Tuesday, July 28, 2009

ಚಿತ್ರ ಕಲೆಗೆ 'ತಲೆ' ಬೇಕಂತೆ ಗೊತ್ತಾ?

ಚಿತ್ರ ಕಲೆಗೆ 'ತಲೆ' ಬೇಕಂತೆ ಗೊತ್ತಾ?

ಚಿತ್ರ ಕಲೆಗೆ 'ತಲೆ' ಬೇಕಂತೆ. ಹೌದಾ? ಏಕೆ? ಹೇಗೆ? ಎಂಬ ಪ್ರಶ್ನೆ ಕೇಳಬೇಡಿ. ತಿಳಿಯಬೇಕಾದ ಇನ್ನೂ ಹತ್ತಾರು ವಿಷಯಗಳಿವೆ. ವೈದ್ಯರಿಗೇ ಗೊತ್ತಿಲ್ಲದ / ಅವರು ರೋಗ ಎಂದು ಘೋಷಿಸದ 'ರೋಗ' ಎಲ್ಲರನ್ನೂ ಬಾಧಿಸುತ್ತಿದೆ ಎಂಬ ವಿಚಾರ ಎಂದಾದರೂ ನಿಮ್ಮ 'ತಲೆ'ಗೆ ಹೊಕ್ಕದ್ದು ಉಂಟಾ? ನೀವು ರೋಗಿ ಹೇಗೆ? ಎಂಬುದನ್ನು ತಿಳಿಯದೇ ಇದ್ದರೆ ಅದರಿಂದ ಪಾರಾಗುವ ಬಗೆ ಗೊತ್ತಾಗದು. ಗೊತ್ತು ಮಾಡಿಕೊಳ್ಳಲು ಇರುವ ಒಂದೇ ದಾರಿ. ತತ್ ಕ್ಷಣ ಮಾರುಕಟ್ಟೆಗೆ ದೌಡಾಯಿಸಿ 'ವಾರೆ ಕೋರೆ' ಕೊಂಡು ಕೊಳ್ಳುವುದು. ನೇರವಾಗಿ 646, ಅಜಂತಾ ಕ್ಲಾಸಿಕ್, ಎಫ್ಎಫ್-5, 18ನೇ ಮುಖ್ಯರಸ್ತೆ, ರಾಜರಾಜೇಶ್ವರಿ ನಗರ, ಬೆಂಗಳೂರು-560098 (ಫೋನ್: 080-28606030) ವಿಳಾಸವನ್ನೂ ಸಂಪರ್ಕಿಸಬಹುದು.

Email: vaareykorey@gmail.com

'ವಾರೆ ಕೋರೆ' ಜುಲೈ ಆವೃತ್ತಿಯ ಸ್ಯಾಂಪಲ್ ಇಲ್ಲಿದೆ. ಕ್ಲಿಕ್ಕಿಸಿ ನೋಡಿ





Monday, July 27, 2009

ಇಂದಿನ ಇತಿಹಾಸ History Today ಜುಲೈ 26

ಇಂದಿನ ಇತಿಹಾಸ

ಜುಲೈ 26

ಒಲಿಂಪಿಕ್ ಮಹಿಳಾ ಡಿಸ್ಕಸ್ ಚಾಂಪಿಯನ್ ರಷ್ಯಾದ ಕ್ರೀಡಾಪಟು ನತಾಲ್ಯಾ ಸಡೋವಾಗೆ ಅಂತರ್ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ಎರಡು ವರ್ಷಗಳ ಅವಧಿಯ ನಿಷೇಧ ಹೇರಲಾಯಿತು. ಕಳೆದ ಮೇ 21ರಂದು ಹಾಲೆಂಡಿನ ಹೆಂಗೆಲೋದಲ್ಲಿ ನಡೆದ ಕೂಟ ಒಂದರಲ್ಲಿ ಸಡೋವಾ ನಿಷೇಧಿತ ಸ್ಟೆರಾಯ್ಡ್ ಮೆಥಾಂಡೀನನ್ ಸೇವಿಸಿದ್ದು ಪತ್ತೆಯಾಗಿತ್ತು.

2008: ಬೆಂಗಳೂರಿನಲ್ಲಿ ಸರಣಿ ಬಾಂಬ್ ಸ್ಫೋಟದ ದುಷ್ಕೃತ್ಯ ನಡೆದ ಬೆನ್ನಲ್ಲೇ ಈದಿನ ಸಂಜೆ ಗುಜರಾತಿನ ಅಹಮದಾಬಾದಿನಲ್ಲಿಯೂ ಅದೇ ರೀತಿಯ ಕಡಿಮೆ ತೀವ್ರತೆಯ ಸರಣಿ ಬಾಂಬ್ ಸ್ಫೋಟ ಸಂಭವಿಸಿ 29ಕ್ಕೂ ಹೆಚ್ಚು ಮಂದಿ ಮೃತರಾಗಿ, 100ಕ್ಕೂ ಅಧಿಕ ಮಂದಿ ಗಾಯಗೊಂಡರು. ಮುಖ್ಯಮಂತ್ರಿ ನರೇಂದ್ರ ಮೋದಿ ಅವರು ಪ್ರತಿನಿಧಿಸುವ ಮಣಿನಗರ್ ಸೇರಿದಂತೆ ಜನನಿಬಿಡ ಮಾರುಕಟ್ಟೆ ಪ್ರದೇಶಗಳಲ್ಲಿ 17 ಸ್ಫೋಟಗಳು ಸಂಭವಿಸಿದವು.

2007: ವಿದ್ಯಾರ್ಥಿಗಳು ಹಾಗೂ ಅಭಿಮಾನಿಗಳ ಜತೆ ಸಂವಾದ ನಡೆಸಲು ಮಾಜಿ ರಾಷ್ಟ್ರಪತಿ ಡಾ. ಎ.ಪಿ.ಜೆ. ಅಬ್ದುಲ್ ಕಲಾಂ ಅವರ www.abdulkalam.com ಎಂಬ ಹೊಸ ವೆಬ್ಸೈಟ್ ಈದಿನ ಆರಂಭಗೊಂಡಿತು. ಚೆನ್ನೈಯ ಅಣ್ಣಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಹಾಗೂ ಅಲ್ಲಿನ ಶಿಕ್ಷಕರ ಜತೆಗೆ ಕಲಾಂ ಸಂವಾದ ನಡೆಸಿದ ಸಂದರ್ಭದಲ್ಲಿ ಈ ವೆಬ್ಸೈಟನ್ನು ಪ್ರಾರಂಭಿಸಲಾಗಿತ್ತು. ರಾಷ್ಟ್ರಪತಿ ಕಚೇರಿಯಲ್ಲಿದ್ದ ಹಿಂದಿನ ವೆಬ್ಸೈಟಿನ ಎಲ್ಲ ವಿಷಯಗಳು ಈ ವೆಬ್ ಸೈಟಿನಲ್ಲಿ ಲಭಿಸುತ್ತವೆ.

2007: ಸುಮಾರು 700 ಕಿಲೋ ಮೀಟರ್ ದೂರದ ಭೂಪ್ರದೇಶಕ್ಕೆ ಅಪ್ಪಳಿಸುವ ಸಾಮರ್ಥ್ಯವುಳ್ಳ `ಬಾಬರ್' ನೌಕಾ ಕ್ಷಿಪಣಿಯ ಪರೀಕ್ಷೆಯನ್ನು ಪಾಕಿಸ್ತಾನ ಸರ್ಕಾರ ಯಶಸ್ವಿಯಾಗಿ ನಡೆಸಿತು. ಈ ವ್ಯಾಪ್ತಿಯೊಳಗೆ ಬರುವ ಭಾರತದ ಪ್ರಮುಖ ನಗರಗಳ ಮೇಲೆ ದಾಳಿ ಮಾಡುವ ಸಾಮರ್ಥ್ಯ ಇದಕ್ಕಿದೆ. ಭಾರತ-ರಷ್ಯಾ ಜಂಟಿ ಕಾರ್ಯಾಚರಣೆಯ ಅನ್ವಯ ಭಾರತ ನಿರ್ಮಿಸಿದ ಬ್ರಹ್ಮೋಸ್ ಕ್ಷಿಪಣಿಗೆ ಪ್ರತಿಯಾಗಿ ಬಾಬರ್ ಕ್ಷಿಪಣಿಯನ್ನು ಪಾಕ್ ನಿರ್ಮಿಸಿದೆ. 2005ರಲ್ಲಿ 500 ಕಿಲೋ ಮೀಟರ್ವರೆಗೆ ಕ್ರಮಿಸುವ ಸಾಮರ್ಥ್ಯ ಇದ್ದ ಬ್ರಹ್ಮೋಸ್ ಕ್ಷಿಪಣಿ ಸಾಮರ್ಥ್ಯವನ್ನು 700 ಕಿಲೋ ಮೀಟರ್ಗೆ ಹೆಚ್ಚಿಸಿ ಕಳೆದ ಮಾರ್ಚ್ 22ರಂದು ಭಾರತ ಪರೀಕ್ಷೆ ನಡೆಸಿತ್ತು.

2007: ಉಗ್ರರ ಸಂಘಟನೆ ಲಷ್ಕರ್-ಎ-ತೊಯ್ಬಾಗೆ ಸಹಾಯ ಮಾಡಿದ್ದಕ್ಕಾಗಿ ಅಮೆರಿಕ ಪ್ರಜೆ ಮಹಮದ್ ಫಾರೂಕ್ ಬ್ರೆಂಟ್ ಎಂಬಾತನಿಗೆ ನ್ಯೂಯಾರ್ಕಿನ ಸ್ಥಳೀಯ ನ್ಯಾಯಾಲಯ 15 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಬ್ರೆಂಟ್ನಂತಹ ವ್ಯಕ್ತಿಗಳ ಸಹಾಯದಿಂದಲೇ ಉಗ್ರರ ಸಂಘಟನೆಗಳು ಈ ದೇಶದಲ್ಲಿ ದುಷ್ಕೃತ್ಯ ನಡೆಸಲು ಸಾಧ್ಯವಾಗುತ್ತದೆ ಎಂದು ಶಿಕ್ಷೆಯನ್ನು ಪ್ರಕಟಿಸಿದ ಸಂದರ್ಭದಲ್ಲಿ ಜಿಲ್ಲಾ ನ್ಯಾಯಾಧೀಶ ಲೊರೆಟ್ಟಾ ಹೇಳಿದರು. ಬ್ರೆಂಟ್ 2002ರಲ್ಲಿ ಪಾಕಿಸ್ಥಾವನದಲ್ಲಿ ಉಗ್ರರ ತರಬೇತಿ ಪಡೆದುಕೊಂಡು ಅಮೆರಿಕಕ್ಕೆ ವಾಪಸ್ಸಾದ ನಂತರ ಮಹಮದ್ ಅಲ್ ಮುತಜ್ಜಮ್ ಎಂಬ ಹೆಸರಿನಲ್ಲಿ ದುಷ್ಕೃತ್ಯ ನಡೆಸಲು ಆರಂಭಿಸಿದನು. 2005ರಲ್ಲಿ ಬಾಲ್ಟಿಮೋರ್, ಮೇರಿಲ್ಯಾಂಡ್ ಪ್ರದೇಶದಲ್ಲಿ ಚಟುವಟಿಕೆ ನಡೆಸುತ್ತಿದ್ದಾಗ ಈತ ಸೆರೆ ಸಿಕ್ಕಿದ.

2007: ಕ್ಷಯರೋಗ ತಗುಲಿದ ಶಂಕೆಯಿಂದ ನೈಋತ್ಯ ವೇಲ್ಸ್ ನಲ್ಲಿರುವ ಸ್ಕಂದ ವೇಲ್ ದೇವಾಲಯದ ಹೋರಿ `ಶಂಬೊ'ವನ್ನು ಕೊಲ್ಲಲು ಆಗಮಿಸಿದ ಸರ್ಕಾರಿ ಅಧಿಕಾರಿಗಳನ್ನು ನೂರಕ್ಕೂ ಹೆಚ್ಚಿನ ಸಂಖ್ಯೆಯಲ್ಲಿದ್ದ ಹಿಂದೂ ಸಮುದಾಯದವರು ಪ್ರತಿಭಟಿಸಿ ವಾಪಸ್ ಕಳುಹಿಸಿದರು. `ಶಂಬೊ'ವನ್ನು ಕೊಲ್ಲದಂತೆ ದೇವಾಲಯದ ಹಿಂದೂ ಭಕ್ತರು ಸಲ್ಲಿಸಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿ, ಹತ್ಯೆಗೆ ಆದೇಶಿಸಿದ ಹಿನ್ನೆಲೆಯಲ್ಲಿ ಪಶುವೈದ್ಯರು ಮತ್ತು ಪೊಲೀಸ್ ಅಧಿಕಾರಿಗಳು ಆಗಮಿಸಿದ್ದರು. ತಮ್ಮನ್ನು ಈಗ ವಾಪಸ್ ಕಳುಹಿಸಿದರೂ ನ್ಯಾಯಾಲಯದಿಂದ ವಾರಂಟ್ ಪಡೆದುಕೊಂಡು ಬಂದು ಹೋರಿಯನ್ನು ವಧಿಸುವುದಾಗಿ ಅಧಿಕಾರಿಗಳು ಪ್ರತಿಭಟನಾಕಾರರಿಗೆ ಹೇಳಿದರು.

2007: ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಸ್ವಾಮೀಜಿ ಅವರು 2007ರ 28 ರಿಂದ ನವೆಂಬರ್ 18 ರವರೆಗೆ ಬೆಂಗಳೂರಿನ ಗಿರಿನಗರದಲ್ಲಿ ಇರುವ ಶಾಖಾ ಮಠದಲ್ಲಿ ಚಾತುರ್ಮಾಸ್ಯ ಕುಳಿತುಕೊಳ್ಳುವರು. 28 ರ ಸಂಜೆ 5 ಗಂಟೆಗೆ ಯಶವಂತಪುರದ ಗಾಯತ್ರಿ ದೇವಸ್ಥಾನದ ಬಳಿ ಚಿದಂಬರ ದೀಕ್ಷಿತ ಸ್ವಾಮೀಜಿ ಅವರ ನೇತೃತ್ವದಲ್ಲಿ ಸ್ವಾಮೀಜಿಗಳು ಪುರ ಪ್ರವೇಶ ಮಾಡುವರು ಎಂದು ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಬಿ.ಕೃಷ್ಣ ಭಟ್ ಹಾಗೂ ಸಂಚಾಲಕ ಕೆ.ಲಕ್ಷ್ಮಿನಾರಾಯಣ ಪ್ರಕಟಿಸಿದರು. ಚಾತುರ್ಮಾಸ್ಯ ಕಾಲದಲ್ಲಿ ಇತರ ಕಾರ್ಯಕ್ರಮಗಳ ಜೊತೆಗೆ ವಿಶೇಷವಾಗಿ ವಾರದ ಎಲ್ಲ ದಿನಗಳಲ್ಲೂ ಬೆಂಗಳೂರಿನ ವಿವಿಧ ಕಡೆಗಳಲ್ಲಿ ಗೋ ಯಾತ್ರೆ ನಡೆಯುವುದು. ಈ ಸಂದರ್ಭದಲ್ಲಿ ಭಾರತೀಯ ಗೋವಿನ ಮಹತ್ವ ಸಾರುವ ಪುರ ಸಂಚಲನ ಮತ್ತು ಮನೆ ಬಾಗಿಲಿಗೆ ಗೋ ಸಂದೇಶ ಸಾರಲಾಗುವುದು. ಪ್ರತಿ ಭಾನುವಾರ ನಗರದ ವಿವಿಧ ವಲಯ ಕೇಂದ್ರಗಳಲ್ಲಿ ಗೋ ವಿಚಾರ ಪ್ರಬೋಧಕ, ಗಾನ. ನೃತ್ಯ ಸಮೇತ ಬೃಹತ್ ಸಾರ್ವಜನಿಕ ಸಭೆ ನಡೆಯುವುದು. ವಾರದ ದಿನದಲ್ಲಿ ಭಾರತೀಯ ಗೋ ತಳಿಗಳ ಸಂರಕ್ಷಣೆ, ಸಂವರ್ಧನೆ ಬಗ್ಗೆ ಅರಿವು ಮೂಡಿಸಲು ವಿವಿಧ ಶಾಲಾ ಕಾಲೇಜುಗಳಲ್ಲಿ ವೈಜ್ಞಾನಿಕ ಸಂವಾದ ನಡೆಸಲಾಗುವುದು. ಸೆಪ್ಟೆಂಬರ್ 26 ರಂದು ಸೀಮೋಲ್ಲಂಘನ, ನವೆಂಬರ್ 18 ರಂದು ಕೋಟಿ ನೀರಾಜನ - ಲಕ್ಷ ಮಹಿಳೆಯರು ಗೋಮಾತೆಗೆ ಕೋಟಿ ಸಂಖ್ಯೆಯ ದೀಪ ಬೆಳಗಲಾಗುವುದು ಎಂದು ಅವರು ಹೇಳಿದರು.

2007: ಬೆಂಗಳೂರು ಮಹಾತ್ಮ ಗಾಂಧಿ ರಸ್ತೆಯ ಪಬ್ಲಿಕ್ ಯುಟಿಲಿಟಿ ಕಟ್ಟಡದ ಮೊದಲ ಮಹಡಿಯಲ್ಲಿ ಬೆಂಕಿ ಹೊತ್ತಿಕೊಂಡ ಪರಿಣಾಮ ಎರಡು ಬಟ್ಟೆ ಮಳಿಗೆಗಳು ಸಂಪೂರ್ಣ ಸುಟ್ಟು ಭಸ್ಮವಾದವು.

2006: ಬೆಂಗಳೂರಿನ ಫ್ರೇಜರ್ಟೌನ್ ನಿವಾಸಿ, ವೈಟ್ಫೀಲ್ಡ್ ಕುಂದಲ ಹಳ್ಳಿಯ ಅವಿವಾ ಕಸ್ಟಮರ್ ಆಪರೇಷನಲ್ ಸರ್ವೀಸ್ ಉದ್ಯೋಗಿ ತಾನಿಯಾ ಬ್ಯಾನರ್ಜಿ ಅವರನ್ನು ಅಪಹರಿಸಿ ಕೊಲೆ ಮಾಡಿ ಮೃತದೇಹವನ್ನು ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಮಾರನಹಳ್ಳಿ ಸಮೀಪ ಹೆದ್ದಾರಿಯಲ್ಲಿ ಎಸೆಯಲಾಯಿತು. ಬೆಂಗಳೂರಿನ ಕಾಲ್ಸೆಂಟರ್ ಉದ್ಯೋಗಿ ಪ್ರತಿಭಾ ಕೊಲೆ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಇನ್ನೊಬ್ಬ ಕಾಲ್ಸೆಂಟರ್ ಉದ್ಯೋಗಿಯ ಈ ಹತ್ಯೆ ಜನರನ್ನು ಕಂಗೆಡಿಸಿತು.

2006: ಇಂಗ್ಲೆಂಡಿನ ಉತ್ತರ ಯಾರ್ಕ್ಷೈರ ತಂಡ ಕೌಂಟಿಯಲ್ಲಿ 5 ರನ್ಗಳಿಗೆ ಆಲೌಟ್ ಆಯಿತು. ಡಿಶ್ಫೋರ್ತ್ ತಂಡದ ವಿರುದ್ಧ ಉತ್ತರ ಯಾರ್ಕ್ಷೈರ್ ತಂಡದ ಎಲ್ಲ ಬ್ಯಾಟ್ಸ್ಮನ್ಗಳೂ ಶೂನ್ಯ ಸಂಪಾದನೆ ಮಾಡಿದರು. ಇವರಿಗೆ ಬಂದ ಐದು ರನ್ಗಳು ಇತರ ರನ್ಗಳಿಂದ ಕೊಡುಗೆಯಾಗಿ ಬಂದವುಗಳು. ನಿಡ್ಡರ್ಡೇಲ್ ಮತ್ತು ಅಮೆಚೂರ್ ಕ್ರಿಕೆಟ್ ಲೀಗಿನ 112 ವರ್ಷಗಳ ಇತಿಹಾಸದಲ್ಲಿ ಇದು ಅತ್ಯಂತ ಕಡಿಮೆ ಮೊತ್ತವಾಗಿದ್ದು ವಿಸ್ಡನ್ ಅಲ್ಮನಾಕ್ ಪ್ರಕಾರ ಇದು ಅತ್ಯಂತ ಅಪೂರ್ವ ಘಟನೆ. 1931ರಲ್ಲಿ ಮಿಡ್ಲ್ಯಾಂಡ್ಸ್ನಲ್ಲಿ ಶೆಪ್ಸ್ಟೋನ್ ಇಲೆವೆನ್ ತಂಡವು 4 ಇತರೆ ರನ್ಗಳಿಸಿ ಆಲೌಟ್ ಆಗಿತ್ತು.

2006: ಒಲಿಂಪಿಕ್ ಮಹಿಳಾ ಡಿಸ್ಕಸ್ ಚಾಂಪಿಯನ್ ರಷ್ಯಾದ ಕ್ರೀಡಾಪಟು ನತಾಲ್ಯಾ ಸಡೋವಾಗೆ ಅಂತರ್ರಾಷ್ಟ್ರೀಯ ಸ್ಪರ್ಧೆಗಳಲ್ಲಿ ಭಾಗವಹಿಸದಂತೆ ಎರಡು ವರ್ಷಗಳ ಅವಧಿಯ ನಿಷೇಧ ಹೇರಲಾಯಿತು. ಕಳೆದ ಮೇ 21ರಂದು ಹಾಲೆಂಡಿನ ಹೆಂಗೆಲೋದಲ್ಲಿ ನಡೆದ ಕೂಟ ಒಂದರಲ್ಲಿ ಸಡೋವಾ ನಿಷೇಧಿತ ಸ್ಟೆರಾಯ್ಡ್ ಮೆಥಾಂಡೀನನ್ ಸೇವಿಸಿದ್ದು ಪತ್ತೆಯಾಗಿತ್ತು.

2000: 14 ವರ್ಷದೊಳಗಿನ ಮಕ್ಕಳನ್ನು ಸರ್ಕಾರಿ ನೌಕರಿ, ಮನೆಗೆಲಸಕ್ಕೆ ನೇಮಕ ಮಾಡುವುದಕ್ಕೆ ಕೇಂದ್ರ ಸರ್ಕಾರದಿಂದ ನಿಷೇಧ.

1991: ಕಾವೇರಿ ಜಲ ವಿವಾದದ ಹಿನ್ನೆಲೆಯಲ್ಲಿ ತಮಿಳುನಾಡು ಮತ್ತು ಕರ್ನಾಟಕದಲ್ಲಿ ಬಂದ್.

1958: ತೇಜಸ್ವಿನಿ ನಿರಂಜನ ಜನನ.

1956: ಖ್ಯಾತ ಒರಿಯಾ ಕವಿ, ನಾಟಕಕಾರ, ಪ್ರಬಂಧಕಾರ ಗೋಧಾವರೀಶ್ ಮಿಶ್ರಾ ನಿಧನ.

1945: ಬ್ರಿಟನ್ ಪ್ರಧಾನಿ ಹುದ್ದೆಗೆ ವಿನ್ಸ್ಟನ್ ಚರ್ಚಿಲ್ ರಾಜೀನಾಮೆ.

1938: ಜಿ.ಜೆ. ಹರಿಜಿತ್ ಜನನ.

1935: ಶೈಲಜಾ ಉಡಚಣ ಜನನ.

1934: ಖ್ಯಾತ ಕಾದಂಬರಿಕಾರ ಎಲ್.ಎಲ್. ಭೈರಪ್ಪ ಅವರು ಲಿಂಗಣ್ಣಯ್ಯ- ಗೌರಮ್ಮ ದಂಪತಿಯ ಮಗನಾಗಿ ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲ್ಲೂಕಿನ ಸಂತೆಶಿವರ ಗ್ರಾಮದಲ್ಲಿ ಜನಿಸಿದರು. ಕಾಲೇಜು ವಿದ್ಯಾರ್ಥಿಯಾಗಿದ್ದಾಗಲೇ ಬರವಣಿಗೆ ಆರಂಭಿಸಿದ ಭೈರಪ್ಪ ಈವರೆಗೆ 22 ಕಾದಂಬರಿಗಳನ್ನು ಬರೆದಿದ್ದಾರೆ. ನೀಳ್ಗತೆ, ವಿಮರ್ಶಾಕೃತಿ, ಆತ್ಮವೃತ್ತಾಂತವನ್ನೂ ಬರೆದಿದ್ದಾರೆ. ಅವರ ಮೊದಲ ಕಾದಂಬರಿ `ಜಟ್ಟಿ ಮತ್ತು ಮಟ್ಟಿ'ಯಾದರೆ ಇತ್ತೀಚಿನ ಜನಪ್ರಿಯ ಕಾದಂಬರಿ `ಆವರಣ'.

1926: ವಾಗೀಶ್ವರಿ ಶಾಸ್ತ್ರಿ ಜನನ.

1923: ಖ್ಯಾತ ಹಿನ್ನೆಲೆ ಗಾಯಕ ಮುಖೇಶ್ಚಂದ್ರ ಮಾಥುರ್ ಜನನ.

1891: ಖ್ಯಾತ ಬಂಗಾಳಿ ಪ್ರಾಚ್ಯವಸ್ತು ಸಂಶೋಧಕ ರಾಜೇಂದ್ರಲಾಲ್ ಮಿತ್ರ (ರಾಜಾ) ನಿಧನ.

1775: ಮೊದಲ ಪೋಸ್ಟ್ ಮಾಸ್ಟರ್ ಜನರಲ್ ಆಗಿ ಬೆಂಜಮಿನ್ ಫ್ರಾಂಕ್ಲಿನ್ ನೇಮಕ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Sunday, July 26, 2009

ಇಂದಿನ ಇತಿಹಾಸ History Today ಜುಲೈ 25

ಇಂದಿನ ಇತಿಹಾಸ

ಜುಲೈ 25

ಕೇರಳದ ಮಾಜಿ ಮುಖ್ಯಮಂತ್ರಿ ಪಿಳ್ಳೈ ಎ. ಥಾನು ನಿಧನ.

2008: ಮಳೆ ಬರುವ ಮತ್ತು ಮೋಡ ಕವಿದ ವಾತಾವರಣದಿಂದ ಮಂಕಾಗಿದ್ದ ಬೆಂಗಳೂರಿನಲ್ಲಿ ಮಧ್ಯಾಹ್ನದಿಂದ ಸಂಜೆವರೆಗೆ ಒಂಬತ್ತು ಬಾಂಬ್ಗಳು ಸ್ಫೋಟಿಸಿ ನಾಗರಿಕರನ್ನು ಬೆಚ್ಚಿ ಬೀಳಿಸಿದವು. ಸರಣಿ ಸ್ಫೋಟದಲ್ಲಿ ಒಬ್ಬ ಮಹಿಳೆ ಮೃತಳಾಗಿ, ಎಂಟು ಮಂದಿ ಗಾಯಗೊಂಡರು.

2007: ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಈದಿನ ಮಧ್ಯಾಹ್ನ ಅಧಿಕಾರ ಸ್ವೀಕರಿಸುವ ಮೂಲಕ 72 ವರ್ಷದ ಪ್ರತಿಭಾ ಪಾಟೀಲ್ ನೂತನ ಇತಿಹಾಸ ಸೃಷ್ಟಿಸಿದರು. ದೆಹಲಿಯ ಸಂಸತ್ ಭವನದ ಕೇಂದ್ರ ಸಭಾಂಗಣದಲ್ಲಿ ಹನ್ನೆರಡನೇ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರಿಗೆ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಕೆ.ಜಿ.ಬಾಲಕೃಷ್ಣನ್ ಅಧಿಕಾರದ ಪ್ರಮಾಣ ವಚನ ಬೋಧಿಸಿದರು. ಇಂಗ್ಲಿಷಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪ್ರತಿಭಾ ಅವರು ಎಪಿಜೆ ಅಬ್ದುಲ್ ಕಲಾಂ ಜೊತೆ ಕುರ್ಚಿ ಬದಲಾಯಿಸಿಕೊಂಡರು. ಈ ಸಂದರ್ಭದಲ್ಲಿ 21 ಕುಶಾಲುತೋಪುಗಳನ್ನು ಹಾರಿಸಲಾಯಿತು.

2007: ಭಾರತ- ಅಮೆರಿಕ ಪರಮಾಣು ಒಪ್ಪಂದವನ್ನು ಜಾರಿಗೆ ತರಲು ಅನುವಾಗುವ 123ನೇ ಒಡಂಬಡಿಕೆಗೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಿತು. ರಾಜಕೀಯ ವ್ಯವಹಾರ ಮತ್ತು ಭದ್ರತೆ ಕುರಿತ ಸಂಪುಟ ಸಮಿತಿಗಳ ಜಂಟಿ ಸಭೆಯಲ್ಲಿ ಈ ಒಪ್ಪಂದಕ್ಕೆ ಒಪ್ಪಿಗೆ ನೀಡಲಾಯಿತು. ಹಿಂದಿನ ವಾರ ವಾಷಿಂಗ್ಟನ್ನಿನಲ್ಲಿ ನಡೆದ ಉಭಯ ದೇಶಗಳ ಅಧಿಕಾರಿ ಮಟ್ಟದ ಉನ್ನತ ಸಭೆಯಲ್ಲಿ ಈ ಒಡಂಬಡಿಕೆಯ ಕರಡು ಸಿದ್ಧಪಡಿಸಲಾಗಿತ್ತು. ಪ್ರಧಾನಿ ಮನಮೋಹನ್ ಸಿಂಗ್ ಅಧ್ಯಕ್ಷತೆ ವಹಿಸಿದ್ದ ಸಭೆಯಲ್ಲಿ ಸಚಿವರಾದ ಎ.ಕೆ. ಆಂಟನಿ, ಪ್ರಣವ್ ಮುಖರ್ಜಿ, ಶಿವರಾಜ ಪಾಟೀಲ್, ಪಿ. ಚಿದಂಬರಂ, ಶರದ್ ಪವಾರ್, ಲಾಲೂ ಪ್ರಸಾದ್ ಮತ್ತು ಟಿ.ಆರ್. ಬಾಲು ಭಾಗವಹಿಸಿದ್ದರು. ಇದರೊಂದಿಗೆ ಭಾರತ ಮತ್ತು ಅಮೆರಿಕ ನಡುವೆ ಕಳೆದ ಹಲವು ತಿಂಗಳುಗಳಿಂದ ನಡೆಯುತ್ತಿರುವ ಮಾತುಕತೆಗಳಿಗೆ ತೆರೆ ಬಿದ್ದಿತು.

2007: ಬದುಕಿನಲ್ಲಿ ಸರಳವಾದದ್ದೆಲ್ಲವನ್ನೂ ಪ್ರೀತಿಸುವ `ಕ್ಷಿಪಣಿ ಮನುಷ್ಯ' ಡಾ.ಎ ಪಿ ಜೆ ಅಬ್ದುಲ್ ಕಲಾಂ ಅವರಿಗೆ ನವದೆಹಲಿಯ ರಾಷ್ಟ್ರಪತಿ ಭವನದ ಎದುರು ಭವ್ಯವಾದ ಬೀಳ್ಕೊಡುಗೆ ನೀಡಲಾಯಿತು. 300 ಕೊಠಡಿಗಳ ಭವ್ಯ ಭವನದಲ್ಲಿ 5 ವರ್ಷ ಕಳೆದ ಕಲಾಂ ಈದಿನ ರಾತ್ರಿ ತಾತ್ಕಾಲಿಕವಾಗಿ ನೀಡಲಾದ 5 ಕೊಠಡಿಗಳ ಸೇನಾ ವಸತಿಗೃಹದಲ್ಲಿ ತಂಗಿದರು. ಅವರ ಕುಟುಂಬದ ನಿಕಟ ಸಂಬಂಧಿಗಳು ಈ ಸಂದರ್ಭದಲ್ಲಿ ಜೊತೆಗಿದ್ದರು.

2007: ಓಂಕಾರ ಆಶ್ರಮದ ಶಿವಪುರಿ ಸ್ವಾಮೀಜಿ (69) ಹೃದಯಾಘಾತದಿಂದ ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾದರು. ತುಮಕೂರು ಜಿಲ್ಲೆ ಕುಣಿಗಲ್ ತಾಲ್ಲೂಕಿನ ಹರ್ತಿ ಗ್ರಾಮದ ಯಲ್ಲಪ್ಪ ಹಾಗೂ ತಾಯಮ್ಮ ಅವರ ಪುತ್ರರಾದ ಸ್ವಾಮೀಜಿ ಕೈಲಾಸ ಆಶ್ರಮದ ತಿರುಚ್ಚಿ ಶ್ರೀಗಳ ಶಿಷ್ಯರಾಗಿದ್ದರು. ಎಳೆಯ ವಯಸ್ಸಿ ನಿಂದಲೇ ಧಾರ್ಮಿಕ ವಿಷಯಗಳ ಬಗ್ಗೆ ಆಸಕ್ತಿವಹಿಸಿದ್ದರು. ಇವರು 1994ರಲ್ಲಿ ಒಂಕಾರ ಆಶ್ರಮ ಸ್ಥಾಪಿಸಿದ್ದರು.

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಈದಿನ ಮತ್ತೊಬ್ಬನಿಗೆ ಗಲ್ಲು ಶಿಕ್ಷೆ ವಿಧಿಸಿತು. ತಲೆಮರೆಸಿಕೊಂಡ ಪ್ರಮುಖ ಆರೋಪಿ ಟೈಗರ್ ಮೆಮನ್ ನ ಆಪ್ತ ಸ್ನೇಹಿತನಾಗಿದ್ದ ಫಾರೂಕ್ ಪಾಲ್ವೆ ಗಲ್ಲು ಶಿಕ್ಷೆಗೆ ಒಳಗಾದ ವ್ಯಕ್ತಿ. ಈತ ದಾದರ್ನ ಶಿವಸೇನಾ ಭವನ ಮತ್ತು ನರಿಮನ್ ಪಾಯಿಂಟ್ ಬಳಿಯ ಏರ್ ಇಂಡಿಯಾ ಕಟ್ಟಡದಲ್ಲಿ ಬಾಂಬ್ ಇರಿಸಿದ್ದ. ಫಾರೂಕ್ ಅಡಗಿಸಿಟ್ಟ ಬಾಂಬ್ ಸ್ಫೋಟಗೊಂಡು 24 ಜನರು ಬಲಿಯಾಗಿ, 79 ಮಂದಿ ಗಾಯಗೊಂಡಿದ್ದರು. ಕಳೆದ ವರ್ಷದ ಅಕ್ಟೋಬರ್ 9 ರಂದು ಫಾರೂಕ್ ತಪ್ಪಿತಸ್ಥನೆಂದು ನ್ಯಾಯಾಲಯ ಘೋಷಿಸಿತ್ತು. ಟಾಡಾ ನ್ಯಾಯಾಲಯ ಈತನಿಗೆ 2 ಲಕ್ಷ 65 ಸಾವಿರ ರೂಪಾಯಿ ದಂಡ ತೆರುವಂತೆಯೂ ಆದೇಶಿಸಿತು.

