My Blog List

Saturday, February 28, 2009

ಇಂದಿನ ಇತಿಹಾಸ History Today ಫೆಬ್ರುವರಿ 26

ಇಂದಿನ ಇತಿಹಾಸ

ಫೆಬ್ರುವರಿ 26

ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎನ್. ಭಟ್ ಶಿಫಾರಸಿನ ಮೇರೆಗೆ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್. ಎನ್. ಸಿಂಗ್ ಅವರನ್ನು ಭಾಗಲ್ಪುರದಲ್ಲಿ 1989ರಲ್ಲಿ ನಡೆದ ಗಲಭೆಗಳ ತನಿಖಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. 

2008:  ರೈಲ್ವೆ ಸಚಿವ ಲಾಲು ಪ್ರಸಾದ್ ಲೋಕಸಭೆಯಲ್ಲಿ ಸರಕು ಸಾಗಣೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲದ, ರೈಲ್ವೆ ಸಿಬ್ಬಂದಿಯ ಕಲ್ಯಾಣದ ಕ್ರಮಗಳನ್ನು ಒಳಗೊಂಡ 2008-09ನೇ ಸಾಲಿನ ಮುಂಗಡ ಪತ್ರವನ್ನು ಮಂಡಿಸಿದರು. ಸಂಯುಕ್ತ ಪ್ರಗತಿಪರ ಮೈತ್ರಿಕೂಟ (ಯುಪಿಎ) ಸರ್ಕಾರದ ಐದನೇ ಮತ್ತು ಕೊನೆಯ ಪೂರ್ಣ ಪ್ರಮಾಣದ ರೈಲ್ವೆ ಬಜೆಟಿನ `ಲಾಲು ಬಂಡಿ'ಯೂ ಒಟ್ಟಾರೆ ಜನಪ್ರಿಯತೆಯ ಹಾದಿಯಲ್ಲೇ ಸಾಗಿತು. ಎಲ್ಲ ಬಗೆಯ ಪ್ರಯಾಣ ದರಗಳಲ್ಲಿ ಶೇ 5ರಷ್ಟು ಕಡಿತ, ಸರಕು ಸಾಗಣೆ ದರಗಳಲ್ಲಿ ಯಾವುದೇ ಬದಲಾವಣೆ ಇಲ್ಲದ, ಪ್ರಯಾಣಿಕರಿಗೆ ಉತ್ತಮ ಸೇವೆ ಮತ್ತು ಸೌಲಭ್ಯ ಒದಗಿಸಲು ಹೊಸ ಕ್ರಮಗಳನ್ನು ಪ್ರಕಟಿಸಲಾಯಿತು. ಹವಾ ನಿಯಂತ್ರಿತ (ಎಸಿ) ಮೊದಲ ದರ್ಜೆ ದರಗಳಲ್ಲಿ ಶೇ 7ರಷ್ಟು ಮತ್ತು ಎಸಿ-2 ಟಯರ್ ದರಗಳಲ್ಲಿ ಶೇ 4ರಷ್ಟು ಇಳಿಕೆ ಪ್ರಕಟಿಸಲಾಯಿತು.

2008: ಕರ್ನಾಟಕದಲ್ಲಿ ವಾಣಿಜ್ಯ ಉದ್ದೇಶದ ವಾಹನಗಳಿಗೆ ವೇಗ ನಿಯಂತ್ರಕ ಆಳವಡಿಕೆ ಕಡ್ಡಾಯಗೊಳಿಸುವ ಹೈಕೋರ್ಟ್ ಆದೇಶಕ್ಕೆ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡಿತು. ಮುಖ್ಯ ನ್ಯಾಯಮೂರ್ತೆ ಕೆ.ಜಿ.ಬಾಲಕೃಷ್ಣನ್ ಅವರ ನೇತೃತ್ವದ ಪೀಠವು ಕರ್ನಾಟಕದಲ್ಲಿ ವಾಣಿಜ್ಯ ವಹಿವಾಟು ನಡೆಸುವ ವಾಹನಗಳ ಮಾಲೀಕರ ಸಂಘವು ಹೈಕೋರ್ಟ್ ಆಜ್ಞೆಯ ವಿರುದ್ಧ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿ, ಹೈಕೋರ್ಟ್ ಆದೇಶಕ್ಕೆ ಮಧ್ಯಂತರ ತಡೆಯಾಜ್ಞೆ ನೀಡಿತು.

2008: ವಾಣಿಜ್ಯ ಉದ್ದೇಶದ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯಗೊಳಿಸಿ ಹೈಕೋರ್ಟ್ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಲಾರಿ ಮಾಲೀಕರ ಮತ್ತು ಏಜೆಂಟರ ಸಂಘಗಳ ಒಕ್ಕೂಟವು ಮುಷ್ಕರವನ್ನು ಹಿಂತೆಗೆದುಕೊಂಡಿತು.

2008: ಮೊಬೈಲ್ ಫೋನಿನ ಅತಿಯಾದ ಬಳಕೆಯಿಂದ ಮಿದುಳಿಗೆ ತೊಂದರೆಯಾಗುವುದು ಈಗಾಗಲೇ ಪತ್ತೆಯಾಗಿದೆ. ಮೊಬೈಲಿನಿಂದ ಹೊರಹೊಮ್ಮುವ ವಿಕಿರಣದಿಂದ ಚರ್ಮಕ್ಕೆ ಹಾನಿಯಾಗುತ್ತದೆ ಎಂಬುದು ಹೊಸ  ವಿಷಯ ಸಂಶೋಧನೆಯಿಂದ ಬೆಳಕಿಗೆ ಬಂತು. ಮೊಬೈಲ್ ವಿಕಿರಣದಿಂದ ಕೆಲವು ಜೈವಿಕ ಪರಿಣಾಮಗಳು ಉಂಟಾಗುತ್ತವೆ. ಮಾನವನ ಚರ್ಮದ ಮೇಲೆ ಈ ವಿಕಿರಣಗಳು ಸಣ್ಣ ಪ್ರಮಾಣದ ಪರಿಣಾಮವನ್ನು ಬೀರುತ್ತವೆ ಎಂದು ಸಂಶೋಧಕರ ತಂಡದ ಮುಖ್ಯಸ್ಥ ಡೆರಿಸುಜ್ ಲೆಸಜಿಸಂಕಿ ಅವರು ತಿಳಿಸಿದರು. ಚರ್ಮದ ಸಜೀವ ಕೋಶಗಳು ಮೊಬೈಲ್ ವಿಕಿರಣಕ್ಕೆ ಸ್ಪಂದಿಸುವುದರಿಂದ ಜೀವಸತ್ವದಲ್ಲಿ ಬದಲಾವಣೆ ಉಂಟಾಗುತ್ತದೆ ಎಂದು ಫಿನ್ಲೆಂಡಿನ ಸಂಶೋಧಕರ ತಂಡವು ನಡೆಸಿದ ಅಧ್ಯಯನದಿಂದ ಪತ್ತೆಯಾಯಿತು. ಸತತವಾಗಿ ಮೊಬೈಲ್ ಬಳಸುವ 580 ಜನರ ಚರ್ಮವನ್ನು ಪರೀಕ್ಷೆಗೆ ಒಳಪಡಿಸಿದ ಸಂಶೋಧಕರ ತಂಡವು ಚರ್ಮದಲ್ಲಿ ಎಂಟು ಬಗೆಯ ಜೀವಸತ್ವಗಳಿಗೆ ಸ್ವಲ್ಪ ಪ್ರಮಾಣದ ಹಾನಿ ಉಂಟಾಗಿರುವುದನ್ನು  ಪತ್ತೆ  ಹಚ್ಚಿತು.

2008: ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ವತಿಯಿಂದ ನವದೆಹಲಿಯಲ್ಲಿ ನಡೆದ ಸರಳ ಸಮಾರಂಭದಲ್ಲಿ ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರು 34 ಸಾಧಕರಿಗೆ ಪ್ರಶಸ್ತಿಗಳನ್ನು ವಿತರಿಸಿದರು. ಈ ಸಂದರ್ಭದಲ್ಲಿ ಪ್ರಖ್ಯಾತ ವಿದ್ವಾಂಸ ಡಾ. ಎಸ್. ಕೆ.ಸಕ್ಸೇನಾ ಅವರಿಗೆ ಸಂಗೀತ ಮತ್ತು ನೃತ್ಯ ಕ್ಷೇತ್ರಕ್ಕೆ ನೀಡಿರುವ ಕೊಡುಗೆಗಾಗಿ ಅಕಾಡೆಮಿಯ ಫೆಲೋಶಿಪ್ ನೀಡಲಾಯಿತು. ಜತೆಗೆ ಒಂದು ಲಕ್ಷ ರೂಪಾಯಿ ನಗದು ಬಹುಮಾನ ನೀಡಲಾಯಿತು. ಹಿರಿಯ ರಂಗಕರ್ಮಿ ಎನ್ ಸಿ ಠಾಕೂರ್, ಚಲನಚಿತ್ರ ಸಂಗೀತ ನಿರ್ದೇಶಕ ಖಯ್ಯೂಂ, ಕಥಕ್ ನೃತ್ಯಪಟು ಗೀತಾಂಜಲಿ ಲಾಲ್ ಅವರಿಗೆ ಕೂಡಾ ತಲಾ 50ಸಾವಿರ ನಗದು ಬಹುಮಾನದೊಂದಿಗೆ ಅಕಾಡೆಮಿ ಪ್ರಶಸ್ತಿ ನೀಡಿ ಗೌರವಿಸಲಾಯಿತು.

2007:  ಚಿತ್ರ  ನಿರ್ಮಾಪಕ ಹಾಗೂ ನಿರ್ದೇಶಕ ಮಾರ್ಟಿನ್ ಸ್ಕೋರ್ಸೇಸೆ ಅವರ ಬೋಸ್ಟನ್ ಪೊಲೀಸರ ಭ್ರಷ್ಟಾಚಾರದ ಕಥೆಯನ್ನು ಹೇಳುವ ಕ್ರೈಮ್ ಥ್ರ್ಲಿಲರ್ `ದಿ ಡಿಪಾರ್ಟೆಡ್' ಚಿತ್ರವು ಅತ್ಯುತ್ತಮ ಚಲನಚಿತ್ರಕ್ಕೆ ನೀಡಲಾಗುವ ಪ್ರಸ್ತುತ ಸಾಲಿನ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ವಿಶ್ವದ ಈ ಅತ್ಯುನ್ನತ ಪ್ರಶಸ್ತಿಗಾಗಿ `ದಿ ಡಿಪಾರ್ಟೆಡ್' ಜೊತೆಗೆ ಸಾಂಸ್ಕೃತಿಕ ಚಿತ್ರ `ಬಾಬೆಲ್', ಹಾಸ್ಯಚಿತ್ರ `ಲಿಟಲ್ ಮಿಸ್ ಸನ್ ಶೈನ್', ದ್ವಿತೀಯ ಜಾಗತಿಕ ಸಮರದ ಕಥೆ `ಲೆಟರ್ಸ್ ಫ್ರಮ್ ಐವೊ ಜಿಮ' ಮತ್ತು ಬ್ರಿಟಿಷ್ ರಾಜಮನೆತನಕ್ಕೆ ಸಂಬಂಧಿಸಿದ `ದಿ ಕ್ವೀನ್' ಚಿತ್ರಗಳು ಪೈಪೋಟಿಗೆ ಇಳಿದಿದ್ದವು. `ದಿ ಕ್ವೀನ್' ಚಿತ್ರದಲ್ಲಿನ ಬ್ರಿಟಿಷ್ ರಾಣಿ ಎರಡನೇ ಎಲಿಜಬೆತ್ ಪಾತ್ರಕ್ಕಾಗಿ ಹೆಲೆನ್ ಮಿರ್ರೆನ್ `ಅತ್ಯುತ್ತಮ ನಟಿ' ಪ್ರಶಸ್ತಿಯನ್ನು ಪಡೆದರೆ, `ದಿ ಲಾಸ್ಟ್ ಕಿಂಗ್ ಆಫ್ ಸ್ಕಾಟ್ಲೆಂಡ್' ಚಿತ್ರದಲ್ಲಿನ ಉಗಾಂಡದ ಸರ್ವಾಧಿಕಾರಿ ಇದಿ ಅಮೀನ್ ಪಾತ್ರಕ್ಕಾಗಿ ಫಾರೆಸ್ಟ್ ವಿಟಕರ್ `ಅತ್ಯುತ್ತಮ ನಟ' ಪ್ರಶಸ್ತಿಯನ್ನು ಬಾಚಿಕೊಂಡರು. ಅತ್ಯುತ್ತಮ ಚಿತ್ರ ನಿರ್ಮಾಪಕರೆಂದು ಖ್ಯಾತಿ ಪಡೆದಿರುವ ಮಾರ್ಟಿನ್ ಸ್ಕೋರ್ಸೇಸೆ ಅಮೆರಿಕದ ಚಿತ್ರ ನಿರ್ಮಾಪಕರ ಪೈಕಿ ಆಸ್ಕರ್ ಪ್ರಶಸ್ತಿ ಪಡೆಯದೇ ಇರುವ ಏಕೈಕ ಜೀವಂತ ನಿರ್ಮಾಪಕರು. `ಡ್ರೀಮ್ ಗರ್ಲ್ಸ್' ಚಿತ್ರದ ಪ್ರಮುಖ ಗಾಯಕಿ ಪಾತ್ರ ನಿರ್ವಹಿಸಿದ ನಟಿ ಜೆನ್ನಿಫರ್ ಹಡ್ಸನ್ ಅವರು ಅತ್ಯುತ್ತಮ ಪೋಷಕ ನಟಿ ಪ್ರಶಸ್ತಿ ಗೆದ್ದುಕೊಂಡರು. `ಲಿಟಲ್ ಮಿಸ್ ಸನ್ ಶೈನ್' ಚಿತ್ರದಲ್ಲಿ ನಿರ್ವಹಿಸಿದ `ಅಜ್ಜ'ನ ಪಾತ್ರಕ್ಕಾಗಿ ಖ್ಯಾತ ನಟ ಅಲನ್ ಅರ್ಕಿನ್ ಅತ್ಯುತ್ತಮ ಪೋಷಕ ನಟ ಪ್ರಶಸ್ತಿ ಗೆದ್ದುಕೊಂಡರು. ಜರ್ಮನಿಯ `ದಿ ಲೈವ್ಸ್ ಆಫ್ ಅದರ್ಸ್' ಚಿತ್ರವು ವಿದೇಶಿ ಭಾಷಾ ಚಿತ್ರಗಳಿಗೆ ನೀಡಲಾಗುವ ಆಸ್ಕರ್ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಈ ಚಿತ್ರವು ಭಾರತೀಯ ಸಂಜಾತೆ ದೀಪಾ ಮೆಹ್ತಾ ಅವರ `ವಾಟರ್' ಮತ್ತು ಇತರ ಮೂರು ಚಿತ್ರಗಳನ್ನು ಸ್ಪರ್ಧೆಯಲ್ಲಿ ಹಿಂದೆ ಹಾಕಿತು. ಆಸ್ಟ್ರೇಲಿಯಾ- ಅಮೆರಿಕದಲ್ಲಿ ಅತ್ಯಂತ ಜನಪ್ರಿಯವಾದ `ಹ್ಯಾಪಿ ಫೀಟ್' ಚಿತ್ರವು ಅತ್ಯುತ್ತಮ ಅನಿಮೇಷನ್ ಚಿತ್ರ ಪ್ರಶಸ್ತಿಯನ್ನು ಗೆದ್ದುಕೊಂಡಿತು. ಅಂಟಾರ್ಕ್ಟಿಕಾದ ಪೆಂಗ್ವಿನ್ ನೃತ್ಯಕ್ಕೆ ಸಂಬಂಧಿಸಿದ ಕಥೆಯುಳ್ಳ ಈ ಚಿತ್ರವು ತನ್ನ ಪ್ರತಿಸ್ಪರ್ಧಿಗಳಾದ `ಕಾರ್ಸ್' ಮತ್ತು ಮಾನ್ ಸ್ಟರ್ ಹೌಸ್' ಚಿತ್ರಗಳನ್ನು ಹಿಂದಕ್ಕೆ ಹಾಕಿತು. `ಹ್ಯಾಪಿ ಫೀಟ್' ಜಗತ್ತಿನಾದ್ಯಂತ ಜನಪ್ರಿಯತೆ ಗಳಿಸಿದ್ದು ಬಾಕ್ಸ್ ಆಫೀಸಿನಲ್ಲಿ 36.30 ಕೋಟಿ ಡಾಲರುಗಳಷ್ಟು ಆದಾಯ ಗಳಿಸಿದೆ. ಟೈಮ್ ವಾರ್ನರ್ ಇಂಕ್ ಅವರ  ವಾರ್ನರ್ ಬ್ರದರ್ಸ್ ಪಿಕ್ಚರ್ಸ್ ಮತ್ತು ಆಸ್ಟ್ರೇಲಿಯಾದ ವಿಲೇಜ್ ರೋಡ್ ಶೋ ಲಿಮಿಟೆಡ್ ಅವರು ಜಂಟಿಯಾಗಿ ನಿರ್ಮಿಸಿದ ಚಿತ್ರ ಇದು. ಚಿತ್ರದ ನಿರ್ಮಾಪಕ ಜಾರ್ಜ್ ಮಿಲ್ಲರ್ ಈ ಹಿಂದೆ ಆಸ್ಕರ್ ಪ್ರಶಸ್ತಿಗೆ ನಾಮಕರಣಗೊಂಡಿದ್ದರು. ಆದರೆ ಪ್ರಶಸ್ತಿಯನ್ನು ಗೆದ್ದಿರಲಿಲ್ಲ.

