್ವಾನಿಸಿತು.

1942: ರಂಗಭೂಮಿ, ಟಿವಿ, ಸಿನಿಮಾ ಕ್ಷೇತ್ರಗಳಲ್ಲಿ ಉತ್ತಮ ಕಲಾವಿದರೆಂದು ಹೆಸರು ಪಡೆದ ಸಿ.ಆರ್. ಸಿಂಹ ಅವರು ರಾಮಸ್ವಾಮಿ ಶಾಸ್ತ್ರಿ- ಲಲಿತಮ್ಮ ದಂಪತಿಯ ಮಗನಾಗಿ ಚನ್ನಪಟ್ಟಣದಲ್ಲಿ ಜನಿಸಿದರು.

1931: ಕಲಾವಿದ ಎಸ್. ವೆಂಕಟಸ್ವಾಮಿ ಜನನ.

1925: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮಾಜಿ ಅಧ್ಯಕ್ಷ, ಬಂಗಾಳದಲ್ಲಿ ಬ್ರಿಟಿಷರ ವಿರುದ್ಧ ಕಟ್ಟಲಾದ ಸ್ವರಾಜ್ (ಸ್ವತಂತ್ರ) ಪಕ್ಷದ ಧುರೀಣರೂ ಆಗಿದ್ದ ವಕೀಲ ಚಿತ್ತರಂಜನ್ ದಾಸ್ ಅವರು ಡಾರ್ಜಿಲಿಂಗಿನಲ್ಲಿ ತಮ್ಮ 54ನೇ ವಯಸ್ಸಿನಲ್ಲಿ ಮೃತರಾದರು.

1924: ಸಾಹಿತಿ ಬಿ. ವಿರೂಪಾಕ್ಷಪ್ಪ ಜನನ.

1924: ಕಲಾವಿದ ಕಲಾವಿದ ಎಂ.ಎಸ್. ಚಂದ್ರಶೇಖರ್ ಜನನ.

1920: ಖ್ಯಾತ ಗಾಯಕ ಹೇಮಂತ್ ಚೌಧರಿ ಜನನ.

1917: ಅಮೆರಿಕದ ಪ್ರಸಿದ್ಧ ಪತ್ರಿಕೆ `ವಾಷಿಂಗ್ಟನ್ ಪೋಸ್ಟ್' ನ ಪ್ರಕಾಶಕಿ ಮತ್ತು ಅಮೆರಿಕದ 20ನೇ ಶತಮಾನದ ಪ್ರಭಾವಿ ಮಹಿಳೆ ಕ್ಯಾಥರಿನ್ ಗ್ರಾಹಂ ಈ ದಿನ ಜನಿಸಿದರು. ರಿಚರ್ಡ್ ನಿಕ್ಸನ್ ಅವರು ಅಮೆರಿಕದ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿಯುವಂತೆ ಮಾಡುವಲ್ಲಿ ಇವರು ಮಹತ್ವದ ಪಾತ್ರ ವಹಿಸಿದ್ದರು. ಎರಡು ದಶಕಗಳ ಕಾಲ ಅಮೆರಿಕದ ಪತ್ರಿಕೋದ್ಯಮ ಇತಿಹಾಸದಲ್ಲಿ ಮಹತ್ವದ ಬದಲಾವಣೆಗಳಿಗೆ ವಾಷಿಂಗ್ಟನ್ ಪೋಸ್ಟ್ ಕಾರಣವಾಯಿತು.

1903: ಡೆಟ್ರಾಯಿಟ್ ಹೂಡಿಕೆದಾರರು ಫೋರ್ಡ್ ಕಂಪೆನಿಯನ್ನು ಕಟ್ಟಿದರು. ಈ ಸಂಸ್ಥೆಯ ಉಪಾಧ್ಯಕ್ಷರೂ, ಮುಖ್ಯ ಎಂಜಿನಿಯರರೂ ಆಗಿದ್ದ ಹೆನ್ರಿ ಫೋರ್ಡ್ ಕಂಪೆನಿಯಲ್ಲಿ ಶೇಕಡಾ 25 ಷೇರುಗಳನ್ನು ಹೊಂದಿದ್ದರು.

1900: ಖ್ಯಾತ ಸಾಹಿತಿ ಅಕ್ಕಿಹೆಬ್ಬಾಳು ನರಸಿಂಹ ಮೂರ್ತಿ ರಾವ್ (ಎ.ಎನ್. ಮೂರ್ತಿರಾವ್) (16-6-1900ರಿಂದ 23-8-2003) ಅವರು ಸುಬ್ಬರಾವ್- ಪುಟ್ಟಮ್ಮ ದಂಪತಿಯ ಮಗನಾಗಿ ಅಕ್ಕಿ ಹೆಬ್ಬಾಳಿನಲ್ಲಿ ಜನಿಸಿದರು.

1890: ಸ್ಟಾನ್ ಲಾರೆಲ್ ಎಂದೇ ಖ್ಯಾತರಾದ ಆರ್ಥರ್ ಸ್ಟ್ಯಾನ್ಲಿ ಜೆಫರ್ ಸನ್ (1890-1965) ಜನ್ಮದಿನ. ಒಲಿವರ್ ಹಾರ್ಡಿ ಅವರ ಪಾಲುದಾರಿಕೆಯೊಂದಿಗೆ ಮೊತ್ತ ಮೊದಲ ಹಾಲಿವುಡ್ ಚಲನಚಿತ್ರ ಹಾಸ್ಯ ತಂಡವನ್ನು ಇವರು ಕಟ್ಟಿದರು.

1873: ಲೇಡಿ ಒಟ್ಟೋಲಿನ್ ಮೊರ್ರೆಲ್(1873-1950) ಜನ್ಮದಿನ. ಕಲೆಗಳ ಪೋಷಕಿಯಾಗಿದ್ದ ಈಕೆ ತನ್ನ ಸಮಕಾಲೀನರಾದ ಹಲವಾರು ಬರಹಗಾರರು ಮತ್ತು ಕಲಾವಿದರನ್ನು ಒಟ್ಟುಗೂಡಿಸಿದವರು. ಆಕೆ ಹೀಗೆ ಒಟ್ಟುಗೂಡಿಸಿದವರಲ್ಲಿ ಡಿ.ಎಚ್. ಲಾರೆನ್ಸ್, ವರ್ಜೀನಿಯಾ ವೂಲ್ಫ್, ಆಲ್ಡವಸ್ ಹಕ್ಸ್ಲೆ, ಬರ್ಟ್ರೆಂಡ್ ರಸೆಲ್ ಮತ್ತಿತರರು ಸೇರಿದ್ದಾರೆ.

1605: ಮೊಘಲ್ ದೊರೆ ಅಕ್ಬರ್ ನಿಧನ.

 (ಸಂಗ್ರಹ: ನೆತ್ರಕೆರೆ ಉದಯಶಂಕರ)

Monday, June 21, 2010

ಇಂದಿನ ಇತಿಹಾಸ History Today ಜೂನ್ 15

ಇಂದಿನ ಇತಿಹಾಸ

ಜೂನ್ 15
ಮುಂಬೈ ದಾಳಿಯಲ್ಲಿ ಸೆರೆಸಿಕ್ಕಿದ ಏಕೈಕ ಉಗ್ರ ಮೊಹ್ಮಮದ್ ಅಜ್ಮಲ್ ಕಸಾಬ್‌ನನ್ನು ಮುಂಬೈಯ ಪತ್ರಿಕೆಯೊಂದರ ಛಾಯಾಗ್ರಾಹಕ ಸೆಬಾಸ್ಟಿಯನ್ ಡಿಸೋಜ ಅವರು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಗುರುತಿಸಿದರು.

2009: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ವಿರುದ್ಧ ಹಲವು ಸಲ ಬಹಿರಂಗ ಹೇಳಿಕೆ ನೀಡಿ ಮುಜುಗರ ಉಂಟು ಮಾಡಿದ್ದ ಕೋಲಾರ ಕ್ಷೇತ್ರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಅವರನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಅಧ್ಯಕ್ಷ ಸ್ಥಾನದಿಂದ ಹಾಗೂ ಚಿತ್ರನಟಿ ಶ್ರುತಿ ಅವರನ್ನು ರಾಜ್ಯ ಮಹಿಳಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಸ್ಥಾನದಿಂದ ಕೈ ಬಿಡಲಾಯಿತು. ಶ್ರುತಿ ಅವರ ಸ್ಥಾನಕ್ಕೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಕಾರ್ಯದರ್ಶಿ ಡಾ.ಡಿ.ಎಸ್.ಅಶ್ವತ್ಥ್ ಅವರನ್ನು ನೇಮಿಸಲಾಯಿತು. ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ದವೆ ಅವರಿಗೆ ಹೆಚ್ಚುವರಿಯಾಗಿ ಅಧ್ಯಕ್ಷ ಸ್ಥಾನ ಕೂಡ ನೀಡಲಾಯಿತು. ತಮ್ಮ ಪತಿ, ಚಿತ್ರ ನಿರ್ದೇಶಕ ಮಹೇಂದರ್ ಅವರಿಂದ ಶ್ರುತಿ ವಿವಾಹ ವಿಚ್ಛೇದನ ಪಡೆಯಲು ಕೋರ್ಟ್ ಮೆಟ್ಟಿಲು ಹತ್ತಿದ ಹಿನ್ನೆಲೆಯಲ್ಲಿ ಅವರನ್ನು ನಿಗಮದ ಅಧ್ಯಕ್ಷ ಸ್ಥಾನದಿಂದ ಕೈಬಿಡಲಾಯಿತು.

2009: ಮುಂಬೈ ದಾಳಿಯಲ್ಲಿ ಸೆರೆಸಿಕ್ಕಿದ ಏಕೈಕ ಉಗ್ರ ಮೊಹ್ಮಮದ್ ಅಜ್ಮಲ್ ಕಸಾಬ್‌ನನ್ನು ಮುಂಬೈಯ ಪತ್ರಿಕೆಯೊಂದರ ಛಾಯಾಗ್ರಾಹಕ ಸೆಬಾಸ್ಟಿಯನ್ ಡಿಸೋಜ ಅವರು ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ವೇಳೆ ಗುರುತಿಸಿದರು. ನವೆಂಬರ್ 26ರ ರಾತ್ರಿ ನಡೆದ ದಾಳಿ ಸಮಯದಲ್ಲಿ ಬಂದೂಕು ಹಿಡಿದು ಉಗ್ರರು ಜನರತ್ತ ಮನಬಂದಂತೆ ಗುಂಡಿನ ಮಳೆಗರೆದಿದ್ದ ದೃಶ್ಯಗಳನ್ನು ಸೆರೆಹಿಡಿದ ನೂರಕ್ಕೂ ಹೆಚ್ಚು ಛಾಯಾಚಿತ್ರಗಳನ್ನೂ ನ್ಯಾಯಾಲಯದ ಮುಂದೆ  ಅವರು ಹಾಜರುಪಡಿಸಿದರು. ಇವರು ಕೇವಲ ಪ್ರತ್ಯಕ್ಷ ಸಾಕ್ಷಿ ಮಾತ್ರವಲ್ಲದೇ, ಉಗ್ರರ ದಾಳಿಯ ದೃಶ್ಯಗಳನ್ನು ಸೆರೆಹಿಡಿದು ದಾಖಲೆ ಸಹಿತ ಪುರಾವೆಗಳನ್ನು ಒದಗಿಸಿದ ಮೊದಲ ಸಾಕ್ಷಿ ಕೂಡಾ. ಹೀಗಾಗಿ ಇವರ ಹೇಳಿಕೆ ಹಾಗೂ ಛಾಯಾಚಿತ್ರಗಳನ್ನು ಮಹತ್ವದ್ದು ಎಂದು ಪರಿಗಣಿಸಲಾಯಿತು.

2009: ಆಸ್ಟ್ರೇಲಿಯಾದಲ್ಲಿ ಓದುತ್ತಿರುವ ಭಾರತೀಯ ವಿದ್ಯಾರ್ಥಿಗಳ ಮೇಲಿನ ಹಲ್ಲೆಮುಂದುವರೆಯಿತು. ಮೆಲ್ಬರ್ನ್ ಪೂರ್ವದಲ್ಲಿನ ಉಪನಗರದಲ್ಲಿ ಮತ್ತೊಬ್ಬ ಭಾರತೀಯ ವಿದ್ಯಾರ್ಥಿ, 20ರ ಹರೆಯದ, ದೆಹಲಿ ಮೂಲದ ಸನ್ನಿ ಬಜಾಜ್ ಮೇಲೆ ಹಲ್ಲೆ ನಡೆಯಿತು. ಈತ ರಾತ್ರಿ ಬರೊನಿಯಾದಲ್ಲಿ ತನ್ನ ಕಾರೊಳಗೆ ಕುಳಿತುಕೊಳ್ಳುತ್ತಿದ್ದಾಗ ದುಷ್ಕರ್ಮಿಗಳಿಬ್ಬರು ಈತನನ್ನು ವಾಚಾಮಗೋಚರವಾಗಿ ಬೈದು ಮುಷ್ಟಿಯಿಂದ ಗುದ್ದಿದರು ಎಂದು 'ದಿ ಏಜ್' ಪತ್ರಿಕೆ ವರದಿ ಮಾಡಿತು.

2009: ಹಂದಿಜ್ವರ ಹಾಗೂ ಅದರ ವೈರಾಣು ಮೆಕ್ಸಿಕೊದಲ್ಲಿ ಪತ್ತೆಯಾಗುವ ಹಲವು ತಿಂಗಳ ಮೊದಲೇ ಮನುಷ್ಯರಲ್ಲಿ ಗುಪ್ತವಾಗಿ ಹಬ್ಬಿತ್ತು. ಅದಕ್ಕೂ ಹಲವು ವರ್ಷಗಳ ಮೊದಲೇ ಈ ವೈರಸ್ ಹಂದಿಗಳಲ್ಲಿ ಜೀವ ತಳೆದಿತ್ತು ಎಂದು ಬ್ರಿಟನ್ನಿನ ಸಂಶೋಧಕರು ಅಭಿಪ್ರಾಯ ಪಟ್ಟರು. ಆಕ್ಸ್‌ಫರ್ಡ್ ವಿವಿಯ ವಿಜ್ಞಾನಿಗಳ ತಂಡ ಸಂಶೋಧನೆ ಕೈಗೊಂಡು ಈ ಅಂಶ ಬಹಿರಂಗಪಡಿಸಿತು. ವಿಜ್ಞಾನಿಗಳ ಪ್ರಕಾರ ಹಂದಿಗಳಲ್ಲಿ ವಿವಿಧ ಸೋಂಕುಗಳಿಗೆ ಕಾರಣವಾಗುವ ಹಲವು ಬಗೆಯ ವೈರಸ್‌ಗಳು ಸೇರಿಕೊಂಡು ಈ ಹೊಸ ವೈರಸ್ ಹಲವು ವರ್ಷಗಳ ಹಿಂದೆಯೇ ಜೀವ ತಳೆದಿತ್ತು. ಹಂದಿಗಳ ಮೂಲಕ ವಿವಿಧ ಖಂಡಗಳಿಗೂ ಪ್ರಸಾರವಾಗಿತ್ತು.

2009: ಸೇನೆಯಲ್ಲಿ ಸೇವೆ ಸಲ್ಲಿಸಲು ತಮ್ಮ ಪೇಟ ಮತ್ತು  ಗಡ್ಡ ತೆಗೆಯಬೇಕು ಎಂಬುದಾಗಿ  ಅಮೆರಿಕದ ಸೇನೆಯಲ್ಲಿರುವ ಮೂರು ದಶಕಗಳಷ್ಟು ಹಳೆಯದಾದ ನಿಯಮವನ್ನು ಇಬ್ಬರು ಸಿಖ್ ಸೇನಾ ಅಧಿಕಾರಿಗಳು ಪ್ರಶ್ನಿಸಿದರು. ತಮ್ಮ ಕುಟುಂಬದಲ್ಲಿ  ನಾಲ್ಕನೇ ತಲೆಮಾರಿನ ವ್ಯಕ್ತಿಯಾಗಿ  ಸೇನೆಯಲ್ಲಿ ಸೇವೆ ಸಲ್ಲಿಸುವ ನಿರೀಕ್ಷೆಯಲ್ಲಿರುವ  ಕ್ಯಾಪ್ಟನ್ ಕಮಲಜಿತ್ ಕಲ್ಸಿ ಮತ್ತು ಇನ್ನೊಬ್ಬ ಸಿಖ್ ಕ್ಯಾಪ್ಟನ್ ತೇಜ್‌ದೀಪ್ ಸಿಂಗ್ ರತ್ತನ್ ಅವರು ಧಾರ್ಮಿಕ ವಸ್ತುಗಳ ಉಡುಗೆ ತೊಡುಗೆಗೆ ಸಂಬಂಧಿಸಿದ ನಿಯಮಗಳು ಬದಲಾಗಬೇಕು ಎಂದು ಕೋರಿದರು.

2008: ಉಡುಪಿಯ ಬಿಜೆಪಿ ಶಾಸಕ ಬಿ.ರಘುಪತಿಭಟ್ ಅವರ ಪತ್ನಿ ಪದ್ಮಪ್ರಿಯಾ (35) ಅವರ ಮೃತದೇಹ ನವದೆಹಲಿಯ ಅಪಾರ್ಟ್ ಮೆಂಟೊಂದರಲ್ಲಿ ಪತ್ತೆಯಾಯಿತು. ಸುಳಿವು ಆಧರಿಸಿ ನವದೆಹಲಿಯ ದ್ವಾರಕಾನಗರದ ಶಮಾ ಅಪಾರ್ಟ್ ಮೆಂಟಿನ 20 ನೇ ನಂಬರ್ ಕೊಠಡಿಗೆ ಕರ್ನಾಟಕದ ಪೊಲೀಸರು ತೆರಳಿ ಸ್ಥಳೀಯ ಪೊಲೀಸರ ನೆರವು ಪಡೆದು  ಬಾಗಿಲು ಮುರಿದು ಒಳಗೆ ನುಗ್ಗಿದಾಗ ಪದ್ಮಪ್ರಿಯಾ ದೇಹ ನೇಣು ಹಾಕಿಕೊಂಡಿರುವ ಸ್ಥಿತಿಯಲ್ಲಿ  ಪತ್ತೆಯಾಯಿತು. ಐದು ದಿನಗಳಿಂದ ಆಕೆ ನಾಪತ್ತೆಯಾಗಿದ್ದರು.

2007: ಕನ್ನಡ ಚಲನಚಿತ್ರರಂಗದ ಹಿರಿಯ ನಿರ್ದೇಶಕ ಎ.ವಿ. ಶೇಷಗಿರಿರಾವ್ (80) ಅವರು ಚೆನ್ನೈಯಲ್ಲಿ ನಿಧನರಾದರು. ಕನ್ನಡ ಹಾಗೂ ತೆಲುಗಿನಲ್ಲಿ ಸುಮಾರು 30 ಚಿತ್ರಗಳನ್ನು ಅವರು ನಿರ್ದೇಶಿಸಿದ್ದರು. ಕನ್ನಡದ ಮೊದಲ ಸಿನಿಮಾಸ್ಕೋಪ್ ಚಿತ್ರ `ಸೊಸೆ ತಂದ ಸೌಭಾಗ್ಯ' ನಿರ್ದೇಶಿಸಿದ ಹೆಗ್ಗಳಿಕೆ ಇವರದು. ವರನಟ ರಾಜಕುಮಾರ್ ಅಭಿನಯದ `ಬೆಟ್ಟದ ಹುಲಿ' `ಸಂಪತ್ತಿಗೆ ಸವಾಲ್' `ಬಹದ್ದೂರ್ ಗಂಡು', `ರಾಜ ನನ್ನ ರಾಜ' ಇತ್ಯಾದಿ ಅವರು ನಿರ್ದೇಶಿಸಿದ ಕೆಲವು ಜನಪ್ರಿಯ ಸಿನಿಮಾಗಳು.

2007: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆಯ ನಂದಗುಡಿಯಲ್ಲಿ 12,350 ಎಕರೆ ಪ್ರದೇಶದಲ್ಲಿ ವಿಶೇಷ ಆರ್ಥಿಕ ವಲಯ (ಎಸ್ಇಜೆಡ್) ಸ್ಥಾಪನೆಗೆ ಕರ್ನಾಟಕ ರಾಜ್ಯ ಸಚಿವ ಸಂಪುಟ ಒಪ್ಪಿಗೆ ನೀಡಿತು. ಹಿಂದುಳಿದ ವರ್ಗ ಮತ್ತು ಪರಿಶಿಷ್ಟ ಜಾತಿ, ವರ್ಗದ ಒಳ ಮೀಸಲಾತಿಗೆ ಸಚಿವ ಸಂಪುಟ ಉಪ ಸಮಿತಿ ರಚಿಸಲೂ ಸಂಪುಟ ಒಪ್ಪಿತು.