2007: ದೇಶದ 12ನೇ ರಾಷ್ಟ್ರಪತಿಯಾಗಿ ಪ್ರತಿಭಾ ಪಾಟೀಲ್ ಅವರು ಅಧಿಕಾರ ವಹಿಸಿಕೊಂಡ ಮರುಗಳಿಗೆಯಲ್ಲೇ ಸೈಬರ್ ಲೋಕದಲ್ಲಿ ಮಾಜಿ ರಾಷ್ಟ್ರಪತಿ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಜನಪ್ರಿಯ ವೆಬ್ಸೈಟ್ ಮಾಯವಾಯಿತು. ಕಲಾಂ ಅವರು ಜನತೆಯ ರಾಷ್ಟ್ರಪತಿಯೆಂದೇ ಬಿಂಬಿತವಾಗಲು ಈ ವೆಬ್ಸೈಟ್ ಪ್ರಮುಖ ಪಾತ್ರವಹಿಸಿತ್ತು. ಈದಿನ ಮಧ್ಯಾಹ್ನ 2.30ಕ್ಕೆ ಸಂಸತ್ ಭವನದ ಸೆಂಟ್ರಲ್ ಹಾಲಿನಲ್ಲಿ ಪ್ರತಿಭಾ ಪಾಟೀಲ್ ಅವರು ಪ್ರಮಾಣ ವಚನ ಸ್ವೀಕರಿಸುತ್ತಿದ್ದಂತೆಯೇ ಕಲಾಂ ಅವರು `ಮಾಜಿ'ಯಾದರು, ಜತೆಗೆ ಅವರ ವೆಬ್ಸೈಟ್ ಕೂಡ! ಮೂರು ವರ್ಷಗಳಲ್ಲಿ ಡಾ.ಕಲಾಂ ಅವರ ವೆಬ್ಸೈಟ್ ಎಷ್ಟೊಂದು ಜನಪ್ರಿಯವಾಗಿತ್ತೆಂದರೆ ಪ್ರತಿ ಸೆಕೆಂಡ್ಗೆ ಮೂರು ಜನರು ಈ ವೆಬ್ಸೈಟನ್ನು ನೋಡುತ್ತಿದ್ದರು. ಸರಾಸರಿ ದಿನವೊಂದಕ್ಕೆ 2.50 ಲಕ್ಷ ಜನ ಈ ವೆಬ್ಸೈಟಿಗೆ ಭೇಟಿ ನೀಡಿದ್ದಾರೆ. 2004ರ ಆಗಸ್ಟ್ ತಿಂಗಳಿನಲ್ಲಿ ಈ ವೆಬ್ಸೈಟನ್ನು ಮರು ವಿನ್ಯಾಸಗೊಳಿಸಿ ಸರ್ಕಾರಿ ಶೈಲಿಗಿಂತ ವಿಭಿನ್ನವಾದ ಆಕರ್ಷಕ ವೆಬ್ಸೈಟನ್ನಾಗಿ ಪರಿವರ್ತಿಸಲಾಗಿತ್ತು. ಕಲಾಂ ಅವರು ತಾವು ಭಾಗವಹಿಸಿದ ಪ್ರತಿಯೊಂದು ಸಮಾರಂಭದಲ್ಲೂ ಈ ವೆಬ್ಸೈಟ್ ವಿಳಾಸವನ್ನು ಬಹಿರಂಗವಾಗಿ ಸಾರುತ್ತಿದ್ದರು. ದಿನವೊಂದಕ್ಕೆ ಕನಿಷ್ಟ 500 ಇ-ಮೇಲ್ಗಳು ಕಲಾಂ ಅವರಿಗೆ ಬರುತ್ತಿದ್ದವು. ಬಹುತೇಕ ಮೇಲ್ ಗಳನ್ನು ಸ್ವತಃ ಕಲಾಂ ಅವರೇ ಓದಿ ಅವುಗಳಿಗೆ ಉತ್ತರಿಸುತ್ತಿದ್ದರು. ಕೆಲವರನ್ನು ರಾಷ್ಟ್ರಪತಿ ಭವನಕ್ಕೆ ಭೇಟಿ ನೀಡುವಂತೆ ಆಹ್ವಾನಿಸುತ್ತಿದ್ದರು. ಹೀಗಾಗಿಯೇ ರಾಷ್ಟ್ರಪತಿ ಭವನವನ್ನು ಸಾಮಾನ್ಯ ಜನತೆಗೆ ತೆರೆದ ಕೀರ್ತಿ ಅವರಿಗೆ ಲಭಿಸಿತು. ಈ ಸೈಟಿನಲ್ಲಿ ಡಾ. ಕಲಾಂ ಅವರ ಎಲ್ಲ ಭಾಷಣಗಳೂ ಸದಾ ಜನತೆಗೆ ಲಭ್ಯವಾಗುತ್ತಿದ್ದವು.

2007: ವಾಯವ್ಯ ಪಾಕಿಸ್ತಾನದ ಬನ್ನು ನಗರದ ಮೇಲೆ ಅತಿಕ್ರಮಣಕಾರರು ನಸುಕಿನ ಜಾವ ನಡೆಸಿದ ರಾಕೆಟ್ ದಾಳಿಯಲ್ಲಿ 10 ಜನ ಸತ್ತು, 35ಕ್ಕೂ ಹೆಚ್ಚು ಜನರು ಗಾಯಗೊಂಡರು. ನಾಲ್ಕು ರಾಕೆಟ್ಗಳು ಇಲ್ಲಿನ ಎರಡು ಮನೆ, ಮಸೀದಿ ಮತ್ತು ಅಂಗಡಿಯೊಂದರ ಮೇಲೆ ಅಪ್ಪಳಿಸಿದವು.

2007: ಇಂಡೋನೇಷ್ಯಾದ ಸುಲಾವೇಸಿ ದ್ವೀಪದಲ್ಲಿ ಭಾರಿ ಮಳೆಯಿಂದ ಉಂಟಾದ ಪ್ರವಾಹ ಹಾಗೂ ಭೂ ಕುಸಿತಕ್ಕೆ ಕನಿಷ್ಠ 60 ಮಂದಿ ಬಲಿಯಾದರು.

2007: ಆಸ್ಟ್ರೇಲಿಯಾದ ನಾರ್ ಫೋಕ್ ದ್ವೀಪದಲ್ಲಿ 2002ರಲ್ಲಿ ಮಹಿಳೆಯೊಬ್ಬಳನ್ನು ಭೀಕರವಾಗಿ ಕಗ್ಗೊಲೆ ಮಾಡಿದ ಅಪರಾಧಕ್ಕಾಗಿ ನ್ಯೂಜಿಲೆಂಡಿನ ಅಡುಗೆ ಕೆಲಸಗಾರನಿಗೆ ಸ್ಥಳೀಯ ನ್ಯಾಯಾಲಯ ಕನಿಷ್ಠ 18 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಿತು. ಒಂದು ಕಾಲದಲ್ಲಿ ದಕ್ಷಿಣ ಪೆಸಿಫಿಕ್ನ ಬ್ರಿಟಿಷ್ ಕಾಲೋನಿಯಾಗಿದ್ದ ಈ ಪುಟ್ಟ ದ್ವೀಪದಲ್ಲಿ ಕಳೆದ 150 ವರ್ಷಗಳ ಅವಧಿಯಲ್ಲಿ ನಡೆದ ಮೊದಲ ಹತ್ಯೆ ಇದು. ಆರೋಪಿ ಗ್ಲೆನ್ ಮೆಕ್ ನೆಲ್ (29) ಎಂಬಾತನು ಜನೆಲ್ಲಿ ಪ್ಯಾಟನ್ (29) ಎಂಬ ಮಹಿಳೆಯನ್ನು ಅಟ್ಟಿಸಿಕೊಂಡು ಹೋಗಿ ಇರಿದು ಕೊಂದಿದ್ದ. ಆಗ ಪ್ಯಾಟನ್ ಮೂಳೆ ಮುರಿತ ಮತ್ತು ಹಲವು ಇರಿತ ಸೇರಿದಂತೆ 64 ಕಡೆ ತೀವ್ರತರ ಗಾಯಗಳಾಗಿದ್ದವು. ಈ ಹಿನ್ನೆಲೆಯಲ್ಲಿ ಗ್ಲೆನ್ಗೆ ಗರಿಷ್ಠ 24 ವರ್ಷಗಳ ಕಾರಾಗೃಹ ಶಿಕ್ಷೆ ವಿಧಿಸಲು ನ್ಯಾಯಾಲಯ ಆದೇಶಿಸಿತು.

2007: ಖ್ಯಾತ ಚಿತ್ರನಟಿ ಜಯಮಾಲಾ (ಜಯಂತಿ) ಅವರು ಬೆಂಗಳೂರು ವಿಶ್ವವಿದ್ಯಾಲಯಕ್ಕೆ ಸಲ್ಲಿಸಿದ `ಕರ್ನಾಟಕ ರಾಜ್ಯದ ನಿರಾಶ್ರಿತ ಮಹಿಳೆಯರ ಪುನರ್ವಸತಿ ಆಡಳಿತ ವ್ಯವಸ್ಥೆಯ ಒಂದು ಅಧ್ಯಯನ' ಎಂಬ ಪ್ರೌಢ ಪ್ರಬಂಧಕ್ಕೆ ವಿಶ್ವವಿದ್ಯಾಲಯ ಪಿಎಚ್.ಡಿ. ಪದವಿ ನೀಡಿದೆ. ಇವರಿಗೆ `ಕೆಂಪೇಗೌಡ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ಕೇಂದ್ರ ನಿರ್ದೇಶಕ ಎಂ.ಜಿ.ಕೃಷ್ಣನ್ ಮಾರ್ಗದರ್ಶಕರಾಗಿದ್ದರು. ಮಂಗಳೂರಿನಲ್ಲಿ ಜನಿಸಿದ ಜಯಮಾಲ ರಾಜ್ಯಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದರೂ ಸಿನಿಮಾ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡವರು. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಗೌರವ ಖಜಾಂಚಿಯಾದ ಇವರು ತುಳು, ಕನ್ನಡ, ತಮಿಳು, ತೆಲುಗು, ಹಿಂದಿ ಹಾಗೂ ಇಂಗ್ಲಿಷ್ ಚಿತ್ರಗಳಲ್ಲಿ ಅಭಿನಯಿಸಿರುವವರು. ಹದಿಮೂರು ವರ್ಷದವರಿದ್ದಾಗ `ಕಾಸ್ ದಾಯೆ ಕಂಡನೆ' ಎಂಬ ತುಳು ಚಿತ್ರದಲ್ಲಿ ಅಭಿನಯಿಸುವುದರೊಂದಿಗೆ ಚಲನಚಿತ್ರಕ್ಕೆ ಪದಾರ್ಪಣೆ ಮಾಡಿ, ಈವರೆಗೆ ದಕ್ಷಿಣ ಭಾರತ ಐದು ಭಾಷೆಗಳಲ್ಲಿ ಒಟ್ಟು 75 ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಐದು ಚಿತ್ರಗಳನ್ನು ನಿರ್ಮಿಸಿರುವ ಹೆಗ್ಗಳಿಕೆ ಕೂಡಾ ಇವರದು.

2006: ಕೊಚ್ಚಿಯ ರಾ (ಕೇಂದ್ರ ಸರ್ಕಾರದ ಸಂಶೋಧನೆ ಮತ್ತು ವಿಶ್ಲೇಷಣೆ ವಿಭಾಗ) ಮುಖ್ಯಸ್ಥ ಎಚ್. ತಾರಕನ್ ಅವರು ವಿ.ಆರ್. ಕೃಷ್ಣ ಅಯ್ಯರ್ ಪ್ರಶಸ್ತಿಗೆ ಆಯ್ಕೆಯಾದರು.

2006: ಕೊಂಕಣಿ ಕೂಟಮ್ ಬಹರೇನ್ ನೀಡುವ `ಕೊಂಕಣಿ ಕೂಟಮ್ 2006' ಪ್ರಶಸ್ತಿಗೆ ಖ್ಯಾತ ಕೊಂಕಣಿ ಭಾಷಾ ಲೇಖಕ, ಕವಿ, ಸಾಹಿತಿ ಮೆಲ್ವಿನ್ ರಾಡ್ರಿಗಸ್ ಕುಲಶೇಕರ ಅವರು ಆಯ್ಕೆಯಾದರು.

2006: ಕರ್ನಾಟಕದ 865 ಗ್ರಾಮಗಳು ಹಾಗೂ ಬೆಳಗಾವಿ ಸೇರಿದಂತೆ ಆರು ಪಟ್ಟಣಗಳನ್ನು ಮಹಾರಾಷ್ಟ್ರಕ್ಕೆ ವರ್ಗಾಯಿಸಬೇಕು ಎಂದು ಕೋರಿ ಅಲ್ಲಿನ ಉನ್ನತ ನಿಯೋಗವನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರಿಗೆ ಮನವಿ ಮಾಡಿತು.

1970: ಕೇರಳದ ಮಾಜಿ ಮುಖ್ಯಮಂತ್ರಿ ಪಿಳ್ಳೈ ಎ. ಥಾನು ನಿಧನ.

1950: ಖ್ಯಾತ ಚಿಂತಕಿ, ಸ್ತ್ರೀವಾದಿ ಪ್ರಭಾವತಿ ಅವರು ವೆಂಕಟಸುಬ್ಬಯ್ಯ- ರತ್ನಮ್ಮ ದಂಪತಿಯ ಮಗಳಾಗಿ ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲ್ಲೂಕಿನ ಹೊಸ ಹೊಳಲು ಗ್ರಾಮದಲ್ಲಿ ಜನಿಸಿದರು.

1938: ಖ್ಯಾತ ಹಿಂದಿ ಕವಿ ಕಾಳಿಚರಣ್ ಜನನ.

1929: ಲೋಕಸಭಾ ಮಾಜಿ ಅಧ್ಯಕ್ಷ ಸೋಮನಾಥ ಚಟರ್ಜಿ ಜನನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday, July 25, 2009

ಇಂದಿನ ಇತಿಹಾಸ History Today ಜುಲೈ 24

ಇಂದಿನ ಇತಿಹಾಸ

ಜುಲೈ 24

ಐದು ವರ್ಷ ಭಾರತದ ಯಶಸ್ವಿ ರಾಷ್ಟ್ರಪತಿಯಾಗಿ ಹುದ್ದೆಗೆ ಶೋಭೆ ತಂದುಕೊಟ್ಟ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಅಧಿಕಾರಾವಧಿಯ ಕೊನೆಯ ದಿನವಿದು. ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದರೂ ಕಲಾಂ ಅವರು ಒಬ್ಬ ಮಾನವಪ್ರೇಮಿಯಾಗಿ ಜನಮಾನಸದಲ್ಲಿ ಯಾವತ್ತಿಗೂ `ಜನರ ರಾಷ್ಟ್ರಪತಿ.' ಭಾರತ ರತ್ನ (1997), ಪದ್ಮಭೂಷಣ (1981), ಪದ್ಮ ವಿಭೂಷಣ (1991), ರಾಷ್ಟ್ರೀಯ ಭಾವೈಕ್ಯಕ್ಕಾಗಿ ಇಂದಿರಾಗಾಂಧಿ ಪ್ರಶಸ್ತಿ (1998) ಈ ಪ್ರಶಸ್ತಿಗಳು ಕಲಾಂ ಅವರ ಕಿರೀಟ ಸೇರುವ ಮೂಲಕ ತಮ್ಮ ಘನತೆ ಹೆಚ್ಚಿಸಿಕೊಂಡವು.

2008: ದೇಶ ಉದಯಿಸುವ ಮೊದಲು ಪಾಕಿಸ್ಥಾನದವರಾಗಿದ್ದ ಸುಮಾರು 1.60 ಲಕ್ಷ ಉರ್ದು ಮಾತನಾಡುವ ನಾಗರಿಕರಿಗೆ ಬಾಂಗ್ಲಾದೇಶದ ಚುನಾವಣಾ ಆಯೋಗವು ಮತದಾರರ ಪಟ್ಟಿಯಲ್ಲಿ ಹೆಸರು ನೋಂದಾಯಿಸಲು ಅನುಮತಿ ನೀಡಿತು. ಭಾರತ ವಿಭಜನೆಯಾದಾಗ ಬಿಹಾರದಿಂದ ವಲಸೆ ಹೋಗಿದ್ದ ಇವರಿಗೆ 1971ರಲ್ಲಿ ಬಾಂಗ್ಲಾದೇಶ ಉದಯವಾದಾಗಿನಿಂದ ಮತದಾನದ ಹಕ್ಕು ದೊರೆತಿರಲಿಲ್ಲ. ಕಳೆದ ಮೇ ತಿಂಗಳಲ್ಲಿ ಹೈಕೋರ್ಟ್ ತೀರ್ಪು ನೀಡಿ ಈ ಬಿಹಾರಿ ವಲಸಿಗರಿಗೆ ಪೌರತ್ವ ನೀಡಲು ಆದೇಶಿಸಿತ್ತು.

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಈದಿನ ಮತ್ತೆ ಮೂವರು ಆರೋಪಿಗಳಿಗೆ ಮರಣದಂಡನೆ ಹಾಗೂ ಇನ್ನೊಬ್ಬ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಿತು. 1993ರ ಮಾರ್ಚ್ 12ರಂದು ಸರಣಿ ಬಾಂಬ್ ಸ್ಫೋಟಗಳು ಸಂಭವಿಸಿದ ಸಮಯದಲ್ಲಿ ನಗರದ ಮಾಹಿಮ್ ಪ್ರದೇಶದಲ್ಲಿ ಮೀನುಗಾರರ ಕಾಲೋನಿ ಮೇಲೆ ಗ್ರೆನೇಡ್ ದಾಳಿ ನಡೆಸಲಾಗಿತ್ತು. ಈ ಘಟನೆಯಲ್ಲಿ ಮೂವರು ಸಾವನ್ನಪ್ಪಿ ಆರು ಜನ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯದ ನ್ಯಾಯಾಧೀಶ ಪಿ.ಡಿ. ಕೋಡೆ ಅವರು ಆರೋಪಿಗಳಾದ ಜಾಕೀರ್ ಹುಸೇನ್ ಶೇಖ್, ಫಿರೋಜ್ ಮಲ್ಲಿಕ್ ಮತ್ತು ಅಬ್ದುಲ್ ಅಕ್ತರ್ ಖಾನ್ಗೆ ಗಲ್ಲು ಶಿಕ್ಷೆ ಮತ್ತು ಇನ್ನೊಬ್ಬ ಆರೋಪಿ ಮೋಹಿನ್ ಖುರೇಷಿಗೆ ಜೀವಾವಧಿ ಶಿಕ್ಷೆ ವಿಧಿಸಿದರು. ಈ ಗ್ರೆನೇಡ್ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಈ ಮೊದಲೇ ಆರೋಪಿ ಬಷೀರ್ ಕಹಿರುಲ್ಲಾಗೆ ಸಹ ಜೀವಾವಧಿ ಶಿಕ್ಷೆ ವಿಧಿಸಿತ್ತು. 257 ಜನರನ್ನು ಬಲಿ ತೆಗೆದುಕೊಂಡ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ ಇದುವರೆಗೆ 100 ಆರೋಪಿಗಳಲ್ಲಿ 91 ಆರೋಪಿಗಳಿಗೆ ಶಿಕ್ಷೆ ವಿಧಿಸಿದಂತಾಯಿತು.

2007: ಐದು ವರ್ಷ ಭಾರತದ ಯಶಸ್ವಿ ರಾಷ್ಟ್ರಪತಿಯಾಗಿ ಹುದ್ದೆಗೆ ಶೋಭೆ ತಂದುಕೊಟ್ಟ ಡಾ.ಎ.ಪಿ.ಜೆ ಅಬ್ದುಲ್ ಕಲಾಂ ಅವರ ಅಧಿಕಾರಾವಧಿಯ ಕೊನೆಯ ದಿನವಿದು. ರಾಷ್ಟ್ರಪತಿ ಹುದ್ದೆಯಿಂದ ನಿರ್ಗಮಿಸಿದರೂ ಕಲಾಂ ಅವರು ಒಬ್ಬ ಮಾನವಪ್ರೇಮಿಯಾಗಿ ಜನಮಾನಸದಲ್ಲಿ ಯಾವತ್ತಿಗೂ `ಜನರ ರಾಷ್ಟ್ರಪತಿ.' ಭಾರತ ರತ್ನ (1997), ಪದ್ಮಭೂಷಣ (1981), ಪದ್ಮ ವಿಭೂಷಣ (1991), ರಾಷ್ಟ್ರೀಯ ಭಾವೈಕ್ಯಕ್ಕಾಗಿ ಇಂದಿರಾಗಾಂಧಿ ಪ್ರಶಸ್ತಿ (1998) ಈ ಪ್ರಶಸ್ತಿಗಳು ಕಲಾಂ ಅವರ ಕಿರೀಟ ಸೇರುವ ಮೂಲಕ ತಮ್ಮ ಘನತೆ ಹೆಚ್ಚಿಸಿಕೊಂಡವು. `ಕನಸು ಕಾಣಿ, ಕಾಣುತ್ತಿರಿ, ಕಾಣುತ್ತಲೇ ಇರಿ. ಉದಾತ್ತವಾದುದನ್ನು ಯೋಚಿಸಿ' -ಎನ್ನುತ್ತಾ ಅಪ್ಪಟ ಕನಸುಗಾರನಾಗಿ ಕಲಾಂ ಮಕ್ಕಳಲ್ಲಿ ಉದಾತ್ತ ಚಿಂತನೆಯ ಬೆಳಕು ಮೂಡಿಸುತ್ತಿದ್ದ ಕಲಾಂ ದೇಶದ ಪ್ರಗತಿಗಾಗಿ ತಂತ್ರಜ್ಞಾನದ ಬಳಕೆಯನ್ನು ಪ್ರಬಲವಾಗಿ ಪ್ರತಿಪಾದಿಸಿದವರು. ಮಕ್ಕಳೊಂದಿಗೆ ಮಗುವಾಗುತ್ತಿದ್ದ ಕಲಾಂ ವಿಶ್ವದ ಅತ್ಯಂತ ಎತ್ತರದ ನೀರ್ಗಲ್ಲ ಪ್ರದೇಶ ಸಿಯಾಚಿನ್ ನಲ್ಲಿ ಕಾಲಿಟ್ಟ ಮೊದಲ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರರಾದವರು. ಜಲಾಂತರ್ಗಾಮಿ ನೌಕೆ ಹಾಗೂ ಸೂಪರ್ಸಾನಿಕ್ `ಸುಖೋಯ್ 30' ಯುದ್ಧ ವಿಮಾನದಲ್ಲಿ ಪ್ರಯಾಣಿಸಿದ ಪ್ರಥಮ ರಾಷ್ಟ್ರಪತಿ ಎಂಬ ಕೀರ್ತಿ ಕೂಡಾ ಕಲಾಂ ಅವರದೇ. ದೇಶದ ಮೊಟ್ಟಮೊದಲ ದೇಶೀಯ ತಂತ್ರಜ್ಞಾನದ ಉಪಗ್ರಹ ಉಡಾವಣಾ ವಾಹನ (ಎಸ್ಎಲ್ವಿ -3) ತಯಾರಿಕೆಯಲ್ಲಿ ಯೋಜನಾ ನಿರ್ದೇಶಕರಾಗಿ ಕಲಾಂ ಕೊಡುಗೆ ಅನನ್ಯ. 1980ರಲ್ಲಿ `ರೋಹಿಣಿ' ಉಪಗ್ರಹವನ್ನು ಇದೇ ಉಡಾವಣಾ ವಾಹನದ ಮೂಲಕ ಕಕ್ಷೆಗೆ ಹಾರಿಬಿಟ್ಟದ್ದು ಈಗ ಇತಿಹಾಸ. ಇಸ್ರೋದ ಉಪಗ್ರಹ ಉಡಾವಣಾ ಯೋಜನೆಯಲ್ಲಿ ಕಲಾಂ ಅವರದ್ದು ಸಿಂಹಪಾಲು. ಕಲಾಂ 1992ರಿಂದ 1999ರವರೆಗೆ ರಕ್ಷಣಾ ಸಚಿವಾಲಯದ ವೈಜ್ಞಾನಿಕ ಸಲಹೆಗಾರರಾಗಿ ಹಾಗೂ ರಕ್ಷಣಾ ಸಂಶೋಧನಾ ಅಭಿವೃದ್ಧಿ ಸಂಸ್ಥೆಯ (ಡಿಆರ್ಡಿಓ)ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಇದೇ ಅವಧಿಯಲ್ಲಿ ದೇಶ ಪ್ರೋಖ್ರಾನಿನಲ್ಲಿ ಪರಮಾಣು ಬಾಂಬನ್ನು ಪ್ರಯೋಗಾರ್ಥ ಪ್ರಯೋಗಿಸಿದ್ದು ಎಂಬುದು ಗಮನಾರ್ಹ. ಕಲಾಂ ಅವರು ಮದ್ರಾಸ್ ಇನ್ಸಿಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಏರೋನಾಟಿಕಲ್ ಪದವಿ ಪಡೆದವರು. 1931 ಅಕ್ಟೋಬರ್ 15 ಕಲಾಂ ಜನ್ಮದಿನ. ರಾಮೇಶ್ವರದ ಸಾಮಾನ್ಯ ಕುಟುಂಬದಲ್ಲಿ ಜನಿಸಿದ ಅಸಾಮಾನ್ಯ ಅಬ್ದುಲ್ ಕಲಾಂ ಅವರು ಬೆಳೆದುಬಂದ ರೀತಿ ಮಾತ್ರ ಬೆರಗುಹುಟ್ಟಿಸುವಂತಹದು. ಅವರ ಬದುಕು ಎಲ್ಲರಿಗೂ ಆದರ್ಶಪ್ರಾಯ.

2007: ಆಫ್ಘಾನಿಸ್ಥಾನ ಗಡಿಯಲ್ಲಿರುವ ಬಲೂಚಿಸ್ಥಾನ ಪ್ರಾಂತ್ಯದಲ್ಲಿ ತಾಲಿಬಾನ್ ಪ್ರಮುಖ ನಾಯಕ ಅಬ್ದುಲ್ಲಾ ಮೆಹ್ಸುದ್ ಎಂಬಾತ ಸೇನಾ ದಾಳಿಯ ಸಂದರ್ಭದಲ್ಲಿ ಬಂಧನವನ್ನು ತಪ್ಪಿಸಿಕೊಳ್ಳಲು ಸ್ವತಃ ಕೈ ಬಾಂಬ್ ಸ್ಫೋಟಿಸಿ ಆತ್ಮಹತ್ಯೆ ಮಾಡಿಕೊಂಡ. ತಾಲಿಬಾನ್ ಪರವಾಗಿ ಹೋರಾಡುತ್ತಿದ್ದ 32 ವರ್ಷದ ಅಬ್ದುಲ್ಲಾ 2003ರಲ್ಲಿ ಗ್ವಾಂಟೆನಾಮೋ ಕೊಲ್ಲಿ ಪ್ರದೇಶದಲ್ಲಿ ಅಮೆರಿಕ ಮತ್ತು ಪಾಕಿಸ್ತಾನ ಜಂಟಿ ಸೇನಾ ಕಾರ್ಯಾಚರಣೆಯಲ್ಲಿ ಬಂಧಿತನಾಗಿದ್ದ. ಈತನನ್ನು 2004 ಮಾರ್ಚ್ ತಿಂಗಳಲ್ಲಿ ಬಿಡುಗಡೆ ಮಾಡಲಾಗಿತ್ತು. ಆ ಬಳಿಕ ದಕ್ಷಿಣ ವಜೀರಿಸ್ಥಾನದಲ್ಲಿ ತಾಲಿಬಾನ್ ಉಗ್ರಗಾಮಿ ಸಂಘಟನೆಯನ್ನು ಮುನ್ನಡೆಸುತ್ತಿದ್ದ ಈತ, ಚೀನಾದ ಇಬ್ಬರು ಎಂಜಿನಿಯರುಗಳ ಅಪಹರಣಕ್ಕೆ ಕಾರಣನಾಗಿದ್ದ. ಇದಲ್ಲದೆ, ಇತ್ತೀಚೆಗೆ ಪಾಕಿಸ್ಥಾನದ ಪೇಶಾವರ ಮತ್ತು ಹಬ್ ಪಟ್ಟಣಗಳಲ್ಲಿ ಚೀನಿಯರ ಮೇಲೆ ನಡೆದ ದಾಳಿಯಲ್ಲಿ ಈತನ ಕೈವಾಡವಿತ್ತು. ಹೀಗಾಗಿ ಈತನನ್ನು ಹಿಡಿಯಲು ಪಾಕಿಸ್ಥಾನ ಸೇನೆ ಬಲೆ ಬೀಸಿತ್ತು.
ಅಬ್ದುಲ್ಲಾ ತಾಲಿಬಾನ್ ಪರ ಅನುಕಂಪ ಹೊಂದಿದ ಜಮಾತ್ ಉಲೆಮಾ ಇಸ್ಲಾಮಿನ ಉನ್ನತ ನಾಯಕ ಶೇಖ್ ಅಯೂಬ್ ಮುತ್ತಖೇಲ್ನನ್ನು ಭೇಟಿಯಾಗಲು ಬಂದಾಗ ಸೇನೆ ಈತನ ಸೆರೆಗಾಗಿ ಬಲೆ ಬೀಸಿತು.

2007: ಭಿಕ್ಷುಕನನ್ನು ಕೊಲೆ ಮಾಡಿ ಆತನ ಅಂಗಾಂಗಗಳನ್ನು ಆಸ್ಪತ್ರೆಯೊಂದಕ್ಕೆ ಮಾರಾಟ ಮಾಡಿದ ಆರೋಪ ಸಾಬೀತಾದ ಕಾರಣ ಚೀನಾದ ಹೈಬೆ ಪ್ರಾಂತ್ಯದ ಉತ್ತರ ಭಾಗದ ಗ್ರಾಮದ ನಿವಾಸಿ ವಾಂಗ್ ಚಾವೊಯಂಗ್ ಎಂಬಾತನಿಗೆ ಗಲ್ಲು ಶಿಕ್ಷೆ ವಿಧಿಸಲಾಯಿತು. ಈತ ಕಳೆದ ವರ್ಷ ತಾಂಗ್ ಗೆಫಾಯ್ ಎಂಬ ಭಿಕ್ಷುಕನನ್ನು ಅಪಹರಿಸಿ ಕೊಲೆ ಮಾಡಿದ್ದ ಎಂದು `ಬೀಜಿಂಗ್ ಟೈಮ್ಸ್' ವರದಿ ಮಾಡಿದೆ. 2006ರ ನವೆಂಬರ್ ತಿಂಗಳಲ್ಲಿ ಚಾವೊಯಂಗ್ ನನ್ನು ಬಂಧಿಸಲಾಗಿತ್ತು. ಚಾವೊ ವೈದ್ಯರಿಗೆ ಸುಳ್ಳು ಹೇಳಿ ಭಿಕ್ಷುಕನ ಅಂಗಾಂಗ ಮಾರಾಟ ಮಾಡಿ 2,000 ಡಾಲರ್ ಸಂಪಾದಿಸಿದ್ದ.

2007: ಚೀನಾದ ವೈದ್ಯರು ರೋಗಿಯೊಬ್ಬರ ತಲೆಯಲ್ಲಿ ಬೆಳೆದಿದ್ದ 15 ಕೆಜಿ ತೂಕದ ದುರ್ಮಾಂಸದ ಗಡ್ಡೆಯನ್ನು ಹೊರ ತೆಗೆದು ನೂತನ ದಾಖಲೆ ನಿರ್ಮಿಸಿದರು. 31ರ ವಯಸ್ಸಿನ ಹುಂಗ್ ಚುಂಚಿ ತಲೆಯ ಎಡ ಭಾಗದಲ್ಲಿ ದುರ್ಮಾಂಸ ಬೆಳದ ಪರಿಣಾಮ ಆತನ ಎಡಗಣ್ಣು ಸಂಪೂರ್ಣ ಕಾಣದಂತಾಗಿತ್ತು. ಕೆಳ ದವಡೆಯಿಂದ ಕಿವಿಯ ಭಾಗ ಊದಿಕೊಂಡು ಭುಜದ ಕಡೆ ವಾಲಿಕೊಂಡಿತ್ತು. ಇದನ್ನು ಸವಾಲಾಗಿ ಸ್ವೀಕರಿಸಿದ ಚೀನಾ ವೈದ್ಯರು ಸುಮಾರು ಒಂದೂವರೆ ಗಂಟೆ ಶಸ್ತ್ರಚಿಕಿತ್ಸೆ ನಡೆಸಿ, ತಲೆ ಹಾಗೂ ಮುಖದ ಭಾಗದಲ್ಲಿದ್ದ ಗಡ್ಡೆಯನ್ನು ಹೊರ ತೆಗೆದರು. ಸುಮಾರು 30 ವರ್ಷಗಳಿಂದ ಈತ ಈ ಬಾಧೆ ಅನುಭವಿಸುತ್ತಿದ್ದ.

2007: ಬ್ರಿಟಿಷ್ ನ್ಯಾಯಾಲಯವೊಂದು ಹಿಂದೂ ಸಮುದಾಯದ ಪ್ರತಿಭಟನೆಯ ನಡುವೆಯೂ ಕ್ಷಯರೋಗ ತಗುಲಿದ ವೇಲ್ಸ್ನ ಸ್ಕಂದ ವೇಲ್ ದೇವಾಲಯದ ಪವಿತ್ರ `ಶಂಬೊ' ಹೋರಿಯನ್ನು ವಧಿಸಲು ಆದೇಶ ನೀಡಿತು. `ಹೋರಿಯನ್ನು ಸಂಹರಿಸದೆ ಬೇರೆ ಮಾರ್ಗವಿಲ್ಲ' ಎಂದು ನ್ಯಾಯಾಧೀಶ ಮಾಲ್ಕಂ ಪಿಲ್ ನೇತೃತ್ವದ ಮೂವರು ಸದಸ್ಯರ ನ್ಯಾಯಪೀಠ ಅಭಿಪ್ರಾಯ ಪಟ್ಟಿತು. ಆದರೆ ನ್ಯಾಯಾಲಯದ ತೀರ್ಪಿನಿಂದ ಪಶುಗಳನ್ನು ಪೂಜಿಸುವ ಹಿಂದೂ ಜನರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿದೆ ಎಂದು ಸ್ಕಂದ ವೇಲ್ ದೇವಾಲಯದ ಸ್ವಾಮಿ ಸೂರ್ಯಾನಂದ ಪ್ರತಿಕ್ರಿಯಿಸಿದರು.