2007: ಹೊನ್ನಾವರದ ಪ್ರತಿಷ್ಠಿತ ಕೆರೆಮನೆ ಶಿವರಾಮ ಹೆಗಡೆ ಪ್ರಶಸ್ತಿಗೆ ಸಂಗೀತ ಸಾಮ್ರಾಜ್ಞಿ, ಪದ್ಮಭೂಷಣ ಡಾ. ಗಂಗೂಬಾಯಿ ಹಾನಗಲ್ ಆಯ್ಕೆಯಾದರು.

2006: ವಂಶವಾಹಿ ರೋಗಗಳಿಗೆ ಕಾರಣವಾಗುವ ಹೊಸ ವಂಶವಾಹಿಗಳ (ಜೀನ್ ಗಳ) ಪತ್ತೆಗೆ ನೂತನ ವಿಧಾನವನ್ನು ಬೆಂಗಳೂರಿನ ವಿಜ್ಞಾನಿಗಳು ಕಂಡು ಹಿಡಿದರು. ಬೆಂಗಳೂರು ವಿಜ್ಞಾನಿಗಳು ಹೊಸ ವಂಶವಾಹಿಗಳನ್ನು ಪತ್ತೆ ಹಚ್ಚಿದ ಬಗ್ಗೆ ನೇಚರ್ ಜೆನೆಟಿಕ್ಸ್ ವರದಿ ಪ್ರಕಟಿಸಿತು.

2006: ಹಿರಿಯ ಸಂಗೀತ ವಿದ್ವಾಂಸ ಚಿಂತಾಲಪಲ್ಲಿ ಚಂದ್ರಶೇಖರ್ (62) ಹೃದಯಾಘಾತದಿಂದ ನಿಧನರಾದರು. ಚಿಂತಾಲಪಲ್ಲಿ ಕುಟುಂಬದಲ್ಲಿ 1944ರಲ್ಲಿ ಜನಿಸಿದ ಚಂದ್ರಶೇಖರ್ ಕರ್ನಾಟಕ ಮತ್ತು ಹಿಂದೂಸ್ಥಾನಿ ಗಾಯಕರಾಗಿ ಜನಪ್ರಿಯರಾಗಿದ್ದರು.

2006: ಉತ್ತರ ಕರ್ನಾಟಕ ಲೇಖಕಿಯರ ಸಂಘವು ನೀಡುವ ಸುಧಾಮೂರ್ತಿ ದತ್ತಿನಿಧಿ ಪ್ರಶಸ್ತಿಯು ಉತ್ತರ ಕನ್ನಡ ಜಿಲ್ಲೆ ಕತ್ರಗಾಲಿನ ಹಾಸ್ಯ ಲೇಖಕಿ ಭುವನೇಶ್ವರಿ ಹೆಗಡೆ ಅವರಿಗೆ ಲಭಿಸಿತು.

2006: ಪಟ್ನಾ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜೆ.ಎನ್. ಭಟ್ ಶಿಫಾರಸಿನ ಮೇರೆಗೆ ಹೈಕೋರ್ಟಿನ ನಿವೃತ್ತ ನ್ಯಾಯಮೂರ್ತಿ ಎನ್. ಎನ್. ಸಿಂಗ್ ಅವರನ್ನು ಭಾಗಲ್ಪುರದಲ್ಲಿ 1989ರಲ್ಲಿ ನಡೆದ ಗಲಭೆಗಳ ತನಿಖಾ ಆಯೋಗದ ಮುಖ್ಯಸ್ಥರನ್ನಾಗಿ ನೇಮಕ ಮಾಡಲಾಯಿತು. 

1993: ನ್ಯೂಯಾರ್ಕಿನ ವಿಶ್ವ ವ್ಯಾಪಾರ ಕೇಂದ್ರದ ಗ್ಯಾರೇಜಿನಲ್ಲಿ ಬಾಂಬ್ ಸ್ಫೋಟಗೊಂಡಿತು. 6 ಜನ ಸತ್ತು 1000ಕ್ಕೂ ಹೆಚ್ಚು ಮಂದಿ ಗಾಯಗೊಂಡರು.

1974: ಗಾಯಕ ಮಹೇಶ್ ನಾ. ಕುಲಕರ್ಣಿ ಅವರು ನಾರಾಯಣ ಕೆ. ಕುಲಕರ್ಣಿ- ಲಕ್ಷ್ಮೀ ಎನ್. ಕುಲಕರ್ಣಿ ದಂಪತಿಯ ಪುತ್ರನಾಗಿ ಬೆಳಗಾವಿಯಲ್ಲಿ ಜನಿಸಿದರು. ವಿಷ್ಣು ದಿಗಂಬರ ಫಲುಸ್ಕರ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ಇವರಿಗೆ ಲಭಿಸಿವೆ. 

1887: ಸರ್ ಬೆನೆಗಲ್ ನರಸಿಂಗ ರಾವ್ (1887-1953) ಮಂಗಳೂರಿನಲ್ಲಿ ಜನಿಸಿದರು. ತಮ್ಮ ಕಾಲದ ಶ್ರೇಷ್ಠ ನ್ಯಾಯವಾದಿಯಾದ ಅವರು 1947ರಲ್ಲಿ ಬರ್ಮಾ (ಈಗಿನ ಮ್ಯಾನ್ಮಾರ್) ಹಾಗೂ 1950ರಲ್ಲಿ ಭಾರತದ ಸಂವಿಧಾನಗಳ ಕರಡು ತಯಾರಿಸಲು ನೆರವಾದರು. ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ 1950-1952ರಲ್ಲಿ ಭಾರತದ ಪ್ರತಿನಿಧಿಯಾಗಿದ್ದ ಅವರು 1952ರ ಫೆಬ್ರುವರಿಯಿಂದ 1953ರಲ್ಲಿ ತಮ್ಮ ಸಾವಿನವರೆಗೂ ಹೇಗ್ ನ ಇಂಟರ್ ನ್ಯಾಷನಲ್ ಜಸ್ಟೀಸ್ನ ಖಾಯಂ ಕೋರ್ಟಿನ ನ್ಯಾಯಾಧೀಶರಾಗಿದ್ದರು. ಕೋರ್ಟಿಗೆ ಆಯ್ಕೆಯಾಗುವ ಮೊದಲು ಅವರನ್ನು ವಿಶ್ವಸಂಸ್ಥೆ ಪ್ರಧಾನ ಕಾರ್ಯದರ್ಶಿ ಹುದ್ದೆಯ ಅಭ್ಯರ್ಥಿ ಎಂಬುದಾಗಿ ಪರಿಗಣಿಸಲಾಗಿತ್ತು.

1857: ಎಮಿಲ್ ಕೊಯೆ (Emil Coue)  ಹುಟ್ಟಿದ ದಿನ. ಫ್ರೆಂಚ್ ಫಾರ್ಮಾಸಿಸ್ಟ್ ಆಗಿದ್ದ ಈತ `ಪುನರುಚ್ಚಾರ' ಮೂಲಕ ಚಿಕಿತ್ಸೆ ನೀಡುವ ಮಾನಸಿಕ ಚಿಕಿತ್ಸೆಯನ್ನು ಪ್ರಚುರ ಪಡಿಸಿದ. `ಪ್ರತಿದಿನ, ಪ್ರತಿಯೊಂದು ಮಾರ್ಗದಲ್ಲೂ ನಾನು ಸುಧಾರಿಸುತ್ತಿದ್ದೇನೆ, ಇನ್ನಷ್ಟು ಸುಧಾರಿಸುತ್ತಿದ್ದೇನೆ' ಎಂದು ಮನಸ್ಸಿಗೆ ಸೂಚನೆ ಕೊಡುವ ಈ ಚಿಕಿತ್ಸಾ ವಿಧಾನ `ಕೊಯೆಯಿಸಂ' ಎಂದೇ ಖ್ಯಾತವಾಗಿದೆ.

1826: ಬ್ರಿಟಿಷರು ಯಾಂದಬೂ ಒಪ್ಪಂದದ ಮೂಲಕ ಅಸ್ಸಾಂನ್ನು ಚಹಾ ಎಸ್ಟೇಟ್ ಆಗಿ ಪರಿವರ್ತಿಸಿಕೊಳ್ಳುವ ಸಲುವಾಗಿ ತಮ್ಮ ವಶಕ್ಕೆ ತೆಗೆದುಕೊಂಡರು.

1802: ವಿಕ್ಟರ್ ಹ್ಯೂಗೊ ಹುಟ್ಟಿದ ದಿನ. ಕವಿ, ಕಾದಂಬರಿಕಾರ, ನಾಟಕಕಾರನಾದ ಈತ ಫ್ರೆಂಚ್ ರೊಮ್ಯಾಂಟಿಕ್ ಸಾಹಿತಿಗಳ ಪೈಕಿ ಅತ್ಯಂತ ಖ್ಯಾತಿ ಪಡೆದ ವ್ಯಕ್ತಿ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಫೆಬ್ರುವರಿ 25

ಇಂದಿನ ಇತಿಹಾಸ

ಫೆಬ್ರುವರಿ 25

ಹಾಲಿವುಡ್ಡಿನ ಕೊಡಕ್ ಥಿಯೇಟರಿನಲ್ಲಿ ನಡೆದ ಎಂಬತ್ತನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ  ಚಲನಚಿತ್ರ ಮತ್ತು ಅತ್ಯುತ್ತಮ  ನಿರ್ದೇಶನಕ್ಕಾಗಿ  (ಗೋಯೆನ್ ಬ್ರದರ್ಸ್)  ನೀಡಲಾಗುವ `ಆಸ್ಕರ್ ಪ್ರಶಸ್ತಿ'ಗಳನ್ನು  `ನೋ ಕಂಟ್ರಿ ಫಾರ್  ಓಲ್ಡ್ ಮೆನ್' ಚಿತ್ರವು ಗೆದ್ದುಕೊಂಡಿತು. ಈ ಚಿತ್ರವು `ಆಸ್ಕರ್' ಚಲನಚಿತ್ರ ಪ್ರಶಸ್ತಿಗಳ ಪೈಕಿ ನಾಲ್ಕನ್ನು ತನ್ನದಾಗಿಸಿಕೊಂಡು ವಿಜೃಂಭಿಸಿತು.