2007: ಅಂತಾರಾಷ್ಟ್ರೀಯ ಅಭಿವೃದ್ಧಿಗಾಗಿ ಇರುವ ಅಮೆರಿಕ ಏಜೆನ್ಸಿಯಲ್ಲಿ ಹಿರಿಯ ಇಂಧನ ಸಲಹೆಗಾರರಾದ ಶ್ರಿನಿವಾಸನ್ ಪದ್ಮನಾಭನ್ ಅವರಿಗೆ `ವರ್ಲ್ಡ್ ಕ್ಲೀನ್ ಎನರ್ಜಿ' ಪ್ರಶಸ್ತಿ ನೀಡಿ ಗೌರವಿಸಲಾಯಿತು. ನವದೆಹಲಿಯಲ್ಲಿ ವಾಸಿಸಿರುವ ಪದ್ಮನಾಭನ್ ಅವರಿಗೆ ಸ್ವಿಟ್ಜರ್ಲೆಂಡಿನ ಬೇಸಲ್ನಲ್ಲಿ ಈ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.

2007: ದಕ್ಷಿಣ ಭಾರತದ ಸಿನಿಮಾ ಪ್ರಿಯರ ಆರಾಧ್ಯ ದೈವ ಸೂಪರ್ ಸ್ಟಾರ್ ರಜನಿಕಾಂತ್ ಅಭಿನಯದ ಬಹು ನಿರೀಕ್ಷಿತ ಚಿತ್ರ `ಶಿವಾಜಿ- ದಿ ಬಾಸ್' ದೇಶ- ವಿದೇಶಗಳಲ್ಲಿ ಈದಿನ ಏಕಕಾಲದಲ್ಲಿ ಬಿಡುಗಡೆಯಾಯಿತು. ತಂಜಾವೂರಿನಲ್ಲಿ ಬೆಳಗಿನ ಜಾವ 3 ಗಂಟೆಗೇ ಈ ಚಿತ್ರ ಪ್ರದರ್ಶನ ಕಂಡಿತು.

2007: ಪ್ಯಾಲೆಸ್ಟೈನ್ ಮೇಲೆ ನಿಯಂತ್ರಣ ಸಾಧಿಸಿದ ಹಮಾಸ್ ಸಂಘಟನೆ ಸದಸ್ಯರು ಅಧ್ಯಕ್ಷ ಮೊಹಮ್ಮದ್ ಅಬ್ಬಾಸ್ ಅವರಿಗೆ ದಿಗ್ಬಂಧನ ವಿಧಿಸಿ ಇಡೀದಿನ ಅವರ ಕಚೇರಿಯಲ್ಲಿ ನಿರಾತಂಕವಾಗಿ ಕಾಲ ಕಳೆದರು.

2007: ಮಹಾತ್ಮ ಗಾಂಧಿ ಜನ್ಮದಿನವಾದ ಅಕ್ಟೋಬರ್ 2 ದಿನವನ್ನು `ಅಂತಾರಾಷ್ಟ್ರೀಯ ಅಹಿಂಸಾ ದಿನ'ವಾಗಿ ಘೋಷಿಸಲು ವಿಶ್ವಸಂಸ್ಥೆಯ ಸಾಮಾನ್ಯ ಸಭೆ ನಿರ್ಧರಿಸಿತು. ವಿಶ್ವದಾದ್ಯಂತ ಶಾಂತಿಯ ಸಂದೇಶವನ್ನು ಸಾರಲು ಗಾಂಧೀಜಿ ವಹಿಸಿದ ಪಾತ್ರವನ್ನು ಪರಿಗಣಿಸಿ ಸಾಮಾನ್ಯ ಸಭೆ ಈ ತೀರ್ಮಾನ ಕೈಗೊಂಡಿತು.

2007: ಮುಂಬೈಯಲ್ಲಿ ಜನಿಸಿ ಸ್ವೀಡನ್ ನಿವಾಸಿಯಾಗಿರುವ ಭಾರತೀಯ ನಾವಿಕ ಭಾವಿಕ್ ಗಾಂಧಿ (30) ಅವರು ಯಾರ ನೆರವನ್ನೂ ಆಶ್ರಯಿಸದೆ ಅಟ್ಲಾಂಟಿಕ್ ಸಾಗರದುದ್ದಕ್ಕೂ ದೋಣಿ ಹುಟ್ಟು ಹಾಕಿ ಗುರಿ ಮುಟ್ಟುವ ಮೂಲಕ ದಾಖಲೆ ನಿರ್ಮಿಸಿದರು. ಹಾಯಿ, ಮೋಟಾರ್, ಸಹಾಯಕ ಹಡಗು ಇತ್ಯಾದಿ ಯಾವುದರ ನೆರವೂ ಇಲ್ಲದೆ ಕೇವಲ ದೋಣಿಯಲ್ಲಿ ಹುಟ್ಟು ಹಾಕುತ್ತಾ 106 ದಿನಗಳಲ್ಲಿ ಅವರು ತಮ್ಮ ಪಯಣ ಪೂರ್ಣಗೊಳಿಸಿದರು. ಕ್ರಿಸ್ಟೋಫರ್ ಕೊಲಂಬಸ್ ಸಾಗಿದ ಹಾದಿಯಲ್ಲಿ ದೋಣಿಗೆ ಹುಟ್ಟು ಹಾಕಿದ ಭಾವಿಕ್ ಗಾಂಧಿ ಈ ಮಹಾಸಾಗರದಲ್ಲಿ ಇಂತಹ ಸಾಧನೆಗೈದ 33ನೇ ವ್ಯಕ್ತಿ. ಇಂತಹ ಏಕವ್ಯಕ್ತಿ ಸಾಹಸ ಗೈದ ಏಷ್ಯಾದ ಮೊದಲಿಗ. ತಮ್ಮ ದೋಣಿ `ಮಿಸ್ ಒಲಿವ್' ನಲ್ಲಿ ಅಂಟಿಗುವಾದ ಕೆನರಿ ದ್ವೀಪದ ಲಾ ರೆಸ್ಟಿಂಗಾದಿಂದ ಸಾಗರ ಪ್ರಯಾಣ ಆರಂಭಿಸಿದ್ದರು.

2007: ಅಟ್ಲಾಂಟಿಸ್ ಬಾಹ್ಯಾಕಾಶ ನೌಕೆಯ ದುರಸ್ತಿಗಾಗಿ ಇಬ್ಬರು ತಂತ್ರಜ್ಞರು ಮೂರನೇ ಬಾಹ್ಯಾಕಾಶ ನಡಿಗೆ ಆರಂಭಿಸಿದರು.

2007: ನೈಜೀರಿಯಾದ ದಕ್ಷಿಣ ಭಾಗದ ತೈಲ ಕ್ಷೇತ್ರದಲ್ಲಿ ಬಂದೂಕುಧಾರಿಗಳು ಇಬ್ಬರು ಭಾರತೀಯರು ಸೇರಿದಂತೆ ಐವರು ವಿದೇಶಿ ಪ್ರಜೆಗಳನ್ನು ಅಪಹರಿಸಿದರು.

2006: ಕೇರಳದ ರಾಜಧಾನಿ ತಿರುವನಂತಪುರದಲ್ಲಿ ಭಿಕ್ಷಾಟನೆಯನ್ನು ತತ್ ಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಯಿತು.

2006: ಡಿಸೆಂಬರ್ 21ರಂದು ಕೋಫಿ ಅನ್ನಾನ್ ನಿವೃತ್ತಿಯಿಂದ ತೆರವಾಗುವ ವಿಶ್ವಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಶಶಿ ತರೂರ್ ಅವರನ್ನು ಭಾರತದ ಅಭ್ಯರ್ಥಿ ಎಂದು ಸರ್ಕಾರ ಪ್ರಕಟಿಸಿತು. 1978ರಿಂದಲೇ ವಿಶ್ವಸಂಸ್ಥೆಯಲ್ಲಿ ಸೇವೆಯಲ್ಲಿರುವ ತರೂರ್ ಈ ವೇಳೆಯಲ್ಲಿ ಅಲ್ಲಿ ಸಂಪರ್ಕ ಮತ್ತು ಮಾಹಿತಿ ವಿಭಾಗದ ಆಧೀನ ಪ್ರಧಾನ ಕಾರ್ಯದರ್ಶಿಯಾಗಿದ್ದರು.

2006: ಶಂಕಿತ ತಮಿಳು ಉಗ್ರಗಾಮಿಗಳು ಅಡಗಿಸಿ ಇಟ್ಟ್ದಿದ ನೆಲಬಾಂಬ್ ಸ್ಫೋಟಕ್ಕೆ ಬಸ್ಸಿನಲ್ಲಿದ್ದ 64 ಪ್ರಯಾಣಿಕರು ಸತ್ತು 39 ಮಂದಿ ಗಾಯಗೊಂಡ ಘಟನೆ ಉತ್ತರ ಶ್ರೀಲಂಕಾದಲ್ಲಿ ಘಟಿಸಿತು. ಬೆನ್ನಲ್ಲೇ ಶ್ರೀಲಂಕಾ ಸೇನೆ ಎಲ್ಟಿಟಿಇ ಉಗ್ರರ ನೆಲೆಗಳ ಮೇಲೆ ವೈಮಾನಿಕ ದಾಳಿ ಪ್ರಾರಂಭಿಸಿತು.

2006: ವಿಜಯಾನಂದ ಪ್ರಿಂಟರ್ಸ್ ಲಿಮಿಟೆಡ್ ನ ವಿಜಯ ಕನರ್ಾಟಕ, ವಿಜಯ ಟೈಮ್ಸ್ ಮತ್ತು ಉಷಾಕಿರಣ ಪತ್ರಿಕೆಗಳ ಮಾಲೀಕತ್ವವನ್ನು ದಿ ಟೈಮ್ಸ್ ಆಫ್ ಇಂಡಿಯಾ ಗ್ರೂಪ್ ವಹಿಸಿಕೊಂಡಿತು.

2006: ಎನ್ ಸಿಪಿ, ಬಿಜೆಪಿ, ಮತ್ತು ಶಿವಸೇನೆಯ ಬೆಂಬಲದೊಂದಿಗೆ ಮಹಾರಾಷ್ಟ್ರದಿಂದ ಕಣಕ್ಕೆ ಇಳಿದಿದ್ದ ಉದ್ಯಮಿ ರಾಹುಲ್ ಬಜಾಜ್ ರಾಜ್ಯಸಭೆಗೆ ಆಯ್ಕೆಯಾದರು. ಕಾಂಗ್ರೆಸ್ಸಿನ ಅವಿನಾಶ ಪಾಂಡೆ ಅವರನ್ನು ರಾಹುಲ್ ಬಜಾಜ್ ಪರಾಭವಗೊಳಿಸಿದರು.

1993: ಫೀಲ್ಡ್ ಮಾರ್ಷಲ್ ಕೆ.ಎಂ. ಕಾರ್ಯಪ್ಪ್ಪ ಈದಿನ ನಿಧನರಾದರು.

1990: ಸ್ವರ್ಣಮಂದಿರದ ಮೇಲೆ 1984ರಲ್ಲಿ ನಡೆದ ಕಾರ್ಯಾಚರಣೆ ಕಾಲದಲ್ಲಿ ವಶಪಡಿಸಿಕೊಳ್ಳಲಾದ ಚಿನ್ನ ಮತ್ತು ಇತರ ಮೌಲ್ಯಯುಕ್ತ ವಸ್ತುಗಳನ್ನು ಪಂಜಾಬ್ ಸರ್ಕಾರ ಹಿಂದಕ್ಕೆ ನೀಡಿತು.

1986: ಕ್ರಿಕೆಟ್ ಪಟು ಕೆ.ಕೆ. ತಾರಾಪೂರ್ ಅವರು ಈದಿನ ನಿಧನರಾದರು.

1956: ಕಲಾವಿದೆ ಕನಕತಾರಾ ಜನನ.

1947: ಭಾರತವನ್ನು ವಿಭಜಿಸುವ ಬ್ರಿಟಿಷ್ ಇಂಡಿಯಾದ ಆಲೋಚನೆಯನ್ನು ಆಲ್ ಇಂಡಿಯಾ ಕಾಂಗ್ರೆಸ್ ಒಪ್ಪಿಕೊಂಡಿತು.

1942: ಸಾಹಿತಿ ಚಿದಾನಂದ ಗೌಡ ಜನನ.

1940: ಕಲಾವಿದ ಭೀಮಪ್ಪ ಸನದಿ ಜನನ.

1932: ಸಾಹಿತಿ ರಸಿಕ ಪುತ್ತಿಗೆ ಜನನ.

1931: ಗೀತಪ್ರಿಯ ಜನನ.

1929: ಕಲಾವಿದ ಸಿ.ಪಿ. ಪರಮೇಶ್ವರಪ್ಪ ಜನನ.

1928: ಕಲಾವಿದ ಪಿ.ಬಿ. ಧುತ್ತರಗಿ ಜನನ.

1924: ಸಾಹಿತಿ, ಪ್ರಾಧ್ಯಾಪಕ, ಸಂಶೋಧಕ ಗುರುರಾಜ ಭಟ್ (15-6-1924ರಿಂದ 27-8-1978) ಅವರು ದಕ್ಷಿಣ ಕನ್ನಡ ಜಿಲ್ಲೆಯ ಉಡುಪಿ ತಾಲ್ಲೂಕಿನ ಪಾದೂರಿನಲ್ಲಿ ಈದಿನ ಜನಿಸಿದರು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಮಾರು 2000ಕ್ಕೂ ಹೆಚ್ಚು ದೇವಸ್ಥಾನಗಳ ಸಂಶೋಧನೆ, ಶಿಲಾಗೋರಿ, ತಾಮ್ರಶಾಸನಗಳು, ಅಪೂರ್ವ ಶಾಸನಗಳ ಸಂಶೋಧನೆ ನಡೆಸಿದ ಇವರು 700ಕ್ಕೂ ಹೆಚ್ಚು ಸಂಶೋಧನಾ ಲೇಖನಗಳನ್ನು ಒಳಗೊಂಡ `ತುಳುನಾಡು' ಗ್ರಂಥ ರಚಿಸಿದರು. ಅವರ ಈ ಮೊದಲ ಗ್ರಂಥಕ್ಕೇ ದೇವರಾಜ ಬಹದ್ದೂರ್ ಪ್ರಶಸ್ತಿ, ಎರಡನೆಯ ಕೃತಿ `ತುಳುನಾಡಿನ ಸ್ಥಾನಿಕರು' ಗ್ರಂಥಕ್ಕೆ ಉತ್ತಮ ಸಂಶೋಧನಾ ಕೃತಿ ಎಂಬ ಪ್ರಶಂಸೆ ಲಭಿಸಿತು.

1924: ಸಾಹಿತಿ ನಿರಂಜನ ಜನನ.

1920: ಸಾಹಿತಿ ಮಲ್ಲಿಕಾ ಕಡಿದಾಳ್ ಮಂಜಪ್ಪ ಜನನ.

1919: ಬ್ರಿಟಿಷ್ ವಿಮಾನ ಹಾರಾಟಗಾರರಾದ ಜಾನ್ ಅಲ್ ಕಾಕ್ ಮತ್ತು ಆರ್ಥರ್ ಬ್ರೌನ್ ನ್ಯೂ ಫೌಂಡ್ ಲ್ಯಾಂಡ್ ನಿಂದ ಐರ್ಲೆಂಡ್ ವರೆಗಿನ ಮೊತ್ತ ಮೊದಲ ನಿಲುಗಡೆ ರಹಿತ ಟ್ರಾನ್ಸ್ ಅಟ್ಲಾಂಟಿಕ್ ಹಾರಾಟವನ್ನು ಪೂರ್ಣಗೊಳಿಸಿದರು. 1890 ಮೈಲು ದೂರದ ಈ ಹಾರಾಟವನ್ನು ಅವರು ವಿಕರ್ಸ್ ವಿಮಿ ಬಾಂಬರ್ ವಿಮಾನದಲ್ಲಿ ಕೇವಲ 16 ಗಂಟೆಗಳಲ್ಲಿ ಮುಗಿಸಿದರು. ಈ ವಿಮಾನವನ್ನು ಲಂಡನ್ನಿನ ಸೈನ್ಸ್ ಮ್ಯೂಸಿಯಂಮ್ಮಿನಲ್ಲಿ ಇಡಲಾಗಿದೆ.

1915: ಅಮೆರಿಕದ ವೈದ್ಯ ಥಾಮಸ್ ಎಚ್. ವೆಲ್ಲರ್ ಜನ್ಮದಿನ. ಪೋಲಿಯೋ ವ್ಯಾಕ್ಸಿನ್ ಅಭಿವೃದ್ಧಿಯಲ್ಲಿ ಇವರು ಮಹತ್ವದ ಪಾತ್ರ ವಹಿಸಿದರು.

1911: ಖ್ಯಾತ ಚಿಂತನಶೀಲ ಕಲಾವಿದ ಕೆ. ಕೃಷ್ಣ ಹೆಬ್ಬಾರ (15-6-1911ರಿಂದ 26-3-1996) ಅವರು ನಾರಾಯಣ ಹೆಬ್ಬಾರ- ಸೀತಮ್ಮ ದಂಪತಿಯ ಮಗನಾಗಿ ಉಡುಪಿ ಬಳಿಯ ಕಟ್ಟಂಗೇರಿಯಲ್ಲಿ ಜನಿಸಿದರು.

1907: ಸ್ವಾತಂತ್ರ್ಯ ಹೋರಾಟಗಾರ ನಾರಾಯಣ ಗಣೇಶ ಗೋರೆ ನಿಧನ.

1869: ಅಮೆರಿಕನ್ ಸಂಶೋಧಕ ಜಾನ್ ವೆಸ್ಲೆ ಹ್ಯಾಟ್ ಸೆಲ್ಯುಲಾಯ್ಡ್ ನ್ನು (ತೆಳುವಾದ ಪಾರದರ್ಶಕ ಪ್ಲಾಸ್ಟಿಕ್ ವಸ್ತು) ಕಂಡುಹಿಡಿದ.

1762: ಮಿಂಚು ಅಂದರೆ ವಿದ್ಯುತ್ ಎಂಬುದಾಗಿ ಸಾಬೀತುಪಡಿಸುವಂತಹ ಪ್ರಯೋಗವನ್ನು ಬೆಂಜಮಿನ್ ಫ್ರಾಂಕ್ಲಿನ್ ಕೈಗೊಂಡ. ನಂತರ  ಅದೇ ವರ್ಷ ಈತ ತನ್ನ ಮನೆಯಲ್ಲಿ ಮಿಂಚುವ ಸಲಾಕೆಯನ್ನು ಇರಿಸಿ ಅದಕ್ಕೆ ಗಂಟೆಯ ಸಂಪರ್ಕ ಕಲ್ಪಿಸಿದ. ಈ ಮಿಂಚುವ ಸಲಾಕೆಗೆ ವಿದ್ಯುತ್ ಸಂಪರ್ಕ ನೀಡಿದಾಗ ಅದು ಮಿಂಚುವುದರೊಂದಿಗೆ ಅದರ ಸಂಪರ್ಕದಲ್ಲಿದ್ದ ಗಂಟೆ ಸದ್ದು ಮಾಡಿತು. ಮುಂದೆ ಈತ ಅಮೆರಿಕದ ಅಧ್ಯಕ್ಷನಾಗಿ ಆಯ್ಕೆಯಾದ.

1659: ಮೊಘಲ್ ದೊರೆ ಔರಂಗಜೇಬ್ ಸಿಂಹಾಸನವನ್ನು ಏರಿದ. ಆತ 1659ರ ಮೇ ತಿಂಗಳಲ್ಲಿ ದೆಹಲಿ ಪ್ರವೇಶಿಸಿದ. ಆತನ ದೆಹಲಿ ಪ್ರವೇಶದ ಸಂಭ್ರಮಾಚರಣೆ ಮೇ 22ರಂದು ಆರಂಭವಾಗಿ ಆಗಸ್ಟ್ 29ರವರೆಗೆ 14 ವಾರಗಳ ಕಾಲ ನಡೆಯಿತು.
1215: ಸರ್ರೆಯ ರನ್ನಿಮೇಡ್ ನಲ್ಲಿ ದೊರೆ ಕಾನ್ `ಮ್ಯಾಗ್ನಕಾರ್ಟ'ಕ್ಕೆ ಸಹಿ ಮಾಡಿದ. ಇದು ರಾಜಕೀಯ ಹಕ್ಕುಗಳು ಹಾಗೂ ವೈಯಕ್ತಿಕ ಸ್ವಾತಂತ್ರ್ಯದ ಸ್ಥಾಪನೆಗೆ ನಾಂದಿ ಹಾಡಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday, June 19, 2010

ಇಂದಿನ ಇತಿಹಾಸ History Today ಜೂನ್ 14


ಇಂದಿನ ಇತಿಹಾಸ

ಜೂನ್ 14
ಮನೆಗೆಲಸದವಳ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಬಾಲಿವುಡ್ ನಟ ಶಿನೆ ಅಹುಜಾ ಅವರನ್ನು ವಿಚಾರಣೆಗಾಗಿ ಬಂಧಿಸಿದ ಪ್ರಸಂಗ ಮುಂಬೈಯ ಒಶಿವಾರಾ ಉಪನಗರದಲ್ಲಿ ಘಟಿಸಿತು.