2006: ಸ್ವಾತಂತ್ರ್ಯ ಹೋರಾಟಗಾರ ನೇತಾಜಿ ಸುಭಾಶ್ಚಂದ್ರ ಬೋಸ್ ಅವರು ಡೆಹ್ರಾಡೂನ್ನ ಆಶ್ರಮದಲ್ಲಿ `ಸ್ವಾಮೀಜಿ' ವೇಷದಲ್ಲಿ ಜೀವಿಸಿ, 1977ರ ಏಪ್ರಿಲ್ 10ರಂದು ನಿಧನರಾದರು ಎಂದು ಸಂಶೋಧಕರ ತಂಡವೊಂದು ಅಭಿಪ್ರಾಯಪಟ್ಟಿತು. ತಮ್ಮ ಸಂಶೋಧನೆಗೆ ಸಂಬಂಧಿಸಿದಂತೆ ಸಂಭಾಷಣೆ, ಛಾಯಾಚಿತ್ರಗಳು ಮತ್ತು ಪತ್ರಗಳ ದಾಖಲೆಯನ್ನು 4 ಮಂದಿ ಸ್ವತಂತ್ರ ಸಂಶೋಧಕರ ಈ ತಂಡ ಡೆಹ್ರಾಡೂನಿನಲ್ಲಿ ಬಿಡುಗಡೆ ಮಾಡಿತು. ಮಾಜಿ ಸಿಬಿಐ ಇನ್ಸ್ಪೆಕ್ಟರ್ ಓಂ ಪ್ರಕಾಶ್ ಶರ್ಮಾ, ಡಿಎವಿ ಕಾಲೇಜು ಪ್ರೊಫೆಸರ್ ದೇವೇಂದ್ರ ಭಾಸಿನ್ ಮತ್ತು ಇತರ ಇಬ್ಬರು ಈ ತಂಡದ ಸದಸ್ಯರು. ಪಶ್ಚಿಮ ಬಂಗಾಳದ ಜಲಪಾಯಿಗುರಿಯಿಂದ 1973ರಲ್ಲಿ ಡೆಹ್ರಾಡೂನ್ಗೆ ಬಂದಿದ್ದ ಈ ಸ್ವಾಮೀಜಿಯ ಚಿತ್ರಗಳಲ್ಲಿ ನೇತಾಜಿ ಹೋಲಿಕೆ ಇದೆ. ಇಂತಹ ಸ್ವಾಮೀಜಿ ಒಬ್ಬರ ಬಗ್ಗೆ ನೇತಾಜಿ ಕಣ್ಮರೆ ಬಗ್ಗೆ ತನಿಖೆ ನಡೆಸಿರುವ ಮುಖರ್ಜಿ ಆಯೋಗವೂ ಪ್ರಸ್ತಾಪಿಸಿದೆ. ಡೆಹ್ರಾಡೂನಿಗೆ ಬರುವ ಮುನ್ನ ಈ ಸ್ವಾಮೀಜಿ ಜಲಪಾಯಿಗುರಿಯ ಶೌಲ್ಮರಿ ಆಶ್ರಮದಲ್ಲಿ ಇದ್ದರು ಎಂದು ಮುಖರ್ಜಿ ಆಯೋಗ ಹೇಳಿತ್ತು. ಈ ಸ್ವಾಮೀಜಿಯ ಅಂತ್ಯಕ್ರಿಯೆ 1977ರ ಏಪ್ರಿಲ್ 13ರಂದು ಹೃಷಿಕೇಶದಲ್ಲಿ ನಡೆದಿತ್ತು. ಸ್ವಾಮೀಜಿಯ ಆಪ್ತ ಕಾರ್ಯದರ್ಶಿಯಾಗಿದ್ದ ರಮಣಿ ರಂಜನ್ ದಾಸ್ ಅವರು ಸ್ವಾಮೀಜಿ ಭಸ್ಮದ ವಿಸರ್ಜನೆ ಕಾಲದಲ್ಲಿ `ನೇತಾಜಿ ನೀವು ನನಗೆ ವಹಿಸಿದ ಕಾರ್ಯ ಪೂರ್ಣಗೊಂಡಿತು' ಎಂದು ಉದ್ಘರಿಸಿದ್ದರು ಎಂದು ಸ್ವಾಮೀಜಿಯ ಅಂತ್ಯಕ್ರಿಯೆ ಕಾಲದಲ್ಲಿ ಹಾಜರಿದ್ದ ಪೊಲೀಸ್ ಇನ್ಸ್ಪೆಕ್ಟರ್ ಇಂದರ್ಪಾಲ್ಸಿಂಗ್ ನೆನಪು ಮಾಡಿಕೊಂಡದ್ದನ್ನೂ ತಂಡ ಉಲ್ಲೇಖಿಸಿದೆ. ಈಗ ಲಭಿಸಿರುವ ಸಾಕ್ಷ್ಯಾಧಾರಗಳ ಬಗ್ಗೆ ಸರ್ಕಾರ ಸಿಬಿಐ ತನಿಖೆ ನಡೆಸಬೇಕು ಎಂದು ಸಂಶೋಧಕರ ತಂಡ ಆಗ್ರಹಿಸಿತು.

2006: ಪೋರ್ಟೊರಿಕೊದ 18ರ ಹರೆಯದ ಜಲೈಕಾ ರಿವೆರಾ ಮೆಂಡೋಜಾ 2006ನೇ ಸಾಲಿನ ಭುವನ ಸುಂದರಿಯಾಗಿ ಆಯ್ಕೆಯಾದರು. ಜಪಾನಿನ ಕುರಾರಾ ಚಿಬಾನಾ ಎರಡನೇ ಸ್ಥಾನ ಗಳಿಸಿದರು.

2006: ಕರ್ನಾಟಕ ವಿಧಾನ ಮಂಡಲವು ವಿಶೇಷ ಅಧಿವೇಶನದಲ್ಲಿ ಅಂಗೀಕರಿಸಿ ಅಂಕಿತಕ್ಕಾಗಿ ಕಳುಹಿಸಿದ್ದ `ಲಾಭದಾಯಕ ಹುದ್ದೆ'ಗೆ ಸಂಬಂಧಿಸಿದ ಮಸೂದೆಯನ್ನು ರಾಜ್ಯಪಾಲರು ಈ ದಿನ ವಾಪಸ್ ಕಳುಹಿಸಿದರು.

1997: ಮಾಜಿ ಹಂಗಾಮಿ ಪ್ರಧಾನಿ ಗುಲ್ಜಾರಿಲಾಲ್ ನಂದಾ ಮತ್ತು ಮರಣೋತ್ತರವಾಗಿ ಸ್ವಾತಂತ್ರ್ಯ ಹೋರಾಟಗಾರ್ತಿ ಅರುಣಾ ಅಸಫ್ ಅಲಿ ಅವರಿಗೆ ಭಾರತದ ಅತ್ಯುನ್ನತ ನಾಗರಿಕ ಗೌರವ ಭಾರತರತ್ನ ಪ್ರಶಸ್ತಿಯನ್ನು ನೀಡಲಾಯಿತು.

1993: ಲೋಕಸಭೆಯ ವಿರೋಧ ಪಕ್ಷ ನಾಯಕರಾಗಿ ಅಟಲ್ ಬಿಹಾರಿ ವಾಜಪೇಯಿ ಆಯ್ಕೆಯಾದರು.

1969: ಗಗನನೌಕೆ ಅಪೋಲೊ-11 ಭೂಮಿಗೆ ವಾಪಸಾಯಿತು.

1932: ರೋಗಿಗಳ ಶುಶ್ರೂಷೆ ಮತ್ತು ಮಾನವೀಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಸಲುವಾಗಿ ರಾಮಕೃಷ್ಣ ಮಿಷನ್ ಸೇವಾ ಪ್ರತಿಷ್ಠಾನ ಅಸ್ತಿತ್ವಕ್ಕೆ ಬಂದಿತು.

1874: ರಂಗಭೂಮಿ ನಟ, ಪತ್ರಿಕೋದ್ಯಮಿ, ಕರ್ನಾಟಕ ಏಕೀಕರಣಕ್ಕಾಗಿ ದುಡಿದವರಲ್ಲಿ ಪ್ರಮುಖರಾಗಿದ್ದ ಲೇಖಕ ಮುದವೀಡು ಕೃಷ್ಣರಾಯ (24-7-1874ರಿಂದ 7-9-1947) ಅವರು ಹನುಮಂತರಾವ್- ಗಂಗಾಬಾಯಿ ದಂಪತಿಯ ಮಗನಾಗಿ ಬಾಗಲಕೋಟೆಯಲ್ಲಿ ಜನಿಸಿದರು. ಸ್ವಾತಂತ್ರ್ಯ ಹೋರಾಟಗಾರರಾಗಿ, ಪತ್ರಕರ್ತ, ಸಾಹಿತಿ, ನಾಟಕಕಾರ ರಂಗಭೂಮಿ ನಿರ್ದೇಶಕರಾಗಿ ನಾಡಿಗೆ ಅಪಾರ ಸೇವೆ ಸಲ್ಲಿಸಿದ ಮುದವೀಡು ಅವರನ್ನು 1939ರಲ್ಲಿ ಬೆಳಗಾವಿಯಲ್ಲಿ ನಡೆದ 24ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಮಾಡುವ ಮೂಲಕ ಜನತೆ ಗೌರವಿಸಿತು. ಆಂಧ್ರಪ್ರದೇಶಕ್ಕೆ ಸೇರಿದ ಮುದವೀಡು ಗ್ರಾಮದಿಂದ ಇವರ ಹಿರಿಯರು ಬಂದದ್ದರಿಂದ ಈ ಕುಟುಂಬಕ್ಕೆ ಮುದವೀಡು ಹೆಸರು ಅಂಟಿಕೊಂಡಿತು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜುಲೈ 23

ಇಂದಿನ ಇತಿಹಾಸ

ಜುಲೈ 23

ಆಫ್ಘಾನಿಸ್ಥಾನದ ಕೊನೆಯ ದೊರೆ ಮಹಮ್ಮದ್ ಜಾಹಿರ್ ಷಾ (92) ಅವರು ಈದಿನ ನಿಧನರಾದರು. ಆಫ್ಘಾನಿಸ್ಥಾನದಲ್ಲಿ 1973ರಲ್ಲಿ ಆಡಳಿತ ನಡೆಸುತ್ತಿದ್ದ ದೊರೆ ಷಾ ವಿರುದ್ಧ ಅವರ ಸಂಬಂಧಿ ಮೊಹಮದ್ ದಾವೂದ್ ದಂಗೆ ಎದ್ದರು. ದೊರೆ ಆಗ ದೇಶದಲ್ಲಿ ಇರಲಿಲ್ಲ. ಇಟಲಿಯಲ್ಲಿ ರಜಾ ದಿನ ಕಳೆಯುತ್ತಿದ್ದರು. ದಂಗೆಯ ವಿಷಯ ಕೇಳಿ ಅಲ್ಲಿಂದಲೇ ಅವರು ಅಧಿಕಾರ ತ್ಯಜಿಸಿದರು.

2008: ಅಣು ಒಪ್ಪಂದ ವಿಷಯದಲ್ಲಿ ಎಡಪಕ್ಷಗಳನ್ನು ಬೆಂಬಲಿಸದೇ ನಿಷ್ಪಕ್ಷಪಾತವಾಗಿ ನಡೆದುಕೊಂಡ ಕಾರಣಕ್ಕೆ ಲೋಕಸಭಾಧ್ಯಕ್ಷ ಸೋಮನಾಥ ಚಟರ್ಜಿ ಕೊನೆಗೂ ತಲೆದಂಡ ತೆತ್ತರು. ಹುದ್ದೆಗೆ ರಾಜೀನಾಮೆ ನೀಡಬೇಕೆಂಬ ಸೂಚನೆ ಪಾಲಿಸದ ಹಿನ್ನೆಲೆಯಲ್ಲಿ ಸಿಪಿಎಂ, ಚಟರ್ಜಿ ಅವರನ್ನು ಪಕ್ಷದಿಂದ ಉಚ್ಚಾಟಿಸಿತು. ಸುಮಾರು 40 ವರ್ಷಗಳಿಂದ ಸಿಪಿಎಂನಲ್ಲಿದ್ದು, 10 ಬಾರಿ ಸಂಸದರಾಗಿ ಆಯ್ಕೆಯಾದ ಚಟರ್ಜಿ, ತಮ್ಮ 79 ನೇ ಜನ್ಮದಿನ ಆಚರಣೆಗೆ ಎರಡು ದಿನ ಮೊದಲು ಪಕ್ಷದಿಂದ ಉಚ್ಚಾಟಿತರಾದರು.

2007: ಉಪರಾಷ್ಟ್ರಪತಿ ಸ್ಥಾನಕ್ಕೆ ಆಗಸ್ಟ್ 10 ರಂದು ನಡೆಯುವ ಚುನಾವಣೆಗಾಗಿ ಯುಪಿಎ ಹಾಗೂ ಎಡಪಕ್ಷ ಬೆಂಬಲಿತ ಅಭ್ಯರ್ಥಿ ಮಾಜಿ ಕೇಂದ್ರ ಸಚಿವ ಮೊಹ್ಮದ್ ಹಮೀದ್ ಅನ್ಸಾರಿ ಹಾಗೂ ಎನ್ ಡಿಎ ಅಭ್ಯರ್ಥಿ ನಜ್ಮಾ ಹೆಫ್ತುಲ್ಲಾ ಅವರು ನಾಮಪತ್ರ ಸಲ್ಲಿಸಿದರು. ಉಭಯ ಸ್ಪರ್ಧಿಗಳೂ ತಮ್ಮ ತಮ್ಮ ಪಕ್ಷಗಳ ಮುಖಂಡರ ಜೊತೆಗೆ ಆಗಮಿಸಿ ಚುನಾವಣಾಧಿಕಾರಿ ಯೋಗೇಂದ್ರ ನಾರಾಯಣ್ ಅವರಿಗೆ ತಮ್ಮ ನಾಮಪತ್ರ ಸಲ್ಲಿಸಿದರು.

2007: ಆಫ್ಘಾನಿಸ್ಥಾನದ ಕೊನೆಯ ದೊರೆ ಮಹಮ್ಮದ್ ಜಾಹಿರ್ ಷಾ (92) ಅವರು ಈದಿನ ನಿಧನರಾದರು. ಆಫ್ಘಾನಿಸ್ಥಾನದಲ್ಲಿ 1973ರಲ್ಲಿ ಆಡಳಿತ ನಡೆಸುತ್ತಿದ್ದ ದೊರೆ ಷಾ ವಿರುದ್ಧ ಅವರ ಸಂಬಂಧಿ ಮೊಹಮದ್ ದಾವೂದ್ ದಂಗೆ ಎದ್ದರು. ದೊರೆ ಆಗ ದೇಶದಲ್ಲಿ ಇರಲಿಲ್ಲ. ಇಟಲಿಯಲ್ಲಿ ರಜಾ ದಿನ ಕಳೆಯುತ್ತಿದ್ದರು. ದಂಗೆಯ ವಿಷಯ ಕೇಳಿ ಅಲ್ಲಿಂದಲೇ ಅವರು ಅಧಿಕಾರ ತ್ಯಜಿಸಿದರು.
ಮತ್ತೆ ಅವರು ದೇಶಕ್ಕೆ ವಾಪಸಾದದ್ದು ತಾಲಿಬಾನ್ ಆಡಳಿತ ಅಂತ್ಯಗೊಂಡ (2001) ಹಲವು ತಿಂಗಳುಗಳ ನಂತರ. ಸುಮಾರು 29 ವರ್ಷಗಳ ನಂತರ ದೇಶಕ್ಕೆ ವಾಪಸಾದ ಅವರನ್ನು ಆಫ್ಘನ್ನಿನ ಹೊಸ ಸರ್ಕಾರ `ರಾಷ್ಟ್ರಪಿತ' ಎಂಬ ಬಿರುದು ನೀಡಿ ಗೌರವಿಸಿತಷ್ಟೆ ಅಲ್ಲ, ದೊರೆ ಆಳಿದ 40 ವರ್ಷಗಳ ಕಾಲ ದೇಶದಲ್ಲಿ ಶಾಂತಿ ಮತ್ತು ಸ್ಥಿರತೆ ನೆಲೆಸಿತ್ತು ಎಂದು ಬಣ್ಣಿಸಿತು. ದೊರೆ ದೇಶಕ್ಕೆ ವಾಪಸಾದ ಕೆಲ ದಿನಗಳ ನಂತರ 2002ರಲ್ಲಿ ಅವರ ಪತ್ನಿ ಹೊಮೈರಾ ಸಹ ದೇಶಕ್ಕೆ ವಾಪಸಾಗಲು ಸಿದ್ಧತೆ ನಡೆಸಿದ್ದರು. ಆ ಸಂದರ್ಭದಲ್ಲಿ ಅವರು ನಿಧನ ಹೊಂದಿದರು.

2007: ಮಾಜಿ ನಟಿ, ಭೂಗತ ದೊರೆ ಅಬು ಸಲೇಮ್ ಪ್ರೇಯಸಿ ಮೋನಿಕಾ ಬೇಡಿ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಲು ಸುಪ್ರೀಂ ಕೋರ್ಟ್ ಆದೇಶಿಸಿತು. ನಕಲಿ ಪಾಸ್ಪೋರ್ಟ್ ಸಂಬಂಧದಲ್ಲಿ ಆಕೆಗೆ ಆಂಧ್ರಪ್ರದೇಶ ಹೈಕೋರ್ಟ್ ಮೂರು ವರ್ಷ ಸೆರೆವಾಸದ ಶಿಕ್ಷೆ ವಿಧಿಸಿತ್ತು. ಆದರೆ ಮುಂಬೈ ಪ್ರಾದೇಶಿಕ ಪಾಸ್ಪೋರ್ಟ್ ಕಚೇರಿ 1999 ಜೂನ್ 24ರಂದು ನೀಡಿದ್ದ ಪಾಸ್ಪೋರ್ಟ್ ಕಳೆದು ಹೋಗಿದೆ. ಹೀಗಾಗಿ ಅದನ್ನು ಕೋರ್ಟಿಗೆ ಸಲ್ಲಿಸಲು ಸಾಧ್ಯವಿಲ್ಲ ಎಂದು ಆಕೆಯ ತಂದೆ ಪ್ರಮಾಣಪತ್ರ ಸಲ್ಲಿಸಿದ್ದರು. ಈ ಪಾಸ್ಪೋರ್ಟ್ ರದ್ದು ಪಡಿಸಿ, ಜಾಮೀನಿನ ಮೇಲೆ ಬೇಡಿ ಅವರನ್ನು ಬಿಡುಗಡೆ ಮಾಡುವಂತೆ ವಿಶೇಷ ಸಿಬಿಐ ನ್ಯಾಯಾಲಯಕ್ಕೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿತು.

2007: ಲೇಖಕ ಡಾ.ಬಂಜಗೆರೆ ಜಯಪ್ರಕಾಶ್ ಅವರ ವಿವಾದಿತ `ಆನು ದೇವಾ ಹೊರಗಣವನು...' ಕೃತಿಯನ್ನು ತತ್ ಕ್ಷಣದಿಂದಲೇ ಜಾರಿಗೆ ಬರುವಂತೆ ಕರ್ನಾಟಕ ಸರ್ಕಾರ ಮುಟ್ಟುಗೋಲು ಹಾಕಿಕೊಂಡಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಖಾತೆ ಸಚಿವ ಎಚ್. ಎಸ್. ಮಹದೇವಪ್ರಸಾದ್ ವಿಧಾನಸಭೆಯಲ್ಲಿ ಪ್ರಕಟಿಸಿದರು.

2006: ನವದೆಹಲಿಯಲ್ಲಿ ನಡೆದ ಎಂಟನೆಯ ಏಷ್ಯಾ ಸಿನೆಮಾ ಉತ್ಸವದ ಭಾರತೀಯ ಸ್ಪರ್ಧಾ ವಿಭಾಗದಲ್ಲಿ ರಾಮಚಂದ್ರ ಪಿ.ಎನ್. ಅವರ ಚೊಚ್ಚಲ `ಸುದ್ದ' (ತಿಥಿ) ತುಳು ಚಲನಚಿತ್ರವು ಅತ್ಯುತ್ತಮ ಚಲನಚಿತ್ರ ಪ್ರಶಸ್ತಿ ಹಾಗೂ ಖ್ಯಾತ ನಿರ್ದೇಶಕ ಗಿರೀಶ ಕಾಸರವಳ್ಳಿ ಅವರ `ನಾಯಿ ನೆರಳು' ಕನ್ನಡ ಚಲನ ಚಿತ್ರವು ವಿಶೇಷ ಪ್ರಶಸ್ತಿಯನ್ನು ಗೆದ್ದುಕೊಂಡವು.

2006: ಭಾರತದ ಮೊತ್ತ ಮೊದಲ ಬೌದ್ಧಿಕ ಆಸ್ತಿಗಳ ಹಕ್ಕು ಶಾಲೆ (Intellectual Property Right School) ಈದಿನ ಖರಗಪುರದ ಭಾರತೀಯ ತಂತ್ರಜ್ಞಾನ ಸಂಸ್ಥೆಯಲ್ಲಿ ಆರಂಭಗೊಂಡಿತು.

2006: ಆರು ವರ್ಷದ `ಬೆತ್ತಲೆ ರಾಜಕುಮಾರ' ಪ್ರಿನ್ಸ್ ಈದಿನ ಸಂಜೆ 7.45ಕ್ಕೆ ಶ್ವೇತವಸ್ತ್ರ ಸುತ್ತಿಕೊಂಡು ಸೈನಿಕನ ಬೆಚ್ಚನೆಯ ತೋಳಿನ ಮೂಲಕ 60 ಅಡಿ ಆಳದ ಕೊಳವೆಬಾವಿಯ ಒಳಗಿನಿಂದ ಹೊರಕ್ಕೆ ಬಂದ. ಹರಿಯಾಣದ ಕುರುಕ್ಷೇತ್ರ ಬಳಿಯ ಹಲ್ವೇರಿ ಗ್ರಾಮದಲ್ಲಿ ಜುಲೈ 21ರಂದು ಆಕಸ್ಮಿಕವಾಗಿ ಈ ಕೊಳವೆ ಬಾವಿಯೊಳಕ್ಕೆ ಬಿದ್ದ ಪ್ರಿನ್ಸ್ 49 ಗಂಟೆಗಳ ಕಾಲ ಅದರೊಳಗೆ ಜವರಾಯನ ಜೊತೆಗೆ ಹೋರಾಟ ನಡೆಸಿದ್ದ. ಕೊಳವೆ ಬಾವಿಯಿಂದ 10 ಅಡಿ ದೂರದಲ್ಲಿ ಇನ್ನೊಂದು ಬಾವಿ ತೋಡಿ ಅದರ ಮೂಲಕ ಇಳಿದು ಅದಕ್ಕೆ ಅಡ್ಡ ಸುರಂಗ ಕೊರೆದು ಬಾಲಕನನ್ನು ರಕ್ಷಿಸುವ ಕಾರ್ಯಾಚರಣೆ ನಡೆಸಲಾಗಿತ್ತು.

2006: ಆಂಧ್ರಪ್ರದೇಶದ ಜಲ್ಲಮಲ್ಲ ಅರಣ್ಯದಲ್ಲಿ ಈದಿನ ನಸುಕಿನಲ್ಲಿ ನಡೆದ ಘರ್ಷಣೆಯಲ್ಲಿ ಮಾವೋವಾದಿ ನಕ್ಸಲೀಯರ ಉನ್ನತ ನಾಯಕ ಮಾಧವನನ್ನು ಪೊಲೀಸರು ಕೊಂದು ಹಾಕಿದರು. ಘರ್ಷಣೆಯಲ್ಲಿ ಐವರು ಮಹಿಳೆಯರು ಸೇರಿ 7 ಜನ ಅಸು ನೀಗಿದರು.
1981: ಇಂದಿರಾಗಾಂಧಿ ಅವರು ಅಧ್ಯಕ್ಷರಾಗಿರುವ ಕಾಂಗ್ರೆಸ್ ಪಕ್ಷವೇ `ನಿಜ'ವಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಎಂದು ಈದಿನ ಮಾನ್ಯತೆ ನೀಡಿದ ಚುನಾವಣಾ ಆಯೋಗವು ದೇವರಾಜ ಅರಸು ಅಧ್ಯಕ್ಷೆಯ ಪಕ್ಷದ ಮಾನ್ಯತೆಯನ್ನು ರದ್ದು ಮಾಡಿತು.

1948: ಭಾಗೀರಥಿ ಹೆಗಡೆ ಜನನ.

1936: ಸಾಹಿತಿ ವೆಂಕಟೇಶ ಕುಲಕರ್ಣಿ ಜನನ.

1930: ರತ್ನಮ್ಮ ಸುಂದರರಾವ್ ಜನನ.

1908: ನವೋದಯ ಕಾಲದ ಪ್ರತಿಭಾನ್ವಿತ ಕವಿ ಗಣಪತಿ ರಾವ್ ಪಾಂಡೇಶ್ವರ ಅವರು ರಾಮಚಂದ್ರರಾಯ- ಸೀತಮ್ಮ ದಂಪತಿಯ ಪುತ್ರನಾಗಿ ಬ್ರಹ್ಮಾವರದಲ್ಲಿ ಜನಿಸಿದರು. ಮುಳಿಯ ತಿಮ್ಮಪ್ಪಯ್ಯ, ಐರೋಡಿ ಶಿವರಾಮಯ್ಯ ಅವರ ಶಿಷ್ಯರಾಗಿ ಕನ್ನಡ, ಇಂಗ್ಲಿಷ್, ಸಂಸ್ಕೃತ ಈ ಮೂರೂ ಭಾಷೆಗಳಲ್ಲಿ ಸಮಾನ ವಿದ್ವತ್ ಗಳಿಸಿದ್ದ ಪಾಂಡೇಶ್ವರ 17ರ ಹರೆಯದಲ್ಲೇ `ವಿವೇಕಾನಂದ ಚರಿತಂ' ಕವನ ಬರೆದು ಖ್ಯಾತಿ ಪಡೆದಿದ್ದರು.

1906: ಹದಿಹರೆಯದಲ್ಲೇ ಬ್ರಿಟಿಷರಿಗೆ ಸೆಡ್ಡು ಹೊಡೆದ ಕ್ರಾಂತಿಕಾರಿ ಹೋರಾಟಗಾರ ಚಂದ್ರಶೇಖರ ಆಜಾದ್ ಮಧ್ಯಪ್ರದೇಶದ ಝಾಬ್ರಾದಲ್ಲಿ ಈದಿನ ಜನಿಸಿದರು. ಬ್ರಿಟಿಷರ ಕೆಂಗಣ್ಣಿಗೆ ಗುರಿಯಾಗಿ ಪ್ರಾಣತೆತ್ತ ಆಜಾದ್ ಸ್ವಾತಂತ್ರ್ಯ ಕಲಿಗಳಿಗೆ ಆದರ್ಶಪ್ರಾಯರಾದರು.

1856: ಸ್ವಾತಂತ್ರ್ಯ ಸಂಗ್ರಾಮಕ್ಕೆ ಅಡಿಪಾಯ ಹಾಕಿದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ, ಪಂಡಿತ, ಗಣಿತಜ್ಞ, ತತ್ವಜ್ಞಾನಿ ಲೋಕಮಾನ್ಯ ಬಾಲ ಗಂಗಾಧರ ತಿಲಕ್ ಅವರು ಈ ದಿನ ಮಹಾರಾಷ್ಟ್ರದ ರತ್ನಗಿರಿಯಲ್ಲಿ ಜನಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Thursday, July 23, 2009

ಸಮುದ್ರ ಮಥನ 32: ಮೋಕ್ಷ

ಸಮುದ್ರ ಮಥನ 32: ಮೋಕ್ಷ

ಸಾಧನೆ ದೂರದ ನಾಡಿಗೆ ಹೋದಾಗಲೇ, ಬದುಕಿನ ಅಂತ್ಯ ಸಮೀಪಿಸಿದಾಗಲೇ ಸಾಧ್ಯವಾಗುತ್ತದೆ ಎಂಬ ಅಸಡ್ಡೆ ಬೇಡ. ಬದುಕನ್ನು ಸುಂದರವಾಗಿಸುವ, ಬದುಕಿಗೊಂದು ಅರ್ಥ ಕಲ್ಪಿಸುವ ಸಾಮರ್ಥ್ಯ ಅದಕ್ಕಿದೆ.

ಮೋಕ್ಷಕ್ಕೆ ಎತ್ತರದ ಸ್ಥಾನ. ಮೋಕ್ಷದ ಸಾಧನೆಯ ಮುಂದೆ ಎಲ್ಲವೂ ತೃಣ ಸಮಾನ. ಉಳಿದವುಗಳ ಬಗೆಗೆ ತಾತ್ಸಾರವಿಲ್ಲ. ವಾಸ್ತವದಲ್ಲಿ ಇರುವುದೇ ಹಾಗೆ.

ಅದರ ಸಾಧನೆಗೆ ಎಲ್ಲವನ್ನೂ ಬಿಟ್ಟು ಕಾವಿಯನ್ನೇ ತೊಡಬೇಕು, ಕಾಡಿಗೆ ಹೋಗಲೇಬೇಕು, ಹಿಮಾಲಯವನ್ನು ಹತ್ತದ ವಿನಾ ಸಾಧ್ಯವಿಲ್ಲ ಎಂದೇನೂ ಇಲ್ಲ. ಕೆಲವರಿಗೆ ಕಾವಿಯನ್ನು ತೊಡುವ, ಕಾಡಿಗೆ ಹೋಗಿ, ಹಿಮಾಲಯವನ್ನು ಹತ್ತುವ ಅವಕಾಶ ಸಹಜವಾಗಿ ಒದಗಿ ಬರುತ್ತದೆ ಮತ್ತದು ಅವರ ಶರೀರ ಪ್ರಕೃತಿಗೆ ಹೊಂದಿಕೆಯಾಗುವುದರಿಂದ ಅವರ ಸಾಧನೆ ಸುಲಭವಾಗಿ ಮುನ್ನಡೆಯುತ್ತದೆ.
ಆ ಎಲ್ಲ ಸನ್ನಿವೇಶಗಳು ಒದಗಿಬರದೇ ಕುಟುಂಬ ಜೀವನದಲ್ಲಿ ಆಹ್ಲಾದಕರವಾಗಿ ಬದುಕುವವರಿಗೆ ಮೋಕ್ಷ ಸಾಧ್ಯವಿಲ್ಲವೇ ? ಪ್ರಶ್ನೆ ಬರದಿರದು. ಆಧ್ಯಾತ್ಮ ಎಂದರೆ ಏನೋ ಒಂದು ಭಯಂಕರ ಎಂದು ಬಿಂಬಿಸುವ ಪರಿಸರದಲ್ಲಿ ಪ್ರಶ್ನೆ ಮಾತ್ರ ಅಲ್ಲ ಆತಂಕವೂ ಉಂಟಾಗುತ್ತದೆ. ಜೀವಿತದ ಏರು ಗತಿಯಲ್ಲಿ ಗೊತ್ತಾಗುವುದಿಲ್ಲ. ಬದುಕಿನಲ್ಲಿ ಸೋತಾಗ, ಸಾವಿಗೆ ಹೆದರಿಕೊಂಡಾಗ ಏನೋ ಒಂದೆಂಬ ಅಧ್ಯಾತ್ಮಕ್ಕೆ ದಾಸರಾಗುವುದು ಅನಿವಾರ್ಯವಾಗುತ್ತದೆ.

ಆದರೆ, ಹೆದರದ, ಮೋಕ್ಷವನ್ನೇ ಪ್ರೇಮಿಸುವ ಭಕ್ತನೊಬ್ಬ "ದಿವಿವಾ ಭುವಿವಾ ಮಮಾಸ್ತು ವಾಸಃ - ಸ್ವರ್ಗದಲ್ಲಾಗಲೀ, ಭೂಮಿಯಲ್ಲಾಗಲೀ ; ನರಕೇ ವಾ - ನರಕದಲ್ಲೇ ಆಗಲಿ ; ಅವದೀರಿತ ಶಾರದಾರವಿಂದೌ - ಶರತ್ಕಾಲದ ಕಮಲವನ್ನು ಮೀರಿಸತಕ್ಕಂತಹ ನಿನ್ನ ಪಾದ ಕಮಲಗಳಲ್ಲಿ ನನ್ನ ಭಕ್ತಿ, ಮನಸ್ಸು ಅಚಲವಾಗಿರಲಿ, ನಿನ್ನೊಟ್ಟಿಗೆ ಮೈತ್ರಿ ಎಂದೆಂದಿಗೂ ಇರಲಿ" ಎಂದು ಈ ಪ್ರಕೃತಿ ಮಹಾಶಕ್ತಿಯನ್ನು ಪ್ರಾರ್ಥಿಸುತ್ತಾನೆ.

ಅಂದರೆ ಮೋಕ್ಷವೆಂದರೆ ನಾವೆಲ್ಲಿದ್ದೇವೆ ಎಂಬುದು ಲೆಕ್ಕಕ್ಕೆ ಬರುವುದಿಲ್ಲ. ನಮಗೆ ಹೇಗೆ ನೋಡಲು ಬರುತ್ತದೆ, ಆ ನೋಟದ ವ್ಯಾಪಕತೆ ಎಷ್ಟು ಎನ್ನುವುದರ ಮೇಲೆ ಮೋಕ್ಷದ ಜೀವ ನಿಂತಿದೆ.

ಆದ್ದರಿಂದ ಅದರ ಸಾಧನೆ ದೂರದ ನಾಡಿಗೆ ಹೋದಾಗಲೇ, ಬದುಕಿನ ಅಂತ್ಯ ಸಮೀಪಿಸಿದಾಗಲೇ ಸಾಧ್ಯವಾಗುತ್ತದೆ ಎಂಬ ಅಸಡ್ಡೆ ಬೇಡ. ಬದುಕನ್ನು ಸುಂದರವಾಗಿಸುವ, ಬದುಕಿಗೊಂದು ಅರ್ಥ ಕಲ್ಪಿಸುವ ಸಾಮರ್ಥ್ಯ ಅದಕ್ಕಿದೆ. ನಮ್ಮ ಉಸಿರಿನಲ್ಲಿಯೇ ಅದಿದೆ. ಗ್ರಹಿಸೋಣ.

ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಗೋಕರ್ಣ ಮಂಡಲಾಧೀಶ


ಇಂದಿನ ಇತಿಹಾಸ History Today ಜುಲೈ 22

ಇಂದಿನ ಇತಿಹಾಸ

22 ಜುಲೈ

ಯುಪಿಎ ಸರ್ಕಾರವು ಲೋಕಸಭೆಯಲ್ಲಿ ವಿಶ್ವಾತಮತ ಪರೀಕ್ಷೆಯಲ್ಲಿ 275 ಮತಗಳನ್ನು ಪಡೆದು ತೃಪ್ತಿಕರ ಅಂತರದಲ್ಲಿ ಗೆಲುವು ಪಡೆಯಿತು. ಇದರೊಂದಿಗೆ ಪ್ರಧಾನಿ ಮನಮೋಹನ್ ಸಿಂಗ್ `ಅಣು' ಮತ ಗೆದ್ದರು. ಸರ್ಕಾರದ ವಿರುದ್ಧ 256 ಮತಗಳು ಬಿದ್ದವು. ಇದರಿಂದಾಗಿ ಕಳೆದ ಒಂದು ತಿಂಗಳಿನಿಂದ ಉದ್ಭವಿಸಿದ್ದ ರಾಜಕೀಯ ಅನಿಶ್ಚಿತತೆ ದೂರವಾಯಿತು. ಅಮೆರಿಕ ಜತೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವ ಪ್ರಧಾನಿ ಮನ ಮೋಹನ್ ಸಿಂಗ್ ಅವರ ಕನಸು ನನಸಾಗುವತ್ತ ಸಾಗಿತು.

2008: ಯುಪಿಎ ಸರ್ಕಾರವು ಲೋಕಸಭೆಯಲ್ಲಿ ವಿಶ್ವಾತಮತ ಪರೀಕ್ಷೆಯಲ್ಲಿ 275 ಮತಗಳನ್ನು ಪಡೆದು ತೃಪ್ತಿಕರ ಅಂತರದಲ್ಲಿ ಗೆಲುವು ಪಡೆಯಿತು. ಇದರೊಂದಿಗೆ ಪ್ರಧಾನಿ ಮನಮೋಹನ್ ಸಿಂಗ್ `ಅಣು' ಮತ ಗೆದ್ದರು. ಸರ್ಕಾರದ ವಿರುದ್ಧ 256 ಮತಗಳು ಬಿದ್ದವು. ಇದರಿಂದಾಗಿ ಕಳೆದ ಒಂದು ತಿಂಗಳಿನಿಂದ ಉದ್ಭವಿಸಿದ್ದ ರಾಜಕೀಯ ಅನಿಶ್ಚಿತತೆ ದೂರವಾಯಿತು. ಅಮೆರಿಕ ಜತೆ ನಾಗರಿಕ ಪರಮಾಣು ಒಪ್ಪಂದಕ್ಕೆ ಸಹಿ ಹಾಕುವ ಪ್ರಧಾನಿ ಮನ ಮೋಹನ್ ಸಿಂಗ್ ಅವರ ಕನಸು ನನಸಾಗುವತ್ತ ಸಾಗಿತು.

2007: ರಾಜ್ಯ ಸಭೆಯ ಮಾಜಿ ಉಪ ಸಭಾಪತಿ ನಜ್ಮಾ ಹೆಫ್ತುಲ್ಲಾ ಅವರು ಉಪ ರಾಷ್ಟ್ರಪತಿ ಸ್ಥಾನಕ್ಕೆ ಎನ್ ಡಿಎ ಅಭ್ಯರ್ಥಿಯಾಗಿ ಸ್ಪರ್ಧಿಸುವರು ಎಂದು ಎನ್ ಡಿಎ ಪ್ರಕಟಿಸಿತು. ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ನಿವಾಸದಲ್ಲಿ ನಡೆದ ಎನ್ ಡಿಎ ಸಭೆಯ ನಂತರ ಈ ವಿಷಯ ಪ್ರಕಟಿಸಲಾಯಿತು. ನಜ್ಮಾ ಹೆಫ್ತುಲ್ಲಾ ಅವರು ಸ್ವಾತಂತ್ರ್ಯಯೋಧ ಮೌಲಾನ ಅಬುಲ್ ಕಲಾಂ ಆಜಾದ್ ಅವರ ಮೊಮ್ಮಗಳು. ಈ ಮೊದಲು ಇವರು ಕಾಂಗ್ರೆಸ್ಸಿನಲ್ಲಿದ್ದರು.

2007: ಟಿವಿಂಯಲ್ಲಿ ಕ್ರೈಸ್ತಧರ್ಮದ ಪ್ರಚಾರ ಮಾಡುತ್ತಿದ್ದ ಟಾಮಿ ಫಯೆ ಬಕ್ಕೆರ್ ಮೆಸ್ಸನೆರ್ ಅವರು ದೀರ್ಘಕಾಲದ ಅನಾರೋಗ್ಯದಿಂದ ಕಾನ್ಸಸ್ ಸಿಟಿಯಲ್ಲಿ ಮೃತರಾದರು.
ಮೆಸ್ಸನೆರ್ ಅವರು ಕ್ಯಾನ್ಸರಿನಿಂದ ಬಳಲುತ್ತಿದ್ದರು. `ಪ್ರೈಸ್ ದಿ ಲಾರ್ಡ್' ಸಂಘಟನೆಯ ಸಂಸ್ಥಾಪಕರಾದ ಅವರ ಮೊದಲ ಪತಿ ಜಿಮ್ ಬಕ್ಕರ್ ಅವರಿಂದ ಮೆಸ್ಸನೆರ್ ಅವರು ಅಮೆರಿಕದಲ್ಲಿ ಮನೆಮಾತಾಗಿದ್ದರು.

2007: ಜೆ.ಕೆ.ರಾವ್ಲಿಂಗ್ ಬರೆದಿರುವ 'ಹ್ಯಾರಿ ಪಾಟರ್ ಅಂಡ್ ಡೆತ್ಲಿ ಹ್ಯಾಲೊಸ್' ಪುಸ್ತಕದ 30 ಲಕ್ಷ ಪ್ರತಿಗಳು ಲಂಡನ್ನಿನ ನ್ಯಾಚುರಲ್ ಹಿಸ್ಟ್ರಿ ಮ್ಯೂಸಿಯಮ್ಮಿನಲ್ಲಿ 24 ಗಂಟೆಗಳಲ್ಲಿ ಮಾರಾಟವಾಗಿ ಇತಿಹಾಸ ನಿರ್ಮಾಣಗೊಂಡಿತು. ಡಬ್ಲ್ಯು ಎಚ್ ಸ್ಮಿತ್ ಮತ್ತು ವೂಲ್ವತ್ಸರ್್ ಅವರು ಬರೆದಿದ್ದ ಹಿಂದಿನ `ಹ್ಯಾರಿ ಪಾಟರ್' ಪುಸ್ತಕಕ್ಕೆ ಹೋಲಿಸಿದರೆ ಈ ಪುಸ್ತಕದ 10 ಲಕ್ಷದಷ್ಟು ಹೆಚ್ಚು ಪ್ರತಿಗಳು ಮಾರಾಟವಾದವು. ಪುಸ್ತಕವನ್ನು ಮಾರಾಟಕ್ಕೆ ಇಟ್ಟ ಎರಡು ಗಂಟೆಗಳಲ್ಲಿಯೇ 1 ಲಕ್ಷ ಪ್ರತಿ ಖರ್ಚಾಯಿತು ಎಂದು ಪ್ರಕಾಶಕ ಬ್ಲೂಮ್ಸ್ಬರಿ ಹೇಳಿದರು.

2007: ಸರ್ಕಾರದ ಶಾಂತಿ ಒಪ್ಪಂದವನ್ನು ಉಲ್ಲಂಘಿಸಿ ಪಾಕಿಸ್ತಾನದ ಮಿರಾನ್ಷಾ ಪ್ರದೇಶದಲ್ಲಿ ಹಿಂಸಾತ್ಮಕ ಚಟುವಟಿಕೆ ನಡೆಸುತ್ತಿದ್ದ 13 ಮಂದಿ ತಾಲಿಬಾನ್ ಉಗ್ರರನ್ನು ಪಾಕ್ ಸೇನೆ ಹತ್ಯೆ ಮಾಡಿತು.

2007: ಮಾಜಿ ಚಾಂಪಿಯನ್ ಗೀತ್ ಸೇಥಿ ಅವರು ಬ್ರಿಟನ್ನಿನ ಲೀಡ್ಸ್ ನಲ್ಲಿ ವಿಶ್ವ ವೃತ್ತಿಪರ ಬಿಲಿಯರ್ಡ್ಸ್ ಚಾಂಪಿಯನ್ ಷಿಪ್ ಫೈನಲ್ ಪ್ರವೇಶಿಸಲು ವಿಫಲರಾದರು. ನಾರ್ಥನ್ ಸ್ನೂಕರ್ ಸೆಂಟರಿನಲ್ಲಿ ನಡೆದ ಪಂದ್ಯದಲ್ಲಿ ಇಂಗ್ಲೆಂಡಿನ ಮೈಕ್ ರಸ್ಸೆಲ್ ಅವರು 1835-1231ರಲ್ಲಿ ಎಂಟು ಬಾರಿಯ ವಿಶ್ವ ಚಾಂಪಿಯನ್ ಸೇಥಿ ಅವರನ್ನು ಮಣಿಸಿದರು. ಇದೇ ಚಾಂಪಿಯನ್ ಷಿಪ್ ನಲ್ಲಿ ಪೈಪೋಟಿಗೆ ಇಳಿದ ಭಾರತದ ಇತರ ಸ್ಪರ್ಧಿಗಳಾದ ಪಂಕಜ್ ಅಡ್ವಾಣಿ, ದೇವೇಂದ್ರ ಜೋಶಿ, ಅಶೋಕ್ ಶಾಂಡಿಲ್ಯಾ, ಅಲೋಕ್ ಕುಮಾರ್, ಸೌರವ್ ಕೊಠಾರಿ, ಧ್ರುವ ಸೀತಾವಾಲಾ ಅವರು ಆರಂಭದ ಹಂತದಲ್ಲಿಯೇ ಸೋತು ಹೊರ ಬಿದ್ದಿದ್ದರು.

2006: ಹಿರಿಯ ನೃತ್ಯಗುರು ಎಚ್.ಆರ್. ಕೇಶವಮೂರ್ತಿ (87) ನಿಧನರಾದರು. 1949ರಲ್ಲಿ ಇವರು ಕೇಶವ ನೃತ್ಯ ಶಾಲೆಯನ್ನು ಸ್ಥಾಪಿಸಿ ಭರತನಾಟ್ಯವನ್ನು ಅತ್ಯಂತ ಶುದ್ಧ ಶೈಲಿಯಲ್ಲಿ ಬೆಳೆಸಿದವರಲ್ಲಿ ಪ್ರಮುಖರಾಗಿದ್ದರು.

2006: ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರಿಗೆ ಸೆಡ್ಡು ಹೊಡೆದು ಜಾತ್ಯತೀತ ಜನತಾದಳವನ್ನು ತೊರೆದ ಸಿದ್ದರಾಮಯ್ಯ ನವದೆಹಲಿಯಲ್ಲಿ ವಿಧಿವತ್ತಾಗಿ ಕಾಂಗ್ರೆಸ್ ಸೇರಿದರು.

2006: ರಾಷ್ಟ್ರಪತಿಯವರು ತಿರಸ್ಕರಿಸಿದ `ಲಾಭದ ಹುದ್ದೆ' ಮಸೂದೆಯನ್ನು ಯಾವ ಬದಲಾವಣೆಯನ್ನೂ ಮಾಡದೆ ಯಥಾವತ್ತಾಗಿ ಮತ್ತೆ ಸಂಸತ್ತಿನಲ್ಲಿ ಮಂಡಿಸಲು ಸರ್ಕಾರ ನಿರ್ಧರಿಸಿತು. ಮಸೂದೆಯನ್ನು ಯಥಾವತ್ತಾಗಿ ಅಂಗೀಕರಿಸಬೇಕಾದ ಅಗತ್ಯ ಬಗ್ಗೆ ಪ್ರಧಾನಿ ಮನಮೋಹನ್ ಸಿಂಗ್ ರಾಷ್ಟ್ರಪತಿಗೆ ವಿವರಿಸಿದರು. ಲಾಭದ ಹುದ್ದೆ ವಿನಾಯ್ತಿಗೆ ಬಳಸಿದ ಮಾನದಂಡ ಅಪೂರ್ಣ ಎಂದು ಹೇಳಿದ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ದೇಶವ್ಯಾಪಿ ಅನ್ವಯವಾಗುವಂತಹ ಏಕರೂಪಿ ಸೂತ್ರ ರೂಪಿಸಲು ಸಲಹೆ ಮಾಡಿದ್ದರು. ವಿನಾಯ್ತಿಗೆ ಬಳಸುವ ಮಾನದಂಡಗಳು ನಿಷ್ಪಕ್ಷಪಾತ, ಪಾರದರ್ಶಕ, ಗೊಂದಲ ರಹಿತವಾಗಿರಬೇಕು ಎಂದು ಅವರು ಸೂಚಿಸಿದ್ದರು.

2000: ಪಾಕಿಸ್ತಾನದ ನ್ಯಾಯಾಲಯವೊಂದು ನವಾಜ್ ಷರೀಫ್ ಅವರಿಗೆ 14 ವರ್ಷಗಳ ಶಿಕ್ಷೆ ಮತ್ತು 21 ವರ್ಷಗಳ ಅವಧಿಯ ರಾಜಕೀಯ ಬಹಿಷ್ಕಾರವನ್ನು ವಿಧಿಸಿತು.

1999: ಕರ್ನಾಟಕದ ಮುಖ್ಯಮಂತ್ರಿ ಜೆ.ಎಚ್. ಪಟೇಲ್ ವಿಧಾನಸಭೆ ವಿಸರ್ಜಿಸುವಂತೆ ರಾಜ್ಯಪಾಲ ಖುರ್ಷಿದ್ ಆಲಂ ಖಾನ್ ಅವರಿಗೆ ಶಿಫಾರಸು ಮಾಡಿದರು.

1997: ಸೆಪ್ಟೆಂಬರ್ 15ರಿಂದ ಪ್ರಸಾರ ಭಾರತಿ ಕಾಯ್ದೆಯನ್ನು ಜಾರಿಗೊಳಿಸುವಂತೆ ಸರ್ಕಾರ ಸುತ್ತೋಲೆ ಹೊರಡಿಸಿತು.

1993: ವಿಲೆ ಪೋಸ್ಟ್ ಅವರು 7 ದಿನ 18 ಗಂಟೆ 49 ನಿಮಿಷದಲ್ಲಿ ವಿಶ್ವವನ್ನು ಸುತ್ತಿದ ಮೊದಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

1991: ಗಾಯಕ ಪಂಡಿತ ಬಸವರಾಜ ರಾಜಗುರು ನಿಧನ.

1981: ಭಾರತದ ಪ್ರಥಮ ಪ್ರಾಯೋಗಿಕ ಉಪಗ್ರಹ ಆ್ಯಪಲ್ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಣೆ ಪ್ರಾರಂಭಿಸಿ, ಎಲ್ಲ ನಿರೀಕ್ಷಿತ ಸಂಪರ್ಕ ಕಾರ್ಯಕ್ರಮ ಆರಂಭಿಸಿ ಸ್ಪಷ್ಟ ಚಿತ್ರಗಳನ್ನು ಪ್ರಸಾರ ಮಾಡಿತು.

1966: ಶಂಕರ ಬೈಚಬಾಳ ಜನನ.

1959: ಸಂಸದ, ಬಿಜೆಪಿ ನಾಯಕ ಅನಂತಕುಮಾರ ಜನನ.

1943: ಕುಮುದಾ ಪುರುಷೋತ್ತಮ ಜನನ.

1938: ಸಾಹಿತಿ ಕೆ.ಟಿ. ಗಟ್ಟಿ ಜನನ.

1929: ನವ್ಯ ಕಾದಂಬರಿಕಾರ, ವಿಮರ್ಶಕ, ಕಥೆಗಾರ ಶಾಂತಿನಾಥ ದೇಸಾಯಿ (22-7-1929ರಿಂದ 6-3-1998) ಅವರು ಈದಿನ ಉತ್ತರ ಕನ್ನಡ ಜಿಲ್ಲೆಯ ಹಳಿಯಾಳದಲ್ಲಿ ಜನಿಸಿದರು. ಕರ್ನಾಟಕ ಮತ್ತು ಕೇಂದ್ರ ಸಾಹಿತ್ಯ ಅಕಾಡೆಮಿ ಹಾಗೂ ಜ್ಞಾನಪೀಠ ಪ್ರಶಸ್ತಿ ಸಲಹಾ ಸಮಿತಿಯ ಸಲಹೆಗಾರರಾಗಿದ್ದ ದೇಸಾಯಿ ಅವರಿಗೆ ಜನಪ್ರಿಯತೆ ತಂದು ಕೊಟ್ಟ ಕಥೆ ಇಂಗ್ಲೆಂಡಿಗೆ ಹಡಗಿನ ಪ್ರಯಾಣ ಕಾಲದಲ್ಲಿ ಬರೆದ `ಕ್ಷಿತಿಜ'. ಅವರ ಐವತ್ತಕ್ಕೂ ಹೆಚ್ಚು ಕಥೆಗಳು ಪ್ರಕಟವಾಗಿವೆ. ಕನ್ನಡವಲ್ಲದೆ ಇಂಗ್ಲಿಷ್ನಲ್ಲೂ ಕೃತಿಗಳನ್ನು ರಚಿಸಿದ ಅವರಿಗೆ ವರ್ಧಮಾನ ಪ್ರಶಸ್ತಿ, ರಾಜ್ಯ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜುಲೈ 21

ಇಂದಿನ ಇತಿಹಾಸ

ಜುಲೈ 21

ನೇಪಾಳಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ರಾಮ್ ಬರನ್ ಯಾದವ್ ಅವರು ನೇಪಾಳದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದರು. ಯಾದವ್ ಅವರು ಮಾವೋವಾದಿ ಬೆಂಬಲದಿಂದ ಸ್ಪರ್ಧಿಸಿದ್ದ ರಾಮರಾಜಾ ಪ್ರಸಾದ್ ಸಿಂಗ್ ಅವರನ್ನು ಸೋಲಿಸಿದರು. 594 ಸದಸ್ಯರ ಸಂವಿಧಾನ ರಚನಾ ಸಭೆಯಲ್ಲಿ ಯಾದವ್ ಅವರು 308 ಮತಗಳನ್ನು ಪಡೆದರೆ ಸಿಂಗ್ ಅವರು 282 ಮತಗಳನ್ನು ಗಳಿಸಿದರು.


2008: ನೇಪಾಳಿ ಕಾಂಗ್ರೆಸ್ಸಿನ ಹಿರಿಯ ಮುಖಂಡ ರಾಮ್ ಬರನ್ ಯಾದವ್ ಅವರು ನೇಪಾಳದ ಪ್ರಥಮ ಅಧ್ಯಕ್ಷರಾಗಿ ಆಯ್ಕೆಯಾದರು. ಯಾದವ್ ಅವರು ಮಾವೋವಾದಿ ಬೆಂಬಲದಿಂದ ಸ್ಪರ್ಧಿಸಿದ್ದ ರಾಮರಾಜಾ ಪ್ರಸಾದ್ ಸಿಂಗ್ ಅವರನ್ನು ಸೋಲಿಸಿದರು. 594 ಸದಸ್ಯರ ಸಂವಿಧಾನ ರಚನಾ ಸಭೆಯಲ್ಲಿ ಯಾದವ್ ಅವರು 308 ಮತಗಳನ್ನು ಪಡೆದರೆ ಸಿಂಗ್ ಅವರು 282 ಮತಗಳನ್ನು ಗಳಿಸಿದರು.

2007: ಭಾರತದ 13ನೇ ರಾಷ್ಟ್ರಪತಿಯಾಗಿ ನಿರೀಕ್ಷೆಯಂತೆ ಯುಪಿಎ- ಎಡಪಕ್ಷಗಳ ಅಭ್ಯರ್ಥಿ ಪ್ರತಿಭಾ ಪಾಟೀಲ್ ಅಧಿಕ ಬಹುಮತದಿಂದ ಆಯ್ಕೆಯಾಗುವುದರೊಂದಿಗೆ ದೇಶದ ಅತ್ಯುನ್ನತ ಸ್ಥಾನಕ್ಕೆ ಏರುತ್ತಿರುವ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. 1934 ಡಿಸೆಂಬರ್ 19 ರಂದು ಮಹಾರಾಷ್ಟ್ರದ ಜಲಗಾಂವ್ ನಲ್ಲಿ ಜನಿಸಿದ ಪ್ರತಿಭಾ ಅವರು ಜಲಗಾಂವ್ ಎಂ. ಜೆ. ಕಾಲೇಜಿನಲ್ಲಿ ಪದವಿ ಪಡೆದು ನಂತರ ಮುಂಬೈನ ಕಾನೂನು ಕಾಲೇಜಿನಲ್ಲಿ ವ್ಯಾಸಂಗ ಮಾಡಿ ಕಾನೂನು ಪದವಿ ಪಡೆದರು. 1965ರ ಜುಲೈಯಲ್ಲಿ ದೇವಿಸಿಂಗ್ ರಾಣಾಸಿಂಗ್ ಶೆಖಾವತ್ ಅವರ ಜತೆ ವಿವಾಹ. ರಾಜಕೀಯ ಜೀವನ ಆರಂಭಕ್ಕೆ ಮುನ್ನ ಅವರು ಸ್ವಂತ ಊರಿನಲ್ಲಿ ವಕೀಲಿ ವೃತ್ತಿ ನಡೆಸುತ್ತಿದ್ದರು. ಮಹಿಳಾ ಹಕ್ಕುಗಳ ಪ್ರತಿಪಾದಕರಾದ ಪ್ರತಿಭಾ ಅವರು ಮಹಿಳೆಯರ ಸ್ಥಾನಮಾನಕ್ಕೆ ಸಂಬಂಧಿಸಿದ ಅಂತಾರಾಷ್ಟ್ರೀಯ ಸಮ್ಮೇಳನದಲ್ಲಿ ಪಾಲ್ಗೊಂಡ ಭಾರತದ ನಿಯೋಗದೊಂದಿಗೆ ಆಸ್ಟ್ರೇಲಿಯಾ ಮತ್ತು ಬೀಜಿಂಗ್ ಗೆ ಭೇಟಿ ನೀಡಿದ್ದರು. 1962ರಲ್ಲಿ ಪ್ರಥಮ ಬಾರಿಗೆ ಶಾಸಕರಾಗಿ ಆಯ್ಕೆಯಾಗಿ ಮಹಾರಾಷ್ಟ್ರ ವಿಧಾನಸಭೆ ಪ್ರವೇಶಿಸಿದರು. 1985ರವರೆಗೆ ಸತತವಾಗಿ ಐದು ಬಾರಿ ಅವರು ಶಾಸಕರಾಗಿ ಆಯ್ಕೆಯಾದರು. ಪ್ರಥಮ ಬಾರಿಗೆ 1967ರಲ್ಲಿ ವಸಂತ್ ರಾವ್ ನಾಯ್ಕ ಸಂಪುಟದಲ್ಲಿ ಉಪಸಚಿವರಾಗಿ ಸಾರ್ವಜನಿಕ ಆರೋಗ್ಯ, ಪಾನ ನಿಷೇಧ, ಪ್ರವಾಸೋದ್ಯಮ, ವಸತಿ, ಸಂಸದೀಯ ವ್ಯವಹಾರಗಳ ಖಾತೆಯನ್ನು ನಿರ್ವಹಿಸಿದರು. ನಂತರ ಸಂಪುಟ ದರ್ಜೆ ಸಚಿವರಾದ ಅವರು ಸಮಾಜ ಕಲ್ಯಾಣ ಖಾತೆಯನ್ನು ನಿರ್ವಹಿಸಿದರು. ನಂತರ ಶಂಕರರಾವ್ ಚವ್ಹಾಣ್ ಮತ್ತು ವಸಂತದಾದಾ ಪಾಟೀಲ್ ಮಂತ್ರಿಮಂಡಲದಲ್ಲೂ ಪುನರ್ವಸತಿ, ಸಾಂಸ್ಕೃತಿಕ ಹಾಗೂ ಶಿಕ್ಷಣ ಸಚಿವರಾದರು. 1977ರಲ್ಲಿ ಕಾಂಗ್ರೆಸ್ಸಿನಲ್ಲಿ ಒಡಕು ಮೂಡಿದಾಗ ರಾಜಕೀಯ ಗುರು ವೈ. ಬಿ. ಚವ್ಹಾಣ್ ಸೇರಿದಂತೆ ಅನೇಕ ಮುಖಂಡರು ದೇವರಾಜ್ ಅರಸು ನೇತೃತ್ವದ ಕಾಂಗ್ರೆಸ್ (ಯು)ಗೆ ಸೇರಿದರೂ ಪ್ರತಿಭಾ ಅವರು ಇಂದಿರಾ ಗಾಂಧಿ ಜತೆ ಉಳಿದರು. 1978ರಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಾಗ ಜುಲೈ 1979ರಿಂದ ಫೆಬ್ರುವರಿ 1980ರ ವರೆಗೆ ವಿರೋಧ ಪಕ್ಷದ ನಾಯಕರಾಗಿ ಕಾರ್ಯ ನಿರ್ವಹಿಸಿದರು. ಬಾಬಾ ಸಾಹೇಬ್ ಭೋಂಸ್ಲೆ ಮತ್ತು ವಸಂತದಾದಾ ಪಾಟೀಲ್ ಸಂಪುಟದಲ್ಲಿ ನಗರಾಭಿವೃದ್ಧಿ, ವಸತಿ, ನಾಗರಿಕ ಸರಬರಾಜು ಮತ್ತು ಸಮಾಜ ಕಲ್ಯಾಣ ಸಚಿವರಾಗಿ (1982ರಿಂದ 1985) ಕಾರ್ಯ ನಿರ್ವಹಿಸಿದರು. 1985ರಲ್ಲಿ ಮೊದಲ ಬಾರಿಗೆ ರಾಜ್ಯಸಭೆ ಪ್ರವೇಶಿಸಿದರು. 1986ರಿಂದ 1988ರ ನವೆಂಬರ್ ವರೆಗೆ ರಾಜ್ಯಸಭೆಯ ಉಪಸಭಾಪತಿಯಾಗಿಯೂ ಕಾರ್ಯ ನಿರ್ವಹಿಸಿದರು. 1988ರಿಂದ 1990ರ ವರೆಗೆ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದರು. 1991ರಲ್ಲಿ ಲೋಕಸಭೆಗೆ ಆಯ್ಕೆಯಾದ ಪ್ರತಿಭಾ ಸದನ ಸಮಿತಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1996ರ ನಂತರ ಸಕ್ರಿಯ ರಾಜಕೀಯದಿಂದ ದೂರ ಸರಿದಿದ್ದ ಪ್ರತಿಭಾ ಅವರನ್ನು ಯುಪಿಎ ಸರ್ಕಾರ 2004ರ ನವೆಂಬರಿನಲ್ಲಿ ರಾಜಸ್ತಾನದ ರಾಜ್ಯಪಾಲರನ್ನಾಗಿ ನೇಮಿಸಿತು. ಭಾರಿ ಕುತೂಹಲ ಮೂಡಿಸಿದ್ದ ರಾಷ್ಟ್ರಪತಿ ಚುನಾವಣೆಯಲ್ಲಿ ಪ್ರತಿಭಾ ಪಾಟೀಲ್, ಶೆಖಾವತ್ ಅವರಿಗಿಂತ 3 ಲಕ್ಷ 06, 810ರಷ್ಟು ಮೌಲ್ಯದ ಅಧಿಕ ಮತ ಗಳಿಸಿದರು. ಸಂಜೆ 4 ಗಂಟೆಯ ಹೊತ್ತಿಗೆ ಮತ ಎಣಿಕೆ ಪೂರ್ಣಗೊಂಡು ಫಲಿತಾಂಶವನ್ನು ಅಧಿಕೃತವಾಗಿ ಪ್ರಕಟಿಸಲಾಯಿತು. ಮತ ಎಣಿಕೆ ಆರಂಭವಾದಾಗಿನಿಂದ ಮುನ್ನಡೆ ಸಾದಿಸಿದ್ದ ಪ್ರತಿಭಾ ಪಾಟೀಲ್, ಎಣಿಕೆ ಪೂರ್ಣಗೊಂಡಾಗ ಒಟ್ಟು 6 ಲಕ್ಷ 38,116ರಷ್ಟು ಮೌಲ್ಯದ ಮತ ಪಡೆದರು. ಅವರ ಪ್ರತಿಸ್ಪರ್ಧಿ ಎನ್ಡಿಎ ಬೆಂಬಲಿತ ಸ್ವತಂತ್ರ ಅಭ್ಯರ್ಥಿ ಭೈರೋನ್ ಸಿಂಗ್ ಶೆಖಾವತ್ 3 ಲಕ್ಷ 31,306 ರಷ್ಟು ಮೌಲ್ಯದ ಮತ ಗಳಿಸಿದರು. ಪ್ರತಿಭಾ ಒಟ್ಟು 2,931 ಮತ ಗಳಿಸಿದರೆ, ಶೆಖಾವತ್ ಅವರಿಗೆ 1,449 ಮತಗಳು ಬಂದವು.

2007: ಅಮಾನತಿನಲ್ಲಿದ್ದ ಪಾಕಿಸ್ತಾನದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಮೊಹಮ್ಮದ್ ಚೌಧರಿ ಅವರನ್ನು ಮರುನೇಮಕಗೊಳಿಸುವಂತೆ ಪಾಕ್ ಸುಪ್ರೀಂ ಕೋರ್ಟ್ ನೀಡಿದ ತೀರ್ಪಿನ ಹಿನ್ನೆಲೆಯಲ್ಲಿ ಚೌಧರಿ ಅವರು ಈದಿನ ಕಚೇರಿಗೆ ಹಾಜರಾಗಿ ಕರ್ತವ್ಯ ನಿರ್ವಹಿಸಿದರು. ಚೌಧರಿ ಅವರ ಅಮಾನತನ್ನು ಖಂಡಿಸಿ ದೇಶದ ಹಲವೆಡೆ ಪ್ರತಿಭಟನೆಗಳು ನಡೆದ್ದಿದವು. ಕೆಲವೆಡೆ ನಡೆದ ಪ್ರತಿಭಟನೆಗಳು ಹಿಂಸಾರೂಪವನ್ನೂ ಪಡೆದಿದ್ದವು. ಅಧ್ಯಕ್ಷ ಪರ್ವೇಜ್ ಮುಷರಫ್ ಅವರೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದ ಕಾರಣ ಚೌಧರಿ ಅವರನ್ನು ಅಮಾನತು ಮಾಡಿದ ಸಂದರ್ಭದಲ್ಲಿ ಸುಪ್ರೀಂ ಕೋರ್ಟ್ ರಿಜಿಸ್ಟ್ರಾರ್ ಫಕೀರ್ ಹುಸೇನ್ ಅವರನ್ನೂ ಸರ್ಕಾರ ಅಮಾನತುಗೊಳಿಸಿತ್ತು. ಹುಸೇನ್ ಅವರನ್ನು ಹುದ್ದೆಗೆ ಮರುನೇಮಕ ಮಾಡುವಂತೆಯೂ ಸುಪ್ರೀಂ ಕೋರ್ಟ್ ಆದೇಶ ನೀಡಿತು.

2007: ವಾಯವ್ಯ ಪಾಕಿಸ್ತಾನದಲ್ಲಿ ಭಾರಿ ಚಂಡಮಾರುತದಿಂದ ಸಂಭವಿಸಿದ ಮಳೆ ಹಾಗೂ ಭೂ ಕುಸಿತಕ್ಕೆ 50 ಮಂದಿ ಬಲಿಯಾದರು. ಎರಡು ಗ್ರಾಮಗಳು ಸಂಪೂರ್ಣ ನಾಮಾವಶೇಷವಾದವು. ಪೇಶಾವರದಿಂದ 150 ಮೈಲು ದೂರದ ದಿರ್ಬಾಲ ಜಿಲ್ಲೆಯಲ್ಲಿರುವ ಈ ಎರಡು ಗ್ರಾಮಗಳಲ್ಲಿ ಕುಸಿದ ಮನೆಗಳ ಅಡಿಯಿಂದ 50 ಶವಗಳನ್ನು ಹೊರತೆಗೆಯಲಾಯಿತು. ಚಂಡಮಾರುತದಲ್ಲಿ ನೂರಾರು ಮಂದಿ ನಾಪತ್ತೆಯಾದರು.

2007: ವಿಶ್ವದ ಪುಸ್ತಕ ಪ್ರಿಯರನ್ನು ಮಾಯಾಜಾಲದಂತೆ ಸೆಳೆದ `ಹ್ಯಾರಿ ಪಾಟರ್' ಪುಸ್ತಕ ಸರಣಿಯ ಏಳನೇ ಹಾಗೂ ಕೊನೆಯ ಆವೃತ್ತಿ `ಹ್ಯಾರಿ ಪಾಟರ್ ಅಂಡ್ ಡೆಥ್ಲಿ ಹ್ಯಾಲೋಸ್' ಪುಸ್ತಕ ವಿಶ್ವದಾದ್ಯಂತ ಈದಿನ ಬಿಡುಗಡೆಯಾಗಿದ್ದು ಎಲ್ಲೆಡೆಗಳಲ್ಲಿ ಬೆಳಿಗ್ಗೆಯಿಂದಲೇ ಬಿಸಿ ದೋಸೆಯಂತೆ ಮಾರಾಟವಾಯಿತು. ಬ್ರಿಟನ್, ಆಸ್ಟ್ರೇಲಿಯಾದ ಸಿಡ್ನಿ, ಸಿಂಗಪುರ, ಭಾರತದ ನವದೆಹಲಿಯಂತಹ ನಗರಗಳಲ್ಲಿ ಬೆಳಗ್ಗೆಯಿಂದಲೇ ಈ ಪುಸ್ತಕ ಕೊಳ್ಳಲು ಪುಸ್ತಕದಂಗಡಿಗಳ ಮುಂದೆ ಜನರ ಸಾಲುಗಳು ಕಂಡು ಬಂದವು.