2008: ಹಾಲಿವುಡ್ಡಿನ ಕೊಡಕ್ ಥಿಯೇಟರಿನಲ್ಲಿ ನಡೆದ ಎಂಬತ್ತನೇ ವಾರ್ಷಿಕ ಅಕಾಡೆಮಿ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅತ್ಯುತ್ತಮ  ಚಲನಚಿತ್ರ ಮತ್ತು ಅತ್ಯುತ್ತಮ  ನಿರ್ದೇಶನಕ್ಕಾಗಿ  (ಗೋಯೆನ್ ಬ್ರದರ್ಸ್)  ನೀಡಲಾಗುವ `ಆಸ್ಕರ್ ಪ್ರಶಸ್ತಿ'ಗಳನ್ನು  `ನೋ ಕಂಟ್ರಿ ಫಾರ್  ಓಲ್ಡ್ ಮೆನ್' ಚಿತ್ರವು ಗೆದ್ದುಕೊಂಡಿತು. ಈ ಚಿತ್ರವು `ಆಸ್ಕರ್' ಚಲನಚಿತ್ರ ಪ್ರಶಸ್ತಿಗಳ ಪೈಕಿ ನಾಲ್ಕನ್ನು ತನ್ನದಾಗಿಸಿಕೊಂಡು ವಿಜೃಂಭಿಸಿತು. ಎರಡನೇ ಅತ್ಯುತ್ತಮ  ನಟ ಪ್ರಶಸ್ತಿಯು `ದೇರ್ ವಿಲ್ ಬಿ ಬ್ಲಡ್' ಚಿತ್ರದ ನಟನೆಗಾಗಿ  ಡೇನಿಯಲ್ ಡೇ -ಲೆವಿಸ್ ಅವರಿಗೆ ಲಭಿಸಿದರೆ, `ಲಾ ವೀ ಎನ್ ರೋಸ್'ದ ನಟನೆಗಾಗಿ  ನಟಿ ಮಾರಿಯೋನ್ ಕೊಟಿಲ್ಲಾಡ್ ಅವರು ಅತ್ಯುತ್ತಮ  ನಟಿ ಪ್ರಶಸ್ತಿ ಗೆದ್ದುಕೊಂಡರು. ಅತ್ಯುತ್ತಮ ಚೊಚ್ಚಲ ನಟನೆಗಾಗಿ ನೀಡಲಾಗುವ ಪ್ರಶಸ್ತಿಯು ಸ್ಪೇನಿನ ಜೇವಿಯರ್ ಬಾರ್ಡೆಮ್ ಅವರಿಗೆ  ಲಭಿಸಿದ್ದು ಸ್ಪೇನಿಗೆ  ಮೊತ್ತ ಮೊದಲ ಆಸ್ಕರ್  ಪ್ರಶಸ್ತಿಯನ್ನು ತಂದುಕೊಟ್ಟಿತು. `ನೋ ಕಂಟ್ರಿ  ಫಾರ್ ಓಲ್ಡ್ ಮೆನ್' ಚಿತ್ರದಲ್ಲಿನ ನಟನೆ ಅವರಿಗೆ  ಈ  ಪ್ರಶಸ್ತಿಯನ್ನು  ತಂದುಕೊಟ್ಟತು. ಡೇನಿಯಲ್ ಡೇ ಲೆವಿಸ್ ಅವರು `ದೇರ್ ವಿಲ್  ಬಿ ಬ್ಲಡ್' ಚಿತ್ರದ ತೈಲ ದೊರೆಯ ಪಾತ್ರಕ್ಕಾಗಿ ಅತ್ಯುತ್ತಮ  ನಟ ಪ್ರಶಸ್ತಿಯನ್ನು  ತಮ್ಮ ಹೆಗಲಿಗೆ  ಏರಿಸಿಕೊಂಡರು. ಈ ಪಾತ್ರವು ಅವರಿಗೆ ಈ ಮೊದಲೇ `ಗೋಲ್ಡನ್  ಗ್ಲೋಬ್' ಮತ್ತು `ಬಾಫ್ಟಾ' ಪ್ರಶಸ್ತಿಗಳನ್ನು  ತಂದು ಕೊಟ್ಟಿತ್ತು. 32ರ ಹರೆಯದ ಫ್ರಾನ್ಸ್ನ ನಟಿ ಮಾರಿಯೋನ್ ಕೊಟಿಲ್ಲಾಡ್ ಅವರು `ಲಾ ವೀ ಎನ್  ರೋಸ್' ಚಿತ್ರದಲ್ಲಿನ  ತಮ್ಮ ದುರಂತ ಪಾತ್ರದ ನಟನೆಗಾಗಿ ಅತ್ಯುತ್ತಮ  ನಟಿ  ಪ್ರಶಸ್ತಿ ಗೆದ್ದುಕೊಂಡರು. ಇದರೊಂದಿಗೆ 1960ರ ಬಳಿಕ ಅತ್ಯುತ್ತಮ  ಆಸ್ಕರ್ ಪ್ರಶಸ್ತಿ ಗೆದ್ದ ಫ್ರಾನ್ಸಿನ ಪ್ರಪ್ರಥಮ  ನಟಿ ಎಂಬ ಹೆಗ್ಗಳಿಕೆ ಅವರದಾಯಿತು. 1960ರಲ್ಲಿ ಫ್ರಾನ್ಸಿನ ಸೀಮೋನೆ ಸಿಗ್ನೊರೆಟ್ ಈ ಪ್ರಶಸ್ತಿ ಗೆದ್ದಿದ್ದರು. ಅತ್ಯುತ್ತಮ ಅನಿಮೇಶನ್ ಚಿತ್ರಕ್ಕೆ ನೀಡಲಾಗುವ ಪ್ರಶಸ್ತಿಯು ಪಿಕ್ಸರ್-ಡಿಸ್ನಿ  ಚಿತ್ರ `ರಟಟೌಯಿಲ್' ಚಿತ್ರಕ್ಕೆ ಲಭಿಸಿತು.

2008: ದೇಶದ ಮೊದಲ ಮಹಿಳಾ ರಾಷ್ಟ್ರಪತಿಯಾಗಿ ಜುಲೈ ತಿಂಗಳಲ್ಲಿ ಆಯ್ಕೆಯಾದ ಪ್ರತಿಭಾ ಪಾಟೀಲ್ ಅವರು ಸಂಸತ್ತಿನ ಜಂಟಿಸದನಗಳನ್ನು ಉದ್ದೇಶಿಸಿ ಚೊಚ್ಚಲ ಭಾಷಣ ಮಾಡಿದರು. 50 ನಿಮಿಷ ಅವಧಿಯಲ್ಲಿ 19 ಪುಟಗಳ ಅವರ ಲಿಖಿತ ಭಾಷಣವನ್ನು ಅತಿ ಗಣ್ಯರ ಗ್ಯಾಲರಿಯಲ್ಲಿ ಕುಳಿತ ಅವರ ಪತಿ ದೇವಿ ಸಿಂಗ್ ಶೆಖಾವತ್ ಅವರೂ ಆಲಿಸಿದರು.

 2008: ಅರಬ್ಬಿ ಸಮುದ್ರದ ಸುಪ್ತ ದ್ವೀಪಗಳಲ್ಲಿ ಆಶ್ರಯ ಪಡೆದು ಕರ್ನಾಟಕ ರಾಜ್ಯದ ಪ್ರಮುಖ ಕೇಂದ್ರಗಳಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸಲು ಪಾಕಿಸ್ಥಾನ ಮೂಲದ ಭಯೋತ್ಪಾದಕ ಸಂಘಟನೆಗಳು ಹವಣಿಸುತ್ತಿವೆ ಎಂದು ರಾಜ್ಯದ ಪೊಲೀಸ್ ಇಲಾಖೆ ಮತ್ತು ಕರಾವಳಿ ರಕ್ಷಣಾ ಪಡೆಗೆ ಕೇಂದ್ರ ಗುಪ್ತಚರ ಇಲಾಖೆ ತಿಳಿಸಿತು. ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲೆಗಳ ವ್ಯಾಪ್ತಿಯ ಅರಬ್ಬಿ ಸಮುದ್ರದಲ್ಲಿ ಇರುವ ದ್ವೀಪಗಳಲ್ಲಿ ಸುಮಾರು 26 ದ್ವೀಪಗಳನ್ನು ಉಗ್ರರು ತಮ್ಮ ನೆಲೆಯಾಗಿ ಗುರುತಿಸಿಕೊಂಡಿದ್ದಾರೆ. ಇಲ್ಲಿ ಮಾರಕಾಸ್ತ್ರಗಳನ್ನು ಬಚ್ಚಿಡಲು ಅವರು ಸಿದ್ಧತೆ ನಡೆಸಿದ್ದು, ಎಚ್ಚರಿಕೆ ವಹಿಸಬೇಕು ಎಂದು ಕೇಂದ್ರ ಗುಪ್ತಚರ ಇಲಾಖೆ ಹೇಳಿತು.

2008: ಉಗ್ರರ ವಿರುದ್ಧ ಕಾರ್ಯಾಚರಣೆ ಮುಂದುವರೆಸಿದ ಸಿಓಡಿ ಪೊಲೀಸರು ಮತ್ತೊಬ್ಬ ಶಂಕಿತ ಉಗ್ರ ಸೈಯದ್ ಸಾದಿಕ್ ಸಮೀರ್ ಎಂಬಾತನನ್ನು ಬೆಂಗಳೂರಿನ ಗುರಪ್ಪನ ಪಾಳ್ಯದಲ್ಲಿ ಬಂಧಿಸಿದರು.

2008: ಮುಳ್ಳೇರಿಯಾ ಸಮೀಪದ ಕೋಟೂರು ಎರಿಂಜೇರಿಯ ಚೆಂಡೆಮೂಲೆಯ ಸುಧಾಮ ಮಣಿಯಾಣಿ (69) ಎಂಬುವವರು ಮನೆಯ ಸಮೀಪದ ಸುರಂಗವೊಂದರ ಕೆಸರಿನಲ್ಲಿ ಸಿಲುಕಿಕೊಂಡು ಅದೃಷ್ಟವಶಾತ್ ಬದುಕಿ ಬಂದರು.  
ತಮ್ಮ ಮನೆಯ ಹಿತ್ತಲಿನಲ್ಲಿರುವ ಸುರಂಗದಿಂದ ಕೃಷಿಗೆ ಸಾಕಾಗುವಷ್ಟು ನೀರು ಹರಿಯುತ್ತಿಲ್ಲ ಎಂದು, ನೀರಿನ ಹರಿಯುವಿಕೆಗೆ ಅಡ್ಡವಾಗುವ ಕಸಕಡ್ಡಿಗಳನ್ನು ತೆಗೆಯಲು ಸುರಂಗ ಪ್ರವೇಶಿಸಿದರು. ನಂತರ ಸುರಂಗದಲ್ಲಿನ ಕೆಸರಿನಲ್ಲಿ ಹೂತು ಹೋದರು. ಒಳ ಹೋದ ಸುಧಾಮರು ಎರಡು ಗಂಟೆಯಾದರೂ ಹೊರಬಾರದಿರುವುದನ್ನು ಗಮನಿಸಿದ ಅವರ ಮಕ್ಕಳು, ಕೂಡಲೇ ಅಪಾಯವನ್ನರಿತು ಸುರಂಗದ ಒಳ ಪ್ರವೇಶಿಸಿದರು. ಒಳಗೆ ಕುತ್ತಿಗೆ ತನಕ ಕೆಸರಿನಲ್ಲಿ ಹೂತು ಹೋಗಿದ್ದ ತಂದೆಯನ್ನು ಕಂಡು ದಿಗಿಲಿನಿಂದ ಊರವರಿಗೆ ವಿಷಯ ತಿಳಿಸಿದರು. ನಂತರ ಪಾತನಡ್ಕದ ಸುರಂಗ ಕಾಮಗಾರಿ ಪ್ರವೀಣರಾದ ಚರಳಿಮೂಲೆ ಕೃಷ್ಣ ನಾಯ್ಕ ಹಾಗೂ ಅಗ್ನಿಶಾಮಕ ದಳ ನಡೆಸಿದ ಕಾರ್ಯಾಚರಣೆಯಲ್ಲಿ ಸುಧಾಮ ಮಣಿಯಾಣಿ ಬದುಕಿ ಬಂದರು. ಏಕ ಮುಖವಾಗಿದ್ದ ಸುಮಾರು 80 ಮೀಟರ್ ಆಳದ ಸುರಂಗದೊಳಗೆ ಕುತ್ತಿಗೆ ತನಕ ಹೂತು ಹೋಗಿದ್ದ ಸುಧಾಮರು ಸುರಕ್ಷಿತವಾಗಿ ಹೊರ ಬಂದಾಗ ರಾತ್ರಿಯಾಗಿತ್ತು. ಸುಮಾರು ಐದು ಗಂಟೆಗಳ ಕಾಲ ನಡೆದ ಕಾರ್ಯಾಚರಣೆಯಲ್ಲಿ ಉಸಿರಾಟಕ್ಕಾಗಿ ವಿಶೇಷ ವ್ಯವಸ್ಥೆ ಕಲ್ಪಿಸಲಾಗಿತ್ತು. ಅಗ್ನಿಶಾಮಕ ದಳದ ಮನೋಜ್ ಹಾಗೂ ರಜೀಶ್ ಕಾರ್ಯಾಚರಣೆಯಲ್ಲಿ ಸಹಕರಿಸಿದ್ದರು.

2008: ಇದೇ ಮೊದಲ ಬಾರಿಗೆ ಭಾರತೀಯ ಮೂಲದ ಅಮೆರಿಕದ ಪ್ರಜೆ ನವಜೀತ್ ಕೇ. ಬಾಲ್ ಎಂಬ ಮಹಿಳೆ  ಮೆಸಾಚುಸೆಟ್ಸಿನ  ಕಂದಾಯ ಇಲಾಖೆಯ ಮುಖ್ಯಸ್ಥರಾಗಿ ನೇಮಕಗೊಂಡರು. ಅಮೆರಿಕದಲ್ಲಿ ಅಲ್ಪಸಂಖ್ಯಾತ ಸಮುದಾಯದ ಒಬ್ಬರು ಕಂದಾಯ ಇಲಾಖೆಯ ಮುಖ್ಯಸ್ಥರಾಗಿ ನೇಮಕವಾದದ್ದು ಇದೇ ಪ್ರಥಮ.