2009: ತನ್ನ ಜಾಲದಲ್ಲಿ ಯಾವುದೇ ವಿಚಾರವನ್ನು  ಸೆನ್ಸಾರ್ ಮಾಡುವುದಿಲ್ಲ. ಆದರೆ ಏನಾದರೂ ದೂರುಗಳಿದ್ದಲ್ಲಿ ಅದನ್ನು ಪರಿಹರಿಸಲು ತಕ್ಷಣ ಕಾರ್ಯ ಪ್ರವೃತ್ತವಾಗುವುದಾಗಿ ಗೂಗಲ್ ಹೇಳಿತು. ಮಾಹಿತಿ ನಿಯಂತ್ರಣದಲ್ಲಿ ಸಕ್ರಿಯ ಪಾತ್ರವನ್ನು ಗೂಗಲ್ ವಹಿಸುವುದಿಲ್ಲ. ಸಂಪಾದಕೀಯ  ಆಯ್ಕೆಯ ಪಾತ್ರವನ್ನು  ನಿರ್ವಹಿಸುವುದು ಗೂಗಲ್‌ಗೆ ಸಾಧ್ಯವಿಲ್ಲ ಎಂದು ಗೂಗಲ್ ಇಂಡಿಯಾ ವ್ಯವಸ್ಥಾಪಕ ನಿರ್ದೇಶಕ ಶೈಲೇಶ್ ರಾವ್ ನವದೆಹಲಿಯಲ್ಲಿ ತಿಳಿಸಿದರು.

2009: ಮನೆಗೆಲಸದವಳ ಮೇಲೆ ಅತ್ಯಾಚಾರ ನಡೆಸಿದ ಆರೋಪದ ಮೇರೆಗೆ ಬಾಲಿವುಡ್ ನಟ ಶಿನೆ ಅಹುಜಾ ಅವರನ್ನು ವಿಚಾರಣೆಗಾಗಿ ಬಂಧಿಸಿದ ಪ್ರಸಂಗ ಮುಂಬೈಯ ಒಶಿವಾರಾ ಉಪನಗರದಲ್ಲಿ ಘಟಿಸಿತು. ಅಹುಜಾ ಅವರ ಮನೆಯ ಕೆಲಸದಾಕೆ ತನ್ನ ಮೇಲೆ ಅಹುಜಾ ಅತ್ಯಾಚಾರ ನಡೆಸಿದರು ಎಂದು ಸ್ವತಃ ದೂರು ನೀಡಿದ್ದರಿಂದ ಅಹುಜಾ ಅವರನ್ನು ವಿಚಾರಣೆಗೆ ವಶಕ್ಕೆ ತೆಗೆದುಕೊಳ್ಳಲಾಯಿತು ಎಂದು ಡಿಸಿಪಿ ನಿಕೇತ್ ಕೌಶಿಕ್ ತಿಳಿಸಿದರು.

2009: ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಎನ್‌ಡಿಎ ಅಥವಾ ತೃತೀಯ ರಂಗ ಅಸ್ತಿತ್ವಕ್ಕೆ ಬಂದರೆ ಮುಂದಿನ ಕಾರ್ಯತಂತ್ರ ಹೆಣೆಯಲು ಎಲ್‌ಟಿಟಿಇ ಮುಖಂಡ ವೇಲುಪಿಳ್ಳೈ ಪ್ರಭಾಕರನ್ ಹವಣಿಸಿದ್ದ. ಆದರೆ ಕೊನೆಗೂ ಫಲಿಸಿದ್ದು ಶ್ರೀಲಂಕಾ ಸೇನೆಯ ಕಾರ್ಯತಂತ್ರ. ಮೇ 16ರ ಭಾರತದ ಚುನಾವಣಾ ಫಲಿತಾಂಶ ಎಲ್‌ಟಿಟಿಇ ಪಾಲಿಗೆ ಅಳಿವು ಉಳಿವಿನ ಸಂಗತಿಯಾಗಿತ್ತು. ಎನ್‌ಡಿಎ ಅಥವಾ ತೃತೀಯ ರಂಗ ಅಧಿಕಾರ ಸ್ವೀಕರಿದರೆ ಯಾರಾದರೂ ನಾಯಕರು  ತಮ್ಮ ಪರ ಮಧ್ಯಸ್ಥಿಕೆ ವಹಿಸಿ ಶತ್ರು ಸೇನೆ ಯುದ್ಧ ರಹಿತ ವಲಯ ಪ್ರವೇಶಿಸುವುದನ್ನು ತಡೆಯಲಿದ್ದಾರೆ ಎಂದೇ ಆತ ಆಶಿಸಿದ್ದ. ಆದರೆ ಆತನ ಊಹೆ ಮೀರಿ ಎಲ್‌ಟಿಟಿಇಯನ್ನು ಸುತ್ತುವರೆಯಲಾಗಿತ್ತು ಎಂದು ಲಂಕಾ ಸೇನೆ ಮೂಲಗಳು ತಿಳಿಸಿದವು. ತನಗೆ ಪ್ರತಿಕೂಲವಾಗಿ ಪರಿಣಮಿಸಲಿರುವ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುತ್ತದೆ ಎಂಬುದು ತಿಳಿಯುತ್ತಿದ್ದಂತೆಯೇ ಮೇ 16ರ ಮಧ್ಯಾಹ್ನ ಮಾನವ ಗುರಾಣಿಯಾಗಿ ಬಳಸಲಾಗಿದ್ದ ಎಲ್ಲ ತಮಿಳು ನಾಗರಿಕರನ್ನು ಬಿಡುಗಡೆಗೊಳಿಸುವುದಾಗಿ ಘೋಷಿಸಲಾಯಿತು. ಎಲ್‌ಟಿಟಿಇ ಅಂತರರಾಷ್ಟ್ರೀಯ ವ್ಯವಹಾರಗಳ ಮುಖಂಡ ಸೆಲ್ವರಸ ಪದ್ಮನಾಭನ್ 'ಎಲ್‌ಟಿಟಿಇ ಬಹುತೇಕ ಸೋಲೊಪ್ಪಿಕೊಂಡಿದೆ' ಎಂದು ಘೋಷಿಸಿ ಅಂತರರಾಷ್ಟ್ರೀಯ ಸಮುದಾಯದ ನೆರವು ಕೋರಿದರು.  ತೃತೀಯ ರಂಗ ಅಧಿಕಾರಕ್ಕೆ ಬಂದರೆ ಎಐಎಡಿಎಂಕೆ ನಾಯಕಿ ಜಯಲಲಿತಾ ಶ್ರೀಲಂಕಾ ತಮಿಳರ ನೆರವಿಗೆ ಭಾರತೀಯ ಸೇನೆ ಕಳುಹಿಸಿಕೊಡುವುದಾಗಿ ಕೂಡ ಘೋಷಿಸಿದ್ದರು. ಫಲಿತಾಂಶದ ನಂತರ  ಸಂಘಟನೆ ಪರವಾಗಿ ತಮಿಳುನಾಡಿನಲ್ಲಿ ದೊಡ್ಡ ಕ್ರಾಂತಿಯೇ ನಡೆಯುತ್ತದೆ ಎಂದು ಎಲ್‌ಟಿಟಿಇ ಭಾವಿಸಿತ್ತು. ಆದರೆ  ಯೋಚಿಸಿ ತಂತ್ರ ರೂಪಿಸುವ ಕಾಲ ವ್ಯಾಘ್ರರ ಪಾಲಿಗೆ ಮಿಂಚಿಹೋಗಿತ್ತು. 

2009: ನಾಯಕತ್ವದ ವಿರುದ್ಧ ತಿರುಗಿ ಬಿದ್ದು ಬಿಜೆಪಿಯಲ್ಲಿನ ತಮ್ಮ ಎಲ್ಲಾ ಸ್ಥಾನಗಳಿಗೂ ರಾಜೀನಾಮೆ ಸಲ್ಲಿಸಿದ್ದ ಹಿರಿಯ ನಾಯಕ ಯಶವಂತ ಸಿನ್ಹ, ತಾವು ಪಕ್ಷ ತ್ಯಜಿಸುವುದಿಲ್ಲ ಎಂದು ರಾಂಚಿಯಲ್ಲಿ ಸ್ಪಷ್ಟಪಡಿಸಿದರು. 'ನನ್ನ ರಾಜೀನಾಮೆ ಅಂಗೀಕಾರವಾಗಿರುವುದು ನನಗೆ ಸಂತಸ ತಂದಿದೆ. ಆದ್ದರಿಂದ ಇನ್ನು ಟೀಕೆ ಮಾಡಲು ನನಗೆ ಏನೂ ಇಲ್ಲ' ಎಂದು ವಿದೇಶಾಂಗ ವ್ಯವಹಾರ ಹಾಗೂ ಹಣಕಾಸು ಇಲಾಖೆಗಳ ಮಾಜಿ ಸಚಿವರೂ ಆದ ಅವರು, ವಿವಾದದ ಬಗ್ಗೆ ತಮ್ಮನ್ನು ಸಂಪರ್ಕಿಸಿದ ಸುದ್ದಿಗಾರರಿಗೆ ಹೇಳಿದರು.

2009:  ಒಟ್ಟು 5.94 ಕೋಟಿ ರೂಪಾಯಿ ವೆಚ್ಚದಲ್ಲಿ ಬೆಂಗಳೂರಿನ ಶೇಷಾದ್ರಿ ರಸ್ತೆಯ ಮಹಾರಾಣಿ ಕಾಲೇಜು ವೃತ್ತ ಮತ್ತು ಕೆ.ಆರ್.ವೃತ್ತದಲ್ಲಿ ನಿರ್ಮಿಸಲಾದ ಅಂಡರ್‌ಪಾಸ್‌ಗಳು ಹಾಗೂ ಪಾದಚಾರಿ ಸುರಂಗ ಮಾರ್ಗಗಳನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಉದ್ಘಾಟಿಸಿದರು.

2008: ಬೆಂಗಳೂರಿನ ಜಯನಗರ ವಾಣಿಜ್ಯ ಸಮುಚ್ಚಯದ ಆವರಣದಲ್ಲಿನ ತರಕಾರಿ ಮಾರಾಟ ಸಂಕೀರ್ಣದಲ್ಲಿ 32 ವರ್ಷಗಳ ಅವಧಿಯಲ್ಲಿ ಇದೇ ಮೊದಲ ಬಾರಿಗೆ ಹಿಂದಿನ ರಾತ್ರಿ ಸಂಭವಿಸಿದ ಬೆಂಕಿ ಅನಾಹುತದಲ್ಲಿ 49 ಮಳಿಗೆಗಳು ಸುಟ್ಟು ಭಸ್ಮವಾಗಿ, 20ಕ್ಕೂ ಅಧಿಕ ಮಳಿಗೆಗಳು ಭಾಗಶಃ ಹಾನಿಗೆ ಒಳಗಾದವು. ಅನಾಹುತದಲ್ಲಿ ಸುಮಾರು ಮೂರು ಕೋಟಿ ರೂಪಾಯಿ ನಷ್ಟ ಸಂಭವಿಸಿರಬಹುದು ಎಂದು ಅಂದಾಜು ಮಾಡಲಾಯಿತು.

2007: ರಾಷ್ಟ್ರಪತಿ ಸ್ಥಾನಕ್ಕೆ ಸಂಯಕ್ತ ಪ್ರಗತಿಪರ ಮೈತ್ರಿ ಕೂಟ (ಯುಪಿ ಎ) ಅಭ್ಯರ್ಥಿಯಾಗಿ ರಾಜಸ್ಥಾನದ ರಾಜ್ಯಪಾಲರಾದ ಪ್ರತಿಭಾ ದೇವಿಸಿಂಗ್ ಪಾಟೀಲ್ (72) ಆಯ್ಕೆಯಾದರು. ಹಲವು ಸುತ್ತಿನ ಕಸರತ್ತಿನ ಬಳಿಕ ಪ್ರತಿಭಾ ಪಾಟೀಲ್ ಅಚ್ಚರಿಯ ಅಭ್ಯರ್ಥಿಯಾಗಿ ಹೊರ ಹೊಮ್ಮಿದರು. ಯುಪಿ ಎ ಅಧ್ಯಕ್ಷೆ ಸೋನಿಯಾಗಾಂಧಿ ಅವರು ಪ್ರತಿಭಾ ಆಯ್ಕೆ ವಿಚಾರವನ್ನು ಪ್ರಕಟಿಸಿದರು.

2007: ಒಟ್ಟು 5,608 ಕೋಟಿ ರೂಪಾಯಿ ವೆಚ್ಚದಲ್ಲಿ ಗಂಗಾನದಿಯ ಕೆಳಗೆ ಕೊಳವೆಯೊಳಗೆ ಸಾಗುವಂತಹ 13.7 ಕಿ.ಮೀ. ಉದ್ದದ (ಇದರಲ್ಲಿ ನದಿಯ ಕೆಳಗಿನ ದೂರ 8 ಕಿ.ಮೀ) ಪೂರ್ವ- ಪಶ್ಚಿಮ ಮೆಟ್ರೋ ಕಾರಿಡಾರ್ ಯೋಜನೆಗೆ ಬುದ್ಧದೇವ ಭಟ್ಟಾಚಾರ್ಯ ನೇತೃತ್ವದ ಪಶ್ಚಿಮ ಬಂಗಾಳ ಸರ್ಕಾರ ಹಸಿರು ನಿಶಾನೆ ತೋರಿಸಿತು. ದೇಶದಲ್ಲೇ ಮೊತ್ತ ಮೊದಲ ಬಾರಿಗೆ ನೀರಿನ ಅಡಿಯಲ್ಲಿ ಸಾಗುವ ಈ ರೈಲು ಮಾರ್ಗವು ಹೌರಾ ನಿಲ್ದಾಣ ಮತ್ತು ಸಾಲ್ಟ್ ಲೇಕ್ ನಡುವೆ ಸಂಪರ್ಕ ಕಲ್ಪಿಸುವುದು.

2007: ಮುಂಬೈಯಲ್ಲಿ 1993ರಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಫೋಟದಲ್ಲಿ ಭಾಗಿಯಾಗಿದ್ದ ಮುಬೀನಾ ಭಿವಂಡಿವಾಲಾ ಮತ್ತು ಜೈಬುನ್ನೀಸಾ ಖಾಜಿ ಎಂಬ ಇಬ್ಬರು ಮಹಿಳೆಯರಿಗೆ ವಿಶೇಷ ಟಾಡಾ ನ್ಯಾಯಾಲಯವು ತಲಾ ಐದು ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿತು.

2007: ಸರ್ಕಾರಿ ಸ್ವಾಮ್ಯದ ವಿಮಾನಯಾನ ಸಂಸ್ಥೆ `ಇಂಡಿಯನ್' ನ (ಹಿಂದಿನ ಇಂಡಿಯನ್ ಏರ್ ಲೈನ್ಸ್) ಸುಮಾರು 15,000 ಭೂ ಸೇವಾ ಸಿಬ್ಬಂದಿ ತಮ್ಮ ದೇಶವ್ಯಾಪಿ ಮುಷ್ಕರವನ್ನು ವಾಪಸ್ ಪಡೆದುಕೊಂಡರು. ವೇತನ ಬಾಕಿ ಹಾಗೂ ಬಡ್ತಿ ಸಂಬಂಧಿ ಬಿಕ್ಕಟ್ಟು ಬಗೆಹರಿಸುವುದಾಗಿ ಆಡಳಿತ ಮಂಡಳಿ ಹಾಗೂ ವಿಮಾನಯಾನ ಸಚಿವಾಲಯ ನೀಡಿದ ಭರವಸೆ ಅನುಸರಿಸಿ ಮುಷ್ಕರ ನಿರತರು ತಮ್ಮ ಮುಷ್ಕರವನ್ನು ಅಂತ್ಯಗೊಳಿಸಿದರು.

2006: ಖ್ಯಾತ ಹಿಂದಿ ಚಿತ್ರ ನಿರ್ದೇಶಕ ಮಹೇಶ ಭಟ್ ಅವರನ್ನು ಗುರಿಯಾಗಿಟ್ಟುಕೊಂಡು ಅವರ ಕಚೇರಿಗೆ ನುಗ್ಗಿದ ಇಬ್ಬರು ಅಪರಿಚಿತರು ಕಚೇರಿಯಲ್ಲಿ ಗುಂಡು ಹಾರಿಸಿ ಪರಾರಿಯಾದರು. ಈ ವೇಳೆಯಲ್ಲಿ ಮಹೇಶ ಭಟ್ ಕಚೇರಿಯಲ್ಲಿ ಇರಲಿಲ್ಲ. ಗುಂಡೇಟಿನಿಂದ ಯಾರೂ ಗಾಯಗೊಳ್ಳಲಿಲ್ಲ.

2006: ಹಂಪಿ ಕನ್ನಡ ವಿಶ್ವ ವಿದ್ಯಾಲಯದಲ್ಲಿ ದೇವರ ದಾಸಿಮಯ್ಯ ಅವರ ಸಾಧನೆ, ಬರವಣಿಗೆ ಬಗ್ಗೆ ಅಧ್ಯಯನ ನಡೆಸುವ ಸಲುವಾಗಿ ಪೀಠ ಸ್ಥಾಪನೆ. ಪೀಠಕ್ಕೆ 2006-07 ಸಾಲಿನಲ್ಲಿ ಸರ್ಕಾರ 10 ಲಕ್ಷ ರೂಪಾಯಿ ಬಿಡುಗಡೆ ಮಾಡಿತು.

2001: ಭಾರತದ ನಾರಾಯಣ್ ಕಾರ್ತಿಕೇಯನ್ ಇಂಗ್ಲೆಂಡಿನ ಸಿಲ್ವರ್ ಸ್ಟೋನ್ ಟ್ರ್ಯಾಕ್ಸಿನಲ್ಲಿ ಜಾಗ್ವಾರ್ ರೇಸಿಂಗ್ ತಂಡಕ್ಕಾಗಿ ಪರೀಕ್ಷಾರ್ಥವಾಗಿ ಫಾರ್ಮ್ಯುಲಾ ಒನ್ ಕಾರನ್ನು ಓಡಿಸುವ ಮೂಲಕ ಈ ಕಾರನ್ನು ಓಡಿಸಿದ ಪ್ರಪ್ರಥಮ ಭಾರತೀಯ ಹಾಗೂ ಮೊತ್ತ ಮೊದಲ ಜಪಾನೇತರ ಏಷಿಯನ್ ಎನಿಸಿಕೊಂಡರು.

1969: ಜರ್ಮನಿಯ ಟೆನಿಸ್ ಆಟಗಾರ್ತಿ ಸ್ಟೆಫಿ ಗ್ರಾಫ್ ಜನ್ಮದಿನ. 1988ರಲ್ಲಿ ಒಲಿಂಪಿಕ್ ಸ್ವರ್ಣ ಹಾಗೂ ಎಲ್ಲ ಪ್ರಮುಖ ಟೆನಿಸ್ ಸ್ಪರ್ಧೆಗಳನ್ನು ಗೆಲ್ಲುವ ಮೂಲಕ ಈಕೆ `ಗೋಲ್ಡನ್ ಗ್ರ್ಯಾಂಡ್ ಸ್ಲಾಮ್' ಪಡೆದುಕೊಂಡರು.

1960: ಕಲಾವಿದ ಜಿ. ಜೈಕುಮಾರ್ ಜನನ.

1958: ಅಮೆರಿಕದ ಸ್ಕೇಟರ್ ಎರಿಕ್ ಹೀಡನ್ ಜನ್ಮದಿನ. 1980ರ ಚಳಿಗಾಲದ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಎಲ್ಲ ಸ್ಪೀಡ್ ಸ್ಕೇಟಿಂಗ್ ಸ್ಪರ್ಧೆಗಳಲ್ಲಿ ಚಿನ್ನದ ಪದಕಗಳನ್ನು ಗೆದ್ದ ಮೊತ್ತ ಮೊದಲ ಅಮೆರಿಕನ್ ಸ್ಕೇಟರ್ ಈ ವ್ಯಕ್ತಿ.