2006: ಬೆಂಗಳೂರು - ಮೈಸೂರು ಹೆದ್ದಾರಿ ಕಾರಿಡಾರ್ ಯೋಜನೆಯ (ಬಿಎಂಐಸಿ) ಹೆಚ್ಚುವರಿ ಭೂಮಿ ಬಗ್ಗೆ ನ್ಯಾಯಾಂಗ ತನಿಖೆ ನಡೆಸುವುದಿಲ್ಲ ಎಂದು ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟಿಗೆ ತಿಳಿಸಿತು.

1999: ಜನತಾದಳವು ಎಚ್.ಡಿ. ದೇವೇಗೌಡ ಅವರ ನೇತ್ವತ್ವದಲ್ಲಿ ವಿಭಜನೆಗೊಂಡಿತು.

1995: ಖ್ಯಾತ ಸಂಗೀತ ನಿರ್ದೇಶಕ ಸಜ್ಜದ್ ಹುಸೇನ್ ನಿಧನ.

1977: ನೀಲಂ ಸಂಜೀವರೆಡ್ಡಿ ಅವರು ರಾಷ್ಟ್ರಪತಿಯಾಗಿ ಆಯ್ಕೆಯಾದರು.

1956: ಕಛ್ ಪ್ರಾಂತ್ಯದ ರಾಜಧಾನಿಯಾದ ಭುಜ್ನ ಆಗ್ನೇಯಕ್ಕೆ 24 ಮೈಲಿ ದೂರದಲ್ಲಿರುವ ಅಂಜಾರ್ ಪಟ್ಟಣ ಮತ್ತು ಸುತ್ತಮುತ್ತಣ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಲ್ಲಿ ಕನಿಷ್ಠ 87 ಜನ ಸತ್ತು 250ಕ್ಕೂ ಹೆಚ್ಚು ಜನ ಗಾಯಗೊಂಡರು.

1947: ಭಾರತದ ಸಂವಿಧಾನ ಸಮಿತಿಯು ಮೂರು ಬಣ್ಣವುಳ್ಳ ಬಾವುಟವನ್ನು ರಾಷ್ಟ್ರಧ್ವಜವಾಗಿ ಅಂಗೀಕರಿಸಿತು.

1937: ಸಾಹಿತ್ಯ ವಿಮರ್ಶಕ, ಕಲಾಪ್ರೇಮಿ, ಸಂಗೀತ ಪ್ರಿಯ ಕೃಷ್ಣಯ್ಯ ಅವರು ಹುಚ್ಚಯ್ಯ- ಕೆಂಪಮ್ಮ ದಂಪತಿಯ ಮಗನಾಗಿ ಮೈಸೂರಿನಲ್ಲಿ ಜನಿಸಿದರು. ಶಿಸ್ತಿನ ಪ್ರವಚನಕಾರರಾದ ಕೃಷ್ಣಯ್ಯ ಅವರು ಸುಮಾರು 30 ಕೃತಿಗಳು ಪ್ರಕಟವಾಗಿವೆ. ಅವರ ಶೃಂಗಾರ ಲಹರಿಗೆ ಲಲಿತ ಕಲಾ ಅಕಾಡೆಮಿ ಪುರಸ್ಕಾರ, ಸಂಕ್ಷಿಪ್ತ ಕನ್ನಡ ಭಾಷೆಯ ಚರಿತ್ರೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗಳು ಲಭಿಸಿವೆ.

1937: ಸಾಹಿತಿ ನಾ.ಸು. ಭರತನ ಹಳ್ಳಿ ಜನನ.

1930: ಗೀತ ರಚನೆಕಾರ ಆನಂದ್ ಬಕ್ಷಿ ಜನನ.

1906: ಭಾರತ ರಾಷ್ಟ್ರೀಯ ಕಾಂಗ್ರೆಸ್ಸಿನ ಮೊದಲ ಅಧ್ಯಕ್ಷ ಡಬ್ಲ್ಯೂ.ಸಿ. ಬ್ಯಾನರ್ಜಿ ನಿಧನರಾದರು. 1844ರ ಡಿಸೆಂಬರ್ 29ರಂದು ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಜನಿಸಿದ ಬ್ಯಾನರ್ಜಿ 1885ರಲ್ಲಿ ಮುಂಬೈಯಲ್ಲಿ ನಡೆದ ಕಾಂಗ್ರೆಸ್ಸಿನ ಮೊದಲ ಅಧಿವೇಶನದ ಅಧ್ಯಕ್ಷರಾಗಿದ್ದರು.

1798: ಪಿರಮಿಡ್ ಕಾಳಗದಲ್ಲಿ ನೆಪೋಲಿಯನ್ 60,000 ಮಮೆಲ್ಲೂಕರನ್ನು ಸೋಲಿಸಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday, July 22, 2009

ಹಣವಿದ್ದರೂ ಚೆಕ್ ಮಾನ್ಯ ಮಾಡದ ಬ್ಯಾಂಕ್..!

ಹಣವಿದ್ದರೂ ಚೆಕ್ ಮಾನ್ಯ ಮಾಡದ ಬ್ಯಾಂಕ್..!

ಬ್ಯಾಂಕಿನ ಸ್ಟೇಟ್ಮೆಂಟನ್ನು ಪರಿಶೀಲಿಸಿದ ಗ್ರಾಹಕ ನ್ಯಾಯಾಲಯ ಅದರಲ್ಲಿ ವಿವಾದಿತ ಚೆಕ್ಕನ್ನು 5-8-2008ರಂದು ನೀಡಿರುವುದನ್ನು ಹಾಗೂ ಅದಕ್ಕೆ ಮುನ್ನವೇ 27-6-2008ರಂದು ವಾಣಿಜ್ಯ ತೆರಿಗೆ ಇಲಾಖೆಯು ತನ್ನ ಹಣದ ಸಂಬಂಧಿ ತಕರಾರು ಹಿಂತೆಗೆದುಕೊಂಡದ್ದನ್ನೂ ಗಮನಕ್ಕೆ ತೆಗೆದುಕೊಂಡಿತು.

ನೆತ್ರಕೆರೆ ಉದಯಶಂಕರ

ಖಾತೆಯಲ್ಲಿ ಸಾಕಷ್ಟು ಹಣ ಇದ್ದಾಗ ಚೆಕ್ಕನ್ನು ಬ್ಯಾಂಕ್ ಮಾನ್ಯ ಮಾಡದೇ ಇದ್ದರೆ ಗ್ರಾಹಕ ಏನು ಮಾಡಬೇಕು? ಗ್ರಾಹಕ ಸಂರಕ್ಷಣಾ ಕಾಯ್ದೆ ಆತನ ನೆರವಿಗೆ ಬರುವುದೇ?

ತನ್ನ ಮುಂದೆ ಬಂದ ಇಂತಹ ಪ್ರಕರಣವೊಂದರಲ್ಲಿ ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯವು ಅರ್ಜಿದಾರರಿಗೆ ನ್ಯಾಯ ಒದಗಿಸಿಕೊಟ್ಟಿದೆ. ಈ ಪ್ರಕರಣದ ಅರ್ಜಿದಾರರು ಬೆಂಗಳೂರು ಪೀಣ್ಯ ಇಂಡಸ್ಟ್ರಿಯಲ್ ಎಸ್ಟೇಟಿನ ಎನ್. ಶ್ರೀಪತಿ. ಪ್ರತಿವಾದಿಗಳು: ಪಂಜಾಬ್ ನ್ಯಾಷನಲ್ ಬ್ಯಾಂಕ್, ಬೆಂಗಳೂರು.

ಅರ್ಜಿದಾರ ಶ್ರೀಪತಿ ಅವರು ಬೆಂಗಳೂರಿನ ಬೌರಿಂಗ್ ಇನ್ಸ್ಟಿಟ್ಯೂಟ್ ಹೆಸರಿನಲ್ಲಿ 5-8-2008ರಂದು 3000 ರೂಪಾಯಿಗಳ ಚೆಕ್ ನೀಡಿದ್ದರು. ಆದರೆ ಈ ಚೆಕ್ಕನ್ನು ಪ್ರತಿವಾದಿ ಪಂಜಾಬ್ ನ್ಯಾಷನಲ್ ಬ್ಯಾಂಕ್ `ಸಾಕಷ್ಟು ಹಣ ಇಲ್ಲ' ಎಂಬ ಕಾರಣ ನೀಡಿ ಮಾನ್ಯ ಮಾಡಲು ನಿರಾಕರಿಸಿತು. ಖಾತೆಯಲ್ಲಿ ಸಾಕಷ್ಟು ಹಣವಿರುವುದರಿಂದ ಚೆಕ್ ಮಾನ್ಯ ಮಾಡಿ ತಪ್ಪನ್ನು ಸರಿಪಡಿಸುವಂತೆ ಶ್ರೀಪತಿ ಅವರು ಬ್ಯಾಂಕಿಗೆ ಮನವಿ ಮಾಡಿದರು. ಏನೇ ಮನವಿ ಮಾಡಿದರೂ ಬ್ಯಾಂಕ್ ಚೆಕ್ಕನ್ನು ಮಾನ್ಯ ಮಾಡಲೇ ಇಲ್ಲ. ಶ್ರೀಪತಿ ಅವರು ಕಳುಹಿಸಿದ ಲೀಗಲ್ ನೋಟಿಸಿಗೂ ಸ್ಪಂದಿಸಲಿಲ್ಲ.

ಅರ್ಜಿದಾರರು ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೊಕ್ಕರು. ಅಧ್ಯಕ್ಷ ಎ.ಎಂ. ಬೆನ್ನೂರು, ಸದಸ್ಯರಾದ ಎಂ. ಯಶೋದಮ್ಮ ಮತ್ತು ಎ. ಮುನಿಯಪ್ಪ ಅವರನ್ನು ಒಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿ ಸಾಕ್ಷ್ಯಾಧಾರಗಳನ್ನು ಪರಿಶೀಲಿಸಿತು. ಪ್ರಕರಣದ ವಿಚಾರಣೆ ಕಾಲದಲ್ಲಿ ಆಪಾದನೆಗಳೆಲ್ಲವನ್ನೂ ನಿರಾಕರಿಸಿದ ಪ್ರತಿವಾದಿ ಬ್ಯಾಂಕ್ ಅರ್ಜಿದಾರರ ಖಾತೆಯ 30,000 ರೂಪಾಯಿಗಳನ್ನು ವಾಣಿಜ್ಯ ತೆರಿಗೆ ಇಲಾಖೆ ಸ್ಥಗಿತಗೊಳಿಸಿದ್ದುದರಿಂದ ಖಾತೆಯಲ್ಲಿ ಕೇವಲ 728.59 ರೂಪಾಯಿ ಉಳಿದಿತ್ತು. ಹಾಗಾಗಿ ಚೆಕ್ ಮಾನ್ಯ ಮಾಡಲು ಸಾಧ್ಯವಿರಲಿಲ್ಲ ಎಂದು ಪ್ರತಿಪಾದಿಸಿತು.

ವಾಣಿಜ್ಯ ತೆರಿಗೆ ಇಲಾಖೆಯು ಒಟ್ಟು 28,863 ರೂಪಾಯಿಗಳಿಗೆ ಸಂಬಂಧಿಸಿದಂತೆ 5-6-2008ರಂದು ಅರ್ಜಿದಾರರ ಖಾತೆಯ ಮೇಲೆ ತನ್ನ ಅಧಿಕಾರ ಸೃಷ್ಟಿಸಿತ್ತು. ಆದರೆ ನಂತರ 27-6-2008ರಂದು ಪತ್ರವೊಂದನ್ನು ಬರೆದು ಈ ಹಣದ ಮೇಲಿನ ಅಧಿಕಾರದ ವಿವಾದವನ್ನು ಹಿಂತೆಗೆದುಕೊಳ್ಳುತ್ತಿರುವುದಾಗಿ ತಿಳಿಸಿತ್ತು. ಬ್ಯಾಂಕಿನ ಸ್ಟೇಟ್ಮೆಂಟನ್ನು ಪರಿಶೀಲಿಸಿದ ಗ್ರಾಹಕ ನ್ಯಾಯಾಲಯ ಅದರಲ್ಲಿ ವಿವಾದಿತ ಚೆಕ್ಕನ್ನು 5-8-2008ರಂದು ನೀಡಿರುವುದನ್ನು ಹಾಗೂ ಅದಕ್ಕೆ ಮುನ್ನವೇ 27-6-2008ರಂದು ವಾಣಿಜ್ಯ ತೆರಿಗೆ ಇಲಾಖೆಯು ತನ್ನ ಹಣದ ಸಂಬಂಧಿ ತಕರಾರು ಹಿಂತೆಗೆದುಕೊಂಡದ್ದನ್ನೂ ಗಮನಕ್ಕೆ ತೆಗೆದುಕೊಂಡಿತು.

ಈ ಹಿನ್ನೆಲೆಯಲ್ಲಿ ಚೆಕ್ ಮಾನ್ಯಗೊಳಿಸಲು ನಿರಾಕರಿಸಿದ ಬ್ಯಾಂಕ್ ವರ್ತನೆಯು ಸೇವಾಲೋಪವಾಗುತ್ತದೆ ಎಂಬ ತೀರ್ಮಾನಕ್ಕೆ ಬಂದ ಗ್ರಾಹಕ ನ್ಯಾಯಾಲಯ 5000 ರೂಪಾಯಿಗಳ ಪರಿಹಾರವನ್ನು 500 ರೂಪಾಯಿ ಖಟ್ಲೆ ವೆಚ್ಚ ಸಹಿತವಾಗಿ ಅರ್ಜಿದಾರ ಶ್ರೀಪತಿ ಅವರಿಗೆ ಪಾವತಿ ಮಾಡುವಂತೆ ಪ್ರತಿವಾದಿ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ ಆಜ್ಞಾಪಿಸಿತು.

ಎನ್ ಒ ಸಿ ವಿವಾದ: ಇನ್ನೊಂದು ಪ್ರಕರಣದಲ್ಲಿ ಸಂಪೂರ್ಣ ಸಾಲ ಮರುಪಾವತಿ ಮಾಡಿದ್ದರೂ ನಿರಾಕ್ಷೇಪಣಾ ಪತ್ರ (ಎನ್ ಒ ಸಿ) ನೀಡಲು ನಿರಾಕರಿಸಿದ್ದಕ್ಕಾಗಿ ಅರ್ಜಿದಾರ ಬೆಂಗಳೂರಿನ ಮತ್ತಿಕೆರೆ ನಿವಾಸಿ ಶ್ರೀನಿವಾಸ ಗೌಡ ವಿ. ಅವರಿಗೆ 5000 ರೂಪಾಯಿಗಳ ಪರಿಹಾರವನ್ನು 500 ರೂಪಾಯಿ ಖಟ್ಲೆವೆಚ್ಚ ಸಹಿತವಾಗಿ ಪಾವತಿ ಮಾಡುವಂತೆ ನ್ಯಾಯಾಲಯ ಬೆಂಗಳೂರು ಮಲ್ಲೇಶ್ವರಂನ ಬಜಾಜ್ ಆಟೋ ಫೈನಾನ್ಸ್ ಸಂಸ್ಥೆಗೆ ಆಜ್ಞಾಪಿಸಿತು.

ಈ ಪ್ರಕರಣದ ಅರ್ಜಿದಾರ ಶ್ರೀನಿವಾಸ ಗೌಡ ಅವರು ಪ್ರತಿವಾದಿ ಬಜಾಜ್ ಆಟೋ ಫೈನಾನ್ಸ್ ಸಂಸ್ಥೆಯಿಂದ ಮೋಟಾರ್ ಸೈಕಲ್ ಒಂದನ್ನು ಖರೀದಿಸುವ ಸಲುವಾಗಿ 11-6-2004ರಂದು 36,020 ರೂಪಾಯಿಗಳ ಸಾಲವನ್ನು ಪಡೆದಿದ್ದರು. ಷರತ್ತಿನಂತೆ ಅವರು ಈ ಸಾಲವನ್ನು 36 ಕಂತುಗಳಲ್ಲಿ ತಲಾ 1298 ರೂಪಾಯಿ ಮತ್ತು ಶೇಕಡಾ 9.90 ಬಡ್ಡಿಯಂತೆ ಮರುಪಾವತಿ ಮಾಡಬೇಕಿತ್ತು. ಸಾಲಕ್ಕೆ ಭದ್ರತೆಯಾಗಿ ಅವರು ಖಾಲಿ ಚೆಕ್ಕುಗಳನ್ನು ನೀಡಿದ್ದರು.

ನಂತರ 15-6-2007ರಂದು ಅರ್ಜಿದಾರರ ಸಂಪೂರ್ಣ ಸಾಲವನ್ನು ಬಡ್ಡಿ ಸಹಿತವಾಗಿ (ಒಟ್ಟು 46,728 ರೂಪಾಯಿ) ಪಾವತಿ ಮಾಡಿ ನಿರಾಕ್ಷೇಪಣಾ ಪತ್ರ (ಎನ್ ಒ ಸಿ) ನೀಡುವಂತೆ ಕೋರಿದ್ದರು. ಪ್ರತಿವಾದಿ ಸಂಸ್ಥೆ ಸಾಲ ಮರುಪಾವತಿ ಮಾಡಿದ್ದಕ್ಕೆ ರಶೀದಿ ನೀಡಿದರೂ, ಖಾಲಿ ಚೆಕ್ಕುಗಳನ್ನು ಹಿಂತಿರುಗಿಸಲಿಲ್ಲ. ನಿರಾಕ್ಷೇಪಣಾ ಪತ್ರವನ್ನೂ ನೀಡಲಿಲ್ಲ. ಅರ್ಜಿದಾರರು ಮಾಡಿದ ಮನವಿಗಳೆಲ್ಲ ವ್ಯರ್ಧವಾದವು. ಅರ್ಜಿದಾರ ಶ್ರೀನಿವಾಸ ಗೌಡ ಅವರು 28-1-2009ರಂದು ಬೆಂಗಳೂರು ನಗರ ಜಿಲ್ಲಾ ಗ್ರಾಹಕ ನ್ಯಾಯಾಲಯದ ಮೊರೆ ಹೊಕ್ಕರು.

ಅರ್ಜಿದಾರರು ಗ್ರಾಹಕ ನ್ಯಾಯಾಲಯದ ಕಟ್ಟೆ ಏರಿದ ಒಂದೇ ತಿಂಗಳಲ್ಲಿ 28-2-2009ರಂದು ಪ್ರತಿವಾದಿ ಸಂಸ್ಥೆಯು ಎನ್ ಒ ಸಿ ಮತ್ತು ಖಾಲಿ ಚೆಕ್ಕುಗಳನ್ನು ಹಿಂದಿರುಗಿಸಿದ್ದನ್ನು ಗಮನಕ್ಕೆ ತೆಗೆದುಕೊಂಡ ನ್ಯಾಯಾಲಯವು, ಅರ್ಜಿದಾರರನ್ನು ಅನಗತ್ಯವಾಗಿ ಮಾನಸಿಕ ಯಾತನೆಗೆ ಒಳಪಡಿಸಿ, ಹಣಕಾಸು ನಷ್ಟವಾಗುವಂತೆಯೂ ಮಾಡಲಾಗಿದೆ ಎಂದು ಅಭಿಪ್ರಾಯಪಟ್ಟು ನ್ಯಾಯ ಒದಗಿಸಿತು.

ಇಂದಿನ ಇತಿಹಾಸ History Today ಜುಲೈ 20

ಇಂದಿನ ಇತಿಹಾಸ

20 ಜುಲೈ

ಆಸ್ಟ್ರೇಲಿಯಾದ ಗ್ರಾಂಟ್ ಹ್ಯಾಕೆಟ್ ಅವರು ಮೆಲ್ಬೋರ್ನಿನಲ್ಲಿ ಏಳು ವರ್ಷಗಳ ಬಳಿಕ 800 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದರು. ವಿಕ್ಟೋರಿಯಾ ಶಾರ್ಟ್ ಕೋರ್ಸ್ ಈಜು ಚಾಂಪಿಯನ್ಶಿಪ್ನ ಸ್ಪರ್ಧೆಯಲ್ಲಿ ಹ್ಯಾಕೆಟ್ ಏಳು ನಿಮಿಷ 23.42 ಸೆಕೆಂಡುಗಳಲ್ಲಿ ಗುರಿ ತಲುಪಿದರು.

2008: ಆಸ್ಟ್ರೇಲಿಯಾದ ಗ್ರಾಂಟ್ ಹ್ಯಾಕೆಟ್ ಅವರು ಮೆಲ್ಬೋರ್ನಿನಲ್ಲಿ ಏಳು ವರ್ಷಗಳ ಬಳಿಕ 800 ಮೀ. ಫ್ರೀಸ್ಟೈಲ್ ಈಜು ಸ್ಪರ್ಧೆಯಲ್ಲಿ ತಮ್ಮದೇ ಹೆಸರಿನಲ್ಲಿದ್ದ ವಿಶ್ವದಾಖಲೆಯನ್ನು ಮುರಿದು ಹೊಸ ದಾಖಲೆ ಸೃಷ್ಟಿಸಿದರು. ವಿಕ್ಟೋರಿಯಾ ಶಾರ್ಟ್ ಕೋರ್ಸ್ ಈಜು ಚಾಂಪಿಯನ್ಶಿಪ್ನ ಸ್ಪರ್ಧೆಯಲ್ಲಿ ಹ್ಯಾಕೆಟ್ ಏಳು ನಿಮಿಷ 23.42 ಸೆಕೆಂಡುಗಳಲ್ಲಿ ಗುರಿ ತಲುಪಿದರು. 2001ರ ಆಗಸ್ಟ್ ತಿಂಗಳಲ್ಲಿ ಪರ್ತ್ನಲ್ಲಿ ನಡೆದ ಸ್ಪರ್ಧೆಯಲ್ಲಿ ಇವರು 7:25.28 ಸೆಕೆಂಡುಗಳಲ್ಲಿ ಗುರಿ ತಲುಪಿ ವಿಶ್ವದಾಖಲೆ ನಿರ್ಮಿಸಿದ್ದರು. ಇದೀಗ ಆ ಸಮಯವನ್ನು 1.86 ಸೆಕೆಂಡುಗಳಷ್ಟು ಉತ್ತಮಪಡಿಸಿಕೊಳ್ಳಲು ಯಶಸ್ವಿಯಾದರು.

2007: 2006-07ನೇ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪೈಕಿ ಏಳು ಪ್ರಶಸ್ತಿಗಳನ್ನು ತನ್ನ ಬಗಲಿಗೆ ಹಾಕಿಕೊಳ್ಳುವ ಮೂಲಕ, ಪ್ರೇಕ್ಷಕರ ಅಭೂತಪೂರ್ವ ಮೆಚ್ಚುಗೆಗೆ ಪಾತ್ರವಾಗಿ ಗಲ್ಲಾ ಪೆಟ್ಟಿಗೆಯಲ್ಲಿ ಸಾರ್ವಕಾಲಿಕ ದಾಖಲೆ ನಿರ್ಮಿಸಿದ `ಮುಂಗಾರು ಮಳೆ' ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಪಟ್ಟಿಯಲ್ಲೂ ಅಗ್ರಸ್ಥಾನ ಪಡೆಯಿತು. ಪ್ರಸ್ತುತ ಸಾಲಿನ ರಾಜ್ಯ ಚಲನಚಿತ್ರ ಪ್ರಶಸ್ತಿಗಳ ಆಯ್ಕೆ ಪಟ್ಟಿಯನ್ನು ಸಮಿತಿಯ ಅಧ್ಯಕ್ಷ ನಾಗತಿಹಳ್ಳಿ ಚಂದ್ರಶೇಖರ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಾರ್ಯದರ್ಶಿ ಐ.ಎಂ.ವಿಠಲಮೂರ್ತಿ ಪ್ರಕಟಿಸಿದರು. ಅತ್ಯುತ್ತಮ ಚಿತ್ರ, ಅತ್ಯುತ್ತಮ ನಿರ್ದೇಶನ, ಸಂಗೀತ, ಛಾಯಾಗ್ರಹಣ, ಸಂಭಾಷಣೆ, ಗೀತ ರಚನೆ, ಧ್ವನಿ ಗ್ರಹಣ ಪ್ರಶಸ್ತಿಗಳು `ಮುಂಗಾರು ಮಳೆ' ಪಾಲಾದವು. `ಮುಂಗಾರು ಮಳೆ' ನಂತರ ಈ ವರ್ಷದ ಯಶಸ್ವಿ ಚಿತ್ರಗಳಲ್ಲಿ ಎರಡನೆಯದಾದ `ದುನಿಯಾ' ಪ್ರಶಸ್ತಿ ಪಟ್ಟಿಯಲ್ಲೂ ಎರಡನೆಯ ಸ್ಥಾನ ಪಡೆಯಿತು. ದ್ವಿತೀಯ ಅತ್ಯುತ್ತಮ ಚಿತ್ರ ಪುರಸ್ಕಾರದೊಂದಿಗೆ ಇನ್ನೂ ಐದು ಪ್ರಶಸ್ತಿಗಳನ್ನು `ದುನಿಯಾ' ಬಾಚಿಕೊಂಡಿತು. ಮೂರನೇ ಅತ್ಯುತ್ತಮ ಚಿತ್ರವಾಗಿ `ಸೈನೈಡ್' ಆಯ್ಕೆಯಾಯಿತು. ಡಾ. ರಾಜ್ಕುಮಾರ್ ಪ್ರಶಸ್ತಿಗೆ ಹಿರಿಯ ಕಲಾವಿದೆ ಎಂ.ಎನ್. ಲಕ್ಷ್ಮಿದೇವಿ ಹಾಗೂ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ನಿರ್ದೇಶಕ ಸಿಂಗೀತಂ ಶ್ರೀನಿವಾಸ್ ರಾವ್ ಅವರನ್ನು ಆಯ್ಕೆ ಮಾಡಲಾಯಿತು. ಜೀವಮಾನದ ವಿಶಿಷ್ಟ ಕೊಡುಗೆಗೆ ಸಲ್ಲುವ ಪುರಸ್ಕಾರ ನಟ ಮತ್ತು ನಿರ್ದೇಶಕ ದ್ವಾರಕೀಶ್ ಅವರಿಗೆ ಲಭಿಸಿತು. ಎರಡು ತುಳು ಚಿತ್ರಗಳೂ ಸೇರಿದಂತೆ ಒಟ್ಟೂ 37 ಚಿತ್ರಗಳು ಸ್ಪರ್ಧಾಕಣದಲ್ಲಿದ್ದವು. ತೀರ್ಪುಗಾರರ ವಿಶೇಷ ಪ್ರಶಸ್ತಿಗಳನ್ನು `ಸ್ನೇಹಾಂಜಲಿ' ಚಿತ್ರದ ಅಭಿನಯಕ್ಕಾಗಿ, ಹುಟ್ಟು ಕಿವುಡ ಹಾಗೂ ಮೂಕ ಕಲಾವಿದ ಧ್ರುವ ಹಾಗೂ `ದಾಟು' ಚಿತ್ರಕ್ಕೆ ನೀಡಲಾಯಿತು.

2007: 1993ರಲ್ಲಿ ಮುಂಬೈಯಲ್ಲಿ ಸಂಭವಿಸಿದ ಸರಣಿ ಬಾಂಬ್ ಸ್ಪೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಇನ್ನೊಬ್ಬ ಅರೋಪಿ ಮೊಹಮದ್ ಇಕ್ಬಾಲ್ ಮೊಹಮದ್ ಯುಸೂಫ್ ಶೇಖ್ ಎಂಬಾತನಿಗೆ ಮರಣ ದಂಡನೆ ವಿಧಿಸಿತು. ಪಿತೂರಿಯಲ್ಲಿ ಭಾಗಿಯಾಗಿದ್ದ ಅಪರಾಧಕ್ಕಾಗಿ ಸೇವೆಯಿಂದ ವಜಾಗೊಂಡ ಕಸ್ಟಮ್ಸ್ ಕಲೆಕ್ಟರ್ ಸೋಮನಾಥ್ ಥಾಪಾ ಮತ್ತು ಬಷಿರ್ ಅಹಮದ್ ಖೈರುಲ್ಲಾಗೆ ಟಾಡಾ ನ್ಯಾಯಾಧೀಶ ಪಿ. ಡಿ. ಕೊಡೆ ಅವರು ಜೀವಾವಧಿ ಶಿಕ್ಷೆ ವಿಧಿಸಿದರು.
ಮೀನುಗಾರರ ವಸತಿ ಪ್ರದೇಶದ ಮೇಲೆ ಗ್ರೆನೇಡ್ ಎಸೆದ ಅಪರಾಧಿಗಳ ಗುಂಪಿನಲ್ಲಿ ಬಷಿರ್ ಅಹಮದ್ ಖೈರುಲ್ಲಾ ಭಾಗಿಯಾಗಿದ್ದ. ಈ ಅಪರಾಧಕ್ಕಾಗಿ ಆತನಿಗೆ ಜೀವಾವಧಿ ಶಿಕ್ಷೆ ನೀಡಲಾಯಿತು. ಮೊಹಮದ್ ಇಕ್ಬಾಲ್ಗೆ ಗಲ್ಲು ಶಿಕ್ಷೆ ವಿಧಿಸುವುದರೊಂದಿಗೆ ಮುಂಬೈ ಸ್ಫೋಟದ ಪ್ರಕರಣಕ್ಕೆ ಸಂಬಂಧಿಸಿದಂತೆ ಮರಣದಂಡನೆ ಶಿಕ್ಷೆಗೆ ಗುರಿಯಾದವರ ಸಂಖ್ಯೆ ಏಳಕ್ಕೆ ಏರಿತು. ರಾಯಗಡ ಜಿಲ್ಲೆಯ ಸಂಧೇರಿಯಲ್ಲಿ ಶಸ್ತ್ರಾಸ್ತ್ರ ತರಬೇತಿ ಪಡೆದು ಅಲ್ಹುಸ್ಸೇನಿ ಕಟ್ಟಡದಲ್ಲಿ ಆರ್ಡಿಎಕ್ಸ್ ಅಳವಡಿಸಲು ನೆರವಾದ ಹಾಗೂ ಸಹರಾ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಾಂಬ್ ಸ್ಫೋಟಿಸಿದ ಮತ್ತು ದಾದರಿನಲ್ಲಿ ಸ್ಕೂಟರಿನಲ್ಲಿ ಬಾಂಬ್ ಇಟ್ಟು ಸ್ಫೋಟಿಸಿದ ಕೃತ್ಯಕ್ಕಾಗಿ ಅಹಮದ್ ಇಕ್ಬಾಲ್ನನ್ನು ಕಳೆದ ಸೆಪ್ಟೆಂಬರ್ 25ರಂದು ಅಪರಾಧಿ ಎಂದು ಘೋಷಿಸಲಾಗಿತ್ತು. 1993ರ ಬಾಂಬ್ ಸ್ಫೋಟಕ್ಕೆ ಸಂಬಂಧಿಸಿದಂತೆ ನೂರು ಜನರನ್ನು ಅಪರಾಧಿಗಳು ಎಂದು ಘೋಷಿಸಲಾಗಿತ್ತು. ಇದುವರೆಗೆ 87 ಮಂದಿ ಅಪರಾಧಿಗಳ ಶಿಕ್ಷೆಯ ಸ್ವರೂಪ ಮತ್ತು ಪ್ರಮಾಣವನ್ನು ಪ್ರಕಟಿಸಲಾಗಿದೆ. 1993ರ ಮಾರ್ಚ್ 12ರ ಸ್ಫೋಟದಲ್ಲಿ 257 ಮಂದಿ ಸತ್ತು 700ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಟಾಡಾ ನ್ಯಾಯಾಲಯವು ಈವರೆಗೆ ಏಳು ಮಂದಿಗೆ ಮರಣದಂಡನೆ ಹಾಗೂ 16 ಮಂದಿಗೆ ಜೀವಾಧಿ ಶಿಕ್ಷೆ ವಿಧಿಸಿತು.

2007: ರಾಷ್ಟ್ರೀಯ ಅಲ್ಪಸಂಖ್ಯಾತ ಆಯೋಗದ ಮುಖ್ಯಸ್ಥ ಮೊಹಮ್ಮದ್ ಹಮೀದ್ ಅನ್ಸಾರಿ ಅವರನ್ನು ರಾಷ್ಟ್ರೀಯ ಪ್ರಗತಿಪರ ಒಕ್ಕೂಟ (ಯುಪಿಎ) ಮತ್ತು ಎಡಪಕ್ಷಗಳು ಉಪರಾಷ್ಟ್ರಪತಿ ಸ್ಥಾನದ ಅಭ್ಯರ್ಥಿಯಾಗಿ ಆಯ್ಕೆ ಮಾಡಿದವು. ನವದೆಹಲಿಯಲ್ಲಿ ಈದಿನ ನಡೆದ ಯುಪಿಎ ಮತ್ತು ಎಡಪಕ್ಷಗಳ ಸಮನ್ವಯ ಸಮಿತಿಯ ಸಭೆಯ ಬಳಿಕ ಯುಪಿಎ ಮುಖ್ಯಸ್ಥೆ ಸೋನಿಯಾ ಗಾಂಧಿ ಅವರು ಮಾಜಿ ರಾಜತಾಂತ್ರಿಕ ಅನ್ಸಾರಿ ಅವರ ಹೆಸರು ಪ್ರಕಟಿಸಿದರು.

2007: ದೇಶದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ಅವರನ್ನು ಅಮಾನತುಗೊಳಿಸಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ಹೊರಡಿಸಿದ್ದ ಆದೇಶವನ್ನು ಪಾಕಿಸ್ತಾನ ಸುಪ್ರೀಂ ಕೋರ್ಟ್ ಅನೂರ್ಜಿತಗೊಳಿಸಿತು. ಇದರಿಂದಾಗಿ ಅನೇಕ ಸಮಸ್ಯೆ, ವಿವಾದದಲ್ಲಿ ಸಿಕ್ಕಿ ತತ್ತರಿಸಿದ ಮುಷರಫ್ ಅವರಿಗೆ ಭಾರಿ ಮುಖಭಂಗವಾಯಿತು. ನ್ಯಾಯಮೂರ್ತಿ ಖಲೀಲುರ್ ರೆಹಮಾನ್ ರಾಮಡೆ ನೇತೃತ್ವದಲ್ಲಿ ಸುಪ್ರೀಂ ಕೋರ್ಟಿನ 13 ಸದಸ್ಯರ ಪೂರ್ಣ ಪೀಠ ಎರಡು ತಿಂಗಳು ವಿಚಾರಣೆ ನಡೆಸಿ, ಚೌಧರಿ ವಿರುದ್ಧ ಮುಷರಫ್ ಸರ್ಕಾರ ಸಿದ್ಧಪಡಿಸಿದ್ದ ಆರೋಪಗಳ ಪಟ್ಟಿಯನ್ನು 10-3 ಮತಗಳಿಂದ ವಜಾ ಮಾಡಿತು. ತಮ್ಮ ಮಗನಿಗೆ ಉನ್ನತ ಪೊಲೀಸ್ ಹುದ್ದೆ ದೊರಕಿಸಲು ಹಾಗೂ ವೈಯಕ್ತಿಕ ಅನುಕೂಲ ಮಾಡಿಕೊಳ್ಳಲು ಚೌಧರಿ ಪ್ರಭಾವ ಬೀರಿದ್ದರು ಎಂಬ ಸರ್ಕಾರದ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಪೀಠ ಹೇಳಿತು.