2008: ಅನುಚಿತ ವರ್ತನೆ ತೋರಿದ ಕಾರಣಕ್ಕಾಗಿ ಭಾರತ ತಂಡದ ವೇಗದ ಬೌಲರ್ ಇಶಾಂತ್ ಶರ್ಮ ಮೇಲೆ ಹೊಬಾರ್ಟಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ಮ್ಯಾಚ್ ರೆಫರಿ ಜೆಫ್ ಕ್ರೋವ್ ಪಂದ್ಯ ಸಂಭಾವನೆಯ ಶೇಕಡಾ ಹದಿನೈದರಷ್ಟು ಮೊತ್ತದ ದಂಡ ವಿಧಿಸಿದರು.  ಆದರೆ ಮಹೇಂದ್ರ ಸಿಂಗ್ ದೋನಿ ಬಳಗವು ಕ್ರೋವ್ ಈ ತೀರ್ಮಾನವನ್ನು ಆಕ್ಷೇಪಿಸಿತು. ಇಶಾಂತ್ ಆ ರೀತಿಯಲ್ಲಿ ವರ್ತಿಸಿದ್ದು ಎದುರಾಳಿ ಪಡೆಯವರು ಕೀಟಲೆ ಮಾಡಿ ಕೆಣಕಿದ್ದರಿಂದ ಎಂದು ಪ್ರತಿದೂರು ಕೂಡ ನೀಡಿತು.

2007: ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕರ್ನಾಟಕದ ಗುಲ್ಬರ್ಗದಿಂದ 12 ಕಿ.ಮೀ. ದೂರದ ಸರಡಗಿ ಗ್ರಾಮದಲ್ಲಿ ತಮ್ಮ ಕನಸಿನ ಕೂಸಾದ ಸುವರ್ಣ ಗ್ರಾಮೋದಯ ಯೋಜನೆಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. 

2007: ಭದ್ರಾವತಿಯ ಬೈಪಾಸ್ ರಸೆಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ 7 ಮಂದಿ ಸೇರಿದಂತೆ 9 ಮಂದಿ ಮೃತರಾದರು. ಮಾರುತಿ ವ್ಯಾನ್ ಮತ್ತು ಟ್ಯಾಂಕರ್ ಮುಖಾಮುಖಿ ಡಿಕ್ಕಿಯಾಗಿ ಈ ದುರಂತ ಸಂಭವಿಸಿತು.

2007: ಪಾನ್ ಮಸಾಲ ಖ್ಯಾತಿಯ ಮಾಣಿಕ್ ಚಂದ್ ಸಮೂಹವು ತನ್ನ ಕುಡಿಯುವ ನೀರು ಬ್ರ್ಯಾಂಡ್ ಉತ್ಪನ್ನವಾದ `ಆಕ್ಸಿರಿಚ್'ನ ಆಮ್ಲಜನಕೀಕರಣ ಪ್ರಕ್ರಿಯೆಗೆ ಭಾರತೀಯ ಹಕ್ಕುಸ್ವಾಮ್ಯ (ಪೇಟೆಂಟ್) ಪಡೆದುಕೊಂಡಿತು. ಮಾಣಿಕ್ ಚಂದ್ ಸಮೂಹದ ಅಧ್ಯಕ್ಷ ರಸಿಕ್ ಲಾಲ್ ಮಾಣಿಕ್ ಚಂದ್ ಧಾರಿವಾಲ್ ಅವರು ಬೆಂಗಳೂರಿನಲ್ಲಿ ಈ ವಿಚಾರ ಪ್ರಕಟಿಸಿದರು. ವಿಶೇಷ ತಂತ್ರಜ್ಞಾನದ ಮೂಲಕ ಈ ನೀರಿನಲ್ಲಿ ಶೇಕಡಾ 300ರಷ್ಟು ಕರಗಿದ ಆಮ್ಲಜನಕವನ್ನು ಹೆಚ್ಚುವರಿಯಾಗಿ ಸೇರಿಸಲಾಗುತ್ತದೆ. ಈ ತಂತ್ರಜ್ಞಾನದ ಬಳಕೆ ಇದೇ ಪ್ರಥಮ. ಹಾಗಾಗಿ ಇದರ ಮೇಲೆ ಪೇಟೆಂಟ್ ಪಡೆಯಲಾಯಿತು.

2006: ಬಾಂಗ್ಲಾದೇಶದ ರಾಜಧಾನಿ ಢಾಕಾ ನಗರದ ಮಧ್ಯಭಾಗದ ಆರು ಮಹಡಿಯ ಕಟ್ಟಡ ಕುಸಿದು ಕನಿಷ್ಠ 16 ಮಂದಿ ಮೃತರಾಗಿ ಇತರ ಹಲವರು ಅವಶೇಷಗಳ ಅಡಿ ಸಿಲುಕಿದರು.

2006: `ಬ್ಲ್ಯಾಕ್' ಮತ್ತು `ಪರಿಣೀತಾ' ತಾಂತ್ರಿಕ ವರ್ಗದ ಫಿಲ್ಮಫೇರ್ ಪ್ರಶಸ್ತಿಗಳನ್ನು ಪಡೆದುಕೊಂಡವು. ಉತ್ತಮ ನಟ ಪ್ರಶಸ್ತಿ ಅಮಿತಾಭ್ ಬಚ್ಚನ್ ಅವರಿಗೂ ಉತ್ತಮ ನಟಿ ಪ್ರಶಸ್ತಿ ರಾಣಿ ಮುಖರ್ಜಿ ಅವರಿಗೂ ಲಭಿಸಿತು.

2005: ನೋಬೆಲ್ ಪ್ರಶಸ್ತಿ ವಿಜೇತ ಮಾನವ ಹಕ್ಕುಗಳ ಸಂಘಟನೆ `ಅಮ್ನೆಸ್ಟಿ ಇಂಟರ್ ನ್ಯಾಷನಲ್' ಸ್ಥಾಪಕ ಪೀಟರ್ ಬೆನೆನ್ಸನ್ ತಮ್ಮ 83ನೇ ವಯಸ್ಸಿನಲ್ಲಿ ನಿಧನರಾದರು.

2001: ಜಗತ್ತಿನ ಖ್ಯಾತ ಬ್ಯಾಟ್ಸ್ ಮನ್ ಎಂದು ಹೆಸರು ಪಡೆದ ಸರ್ ಡೊನಾಲ್ಡ್ ಜಾರ್ಜ್ ಬ್ರಾಡ್ಮನ್ (1908-2001) ನಿಧನರಾದರು. ಸರಾಸರಿ 99.94 ರನ್ನುಗಳು, 10 ದ್ವಿಶತಕಗಳು, ಎರಡು ತ್ರಿಶತಕಗಳನ್ನು ಸಿಡಿಸುವ ಮೂಲಕ ಇಪ್ಪತ್ತನೇ ಶತಮಾನದ ಶ್ರೇಷ್ಠ ಬ್ಯಾಟ್ಸ್ಮನ್ ಎಂಬ ಹೆಗ್ಗಳಿಕೆಗೆ ಅವರು ಪಾತ್ರರಾಗಿದ್ದರು.

 1993: ದಕ್ಷಿಣ ಆಫ್ರಿಕಾದ ಕೇಪ್ ಟೌನಿನಲ್ಲಿ ನಡೆದ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 19.5 ಓವರುಗಳಲ್ಲಿ 43 ರನ್ನುಗಳನ್ನು ಗಳಿಸಿದ ಪಾಕಿಸ್ಥಾನ 2001ರ ವರೆಗಿನ ದಾಖಲೆಗಳಲ್ಲಿ ಅತ್ಯಂತ ಕಡಿಮೆ ರನ್ ಗಳಿಕೆಯ ದಾಖಲೆ ಮಾಡಿತು.

1988: ಭಾರತದ ಮೊತ್ತ ಮೊದಲ ನೆಲದಿಂದ ನೆಲಕ್ಕೆ ಚಿಮ್ಮುವ `ಪೃಥ್ವಿ' ಕ್ಷಿಪಣಿಯನ್ನು ಮೊದಲ ಬಾರಿಗೆ ಯಶಸ್ವಿಯಾಗಿ ಪರೀಕ್ಷಾರ್ಥ ಹಾರಿಸಲಾಯಿತು.

1986: ಫಿಲಿಪ್ಪೀನ್ಸ್ ಅಧ್ಯಕ್ಷ ಫರ್ಡಿನಾಂಡ್ ಮಾರ್ಕೋಸ್ ರಾಷ್ಟ್ರ ಬಿಟ್ಟು ಓಡಿ ಹವಾಯಿಯಲ್ಲಿ ಆಶ್ರಯ ಪಡೆದರು.

1964: ಮಹಮ್ಮದ್ ಅಲಿ (ಕ್ಯಾಸಿಯಸ್ ಕ್ಲೇ) ಮಿಯಾಮಿಯಲ್ಲಿ ಸೋನಿ ಲಿಸ್ಟನ್ ಅವರನ್ನು ಸೋಲಿಸಿ ಮೊತ್ತ ಮೊದಲ ಬಾರಿಗೆ ವಿಶ್ವ ಹೆವಿ ವೇಯ್ಟ್ ಬಾಕ್ಸಿಂಗ್ ಪ್ರಶಸ್ತಿ ಗೆದ್ದುಕೊಂಡರು. 

1953: ಸಲಾಖೆಯ ಗೊಂಬೆಯಾಟದ ಕಲೆಗೆ ಅಂತರರಾಷ್ಟ್ರೀಯ ಮನ್ನಣೆ ತಂದುಕೊಟ್ಟ ದತ್ತಾತ್ರೇಯ ಅರಳಿಕಟ್ಟೆ ಅವರು ಅರಳಿಕಟ್ಟೆ ರಾಮರಾಯರು- ಲಲಿತಮ್ಮ ದಂಪತಿಯ ಮಗನಾಗಿ ಶೃಂಗೇರಿ ಸಮೀಪದ ಅರಳಿಕಟ್ಟೆ ಎಂಬ ಸ್ಥಳದಲ್ಲಿ ಜನಿಸಿದರು. ಅಂದಾಜು 9-10 ಕಿಲೋಗ್ರಾಂ ತೂಕದ ಗೊಂಬೆಗಳನ್ನು ಸಲಾಖೆಯಿಂದ ಹತೋಟಿಗೆ ಒಳಪಡಿಸಿ ಪೌರಾಣಿಕ ಪ್ರಸಂಗಗಳಿಗೆ ಕರ್ನಾಟಕ ಸಂಗೀತ, ನೃತ್ಯ, ನಾಟಕದ ಲೇಪ ಹಚ್ಚಿ, ಸರಳ ಮಾತುಗಾರಿಕೆಯ ಮೂಲಕ ಪ್ರೇಕ್ಷಕರ ಎದುರು ಕಥೆ ಬಿಚ್ಚುವ ಕಲೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ ದತ್ತಾತ್ರೇಯ ಅವರಿಗೆ ದೇಶ ವಿದೇಶಗಳಲ್ಲೂ ಮನ್ನಣೆ, ಪ್ರಶಸ್ತಿಗಳು ಲಭಿಸಿವೆ. ಡಿಡಿ, ಇಂಟರ್ ನ್ಯಾಷನಲ್ ಟಿವಿ ಚಾನೆಲ್ಲುಗಳಲ್ಲೂ ಇವರ ಸಂದರ್ಶನ, ಗೊಂಬೆಯಾಟಗಳ ಸಾಕ್ಷ್ಯಚಿತ್ರಗಳು ಪ್ರದರ್ಶನಗೊಂಡಿವೆ.

1938: ಭಾರತದ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಫರೂಖ್ ಎಂಜಿನಿಯರ್ ಹುಟ್ಟಿದರು. ವಿಶ್ವಕಪ್ ಪಂದ್ಯದಲ್ಲಿ `ಪಂದ್ಯ ಶ್ರೇಷ್ಠ' ಪ್ರಶಸ್ತಿ ಪಡೆದ ಮೊದಲ ವಿಕೆಟ್ ಕೀಪಿಂಗ್ ಬ್ಯಾಟ್ಸ್ ಮನ್ ಎಂಬ ಖ್ಯಾತಿಗೆ ಇವರು ಪಾತ್ರರಾದರು.

 1914: ಇಂಗ್ಲಿಷ್ ಕಲಾವಿದ ಹಾಗೂ `ಅಲೀಸ್ ಇನ್ ವಂಡರ್ ಲ್ಯಾಂಡ್' ಇಲ್ಲಸ್ಟ್ರೇಟರ್ ಜಾನ್ ಟೆನ್ನೀಲ್ ನಿಧನರಾದರು.

1894: ಮೆರ್ವಾನ್ ಷೆರಿಯರ್ ಇರಾನಿ (1894-1969) ಹುಟ್ಟಿದ ದಿನ. `ಮೆಹರ್ ಬಾಬಾ' ಎಂದೇ ಪಶ್ಚಿಮ ಭಾರತದಲ್ಲಿ ಖ್ಯಾತರಾಗಿರುವ ಈ ಈ ಆಧ್ಯಾತ್ಮಿಕ ಗುರು ತಮ್ಮ ಬದುಕಿನ 44 ವರ್ಷಗಳ ಕಾಲ `ಮೌನ' ಆಚರಿಸಿದರು.

1862: ಅಮೆರಿಕದ ಬ್ಯಾಂಕ್ ನೋಟುಗಳಾದ `ಗ್ರೀನ್ ಬ್ಯಾಕ್ಸ್' ಗಳನ್ನು ಅಂತರ್ಯುದ್ಧ ಕಾಲದಲ್ಲಿ ಅಧ್ಯಕ್ಷ ಅಬ್ರಹಾಂ ಲಿಂಕನ್ ಮೊತ್ತ ಮೊದಲ ಬಾರಿಗೆ ಬಿಡುಗಡೆ ಮಾಡಿದರು.