1956: ಮೈಸೂರು ವಿಶ್ವವಿದ್ಯಾನಿಲಯದ ವೈಸ್ ಛಾನ್ಸಲರ್ (ಕುಲಪತಿ) ಆಗಿ ಮಹಾರಾಜಾ ಕಾಲೇಜು ಪ್ರಿನ್ಸಿಪಾಲ ಕೆ.ವಿ. ಪುಟ್ಟಪ್ಪ ಅವರನ್ನು ಸರ್ಕಾರ ನೇಮಿಸಿತು. ಹಾಲಿ ವೈಸ್ ಛಾನ್ಸಲರ್ ಪ್ರೊ. ವಿ.ಎಲ್. ಡಿಸೌಜಾ ಅವರ ಸ್ಥಾನಕ್ಕೆ ಪುಟ್ಟಪ್ಪ ಅವರು ನೇಮಕಗೊಂಡರು.

1953: ಕಲಾವಿದ ಬಾನಂದೂರು ಕೆಂಪಯ್ಯ ಜನನ.

1947: ಮೌಂಟ್ ಬ್ಯಾಟನ್ ಯೋಜನೆಯ ಭಾರತ ವಿಭಜನೆ ಕುರಿತು ಚರ್ಚಿಸಲು ಕಾಂಗ್ರೆಸ್ ಕಾರ್ಯಕಾರಿಣಿ ನವದೆಹಲಿಯಲ್ಲಿ ಈದಿನ ಸಭೆ ಸೇರಿತು.

1937: ಖ್ಯಾತ ವೀಣಾವಾದಕ ಆರ್. ಕೆ. ಸೂರ್ಯನಾರಾಯಣ (14-6-1937ರಿಂದ 25-12-2003) ಅವರು ಆರ್.ಎಸ್. ಕೇಶವಮೂರ್ತಿ- ವೆಂಕಟಲಕ್ಷ್ಮಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು.

 1933: ಸಾಹಿತಿ, ಮನೋವಿಜ್ಞಾನ ಪ್ರಾಧ್ಯಾಪಕ, ಜೈನ ಸಿದ್ಧಾಂತಗಳಲ್ಲಿ ಪಾಂಡಿತ್ಯ ಗಳಿಸಿದ್ದ ಡಾ. ಎ.ಎಸ್. ಧರಣೇಂದ್ರಯ್ಯ (14-6-1933ರಿಂದ 8-4-2000) ಅವರು ಸಿಂದಪ್ಪ ಶೆಟ್ಟರು- ಪದ್ಮಾವತಮ್ಮ ದಂಪತಿಯ ಪುತ್ರನಾಗಿ ಹಾಸನ ಜಿಲ್ಲೆಯ ಅಡಗೂರು ಗ್ರಾಮದಲ್ಲಿ ಜನಿಸಿದರು.

1929: ಕಲಾವಿದ ಬಿ.ವಿ. ನಂಜುಂಡಯ್ಯ ಜನನ.

1909: ಇಎಂಎಸ್ ನಂಬೂದರಿಪಾಡ್ (1908-1998) ಜನ್ಮದಿನ. ಭಾರತದ ಕಮ್ಯೂನಿಸ್ಟ್ ನಾಯಕರಾದ ಇವರು 1957ರಲ್ಲಿ ಕೇರಳದ ಮುಖ್ಯಮಂತ್ರಿಯಾಗಿ, ಜಗತ್ತಿನಲ್ಲೇ ಮುಕ್ತ ಚುನಾವಣೆ ಮೂಲಕ ಅಧಿಕಾರಕ್ಕೆ ಏರಿದ ಮೊದಲ ಕಮ್ಯೂನಿಸ್ಟ್ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆ ಗಳಿಸಿದರು.

1868: ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೇನರ್ ಜನನ. ರಕ್ತದ ಗುಂಪುಗಳನ್ನು ಕಂಡು ಹಿಡಿದುದಕ್ಕಾಗಿ ಇವರಿಗೆ ನೊಬೆಲ್ ಪ್ರಶಸ್ತಿ ಲಭಿಸಿತು.

1800: ಫ್ರೆಂಚ್ ಕ್ರಾಂತಿ ಸಂದರ್ಭದಲ್ಲಿ ಇಟಲಿಯ ಅಲೆಸ್ಸಾಂಡ್ರಿಯ ಸಮೀಪದ ಮರೆಂಗೋದಲ್ಲಿ ನಡೆದ ನಡೆದ ಸಮರದಲ್ಲಿ ಆಸ್ಟ್ರಿಯನ್ನರನ್ನು ನೆಪೋಲಿಯನ್ ಸೋಲಿಸಿದ. ಫ್ರೆಂಚ್ ಜನರಲ್ ಲೂಯಿ ಚಾರ್ಲ್ಸ್ ಡೆಸಾಯಿಕ್ಸ್ ಯುದ್ಧದಲ್ಲಿ ಹತನಾದ.

1777: ಅಮೆರಿಕನ್ ಕಾಂಗ್ರೆಸ್ `ನಕ್ಷತ್ರ ಮತ್ತು ಪಟ್ಟಿ'ಗಳಿರುವ (ಸ್ಟಾರ್ ಅಂಡ್ ಸ್ಟ್ರೈಪ್ಸ್) ಧ್ವಜವನ್ನು ಯುನೈಟೆಡ್ ಸ್ಟೇಟ್ಸ್ ಆಫ್ ಅಮೆರಿಕದ ಧ್ವಜವಾಗಿ ಅಂಗೀಕರಿಸಿತು.

Friday, June 18, 2010

Sea turtle films self ...!

Sea turtle films self ...!

Here is amazing report from Miami. According to  AFP a sea turtle activated waterprrof camara it found in the sea and filmed itself. And now it is a You Tube Sensation.

Follow the report and watch the Vidio Clicking here

Move over James Cameron. A sea turtle found a waterproof camera in the Caribbean, somehow activated the device, filmed itself and is now a YouTube sensation.

 Back in May, US Coast Guard agent Paul Schultz found a digital camera in a waterproof case on a beach in Key West, Florida, and posted images he found on its memory chip on the Internet in an attempt to find its owner.

In a video clip dated January 2010 “a turtle came across the camera, and it’s really hard to tell how, but it turns the camera on and recorded itself swimming with the camera,” Schultz said. “When I saw the video, I thought first that someone was getting attacked by a sea creature,” Schultz said.

“I thought that a diver was getting attacked,” he said. However, he later realised that the camera was just hitching a ride with a sea turtle.

“The last thing the camera owner did was shoot a video underwater, and then it goes right into the next video with the camera turning around in the water,” Schultz said.

Schultz eventually found the owner, a Dutch navy sailor who lost the camera when he was diving off the island of Aruba in November.

As the crow flies, Aruba, off the Caribbean coast of Venezuela, is some 1,800 km from Key West, Florida.

But the camera likely took a roundabout journey on the Loop Current, which would have taken it from Aruba to the coast of central America, past Belize and the Yucatan peninsula, around the western coast of Cuba, into the Gulf Stream and on to the Florida Keys.

“I’m totally amazed about this,” Schultz said.

ಇಂದಿನ ಇತಿಹಾಸ History Today ಜೂನ್ 13

ಇಂದಿನ ಇತಿಹಾಸ

ಜೂನ್ 13

 ಸೊಗಸಾದ ಪ್ರದರ್ಶನ ತೋರಿದ ಸುರಂಜಯ್ ಸಿಂಗ್ ಅವರು ಚೀನಾದ ಜುಹಾಯ್‌ನಲ್ಲಿ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಫ್ಲೈವೇಟ್ ವಿಭಾಗದಲ್ಲಿ ಭಾರತಕ್ಕೆ ಚಿನ್ನ ತಂದಿತ್ತರು.  ಈ ಮೂಲಕ 15 ವರ್ಷಗಳಿಂದ ಭಾರತ ಎದುರಿಸುತ್ತಿದ್ದ ಬಂಗಾರದ ಪದಕದ ಬರವನ್ನು ನೀಗಿಸಿದರು.

2009: ಬಿಜೆಪಿಯಲ್ಲಿ ಅಶಿಸ್ತನ್ನು ಸಹಿಸಲಾಗದು ಎಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಜನಾಥ್ ಸಿಂಗ್ ಹೇಳುತ್ತಿದ್ದಂತೆಯೇ ಪಕ್ಷದ ಇನ್ನೊಬ್ಬ ಹಿರಿಯ  ನಾಯಕ ಯಶವಂತ ಸಿನ್ಹಾ ಪಕ್ಷದೊಳಗೆ ತಮಗೆ ನೀಡಲಾಗಿರುವ ಎಲ್ಲ ಜವಾಬ್ದಾರಿಗಳೂ ಸೇರಿದಂತೆ ಉಪಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು.

2009: ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ನೂತನ ಆಯುಕ್ತರನ್ನಾಗಿ ಹಿರಿಯ ಐಎಎಸ್ ಅಧಿಕಾರಿ ಭರತ್ ಲಾಲ್ ಮೀನಾ ಅವರನ್ನು ನೇಮಿಸಲಾಯಿತು. ಇದೇ ಹುದ್ದೆಯಲ್ಲಿದ್ದ ಡಾ.ಎಸ್.ಸುಬ್ರಹ್ಮಣ್ಯ ಅವರನ್ನು ಕೃಷಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಸ್ಥಾನಕ್ಕೆ ವರ್ಗಾಯಿಸಲಾಯಿತು. ಮೀನಾ ಅವರು ಈ ಮುನ್ನ ಸಮಾಜ ಕಲ್ಯಾಣ ಇಲಾಖೆಯ ಕಾರ್ಯದರ್ಶಿಯಾಗಿದ್ದರು.

2009: ಕೆಲ ದಿನಗಳಿಂದ ಕಣ್ಮರೆಯಾಗಿದ್ದ ಕೈಗಾ ಅಣುಶಕ್ತಿ ಕೇಂದ್ರದ ವೈಜ್ಞಾನಿಕ ಅಧಿಕಾರಿ ಶವ ಈದಿನ ಕಾರವಾರ ಸಮೀಪದ ಕಾಳಿ ನದಿಯಲ್ಲಿ ಪತ್ತೆಯಾಗಿ, ನಾಪತ್ತೆ ಪ್ರಕರಣ ದುಃಖಾಂತ್ಯ ಕಂಡಿತು.

2009: ಸೊಗಸಾದ ಪ್ರದರ್ಶನ ತೋರಿದ ಸುರಂಜಯ್ ಸಿಂಗ್ ಅವರು ಚೀನಾದ ಜುಹಾಯ್‌ನಲ್ಲಿ ನಡೆದ ಏಷ್ಯನ್ ಬಾಕ್ಸಿಂಗ್ ಚಾಂಪಿಯನ್‌ಷಿಪ್‌ನ ಫ್ಲೈವೇಟ್ ವಿಭಾಗದಲ್ಲಿ ಭಾರತಕ್ಕೆ ಚಿನ್ನ ತಂದಿತ್ತರು.  ಈ ಮೂಲಕ 15 ವರ್ಷಗಳಿಂದ ಭಾರತ ಎದುರಿಸುತ್ತಿದ್ದ ಬಂಗಾರದ ಪದಕದ ಬರವನ್ನು ನೀಗಿಸಿದರು. ಫೈನಲ್‌ನಲ್ಲಿ ಸುರಂಜಯ್ 9-8 ರಲ್ಲಿ ಚೀನಾದ ಲಿ ಚಾವೊ ಅವರನ್ನು ಮಣಿಸಿದರು. ಆದರೆ ತೊಕ್‌ಚೊಮ್ ನನಾವೊ ಸಿಂಗ್ (48 ಕೆ.ಜಿ. ವಿಭಾಗ) ಮತ್ತು ಜೈ ಭಗವಾನ್ ಅವರು ಫೈನಲ್‌ನಲ್ಲಿ ಸೋಲು ಅನುಭವಿಸಿ ಬೆಳ್ಳಿಗೆ ತೃಪ್ತಿಪಟ್ಟರು. ಭಾರತಕ್ಕೆ ಏಷ್ಯನ್ ಚಾಂಪಿಯನ್‌ಷಿಪ್‌ನ ಚಿನ್ನ 1994 ರಲ್ಲಿ ಕೊನೆಯದಾಗಿ ಲಭಿಸಿತ್ತು. ಟೆಹರಾನ್‌ನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನ ಸೂಪರ್ ಹೆವಿವೇಟ್ ವಿಭಾಗದಲ್ಲಿ ರಾಜ್‌ಕುಮಾರ್ ಸಾಂಗ್ವಾನ್ ಬಂಗಾರ ಪಡೆದಿದ್ದರು. 15 ವರ್ಷಗಳ ಬಿಡುವಿನ ಬಳಿಕ ಭಾರತಕ್ಕೆ ಈಗ ಮತ್ತೆ ಚಿನ್ನ ಲಭಿಸಿತು.

2009: ಮಲಪ್ಪುರಮ್ನಲ್ಲಿ  ಹಿರಿಯ ಸಿಪಿಎಂ ನಾಯಕ ಇ.ಎಂ.ಎಸ್. ನಂಬೂದರಿಪಾಡ್ ಅವರ ಜನ್ಮಶತಮಾನೋತ್ಸವವನ್ನು ಸಿಪಿಎಂ ಪಕ್ಷವು ಸಂಭ್ರಮದಿಂದ ಆಚರಿಸಿತು. ಆದರೆ ಮುಖ್ಯಮಂತ್ರಿ ವಿ. ಎಸ್. ಅಚ್ಚುತಾನಂದನ್ ಅವರ ಅನುಪಸ್ಥಿತಿಯೊಂದಿಗೆ ಪಕ್ಷದೊಳಗಿನ ಭಿನ್ನಮತ ಸ್ಪಷ್ಟವಾಗಿ ಗೋಚರಿಸಿತು. ಎರಡು ದಿನಗಳ ಜನ್ಮಶತಮಾನೋತ್ಸವವನ್ನು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕರಾಟ್ ಅವರು ಉದ್ಘಾಟಿಸಿದರು. ಆದರೆ ರಾಜ್ಯದಲ್ಲಿ ಚುನಾವಣೆಯ ಸೋಲಿನಿಂದ ಕಳಾಹೀನವಾದ ಪಕ್ಷದ ಮುಖಂಡರಲ್ಲಿ ಅಂತಹ ಉತ್ಸಾಹ ಕಂಡುಬರಲಿಲ್ಲ.

2009: 235 ಮಂದಿಯನ್ನು ಹೊತ್ತು ಫ್ರ್ಯಾಂಕ್‌ಫರ್ಟ್‌ಗೆ ಹೊರಟುದ್ದ ಏರ್ ಇಂಡಿಯಾ ವಿಮಾನದಲ್ಲಿ ಹೊರಟ ಸಾಂಬಾರು ಘಾಟಿನಿಂದಾಗಿ ಎಚ್ಚರಿಕೆ ಗಂಟೆ ಮೊಳಗಿ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಪ್ರಸಂಗ ಏರ್ ಇಂಡಿಯಾ ವಿಮಾನ ತುರ್ತು ಭೂಸ್ಪರ್ಶ ಮಾಡಿದ ಘಟನೆ ಮುಂಬೈಯಲ್ಲಿ ಘಟಿಸಿತು. ಮುಂಜಾನೆ  2.30ರ ಸುಮಾರಿಗೆ ಫ್ರ್ಯಾಂಕ್‌ಫರ್ಟ್‌ಗೆ ಹೊರಟಿದ್ದ ವಿಮಾನದ ಸರಕು ಸಾಗಣೆ ವಿಭಾಗದಲ್ಲಿ ಪ್ರಯಾಣಿಕರೊಬ್ಬರು ಇರಿಸಿದ್ದ ಚೀಲದಿಂದ ಸಾಂಬಾರು ಪುಡಿಯ ವಾಸನೆ ಬರಲಾರಂಭಿಸಿತು. ಪರಿಣಾಮ ವಿಮಾನದ ಎಚ್ಚರಿಕೆ ಗಂಟೆ ಮೊಳಗಲಾರಂಭಿಸಿತು. ತಕ್ಷಣ ವಿಮಾನವನ್ನು ಮುಂಬೈ ನಿಲ್ದಾಣಕ್ಕೆ ವಾಪಸ್ಸು ಕರೆತರಲಾಯಿತು.

2009: ತಾಜ್ ಹೋಟೆಲ್ ಸಮೂಹದ ಒಡೆತನ ಹೊಂದಿರುವ ಇಂಡಿಯನ್ ಹೋಟೆಲ್ಸ್ ಕಂಪೆನಿಯು ಮುಂಬೈನ  ಹೊರವಲಯದಲ್ಲಿರುವ ಪುರಾತನ ಪಂಚತಾರಾ ಆಸ್ತಿಯಾದ ಸೀ ರಾಕ್ ಹೋಟೆಲನ್ನು ರೂ 680 ಕೋಟಿಗೆ ಸ್ವಾಧೀನಪಡಿಸಿಕೊಂಡಿತು. ಟಾಟಾ ಸ್ವಾಮ್ಯದ ತಾಜ್ ಸಮೂಹವು ಈದಿನ ಇದನ್ನು ಘೋಷಿಸಿತು. ದಕ್ಷಿಣ ಬಾಂದ್ರಾದಲ್ಲಿ ಸೀ ರಾಕ್ ಹೋಟೆಲ್ ನೆಲೆಗೊಂಡ ಜಾಗದ ಒಡೆತನ ಹೊಂದಿದ ಇಎಲ್‌ಇಎಲ್ ಹೋಟೆಲ್ಸ್ ಅಂಡ್ ಇನ್‌ವೆಸ್ಟ್‌ಮೆಂಟ್ಸ್‌ನಲ್ಲಿ ತಾಜ್ ಸಮೂಹ ಈಗ ಶೇ 85ರಷ್ಟು ಪಾಲು ಪಡೆದಿದೆ. ಇದರೊಂದಿಗೆ ತಾಜ್ ಸಮೂಹವು ಮುಂಬೈಯಲ್ಲಿ  ಅರೇಬಿಯನ್ ಸಮುದ್ರದತ್ತ ಮೊಗ ಮಾಡಿ ನಿಂತ ಒಟ್ಟು ನಾಲ್ಕು ಆತಿಥ್ಯ ಸಂಬಂಧಿ ಆಸ್ತಿ ಹೊಂದಿದಂತಾಯಿತು.

2009: ಕೆನಡಾದಲ್ಲಿ  ಎಂಟು ಮಂದಿ ಶ್ವೇತವರ್ಣಿಯರು  ಹನ್ನೆರಡು ವರ್ಷಗಳ ಹಿಂದೆ  ಭಾರತೀಯ ಮೂಲದ ಬಾಲಕಿಯೊಬ್ಬಳನ್ನು ಹೊಡೆದು ಕೊಂದು ನದಿಯೊಂದರಲ್ಲಿ ಎಸೆದ ಆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೊಲೆ ಆರೋಪಿಗೆ ವ್ಯಾಂಕೋವರ್ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿತು.  1997ರಲ್ಲಿ ವಿಕ್ಟೋರಿಯ ನಗರದಲ್ಲಿ 26 ವರ್ಷ ವಯಸ್ಸಿನ ಕೆಲ್ಲಿಎಲಾರ್ಡ್ ಎಂಬ ಆರೋಪಿಯು ಇತರ  ಎಂಟು ಮಂದಿ ಅಪ್ರಾಪ್ತ ವಯಸ್ಸಿನ ಶ್ವೇತ ವರ್ಣಿಯರೊಂದಿಗೆ ಸೇರಿ  14 ವರ್ಷದ  ಭಾರತೀಯ ಮೂಲದ ರೀನಾ ವಿರ್ಕ್ ಎಂಬ  ಬಾಲಕಿಯ ಮೇಲೆ  ಮಾರಣಾಂತಿಕ ಹಲ್ಲೆ ನಡೆಸಿ ಕೊಲೆ ಮಾಡಿತ್ತು. ಕೊಲೆಯಾದ ವಾರದ ನಂತರ ನದಿಯಲ್ಲಿ ತೇಲಿತ್ತು. ಘಟನೆಯನ್ನು ಗಂಭೀರವಾಗಿ ಪರಿಗಣಿಸಿದ ನ್ಯಾಯಾಲಯ ಆರೋಪಿಯು ತಪ್ಪು ಎಸಗಿರುವುದಾಗಿ ತಿಳಿಸಿ  ಜೀವಾವಧಿ ಶಿಕ್ಷೆಯ  ತೀರ್ಪು ಪ್ರಕಟಿಸಿತು.