2007: ದುಬೈ ನಗರದಲ್ಲಿ ಇನ್ನೂ ನಿರ್ಮಾಣ ಹಂತದಲ್ಲಿರುವ `ಬುರ್ಜ್ ದುಬೈ' ಗಗನಚುಂಬಿ ಕಟ್ಟಡ ವಿಶ್ವದಲ್ಲೇ ಅತ್ಯಂತ ಎತ್ತರದ ಕಟ್ಟಡ ಎಂಬ ಖ್ಯಾತಿ ಲಭಿಸಿತು. ಇದುವರೆಗೆ 507.3 ಮೀಟರ್ ಎತ್ತರದ `ತೈಪೆ ಟವರ್ಸ್' ವಿಶ್ವದ ಅತ್ಯಂತ ಎತ್ತರದ ಕಟ್ಟಡ ಎಂಬ ಕೀರ್ತಿ ಪಡೆದಿತ್ತು. ಆದರೆ ಈಗ `ಬುಜರ್್ ದುಬೈ' ಕಟ್ಟಡ ಅದನ್ನು ಹಿಂದಿಕ್ಕಿದೆ ಎಂದು ಬೃಹತ್ ಕಟ್ಟಡಗಳ ನಿರ್ವಹಣಾ ಮಂಡಳಿಯು ಅಧಿಕೃತವಾಗಿ ಸ್ಪಷ್ಟಪಡಿಸಿತು. ಹೋಟೆಲುಗಳು, ಶಾಪಿಂಗ್ ಮಾಲ್ಗಳು, ವಾಣಿಜ್ಯ ಸಂಕೀರ್ಣಗಳು ಹಾಗೂ ಫ್ಲಾಟುಗಳನ್ನು ಹೊಂದಲಿರುವ `ಬುರ್ಜ್ ದುಬೈ' ಕಟ್ಟಡದ ಎತ್ತರ 705ರಿಂದ 950 ಮೀಟರ್ ನಡುವೆ ಇರಲಿದೆ ಎಂಬ ಅಂದಾಜಿದೆ. ಇದು 154ರಿಂದ 180 ಅಂತಸ್ತುಗಳನ್ನು ಹೊಂದಲಿದೆ. ದಕ್ಷಿಣ ಕೊರಿಯಾದ ಸ್ಯಾಮ್ ಸಂಗ್ ಕಾರ್ಪೊರೇಷನ್ ಕಂಪೆನಿ ಈ ಕಟ್ಟಡದ ನಿರ್ಮಾಣದ ಉಸ್ತುವಾರಿ ಹೊತ್ತುಕೊಂಡಿದೆ. 2005ರ ಫೆಬ್ರವರಿ 1ರಂದು ಕಾಮಗಾರಿ ಆರಂಭವಾಗಿದ್ದು, 2009ರ ಜೂನ್ ವೇಳೆಗೆ ನಿರ್ಮಾಣ ಕಾರ್ಯ ಪೂರ್ಣಗೊಳ್ಳುವುದು. ಈ ಬೃಹತ್ ಕಟ್ಟಡದ ಅಂದಾಜು ವೆಚ್ಚ 7300 ಕೋಟಿ ದಿರಹಂ (ಯುಎಇ ಹಣ). ಚಿಕಾಗೋ ಮೂಲದ ಸ್ಕಿಡ್ಮೋರ್, ಓವಿಂಗ್ಸ್ ಹಾಗೂ ಮೆರಿಲ್ ಕಂಪೆನಿಗಳು ಇದರ ವಿನ್ಯಾಸ ರೂಪಿಸಿವೆ.

2007: ವಿಶ್ವದಲ್ಲೇ ಅತ್ಯಂತ ಬೃಹತ್ ದೇವಾಲಯಗಳಲ್ಲಿ ಒಂದು ಎಂದು ಬಣ್ಣಿಸಲಾಗಿರುವ ಸ್ವಾಮಿನಾರಾಯಣ ದೇವಸ್ಥಾನ ಜುಲೈ 22ರಂದು ಕೆನಡಾದಲ್ಲಿ ಉದ್ಘಾಟನೆಗೊಳ್ಳಲಿದೆ ಎಂದು ಈದಿನ ಟೊರೆಂಟೋದಲ್ಲಿ ಪ್ರಕಟಿಸಲಾಯಿತು. ಟೊರೆಂಟೋ ನಗರದ ಈಶಾನ್ಯ ಭಾಗದಲ್ಲಿ ಹಿಮಾಚ್ಛಾದಿತ ಹಿಮಾಲಯ ಶಿಖರದಂತೆ ಕಾಣುವ ಸ್ವಾಮಿನಾರಾಯಣ ಮಂದಿರವು ಪ್ರಧಾನಿ ಸ್ಟೀಫನ್ ಹಾರ್ಪರ್, ಟೋರೆಂಟೋ ಮೇಯರ್ ಡೇವಿಡ್ ಮಿಲ್ಲರ್ ಅವರ ಉಪಸ್ಥಿತಿಯಲ್ಲಿ ಉದ್ಘಾಟನೆಯಾಗಲಿದೆ. ಇಲ್ಲಿ 2 ಲಕ್ಷಕ್ಕಿಂತ ಅಧಿಕ ಹಿಂದುಗಳಿದ್ದಾರೆ. ದೇಗುಲದ ಹೊರ ಆವರಣವನ್ನು ಸುಣ್ಣದ ಕಲ್ಲು ಹಾಗೂ ಹೊಳೆಯುವ ಇಟಲಿ ಕೆರ್ರಾರ ಶಿಲೆಯಲ್ಲಿ ಕೆತ್ತಲಾಗಿದೆ. ಒಳ ಆವಣರದಲ್ಲಿ ಗುಲಾಬಿ ವರ್ಣದ ಕಲ್ಲುಗಳು ಶೋಭಿಸುತ್ತಿವೆ. ಸ್ಥಳೀಯ ಹಿಂದು ಸಮುದಾಯ ಕಟ್ಟಡಕ್ಕಾಗಿ 4 ಕೋಟಿ ಅಮೆರಿಕ ಡಾಲರ್ ನೀಡಿದೆ. 400 ಸ್ವಯಂ ಸೇವಕರು ಕಟ್ಟಡ ನಿರ್ಮಾಣಕ್ಕೆ ಶ್ರಮಿಸಿದ್ದಾರೆ.

2007: ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕವು ಈದಿನ ವಹಿವಾಟಿನ ಒಂದು ಹಂತದಲ್ಲಿ 15,683 ಅಂಶಗಳ ಗಡಿ ದಾಟಿ ಹೊಸ ದಾಖಲೆ ಮಾಡಿತು.

1982: ಗಾಂಧೀಜಿ ಅನುಯಾಯಿ ಮೀರಾ ಬೆಹನ್ ನಿಧನ.

1969: ವರಾಹಗಿರಿ ವೆಂಕಟಗಿರಿ ರಾಷ್ಟ್ರಪತಿ ಸ್ಥಾನದಿಂದ ಕೆಳಗಿಳಿದರು.

1961: ಎಚ್.ಎಲ್. ಪುಷ್ಪ ಜನನ.

1958: ಮಂದಾಕಿನಿ ಪುರೋಹಿತ ಜನನ.

1955: ಬಸವರಾಜ ಸಾದರ ಜನನ.

1943: ಸಾಹಿತಿ ಡಿ.ಆರ್. ಬಳೂರಗಿ ಜನನ.

1940: ವೈದ್ಯ, ಸಾಹಿತಿ, ಸಂಶೋಧಕ ಡಾ. ಸ.ಜ. ನಾಗಲೋಟಿಮಠ ಅವರು ಜಂಬಯ್ಯ ವೀರಬಸಯ್ಯ- ಹಂಪವ್ವ ದಂಪತಿಯ ಪುತ್ರನಾಗಿ ಗದಗದಲ್ಲಿ ಈದಿನ ಜನಿಸಿದರು. ಕನ್ನಡದಲ್ಲಿ 42, ಇಂಗ್ಲಿಷ್ನಲ್ಲಿ 14 ಗ್ರಂಥಗಳನ್ನು ರಚಿಸಿದ ನಾಗಲೋಟಿಮಠ ಅವರು ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ, ಕುವೆಂಪು ವೈದ್ಯ ವಿಜ್ಞಾನ ಪ್ರಶಸ್ತಿ, ಡಾ. ಬಿ.ಸಿ. ರಾಯ್ ಪ್ರಶಸ್ತಿ, ವಿ.ಎಸ್. ಮುಂಗಳಿಕ ಪ್ರಶಸ್ತಿ, ಶ್ರೀ ಜಗದ್ಗುರು ರೇಣುಕಾಚಾರ್ಯ ಪ್ರಶಸ್ತಿ, ಅಲೆಂಬಿಕ್ ಸಂಶೋಧನಾ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳಿಗೆ ಪಾತ್ರರಾಗಿದ್ದಾರೆ.

1925: ಸಾಹಿತಿ ಟಿ.ಬಿ. ಹಂಡಿ ಜನನ.

1924: ಹದಿನೈದು ದೇಶಗಳ ಪ್ರತಿನಿಧಿಗಳು ಪ್ಯಾರಿಸ್ಸಿನಲ್ಲಿ ಭೇಟಿಯಾಗಿ ಚೆಸ್ಗಾಗಿ ಒಂದು ಶಾಶ್ವತ ಒಕ್ಕೂಟ (ಫಿಡೆ) ಸ್ಥಾಪಿಸಲು ನಿರ್ಧರಿಸಿದರು.

1905: ಬಂಗಾಳ ವಿಭಜನೆಯ ಲಾರ್ಡ್ ಕರ್ಜನ್ ಘೋಷಣೆಯನ್ನು ಬ್ರಿಟಿಷ್ ಸರ್ಕಾರ ಒಪ್ಪಿಕೊಂಡಿತು.

1532: ಕವಿ, ತತ್ವಜ್ಞಾನಿ ತುಳಸೀದಾಸರು ಉತ್ತರ ಪ್ರದೇಶದ ರಾಜಪುರದಲ್ಲಿ ಈದಿನ ಜನಿಸಿದರು. ಮಹತ್ವದ ಹಿಂದಿ ಕವಿಗಳಲ್ಲಿ ಒಬ್ಬರಾಗಿರುವ ತುಳಸೀದಾಸರು 12 ಪುಸ್ತಕ ಬರೆದಿದ್ದಾರೆ. ರಾಮನ ಕುರಿತು ಬರೆದಿರುವ `ರಾಮಚರಿತ ಮಾನಸ' ಇವರ ಪ್ರಮುಖ ಗ್ರಂಥಗಳಲ್ಲಿ ಒಂದು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜುಲೈ 19

ಇಂದಿನ ಇತಿಹಾಸ

19 ಜುಲೈ

ಜಾರ್ಖಂಡಿನ ಗುಡ್ಡಗಾಡು ಮಹಿಳೆ ಲಕ್ಷ್ಮಿ ಲಕ್ರಾ (27) ಉತ್ತರ ರೈಲ್ವೆಯಲ್ಲಿ ಮೊತ್ತ ಮೊದಲ ಮಹಿಳಾ ರೈಲು ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದಳು. ಮೂಲತಃ ಮುಂಬೈಯವಳಾದ ಲಕ್ಷ್ಮಿ 1992ರಲ್ಲಿ ರೈಲ್ವೆ ಇಲಾಖೆಗೆ ಸೇರಿದ್ದು, ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ಮಾರ್ಗದಲ್ಲಿ ಮುನ್ನಡೆದರು.

2008: ಶಂಕಿತ ಗೆರಿಲ್ಲಾಗಳು ವಾಹನದ ಮೇಲೆ ನಡೆಸಿದ ಶಕ್ತಿಶಾಲಿ ಬಾಂಬ್ ಸ್ಫೋಟದಿಂದ ಭಾರತೀಯ ಸೇನಾಪಡೆಗೆ ಸೇರಿದ ಕನಿಷ್ಠ 10 ಸೈನಿಕರು ಮೃತರಾಗಿ, 20ಕ್ಕೂ ಹೆಚ್ಚು ಮಂದಿ ಗಾಯಗೊಂಡ ಘಟನೆ ಶ್ರೀನಗರದ ಹೊರವಲಯದಲ್ಲಿ ನಡೆಯಿತು. ಪಾಕ್ ಆಕ್ರಮಿತ ಕಾಶ್ಮೀರದ ಮುಜಾಫರಾಬಾದಿಗೆ ಸಂಪರ್ಕ ಕಲ್ಪಿಸುವ ಶ್ರೀನಗರ- ಬಾರಾಮುಲ್ಲಾ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿತು.

2007: 1993ರ ಮುಂಬೈ ಸರಣಿ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಶೇಷ ಟಾಡಾ ನ್ಯಾಯಾಲಯವು ಮತ್ತೆ ಮೂವರಿಗೆ ಗಲ್ಲು ಶಿಕ್ಷೆ ವಿಧಿಸಿತು. ತಲೆಮರೆಸಿಕೊಂಡಿರುವ ಪ್ರಕರಣದ ಪ್ರಮುಖ ಆರೋಪಿ ಟೈಗರ್ ಮೆಮೊನ್ನ ಆಪ್ತರಾದ ಅಸ್ಗರ್ ಮುಕದಮ್, ಷಾನವಾಜ್ ಖುರೇಶಿ ಮತ್ತು ಮೊಹಮದ್ ಶೋಯಿಬ್ ಘನ್ಸಾರ್ಗೆ ಟಾಡಾ ನ್ಯಾಯಾಧೀಶರು ಗಲ್ಲು ಶಿಕ್ಷೆ ಮತ್ತು ತಲಾ ರೂ. 4ಲಕ್ಷ ದಂಡ ವಿಧಿಸಿದರು. ಇದರೊಂದಿಗೆ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೆ ಒಟ್ಟು ಆರು ಮಂದಿಗೆ ಮರಣದಂಡನೆ ವಿಧಿಸಿದಂತಾಯಿತು. 1992ರಿಂದ ಮೆಮೊನ್ ನ ನೌಕರನಾಗಿದ್ದ ಮುಕದಮ್, ಕಳೆದ ಸೆಪ್ಟೆಂಬರ್ 18ರಂದು ಅಪರಾಧಿ ಎಂದು ತೀರ್ಮಾನವಾಗಿತ್ತು. ಬಾಂಬ್ ಸ್ಫೋಟದ ಸಂಚು ರೂಪಿಸುವಲ್ಲಿಂದ ಹಿಡಿದು ಕಾರ್ಯಾಚರಣೆ ಪೂರ್ತಿಗೊಳ್ಳುವವರೆಗೂ ಸಕ್ರಿಯವಾಗಿ ಪಾಲ್ಗೊಂಡಿದ್ದ ಮುಕದಮ್, ದಾದರಿನ ಪ್ಲಾಜಾ ಚಿತ್ರ ಮಂದಿರದಲ್ಲಿ ನಿಲ್ಲಿಸಲಾಗಿದ್ದ ಕಾರಿನಲ್ಲಿ ಆರ್ ಡಿ ಎಕ್ಸ್ ಇರಿಸಿದ್ದ. ಈ ಸ್ಫೋಟದಲ್ಲಿ ಹತ್ತು ಮಂದಿ ಸತ್ತು 36 ಮಂದಿ ಗಾಯಗೊಂಡಿದ್ದರು. ಸುಮಾರು 87 ಲಕ್ಷ ರೂಪಾಯಿ ಮೌಲ್ಯದ ಆಸ್ತಿಪಾಸ್ತಿಗೆ ಹಾನಿ ಉಂಟಾಗಿತ್ತು. ಶಿಕ್ಷೆಗೆ ಒಳಗಾಗಿರುವ ಮೂವರನ್ನು ಮುಕದಮ್ ಹೋಟೆಲ್ಗಳಿಗೆ ತಲುಪಿಸಿದ್ದ. ಹೋಟೆಲುಗಳಲ್ಲಿ ಸ್ಫೋಟ ಸಂಭವಿಸಿತ್ತು.

2007: ಮುಂಬೈ ಉಪನಗರದ ಬೋರಿವಿಲಿಯ ಬಬಾಯಿ ನಾಕಾ ಪ್ರದೇಶದಲ್ಲಿ ಕುಸಿದು ಬಿದ್ದ ಏಳು ಮಹಡಿಗಳ `ಲಕ್ಷ್ಮಿ ಛಾಯಾ' ಕಟ್ಟಡದ ಅವಶೇಷದಿಂದ ಹೊರತರಲಾದ ವ್ಯಕ್ತಿಯೊಬ್ಬ ಮುಂಬೈಯ ಭಗವತಿ ಆಸ್ಪತ್ರೆಯಲ್ಲಿ ಮೃತನಾದ. ಇದರಿಂದಾಗಿ ಈ ದುರಂತದಲ್ಲಿ ಮಡಿದವರ ಸಂಖ್ಯೆ 26ಕ್ಕೇರಿತು.

2007: ವಸತಿ ಯೋಜನೆಗಳ ಫಲಾನುಭವಿಗಳ ಆಯ್ಕೆಯ ಅಧಿಕಾರವನ್ನು ಗ್ರಾಮಪಂಚಾಯ್ತಿ ವ್ಯಾಪ್ತಿಯ ಗ್ರಾಮ ಸಭೆಗಳ ಬದಲಿಗೆ ವಿಧಾನಸಭಾ ಸದಸ್ಯರ ನೇತೃತ್ವದ ಸಮಿತಿಗೆ ನೀಡುವ ಕರ್ನಾಟಕ ಪಂಚಾಯತ್ ರಾಜ್ (ತಿದ್ದುಪಡಿ) ಮಸೂದೆ- 2007ನ್ನು ರಾಜ್ಯಪಾಲ ಟಿ.ಎನ್.ಚತುರ್ವೇದಿ ವಾಪಸು ಕಳುಹಿಸಿದರು.

2007: ಪಾಕಿಸ್ತಾನದ ಎರಡು ಕಡೆ ಆತ್ಮಹತ್ಯಾ ಬಾಂಬ್ ಸ್ಫೋಟ ಸಂಭವಿಸಿ ಕನಿಷ್ಠ 38 ಮಂದಿ ಮೃತರಾದರು. ದಕ್ಷಿಣ ಪಾಕಿಸ್ತಾನದ ಹಬ್ ಎಂಬಲ್ಲಿ ಜನನಿಬಿಡ ಮಾರುಕಟ್ಟೆಯಲ್ಲಿ ಸಂಭವಿಸಿದ ಸ್ಫೋಟದಲ್ಲಿ ಎಂಟು ಪೊಲೀಸರು ಸೇರಿ 30 ಮಂದಿ ಮೃತರಾದರು. ವಾಯವ್ಯ ಭಾಗದ ಹಂಗು ಎಂಬಲ್ಲಿ ಆತ್ಮಹತ್ಯಾ ಪಡೆಯ ಸದಸ್ಯನೊಬ್ಬ ಪೊಲೀಸ್ ತರಬೇತಿ ಕೇಂದ್ರದ ಒಳಗೆ ಕಾರು ನುಗ್ಗಿಸಿ ಬಾಂಬ್ ಸ್ಫೋಟಿಸಿದ್ದರಿಂದ 8 ಮಂದಿ ಮೃತರಾದರು.

2007: ಕ್ಯಾಲಿಫೋರ್ನಿಯಾದ ಬರ್ಕ್ಲಿಯಲ್ಲಿರುವ ಎಂಜಿನಿಯರಿಂಗ್ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿ ಹೈದರಾಬಾದ್ ಮೂಲದ ಶಂಕರಶಾಸ್ತ್ರಿ ನೇಮಕಗೊಂಡರು. ಹೈದರಾಬಾದಿನಲ್ಲಿ ಜನಿಸಿದ ಶಾಸ್ತ್ರಿ ತಮ್ಮ ವಿದ್ಯಾಬ್ಯಾಸವನ್ನು ಪುಣೆಯಲ್ಲಿ ಮುಗಿಸಿ ವಿದೇಶದಲ್ಲಿನ ವಿವಿಗೆ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಮೊದಲ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ಜಾರ್ಖಂಡಿನ ಗುಡ್ಡಗಾಡು ಮಹಿಳೆ ಲಕ್ಷ್ಮಿ ಲಕ್ರಾ (27) ಉತ್ತರ ರೈಲ್ವೆಯಲ್ಲಿ ಮೊತ್ತ ಮೊದಲ ಮಹಿಳಾ ರೈಲು ಚಾಲಕಿ ಎಂಬ ಹೆಗ್ಗಳಿಕೆಗೆ ಪಾತ್ರರಾದಳು. ಮೂಲತಃ ಮುಂಬೈಯವಳಾದ ಲಕ್ಷ್ಮಿ 1992ರಲ್ಲಿ ರೈಲ್ವೆ ಇಲಾಖೆಗೆ ಸೇರಿದ್ದು, ಏಷ್ಯಾದ ಮೊದಲ ಮಹಿಳಾ ರೈಲು ಚಾಲಕಿ ಸುರೇಖಾ ಯಾದವ್ ಮಾರ್ಗದಲ್ಲಿ ಮುನ್ನಡೆದರು.

2006: ತಿರುಮಲ ತಿರುಪತಿ ದೇವಸ್ಥಾನವು ತನ್ನ ಎಲ್ಲ 10,000 ಮಂದಿ ನೌಕರರಿಗೂ ಹಣೆಯಲ್ಲಿ `ತಿಲಕ' ಧರಿಸುವುದನ್ನು ಕಡ್ಡಾಯಗೊಳಿಸಿ ನಿರ್ದೇಶನ ನೀಡಿತು.

2006: ಒರಿಸ್ಸಾದ ಪುರಿ ಮತ್ತು ಕೊನಾರ್ಕ್ ನಡುವೆ ಭಾರತದ ಮೊದಲ ವೇದಾಂತ ಅಂತರ್ರಾಷ್ಟ್ರೀಯ ವಿಶ್ವವಿದ್ಯಾಲಯ ಸ್ಥಾಪಿಸಲು ಅಗರ್ವಾಲ್ ಪ್ರತಿಷ್ಠಾನ ಮತ್ತು ಒರಿಸ್ಸಾ ಸರ್ಕಾರ ಭುವನೇಶ್ವರದಲ್ಲಿ ಒಪ್ಪಂದಕ್ಕೆ ಸಹಿ ಹಾಕಿದವು. 8000 ಎಕರೆ ವಿಸ್ತೀರ್ಣದಲ್ಲಿ 15,000 ಕೋಟಿ ರೂಪಾಯಿ ವೆಚ್ಚದಲ್ಲಿ ಸ್ಥಾಪನೆಯಾಗಲಿರುವ ಈ ವಿಶ್ವವಿದ್ಯಾಲಯ ಲಕ್ಷ ವಿದ್ಯಾರ್ಥಿಗಳಿಗೆ ಪ್ರವೇಶ ಕಲ್ಪಿಸಲಿದೆ.

2006: ಸರ್ಕಾರಿ ಸೇವೆಯಲ್ಲಿ ಒಬಿಸಿ (ಇತರ ಹಿಂದುಳಿದ ವರ್ಗಗಳು) ಮೀಸಲು ಸೌಲಭ್ಯಕ್ಕೆ ಸಂಬಂಧಿಸಿದಂತೆ `ಕೆನೆಪದರ' ಪಟ್ಟಿಯನ್ನು ಬಿಡುಗಡೆ ಮಾಡಿದ ಕೇಂದ್ರ ಸರ್ಕಾರ ಈ ಪಟ್ಟಿಯಲ್ಲಿ ಇರುವವರ ಮಕ್ಕಳು ಮೀಸಲು ಸೌಲಭ್ಯಕ್ಕೆ ಅರ್ಹರಲ್ಲ ಎಂದು ಪ್ರಕಟಿಸಿತು.

1993: ಹಿರಿಯ ಪತ್ರಕರ್ತ ಗಿರಿಲಾಲ್ ಜೈನ್ ನಿಧನ.

1969: ದೇಶದ 14 ಪ್ರಮುಖ ವಾಣಿಜ್ಯ ಬ್ಯಾಂಕುಗಳನ್ನು ಕೇಂದ್ರ ಸರ್ಕಾರ ರಾಷ್ಟ್ರೀಕರಣ ಮಾಡಿತು.

1965: ಜ್ಯೋತಿ ಗುರುಪ್ರಸಾದ್ ಜನನ.

1954: ಕೆ.ಎಂ. ವಿಜಯಲಕ್ಷ್ಮಿ ಜನನ.

1945: ರೂಪ ಕುಲಕರ್ಣಿ ಜನನ.

1938: ಖ್ಯಾತ ಬಾಹ್ಯಾಕಾಶ ವಿಜ್ಞಾನಿ ಜಯಂತ ವಿಷ್ಣು ನಾರಳೀಕರ್ ಜನನ.

1920: ಕಾದಂಬರಿಕಾರ, ಕಥೆ, ನಾಟಕಕಾರ ತ್ರಿವಿಕ್ರಮ (19-7-1920ರಿಂದ 9-1-1998ರವರೆಗೆ) ಅವರು ಕೆ.ಎಸ್. ಕೃಷ್ಣಮೂರ್ತಿ- ಜಯಲಕ್ಷ್ಮಮ್ಮ ದಂಪತಿಯ ಮಗನಾಗಿ ತುಮಕೂರಿನಲ್ಲಿ ಜನಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Tuesday, July 21, 2009

ಇಂದಿನ ಇತಿಹಾಸ History Today ಜುಲೈ 18

ಇಂದಿನ ಇತಿಹಾಸ

ಜುಲೈ 18

ಅಮೆರಿಕದಲ್ಲಿ ಯಶಸ್ವಿ ಪ್ರವಾಸದ ನಂತರ ಈಗ ಬ್ರಿಟನ್ ಗೆ ಬಂದ ಭಾರತದ ಹೆಸರಾಂತ ಯೋಗ ಗುರು ಸ್ವಾಮಿ ರಾಮದೇವ್ ಅವರು ಲಂಡನ್ನಿನ ಕಾಮನ್ಸ್ ಸಭಾಂಗಣದಲ್ಲಿ ಬ್ರಿಟನ್ನಿನ ಪಾರ್ಲಿಮೆಂಟ್ ಸದಸ್ಯರು ಮತ್ತು ಗಣ್ಯರಿಗಾಗಿ ವಿಶೇಷ ಯೋಗ ಪ್ರದರ್ಶನ ನೀಡಿದರು. 30 ನಿಮಿಷಗಳ ಅವಧಿಯ ಕಾರ್ಯಕ್ರಮದಲ್ಲಿ ಅವರು ಯೋಗದ ವೈಜ್ಞಾನಿಕ ಮಹತ್ವ ಮತ್ತು ಉಪಯುಕ್ತತೆ, ಸಸ್ಯಹಾರ, ವೇದ ಜ್ಞಾನಗಳ ಬಗ್ಗೆ ಉಪನ್ಯಾಸ ನೀಡಿದರು.

2008: ನಟ- ನಿರ್ಮಾಪಕ ಎಂ.ಪಿ.ಶಂಕರ್ ಅವರ ಅಂತ್ಯಕ್ರಿಯೆ ಮೈಸೂರಿನ ವಿದ್ಯಾರಣ್ಯಪುರಂನ ವೀರಶೈವ ರುದ್ರಭೂಮಿಯಲ್ಲಿ ಸಕಲ ಸರ್ಕಾರಿ ಮರ್ಯಾದೆಯೊಂದಿಗೆ ನಡೆಯಿತು. ಸರ್ಕಾರದ ಪರವಾಗಿ ಜಿಲ್ಲಾಧಿಕಾರಿ ಪಿ.ಮಣಿವಣ್ಣನ್, ಉಪ ಪೊಲೀಸ್ ಆಯುಕ್ತ ಡಿ'ಸೋಜಾ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿ ಅಂತಿಮ ಗೌರವ ಸಲ್ಲಿಸಿದರು.

2007: 1993ರ ಮುಂಬೈ ಸರಣಿ ಸ್ಫೋಟದ ವಿಚಾರಣೆ ನಡೆಸಿದ ವಿಶೇಷ ಟಾಡಾ ನ್ಯಾಯಾಲಯವು ಮುಂಬೈ ಮಹಾನಗರದ ವಿವಿಧ ಪ್ರದೇಶಗಳಲ್ಲಿ ಸ್ಫೋಟಕಗಳನ್ನು ಇರಿಸಿದ್ದ ಮೂವರು ವ್ಯಕ್ತಿಗಳಿಗೆ ಮರಣ ದಂಡನೆ ವಿಧಿಸಿತು. 1993ರ ಮಾರ್ಚ್ 12ರಂದು ಸ್ಫೋಟಕಗಳು ತುಂಬಿದ್ದ ವಾಹನಗಳನ್ನು ಅಲ್ಲಲ್ಲಿ ನಿಲ್ಲಿಸಿದ್ದಕ್ಕಾಗಿ ಅಬ್ದುಲ್ ಗನಿ ಇಸ್ಮಾಯಿಲ್ ಟರ್ಕ್, ಪರ್ವೇಜ್ ಶೇಕ್ ಹಾಗೂ ಮೊಹಮ್ಮದ್ ಮುಷ್ತಾಕ್ ತರಾನಿಗೆ ಟಾಡಾ ನ್ಯಾಯಾಧೀಶ ಪಿ.ಡಿ. ಕೋಡೆ ಮರಣ ದಂಡನೆ ವಿಧಿಸಿದರು.
ಶಿಕ್ಷಿತರಲ್ಲಿ ಒಬ್ಬನಾದ ಅಬ್ದುಲ್ ಗನಿ ಟರ್ಕ್ ಪ್ರಕರಣದ ಮುಖ್ಯ ಆರೋಪಿ ಟೈಗರ್ ಮೆಮನ್ನ ಉದ್ಯೋಗಿಯಾಗಿದ್ದ. ವರ್ಲಿಯ ಸೆಂಚುರಿ ಬಜಾರಿನಲ್ಲಿ ಆತ ನಿಲ್ಲಿಸಿದ್ದ ಆರ್ಡಿಎಕ್ಸ್ ತುಂಬಿದ ಜೀಪ್ ಸ್ಫೋಟಗೊಂಡಾಗ 113 ಜನ ಮೃತರಾಗಿ, 227 ಜನರಿಗೆ ಗಾಯಗೊಂಡಿದ್ದರು. ಸರಣಿ ಸ್ಫೋಟಕ್ಕಾಗಿ ಸಂಚು ನಡೆಸಲು ದುಬೈ ಹಾಗೂ ಮುಂಬೈಯಲ್ಲಿ ನಡೆದ ಸಭೆಗಳಲ್ಲೂ ಟರ್ಕ್ ಪಾಲ್ಗೊಂಡಿದ್ದ. ಶಸ್ತ್ರಾಸ್ತ್ರಗಳ ಬಳಕೆಗಾಗಿ ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದ. ಪರ್ವೇಜ್ ಶೇಕ್, ಕಾಥಾ ಬಜಾರಿನಲ್ಲಿ ಆರ್ ಡಿ ಎಕ್ಸ್ ತುಂಬಿದ್ದ ಸ್ಕೂಟರ್ ನಿಲ್ಲಿಸಿದ್ದ. ಇದು ನಾಲ್ಕು ಜನರನ್ನು ಬಲಿ ತೆಗೆದುಕೊಂಡಿತ್ತು. ದಕ್ಷಿಣ ಮುಂಬೈನ ಶೇಖ್ ಮೆಮನ್ ಸ್ಟ್ರೀಟಿನಲ್ಲಿ ಸ್ಫೋಟಕ ತುಂಬಿದ ವಾಹನ ಇರಿಸಿದ್ದಕ್ಕೆ ಹಾಗೂ ಸೆಂಟಾರ್ ಹೋಟೆಲಿನಲ್ಲಿ ಸೂಟ್ಕೇಸ್ ಬಾಂಬ್ ಇರಿಸಿದ್ದಕ್ಕಾಗಿ ಮೊಹಮ್ಮದ್ ಮುಷ್ತಾಕ್ ತರಾನಿಗೆ ಮರಣ ದಂಡನೆ ವಿಧಿಸಲಾಯಿತು. ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದ 100 ಜನರಲ್ಲಿ ನ್ಯಾಯಾಲಯ ಈವರೆಗೆ 81 ಜನರಿಗೆ ಶಿಕ್ಷೆ ವಿಧಿಸಿತು. ಇವರಲ್ಲಿ 14 ಜನರಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ.

2007: ಬ್ರೆಜಿಲ್ನ ಅತ್ಯಂತ ದಟ್ಟಣೆಯ ಸಾವೊಪಾಲೊದ ಕೊಂಗೊನ್ಹಾಸ್ ನಿಲ್ದಾಣದ ರನ್ವೇ ಬಳಿ ವಿಮಾನವೊಂದಕ್ಕೆ ಬೆಂಕಿ ಹೊತ್ತಿಕೊಂಡು ಸುಮಾರು 200 ಜನ ಮೃತರಾದರು. ಅಸು ನೀಗಿದವರಲ್ಲಿ ಆರು ಜನ ಚಾಲಕ ಸಿಬ್ಬಂದಿ ಮತ್ತು 170 ಪ್ರಯಾಣಿಕರು. ಇನ್ನುಳಿದವರು ರನ್ವೇ ಅಕ್ಕಪಕ್ಕದ ಕಟ್ಟಡಗಳಲ್ಲಿ ಕೆಲಸ ಮಾಡುತ್ತಿದ್ದವರು. ಬ್ರೆಜಿಲ್ ನಲ್ಲಿ ಒಂದು ವರ್ಷದಲ್ಲಿ ಇದು ಎರಡನೇ ಅತಿ ದೊಡ್ಡ ವಿಮಾನ ದುರ್ಘಟನೆ. 2006ರ ಸೆಪ್ಟೆಂಬರಿನಲ್ಲಿ ಅಮೆಜಾನ್ ಕಾಡಿನಲ್ಲಿ ಸಣ್ಣ ವಿಮಾನವೊಂದಕ್ಕೆ ಪ್ರಯಾಣಿಕ ವಿಮಾನ ಡಿಕ್ಕಿ ಹೊಡೆದು 154 ಜನ ಮೃತರಾಗಿದ್ದರು.