1778: ಜೋಸ್ ಡೆ ಸಾನ್ ಮಾರ್ಟಿನ್ (1778-1850) ಹುಟ್ಟಿದ ದಿನ. ಅರ್ಜೆಂಟೀನಾದ ಯೋಧ, ಮುತ್ಸದ್ಧಿ ಹಾಗೂ ರಾಷ್ಟ್ರೀಯ ನಾಯಕನಾದ ಈತ 1812ರಲ್ಲಿ ಅರ್ಜೆಂಟೀನಾ, 1818ರಲ್ಲಿ ಚಿಲಿ, 1821ರಲ್ಲಿ ಪೆರುವಿನಲ್ಲಿ ಸ್ಪಾನಿಷ್ ಆಳ್ವಿಕೆ ವಿರುದ್ಧ ಕ್ರಾಂತಿಗಳನ್ನು ಮುನ್ನಡೆಸಲು ನೆರವಾದರು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Friday, February 27, 2009

Brinjal Funeral..!

Brinjal Funeral!! 


Members of GM-Free-Karnataka are coming together on Saturday, 28th February, 2009 at to take a Shava-Yatra (Funeral Procession) of Brinjal which will culminate in handing over petitions to the Health minister.

You are invited to participate with friends in large numbers and show solidarity

in this effort to stop the entry  of Bt Brinjal in Karnataka.  GM-Free-Karnataka  want your help to pressurizing the State Government to declare  GM Free Karnataka .

Place : K.R. Circle
Time : 10 am - 12 pm
Date : 28th Feb, 2009.

Do You Know?

Three months ago, the 'I AM NO LAB RAT' campaign was launched. The campaign's objective was to prevent the commercialization of Bt Brinjal in India. Bt Brinjal is created by inserting a gene [Cry 1Ac] from the soil bacterium Bacillus thuringiensis into Brinjal. The Bt Brinjal, like many other Genetically Modified (GM) crops has been now shown by independent analysis to impact health adversely. In other studies too, when GM food was tested on rats, the results were alarming. Evidence linked GM with stunted growth, impaired immune systems, potentially precancerous cell growth in the intestines, liver/pancreas/intestinal damage and even inter-generational effects. Latest studies have confirmed that GM foods affect fertility.

More than 70,000 concerned citizens like you sent petitions to the Union Health Minister Dr. Anbumani Ramadoss telling him that they would not become lab rats in this genetic experiment. With every passing day, the campaign grew, spreading like a revolution across the nation. On the 10th of December your voice won. The health minister heard you and came out into the open, acknowledging concerns about GM food.

 Now it is time to take forward our struggle and stop GM for good. It is time to tell the State Health Minister 'I AM NO LAB RAT'. Exercise the power of your voice once again.
 
 Pl Sign the petition and Fax or Mail  it to
 
Honorable Minister, Ministry of Health and Family welfare, 2nd  floor(South), Vikasa soudha,Ambedker veedi, Bangalore- 560 001, Fax: 080-22256093
 
G. Krishna Prasad of GM Free Karnataka requests you participate and is  looking forward Volunteers to coordinate 'Iam No Labrat' activities.

Contact for details : 

Krishna Prasad,Sahaja Samrudha   - 9880862058 
Manjunath ,Samvadha -                     9480330652
Sathish Natarajan,sahaja samrudha-   9448488831
Sejal , AID India                            -    9901201279  

Click the image and sign the memorandum




ಇಂದಿನ ಇತಿಹಾಸ History Today ಫೆಬ್ರುವರಿ 24

ಇಂದಿನ ಇತಿಹಾಸ  

ಫೆಬ್ರುವರಿ 24

ಆರು ತಿಂಗಳ ಅವಧಿಯಲ್ಲಿ ದೇಶದ 800 ರೈತರು ಆತ್ಮಹತ್ಯೆ ಮಾಡಿಕೊಂಡರು. ಇದರಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು  ಅಂದರೆ 607 ರೈತರನ್ನು ಕಳೆದುಕೊಂಡಿತು. ಆಂಧ್ರದ 114 ಮತ್ತು ಕರ್ನಾಟಕದ 73 ರೈತರು ಆತ್ಮಹತ್ಯೆ ಮಾಡಿಕೊಂಡರು. ಕೇರಳದಲ್ಲಿ 13 ರೈತರು ನೇಣಿಗೆ ಶರಣಾದರು ಎಂದು ವರದಿಯೊಂದು ಬಹಿರಂಗಪಡಿಸಿತು.

2008: ಆರು ತಿಂಗಳ ಅವಧಿಯಲ್ಲಿ ದೇಶದ 800 ರೈತರು ಆತ್ಮಹತ್ಯೆ ಮಾಡಿಕೊಂಡರು. ಇದರಲ್ಲಿ ಮಹಾರಾಷ್ಟ್ರ ಅತಿ ಹೆಚ್ಚು  ಅಂದರೆ 607 ರೈತರನ್ನು ಕಳೆದುಕೊಂಡಿತು. ಆಂಧ್ರದ 114 ಮತ್ತು ಕರ್ನಾಟಕದ 73 ರೈತರು ಆತ್ಮಹತ್ಯೆ ಮಾಡಿಕೊಂಡರು. ಕೇರಳದಲ್ಲಿ 13 ರೈತರು ನೇಣಿಗೆ ಶರಣಾದರು ಎಂದು ವರದಿಯೊಂದು ಬಹಿರಂಗಪಡಿಸಿತು. ಪಂಜಾಬ್, ಹರಿಯಾಣ, ದೆಹಲಿ, ಗುಜರಾತ್, ರಾಜಸ್ಥಾನ, ಗೋವಾ ರಾಜ್ಯಗಳು ಈ ಸಂಬಂಧ ಸಮರ್ಪಕ ಮಾಹಿತಿ ನೀಡಿಲ್ಲ ಎಂದು ಕೇಂದ್ರ ಕೃಷಿ ಸಚಿವಾಲಯ ಹೇಳಿತು. ಪರಿಹಾರ ಕ್ರಮವಾಗಿ ಕೇಂದ್ರ ಸರ್ಕಾರ ಈತನಕ ಆಂಧ್ರದ 16 ಜಿಲ್ಲೆಗಳಿಗೆ 9650 ಕೋಟಿ ಬಿಡುಗಡೆ  ಮಾಡಿದೆ. ಕರ್ನಾಟಕದ 6 ಜಿಲ್ಲೆಗಳಲ್ಲಿ 2389.64 ಕೋಟಿ, ಕೇರಳದ 3 ಜಿಲ್ಲೆಗಳಲ್ಲಿ 765.24 ಕೋಟಿ ಮತ್ತು ಮಹಾರಾಷ್ಟ್ರದ 6 ಜಿಲ್ಲೆಗಳಲ್ಲಿ ರೂ 3879.26 ಕೋಟಿ ಹಣ ಕೇಂದ್ರದಿಂದ ಬಿಡುಗಡೆ ಆಗಿದೆ ಎಂದು ವರದಿ ಹೇಳಿತು.

2008: ಕರ್ನಾಟಕ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟ ಹಾಗೂ ಇತರೆ ಸಂಘಟನೆಗಳ ಕರೆಯ ಮೇರೆಗೆ ಆರಂಭವಾದ ಅನಿರ್ದಿಷ್ಟಾವಧಿ ಮುಷ್ಕರ ಮೂರನೇ ದಿನಕ್ಕೆ ಕಾಲಿಟ್ಟಿತು.

 2008: ಕರ್ತವ್ಯ ನಿರ್ವಹಿಸುವ ವೈದ್ಯರಿಗೆ ಸೂಕ್ತ ಭದ್ರತೆ ನೀಡಲಾಗುತ್ತದೆ ಎಂದು ರಾಜ್ಯಪಾಲರ ಸಲಹೆಗಾರ ಪಿ.ಕೆ.ಎಚ್. ತರಕನ್ ಅವರು ಭರವಸೆ ನೀಡಿದ ಹಿನ್ನೆಲೆಯಲ್ಲಿ ಬೆಂಗಳೂರು ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಕೇಂದ್ರದ (ಬಿಎಂಸಿಆರ್ಐ) ವ್ಯಾಪ್ತಿಯ ಐದು ಆಸ್ಪತ್ರೆಗಳ ಕಿರಿಯ ವೈದ್ಯರು ತಮ್ಮ ಮುಷ್ಕರವನ್ನು ಹಿಂತೆಗೆದುಕೊಂಡರು.

2008: ಮರಾಠಿ ಮಾತನಾಡುವವರು ಹೆಚ್ಚಿನ ಸಂಖ್ಯೆಯಲ್ಲಿರುವ ಕರ್ನಾಟಕ-ಮಹಾರಾಷ್ಟ್ರ ಗಡಿಯ 814 ಗ್ರಾಮಗಳು ಕರ್ನಾಟಕಕ್ಕೇ ಸೇರುವುದು ಸೂಕ್ತ ಎಂಬುದನ್ನು ರಾಜ್ಯ ಪುನರ್ ವಿಂಗಡಣಾ ಆಯೋಗ (ಎಸ್ ಆರ್ ಸಿ) ಸಮರ್ಥಿಸಿತ್ತು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಟಿಗೆ ಸಲ್ಲಿಸಿದ ಪ್ರಮಾಣಪತ್ರದಲ್ಲಿ ತಿಳಿಸಿತು. ಈ ಹಳ್ಳಿಗಳಲ್ಲಿ ಇರುವ ಜನರ ಒಳಿತಿನ ದೃಷ್ಟಿಯಿಂದ ಇವು ಕರ್ನಾಟಕಕ್ಕೇ ಸೇರಬೇಕು ಎನ್ನುವುದು ಆಯೋಗದ ಸ್ಪಷ್ಟ ಅಭಿಪ್ರಾಯವಾಗಿತ್ತು ಎಂದೂ ಕೇಂದ್ರ ಹೇಳಿತು. 2006ರ ನವೆಂಬರ್ 16ರಂದು ಅಂದಿನ ಸಾಲಿಸಿಟರ್ ಜನರಲ್ ಜಿ.ಇ. ವಹನ್ವತಿ ಅವರು ಸಿದ್ಧಪಡಿಸಿದ ದಾಖಲೆಗಳ ಆಧಾರದಲ್ಲಿ ಕೇಂದ್ರ ಗೃಹ ಸಚಿವಾಲಯದ ನಿರ್ದೇಶಕರು ಸಲ್ಲಿಸಿದ ಪ್ರಮಾಣಪತ್ರದಲ್ಲಿ ಈ ಅಂಶಗಳನ್ನು ಸ್ಪಷ್ಟಪಡಿಸಲಾಯಿತು. ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿ ವಿವಾದವು ನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ ಅವರ ಪೀಠದ ಮುಂದೆ ಮಾರ್ಚ್ 25ರಂದು ವಿಚಾರಣೆಗೆ ಬರುವ ಹಿನ್ನೆಲೆಯಲ್ಲಿ ಈ ಪ್ರಮಾಣಪತ್ರಕ್ಕೆ ಹೆಚ್ಚಿನ ಮಹತ್ವ ಬಂದಿತು.

2008: ಜರ್ಮನಿಯ ನಿರಂಕುಶ ದೊರೆ ರಕ್ತಪಿಪಾಸು ಅಡಾಲ್ಫ್ ಹಿಟ್ಲರ್ ಒಬ್ಬ ಚಿತ್ರ ಕಲಾವಿದನಾಗಿಯೂ ತನ್ನ ರಸಿಕತೆ ಮೆರೆದಿದ್ದ ಎಂಬುದಾಗಿ ನಾರ್ವೆ ಹೇಳಿತು. ರಕ್ತಕಾರಂಜಿಯ ವರ್ಣಗಳುಳ್ಳ ವ್ಯಂಗ್ಯ ಚಿತ್ರಗಳು ಹಾಗೂ ಅಣಕು ಚಿತ್ರಗಳನ್ನು ಆತ ರಚಿಸಿದ್ದ. ಹಿಟ್ಲರ್ ರಚಿಸಿದ ಚಿತ್ರಗಳು ತನ್ನ ಬಳಿ ಇವೆ ಎಂದು ನಾರ್ವೆ ಯುದ್ಧ ವಸ್ತುಸಂಗ್ರಹಾಲಯದ ನಿರ್ದೇಶಕ ಹ್ಯಾಕ್ ವಾಗ್ ಬಹಿರಂಗಪಡಿಸಿದರು.

2008: ವಿಪ್ರೊ ಲಿಮಿಟೆಡ್, ತನ್ನ ಜಾಗತಿಕ ಸೇವಾ ಕೇಂದ್ರಗಳನ್ನು ಮಲೇಷ್ಯಾದ ಕ್ವಾಲಾಲಂಪುರದಲ್ಲಿ ಆರಂಭಿಸಿತು. ಏಷ್ಯಾ ಪೆಸಿಫಿಕ್ ವಿಪ್ರೊದ ಪ್ರಮುಖ ಮಾರುಕಟ್ಟೆಯಾಗಿರುವುದರಿಂದ ಈ ಕೇಂದ್ರ ವಿವಿಧ ಭಾಷೆಗಳಲ್ಲಿ ಗ್ರಾಹಕರಿಗೆ ಸೇವೆ ಒದಗಿಸುವುದು ಎಂದು ವಿಪ್ರೊ ಇನ್ಫೊಟೆಕ್ ನ ವೃತ್ತಿಸೇವಾ ವಿಭಾಗದ ಮುಖ್ಯಸ್ಥ ತಾಂಡವ ಮೂರ್ತಿ ತಿಳಿಸಿದರು.

2007: ಮಣಿಪುರದ ಬಿಷನ್ ಪುರ ಜಿಲ್ಲೆಯಲ್ಲಿ ಉಗ್ರಗಾಮಿಗಳು ಚುನಾವಣಾ ಕರ್ತವ್ಯದಲ್ಲಿದ್ದ ಬೆಂಗಾವಲು ಪಡೆಯ ಮೇಲೆ ದಾಳಿ ನಡೆಸಿ ಕನಿಷ್ಠ 16 ಯೋಧರನ್ನು ಹತ್ಯೆ ಮಾಡಿ, ಐವರನ್ನು ಗಾಯಗೊಳಿಸಿದರು.