2009: ಇರಾನ್ ಅಧ್ಯಕ್ಷರಾಗಿ ಆಡಳಿತಾರೂಢ ಅಧ್ಯಕ್ಷ ಮಹಮದ್ ಅಹಮ ದಿನೆಜಾದ್ ಪುನರಾಯ್ಕೆಯಾಗಿದ್ದಾರೆ ಎಂದು ಆಂತರಿಕ ಸಚಿವಾಲಯ ಪ್ರಕಟಿಸಿತು. ಹಿಂದಿನ ದಿನ ನಡೆದ ಸಾರ್ವತ್ರಿಕ ಚುನಾವಣೆಗಳಲ್ಲಿ ಇರಾನ್ ಇತಿಹಾಸದಲ್ಲೇ ಪ್ರಥಮ ಬಾರಿಗೆ ಶೇಕಡಾ 80ರಷ್ಟು ಮತದಾನ ನಡೆದಿತ್ತು. ಅಹಮದಿನೆಜಾದ್‌ಗೆ ಗ್ರಾಮೀಣ ಮತ್ತು ನಗರ ಪ್ರದೇಶಗಳೆರಡರಲ್ಲೂ ಭಾರಿ ಜನಬೆಂಬಲ ವ್ಯಕ್ತವಾಗಿ, ಅವರು ಶೇಕಡಾ 65ರಷ್ಟು ಮತ ಪಡೆದಿದ್ದರು.

2008: ವಕ್ರ ಅಥವಾ ಸೊಟ್ಟ ಪಾದ ಸರಿಪಡಿಸಲು ಉನ್ನತ ಮಟ್ಟದ ಚಿಕಿತ್ಸೆಯನ್ನು ಉಚಿತವಾಗಿ ನೀಡುವ ಸರ್ಕಾರಿ ಮತ್ತು ಖಾಸಗಿ ಸಹ ಭಾಗಿತ್ವದ `ಹೆಜ್ಜೆ ಗುರುತು' ಯೋಜನೆಗೆ ಬೆಂಗಳೂರಿನಲ್ಲಿ ಚಾಲನೆ ನೀಡಲಾಯಿತು. ಹೆಚ್ಚುವರಿ ಪಾದಗಳನ್ನು ಹೊಂದಿದ್ದ ಬಾಲಕಿ ಲಕ್ಷ್ಮಿಗೆ ಅಪರೂಪದ ಶಸ್ತ್ರಚಿಕಿತ್ಸೆ ನೆರವೇರಿಸಿ ಅಂತಾರಾಷ್ಟ್ರೀಯ ಖ್ಯಾತಿ ಗಳಿಸಿದ ನಗರದ  `ಸ್ಪರ್ಶ' ಆಸ್ಪತ್ರೆಯು ರಾಜ್ಯ ಸರ್ಕಾರದ ಜತೆಗೂಡಿ ಈ ಯೋಜನೆಯನ್ನು ಕಾರ್ಯರೂಪಕ್ಕೆ ತರುವುದು.

2007: ಮಹಾತ್ಮ ಗಾಂಧಿ ಮೊಮ್ಮಗ ರಾಮಚಂದ್ರ ಗಾಂಧಿ (70) ಅವರು ನವದೆಹಲಿಯ ಭಾರತೀಯ ಅಂತಾರಾಷ್ಟ್ರೀಯ ಕೇಂದ್ರದ (ಐಸಿಸಿ) ಕೊಠಡಿಯಲ್ಲಿ ಮೃತರಾದರು. ಪಶ್ಚಿಮ ಬಂಗಾಳದ ರಾಜ್ಯಪಾಲ ಗೋಪಾಲಕೃಷ್ಣ ಗಾಂಧಿ ಅವರ ಹಿರಿಯ ಸೋದರರಾದ ರಾಮಚಂದ್ರ ಗಾಂಧಿ ಜೂನ್ 10ರಂದಷ್ಟೇ ಇಲ್ಲಿಗೆ ಬಂದಿದ್ದರು. ಪ್ರಿನ್ಸ್ ಟನ್ ವಿವಿಯ ಮಾಜಿ ಪ್ರಾಧ್ಯಾಪಕ, ಮಹಾತ್ಮ ಗಾಂಧಿಯವರ ಕೊನೆಯ ಮಗ ದೇವದಾಸ್ ಗಾಂಧಿ ಅವರ ಪುತ್ರರಾದ ರಾಮಚಂದ್ರ ಗಾಂಧಿ ಹಲವಾರು ಪುಸ್ತಕ, ನಾಟಕಗಳನ್ನು ರಚಿಸಿದ್ದಲ್ಲದೆ ತಾತ ಮಹಾತ್ಮ ಗಾಂಧಿ ಬಗ್ಗೆ ಚಲನಚಿತ್ರವನ್ನೂ ನಿರ್ಮಿಸಿದ್ದರು. ಇವರ ತಾಯಿ ಲಕ್ಷ್ಮಿ ಸ್ವಾತಂತ್ರ್ಯ ಹೋರಾಟಗಾರ ರಾಜಾಜಿಯವರ ಪುತ್ರಿ.

2007: ಆಫ್ರಿಕಾದ ಆಧುನಿಕ ಸಾಹಿತ್ಯದ ಪಿತಾಮಹ ಎಂದೇ ಗುರುತಿಸಲಾಗಿರುವ ನೈಜೀರಿಯಾ ಸಂಜಾತ ಚಿನುವಾ ಅಚಿಯೆ ಅವರು 2007ನೇ ಸಾಲಿನ ಮ್ಯಾನ್ ಬೂಕರ್ ಅಂತಾರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆಯಾದರು. 60ಸಾವಿರ ಪೌಂಡ್ ಮೊತ್ತದ ಈ ಪ್ರಶಸ್ತಿಯನ್ನು ಕಾದಂಬರಿ ಕ್ಷೇತ್ರಕ್ಕೆ ನೀಡಿದ ಅಸಾಧಾರಣ ಕೊಡುಗೆಗಾಗಿ ಪ್ರತಿ ಎರಡು ವರ್ಷಕ್ಕೊಮ್ಮೆನೀಡಲಾಗುತ್ತದೆ. 2005ರಲ್ಲಿ ಮೊತ್ತ ಮೊದಲ ಬಾರಿಗೆ ಈ ಪ್ರಶಸ್ತಿಯನ್ನು ಇಸ್ಮಾಯಿಲ್ ಕದರೆ ಅವರಿಗೆ ನೀಡಲಾಗಿತ್ತು. ಅಚಿಬೆ ಅವರು 1958ರಲ್ಲಿ ಬರೆದ `ಥಿಂಗ್ಸ್ ಫಾಲ್ ಅಪಾರ್ಟ್' ಕಾದಂಬರಿ ವಿಶ್ವದಾದ್ಯಂತ ಖ್ಯಾತಿ ಗಳಿಸಿದ್ದು ಪ್ರಪಂಚದಾದ್ಯಂತ ಇದರ ಹತ್ತು ದಶಲಕ್ಷ ಪುಸ್ತಕಗಳು ಮಾರಾಟವಾಗಿವೆ.

2007: ಖ್ಯಾತ ಮುತ್ಸದ್ದಿ, ನೊಬೆಲ್ ಪ್ರಶಸ್ತಿ ವಿಜೇತ ಶಿಮನ್ ಪೆರೆಸ್ ಅವರು ಇಸ್ರೇಲಿನ ಅಧ್ಯಕ್ಷರಾಗಿ ಆಯ್ಕೆಯಾದರು.

2007: ಭೂಮಿಯಿಂದ ಸುಮಾರು 780 ಲಕ್ಷ ಜ್ಯೋತಿರ್ ವರ್ಷ ದೂರದಲ್ಲಿದ್ದ ಆಕಾಶಗಂಗೆಯ ಪ್ರಮುಖ ನಕ್ಷತ್ರವೊಂದು ಎರಡು ಬಾರಿ ಸ್ಫೋಟಗೊಂಡ ಪರಿಣಾಮವಾಗಿ ತನ್ನ ಅಸ್ತಿತ್ವ ಕಳೆದುಕೊಂಡಿದೆ ಎಂದು ಖಗೋಳ ಶಾಸ್ತ್ರಜ್ಞರು ವಾಷಿಂಗ್ಟನ್ನಿನಲ್ಲಿ ಬಹಿರಂಗಪಡಿಸಿದರು. 2004 ಮತ್ತು 2006ರಲ್ಲಿ ಈ ನಕ್ಷತ್ರ ಎರಡು ಸಲ ಭಾರಿ ಪ್ರಮಾಣದಲ್ಲಿ ಸ್ಫೋಟಗೊಂಡಿತ್ತು, ಇದು ಸೂರ್ಯನಿಗಿಂತ 50ರಿಂದ 100 ಪಟ್ಟು ದೊಡ್ಡದಾಗಿತ್ತು ಆಂತರಿಕ ಸ್ಫೋಟದ ಕಾರಣ ಇದು ಸಂಪೂರ್ಣವಾಗಿ ನಾಶವಾಗಿದೆ ಎಂದು ಖಗೋಳ ತಜ್ಞರು ನಿಯತಕಾಲಿಕವೊಂದರಲ್ಲಿ ತಿಳಿಸಿದರು.

2007: ಸಾಹಿತಿ ಎಚ್. ವಿ. ನಾಗರಾಜರಾವ್ ಅವರ ಅನುವಾದಿತ ಕೃತಿ `ಸಾರ್ಥ'ವು 2006ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಆಯ್ಕೆಯಾಯಿತು. ಎಸ್.ಎಲ್. ಭೈರಪ್ಪ ಅವರ ಕಾದಂಬರಿ `ಸಾರ್ಥ'ವನ್ನು ನಾಗರಾಜರಾವ್ ಅವರು ಸಂಸ್ಕೃತಕ್ಕೆ ಅನುವಾದಿಸಿದ್ದಾರೆ.

 2006: ಒರಿಸ್ಸಾದ ಭೈತರನಿಕಾ ವನ್ಯಪ್ರಾಣಿ ಮತ್ತು ಸಾಗರ ಜೀವಿಗಳ ಧಾಮದಲ್ಲಿನ ಮೊಸಳೆ ಸಂರಕ್ಷಣಾ ಕೇಂದ್ರದಲ್ಲಿ ವಿಶ್ವದಲ್ಲಿಯೇ ಅತಿ ದೊಡ್ಡದಾದ 23 ಅಡಿಗಳಷ್ಟು ಉದ್ದದ ಮೊಸಳೆ ಇರುವುದು ಬೆಳಕಿಗೆ ಬಂತು. ವಿಶ್ವ ವಿಖ್ಯಾತ ವನ್ಯ ಜೀವಿ ಧಾಮದಲ್ಲಿ ನಡೆಸಿದ ಪ್ರಾಣಿಗಳ ಗಣತಿ ಸಂದರ್ಭದಲ್ಲಿ ಇದು ಪತ್ತೆಯಾಗಿದ್ದು, 2006ರ ಸಾಲಿನ ಗಿನ್ನೆಸ್ ದಾಖಲೆಯಲ್ಲೂ ಸೇರ್ಪಡೆಯಾಗಿದೆ ಎಂದು ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಎಸ್. ಸಿ. ಮೊಹಂತಿ ಈ ದಿನ ಪ್ರಕಟಿಸಿದರು.

2006: ಸುಪ್ರೀಂಕೋರ್ಟ್ ಆದೇಶದ ಮೇರೆಗೆ ದಂಡದ ರೂಪದಲ್ಲಿ ನೈಸ್ ಕಂಪೆನಿಗೆ ರಾಜ್ಯ ಸರ್ಕಾರ ನೀಡಿದ್ದ 5 ಲಕ್ಷ ರೂಪಾಯಿ ಮೊತ್ತದ ಚೆಕ್ ಬೌನ್ಸ್ ಆಯಿತು. ಚೆಕ್ಕನ್ನು ಕೆನರಾ ಬ್ಯಾಂಕಿಗೆ ಡೆಪಾಸಿಟ್ ಮಾಡಲಾಗಿತ್ತು.

2006: ಬಹುಮಹಡಿ ವಾಣಿಜ್ಯ ಕಟ್ಟಡ ನಿರ್ಮಾಣಕ್ಕೆ ಅವಕಾಶ ಮಾಡಿಕೊಡುವ ಸಲುವಾಗಿ ಲಾಹೋರ್ ನಗರದಲ್ಲಿದ್ದ ಏಕಮಾತ್ರ ಹಿಂದೂ ದೇವಾಲಯ `ಕೃಷ್ಣ ಮಂದಿರ'ವನ್ನು ಕೆಡವಿ ಹಾಕಲಾಗಿದೆ ಎಂದು ಇಸ್ಲಾಮಾಬಾದಿನ `ಡಾನ್' ವರದಿ ಮಾಡಿತು.

1996: ಜನತಾದಳ ಮುಖಂಡ ಹಾಗೂ ಕರ್ನಾಟಕದ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರನ್ನು ಆರು ವರ್ಷಗಳ ಅವಧಿಗೆ ಪಕ್ಷದಿಂದ ಉಚ್ಚಾಟಿಸಲಾಯಿತು. ಪಕ್ಷ ವಿರೋಧಿ ಚಟುವಟಿಕೆಗಳಿಗಾಗಿ ಅಧ್ಯಕ್ಷ ಲಾಲು ಪ್ರಸಾದ್ ಅವರು ಈ ಕ್ರಮ ಕೈಗೊಂಡರು.

1966: ಶಂಕಿತ ಅಪರಾಧಿಗಳ ಸಾಂವಿಧಾನಿಕ ಹಕ್ಕುಗಳಿಗೆ ಸಂಬಂಧಿಸಿದಂತೆ ಅಮೆರಿಕದ ಸುಪ್ರೀಂಕೋರ್ಟ್ ಮಿರಾಂಡ ವರ್ಸಸ್ ಅರಿಝೋನಾ ಪ್ರಕರಣದಲ್ಲಿ ಚಾರಿತ್ರಿಕ ತೀರ್ಪು ನೀಡಿತು. ಪೊಲೀಸರು ಪ್ರಶ್ನಿಸುವ ಮುನ್ನ ಶಂಕಿತ ಅಪರಾಧಿಗಳಿಗೆ ಅವರ ಸಾಂವಿಧಾನಿಕ ಹಕ್ಕುಗಳ ಬಗ್ಗೆ ತಿಳಿಸಬೇಕು ಎಂದು ಕೋರ್ಟ್ ಆದೇಶ ನೀಡಿತು. ಈ ತೀರ್ಪಿನ ಪ್ರಕಾರ ಬಂಧಿತ ಅಪರಾಧಿಗಳನ್ನು ಪ್ರಶ್ನಿಸುವ ಮುನ್ನ ಅವರಿಗೆ ಮೌನ ವಹಿಸುವ, ಅವರು ನೀಡುವ ಯಾವುದೇ ಹೇಳಿಕೆಯನ್ನು ಅವರ ವಿರುದ್ಧ ಬಳಸುವ ಸಾಧ್ಯತೆ ಇರುವ ಬಗ್ಗೆ ಹಾಗೂ ಅವರಿಗೆ ಅಟಾರ್ನಿಯೊಬ್ಬರ ಜತೆ ಸಮಾಲೋಚಿಸುವ ಹಕ್ಕು ಇದೆ ಎಂದು ಪೊಲೀಸರು ತಿಳಿಸಬೇಕು. ಈ ತೀರ್ಪು `ಮಿರಾಂಡಾ ವಾರ್ನಿಂಗ್ಸ್' ಎಂದೇ ಖ್ಯಾತಿ ಪಡೆದಿದೆ.

1965: ನಟ, ನಿರ್ದೇಶಕ, ನಾಟಕಕಾರ, ಹಾಸ್ಯ ನಾಟಕಗಳ ಮೂಲಕ ರಾಜ್ಯದಾದ್ಯಂತ ಮನೆ ಮಾತಾಗಿರುವ ಯಶವಂತ ಸರದೇಶಪಾಂಡೆ ಅವರು ಶ್ರೀಧರರಾವ್ ಗೋಪಾಲರಾವ ಸರದೇಶಪಾಂಡೆ- ಕಲ್ಪನಾದೇವಿ ದಂಪತಿಯ ಮಗನಾಗಿ ವಿಜಾಪುರ ಜಿಲ್ಲೆಯ ಬಸವನ ಬಾಗೇವಾಡಿಯ ಉಕ್ಕಲಿಯಲ್ಲಿ ಜನಿಸಿದರು.

1963: ಕಲಾವಿದ ಎಂ. ಗುರುರಾಜ ಜನನ.

1962: ಸಾಹಿತಿ ಸುರೇಶ ಅಂಗಡಿ ಜನನ.

1960: ಕಲಾವಿದ ಶಿವಕುಮಾರ ಆರಾಧ್ಯ ಜನನ.

1959: ಕಲಾವಿದ ಆರ್. ಕೆ. ಪದ್ಮನಾಭ ಜನನ.

1958: ಸಾಹಿತಿ ಜಯರಾಮ ಕಾರಂತ ಜನನ.

1943: ಕಲಾವಿದೆ ಎಂ.ಜೆ. ಕಮಲಾಕ್ಷಿ ಜನನ.

1941: ಸಾಹಿತಿ ಜ.ಹೋ. ನಾರಾಯಣಸ್ವಾಮಿ ಜನನ.

1940: ಜಲಿಯನ್ ವಾಲಾ ಬಾಗ್ ಹತ್ಯಾಕಾಂಡದ ಸಂದರ್ಭದಲ್ಲಿ ಪಂಜಾಬ್ ಗವರ್ನರ್ ಆಗಿದ್ದ ಮೈಕೆಲ್ ಒ'ಡಾಯರ್ ನನ್ನು ಕೊಂದುದಕ್ಕಾಗಿ ಭಾರತದ ಕ್ರಾಂತಿಕಾರಿ ಹೋರಾಟಗಾರ ಊಧಮ್ ಸಿಂಗ್ ಅವರನ್ನು ಲಂಡನ್ನಿನಲ್ಲಿ ಗಲ್ಲಿಗೇರಿಸಲಾಯಿತು.

1908: ಮುಜಾಫರ್ ಪುರ ಬಾಂಬ್ ಸ್ಫೋಟಕ್ಕಾಗಿ ಭಾರತೀಯ ಕ್ರಾಂತಿಕಾರಿ ಹೋರಾಟಗಾರ ಖುದೀರಾಮ್ ಬೋಸ್ ಅವರಿಗೆ ಮರಣದಂಡನೆ ವಿಧಿಸಲಾಯಿತು. ಈ ಬಾಂಬ್ ಸ್ಫೋಟದಲ್ಲಿ ಇಬ್ಬರು ಬ್ರಿಟಿಷ್ ಮಹಿಳೆಯರು ಮೃತರಾಗಿದ್ದರು.

1879: ಖ್ಯಾತ ಕ್ರಾಂತಿಕಾರಿ ಗಣೇಶ ದಾಮೋದರ ಸಾವರ್ಕರ್ ಜನನ.

1858: ಹದಿನೆಂಟನೆಯ ಶತಮಾನದ ಉತ್ತರಾರ್ಧದಲ್ಲಿ ಕನ್ನಡಕ್ಕಾಗಿ ದುಡಿಯವುದರೊಂದಿಗೆ ಸಮಾಜ ಸೇವೆಯನ್ನೂ ಕೈಂಕರ್ಯವನ್ನಾಗಿ ಮಾಡಿಕೊಂಡಿದ್ದ ಬುದ್ಧಯ್ಯ ಪುರಾಣಿಕ (13-6-1858ರಿಂದ 4-5-1959) (ಪೂರ್ಣ ಹೆಸರು ಶಿವಮೂರ್ತಿ ಬುದ್ಧಯ್ಯ ಸ್ವಾಮಿ ಮಗಿಪ್ರಭುದೇವ ಪುರಾಣಿಕ) ಅವರು ಮಗಿ ಪ್ರಭುದೇವರು-ಲಿಂಗಮ್ಮ ದಂಪತಿಯ ಪುತ್ರನಾಗಿ ವಿಜಾಪುರ ಜಿಲ್ಲೆಯ ತೇರದಾಳದಲ್ಲಿ ಈದಿನ ಜನಿಸಿದರು. ಕನ್ನಡ, ಮರಾಠಿ, ಇಂಗ್ಲಿಷ್, ಸಂಸ್ಕೃತದಲ್ಲಿವಿಶೇಷ ಪಾಂಡಿತ್ಯ ಹೊಂದಿದ್ದ ಪುರಾಣಿಕ ಕನ್ನಡ ಹಾಗೂ ಮರಾಠಿಯಲ್ಲಿ ಹಲವಾರು ಕೃತಿಗಳನ್ನು ರಚಿಸಿದರು.