2007: ಮುಂಬೈ ನಗರದ ಬೊರಿವಲಿ ಪ್ರದೇಶದಲ್ಲಿನ ಏಳು ಮಹಡಿಗಳ ಕಟ್ಟಡವೊಂದು ಕುಸಿದು ಕನಿಷ್ಠ ಏಳು ಜನ ಮೃತರಾಗಿ ಅದರ ಅವಶೇಷದಡಿ ಕನಿಷ್ಠ ನೂರು ಜನ ಸಿಲುಕಿದರು. ವಾಣಿಜ್ಯ ಸಮುಚ್ಛಯವಿರುವ ಈ `ಲಕ್ಷ್ಮಿ ಛಾಯಾ' ಕಟ್ಟಡದಲ್ಲಿ 35 ಮನೆಗಳಿದ್ದವು.

2007: ಬೆಂಗಳೂರಿನ ಬಸವನಗುಡಿಯ ವಾಸವಿ ವಿದ್ಯಾನಿಕೇತನ ಶಾಲೆಯ ಎರಡನೇ ಮಹಡಿಯಿಂದ ಬಿದ್ದು ತೀವ್ರವಾಗಿ ಗಾಯಗೊಂಡಿದ್ದ ಯುಕೆಜಿ ವಿದ್ಯಾರ್ಥಿ ಎ. ಸೋನಿಯಾ ಸಿಂಗ್ (5) ಈದಿನ ರಾತ್ರಿ ಆಸ್ಪತ್ರೆಯಲ್ಲಿ ಮೃತಳಾದಳು. ಶಾಲೆಯ ಪ್ರೌಢಶಾಲಾ ವಿದ್ಯಾರ್ಥಿನಿಯೊಬ್ಬಳು ಎರಡನೇ ಮಹಡಿಯಲ್ಲಿ ಸೋನಿಯಾಳನ್ನು ಆವರಣ ಗೋಡೆಯ ಮೇಲೆ ಕುಳ್ಳಿರಿಸಿ ಮುದ್ದು ಮಾಡುತ್ತಿದ್ದಾಗ ಆಯ ತಪ್ಪಿ ಕೆಳಗೆ ಬಿದ್ದ ಕಾರಣ ಈ ದುರಂತ ಸಂಭವಿಸಿತ್ತು.

2007: ಎನ್ ಡಿಎ ಕಾಲದಲ್ಲಿ ಖಾಸಗಿ ಸಂಸ್ಥೆಯೊಂದಕ್ಕೆ ನೀಡಿದ್ದ ರೂ.14,500 ಕೋಟಿ ಸಾಲಕ್ಕೆ ಸಂಬಂಧಿಸಿದಂತೆ ಹುಡ್ಕೊ ಅಧಿಕಾರಿಗಳ ವಿರುದ್ಧ ಕೇಂದ್ರ ಜಾಗೃತ ದಳ (ಸಿವಿಸಿ) ನೀಡಿದ ವರದಿ ಆಧಾರದಲ್ಲಿ ಕ್ರಮಕೈಗೊಳ್ಳುವಂತೆ ಸುಪ್ರೀಂ ಕೋರ್ಟ್ ಆದೇಶ ನೀಡಿತು. ತಮ್ಮ ಅಧಿಕಾರ ಮತ್ತು ಇಲಾಖೆಯ ನಿಯಮಾವಳಿಗಳನ್ನು ಮೀರಿ ವರ್ತಿಸಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಶಿಸ್ತಿನ ಕ್ರಮ ಕೈಗೊಳ್ಳಬೇಕೆಂದು ನ್ಯಾಯಾಲಯಕ್ಕೆ ಸಲ್ಲಿಸಲಾದ ಸಿವಿಸಿ ವರದಿ ಹೇಳಿತ್ತು. ಆ ಕಾಲದಲ್ಲಿ ಕೇಂದ್ರ ನಗರಾಭಿವೃದ್ಧಿ ಸಚಿವರಾಗಿದ್ದ ಅನಂತಕುಮಾರ್ ವಿಚಾರದಲ್ಲಿ ನ್ಯಾಯಾಲಯ ಸೂಕ್ತ ನಿರ್ದೇಶನ ನೀಡಬಹುದು ಎಂದೂ ಸಿವಿಸಿ ನ್ಯಾಯಾಲಯಕ್ಕೆ ತಿಳಿಸಿತ್ತು. ಹುಡ್ಕೊ ಸುಮಾರು ರೂ.14,500 ಕೋಟಿ ಸಾಲ ನೀಡಿರುವ ಪ್ರಕರಣದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ತನಿಖೆಗೆ ಆದೇಶ ನೀಡಬೇಕೆಂದು ಕೋರಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ಕೇಂದ್ರ ಸುಪ್ರೀಂ ಕೋರ್ಟಿಗೆ ಅರ್ಜಿ ಸಲ್ಲಿಸಿತ್ತು. ಅದರ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ಈ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಿವಿಸಿಗೆ ಸೂಚನೆ ನೀಡಿತ್ತು.

2007: ಸಾಂಸ್ಕೃತಿಕ ವೈವಿಧ್ಯದಲ್ಲಿ ವಿಶಿಷ್ಟ ಸೇವೆ ಸಲ್ಲಿಸಿದ ಭಾರತೀಯ ಬಾಲಿವುಡ್ ತಾರೆ ಶಿಲ್ಪಾಶೆಟ್ಟಿ ಅವರಿಗೆ ಲಂಡನ್ನಿನ ಪ್ರತಿಷ್ಠಿತ ಲೀಡ್ಸ್ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ನೀಡಿ ಗೌರವಿಸಿತು. ಭಾರತೀಯ ಚಿತ್ರರಂಗದ ಅಭಿವೃದ್ಧಿಗೆ ಅಹರ್ನಿಶಿ ದುಡಿಯುತ್ತಿರುವ ವಿಶೇಷ ವ್ಯಕ್ತಿಗಳಿಗೆ ನೀಡುವ ಈ ಪದವಿಯನ್ನು ಈ ಬಾರಿ ಮಂಗಳೂರು ಬೆಡಗಿ 32 ವರ್ಷದ ನಟಿ ಶಿಲ್ಪಾಶೆಟ್ಟಿ ಅವರಿಗೆ ನೀಡಲಾಗಿದೆ ಎಂದು ವಿಶ್ವವಿದ್ಯಾಲಯದ ವಕ್ತಾರರು ಪ್ರಕಟಿಸಿದರು. ಬಾಲಿವುಡ್ ನಟ ಅಮಿತಾಭ್ ಬಚ್ಚನ್, ನಟಿ ಶಬನಾ ಅಜ್ಮಿ, ನಿರ್ಮಾಪಕ ಯಶ್ಚೋಪ್ರ ಅವರಿಗೆ ಇದೇ ವಿವಿ ಈ ಹಿಂದೆ ಗೌರವ ಡಾಕ್ಟರೇಟ್ ನೀಡಿತ್ತು.

2007: ಅಮೆರಿಕದಲ್ಲಿ ಯಶಸ್ವಿ ಪ್ರವಾಸದ ನಂತರ ಈಗ ಬ್ರಿಟನ್ ಗೆ ಬಂದ ಭಾರತದ ಹೆಸರಾಂತ ಯೋಗ ಗುರು ಸ್ವಾಮಿ ರಾಮದೇವ್ ಅವರು ಲಂಡನ್ನಿನ ಕಾಮನ್ಸ್ ಸಭಾಂಗಣದಲ್ಲಿ ಬ್ರಿಟನ್ನಿನ ಪಾರ್ಲಿಮೆಂಟ್ ಸದಸ್ಯರು ಮತ್ತು ಗಣ್ಯರಿಗಾಗಿ ವಿಶೇಷ ಯೋಗ ಪ್ರದರ್ಶನ ನೀಡಿದರು. 30 ನಿಮಿಷಗಳ ಅವಧಿಯ ಕಾರ್ಯಕ್ರಮದಲ್ಲಿ ಅವರು ಯೋಗದ ವೈಜ್ಞಾನಿಕ ಮಹತ್ವ ಮತ್ತು ಉಪಯುಕ್ತತೆ, ಸಸ್ಯಹಾರ, ವೇದ ಜ್ಞಾನಗಳ ಬಗ್ಗೆ ಉಪನ್ಯಾಸ ನೀಡಿದರು.

2006: ಯಕ್ಷಗಾನದ ಮಹಾನ್ ಕಲಾವಿದ ಶೇಣಿ ಗೋಪಾಲಕೃಷ್ಣ ಭಟ್ (88) ಅವರು ಕಾಸರಗೋಡಿನಲ್ಲಿ ನಿಧನರಾದರು. ಹರಿಕಥೆಯಲ್ಲೂ ಅಗಾಧ ಪಾಂಡಿತ್ಯ ಪ್ರತಿಭೆ ಪ್ರದರ್ಶಿಸಿದ್ದ ಅವರು ಯಕ್ಷಗಾನದಲ್ಲಿ `ಮಾತಿನ ಮಹಾಕವಿ' ಎನಿಸಿದ್ದರು. 1918ರ ಏಪ್ರಿಲ್ 7ರಂದು ಕಾಸರಗೋಡು ಜಿಲ್ಲೆಯ ಬೇಳ ಉಬ್ಬಾನದಲ್ಲಿ ನಾರಾಯಣ ಭಟ್- ಲಕ್ಷ್ಮೀ ಅಮ್ಮ ದಂಪತಿಯ ಪುತ್ರನಾಗಿ ಜನಿಸಿದ್ದ ಅವರು ಯಕ್ಷಗಾನ ಬಯಲಾಟ, ತಾಳಮದ್ದಲೆ ಅರ್ಥಧಾರಿ, ಹರಿದಾಸರಾಗಿ ಪ್ರಸಿದ್ಧಿ ಪಡೆದ್ದಿದರು. ಶೇಣಿಯವರ ವಾಲಿ, ರಾವಣ, ಮಾಗಧ, ಬಪ್ಪಬ್ಯಾರಿ, ಮಾಧವ ಭಟ್ಟ, ಚಂದಗೋಪ, ತುಘಲಕ್ ಮುಂತಾದ ಪಾತ್ರಗಳು ಮನೆಮಾತಾಗಿದ್ದವು. 1990ರಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, 1993ರಲ್ಲಿ ಕೇರಳ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ, 1994ರಲ್ಲಿ ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಪ್ರಶಸ್ತಿ, 1993ರಲ್ಲಿ ಶ್ರೀ ಶೃಂಗೇರಿ ಜಗದ್ಗುರು ಪೀಠದಿಂದ ಯಕ್ಷಗಾನ ಕಲಾ ತಿಲಕ ಬಿರುದು ಸಹಿತ ಅನೇಕ ಪ್ರಶಸ್ತಿ - ಪುರಸ್ಕಾರಗಳು ಅವರಿಗೆ ಸಂದಿವೆ. ಮಂಗಳೂರು ವಿಶ್ವವಿದ್ಯಾಲಯವು ಯಕ್ಷಗಾನ ಕ್ಷೇತ್ರಕ್ಕೆ ಸಲ್ಲಿಸಿದ ಕಾಣಿಕೆಗಾಗಿ ಶೇಣಿ ಅವರಿಗೆ 2005ರ ಜನವರಿಯಲ್ಲಿ `ಗೌರವ ಡಾಕ್ಟರೇಟ್' ಪ್ರದಾನ ಮಾಡಿತ್ತು.

2006: ಮಾಜಿ ಉಪಮುಖ್ಯಮಂತ್ರಿ ಸಿದ್ದರಾಮಯ್ಯ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದರು. ವಿಧಾನಸಭಾಧ್ಯಕ್ಷ ಕೃಷ್ಣ ಅದನ್ನು ತತ್ಕ್ಷಣ ಅಂಗೀಕರಿಸಿದರು.

2006: ಭಾರತೀಯ ಫುಟ್ಬಾಲ್ ತಂಡದ ಮಾಜಿ ನಾಯಕ ವಿ.ಪಿ. ಸತ್ಯನ್ ಚೆನ್ನೆ ಹೊರವಲಯದಲ್ಲಿ ಚಲಿಸುತ್ತಿದ್ದ ರೈಲಿನಿಂದ ಹೊರಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡರು. 1993ರಲ್ಲಿ ಅವರಿಗೆ ಭಾರತದ ಅತ್ಯುತ್ತಮ ಫುಟ್ಬಾಲ್ ಪಟು ಗೌರವ ಲಭಿಸಿತ್ತು. 1980ರಿಂದ 15 ವರ್ಷಗಳ ಕಾಲ ಭಾರತೀಯ ಫುಟ್ಬಾಲ್ ತಂಡವನ್ನು ಅವರು ಪ್ರತಿನಿಧಿಸಿದ್ದರು.

2006: ರಾಜೀವ್ಗಾಂಧಿ ಕೊಲೆ ಪ್ರಕರಣದ ಅಪರಾಧಿಗಳಾದ ಮುರುಗನ್ ಮತ್ತು ನಳಿನಿ ತಮ್ಮ ಪುತ್ರಿ ಚರಿತ್ರಾಗೆ ಉನ್ನತ ಶಿಕ್ಷಣದ ಸಲುವಾಗಿ ಭಾರತೀಯ ವೀಸಾ ನೀಡುವಂತೆ ಆಗ್ರಹಿಸಿ ನಡೆಸುತ್ತಿದ್ದ 24 ದಿನಗಳ ನಿರಶನವನ್ನು ಈ ದಿನ ಅಂತ್ಯಗೊಳಿಸಿದರು.

1980: ಭಾರತದ ಮೊದಲ ಉಪಗ್ರಹ ವಾಹಕ ನೌಕೆ ಎಸ್ ಎಲ್ ವಿ -3 ರೋಹಿಣಿ ಉಪಗ್ರಹವನ್ನು ಗಗನಕ್ಕೆ ಹೊತ್ತೊಯ್ದಿತು.

1971: ರಾಧಾಕೃಷ್ಣ ಬೆಳ್ಳೂರು ಜನನ.

1946: ಶಿಕ್ಷಕಿ, ಮಾರ್ಗದರ್ಶಿ, ಸಾಹಿತಿ ಪ್ರಮೀಳಮ್ಮ ಅವರು ಸಿದ್ದರಾಮಯ್ಯ- ಗುರುಸಿದ್ದಮ್ಮ ದಂಪತಿಯ ಪುತ್ರಿಯಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲದಲ್ಲಿ ಜನಿಸಿದರು.

1936: ಸ್ಪೇನ್ನಲ್ಲಿ ಅಂತರ್ಯುದ್ಧ ಆರಂಭ.

1918: ನೆಲ್ಸನ್ ಮಂಡೇಲಾ ಜನನ.

1829 ಅನ್ವೇಷಕ ಥಾಮಸ್ ಕುಕ್ ನಿಧನ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜುಲೈ 17

ಇಂದಿನ ಇತಿಹಾಸ

ಜುಲೈ 17

ಹಿರಿಯ ನಟ- ನಿರ್ಮಾಪಕ ಮೈಸೂರು ಪುಟ್ಟಲಿಂಗಪ್ಪ (ಎಂ.ಪಿ.) ಶಂಕರ್ (73) ಈದಿನ ಮಧ್ನಾಹ್ಯ 2.30 ಕ್ಕೆ ಮೈಸೂರಿನ ಸ್ವಗೃಹದಲ್ಲಿ ನಿಧನರಾದರು. `ಭರಣಿ' ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿ, ಅದರ ಮೂಲಕ 16 ಚಿತ್ರಗಳನ್ನು ನಿರ್ಮಿಸಿದ ಶಂಕರ್ `ಕಳ್ಳರ ಕಳ್ಳ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಒಟ್ಟಾರೆ 108 ಚಿತ್ರಗಳಲ್ಲಿ ನಟಿಸಿದ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಖಳನಾಯಕರಲ್ಲಿ ಒಬ್ಬರು.

2008: ಹಿರಿಯ ನಟ- ನಿರ್ಮಾಪಕ ಮೈಸೂರು ಪುಟ್ಟಲಿಂಗಪ್ಪ (ಎಂ.ಪಿ.) ಶಂಕರ್ (73) ಈದಿನ ಮಧ್ನಾಹ್ಯ 2.30 ಕ್ಕೆ ಮೈಸೂರಿನ ಸ್ವಗೃಹದಲ್ಲಿ ನಿಧನರಾದರು. `ಭರಣಿ' ಚಿತ್ರ ನಿರ್ಮಾಣ ಸಂಸ್ಥೆ ಸ್ಥಾಪಿಸಿ, ಅದರ ಮೂಲಕ 16 ಚಿತ್ರಗಳನ್ನು ನಿರ್ಮಿಸಿದ ಶಂಕರ್ `ಕಳ್ಳರ ಕಳ್ಳ' ಎಂಬ ಚಿತ್ರವನ್ನು ನಿರ್ದೇಶಿಸಿದ್ದರು. ಒಟ್ಟಾರೆ 108 ಚಿತ್ರಗಳಲ್ಲಿ ನಟಿಸಿದ ಅವರು ಕನ್ನಡ ಚಿತ್ರರಂಗ ಕಂಡ ಶ್ರೇಷ್ಠ ಖಳನಾಯಕರಲ್ಲಿ ಒಬ್ಬರು.

2007: ಆಗುಂಬೆ ಸಮೀಪದ ತಲ್ಲೂರು ಬಳಿಯ ಹುಲಗಾರಿನ ಗೌರಿಗುತ್ತಲ ದುರ್ಗಮ ಅರಣ್ಯದೊಳಗೆ ನಕ್ಸಲೀಯರು ಇರುವ ಸುಳಿವು ಅನುಸರಿಸಿ ನಿಖರ ಮಾಹಿತಿ ಸಂಗ್ರಹಿಸಲು ಮಫ್ತಿಯಲ್ಲಿ ಹೋಗಿದ್ದ ಮಾಳೂರು ಪೊಲೀಸ್ ಠಾಣೆಯ ಸಹಾಯಕ ಸಬ್ ಇನ್ ಸ್ಪೆಕ್ಟರ್ ವೆಂಕಟೇಶ್ ಅವರನ್ನು ನಕ್ಸಲೀಯರು ಗುಂಡು ಹಾರಿಸಿ ಕೊಲೆಗೈದರು.

2007: ವಿಧಾನಸೌಧದ ಎರಡನೇ ಮಹಡಿಯಲ್ಲಿನ ಕೊಠಡಿ ಸಂಖ್ಯೆ 203ರಲ್ಲಿ ಈದಿನ ಶಾರ್ಟ್ ಸರ್ಕೀಟ್ನಿಂದಾಗಿ ಬೆಂಕಿ ಹೊತ್ತಿಕೊಂಡು ಕಂಪ್ಯೂಟರ್ ಹಾಗೂ ಸರ್ವರ್ಗಳು ಸುಟ್ಟು ಭಸ್ಮವಾದವು.

2007: ಪರಮಾಣು ಇಂಧನ ಪೂರೈಕೆ ಗುಂಪಿನಲ್ಲಿ (ಎನ್ ಎಸ್ ಜಿ) ಪ್ರಮುಖ ಸದಸ್ಯರಾದ ಬ್ರೆಜಿಲ್ ಮತ್ತು ದಕ್ಷಿಣ ಆಫ್ರಿಕಾ ದೇಶಗಳು ಭವಿಷ್ಯದ ಯೋಜನೆಗಳನ್ನು ಒಪ್ಪಿಕೊಳ್ಳುವ ಮೂಲಕ ಭಾರತದೊಂದಿಗೆ ನಾಗರಿಕ ಪರಮಾಣು ಕ್ಷೇತ್ರದಲ್ಲಿ ಸಹಕರಿಸಲು ನಿರ್ಧರಿಸಿದವು. ಸುರಕ್ಷತಾ ಕ್ರಮಗಳ ಅಡಿಯಲ್ಲಿ ಸಾಧನ - ಸಲಕರಣೆ ಹಾಗೂ ಸೂಕ್ತ ತಂತ್ರಜ್ಞಾನ ಪೂರೈಕೆ ಮಾಡಿ, ಶಾಂತಿಯುತ ಕಾರಣಕ್ಕಾಗಿ ಬಳಸಲು ಅಣುಶಕ್ತಿ ಅಭಿವೃದ್ಧಿಪಡಿಸಲು ಈ ಮೂರು ದೇಶಗಳು ಸಮ್ಮತಿಸಿದವು.

2007: ಜಪಾನಿನ ವಾಯವ್ಯ ಕರಾವಳಿ ಪ್ರದೇಶದಲ್ಲಿ ಸಂಭವಿಸಿದ ಭೂಕಂಪದಿಂದಾಗಿ ಕಶಿವಜಕಿಯಲ್ಲಿಲಿರುವ ಪರಮಾಣು ವಿದ್ಯುತ್ ಸ್ಥಾವರದಿಂದ ಸುಮಾರು 1200 ಲೀಟರಿನಷ್ಟು ಅಪಾಯಕಾರಿ ರೇಡಿಯೋ ವಿಕಿರಣಯುಕ್ತ ನೀರು ಸಮುದ್ರ ಸೇರಿದೆ ಎಂದು ಟೋಕಿಯೋ ಎಲೆಕ್ಟ್ರಿಕ್ ಕಂಪೆನಿ ಬಹಿರಂಗ ಪಡಿಸಿತು. ಈ ಭೂಕಂಪದಿಂದ ಸತ್ತವರ ಸಂಖ್ಯೆ 9ಕ್ಕೆ ಏರಿತು.

2006: ಇಂಡೋನೇಷ್ಯಾದ ಜಾವಾ ದ್ವೀಪ ಮತ್ತು ಆಸ್ಟ್ರೇಲಿಯಾದ ಕ್ರಿಸ್ ಮಸ್ ದ್ವೀಪದಲ್ಲಿ ಶಕ್ತಿಶಾಲಿ ಭೂಕಂಪ ಸಂಭವಿಸಿ, ಸಮುದ್ರದಲ್ಲಿ ಎದ್ದ ಸುನಾಮಿ ಅಲೆಗಳಿಗೆ ಸಿಲುಕಿ 327 ಮಂದಿ ಮೃತರಾಗಿ ಇತರ 40 ಜನ ಕಣ್ಮರೆಯಾದರು.

2006: ಕೃಷಿ ಸಬ್ಸಿಡಿ ಕಡಿತಕ್ಕೆ ಸಂಬಂಧಿಸಿದಂತೆ ತಮ್ಮ ಬಿಗಿ ನಿಲುವನ್ನು ಸಡಿಲಿಸಲು ಸೇಂಟ್ ಪೀಟರ್ಸ್ ಬರ್ಗಿನಲ್ಲಿ ನಡೆದ ಶೃಂಗಸಭೆಯಲ್ಲಿ ಜಿ-8 ರಾಷ್ಟ್ರಗಳು ಸಮ್ಮತಿಸಿದವು. ಇದರಿಂದಾಗಿ ನನೆಗುದಿಗೆ ಬಿದ್ದಿದ್ದ ಡಬ್ಲ್ಯೂಟಿಓ ಮಾತುಕತೆಗೆ ಮರುಜೀವ ದೊರೆಯಿತು.

2006: ಅಮೆರಿಕದ ಬಾಹ್ಯಾಕಾಶ ನೌಕೆ `ಡಿಸ್ಕವರಿ' ಹದಿಮೂರು ದಿನಗಳ ಯಾತ್ರೆಯನ್ನು ಯಶಸ್ವಿಗೊಳಿಸಿ ಫ್ಲೋರಿಡಾದಲ್ಲಿ ಸುರಕ್ಷಿತವಾಗಿ ಧರೆಗಿಳಿಯಿತು.

2006: ಛತ್ತೀಸ್ ಗಢದ ದಂಟೆವಾಡ ಜಿಲ್ಲೆಯಲ್ಲಿ ಎರ್ರಾಬೋರ್ ಸರ್ಕಾರಿ ನಿರಾಶ್ರಿತರ ಶಿಬಿರ ಒಂದರ ಮೇಲೆ ದಾಳಿ ನಡೆಸಿದ ಮಾವೋವಾದಿ ನಕ್ಸಲೀಯರು ಕನಿಷ್ಠ 33 ಮಂದಿ ಗುಡ್ಡಗಾಡು ಜನರನ್ನು ಕೊಂದು, 80ಕ್ಕೂ ಹೆಚ್ಚು ಜನರನ್ನು ಗಾಯಗೊಳಿಸಿದರು. 250ಕ್ಕೂ ಹೆಚ್ಚು ಗ್ರಾಮಸ್ಥರು ಕಣ್ಮರೆಯಾದರು.

1925: ಪ್ರಹ್ಲಾದಕುಮಾರ ಭಾಗೋಜಿ ಜನನ.

1910: ಸಾಹಿತಿ ಕೌಸಲ್ಯಾದೇವಿ ಜನನ.

1837: ಕನ್ನಡಕ್ಕಾಗಿ ದುಡಿದ ವಿದೇಶೀಯರಲ್ಲಿ ಒಬ್ಬ ಪ್ರಮುಖ ವ್ಯಕ್ತಿಯಾಗಿದ್ದ ಬೆಂಜಮಿನ್ ಲೂಯಿ ರೈಸ್ (17-7-1837ರಿಂದ 10-7-1927) ಈ ದಿನ ಬೆಂಗಳೂರಿನಲ್ಲಿ ಬೆಂಜಮಿನ್ ಹೋಲ್ಡ್ ರೈಸ್ ಅವರ ಮಗನಾಗಿ ಜನಿಸಿದರು. ವಿದ್ಯಾ ಇಲಾಖೆಯ ಕಾರ್ಯದರ್ಶಿಯಾಗಿ ಕೊಡಗಿನ ಶಾಸನಗಳನ್ನು ಸಂಗ್ರಹಿಸಿ 1886ರಲ್ಲಿ `ಎಪಿಗ್ರಾಫಿಯ ಕರ್ನಾಟಕ' ಪ್ರಕಟಿಸಿ ಶಿಲಾ ಶಾಸನಗಳ ಪ್ರಕಟಣೆಗೆ ಇವರು ನಾಂದಿ ಹಾಡಿದ್ದರು. ಆ ಬಳಿಕ ಕನ್ನಡ ನಾಡಿನಲ್ಲೆಲ್ಲ ಸಂಚರಿಸಿ ಶಾಸನಗಳನ್ನು ಸಂಗ್ರಹಿಸಿ 12 ಸಂಪುಟಗಳನ್ನು ಪ್ರಕಟಿಸಿದರು. ಅವರು ಪ್ರಕಟಿಸಿದ ಒಟ್ಟು ಶಾಸನಗಳ ಸಂಖ್ಯೆ 8869. ಶಾಸನಗಳಲ್ಲದೆ ಪ್ರಾಚೀನ ಕನ್ನಡ ಕೃತಿಗಳನ್ನು ಸಂಪಾದಿಸಿ ಪ್ರಕಟಿಸಿದ ಅವರು ತಾಳೆಗರಿ ಗ್ರಂಥಗಳನ್ನು ಸಂಗ್ರಹಿಸಿ ಅವುಗಳನ್ನು ಕಾಪಾಡಿ ಇಡಲು `ಓರಿಯಂಟಲ್ ಲೈಬ್ರರಿ' ಎಂದು ಗ್ರಂಥಭಂಡಾರವನ್ನೂ ಸ್ಥಾಪಿಸಿದ್ದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Monday, July 20, 2009

ಇಂದಿನ ಇತಿಹಾಸ History Today ಜುಲೈ 16

ಇಂದಿನ ಇತಿಹಾಸ

ಜುಲೈ 16

ನಕಲಿ ಪಾಸ್ ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ದೊರೆ ಅಬು ಸಲೇಂನ ಪ್ರೇಯಸಿ ಹಾಗೂ ಮಾಜಿ ಬಾಲಿವುಡ್ ತಾರೆ ಮೋನಿಕಾ ಬೇಡಿಯನ್ನು ಭೋಪಾಲ್ ನ್ಯಾಯಾಲಯ ಖುಲಾಸೆ ಮಾಡಿತು. ಈ ಪ್ರಕರಣದಲ್ಲಿ ಪ್ರಾಸೆಕ್ಯೂಷನ್, ಮೋನಿಕಾ ಬೇಡಿ ವಿರುದ್ಧ ದಾಖಲೆಗಳ ಬೃಹತ್ ಸಂಗ್ರಹ ಹಾಗೂ 35 ಸಾಕ್ಷಿಗಳನ್ನು ಹಾಜರುಪಡಿಸಿದರೂ ಪ್ರಧಾನ ನ್ಯಾಯಾಧೀಶರಿಗೆ ಈ ಸಾಕ್ಷಿಗಳಲ್ಲಿ ಗಟ್ಟಿತನ ಕಂಡುಬರಲಿಲ್ಲ.

2008: ಒರಿಸ್ಸಾದ ಮಲ್ಕನ್ ಗಿರಿ ಜಿಲ್ಲೆಯಲ್ಲಿ ವಿಶೇಷ ಪೊಲೀಸ್ ಅಧಿಕಾರಿಗಳನ್ನು ಕರೆದೊಯ್ಯುತ್ತಿದ್ದ ವ್ಯಾನಿನ ಮೇಲೆ ಮಾವೋ ಉಗ್ರರು ನಡೆಸಿದ ಗುಂಡಿನ ದಾಳಿ ಹಾಗೂ ನೆಲಬಾಂಬ್ ಸ್ಛೋಟದಿಂದ 21 ಮಂದಿ ಸಾವನ್ನಪ್ಪಿರಬಹುದೆಂದು ಶಂಕಿಸಲಾಯಿತು. ಮೂರು ವಾರಗಳಿಂದ ಮಾವೋವಾದಿಗಳು ಪೊಲೀಸ್ ಪಡೆಯ ಮೇಲೆ ನಡೆಸಿದ ಎರಡನೇ ಹಿಂಸಾಕೃತ್ಯ ಇದು.

2007: ಲಂಡನ್ನಿನ ಗ್ಲಾಸ್ಗೋ ವಿಮಾನ ನಿಲ್ದಾಣದ ಮೇಲೆ ವಿಫಲ ಆತ್ಮಹತ್ಯಾ ದಾಳಿ ನಡೆಸಿದ್ದ ತಂಡದ ಜೊತೆ ಸಂಬಂಧ ಹೊಂದಿರುವ ಶಂಕೆಯ ಆಧಾರದಲ್ಲಿ ಆಸ್ಟ್ರೇಲಿಯಾದಲ್ಲಿ ಬಂಧಿಸಲಾಗಿದ್ದ ಬೆಂಗಳೂರು ಮೂಲದ ವೈದ್ಯ ಮೊಹಮ್ಮದ್ ಹನೀಫ್ ಗೆ ಬ್ರಿಸ್ಬೆನ್ ನ್ಯಾಯಾಲಯ ಜಾಮೀನು ನೀಡಿತು. ಆದರೆ, ಜಾಮೀನು ನೀಡಿದ ಬಳಿಕ ಔಪಚಾರಿಕ ಕಾನೂನು ಕ್ರಮ ಪೂರೈಸಿ ಹನೀಫ್ನನ್ನು ಬಿಡುಗಡೆ ಮಾಡುವ ಮುನ್ನವೇ ಆತನ ವೀಸಾ ರದ್ದುಗೊಳಿಸಿ ವಲಸೆ ಕಾಯ್ದೆ ಅಡಿ ಮತ್ತೆ ಬಂಧಿಸಲಾಯಿತು.

2007: ನಕಲಿ ಪಾಸ್ ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಭೂಗತ ದೊರೆ ಅಬು ಸಲೇಂನ ಪ್ರೇಯಸಿ ಹಾಗೂ ಮಾಜಿ ಬಾಲಿವುಡ್ ತಾರೆ ಮೋನಿಕಾ ಬೇಡಿಯನ್ನು ಭೋಪಾಲ್ ನ್ಯಾಯಾಲಯ ಖುಲಾಸೆ ಮಾಡಿತು. ಈ ಪ್ರಕರಣದಲ್ಲಿ ಪ್ರಾಸೆಕ್ಯೂಷನ್, ಮೋನಿಕಾ ಬೇಡಿ ವಿರುದ್ಧ ದಾಖಲೆಗಳ ಬೃಹತ್ ಸಂಗ್ರಹ ಹಾಗೂ 35 ಸಾಕ್ಷಿಗಳನ್ನು ಹಾಜರುಪಡಿಸಿದರೂ ಪ್ರಧಾನ ನ್ಯಾಯಾಧೀಶರಿಗೆ ಈ ಸಾಕ್ಷಿಗಳಲ್ಲಿ ಗಟ್ಟಿತನ ಕಂಡುಬರಲಿಲ್ಲ. ಇದೇ ಪ್ರಕರಣದ ಮತ್ತೊಬ್ಬ ಆರೋಪಿ ಅಬ್ದುಲ್ ಕಬೀರನ್ನು ಕೂಡಾ ನ್ಯಾಯಾಲಯ ಆರೋಪಮುಕ್ತಗೊಳಿಸಿತು. ನಕಲಿ ಪಾಸ್ ಪೋರ್ಟ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮೋನಿಕಾಗೆ ಹೈದರಾಬಾದ್ ನ್ಯಾಯಾಲಯ 5 ವರ್ಷಗಳ ಶಿಕ್ಷೆ ವಿಧಿಸಿತ್ತು. ಫೌಜಿಯಾ ಉಸ್ಮಾನ್ ಎಂಬ ನಕಲಿ ಹೆಸರಿನಲ್ಲಿ ಆಕೆ ಭೋಪಾಲ್ ನಲ್ಲಿ ಪಾಸ್ಪೋರ್ಟ್ ಪಡೆದು, ಸಲೇಂ ಜೊತೆ ಪೋರ್ಚುಗಲ್ಲಿಗೆೆ ತೆರಳಿದ್ದಳು ಎಂದು ಆರೋಪಿಸಲಾಗಿತ್ತು. 2001ರಲ್ಲಿ ಆಕೆಯ ವಿರುದ್ಧ ಪ್ರಕರಣ ದಾಖಲಿಸಲಾಗಿತ್ತು. ಭೋಪಾಲ್ ಕೇಂದ್ರ ಕಾರಾಗೃಹದಲ್ಲಿದ್ದಾಗ ಮೋನಿಕಾ ಮಹಿಳಾ ಕೈದಿಗಳಿಗೆ ಇಂಗ್ಲಿಷ್ ಹಾಗೂ ನೃತ್ಯ ತರಗತಿಗಳನ್ನು ನಡೆಸುತ್ತಿದ್ದಳು.