2007: ಶಿರಸಿಯ ಯಕ್ಷ ಋಷಿ ಹೊಸ್ತೋಟ ಮಂಜುನಾಥ ಭಾಗವತರನ್ನು ಅಗ್ನಿ ಸೇವಾ ಟ್ರಸ್ಟ್ ನೀಡುವ ಪ್ರತಿಷ್ಠಿತ ಪರಮದೇವ ಪ್ರಶಸ್ತಿಗೆ ಆಯ್ಕೆ ಮಾಡಲಾಯಿತು. ಯಕ್ಷಗಾನಕ್ಕಾಗಿ ತಮ್ಮ ಜೀವಮಾನವನ್ನೇ ಮುಡಿಪಾಗಿಟ್ಟ ಹೊಸ್ತೋಟ ಅವರ ರಾಮಾಯಣ ಹಾಗೂ ಮಹಾಭಾರತ ಮಹಾಕಾವ್ಯಗಳನ್ನು ಆಧರಿಸಿ ಸುಮಾರು 95ಕ್ಕೂ ಹೆಚ್ಚು ಪ್ರಸಂಗ, ಪರಿಸರ ಹಾಗೂ ಸಾಮಾಜಿಕ ವಿಷಯಕ್ಕೆ ಸಂಬಂಧಿಸಿದ 150ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದ್ದಾರೆ.

2007: ಕುಮಟಾದ ಗೌರೀಶ ಕಾಯ್ಕಿಣಿ ಪ್ರತಿಷ್ಠಾನದ 2006ನೇ ಸಾಲಿನ ಪ್ರಶಸ್ತಿಗೆ ಕಥೆಗಾರ ಕುಂ. ವೀರಭದ್ರಪ್ಪ ಅವರನ್ನು ಆಯ್ಕೆ ಮಾಡಲಾಯಿತು.

2007: ಬೆಂಗಳೂರಿನಲ್ಲಿ ನಡೆದ ಸರ್ವಪಕ್ಷಗಳ ಮುಖಂಡರ ಸಭೆಯು ಕಾವೇರಿ ನ್ಯಾಯಮಂಡಳಿಯ ಅಂತಿಮ ತೀರ್ಪನ್ನು ಸಂಪೂರ್ಣವಾಗಿ ತಿರಸ್ಕರಿಸಿತು. ತಜ್ಞರ ಜೊತೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳಲು ಸಭೆಯು ರಾಜ್ಯ ಸರ್ಕಾರಕ್ಕೆ ಸಲಹೆ ಮಾಡಿತು.

2007: ಫನಾ ಮತ್ತು ಧೂಮ್-2 ಬಾಲಿವುಡ್ ಚಿತ್ರಗಳಲ್ಲಿನ ಉತ್ತಮ ಅಭಿನಯಕ್ಕಾಗಿ ಕಾಜೋಲ್ ಮತ್ತು ಹೃತಿಕ್ ರೋಷನ್ ಅವರಿಗೆ ಮುಂಬೈಯಲ್ಲಿ ನಡೆದ ಸಮಾರಂಭದಲ್ಲಿ ಫಿಲಂಫೇರ್ ಶ್ರೇಷ್ಠ ನಟಿ ಮತ್ತು ನಟ ಪ್ರಶಸ್ತಿ ನೀಡಲಾಯಿತು.

2007: ಜಾರ್ಖಂಡ್ ರಾಜ್ಯವು ರಾಜಕೀಯ ಕ್ಷೇತ್ರದಲ್ಲಿ 2002ರಿಂದ 2007ರವರೆಗಿನ ಅವದಿಯಲ್ಲಿ ಸುಮಾರು 156ಕ್ಕೂ ಹೆಚ್ಚು ದಾಖಲೆಗಳನ್ನು ಮಾಡಿದ್ದಕ್ಕಾಗಿ ಲಿಮ್ಕಾ ದಾಖಲೆ ಪುಸ್ತಕಕ್ಕೆ ಸೇರ್ಪಡೆಯಾಯಿತು. ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸಂಪಾದಕ ವಿಜಯ ಘೋಷ್ ಅವರ ಸಹಿಯನ್ನು ಒಳಗೊಂಡ ದಾಖಲೆ ಸಂಬಂಧಿ ಪ್ರಮಾಣಪತ್ರವನ್ನು ಮುಖ್ಯಮಂತ್ರಿ ಮಧು ಕೋಡಾ ಅವರಿಗೆ ಲಿಮ್ಕಾ ಪ್ರತಿನಿಧಿಗಳು ನೀಡಿದರು. `ಜಾರ್ಖಂಡಿನ ಮಧು ಕೋಡಾ ಅವರು ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದ ಮೊತ್ತ ಮೊದಲ ಸ್ವತಂತ್ರ ಅಭ್ಯರ್ಥಿ. 2006ರ ಸೆಪ್ಟೆಂಬರ್ 18ರಂದು ಅವರು ಯುಪಿಎ ಮತ್ತು ನಾಲ್ವರು ಸ್ವತಂತ್ರ ಸದಸ್ಯರ ಬೆಂಬಲದೊಂದಿಗೆ ರಚನೆಯಾದ ಸಮ್ಮಿಶ್ರ ಸರ್ಕಾರದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು' ಎಂದು ಲಿಮ್ಕಾ ಪ್ರತಿನಿಧಿಗಳು ಕೋಡಾ ಅವರಿಗೆ ನೀಡಿದ ಪ್ರಮಾಣ ಪತ್ರ ಹೇಳಿದೆ.

2006: ಸಂಸ್ಕತ ಭಾರತಿ ಸಂಘಟನೆಯು ಸಂಸ್ಕತ ಸಂಭಾಷಣಾ ಶಿಬಿರ ವರ್ಷವನ್ನು ಆರಂಭಿಸಿತು. (24 ಫೆಬ್ರುವರಿ 2006ರಿಂದ 2007 ಮೇವರೆಗೆ)

2006: ಫಿಲಿಪ್ಪೀನ್ಸ್ ಅಧ್ಯಕ್ಷೆ ಗ್ಲೋರಿಯಾ ಅರೋಯೋ ಅವರು ದೇಶದಲ್ಲಿ ತುರ್ತು ಪರಿಸ್ಥಿತಿ ಘೋಷಿಸಿ ತಮ್ಮ ಸರ್ಕಾರ ಉರುಳಿಸಲು ಸಂಚು ರೂಪಿಸಿದ ಆಪಾದನೆಯಲ್ಲಿ ಸೇನಾಪಡೆಯ ಪ್ರಮುಖ ಅಧಿಕಾರಿಗಳನ್ನು ಬಂಧಿಸಲು ಆಜ್ಞಾಪಿಸಿದರು.

2006: ಭಾರತದ ಖ್ಯಾತ ಪರಮಾಣು ವಿಜ್ಞಾನಿ ಗೋವರ್ಧನ್ ಮೆಹ್ತಾ ಅವರಿಗೆ ತಮ್ಮ ದೇಶದಲ್ಲಿ ಸಂಚರಿಸಲು ಅಮೆರಿಕ ವಿದೇಶಾಂಗ ಸಚಿವಾಲಯ ಅನುಮತಿ ನೀಡಿತು. ಗೋವರ್ಧನ್ ಅವರಿಗೆ ವೀಸಾ ನಿರಾಕರಿಸಲಾಗಿದೆ ಎಂಬ ವರದಿಗಳಿಂದ ಉಂಟಾಗಿದ್ದ ಬಿಕ್ಕಟ್ಟು ಇದರಿಂದಾಗಿ ಪರಿಹಾರಗೊಂಡಿತು.

2006: ಗೋಧ್ರಾ ರೈಲು ದುರಂತದ ನಂತರ ಸಂಭವಿಸಿದ ಹಿಂಸಾಚಾರದಲ್ಲಿ ಭಸ್ಮವಾದ ಬೆಸ್ಟ್ ಬೇಕರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈಯ ಸೆಷನ್ಸ್ ನ್ಯಾಯಾಲಯವು 9 ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿತು. ದುಷ್ಕರ್ಮಿಗಳು 2002ರ ಮಾರ್ಚ್ 1ರಂದು ವಡೋದರಾದಲ್ಲಿನ ಬೆಸ್ಟ್ ಬೇಕರಿಗೆ ಬೆಂಕಿ ಹಚ್ಚಿದಾಗ 14 ಜನ ಸಜೀವ ದಹನಗೊಂಡಿದ್ದರು.

2006: ಅನುವಾದ ಅಕಾಡೆಮಿಯು ತಮಗೆ ನೀಡಿದ ಪ್ರಶಸ್ತಿಯನ್ನು ವಾಪಸ್ ಮಾಡಿ ದೇ. ಜವರೇಗೌಡ ಅವರು ಅಕಾಡೆಮಿ ಅಧ್ಯಕ್ಷ ಡಾ. ಪ್ರಧಾನ ಗುರುದತ್ತ ಅವರಿಗೆ ಪತ್ರ ಬರೆದರು. ಅಕಾಡೆಮಿ ಸ್ಥಾಪನೆಗೆ 30 ವರ್ಷ ಏಕಾಂಗಿಯಾಗಿ ದುಡಿದಿದ್ದೇನೆ. ಈಗ ಪ್ರಶಸ್ತಿ ಒಪ್ಪಿಕೊಂಡರೆ ಟೀಕೆ, ವಿಮರ್ಶೆ ಶುರುವಾಗುತ್ತದೆ. ಆದ್ದರಿಂದ ಪ್ರಮಾಣಪತ್ರ ಸಾಕು, ಪ್ರಶಸ್ತಿ ಬೇಡ ಎಂದು ದೇಜಗೌ ತಿಳಿಸಿದರು. 

1948: ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಜಯಲಲಿತಾ ಜನ್ಮದಿನ.

1946: ಜುವಾನ್ ಪೆರೋನ್ ಅವರು ಅರ್ಜೆಂಟೀನಾದ ಅಧ್ಯಕ್ಷರಾಗಿ ಆಯ್ಕೆಯಾದರು.

1945: ಈಜಿಪ್ಟಿನ ಪ್ರಧಾನಿ ಮಹೆರ್ ಪಾಶಾ ಅವರನ್ನು ಸಂಸತ್ತಿನಲ್ಲಿ ಜರ್ಮನಿ, ಮತ್ತು ಜಪಾನ್ ವಿರುದ್ಧದ ಸಮರಘೋಷಣೆ ಓದುತ್ತಿದ್ದಾಗ ಗುಂಡು ಹೊಡೆದು ಕೊಲ್ಲಲಾಯಿತು.

1942: ಭಾರತೀಯ ಸಂಜಾತೆ ಗಾಯತ್ರಿ ಚಕ್ರವರ್ತಿ ಸ್ಪಿವಕ್ ಜನಿಸಿದರು. ಈಕೆ ಲೇಖಕಿ, ಸಾಹಿತ್ಯ ವಿಮರ್ಶಕಿ, ಹಾಗೂ ಭಾಷಾಂತರಕಾರ್ತಿಯಾಗಿ ಖ್ಯಾತಿ ಗಳಿಸಿದರು. ತತ್ವಜ್ಞಾನಿ ಜಾಕಿಸ್ ಡೆರ್ರಿಡಾ ಪುಸ್ತಕವನ್ನು ಇವರು ಇಂಗ್ಲಿಷಿಗೆ ಭಾಷಾಂತರಿಸಿದ್ದರು.

1938: ಟೂಥ್ ಬ್ರಶ್ ಗಳು ನ್ಯೂಜೆರ್ಸಿಯ ಅರ್ಲಿಂಗ್ಟನ್ನಿನಲ್ಲಿ  ಮೊತ್ತ ಮೊದಲ ಬಾರಿಗೆ ವಾಣಿಜ್ಯ ಮಟ್ಟದಲ್ಲಿ ಉತ್ಪಾದನೆಯಾದವು.

1936: ಖ್ಯಾತ ಮರಾಠಿ ಕವಿ ಲಕ್ಷ್ಮೀಬಾಯಿ ತಿಲಕ್ ನಿಧನರಾದರು.

1934: ಬೆಂಡೆಟ್ಟೋ `ಬೆಟ್ಟಿನೊ' ಕ್ರಾಕ್ಸಿ ಹುಟ್ಟಿದ ದಿನ. ಇಟಲಿಯ ರಾಜಕಾರಣಿಯಾದ ಇವರು 1983-87ರ ಅವಧಿಯಲ್ಲಿ ರಾಷ್ಟ್ರದ ಮೊತ್ತ ಮೊದಲ ಸಮಾಜವಾದಿ ಪ್ರಧಾನಿಯಾಗಿದ್ದರು.

1920: ನಾನ್ಸಿ ಆಸ್ಟೊರ್ ಜನಿಸಿದರು. ಈಕೆ ಬ್ರಿಟಿಷ್ ಸಂಸತ್ತನ್ನು  ಉದ್ದೇಶಿಸಿ ಮಾತನಾಡಿದ ಪ್ರಥಮ ಮಹಿಳೆ. 

1825: ಇಂಗ್ಲಿಷ್ ಸಂಪಾದಕ ಥಾಮಸ್ ಬೌಲ್ಡರ್ (1754-1825) ನಿಧನರಾದರು. ಷೇಕ್ಸ್ ಪಿಯರ್, ಓಲ್ಡ್ ಟೆಸ್ಟಾಮೆಂಟ್ ಸೇರಿದಂತೆ ಹಲವು ಕೃತಿಗಳನ್ನು ಇವರು ಸಂಪಾದಿಸಿದ್ದರು.

1582: ಪೋಪ್ ಗ್ರೆಗೊರಿ ಅವರು `ಗ್ರೆಗೋರಿಯನ್ ಕ್ಯಾಲೆಂಡರ್' ಗೆ ಸಮ್ಮತಿ ನೀಡಿ ಅಧಿಕೃತ ಪ್ರಕಟಣೆ ನೀಡಿದರು. ಈ ಕ್ಯಾಲೆಂಡರ್ ಇಟಲಿ ಮತ್ತು ಸ್ಪೇನಿನಲ್ಲಿ ಅಕ್ಟೋಬರ್ 15ರಂದು ಅನುಷ್ಠಾನಕ್ಕೆ ಬಂದಿತು. 