1842: ರಾಣಿ ವಿಕ್ಟೋರಿಯಾ ಮತ್ತು ರಾಜಕುಮಾರ ಆಲ್ಬರ್ಟ್ ಸ್ಲೌಗ್ನಿಂದ ಪ್ಯಾಡ್ಡಿಂಗ್ಟನ್ ವರೆಗೆ ಗ್ರೇಟ್ ವೆಸ್ಟರ್ನ್ ರೈಲ್ವೇಯಲ್ಲಿ ಪ್ರಯಾಣ ಮಾಡಿದರು. ಈ ರೀತಿ ಪ್ರಯಾಣಕ್ಕೆ ರೈಲುಗಾಡಿಯನ್ನು ಬಳಸಿದ ಮೊದಲ ಬ್ರಿಟಿಷ್ ರಾಣಿ ಇವರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Thursday, June 17, 2010

ಇಂದಿನ ಇತಿಹಾಸ History Today ಜೂನ್ 12

ಇಂದಿನ ಇತಿಹಾಸ

ಜೂನ್ 12

ಹಲವು ರಾತ್ರಿಗಳ ಸಂಪೂರ್ಣ ನಿದ್ರಾಹೀನತೆಯ ನಂತರ ಸಂಭವಿಸಬಹುದಾದ ಅಪಾಯವನ್ನು ಒಂದು ಗುಟುಕು 'ಕೆಫಿನ್' (ಕಾಫಿ ಮತ್ತು ಟೀಯ ಉತ್ತೇಜನಾಕಾರಿ ಸಸ್ಯಕ್ಷಾರಸತ್ವ) ಸೇವನೆ ತಡೆಯಬಲ್ಲದು ಎಂದು ಸಂಶೋಧನೆಯೊಂದು ಬಹಿರಂಗಪಡಿಸಿತು.

2009: ಹಲವು ರಾತ್ರಿಗಳ ಸಂಪೂರ್ಣ ನಿದ್ರಾಹೀನತೆಯ ನಂತರ ಸಂಭವಿಸಬಹುದಾದ ಅಪಾಯವನ್ನು ಒಂದು ಗುಟುಕು 'ಕೆಫಿನ್' (ಕಾಫಿ ಮತ್ತು ಟೀಯ ಉತ್ತೇಜನಾಕಾರಿ ಸಸ್ಯಕ್ಷಾರಸತ್ವ) ಸೇವನೆ ತಡೆಯಬಲ್ಲದು ಎಂದು ಸಂಶೋಧನೆಯೊಂದು ಬಹಿರಂಗಪಡಿಸಿತು. ದಿಢೀರ್ ಸಂಭವಿಸುವ ಅಪಾಯಗಳನ್ನು ಅಳೆಯುವ ಕಂಪ್ಯೂಟರೀಕೃತ ವ್ಯವಸ್ಥೆ 'ಬಾರ್ಟ್' (ಬಲೂನ್ ಅನಲಾಗ್ ರಿಸ್ಕ್ ಟಾಸ್ಕ್) ಅನ್ವಯ, 'ತೀವ್ರ ನಿದ್ರಾಹೀನತೆಯ ನಂತರವೂ ಕೆಫಿನ್ ಸೇವಿಸಿದ ವ್ಯಕ್ತಿ ಮಾತ್ರ ಹೆಚ್ಚಿನ ತೊಂದರೆ ಎದುರಿಸುವ ನಡವಳಿಕೆ ತೋರಿಸುವುದಿಲ್ಲ' ಎಂಬುದನ್ನು ಸಂಶೋಧನಾ ಫಲಿತಾಂಶ ಪ್ರಕಟಪಡಿಸಿತು. ಈ ಸಂಶೋಧನಾ ಪ್ರಬಂಧವನ್ನು (ಸ್ಲೀಪ್ 2009) ವೃತ್ತಿಪರ ನಿದ್ರಾ ಸಂಸ್ಥೆಗಳ ಒಕ್ಕೂಟದ 23ನೇ ವಾರ್ಷಿಕ ಸಭೆಯಲ್ಲಿ ಮಂಡಿಸಲಾಯಿತು.

2009: ಪಾಕಿಸ್ಥಾನದ ನೌಷೇರಾ ನಗರದ ಮಸೀದಿ ಆವರಣದಲ್ಲಿ ಹಾಗೂ ಲಾಹೋರಿನ ಧಾರ್ಮಿಕ ಸಂಸ್ಥೆಯೊಂದರ ಅಂಗಣಲ್ಲಿ ನಡೆದ ಪ್ರತ್ಯೇಕ ಆತ್ಮಾಹುತಿ ಬಾಂಬ್ ದಾಳಿಯಲ್ಲಿ ತಾಲಿಬಾನ್ ವಿರೊಧಿ ಧರ್ಮಗುರು ಸೇರಿದಂತೆ ಹನ್ನೊಂದು ಮಂದಿ ಮೃತರಾದರು. 'ಆತ್ಮಾಹುತಿ ಬಾಂಬ್ ಸಂಸ್ಕೃತಿ ಇಸ್ಲಾಮ್ ಧರ್ಮಕ್ಕೆ ವಿರುದ್ಧ' ಎಂದು ಫತ್ವಾ ಹೊರಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಧರ್ಮಗುರು ಮೌಲಾನ ಸರ್‌ಫ್ರಾಜ್ ನಯೀಮ್ ಹಾಗೂ ಇತರ ಮೂವರು ಲಾಹೋರ್‌ನ ಜೈಮಾ ನಯೀಮಾ ಧರ್ಮ ಸಂಘಟನೆಯ ಆವರಣದಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ ಮೃತರಾದರು.

2009: ಪಾಕಿಸ್ಥಾನದಲ್ಲಿನ ಭಯೋತ್ಪಾದನೆ ಹಾಗೂ ಪ್ರತ್ಯೇಕತಾವಾದವನ್ನು ನಿಗ್ರಹಿಸುವ ಸಲುವಾಗಿ 300 ದಶಲಕ್ಷ ಡಾಲರ್ ಮೌಲ್ಯದ ಶಸ್ತ್ರಾಸ್ತ್ರ ಹಾಗೂ ಇತರ ಸಲಕರಣೆಗಳನ್ನು ಚೀನಾದಿಂದ ಖರೀದಿಸಲು ಪಾಕಿಸ್ಥಾನ ಒಪ್ಪಂದವೊಂದಕ್ಕೆ ಸಹಿ ಹಾಕಿದೆ ಎಂದು ಪಾಕಿಸ್ಥಾನದ ಆಂತರಿಕ ವ್ಯವಹಾರಗಳ ಸಚಿವ ರೆಹಮಾನ್ ಮಲ್ಲಿಕ್ ಅವರು ಬೀಜಿಂಗ್‌ನಲ್ಲಿ ಪ್ರಕಟಿಸಿದರು.

2009: ಮಾನವ ತ್ಯಾಜ್ಯದಿಂದ ಕಡಿಮೆ ವೆಚ್ಚದಲ್ಲಿ ಜೈವಿಕ ಅನಿಲ ಉತ್ಪಾದಿಸುವ ಶೌಚಾಲಯ ತಾಂತ್ರಿಕತೆಯನ್ನು ಪ್ರಥಮ ಬಾರಿಗೆ ಅಭಿವೃದ್ಧಿ ಪಡಿಸಿದ ಸುಲಭ್ ಅಂತರರಾಷ್ಟ್ರಿಯ ಸಂಸ್ಥೆಯ ಸಂಸ್ಥಾಪಕ ಬಿಂದೇಶ್ವರ ಪಾಠಕ್ ಅವರಿಗೆ ವಿಶ್ವಸಂಸ್ಥೆ ಪ್ರತಿಷ್ಠಿತ ಪುನರ್‌ಬಳಕೆ ಇಂಧನ ಪ್ರಶಸ್ತಿ ನೀಡಿತು. ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಯಿತು.

2009: ನೇಪಾಳದ ಮಾಜಿ ಉಪ ಪ್ರಧಾನಿ ಹಾಗೂ ನೇಪಾಳಿ ಕಾಂಗ್ರೆಸ್ಸಿನ ಹಿರಿಯ ಮುಖಂಡರಾದ ಶೈಲಜಾ ಆಚಾರ್ಯ (65) ದೀರ್ಘ ಕಾಲದ ಅಸ್ವಸ್ಥತೆಯ ನಂತರ ಕಠ್ಮಂಡುವಿನಲ್ಲಿ ನಿಧನರಾದರು. ಹಲವು ವರ್ಷಗಳಿಂದ ನ್ಯೂಮೋನಿಯಾ ಹಾಗೂ ಮರೆಗುಳಿ ರೋಗದಿಂದ ಬಳಲುತ್ತಿದ್ದ ಅವರನ್ನು ಎರಡು ದಿನ ಹಿಂದೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅದಕ್ಕೂ ಮೊದಲ ಅವರು ಬ್ಯಾಂಕಾಕ್ ಮತ್ತು ಕಠ್ಮಂಡು ಆಸ್ಪತ್ರೆಗಳಲ್ಲಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದರು. ಬಾಲಿವುಡ್ ನಟಿ ಮೊನಿಷಾ ಕೊಯಿರಾಲ ಅವರ ಸಂಬಂಧಿಯಾದ ಶೈಲಜಾ ಅವರು, ದೊರೆ ಮಹೇಂದ್ರ ಅವರಿಗೆ ಕಪ್ಪು ಬಾವುಟ ತೋರಿಸಿದ ಕಾರಣಕ್ಕೆ 1961ರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದರು.

2009: ನವೀಕರಣಕ್ಕಾಗಿ ಕೆಲ ತಿಂಗಳುಗಳಿಂದ ಮುಚ್ಚಿದ್ದ ನವದೆಹಲಿಯ ಶಂಕರ್ ಅಂತಾರಾಷ್ಟ್ರೀಯ ಬೊಂಬೆ ಸಂಗ್ರಹಾಲಯವಾದ ದೇಶದ ಅತಿದೊಡ್ಡ ಬೊಂಬೆ ಮ್ಯೂಸಿಯಂ ಸಾರ್ವಜನಿಕರ ವೀಕ್ಷಣೆಗೆ ಮುಕ್ತವಾಯಿತು. ಹರಪ್ಪ ನಾಗರಿಕತೆಯ ಬೊಂಬೆಯಿಂದ ಹಿಡಿದು ಬಾರ್ಬಿವರೆಗಿನ ಬೊಂಬೆಗಳ ಮಾಯಾಲೋಕವೊಂದು ಇಲ್ಲಿ ಮೈದಳೆದಿದೆ. ಅಲ್ಲಾವ್ದದೀನ್, ಆಲಿಬಾಬಾ, ಸ್ನೋವೈಟ್, ಸಿಂಡ್ರೆಲಾ ಬೊಂಬೆಗಳಂತೂ ಮನಸೆಳೆಯುತ್ತವೆ. ಜತೆಗೆ ಇವುಗಳ ಬಗೆಗಿನ ಸಮಗ್ರ ಮಾಹಿತಿ ಇರುವುದು ಕೂಡ ಈ ಸಂಗ್ರಹಾಲಯದ ವಿಶೇಷ. ಅಂತಾರಾಷ್ಟ್ರೀಯ ಬೊಂಬೆ ಸಂಗ್ರಹಾಲಯ 1985ರಲ್ಲಿ ಸರ್ಕಾರ ಮತ್ತು ರೋಟರಿ ಸಂಸ್ಥೆ ಸಹಯೋಗದಲ್ಲಿ ತಲೆ ಎತ್ತಿತು. ಇಲ್ಲಿ 90 ದೇಶಗಳ 7000ಕ್ಕೂ ಹೆಚ್ಚು ಬೊಂಬೆಗಳಿವೆ.

2008: ಪ್ರತ್ಯೇಕ ರಾಜ್ಯಕ್ಕೆ ಆಗ್ರಹಿಸಿ ಗೂರ್ಖಾ ಜನಮುಕ್ತಿ ಮೋರ್ಚಾ (ಜಿಜೆಎಂ) ಕಾರ್ಯಕರ್ತರು ಸ್ಥಳೀಯ ಜನರು, ಪ್ರವಾಸಿಗರು ಮತ್ತು ಪೊಲೀಸರ ಮೇಲೆ ದಾಳಿ ನಡೆಸಿದ ಹಿನ್ನೆಲೆಯಲ್ಲಿ ಸಿಲಿಗುರಿ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಶಾಂತಿ ಪಾಲನೆಗಾಗಿ ಸೇನೆ ಕರೆಸಲಾಯಿತು.

2007: ಗಿನ್ನೆಸ್ ದಾಖಲೆ ನಿರ್ಮಾಣದ ಸಲುವಾಗಿ ಚೆನ್ನೈಯ ಕಾಸ್ಮೋಪಾಲಿಟನ್ ಕ್ಲಬ್ ಈಜುಗೊಳದಲ್ಲಿ 15 ತಿಂಗಳ ಮಗುವೊಂದು (ಒಂದೂ ಕಾಲು ವರ್ಷ) ನಾಲ್ಕು ಮೀಟರ್ ದೂರವನ್ನು ಈಜಿತು. 2006ರ ಮಾರ್ಚ್ 13ರಂದು ಜನಿಸಿದ ಮಹರಂತ್ ಕಮಲಾಕರ್ ಈ ಸಾಧನೆ ಮಾಡಿದ ಪೋರ. ಈ ಬಾಲಕನ ಹೆತ್ತವರ ಪ್ರಕಾರ ಆಸ್ಟ್ರೇಲಿಯಾದ ಬಾಲಕನೊಬ್ಬ ಎರಡೂವರೆ ವರ್ಷದವನಾಗಿದ್ದಾಗ 80 ನಿಮಿಷಗಳ ಕಾಲ ತೇಲಾಡಿದ್ದಷ್ಟೇ ಈವರೆಗಿನ ದಾಖಲೆ.

2007: ಬಾಂಗ್ಲಾದೇಶದ ಚಿತ್ತಗಾಂಗ್ ಪ್ರದೇಶದಲ್ಲಿ ಭೂಕುಸಿತದಲ್ಲಿ ಸತ್ತವರ ಸಂಖ್ಯೆ 103ಕ್ಕೆ ಏರಿತು.

2007: ವಿಶ್ವಸಂಸ್ಥೆಯ ಸಮರ ಅಪರಾಧಗಳ ನ್ಯಾಯಮಂಡಳಿಯು ಕ್ರೊಯೇಷಿಯಾದ ಮಾಜಿ ಸೆರ್ಬ್ ಬಂಡಾಯ ನಾಯಕ ಮಿಲನ್ ಮಾರ್ಟಿಕ್ ಅವರಿಗೆ 35 ವರ್ಷಗಳ ಸೆರೆವಾಸದ ಶಿಕ್ಷೆಯನ್ನು ವಿಧಿಸಿತು. ಕ್ರೊಯೇಷಿಯಾದಲ್ಲಿ ಪ್ರತ್ಯೇಕ ಸೆರ್ಬ್ ರಾಷ್ಟ್ರ ಸ್ಥಾಪನೆಯ ಸಲುವಾಗಿ ಕ್ರೊಯೇಷಿಯನ್ನರು, ಮುಸ್ಲಿಮರು ಮತ್ತು ಸೆರ್ಬೇತರ ನಾಗರಿಕರ ಕೊಲೆ, ಚಿತ್ರಹಿಂಸೆ ನಡೆಸಿದ್ದರು ಎಂದು ಆಪಾದಿಸಲಾಗಿತ್ತು.

2007: ವೇತನ ಬಾಕಿ ಹಾಗೂ ಬಡ್ತಿಗೆ ಸಂಬಂಧಿಸಿದಂತೆ ಭಾರತೀಯ ವಿಮಾನಯಾನ ಸಂಸ್ಥೆ `ಇಂಡಿಯನ್' ಆಡಳಿತ ಮಂಡಳಿಯು ತಾನು ನೀಡಿದ್ದ ಭರವಸೆಗಳನ್ನು ಹಿಂದಕ್ಕೆ ತೆಗೆದುಕೊಂಡಿದೆ ಎಂದು ಆಪಾದಿಸಿ ಸಂಸ್ಥೆಯ 12,000ಕ್ಕೂ ಹೆಚ್ಚು ಮಂದಿ ಭೂ ಸಿಬ್ಬಂದಿ ರಾತ್ರಿ ಮಿಂಚಿನ ಮುಷ್ಕರ ಆರಂಭಿಸಿದರು.

2006: ಹಿರಿಯ ಪತ್ರಕರ್ತ ಎಸ್.ವಿ. ಹೆಗಡೆ (74) ಹುಬ್ಬಳ್ಳಿಯಲ್ಲಿ ಹೃದಯಾಘಾತದಿಂದ ನಿಧನರಾದರು. ಸಂಯುಕ್ತ ಕರ್ನಾಟಕದ ಹುಬ್ಬಳ್ಳಿ ಆವೃತ್ತಿಯ ಸಹ ಸಂಪಾದಕರಾಗಿ ಅವರು ನಿವೃತ್ತರಾಗಿದ್ದರು.

2006: ಸೌರಶಕ್ತಿಯಿಂದ ಹಾರಬಲ್ಲ ವಿಶ್ವದ ಪ್ರಪ್ರಥಮ ವಿಮಾನವೊಂದು ಪ್ಯಾರಿಸ್ ಹೊರವಲಯದ ವಿಮಾನ ನಿಲ್ದಾಣದಲ್ಲಿ ಎಲ್ಲ ಪರೀಕ್ಷೆಗಳನ್ನು ಯಶಸ್ವಿಯಾಗಿ ಮುಗಿಸಿ, ವಾರಾಂತ್ಯದಲ್ಲಿ ಲಂಡನ್ನಿಗೆ ಹಾರಿ `ಇತಿಹಾಸ' ನಿರ್ಮಿಸಲು ಸಜ್ಜಾಯಿತು.

2006: ಕೆನಡಾದ ವೃತ್ತಪತ್ರಿಕಾ ದೊರೆ ಕೆನ್ ಥಾಮ್ಸನ್ ಈ ದಿನ ನಿಧನರಾದರು.

2006: ಕನ್ನಡ ಅಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷರಾಗಿ ಕವಿ ಡಾ. ಸಿದ್ದಲಿಂಗಯ್ಯ ಅಧಿಕಾರ ವಹಿಸಿಕೊಂಡರು.

2006: ವಿದೇಶೀ ನೇರ ಬಂಡವಾಳ ಹೂಡಿಕೆಗೆ (ಎಫ್ ಡಿಐ) ಪ್ರೋತ್ಸಾಹ ನೀಡುವ ಸಲುವಾಗಿ ಕೇಂದ್ರ ಸರ್ಕಾರವು ಕರ್ನಾಟಕ ಮೂಲದ ನಾಲ್ಕು ವಿಶೇಷ ಆರ್ಥಿಕ ವಲಯಗಳಿಗೆ ಮಂಜೂರಾತಿ ನೀಡಿತು. ರಾಜ್ಯ ಸ್ವಾಮ್ಯದ ತೈಲ ಮತ್ತು ನೈಸರ್ಗಿಕ ಅನಿಲ ನಿಗಮವು (ಒಎನ್ ಜಿಸಿ) ಮಂಗಳೂರಿನಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಪೆಟ್ರೋ ಕೆಮಿಕಲ್ ಕಾಂಪ್ಲೆಕ್ಸ್, ಮಾಹಿತಿ ತಂತ್ರಜ್ಞಾನ ರಂಗದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸುವ ಇನ್ಫೋಸಿಸ್ ಟೆಕ್ನಾಲಜೀಸ್ ನ ಪ್ರಸ್ತಾವ, ಬೆಂಗಳೂರಿನಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಉದ್ದೇಶಿಸಿರುವ ಹಿಸ್ಕಿಲ್ ಪ್ರಸ್ತಾವ ಮತ್ತು ಮಂಗಳೂರಿನಲ್ಲಿ ಅಸಾಂಪ್ರದಾಯಿಕ ಇಂಧನ ವಲಯದಲ್ಲಿ ವಿಶೇಷ ಆರ್ಥಿಕ ವಲಯ ಸ್ಥಾಪಿಸಲು ಉದ್ದೇಶಿಸಿರುವ ಸುಜ್ಲೋನ್ ಪ್ರಸ್ತಾವಗಳಿಗೆ ವಿಶೇಷ ಆರ್ಥಿಕ ವಲಯಗಳಿಗೆ ಸಂಬಂಧಿಸಿದಂತೆ ವ್ಯವಹರಿಸುವ ಏಕಗವಾಕ್ಷಿ ಸಂಸ್ಥೆಯಾಗಿರುವ `ಮಂಜೂರಾತಿಗಳ ಮಂಡಳಿ'ಯು (ಬೋರ್ಡ್ ಆಫ್ ಅಪ್ರೂವಲ್ಸ್- ಬಿಒಎ)  ಔಪಚಾರಿಕ ಒಪ್ಪಿಗೆ ನೀಡಿತು.

1997: ಸೀತಾರಾಂ ಕೇಸರಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಆಯ್ಕೆಯಾದರು.

1996: ನೂತನ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಲೋಕಸಭೆಯಲ್ಲಿ ಬಹುಮತ ಸಾಬೀತುಪಡಿಸುವಲ್ಲಿ ಯಶಸ್ವಿಯಾದರು.