2007: ಜಪಾನಿನ ವಾಯವ್ಯ ಕರಾವಳಿ ಪ್ರದೇಶದಲ್ಲಿ ಭಾರಿ ಭೂಕಂಪ ಸಂಭವಿಸಿ, ಏಳು ಮಂದಿ ಮೃತರಾಗಿ, ಸಾವಿರಾರು ಮಂದಿ ಗಾಯಗೊಂಡರು. ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 6.8ರಷ್ಟಿತ್ತು. ಭೂಕಂಪದಿಂದಾಗಿ ಕಶಿವಜಕಿ ಎಂಬಲ್ಲಿನ ಪರಮಾಣು ವಿದ್ಯುತ್ ಸ್ಥಾವರಕ್ಕೆ ಹಾನಿಯುಂಟಾಗಿ, ಅಲ್ಲಿ ಬೆಂಕಿ ಕಾಣಿಸಿಕೊಂಡಿತು. ನಸುಕಿನ ವೇಳೆಯಲ್ಲಿ ಸುಮಾರು 20 ಸೆಕೆಂಡುಗಳ ಕಾಲ ಭೂಮಿ ಅದುರಿ, ಮರದಿಂದ ನಿರ್ಮಿಸಲಾದ ಮನೆಗಳು ಧರೆಗುರುಳಿದವು. ಕಡಲಲ್ಲಿ 50 ಮೀಟರ್ ಎತ್ತರದ ಅಲೆಗಳೆದ್ದು ದಂಡೆಗೆ ಅಪ್ಪಳಿಸಿದವು.

2007: ಕೇಂದ್ರದ ಮಾಜಿ ಸಚಿವ ಹಾಗೂ ಸಮಾಜವಾದಿ ಪಕ್ಷದ ಲೋಕಸಭಾ ಸದಸ್ಯ ರಶೀದ್ ಮಸೂದ್ ಅವರನ್ನು ತೃತೀಯ ರಂಗದ ಉಪ ರಾಷ್ಟ್ರಪತಿ ಅಭ್ಯರ್ಥಿಯಾಗಿ ಆಯ್ಕೆ ಮಾಡಲಾಯಿತು. ಮಸೂದ್ ಅವರು ವಾಯವ್ಯ ಉತ್ತರ ಪ್ರದೇಶದ ಸಹರಾನ್ ಪುರದಿಂದ ಐದು ಬಾರಿ ಸಂಸತ್ತು ಪ್ರವೇಶಿಸಿದವರು.

2007: ಇರಾಕಿನ ಕಿರ್ಕುಕ್ ಪ್ರದೇಶದಲ್ಲಿ ಸಂಭವಿಸಿದ ಎರಡು ಕಾರು ಬಾಂಬ್ ಸ್ಫೋಟಗಳಲ್ಲಿ 85 ಮಂದಿ ಮೃತರಾಗಿ ಇತರ 150 ಜನರು ಗಾಯಗೊಂಡರು. 20 ನಿಮಿಷಗಳ ಅಂತರದಲ್ಲಿ ಸಂಭವಿಸಿದ ಎರಡು ಬಾಂಬ್ ಸ್ಫೋಟಗಳ ಹಿಂದೆ ಕುರ್ದಿಷ್ ರಾಜಕೀಯ ಪಕ್ಷದ ಕಚೇರಿ ಧ್ವಂಸಮಾಡುವ ಗುರಿ ಇತ್ತು. ಇರಾಕ್ ಅಧ್ಯಕ್ಷ ಜಲಾಲ್ ತಾಲಾಬಾನಿ ಅವರ ಕುರ್ದಿಸ್ಥಾನ್ ಪೇಟ್ರಿಯಾಟಿಕ್ ಒಕ್ಕೂಟ ಪಕ್ಷದ ಕಚೇರಿ ಬಳಿ ಸ್ಫೋಟಕ ತುಂಬಿದ್ದ ಟ್ರಕ್ಕನ್ನು ಸ್ಫೋಟಿಸಲಾಯಿತು.

2007: ಭಾರಿ ವಂಚನೆ ಹಾಗೂ ಭ್ರಷ್ಟಾಚಾರ ಆರೋಪಕ್ಕೆ ಗುರಿಯಾದ ಬಾಂಗ್ಲಾದೇಶದ ಮಾಜಿ ಪ್ರಧಾನಿ ಹಾಗೂ ಅವಾಮಿ ಲೀಗ್ ಅಧ್ಯಕ್ಷೆ ಶೇಖ್ ಹಸೀನಾ ಅವರನ್ನು ಧಾನ್ ಮೋಂದಿಯಲ್ಲಿನ ಅವರ ನಿವಾಸದಲ್ಲಿ ಬಂಧಿಸಲಾಯಿತು. ಬೆಳಗ್ಗೆ ಸುಮಾರು 300-400 ಪೊಲೀಸರು ಹಾಗೂ ಕ್ಷಿಪ್ರ ಕಾರ್ಯಾಚರಣೆ ತಂಡ ಹಸೀನಾ ಮನೆ `ಸುಧಾ ಸದನ'ವನ್ನು ಮುತ್ತಿಗೆ ಹಾಕಿದರು. ಮೂರು ಗಂಟೆಗಳ ಕಾಲ ತಪಾಸಣೆ ನಡೆಸಿದ ಬಳಿಕ ಹಸೀನಾ ಅವರನ್ನು ಬಂಧಿಸಿ ಢಾಕಾದಲ್ಲಿನ ಕೋರ್ಟಿಗೆ ಹಾಜರುಪಡಿಸಲಾಯಿತು. 1996-2001ರಲ್ಲಿ ಹಸೀನಾ ಅಧಿಕಾರದಲ್ಲಿದ್ದಾಗ ಈಸ್ಟ್ ಕೋಸ್ಟ್ ಟ್ರೇಡಿಂಗ್ ಕಂಪನಿಯಿಂದ 2.96 ಕೋಟಿ ಟಾಕಾ (4,42,000 ಅಮೆರಿಕ ಡಾಲರ್)ಹಣ ಸುಲಿಗೆ ಮಾಡಿದ್ದಲ್ಲದೆ, ತಮ್ಮ ರಾಜಕೀಯ ಎದುರಾಳಿಯೊಬ್ಬರ ಕೊಲೆಯಲ್ಲೂ ಕೈವಾಡ ನಡೆಸಿದ್ದರು ಎಂಬುದು ಅವರ ಮೇಲಿನ ಆರೋಪ.

2006: ಗುಲ್ಬರ್ಗದ ಜಿಲ್ಲಾಧಿಕಾರಿ ಕಚೇರಿ ಎದುರು 489 ದಿನಗಳಿಂದ ನಡೆಯುತ್ತಿದ್ದ ದಿನಗೂಲಿ ನೌಕರರ ಧರಣಿ ಅಂತ್ಯಗೊಂಡಿತು. ಅನೇಕ ವರ್ಷಗಳಿಂದ ಸೇವೆ ಸಲ್ಲಿಸುತ್ತಿದ್ದ ದಿನಗೂಲಿ ನೌಕರರ ಕಾಯಂ ಪ್ರಕ್ರಿಯೆಗೆ ತಿಂಗಳಲ್ಲಿ ಚಾಲನೆ ನೀಡಲಾಗುವುದು ಎಂದು ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಭರವಸೆ ನೀಡಿದ್ದನ್ನು ಅನುಸರಿಸಿ ದಿನಗೂಲಿ ನೌಕರರು ಈ ದಿನ ತಮ್ಮ ಧರಣಿ ಹಿಂತೆಗೆದುಕೊಂಡರು.

2006: ಲಕ್ಷದ್ವೀಪ ಸಮೀಪದ ಸುಹೈಲಿ ಜನರಹಿತ ದ್ವೀಪದ ಸಮೀಪ ಅಪಾಯದ ಸುಳಿಗೆ ಸಿಲುಕಿದ ಸೀಷೆಲ್ಸ್ನ `ಇಸಬೆಲ್ಲ 3' ಮೀನುಗಾರಿಕಾ ನೌಕೆಯಿಂದ ಉಗ್ರರೂಪ ತಾಳಿದ್ದ ಅರಬ್ಬೀ ಸಮುದ್ರಕ್ಕೆ ಜಿಗಿದು 33 ಮಂದಿ ಮೀನುಗಾರರು ಪ್ರಾಣ ಉಳಿಸಿಕೊಂಡರು. ಉಗ್ರರೂಪ ತಾಳಿದ್ದ ಸಮುದ್ರದಲ್ಲಿ ಈಜಿಕೊಂಡೇ ಅವರೆಲ್ಲರೂ ಸುಹೈಲಿ ದ್ವೀಪವನ್ನು ತಲುಪಿದರು.

2004: ತಮಿಳುನಾಡು ಕುಂಭಕೋಣಂನ ಖಾಸತಿ ಶಾಲೆಯೊಂದರಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ 91 ವಿದ್ಯಾರ್ಥಿಗಳು ಮೃತರಾದರು. ಮೂರನೇ ಮಹಡಿಯಲ್ಲಿ ಮಧ್ಯಾಹ್ನದ ಊಟಕ್ಕೆ ಅಡುಗೆ ಮಾಡುತ್ತಿದ್ದಾಗ ಆಕಸ್ಮಿಕವಾಗಿ ಹಾರಿದ ಬೆಂಕಿ ಪಕ್ಕದಲ್ಲಿದ್ದ ಹುಲ್ಲಿನ ಛಾವಣಿಯ ಶಾಲಾ ಕೊಠಡಿಗೆ ಹರಡಿ ಈ ದುರಂತ ಸಂಭವಿಸಿತು.

1992: ಶಂಕರದಯಾಳ್ ಶರ್ಮಾ ಅವರು ಭಾರತದ ರಾಷ್ಟ್ರಪತಿಯಾಗಿ ಆಯ್ಕೆಯಾದರು.

1959: ತಂತ್ರಜ್ಞೆ, ಕತೆಗಾರ್ತಿ, ಅಂಕಣಗಾರ್ತಿ ನೇಮಿಚಂದ್ರ ಅವರು ಪ್ರೊ.ಜಿ. ಗುಂಡಣ್ಣ- ತಿಮ್ಮಕ್ಕ ದಂಪತಿಯ ಪುತ್ರಿಯಾಗಿ ಚಿತ್ರದುರ್ಗದಲ್ಲಿ ಜನಿಸಿದರು.

1942: ಶೀಲಾ ಗಜಾನನ ಆಂಕೋಲ ಜನನ.

622: ಮುಸ್ಲಿಂ ಶಕೆ ಎಂದೇ ಹೆಸರಾಗಿರುವ ಹಿಜರಿ ಶಕೆ ಆರಂಭ. ಪ್ರವಾದಿ ಮಹಮ್ಮದರು ಮೆಕ್ಕಾದಿಂದ ಮದೀನಕ್ಕೆ ಪ್ರಯಾಣ ಬೆಳೆಸಿದ ದಿನ ಇದು. ಮತಾಂತರ ತಪ್ಪಿಸಿಕೊಳ್ಳಲು ಮಹಮ್ಮದರು ಈ ರೀತಿ ಮಾಡಿದರು ಎನ್ನಲಾಗುತ್ತದೆ. ಇನ್ನೊಂದು ಮೂಲದ ಪ್ರಕಾರ ಎರಡನೇ ಖಲೀಫನಾಗಿದ್ದ ಒಂದನೇ ಉಮರ್ ಹಿಜರಿ ಶಕೆಯನ್ನು ಪರಿಚಯಿಸಿದ ಎನ್ನಲಾಗುತ್ತದೆ. ಹಿಜರಿ ಎಂದರೆ ಅರೇಬಿಕ್ ಭಾಷೆಯಲ್ಲಿ ಸಂಬಂಧಗಳನ್ನು ಕಡಿಯುವುದು ಅಥವಾ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದು ಎಂದು ಅರ್ಥ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಜುಲೈ 15

ಇಂದಿನ ಇತಿಹಾಸ

ಜುಲೈ 15

ರಸಿಕ ರಂಗ ಕಾವ್ಯನಾಮದಿಂದ ಖ್ಯಾತರಾಗಿರುವ ಸಾಹಿತಿ, ಕಾದಂಬರಿಕಾರ ರಂಗನಾಥ ಶ್ರೀನಿವಾಸ ಮುಗಳಿ (ರಂ.ಶ್ರೀ. ಮುಗಳಿ) ಶ್ರೀನಿವಾಸರಾಯ- ಕಮಲಮ್ಮ ದಂಪತಿಯ ಪುತ್ರನಾಗಿ ಧಾರವಾಡ ಜಿಲ್ಲೆಯ ಹೊಳೆ ಆಲೂರಿನಲ್ಲಿ ಜನಿಸಿದರು.

2008: ಜಾರ್ಖಂಡಿನ ಚೈಬಾಸಾದಲ್ಲಿ ನಡೆದ ಮೇವು ಹಗರಣಕ್ಕೆ ಸಂಬಂಧಿಸಿದಂತೆ ವಿಶೇಷ ಸಿಬಿಐ ನ್ಯಾಯಾಲಯವೊಂದು ಐಎಎಸ್ ಅಧಿಕಾರಿ ಸಾಜಲ್ ಚಕ್ರವರ್ತಿ ಸಹಿತ 14 ಮಂದಿ ತಪ್ಪಿತಸ್ಥರು ಎಂದು ಘೋಷಿಸಿ ಅವರೆಲ್ಲರಿಗೆ 3ರಿಂದ 6 ವರ್ಷಗಳ ತನಕ ಕಠಿಣ ಜೈಲು ಶಿಕ್ಷೆ ವಿಧಿಸಿತು. ಚೈಬಾಸಾ ಖಜಾನೆಯಿಂದ 38.84 ಕೋಟಿ ರೂಪಾಯಿಯಷ್ಟು ಹಣವನ್ನು ಅಕ್ರಮವಾಗಿ ಹಿಂಪಡೆದ ಆರೋಪ ಈ ವ್ಯಕ್ತಿಗಳ ಮೇಲಿತ್ತು. ಇವರೆಲ್ಲರಿಗೂ 2 ಲಕ್ಷದಿಂದ 50 ಲಕ್ಷ ರೂಪಾಯಿ ತನಕ ದಂಡ ವಿಧಿಸಲಾಯಿತು..

2007: ಭೋಪಾಲ್ ನ ಬರ್ಕತ್ ಉಲ್ಲಾ ವಿಶ್ವವಿದ್ಯಾಲಯದ ಮೆಕ್ಯಾನಿಕಲ್ ಎಂಜಿನಿಯರಿಂಗ್ ವಿದ್ಯಾರ್ಥಿಗಳು, ಕೊಳವೆ ಬಾವಿ ಮತ್ತು ಕಂದಕದಲ್ಲಿ ಬಿದ್ದ ಮಕ್ಕಳನ್ನು ಸುರಕ್ಷಿತವಾಗಿ ಮೇಲೆತ್ತಲು ಕಡಿಮೆ ವೆಚ್ಚದಯಂತ್ರವನ್ನು ರೂಪಿಸಿದ್ದನ್ನು ಬಹಿರಂಗಪಡಿಸಿದರು. ಇಪ್ಪತ್ತರ ಹರೆಯದ ವಿದ್ಯಾರ್ಥಿಗಳಾದ ಮಯಂಕ್ ಜೈನ್, ಗೌರವ್ ಭಾರ್ಗವ, ಆಶಿಶ್ ಮುಚ್ರಿಕರ್ ಮತ್ತು ಅಶುತೋಷ್ ಶ್ರೀವಾಸ್ತವ್ ಅವರು ಹೆಚ್ಚು ತೂಕದ ಗೊಂಬೆಯನ್ನು ಪ್ರಯೋಗಾರ್ಥವಾಗಿ ಬಳಸಿ, ಕಂದಕದಿಂದ ಮಕ್ಕಳನ್ನು ಪಾರು ಮಾಡುವಂತಹ ಸಲಕರಣೆಯ ವಿನ್ಯಾಸ ರೂಪಿಸಿದ್ದಾರೆ. ಪ್ರೊ.ದಿನೇಶ್ ಅಗರವಾಲ್ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಇದನ್ನು ವಿನ್ಯಾಸಗೊಳಿಸಿದ್ದಾರೆ. ಬಾವಿಯಲ್ಲಿ ಸಿಲುಕಿದ ಮಗುವನ್ನು ಹೊರತೆಗೆಯಲು ಜೆಸಿಬಿ ಯಂತ್ರ 40-45 ಗಂಟೆ ತೆಗೆದುಕೊಂಡರೆ, ಈ ಯಂತ್ರದಿಂದ ಕೇವಲ ಎರಡು ಗಂಟೆಗಳಲ್ಲಿ ಈ ಕೆಲಸ ಮಾಡಬಲ್ಲುದು. ಎರಡು ಸಾವಿರ ರೂಪಾಯಿಗಳಷ್ಟು ಕಡಿಮೆ ವೆಚ್ಚದಲ್ಲಿ ರಕ್ಷಣಾ ಕಾರ್ಯ ಪೂರ್ಣಗೊಳಿಸ ಬಹುದು. ಯಾವುದೇ ಬೃಹತ್ ಯಂತ್ರಗಳ ಸಹಾಯವಿಲ್ಲದೆ ಇದನ್ನು ಕಂದಕಕ್ಕೆ ಇಳಿಸಬಹುದು. ಇದರಲ್ಲಿ ಕ್ಯಾಮೆರಾ ಮತ್ತು ಮೈಕ್ ಅಳವಡಿಸಬಹುದು.

2007: ಹದಿನೈದು ದಿನಗಳ ಹಿಂದಷ್ಟೇ ರಾಜ್ಯ ಸಾರಿಗೆ ಸಂಸ್ಥೆ ಬಸ್ಸಿಗೆ ಬೆಂಕಿ ಹಚ್ಚಿದ್ದ ಶಸ್ತ್ರಸಜ್ಜಿತ ನಕ್ಸಲೀಯರ ತಂಡ, ಈದಿನ ಬೆಳಗಿನ ಜಾವ ಪುನಃ ಆಗುಂಬೆ ಸಮೀಪದ ಗುಬ್ಬಿಗ, ತಲ್ಲೂರು ಅಂಗಡಿ ಗ್ರಾಮಗಳ ಮೇಲೆ ದಾಳಿ ಮಾಡಿ ಅಂಗಡಿ ಮಾಲೀಕ ನಾಗೇಶ, ಇವರ ಸೋದರ ಗುತ್ತಿಗೆದಾರ ಉಮೇಶ, ಬಿದರಗೋಡು ಪಂಚಾಯ್ತಿ ಸದಸ್ಯ ಸತೀಶ ಮತ್ತು ಕೃಷಿಕ ಶಂಕರಪ್ಪ ಅವರ ಮನೆಗೆ ನುಗ್ಗಿ 85,000 ರೂಪಾಯಿ ನಗದು ಹಣ,500 ಗ್ರಾಂ ಚಿನ್ನವನ್ನು ದೋಚಿತು.

2007: ಚಿತ್ರದುರ್ಗದ ಕಾತ್ರಾಳ್ ಕೆರೆ ಸಮೀಪ ಹೆದ್ದಾರಿ 4ರಲ್ಲಿ ಖಾಸಗಿ ಬಸ್, ಟಾಟಾ ಸುಮೋ ಮುಖಾಮುಖಿ ಡಿಕ್ಕಿಯಲ್ಲಿ ಒಂದೇ ಕುಟುಂಬದ 14 ಜನ ಮೃತರಾಗಿ, ಇಬ್ಬರು ಗಾಯಗೊಂಡರು. ಮಧ್ಯರಾತ್ರಿ 1.30ರ ವೇಳೆಗೆ ಈ ದುರಂತ ಸಂಭವಿಸಿತು.
ಮೃತರಾದವರಲ್ಲಿ ಕೆಲವರು ಬೆಂಗಳೂರಿನ ಕುಮಾರಸ್ವಾಮಿ ಲೇಔಟ್ನ ನಿವಾಸಿಗಳು. ಮೂವರು ಚಳ್ಳಕೆರೆಯ ಸೋಮಗುದ್ದಿನವರು. ಇವರೆಲ್ಲ ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, 16 ಜನ ಟಾಟಾ ಸುಮೋದಲ್ಲಿ ಉಕ್ಕಡಗಾತ್ರಿ ದೇವರ ದರ್ಶನಕ್ಕೆ ಹೊರಟಿದ್ದರು.

2007: ಕರ್ನಾಟಕದ ಆರು ಕೃಷಿ ಸಂಶೋಧಕರಿಗೆ ಮತ್ತು ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರಕ್ಕೆ ಈ ಬಾರಿಯ ಭಾರತೀಯ ಕೃಷಿ ಸಂಶೋಧನಾ ಮಂಡಳಿ (ಐಸಿಎಆರ್) ಪ್ರಶಸ್ತಿ ಲಭಿಸಿತು. ಬೆಂಗಳೂರಿನ ಡಾ. ಸುಧೀರ್ ಚಂದ್ರ ರಾಯ್, ಧಾರವಾಡದ ಡಾ. ಪ್ರತಿಮಾ ಸಿ ಬಿಲೆಹಾಳ್ ಮತ್ತು ಮಂಗಳೂರಿನ ಡಾ. ಸ್ವಾತಿ ಲಕ್ಷ್ಮಿ ಅವರು ಅತ್ಯುತ್ತಮ ಸ್ನಾತಕೋತ್ತರ ಸಂಶೋಧಕರಿಗೆ ನೀಡುವ 2006ರ ಸಾಲಿನ `ಜವಾಹರಲಾಲ್ ನೆಹರು' ಪ್ರಶಸ್ತಿಗೆ ಪಾತ್ರರಾದರು. ಬೆಂಗಳೂರು ಮೂಲದ ಮತ್ತೊಬ್ಬ ವಿಜ್ಞಾನಿ ಡಾ. ವಿ. ರಾಮಮೂರ್ತಿ 2005-06ರ ಸಾಲಿನ `ಸ್ವಾಮಿ ಸಹಜಾನಂದ ಸರಸ್ವತಿ' ಪ್ರಶಸ್ತಿಗೆ ಆಯ್ಕೆಯಾದರು. ಡಾ. ರವೀಂದ್ರ ಎಚ್ ಪಾಟೀಲ್ ಅವರು 2005-06ರ ಸಾಲಿನ `ಲಾಲ್ ಬಹದೂರ್ ಶಾಸ್ತ್ರಿ ಯುವ ವಿಜ್ಞಾನಿ' ಪ್ರಶಸ್ತಿಗೆ ಪಾತ್ರರಾದರೆ, ಡಾ. ಇಂದ್ರಾಣಿ ಕರುಣಸಾಗರ್ ಅವರು ಒಂದು ಲಕ್ಷ ರೂ. ಬಹುಮಾನ ಮೊತ್ತದ `ರಫಿ ಅಹ್ಮದ್ ಕಿದ್ವಾಯಿ' ಪ್ರಶಸ್ತಿ ತಮ್ಮದಾಗಿಸಿಕೊಂಡರು. ರಾಯಚೂರಿನ ಕೃಷಿ ವಿಜ್ಞಾನ ಕೇಂದ್ರವು ವಿಸ್ತರಣಾ ಶಿಕ್ಷಣ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಅದಕ್ಕೆ ಒಂದು ಲಕ್ಷ ರೂ. ಬಹುಮಾನ ಪ್ರಕಟಿಸಲಾಯಿತು.

2007: ಭಾರತದ ಖ್ಯಾತ ಚೆಸ್ ಆಟಗಾರ್ತಿ ಕೊನೇರು ಹಂಪಿ ಅವರು ಈ ರಾತ್ರಿ ಡಿಫೆರ್ಡಾಂಗಿನಲ್ಲಿ (ಲಕ್ಸೆಂಬರ್ಗ್) ಮುಕ್ತಾಯವಾದ ಕೌಪ್ ಥಿಂಗ್ ಅಂತಾರಾಷ್ಟ್ರೀಯ ಓಪನ್ ಚೆಸ್ ಚಾಂಪಿಯನ್ಶಿಪ್ನಲ್ಲಿ ಒಂಬತ್ತನೇ ಹಾಗೂ ಕೊನೆಯ ಸುತ್ತಿನ ಪಂದ್ಯದಲ್ಲಿ ವಿಜಯ ಸಾಧಿಸಿ, ಚಾಂಪಿಯನ್ ಪಟ್ಟ ಬಗಲಿಗೆ ಹಾಕಿಕೊಂಡರು. ಕಳೆದ ತಿಂಗಳ ಅಂತ್ಯದಲ್ಲಿ ಹಾಲೆಂಡಿನ ಹಿಲ್ವೆರ್ಸಮ್ನಲ್ಲಿ ನಡೆದ ಎಚ್ ಎಸ್ ಜಿ ಅಂತಾರಾಷ್ಟ್ರೀಯ ಓಪನ್ ಚೆಸ್ ಟೂರ್ನಿಯಲ್ಲಿ ಹಂಪಿ ಚಾಂಪಿಯನ್ ಪಟ್ಟ ಪಡೆದಿದ್ದರು.

2007: ವಾಹನಗಳ ದಟ್ಟಣೆ ಮತ್ತು ವಾಯು ಮಾಲಿನ್ಯದಿಂದ ಬಿಡುಗಡೆ ಹೊಂದಲು ಪ್ಯಾರಿಸ್ ನಗರದಾದ್ಯಂತ ಬಾಡಿಗೆ ಸೈಕಲ್ ಬಳಸಲು ಅವಕಾಶ ಕಲ್ಪಿಸಲಾಯಿತು. ಎಲ್ಲ ಕಡೆಗಳಲ್ಲೂ ಸೈಕಲ್ ನಿಲ್ದಾಣಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಯುರೋಪಿನ ಇತರ ನಗರಗಳಲ್ಲೂ ಇದು ಜನಪ್ರಿಯವಾಗುತ್ತಿದೆ. ನಗರದ ಒಂದು ಸೈಕಲ್ ನಿಲ್ದಾಣದಿಂದ ಇನ್ನೊಂದು ನಿಲ್ದಾಣ ಅಥವಾ ಬೇರೆ ಕಡೆಗೆ ಹೋಗಲು ಬಾಡಿಗೆ ಸೈಕಲ್ಲುಗಳ ವ್ಯವಸ್ಥೆಯನ್ನೂ ಮಾಡಲಾಯಿತು.

2006: ಕರ್ನಾಟಕ ರಾಜ್ಯದ ನೂತನ ಲೋಕಾಯುಕ್ತರಾಗಿ ಸುಪ್ರೀಂಕೋರ್ಟಿನ ನಿವೃತ್ತ ನ್ಯಾಯಮೂತರ್ಿ ಎನ್. ಸಂತೋಷ ಹೆಗ್ಡೆ ಅವರನ್ನು ನೇಮಿಸಿ ರಾಜ್ಯಪಾಲರು ಅಧಿಸೂಚನೆ ಹೊರಡಿಸಿದರು. ರಾಜ್ಯ ಸರ್ಕಾರದ ಶಿಫಾರಸಿನ ಮೇರೆಗೆ ರಾಜ್ಯಪಾಲರು ಈ ಅಧಿಸೂಚನೆ ಹೊರಡಿಸಿದರು. ಎನ್. ವೆಂಕಟಾಚಲ ಅವರ ನಿವೃತ್ತಿಯಿಂದ ಈ ಸ್ಥಾನ ತೆರವಾಗಿತ್ತು.

2006: ಸ್ವೀಡನ್ ನೇತೃತ್ವದ ವಿಜ್ಞಾನಿಗಳ ತಂಡವೊಂದು ಕರಡಿಯೊಂದರ ಹಲ್ಲಿನಲ್ಲಿ ತಾವು 4 ಲಕ್ಷ ವರ್ಷಗಳಷ್ಟು ಹಳೆಯ ಡಿಎನ್ಎ ಪತ್ತೆ ಮಾಡಿದೆ ಎಂದು ಸ್ವೀಡನ್ನಿನ ಉಪ್ಸಾಲಾ ವಿಶ್ವವಿದ್ಯಾಲಯ ಪ್ರತಿಪಾದಿಸಿತು. ಈ ತಂಡದಲ್ಲಿ ಸ್ವೀಡನ್, ಸ್ಪೇನ್ ಮತ್ತು ಜರ್ಮನಿಯ ಸಂಶೋಧಕರಿದ್ದು, ಉತ್ತರ ಸ್ಪೇನಿನ ಅಟಪ್ಯುಯೆರ್ಕ ಎಂಬಲ್ಲಿನ ಗುಹೆಯೊಂದರಲ್ಲಿ ಈ ಕರಡಿಯ ಹಲ್ಲನ್ನು ಶೋಧಿಸಿತ್ತು ಎಂದು ಎ ಎಫ್ ಪಿ ಸುದ್ದಿ ಸಂಸ್ಥೆ ಸ್ಟಾಕ್ ಹೋಮ್ನಿಂದ ವರದಿ ಮಾಡಿತು.

2006: ಸರ್. ಸಿ.ವಿ. ರಾಮನ್ ಯುವ ವಿಜ್ಞಾನಿ ಪ್ರಶಸ್ತಿ ಪುರಸ್ಕೃತ, ಭಾರತದ ಮೊತ್ತ ಮೊದಲ ಪ್ಲಾಸ್ಟಿಕ್ ತಂತ್ರಜ್ಞಾನ ವಿಜ್ಞಾನಿ ಎಂದು ಗುರುತಿಸಲ್ಪಟ್ಟ ಡಾ. ಕೆ.ಎಸ್. ಜಗದೀಶ್ (51) ತುಮಕೂರಿನಲ್ಲಿ ನಿಧನರಾದರು.

1991: ಕರ್ನಾಟಕ ಕೇಸರಿ ಜಗನ್ನಾಥ ಜೋಶಿ ನಿಧನ.

1932: ಸಾಹಿತಿ ಮನೋರಮ ಎಂ. ಭಟ್ ಜನನ.

1906: ರಸಿಕ ರಂಗ ಕಾವ್ಯನಾಮದಿಂದ ಖ್ಯಾತರಾಗಿರುವ ಸಾಹಿತಿ, ಕಾದಂಬರಿಕಾರ ರಂಗನಾಥ ಶ್ರೀನಿವಾಸ ಮುಗಳಿ (ರಂ.ಶ್ರೀ. ಮುಗಳಿ) ಶ್ರೀನಿವಾಸರಾಯ- ಕಮಲಮ್ಮ ದಂಪತಿಯ ಪುತ್ರನಾಗಿ ಧಾರವಾಡ ಜಿಲ್ಲೆಯ ಹೊಳೆ ಆಲೂರಿನಲ್ಲಿ ಜನಿಸಿದರು. 1993ರ ಫೆಬ್ರುವರಿ 20ರಂದು ಅವರು ನಿಧನರಾದರು.

1904: ಜೈಪುರ ಘರಾನಾದ ಖ್ಯಾತ ಹಾಡುಗಾರ ಮೊಗುಬಾಯಿ ಕುರ್ದಿಕರ ಜನನ.

1903: ಸ್ವಾತಂತ್ರ್ಯ ಸೇನಾನಿ, ಸಮಾಜ ಸುಧಾರಕ ರಾಜಕಾರಣಿ ಕುಮಾರಸ್ವಾಮಿ ಕಾಮರಾಜ್ ಜನನ.

1783: ಭಾರತದ ಖ್ಯಾತ ಸಮಾಜ ಸುಧಾರಕ, ವರ್ತಕ, ಕೈಗಾರಿಕೋದ್ಯಮಿ ಸರ್ ಜೆಮ್ ಶೆಟ್ಜಿ ಜೀಜಾಭಾಯಿ ಅವರು ಈದಿನ ಮುಂಬೈಯಲ್ಲಿ ಜನಿಸಿದರು. ಕೆರೆ, ಬಾವಿ, ರಸ್ತೆ, ಆಸ್ಪತ್ರೆಗಳ ನಿರ್ಮಾಣ, ಶಿಕ್ಷಣ ಸಂಸ್ಥೆಗಳ ಆರಂಭ, ವಿದ್ಯಾರ್ಥಿಗಳಿಗೆ ಶಿಷ್ಯವೇತನ ಇತ್ಯಾದಿಗಳ ಮೂಲಕ ತಮ್ಮ ಅಪಾರ ಸಂಪತ್ತನ್ನು ಇವರು ಸಮಾಜ ಸೇವೆಗೆ ವಿನಿಯೋಗಿಸಿದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Sunday, July 19, 2009

“Saving Brinjal, the King of Vegetables"

“Saving Brinjal, the

King of Vegetables"




Brinjal Festival in Delhi showcases

diversity of veggie in India”


A colorful and unique event called the BRINJAL FESTIVAL was organized by citizens concerned about this humble vegetable’s diversity being jeopardised and its socio-cultural importance discounted in government policies, in Dilli Haat at New Delhi on Saturday 18th July 2009.



This Festival, organized as part of the I AM NO LAB RAT campaign underway in the city to create consumer awareness on the adverse effects of Genetically Modified Brinjals, sought to get Delhi’ites attention on the issue by this novel event which had more than thirty different varieties of Brinjal from different states on display.

The brinjals on display include Mattu gulla, Ram gulla, Lal begun, Billi-gundu badane, Gauri Bidanur, Sada desi gol begun, Jungly variety, Musuku Badane, Kanta begun, Md. Kuli, Sada Makra, Banamala, Garia, etc.



India is known to be the Centre of Origin and Diversity of this vegetable. There are more than two thousand varieties of brinjal documented here. States like West Bengal are important regions for this diversity.

The Indian diversity in brinjals is reflected in different colors of brinjals (not just the purple ones commonly seen but yellow, white and even red brinjals), in shape (long, round, bulbuous etc.), in size, in the plant quality (spiny, hardy, short etc.) etc. The flavours and taste of these brinjals are also different.



Apart from the importance of this rich diversity of this “King of Vegetables” in the country, the Festival sought to highlight the socio-cultural importance of Brinjal in Indian culture. Brinjal and related species are used extensively in Ayurveda, for instance. It is supposed to have analgesic and aphrodisiac qualities. It is used for liver complaints and for worm infestations. Brinjal is also considered an essential part of a wedding feast in some communities of Andhra Pradesh, for example. Brinjal finds reference in the Ramayana, the great Indian classic epic.

This rich diversity is potentially jeopardized if Bt Brinjal is approved in the country as the first GM food crop and that was what prompted the volunteers of I AM NO LAB RAT campaign to organize this brinjal festival.



In addition to the physical and poster display of brinjal diversity, the Festival put out information on how brinjal can be cultivated without the use of chemical pesticides or GM seeds and thus sought response for a fundamental question with regard to the very need for GM Brinjal. The Brinjal Festival had other attractions for the participants in the form of a quiz competition, cooking competition etc. Some dishes reflecting the diversity of brinjal cuisines from different states of the country were also on display in the Festival, said Kavitha Kuruganti of Kheti Viorasat Mission Punjab and Selva Ganapathi. (9891358457.)

Note: PARYAYA carried here the Cartoon appeared in the Invitation of Brinjal Mela which was drawn by Bavu Pattar for GM Free Karnataka. Thanks for the efforts of Srikanta Ganadhalu.

-Nethrakere Udaya Shankara.

Advertisement