1304: ಇಬ್ನ್ ಬಟೂಟ ಹುಟ್ಟಿದ. (1304-1368/69) ಈತ  ಮಧ್ಯಯುಗದ ಖ್ಯಾತ ಅರಬ್ ಪ್ರವಾಸಿ ಎಂಬುದಾಗಿ ಹೆಸರು ಪಡೆದ. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಫೆಬ್ರುವರಿ 23

ಇಂದಿನ ಇತಿಹಾಸ

ಫೆಬ್ರುವರಿ 23

`ಚೀನಿ ಕಮ್' ಚಿತ್ರದಲ್ಲಿ ಅಭಿನಯಕ್ಕಾಗಿ ನಟಿ ಟಬು ಫಿಲಂ ಫೇರ್ ಪ್ರಶಸ್ತಿಯ  `ಉತ್ತಮ ನಟಿ' ಗೌರವವನ್ನು ತಮ್ಮದಾಗಿಸಿಕೊಂಡರು. `ತಾರೆ ಜಮೀನ್ ಪರ್' ಚಿತ್ರದ ದರ್ಶೀಲ್ ಉತ್ತಮ ನಟ ಪ್ರಶಸ್ತಿ ಗಳಿಸಿದರು. ಶಾರುಕ್ ಖಾನ್ ನಟಿಸಿದ `ಚಕ್ ದೇ ಇಂಡಿಯ'ವು ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, `ಗುರು' ಚಿತ್ರಕ್ಕಾಗಿ ಎ. ಆರ್. ರೆಹಮಾನ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು.

2008: ಕನ್ನಡದ ಖ್ಯಾತ ಸಾಹಿತಿ ಯಶವಂತ ಚಿತ್ತಾಲ ಅವರಿಗೆ ಅವರ 
ಕರ್ಮಭೂಮಿಯಾದ ಮಹಾನಗರ ಮುಂಬೈಯಲ್ಲಿ ಅಪಾರ ಸಂಖ್ಯೆಯ ಕನ್ನಡಿಗರ ಸಮ್ಮುಖದಲ್ಲಿ ಕರ್ನಾಟಕ ಸರ್ಕಾರದ ಪ್ರತಿಷ್ಠಿತ ಪಂಪ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಮುಂಬೈಯ ಕನ್ನಡ ಸಂಘಗಳ ಸಹಕಾರದಿಂದ ಏರ್ಪಡಿಸಿದ ಸುವರ್ಣ ಕರ್ನಾಟಕ ಮುಂಬಯಿ ಉತ್ಸವದ ಸಂದರ್ಭದಲ್ಲಿ ನಾಡೋಜ ಪ್ರೊ. ದೇ.ಜವರೇಗೌಡ ಅವರು ಒಂದು ಲಕ್ಷ ರೂಪಾಯಿ ನಗದು, ಪ್ರಶಸ್ತಿ ಪುತ್ಥಳಿ, ಪ್ರಶಸ್ತಿ ಪತ್ರವನ್ನು ಒಳಗೊಂಡ ಪ್ರಶಸ್ತಿಯನ್ನು ಯಶವಂತ ಚಿತ್ತಾಲ ಅವರಿಗೆ ನೀಡಿದರು.

2008: ಬೀದರಿನ ವಾಯುಪಡೆಯ ತರಬೇತಿ ಕೇಂದ್ರದಲ್ಲಿ ನಡೆದ ಸಮಾರಂಭದಲ್ಲಿ ಕೇಂದ್ರ ರಕ್ಷಣಾ ಸಚಿವ ಎ.ಕೆ. ಆಂಟನಿ  ಅವರು ಬ್ರಿಟನ್ ನಿರ್ಮಿತ ಅತ್ಯಾಧುನಿಕ `ಹಾಕ್ ಎಂ.ಕೆ. 132' (ಅಡ್ವಾನ್ಸ್ಡ್ ಜೆಟ್ ಟ್ರೇನರ್) ಯುದ್ಧವಿಮಾನಗಳನ್ನು ದೇಶಕ್ಕೆ ಸಮರ್ಪಿಸಿದರು. ಇದೇ ಸಂದರ್ಭದಲ್ಲಿ ವಾಯುಪಡೆಯ ಅಂಚೆ ವಿಭಾಗವು ಸಿದ್ಧಪಡಿಸಿದ ವಿಶೇಷ ಲಕೋಟೆಯನ್ನು ರಕ್ಷಣಾ ಸಚಿವರು ಬಿಡುಗಡೆಗೊಳಿಸಿದರು.

2008: ವಾಣಿಜ್ಯ ಉದ್ದೇಶದ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕ ಕಡ್ಡಾಯ ಆದೇಶ ವಿರೋಧಿಸಿ ರಾಜ್ಯ ಲಾರಿ ಮಾಲೀಕರು ಹಾಗೂ ಏಜೆಂಟರ ಸಂಘಗಳ ಒಕ್ಕೂಟ ಹಾಗೂ ಇತರೆ ಸಂಘಟನೆಗಳು ಕರೆ ಮೇರೆಗೆ ನಡೆದ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರ್ನಾಟಕ ರಾಜ್ಯದಾದ್ಯಂತ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ರಾಜ್ಯದ ದಕ್ಷಿಣ ಭಾಗದಲ್ಲಿ ಮುಷ್ಕರ ಬಹುತೇಕ ಯಶಸ್ವಿಯಾದರೆ, ಉತ್ತರ ಕರ್ನಾಟಕದಲ್ಲಿ ಹೆಚ್ಚಿನ ಬೆಂಬಲ ವ್ಯಕ್ತವಾಗಲಿಲ್ಲ.

2008: ದಿ ಪ್ರಿಂಟರ್ಸ್ (ಮೈಸೂರು) ಪ್ರೈವೇಟ್ ಲಿಮಿಟೆಡ್ ಮಾಜಿ ನಿರ್ದೇಶಕ ಮತ್ತು ರಾಜ್ಯ ಆಟೊಮೊಬೈಲ್ ವಿತರಕರ ಸಂಘಟನೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಖ್ಯಾತ ಉದ್ಯಮಿ ವಿ.ಟಿ.ವೇಲು (88) ಬೆಂಗಳೂರಿನಲ್ಲಿ ನಿಧನರಾದರು. ಉದ್ಯಮಿ ವಿ.ಎಸ್. ತಿರುವೆಂಗಡಸ್ವಾಮಿ ಮುದಲಿಯಾರ್ ಅವರ ಪುತ್ರ ವಿ.ಟಿ.ವೇಲು ಅವರು ಬೆಂಗಳೂರಿನ ಆರ್ ಬಿ ಎ ಎನ್ ಎಂ ಎಸ್ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದರು. ಬಳಿಕ ಮದ್ರಾಸಿನಲ್ಲಿನ ಪ್ರೆಸಿಡೆನ್ಸಿ ಕಾಲೇಜಿನಲ್ಲಿ ಅಧ್ಯಯನ ಪೂರ್ಣಗೊಳಿಸಿ ಉದ್ಯಮಕ್ಷೇತ್ರದತ್ತ ಆಸಕ್ತಿ ತಳೆದರು. ಇಂಡಿಯಾ ಗ್ಯಾರೇಜ್ ಮತ್ತು ಸದರ್ನ್ ಮೋಟಾರ್ಸ್ ಸಂಸ್ಥೆಗಳಲ್ಲಿ ತಮ್ಮ ವೃತ್ತಿಜೀವನ ಆರಂಭಿಸಿದ ಅವರು ವಿ ಎಸ್ ಟಿ ಮೋಟಾರ್ಸ್ ಲಿಮಿಟೆಡ್ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದರು. ಜೂನ್ 1967ರಲ್ಲಿ ರಾಜ್ಯ ಆಟೊಮೊಬೈಲ್ ವಿತರಕರ ಸಂಘಟನೆ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ ಅವರು ಕೆಲ ವರ್ಷಗಳ ಕಾಲ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಮಿಟ್ಸುಬಿಷಿ ಪವರ್ ಟಿಲ್ಲರ್ಸ್ ಸಂಸ್ಥೆಯ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕರಾಗಿ ಮೂವತ್ತು ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಮೈಸೂರು ಪೇಪರ್ ಮಿಲ್ಸ್, ಚೋಳಮಂಡಲಂ ಇನ್ವೆಸ್ಟ್ ಮೆಂಟ್ ಅಂಡ್ ಫೈನಾನ್ಸ್ ಲಿಮಿಟೆಡ್, ಹಟ್ಟಿ ಗೋಲ್ಡ್ ಮೈನ್ಸ್ ಮತ್ತು ಲಕ್ಷ್ಮಿ ಮಿಲ್ಸ್ ಸಂಸ್ಥೆಯ ನಿರ್ದೇಶಕರಾಗಿಯೂ ಸೇವೆ ಸಲ್ಲಿಸಿದ್ದರು. ಬೆಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ (ಬಿಡಿಎ) ಸ್ಥಾಪನೆಗೊಳ್ಳುವ ಮುನ್ನ ನಗರಾಭಿವೃದ್ಧಿಗಾಗಿ ರೂಪಿಸಲಾಗಿದ್ದ ಮಂಡಳಿಗೆ  ಸದಸ್ಯರಾಗಿ ವೇಲು ಅವರನ್ನು ಸರ್ಕಾರ ನಾಮಕರಣ ಮಾಡಿತ್ತು. ಟೆನ್ನಿಸ್ ಪಟು ಕೂಡ ಆಗಿದ್ದ ಅವರು ಮೈಸೂರು ರಾಜ್ಯ ಲಾನ್ ಟೆನ್ನಿಸ್ ಅಸೋಸಿಯೇಷನ್, ಬೆಂಗಳೂರು ಟರ್ಫ್ ಕ್ಲಬ್ ಮತ್ತು ಬೆಂಗಳೂರು ಕ್ಲಬ್ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕಮಲಾಬಾಯಿ ಬಾಲಕಿಯರ ಶೈಕ್ಷಣಿಕ ಟ್ರಸ್ಟಿನ ಗೌರವ ಕಾರ್ಯದರ್ಶಿ ಮತ್ತು ರೋಟರಿ ಕ್ಲಬ್ ಸದಸ್ಯರಾಗಿದ್ದ ಅವರು ಸಾಮಾಜಿಕ ಕಳಕಳಿ ಹೊಂದಿದ್ದರು.

2008: ಕೊಂಕಣಿಯ ವಿವಿಧ ಕ್ಷೇತ್ರಗಳಲ್ಲಿ ಅನನ್ಯ ಸೇವೆ ಸಲ್ಲಿಸಿದ ಮೂವರು ಸಾಧಕರಾದ ಸಾಹಿತ್ಯ ಕ್ಷೇತ್ರದ ಉಡುಪಿಯ ಡಾ. ಜೆರಾಲ್ಡ್ ಪಿಂಟೋ, ಜಾನಪದ ಕ್ಷೇತ್ರದ ಕುಂಬ್ರಿ ಹೊನ್ನಾವರದ ಮಂಜಯ್ಯ ಶಿವು ಹಾಗೂ ಕಲೆ (ನಾಟಕ) ಕ್ಷೇತ್ರದ ಮಂಗಳೂರಿನ ಫ್ರಾನ್ಸಿಸ್ ಫರ್ನಾಂಡಿಸ್ ಕಾಸ್ಸಿಯಾ ಅವರನ್ನು  ಕೊಂಕಣಿ ಸಾಹಿತ್ಯ ಅಕಾಡೆಮಿಯ 2007ನೇ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಿತು.

2008: `ಚೀನಿ ಕಮ್' ಚಿತ್ರದಲ್ಲಿ ಅಭಿನಯಕ್ಕಾಗಿ ನಟಿ ಟಬು ಫಿಲಂ ಫೇರ್ ಪ್ರಶಸ್ತಿಯ  `ಉತ್ತಮ ನಟಿ' ಗೌರವವನ್ನು ತಮ್ಮದಾಗಿಸಿಕೊಂಡರು. `ತಾರೆ ಜಮೀನ್ ಪರ್' ಚಿತ್ರದ ದರ್ಶೀಲ್ ಉತ್ತಮ ನಟ ಪ್ರಶಸ್ತಿ ಗಳಿಸಿದರು. ಶಾರುಕ್ ಖಾನ್ ನಟಿಸಿದ `ಚಕ್ ದೇ ಇಂಡಿಯ'ವು ಅತ್ಯುತ್ತಮ ಚಿತ್ರ ಪ್ರಶಸ್ತಿ ಪಡೆದರೆ, `ಗುರು' ಚಿತ್ರಕ್ಕಾಗಿ ಎ. ಆರ್. ರೆಹಮಾನ್ ಉತ್ತಮ ಸಂಗೀತ ನಿರ್ದೇಶಕ ಪ್ರಶಸ್ತಿ ಪಡೆದರು.

2007: ನಿತಾರಿ ಮಕ್ಕಳ ಸರಣಿ ಹತ್ಯೆ ಹಿನ್ನೆಲಯಲ್ಲಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣೆ ಆಯೋಗ ಅಸ್ತಿತ್ವಕ್ಕೆ ಬಂತು. ಮ್ಯಾಗ್ಸೆಸೆ ಪ್ರಶಸ್ತಿ ಪುರಸ್ಕೃತೆ ಶಾಂತಾ ಸಿನ್ಹಾ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಿಸಲಾಯಿತು. ಮಕ್ಕಳ ಹಕ್ಕುಗಳ ಸೂಕ್ತ ಜಾರಿ ಹಾಗೂ ಅವರಿಗೆ ಸಂಬಂಧಿಸಿದ ಯೋಜನೆಗಳು ಮತ್ತು  ಕಾನೂನಿನ ಪರಿಣಾಮಕಾರಿ ಅನುಷ್ಠಾನದ ಉಸ್ತುವಾರಿಯನ್ನು ಈ ಆಯೋಗದ್ದು.