1957: ಪಾಕಿಸ್ಥಾನದ ಮಾಜಿ ಕ್ರಿಕೆಟ್ ಆಟಗಾರ ಜಾವೇದ್ ಮಿಯಾಂದಾದ್ ಜನ್ಮದಿನ. 50ಕ್ಕೂ ಹೆಚ್ಚು ಟೆಸ್ಟ್ ಮ್ಯಾಚುಗಳಲ್ಲಿ ನಿರಂತರವಾಗಿ ಆಡಿದ ಮೊತ್ತ ಮೊದಲ ಪಾಕಿಸ್ಥಾನಿ ಕ್ರಿಕೆಟ್ ಆಟಗಾರ ಈ ವ್ಯಕ್ತಿ.

1949: ಸಾಹಿತಿ ನೆಲೆಮನೆ ದೇವೇಗೌಡ ಜನನ.

1944: ಸಾಹಿತಿ ಎಂ.ಜಿ. ರೇಣುಕಾ ಪ್ರಸಾದ್ ಜನನ.

1942: ಯಹೂದಿ ಬಾಲಕಿ ಆನ್ ಫ್ರಾಂಕ್ (1929-45) ತನ್ನ 13ನೇ ಜನ್ಮದಿನದಂದು ದಿನಚರಿ ಬರೆಯಲು ಆರಂಭಿಸಿದಳು. 1944ರ ವರೆಗಿನ ಅವಧಿಯ ಈ ದಿನಚರಿಯ ದಾಖಲೆಗಳು ಆಕೆಯ ಕುಟುಂಬ ಸದಸ್ಯರು ನಾಝಿಗಳು ಯಹೂದಿಗಳ ವಿರುದ್ಧ ನಡೆಸಿದ ದೌರ್ಜನ್ಯದಿಂದ ಪಾರಾಗಲು ಆಮ್ ಸ್ಟರ್ ಡ್ಯಾಮಿನಲ್ಲಿ ಅಡಗಿಕೊಂಡಿದ್ದ ಎರಡು ವರ್ಷಗಳ ವಿವರಗಳನ್ನು ಒಳಗೊಂಡಿದೆ. ಈ ದಿನಚರಿ 50ಕ್ಕೂ ಹೆಚ್ಚು ಭಾಷೆಗಳಿಗೆ ಭಾಷಾಂತರಗೊಂಡಿದ್ದು, ಆಮ್ ಸ್ಟರ್ ಡ್ಯಾಮಿನಲ್ಲಿ ಫ್ರಾಂಕ್ ಕುಟುಂಬ ಅಡಗಿಕೊಂಡಿದ್ದ ಪ್ರಿನ್ಸೆಂಗ್ರಾಚ್ ಕಾಲುವೆ ಈಗ ಮ್ಯೂಸಿಯಂ ಆಗಿದೆ.

1929: ಯಹೂದಿ ಬಾಲಕಿ ಅನ್ನೆ ಫ್ರಾಂಕ್ ಈದಿನ ಫ್ರಾಂಕ್ ಫರ್ಟಿನಲ್ಲಿ ಜನಿಸಿದಳು. 1942ರಲ್ಲಿ ಇದೇ ದಿನ ತನ್ನ 13ನೇ ಜನ್ಮದಿನದಂದು ಈಕೆ ತನ್ನ ದಿನಚರಿ ಬರೆಯಲು ಆರಂಭಿಸಿದಳು.

1924: ಅಮೆರಿಕದ 41ನೇ ಅಧ್ಯಕ್ಷ ಜಾರ್ಜ್ ಬುಷ್ ಜನ್ಮದಿನ.

1906: ಸಾಹಿತಿ ತ.ಸು.ಶಾಮರಾವ್ ಅವರು ಸುಬ್ಬಣ್ಣ- ಲಕ್ಷ್ಮೀ ದೇವಮ್ಮ ದಂಪತಿಯ ಪುತ್ರನಾಗಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲ್ಲೂಕಿನ ತಳಕು ಗ್ರಾಮದಲ್ಲಿ ಜನಿಸಿದರು.

1915: ಸಾಹಿತಿ ಸಿ.ಕೆ. ನಾಗರಾಜರಾವ್ ಜನನ.

1902: ಸಾಹಿತಿ ಎನ್. ಎಸ್. ನಾರಾಯಣಶಾಸ್ತ್ರಿ ಜನನ.

1897: ಸ್ವಿಸ್ ಕಟ್ಲೆರಿ ನಿರ್ಮಾಪಕ ಕಾರ್ಲ್ ಎಲ್ಸನರ್ ತಮ್ಮ `ದಿ ಆಫೀಸರ್ ಅಂಡ್ ಸ್ಪೋರ್ಟ್ ನೈಫ್' ಹೆಸರಿನ ತನ್ನ ಪೆನ್- ಚೂರಿಗೆ ಪೇಟೆಂಟ್ ಪಡೆದರು. ಈ ಬಹೂಪಯೋಗಿ ಚೂರಿ ಈಗ `ಸ್ವಿಸ್ ಆರ್ಮಿ ನೈಫ್' ಎಂದೇ ಖ್ಯಾತಿ ಪಡೆದಿದೆ.  ಈ ಚೂರಿ ತಯಾರಿ ಕಂಪೆನಿಗೆ ಕಾರ್ಲ್ ತಮ್ಮ ತಾಯಿ ವಿಕ್ಟೋರಿಯಾಳ ಹೆಸರು ಇರಿಸಿದರು.

1842: ಇಂಗ್ಲಿಷ್ ಶಿಕ್ಷಣ ಹಾಗೂ ಪಬ್ಲಿಕ್ ಶಾಲಾ ವ್ಯವಸ್ಥೆಯನ್ನು ಸುಧಾರಿಸಿದ ರಗ್ಬಿಯ ಹೆಡ್ ಮಾಸ್ಟರ್ ಥಾಮಸ್ ಆರ್ನಾಲ್ಡ್ ತಮ್ಮ 47ನೇ ಹುಟ್ಟು ಹಬ್ಬಕ್ಕೆ ಒಂದು ದಿನ ಮೊದಲು ಮೃತರಾದರು. ಇವರು ಖ್ಯಾತ ಇಂಗ್ಲಿಷ್ ಕವಿ ಮ್ಯಾಥ್ಯೂ ಅರ್ನಾಲ್ಡ್ ಅವರ ತಂದೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday, June 16, 2010

ಇಂದಿನ ಇತಿಹಾಸ History Today ಜೂನ್ 11

ಇಂದಿನ ಇತಿಹಾಸ

ಜೂನ್ 11


ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಮ್ ಅವರನ್ನು ಉತ್ತರ ಐರ್ಲೆಂಡಿನ ಬೆಲ್‌ಪಾಸ್ಟ್‌ನಲ್ಲಿರುವ ಪ್ರತಿಷ್ಠಿತ ಕ್ವೀನ್ಸ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ವಿಶ್ವವಿದ್ಯಾನಿಲಯದ ಉಪಕುಲಪತಿ ಪೀಟರ್ ಗ್ರೆಗ್ಸನ್ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ 'ಕಲಾಮ್  ಸಾರ್ವಜನಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅನನ್ಯ ಸೇವೆ ಗುರುತಿಸಿ ಗೌರವಿಸಲಾಗುತ್ತಿದೆ' ಎಂದು ಹೇಳಿದರು.

2009: ತಿರುಪತಿ ತಿಮ್ಮಪ್ಪನಿಗೆ ಬಳ್ಳಾರಿ ಗಣಿ ಧಣಿಗಳು 45 ಕೋಟಿ ರೂಪಾಯಿ ಮೌಲ್ಯದ ವಜ್ರ ಖಚಿತ ಕಿರೀಟವನ್ನು ಸಮರ್ಪಿಸುವ ಮೂಲಕ ಅತ್ಯಂತ ದುಬಾರಿ ಹರಕೆಯನ್ನು ತೀರಿಸಿ ಕೊಂಡರು. ಆಂಧ್ರಪ್ರದೇಶದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ತಿರುಮಲೆಯಲ್ಲಿ ಈದಿನ ಸಂಜೆ ಈ ಬೆಲೆ ಬಾಳುವ ಕಾಣಿಕೆಯನ್ನು ತಿಮ್ಮಪ್ಪನಿಗೆ ಅರ್ಪಿಸಲಾಯಿತು. ಪ್ರವಾಸೋದ್ಯಮ  ಸಚಿವ ಜಿ. ಜನಾರ್ದನ ರೆಡ್ಡಿ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ. ಶ್ರೀರಾಮುಲು, ಶಾಸಕ ಟಿ.ಎಚ್. ಸುರೇಶ ಬಾಬು ಮತ್ತು ಅವರ ಕುಟುಂಬ ವರ್ಗದವರು ಹಾಜರಿದ್ದರು. ವಜ್ರ ಖಚಿತ ಕಿರೀಟವವನ್ನು ಇಡಲಾದ ಪಲ್ಲಕ್ಕಿಗೆ ಹೆಗಲು ಕೊಟ್ಟು ದೇವಸ್ಥಾನದ ಪ್ರಾಂಗಣದಲ್ಲಿ ಪ್ರದಕ್ಷಿಣೆ ಹಾಕಿದ ಗಣಿ ಧಣಿಗಳು 1 ವರ್ಷದ ಹಿಂದಿನ ಹರಕೆಯನ್ನು ಈಡೇರಿಸಿಕೊಂಡರು. ಈ ವಿಶೇಷ ಕಿರೀಟವನ್ನು ಕೊಯಮತ್ತೂರಿನಲ್ಲಿ ತಯಾರಿಸಲಾಗಿದ್ದು ಅದನ್ನು ಸಿದ್ಧಪಡಿಸಲು 9 ತಿಂಗಳು ಬೇಕಾಯಿತು.

2009: ವಿವಾಹಿತ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿ ಆಕೆಯ ಪತಿಯ ಸಾವಿಗೆ ಕಾರಣಕರ್ತರಾಗುವ ವ್ಯಕ್ತಿಗಳು ಶಿಕ್ಷಾರ್ಹರು ಎಂದು ಸುಪ್ರೀಂ ಕೋರ್ಟ್ ಅಭಿಪ್ರಾಯಪಟ್ಟಿತು. ನ್ಯಾಯಮೂರ್ತಿ ಮುಕುಂದಕಮ್ ಶರ್ಮಾ ಮತ್ತು ನ್ಯಾಯಮೂರ್ತಿ ಬಿ.ಎಸ್.ಚವಾಣ್ ನೇತೃತ್ವದ ರಜಾಕಾಲದ ಪೀಠವು ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ ಆಂಧ್ರಪ್ರದೇಶದ ಹೈಕೋರ್ಟ್ ತೀರ್ಪನ್ನು ಎತ್ತಿ ಹಿಡಿಯುವ ಮೂಲಕ ಅಕ್ರಮ ಸಂಬಂಧಗಳ ಮೂಲಕ ಅನಾಹುತಗಳ ಸೃಷ್ಟಿಗೆ ಕಾರಣವಾಗುವ ಆರೋಪಿಗಳಿಗೆ ಜೈಲು ಶಿಕ್ಷೆ ವಿಧಿಸುವುದು ಸರಿ ಎಂಬ ತೀರ್ಮಾನವನ್ನು ಪ್ರಕಟಿಸಿತು. ಗುಂಟೂರಿನ ನಿವಾಸಿ ದಮ್ಮು ಸ್ರೀನು ಎಂಬಾತ ತನ್ನ ನೆರೆಮನೆಯ ನಿವಾಸಿ ಬಿತ್ರಾ ನಾಗಾರ್ಜುನ ರಾವ್ ಎಂಬುವರ ಹೆಂಡತಿಯೊಂದಿಗೆ ಅಕ್ರಮ  ಸಂಬಂಧ ಹೊಂದಿದ್ದ. ಈ ಸಂಬಂಧದ ವಾಸನೆ ಬಡಿಯುತ್ತಿದ್ದಂತೆಯೇ ರಾವ್ ತಮ್ಮ ಪತ್ನಿಯನ್ನು ಪ್ರಶ್ನಿಸಿದರು. ಆಗ ದಂಪತಿ ನಡುವೆ ದೊಡ್ಡ ಜಗಳವೇ ನಡೆಯಿತು. ಕೂಡಲೇ ರಾವ್ ಆಕೆಯ ತಂದೆ (ಮಾವ)ಯನ್ನು ಕರೆಸಿ ಬುದ್ಧಿ ಹೇಳಿಸಿದರು. ಏತನ್ಮಧ್ಯೆ 1996ರ ಜನವರಿ 1ರಂದು ಸ್ರೀನು, ರಾವ್ ಮನೆಗೆ ಬಂದು ಅವರ ಪತ್ನಿಯೊಂದಿಗೆ ತಾನು ಅಕ್ರಮ ಸಂಬಂಧ ಹೊಂದಿರುವುದನ್ನು ಘಂಟಾಘೋಷವಾಗಿ ಸಾರಿದ. ನಿಮ್ಮ ಹೆಂಡತಿ ಸ್ವತಃ ನನ್ನನ್ನು ತೊರೆಯದ ಹೊರತು ನಾನು ಈ ಸಂಬಂಧವನ್ನು ಮುರಿಯುವುದಿಲ್ಲ ಎಂದೂ ದಾರ್ಷ್ಟ್ಯ ಮೆರೆದ. ತಮ್ಮ ಪತ್ನಿ ಅಕ್ರಮ ಸಂಬಂಧ ಹೊಂದಿರುವುದು ಖಾತ್ರಿಯಾದ ಬಳಿಕ ರಾವ್ ಅವಮಾನ, ತೊಳಲಾಟಗಳಲ್ಲಿ ಜೀವನ ಕಳೆಯುವುದಕ್ಕಿಂತಲೂ ಸಾಯುವುದೇ ಲೇಸು ಎಂಬ ತೀರ್ಮಾನಕ್ಕೆ ತಾವು ಬಂದಿರುವುದಾಗಿ ತಿಳಿಸಿ 1996 ಜನವರಿ 8ರಂದು ಆತ್ಮಹತ್ಯೆ ಮಾಡಿಕೊಂಡರು. ರಾವ್ ಆತ್ಮಹತ್ಯೆ ಸಂಬಂಧ ಪೊಲೀಸರು ರಾವ್ ಅವರ ಪತ್ನಿ ಮತ್ತು ಸ್ರೀನು ಇಬ್ಬರನ್ನೂ ಬಂಧಿಸಿದರು. ವಿಚಾರಣೆ ನಡೆಸಿದ ಸ್ಥಳೀಯ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಇಬ್ಬರೂ ಆರೋಪಿಗಳಿಗೆ ಐದು ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಸೆಷನ್ಸ್ ಕೋರ್ಟ್‌ನಲ್ಲಿ ಈ ಶಿಕ್ಷೆ ಐದರಿಂದ ಮೂರು ವರ್ಷಕ್ಕೆ ಇಳಿಯಿತು. ನಂತರ ಪ್ರಕರಣವು ಆಂಧ್ರಪ್ರದೇಶ ಹೈಕೋರ್ಟ್ ಮೆಟ್ಟಿಲೇರಿತು. ಅಲ್ಲಿ ರಾವ್ ಅವರ ಪತ್ನಿಯ ಶಿಕ್ಷೆಯನ್ನು ಒಂದು ವರ್ಷಕ್ಕೂ ಹಾಗೂ ಸ್ರೀನು ಶಿಕ್ಷೆಯನ್ನು ಮೂರು ವರ್ಷಕ್ಕೂ ಇಳಿಸಲಾಯಿತು. ಸುಪ್ರೀಂ ಕೋರ್ಟ್ ಆಂಧ್ರಪ್ರದೇಶ ಹೈಕೋರ್ಟ್‌ನ ಈ ತೀರ್ಪನ್ನು ಎತ್ತಿಹಿಡಿಯಿತು.

2009: ಸಯನೈಡ್ ಧರಿಸುವಂತೆ ತನ್ನ ಸಹಚರರೆಲ್ಲರಿಗೂ ಕಟ್ಟಾಜ್ಞೆ ಮಾಡಿದ್ದ ಎಲ್‌ಟಿಟಿಇ ನಾಯಕ ಪ್ರಭಾಕರನ್, ತಾನು  ರಕ್ಷಣಾಪಡೆಯವರಿಗೆ ಸೆರೆಸಿಕ್ಕಾಗ ಸಯನೈಡ್ ಇರಿಸಿಕೊಂಡಿರಲಿಲ್ಲ ಎಂದು ರಕ್ಷಣಾ ಇಲಾಖೆಯ ಉನ್ನತ ಮೂಲಗಳು ತಿಳಿಸಿದವು. ಎಲ್‌ಟಿಟಿಇ-ಲಂಕಾಪಡೆಗಳ ನಡುವೆ ನಡೆದ ಅಂತಿಮ ಕಾಳಗದಲ್ಲಿ ಪ್ರಭಾಕರನ್ ಹಾಗೂ ಆತನ ಸಹಚರರನ್ನು ಕೊಂದ ನಂತರ ಬಹುತೇಕ ಉಗ್ರರಿಂದ ಸಯನೈಡ್ ವಶಪಡಿಸಿಕೊಳ್ಳಲಾಯಿತು. ಆದರೆ ಪ್ರಭಾಕರನ್ ಬಳಿ ಸಯನೈಡ್ ಇರಲಿಲ್ಲ ಎಂದು ಮೂಲಗಳ ಉನ್ನತ ಮೂಲಗಳು ಬಹಿರಂಗ ಪಡಿಸಿದವು. ಕುತೂಹಲದ ವಿಷಯವೆಂದರೆ ಪ್ರಭಾಕರನ್ ಜೇಬಿನಲ್ಲಿ ಐಡೆಂಟಿಟಿ ಕಾರ್ಟ್ ಮತ್ತು ಇನ್ನಿತರೆ ಗುರುತಿನ ವಸ್ತುಗಳು ಪತ್ತೆಯಾದವು., ರಕ್ಷಣಾ ಪಡೆಗಳು ಅವನ್ನು ವಶಕ್ಕೆ ತೆಗೆದುಕೊಂಡವು. ಪ್ರಭಾಕರನ್ ಸಾಮಾನ್ಯವಾಗಿ ತನ್ನ ಕುತ್ತಿಗೆಯ ದಾರಕ್ಕೆ ಸಯನೈಡ್ ಕ್ಯಾಪ್ಸೂಲ್ ಅನ್ನು ಸಿಕ್ಕಿಸಿಕೊಂಡಿರುತ್ತಿದ್ದ. 1985ರಲ್ಲಿ ಅಂದಿನ ಪ್ರಧಾನಿ ರಾಜೀವ್‌ಗಾಂಧಿಯವರನ್ನು ನವದೆಹಲಿಯಲ್ಲಿ ಭೇಟಿಯಾಗಿದ್ದಾಗ ಕೂಡ ಪ್ರಭಾಕರನ್ ಬಳಿ ಸಯನೈಡ್ ಇತ್ತು. ರಾಜೀವ್ ಭೇಟಿಗೆ ಮುನ್ನ ಸಯನೈಡ್ ತೆಗೆದಿಡುವಂತೆ ರಕ್ಷಣಾ ತಂಡದವರು ಒತ್ತಾಯಿಸಿದರೂ ಅವರು ಅದರಲ್ಲಿ ಯಶಸ್ವಿಯಾಗಲು ಸಾಧ್ಯವಾಗಲಿಲ್ಲ.

2009: ನೀವು ತಡ ರಾತ್ರಿವರೆಗೂ ನಿದ್ದೆಗೆಟ್ಟು ಕೆಲಸ ಮಾಡುತ್ತೀರಾ ? ನಿಮಗೆ  'ನಿದ್ರಾದೇವಿ' ಆವರಿಸಿಕೊಳ್ಳುವುದಕ್ಕೆ ಮೀನಾ-ಮೇಷ ಎಣಿಸುತ್ತಿದ್ದಾಳೆಯೇ? ಹಾಸಿಗೆಯಲ್ಲಿ ಎಷ್ಟು ಹೊರಳಾಡಿದರೂ ನಿದ್ರೆ ಬರುವುದಿಲ್ಲವೇ ? ನೀವು ನಿದ್ರಿಸುವ ಸಮಯ ಕಡಿಮೆಯೇ ...? ಇದಕ್ಕೆಲ್ಲ ನೀವು 'ಹೌದಪ್ಪ ಹೌದು' ಅಂತ ಗೋಣು ಹಾಕುವುದಾದರೆ, ಖಂಡಿತವಾಗಿಯೂ ನೀವು ಸಾವಿನ ಅಪಾಯವನ್ನು ತಂದುಕೊಳ್ಳುತ್ತ್ದಿದೀರಿ ಎಂದು ಅರ್ಥ ! ನಿಜ, ಕಳೆದ ಎಂಟು ವರ್ಷಗಳಿಂದ ನಡೆಸಿರುವ ಅಧ್ಯಯನದ ಪ್ರಕಾರ ನಿದ್ರಾ ಹೀನತೆಯಿಂದ ಸಾವನ್ನಪ್ಪಿರುವವರ ಸಂಖ್ಯೆ ಹೆಚ್ಚಾಗಿದೆ. ಅಧ್ಯಯನದಲ್ಲಿ ಭಾಗವಹಿಸಿದ 5,614 ಮಂದಿಯಲ್ಲಿ 854 ಮಂದಿ ನಿದ್ರಾ ಸಮಸ್ಯೆಯಿಂದಲೇ ಮೃತಪಟ್ಟಿದ್ದಾರೆ. ಜೊತೆಗೆ ಹೃದಯ ಕಾಯಿಲೆಗಳು ವೃದ್ಧಿಸುತ್ತವೆ ಎಂಬ ವಿಚಾರವೂ ಬೆಳಕಿಗೆ ಬಂದಿತು. ಕ್ಯಾಲಿಫೋರ್ನಿಯಾ ಪೆಸಿಫಿಕ್ ಮೆಡಿಕಲ್ ಸೆಂಟರಿನ ಹಿರಿಯ ಲೇಖಕ ಅಲಿಸನ್ ಲಫಾನ್ ಪ್ರಕಾರ 'ನಿದ್ರಾ ಸಮಸ್ಯೆ ಹಲವು ರೋಗಗಳಿಗೆ ಆಹ್ವಾನ ನೀಡುತ್ತದೆ. ಅಲ್ಲದೇ ಸಾವಿನ ಅಪಾಯವನ್ನು ತಂದೊಡ್ಡುತ್ತದೆ ಎಂದು ಹಲವು ಅಧ್ಯಯನಗಳಿಂದ ದೃಢಪಟ್ಟಿದೆ.  ಹಾಗಾಗಿ ಜನರು  ಪ್ರತಿ ದಿನ ಒಂದೇ ಸಮಯದಲ್ಲಿ ಮಲಗಿ-ಏಳುವುದನ್ನು ಹಾಗೂ ನಿದ್ರಾ ಸಮಯವನ್ನು ಸ್ಥಿರಗೊಳಿಸಿಕೊಳ್ಳಬೇಕು. ನಿತ್ಯ 7 ರಿಂದ 8 ಗಂಟೆಗಳ ಕಾಲ ನಿದ್ರೆ ಮಾಡಬೇಕು' ಎಂಬುದು ಲಫಾನ್ ಸಲಹೆ.

2009: ಭಾರತದ ಮಾಜಿ ರಾಷ್ಟ್ರಪತಿ ಎ.ಪಿ.ಜೆ.ಅಬ್ದುಲ್ ಕಲಾಮ್ ಅವರನ್ನು ಉತ್ತರ ಐರ್ಲೆಂಡಿನ ಬೆಲ್‌ಪಾಸ್ಟ್‌ನಲ್ಲಿರುವ ಪ್ರತಿಷ್ಠಿತ ಕ್ವೀನ್ಸ್ ವಿಶ್ವವಿದ್ಯಾನಿಲಯ ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ವಿಶ್ವವಿದ್ಯಾನಿಲಯದ ಉಪಕುಲಪತಿ ಪೀಟರ್ ಗ್ರೆಗ್ಸನ್ ವಿಶೇಷ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಿ 'ಕಲಾಮ್  ಸಾರ್ವಜನಿಕ ಕ್ಷೇತ್ರದಲ್ಲಿ ಸಲ್ಲಿಸಿರುವ ಅನನ್ಯ ಸೇವೆ ಗುರುತಿಸಿ ಗೌರವಿಸಲಾಗುತ್ತಿದೆ' ಎಂದು ಹೇಳಿದರು.

2009: ಮಾನವನ ಉದ್ದೇಶಗಳನ್ನು ಗ್ರಹಿಸಿ ಅದನ್ನು ಕಾರ್ಯರೂಪಕ್ಕೆ ಇಳಿಸಬಲ್ಲ ರೋಬೋಟನ್ನು ಸೃಷ್ಟಿಸಿರುವುದಾಗಿ ಯೂರೋಪಿನ ವಿಜ್ಞಾನಿಗಳು ಪ್ರಕಟಿಸಿದರು. ಐರೋಪ್ಯ ಒಕ್ಕೂಟದಿಂದ ಹಣಕಾಸು ನೆರವು ಪಡೆದ ಈ ಯೋಜನೆ ಮನುಷ್ಯ ಮತ್ತು ರೋಬೋಟ್ ತಮ್ಮ ಕೆಲಸದಲ್ಲಿ ಪರಸ್ಪರ ಸಹಕರಿಸುವಂತೆ ಮಾಡುವುದು ಮತ್ತು ರೋಬೋಟ್ ಮುಂದೇನು ಮಾಡಬೇಕು ಎಂಬ ಆದೇಶಕ್ಕೆ ಕಾಯುತ್ತಾ ಕುಳಿತುಕೊಳ್ಳದೆ, ಮಾಲೀಕನ ನಡವಳಿಕೆಯನ್ನು ಗ್ರಹಿಸುವುದರಿಂದಲೇ ಆತನಿಗೆ ಅಗತ್ಯವಾದ ಕಾರ್ಯದಲ್ಲಿ ತನ್ನಷ್ಟಕ್ಕೆ ತಾನು ಮಗ್ನವಾಗುವಂತೆ ಮಾಡುವ ಗುರಿಯನ್ನು ಹೊಂದಿತ್ತು. ಜೊತೆಗೆ ಈ ರೋಬೋಟುಗಳನ್ನು ನೌಕರರಿಗಿಂತ ಹೆಚ್ಚಾಗಿ ಒಡನಾಡಿಯಂತೆ ರೂಪಿಸುವುದರತ್ತ ಸಂಶೋಧಕರು ಗಮನ ಕೇಂದ್ರೀಕರಿಸಿದ್ದರು. 'ನಮ್ಮ ರೋಬೋಟ್‌ಗಳು ಕೆಲಸವನ್ನು ಹೊಸದಾಗಿ ಕಲಿಯುವುದಿಲ್ಲ. ಅದಾಗಲೇ ಕೆಲಸ ಅರಿತಿರುವ ಅವು ಮನುಷ್ಯರ ನಡವಳಿಕೆಯನ್ನು ಪರಿಶೀಲಿಸುತ್ತವೆ. ಅವರ ಕ್ರಿಯೆಗಾಗಿ ಎದುರು ನೋಡುವುದನ್ನು ಶೀಘ್ರ ಕಲಿಯುತ್ತವೆ ಅಥವಾ ಆವರು ಸರಿಯಾದ ಕ್ರಮ ಪಾಲಿಸದಿದ್ದಾಗ ತಪ್ಪನ್ನು ಎತ್ತಿ ತೋರಿಸುತ್ತವೆ' ಎಂದು ಯೋಜನೆಯ ಸಂಶೋಧಕರಲ್ಲಿ ಒಬ್ಬರಾದ ಪೋರ್ಚುಗಲ್‌ನ ಮಿನ್ಹೊ ವಿಶ್ವವಿದ್ಯಾನಿಲಯದ ವೋಲ್‌ಫ್ರಾಮ್ ಅರ್ಲ್‌ಹೇಗನ್ ಮಾಹಿತಿ ನೀಡಿದರು. ಒಂದು ವೇಳೆ ತನ್ನ ಮಾಲೀಕನ ಉದ್ದೇಶಗಳನ್ನು ರೋಬೋಟ್ ತಪ್ಪಾಗಿ ಗ್ರಹಿಸಿರುವ ಶಂಕೆ ಬಂದರೆ ಆ ಬಗ್ಗೆ ಸ್ಪಷ್ಟನೆ ಕೇಳುವ ಯಂತ್ರವೊಂದನ್ನು ಸಹ ಇದೇ ಸಂದರ್ಭದಲ್ಲಿ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು.

2009: ವೇಗದ ರಾಜ ಉಸೇನ್ ಬೋಲ್ಟ್ ಅವರು 2009ರ ಪ್ರತಿಷ್ಠಿತ ಲಾರೆಸ್ ವಿಶ್ವದ ಶ್ರೇಷ್ಠ ಕ್ರೀಡಾಪಟು ಪ್ರಶಸ್ತಿ ಪಡೆದರು. 2008ರಲ್ಲಿ ನಡೆದ ಬೀಜಿಂಗ್ ಒಲಿಂಪಿಕ್ ಕೂಟದಲ್ಲಿ 22 ವರ್ಷ ವಯಸ್ಸಿನ ಬೋಲ್ಟ್ 100, 200 ಹಾಗೂ 4್ಡ100 ಮೀಟರ್ ರಿಲೆ ಓಟದಲ್ಲಿ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕಗಳನ್ನು ಗೆದ್ದುಕೊಂಡಿದ್ದರು. ರಾತ್ರಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಜಮೈಕಾದ ಸ್ಪ್ರಿಂಟರ್ ಬೋಲ್ಟ್ ಅವರು ಲಾರೆಸ್ ವರ್ಲ್ಡ್ ಸ್ಪೋರ್ಟ್ಸ್ ಅಕಾಡೆಮಿಯ ಚೇರ್‌ಮನ್ ಎಡ್ವಿನ್ ಮೋಸಸ್ ಅವರಿಂದ ಈ ಪ್ರಶಸ್ತಿಯನ್ನು ಸ್ವೀಕರಿಸಿದರು.

2009: ಕೇರಳದ ಮೂರು ಜಲವಿದ್ಯುತ್ ಯೋಜನೆಗಳ ನವೀಕರಣಕ್ಕಾಗಿ ಕೆನಡಾದ ಕಂಪೆನಿಯೊಂದಕ್ಕೆ 300 ಕೋಟಿ ರೂಪಾಯಿ ಕಾಮಗಾರಿಯ ಗುತ್ತಿಗೆಯನ್ನು ನೀಡುವಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಬಿಐ ಸಿಪಿಎಂ ರಾಜ್ಯ ಕಾರ್ಯದರ್ಶಿ ಪಿಣರಾಯಿ ವಿಜಯನ್ ಮತ್ತು ಇತರ ಎಂಟು ಮಂದಿ ವಿರುದ್ಧ ಆರೋಪಪಟ್ಟಿ ಸಲ್ಲಿಸಿತು. 1998ರಲ್ಲಿ ವಿದ್ಯುತ್ ಸಚಿವರಾಗಿದ್ದ ವಿಜಯನ್ ವಿರುದ್ಧ ಐಪಿಸಿ ಸೆಕ್ಷನ್ 120 ಬಿ (ಕ್ರಿಮಿನಲ್ ಪಿತೂರಿ), 420 (ವಂಚನೆ), ಹಾಗೂ ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ 13 (1) ಮತ್ತು 13(2) ಸೆಕ್ಷನ್ ನಂತೆ ಆರೋಪಪಟ್ಟಿ ಸಲ್ಲಿಸಲಾಯಿತು.

2008: ಕೊಳದ ಮಠ ಸಂಸ್ಥಾನ ನೀಡುವ ಪ್ರತಿಷ್ಠಿತ `ಅಲ್ಲಮಶ್ರೀ' ಪ್ರಶಸ್ತಿಗೆ ಈ ಬಾರಿ ಸಿದ್ದಗಂಗಾಮಠದ ಡಾ. ಶಿವಕುಮಾರ ಸ್ವಾಮೀಜಿ ಆಯ್ಕೆ ಆಗಿದ್ದಾರೆ ಎಂದು ಕೊಳದ ಮಠದ ಡಾ. ಶಾಂತವೀರ ಸ್ವಾಮೀಜಿ ಬೆಂಗಳೂರಿನಲ್ಲಿ ಪ್ರಕಟಿಸಿದರು.

2007: ಬಾಂಗ್ಲಾದೇಶದ ಚಿತ್ತಗಾಂಗ್ ಪ್ರದೇಶದಲ್ಲಿ ಭೀಕರ ಭೂಕುಸಿತ ಸಂಭವಿಸಿ 77 ಮಂದಿ ಜೀವಂತ ಸಮಾಧಿಯಾದರು. ದೇಶಾದ್ಯಂತ ಸುರಿದ ಧಾರಾಕಾರ ಮಳೆಯ ಪರಿಣಾಮವಾಗಿ ಈ ದುರಂತ ಸಂಭವಿಸಿತು. ಮೃತರಲ್ಲಿ 12 ಮಂದಿ ಬಾಲಕರು.

2007: ಅಮೆರಿಕದ ನಾಸಾ ಕಳುಹಿಸಿದ `ರೋವರ್' ಬಾಹ್ಯಾಕಾಶ ಶೋಧ ನೌಕೆಯು ತೆಗೆದಿರುವ ಮಂಗಳ ಗ್ರಹದ ಚಿತ್ರಗಳಲ್ಲಿ `ನೀರಿನ ಹೊಂಡಗಳು' ಪತ್ತೆಯಾಗಿರುವುದಾಗಿ ವಿಜ್ಞಾನಿಗಳು ಬಹಿರಂಗಪಡಿಸಿದರು. ಎರಡು ವರ್ಷಗಳ ಹಿಂದೆ ಈ ಹೊಂಡಗಳಲ್ಲಿ ನೀರು ಇತ್ತು ಎಂಬುದು ಅವರ ಹೇಳಿಕೆ.

2007: ಮಣಿಕಟ್ಟಿನ ಗಾಯಗಳು ಆಕಸ್ಮಿಕವೇ ಹೊರತು ಉದ್ದೇಶಪೂರ್ವಕವಾಗಿ ಮಾಡಿಕೊಂಡದ್ದಲ್ಲ ಎಂದು ಮಾಜಿ ಕ್ರಿಕೆಟಿಗ ಮಣಿಂದರ್ ಸಿಂಗ್ ಪೊಲೀಸರಿಗೆ ಸ್ಪಷ್ಟ ಪಡಿಸಿದರು.

2006: ನೇಪಾಳದ ದೊರೆ ಜ್ಞಾನೇಂದ್ರ ಅವರಿಗೆ ಇದ್ದ ವ್ಹೀಟೊ ಚಲಾವಣೆ ಅಧಿಕಾರ ಮೊಟಕುಗೊಳಿಸುವ ಕಾನೂನನ್ನು ನೇಪಾಳಿ ಸಂಸತ್ತು ಸರ್ವಾನುಮತದಿಂದ ಅಂಗೀಕರಿಸಿತು.

2005: ಮಾಜಿ ಪೋರ್ಚುಗೀಸ್ ಪ್ರಧಾನಿ ಜನರಲ್ ವಾಸ್ಕೊ ಗೋನ್ಸಾಲ್ವೆಸ್ (83) ನಿಧನರಾದರು. 1974ರಲ್ಲಿ ನಡೆದ ಎಡಪಂಥೀಯ ಕ್ರಾಂತಿಯ ಬಳಿಕ ನಾಲ್ಕು ಪ್ರಾಂತೀಯ ಸರ್ಕಾರಗಳ ನೇತೃತ್ವವನ್ನು ಅವರು ವಹಿಸಿದ್ದರು.

2001: ಓಕ್ಲಾಹಾಮಾ ಬಾಂಬರ್ ತಿಮೋತಿ ಮೆಕ್ ವೀಗ್ ನನ್ನು ವಿಷದ ಇಂಜೆಕ್ಷನ್ ನೀಡಿ ಮರಣದಂಡನೆಗೆ ಗುರಿಪಡಿಸಲಾಯಿತು. 2001ರ ಸೆಪ್ಟೆಂಬರ್ 11ರಂದು ಅಮೆರಿಕದ ಟ್ರೇಡ್ ಸೆಂಟರ್ ಮೇಲೆ ದಾಳಿ ನಡೆಯುವವರೆಗೆ 168 ಜನರನ್ನು ಬಲಿ ತೆಗೆದುಕೊಂಡ ಓಕ್ಲಾಹಾಮಾ ಬಾಂಬ್ ದಾಳಿ ಘಟನೆಯನ್ನೇ ಅಮೆರಿಕ ನೆಲದಲ್ಲಿ ನಡೆದ ಅತಿ ಭೀಕರ ಭಯೋತ್ಪಾದಕ ಕೃತ್ಯ ಎಂದು ಪರಿಗಣಿಸಲಾಗಿತ್ತು.

2000: ಕಾಂಗ್ರೆಸ್ ನಾಯಕ, ಮಾಜಿ ಕೇಂದ್ರ ಸಚಿವ ರಾಜೇಶ್ ಪೈಲಟ್ ನಿಧನರಾದರು.

1999: ಭಾರತೀಯ ಸೇನೆಯು ಕಾರ್ಗಿಲ್ ಪ್ರದೇಶದಲ್ಲಿ ಒಳನುಸುಳುತ್ತಿದ್ದ 23 ಜನರನ್ನು ಕೊಂದು ಹಾಕಿತು.

1996: ಜೆ.ಎಂ.ಎಂ. ಹಗರಣದ ಹೊಸ ತನಿಖಾ ವರದಿಯ ಪ್ರಕಾರ ನರಸಿಂಹರಾವ್ ಅವರ ಹೆಸರು ಪ್ರಕರಣದಲ್ಲಿ ಸೇರ್ಪಡೆಯಾಯಿತು.

1987: ಇಂಗ್ಲೆಂಡಿನ 160 ವರ್ಷಗಳ ಇತಿಹಾಸದಲ್ಲಿ ಮೂರನೇ ಬಾರಿಗೆ ಸತತವಾಗಿ ಗೆದ್ದ ಮೊದಲ ಬ್ರಿಟಿಷ್ ಪ್ರಧಾನಿ ಎಂಬ ಹೆಗ್ಗಳಿಕೆಗೆ ಮಾರ್ಗರೆಟ್ ಥ್ಯಾಚರ್ ಪಾತ್ರರಾದರು.

1983: ಭಾರತೀಯ ಕೈಗಾರಿಕೋದ್ಯಮಿ ಹಾಗೂ ಮಹಾತ್ಮಾ ಗಾಂಧೀಜಿಯವರ ನಿಕಟವರ್ತಿಯಾಗಿದ್ದ ಘನಶ್ಯಾಮದಾಸ್ ಬಿರ್ಲಾ ತಮ್ಮ 89ನೇ ವಯಸ್ಸಿನಲ್ಲಿ ಇಂಗ್ಲೆಂಡಿನಲ್ಲಿ ಮೃತರಾದರು.

1970: ರಷ್ಯದ ರಾಜಕೀಯ ನಾಯಕ ಅಲೆಗ್ಸಾಂಡರ್ ಕೆರೆನ್ ಸ್ಕಿ ನ್ಯೂಯಾರ್ಕ್ ನಗರದಲ್ಲಿ ತಮ್ಮ 89ನೇ ವಯಸ್ಸಿನಲ್ಲಿ ಮೃತರಾದರು. 1917ರಲ್ಲಿ ಬೋಲ್ಷೆವಿಕ್ ಗಳು ಅವರನ್ನು ಧುರೀಣತ್ವದಿಂದ ಪದಚ್ಯುತಿಗೊಳಿಸಿದ್ದರು.

1964: ಪಂಡಿತ್ ಜವಾಹರಲಾಲ್ ನೆಹರೂ ಅವರ ಚಿತಾಭಸ್ಮವನ್ನು ಅವರ ಆಶಯದಂತೆ ದೇಶದಾದ್ಯಂತ ಚೆಲ್ಲಲಾಯಿತು.

1932: ಹಿಂದುಸ್ಥಾನಿ ಸಂಗೀತಗಾರ ಸುರೇಂದ್ರ ಸಾ ನಾಕೋಡ್ ಅವರು ವೆಂಕೂ ಸಾ ನಾಕೋಡ್- ನಾಗೂಬಾಯಿ ದಂಪತಿಯ ಮಗನಾಗಿ ಗದಗ ಬೆಟಗೇರಿಯಲ್ಲಿ ಜನಿಸಿದರು.

1907: ಖ್ಯಾತ ಹಿಂದಿ ಕವಿ ಶಾಂತಿಲಾಲ್ ಜೀವನಲಾಲ್ ಜನನ.

1903: ಸರ್ಬಿಯಾದ ದೊರೆ ಮೊದಲನೆಯ ಅಲೆಗ್ಸಾಂಡರ್ ಮತ್ತು ರಾಣಿ ಡ್ರ್ಯಾಗಾ ಅವರನು ದಂಗೆಯೊಂದರಲ್ಲಿ ಹತ್ಯೆಗೈಯಲಾಯಿತು.

1847: ಆರ್ಕ್ಟಿಕ್ ನ್ನು ಕಂಡು ಹಿಡಿದ ಸರ್ ಜಾನ್ ಫ್ರಾಂಕ್ಲಿನ್ ಅಮೆರಿಕ ಖಂಡದ ಉತ್ತರ ಭಾಗದಲ್ಲಿ ಪೂರ್ವದ ಕಡೆಗೆ ವಾಯುವ್ಯ ಕಣಿವೆ ಮಾರ್ಗ ಕಂಡು ಹಿಡಿಯುವ ಯತ್ನದಲ್ಲಿದ್ದಾಗ ಅಸುನೀಗಿದ.


(ಸಂಗ್ರಹ: ನೆತ್ರಕೆರೆ ಉದಯಶಂಕರ)

Advertisement