2007: ಅಲ್ಕಟೆಲ್-ಲುಸೆಂಟ್ ಸಂಸ್ಥೆ ಹಕ್ಕುಸ್ವಾಮ್ಯ ಹೊಂದಿದ್ದ ಆಡಿಯೋ ತಂತ್ರಜ್ಞಾನವನ್ನು ಕೃತಿ ಚೌರ್ಯ ಮಾಡ್ದಿದಕ್ಕಾಗಿ 15.2 ಕೋಟಿ ಡಾಲರ್ (ಸುಮಾರು 6800 ಕೋಟಿ ರೂಪಾಯಿ) ನಷ್ಟ ತುಂಬಿಕೊಡಬೇಕು ಎಂದು ಅಮೆರಿಕದ ಫೆಡರಲ್ ಕೋರ್ಟ್ ಪ್ರಮುಖ ಸಾಫ್ಟ್ ವೇರ್ ಸಂಸ್ಥೆ ಮೈಕ್ರೋಸಾಫ್ಟ್ ಗೆ ಆದೇಶ ನೀಡಿತು.

2007: ಪಾಕಿಸ್ಥಾನವು 2000 ಕಿ.ಮೀ. ವ್ಯಾಪ್ತಿಯ ದೂರಗಾಮೀ ಕ್ಷಿಪಣಿ `ಶಹೀನ್-2'ರ ಪ್ರಾಯೋಗಿಕ  ಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಿತು. ಈ ಕ್ಷಿಪಣಿಯು ಅಣ್ವಸ್ತ್ರ ಸಿಡಿತಲೆಯನ್ನು ನಿರ್ದಿಷ್ಟ ಗುರಿಯ ಮೇಲೆ ಕರಾರುವಾಕ್ಕಾಗಿ ಸ್ಫೋಟಿಸುವ ಸಾಮರ್ಥ್ಯ ಹೊಂದಿದೆ.

2007: ರಂಗಭೂಮಿಯ ಕಲಾ ಕಣಜ ಎಂದೇ ಖ್ಯಾತರಾಗಿದ್ದ ರಂಗ ಕಲಾವಿದ ರಾಜ್ಯೋತ್ಸವ ಪ್ರಶಸ್ತಿ ವಿಜೇತ ಹಣ್ಣಿ ವೀರಭದ್ರಪ್ಪ (97) ಅವರು ಹೂವಿನ ಹಡಗಲಿ ಪಟ್ಟಣದಲ್ಲಿ ನಿಧನರಾದರು.

2007: ನೇಪಾಳದ ರಾಜಕುಟುಂಬದ ಹತ್ಯಾಕಾಂಡದ (2001) ಕಥಾ ನಾಯಕಿ ದೇವಯಾನಿ (34) ರಾಣಾ ಅವರ ಮದುವೆ ಭಾರತದ ಕೇಂದ್ರ ಸಚಿವ ಅರ್ಜುನ್ ಸಿಂಗ್ ಅವರ ಮೊಮ್ಮಗ 25ರ ಹರೆಯದ ಉದ್ಯಮಿ ಐಶ್ವರ್ಯಸಿಂಗ್ ಜೊತೆ ನವದೆಹಲಿಯಲ್ಲಿ ನಡೆಯಿತು.
 
2006: ರಷ್ಯಾ ರಾಜಧಾನಿ ಮಾಸ್ಕೋದಲ್ಲಿನ ಒಳಾಂಗಣ ವಾಣಿಜ್ಯ ಸಮುಚ್ಛಯ ಕುಸಿದು ಬಿದ್ದು 40 ಜನ ಮೃತರಾಗಿ 24ಕ್ಕೂ ಹೆಚ್ಚು ಜನ ಗಾಯಗೊಂಡರು.

2006: ಆಫ್ರಿಕಾ ಖಂಡದ ಮೊಜಾಂಬಿಕ್, ಜಿಂಬಾಬ್ವೆ ಮತ್ತು ದಕ್ಷಿಣ ಆಫ್ರಿಕಾದಲ್ಲಿ ಫೆಬ್ರುವರಿ 22 ಮಧ್ಯರಾತ್ರಿ ಪ್ರಬಲ ಭೂಕಂಪ ಸಂಭವಿಸಿತು. 100 ವರ್ಷಗಳ ನಂತರ ಆಫ್ರಿಕಾದಲ್ಲಿ ಇಂತಹ ಪ್ರಬಲ ಭೂಕಂಪ ಸಂಭವಿಸಿತು.
2006: ಚಿತ್ರನಟಿ ಪ್ರೇಮಾ ಅವರ ನಿಶ್ಚಿತಾರ್ಥ ಸಾಫ್ಟ್ ವೇರ್ ಎಂಜಿನಿಯರ್ ಜೀವನ್ ಅಪ್ಪಚ್ಚು ಅವರ ಜೊತೆಗೆ ಬೆಂಗಳೂರಿನಲ್ಲಿ ನೆರವೇರಿತು.

2006: ಪ್ರೋತ್ಸಾಹದ ಮತ್ತು ಪ್ರಾಯೋಜಕರ ಕೊರತೆಯ ಕಾರಣ ಕರ್ನಾಟಕದ ಖ್ಯಾತ ಈಜುಗಾರ್ತಿ ನಿಶಾ ಮಿಲ್ಲೆಟ್ ನಿವೃತ್ತಿ ಘೋಷಿಸಿದರು.

2000: ವರ್ಷದ ಆಲ್ಬಮ್ ಸೇರಿದಂತೆ ಎಂಟು ಗ್ರಾಮ್ಮಿ ಪ್ರಶಸ್ತಿಗಳನ್ನು `ಸೂಪರ್ ನ್ಯಾಚುರಲ್' ಗಾಗಿ ಗೆದ್ದ ಕಾರ್ಲೋಸ್ ಸಂಟಾನಾ ಅವರು 1983ರಲ್ಲಿ ಒಂದೇ ರಾತ್ರಿಯಲ್ಲಿ ಮೈಕೆಲ್ ಜಾಕ್ಸನ್ ಮಾಡಿದ್ದ ದಾಖಲೆಗಳನ್ನು ಸರಿಗಟ್ಟಿದರು.

1997: ಸ್ಕಾಟ್ ಲ್ಯಾಂಡಿನಲ್ಲಿ ವಿಜ್ಞಾನಿಗಳು ವಯಸ್ಕ ಸ್ತನಿಯ ತದ್ರೂಪು ಸೃಷ್ಟಿಯಲ್ಲಿ (ಕ್ಲೋನಿಂಗ್) ತಾವು ಯಶಸ್ವಿಯಾಗಿದ್ದು ಈ ವಿಧಾನದಲ್ಲಿ `ಡಾಲಿ' ಹೆಸರಿನ ಕುರಿ ಮರಿಯನ್ನು ಸೃಷ್ಟಿಸಿರುವುದಾಗಿ ಪ್ರಕಟಿಸಿದರು.

1954: ಪಿಟ್ಸ್ ಬರ್ಗಿನಲ್ಲಿ ಮೊತ್ತ ಮೊದಲ ಬಾರಿಗೆ ಪೋಲಿಯೊ ವಿರುದ್ಧ ಮಕ್ಕಳಿಗೆ ಸಾಮೂಹಿಕ ಲಸಿಕೆ ಹಾಕಲಾಯಿತು.

1937: ರಾಜಲಕ್ಷ್ಮೀ ತಿರುನಾರಾಯಣ್ ಜನನ.

1935: ಕಲಾವಿದ ಎಚ್. ಎಂ. ಚೆನ್ನಯ್ಯ ಜನನ.

1930: ಖ್ಯಾತ ಸುಗಮ ಸಂಗೀತ ಗಾಯಕ ದೀನನಾಥ ಮಂಜೇಶ್ವರ ಅವರ ಶಿಷ್ಯ ಪರಂಪರೆಯ ಎಂ. ಎನ್. ಶೇಷಗಿರಿ (23-2-1930ರಿಂದ 15-2-2005) ಅವರು ನಿಂಗಪ್ಪ- ಗಂಗಮ್ಮ ದಂಪತಿಯ ಮಗನಾಗಿ ಹಾವೇರಿ ಜಿಲ್ಲೆಯ ಹೊಸರಿತ್ತಿಯಲ್ಲಿ ಜನಿಸಿದರು.

1905: ನಾಗರಿಕ ಸೇವಾ ಸಂಸ್ಥೆ ರೋಟರಿ ಕ್ಲಬ್ ಅಮೆರಿಕಾದಲ್ಲಿ ಸ್ಥಾಪನೆಗೊಂಡಿತು. ಷಿಕಾಗೊ ಅಟಾರ್ನಿ ಪಾವುಲ್ ಪಿ. ಹ್ಯಾರಿಸ್ ಇದರ ಸ್ಥಾಪಕರು. ಒಬ್ಬರ ಬಳಿಕ ಒಬ್ಬರಂತೆ ಸದಸ್ಯರ ಕಚೇರಿಗಳಲ್ಲಿ ಸಂಸ್ಥೆಯ ಸಭೆ ನಡೆಯಬೇಕಾಗಿದ್ದುದರಿಂದ ಇದಕ್ಕೆ `ರೋಟರಿ' ಹೆಸರನ್ನು ನೀಡಲಾಯಿತು. 1912ರಲ್ಲಿ ಇದರ ಹೆಸರು `ಇಂಟರ್ ನ್ಯಾಷನಲ್ ಅಸೋಸಿಯೇಷನ್ ಆಫ್ ರೋಟರಿ ಕ್ಲಬ್ಸ್' ಎಂಬುದಾಗಿ ಬದಲಾಯಿತು. ಈಗಿನ `ರೋಟರಿ ಇಂಟರ್ ನ್ಯಾಷನಲ್' ಎಂಬ ಹೆಸರನ್ನು 1922ರಲ್ಲಿ ಅಂಗೀಕರಿಸಲಾಯಿತು.

1884: ಕಾಸಿಮೀರ್ ಫಂಕ್ (1884-1967) ಹುಟ್ಟಿದ ದಿನ. ಪೋಲಿಷ್ ಅಮೆರಿಕನ್ ಜೀವ ರಸಾಯನ ತಜ್ಞನಾದ ಈತ `ವಿಟಮಿನ್' ಶಬ್ಧವನ್ನು ಚಲಾವಣೆಗೆ ತಂದ.

1874: ಇಂಗ್ಲಿಷ್ ವ್ಯಕ್ತಿ ಮೇಜರ್ ವಾಲ್ಟೇರ್ ವಿಂಗ್ ಫೀಲ್ಡ್ `ಸ್ಪೆಯಿರಿಸ್ಟಿಕ್' (Sphairistike')   ಹೆಸರಿನಲ್ಲಿ `ಲಾನ್ ಟೆನಿಸ್' ಆಟಕ್ಕೆ ಪೇಟೆಂಟ್ ಪಡೆದ. 

1834: ಗುಸ್ತಾವ್ ನಾಚ್ಟಿಗಲ್ (1834-1885) ಹುಟ್ಟಿದ ದಿನ. ಜರ್ಮನ್ ಸಂಶೋಧಕನಾದ ಈತ ಸಹಾರಾ ಮರುಭೂಮಿಯನ್ನು ಕಂಡು ಹಿಡಿದ.

1821: ಕವಿ ಜಾನ್ ಕೀಟ್ಸ್ ರೋಮಿನಲ್ಲಿ ತನ್ನ 25ನೇ ವಯಸ್ಸಿನಲ್ಲಿ ಕ್ಷಯರೋಗಕ್ಕೆ ತುತ್ತಾಗಿ ಅಸುನೀಗಿದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Thursday, February 26, 2009

ಇಂದಿನ ಇತಿಹಾಸ History Today ಫೆಬ್ರುವರಿ 22

ಇಂದಿನ ಇತಿಹಾಸ

ಫೆಬ್ರುವರಿ 22

ಜಾತಿ ಭೇದವಿಲ್ಲದೆ ಅನ್ನ ಹಾಗೂ ಅಕ್ಷರ ದಾಸೋಹದ ಮೂಲಕ ಸಮಾಜ ಸೇವೆ ಮಾಡುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು, ಕರ್ನಾಟಕ ಸರ್ಕಾರವು 2007ನೇ ಸಾಲಿನ `ಕರ್ನಾಟಕ ರತ್ನ' ಪ್ರಶಸ್ತಿಗೆ ಆಯ್ಕೆ ಮಾಡಿತು. ಈ ಮೊದಲು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕುವೆಂಪು (1992), ಚಲನಚಿತ್ರ ಕ್ಷೇತ್ರದ ಸಾಧನೆಗಾಗಿ ಡಾ. ರಾಜಕುಮಾರ್ (1993), ರಾಜಕೀಯ ಕ್ಷೇತ್ರದ ಸಾಧನೆಗಾಗಿ ಎಸ್. ನಿಜಲಿಂಗಪ್ಪ (1999), ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಡಾ. ಸಿ.ಎನ್.ಆರ್. ರಾವ್ (2000), ಸಂಗೀತ ಕ್ಷೇತ್ರದ ಸಾಧನೆಗಾಗಿ ಪಂಡಿತ ಭೀಮಸೇನ ಜೋಶಿ (2005) ಅವರಿಗೆ `ಕರ್ನಾಟಕ ರತ್ನ' ಪ್ರಶಸ್ತಿ ಲಭಿಸಿತು.

2008: ಮುಂಬೈಯಲ್ಲಿ 1993ರಲ್ಲಿ ನಡೆದ ಸರಣಿ ಬಾಂಬ್ ಸ್ಫೋಟ ಘಟನೆಗೆ 
ಸಂಬಂಧಿಸಿದಂತೆ ಆರೋಪಿ ಮಹಮ್ಮದ್ ಶೋಯೆಬ್ ಕಸಂ ಘನ್ಸರ್ ಎಂಬಾತನಿಗೆ ನೀಡಲಾದ ಮರಣ ದಂಡನೆಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿತು. ಮುಖ್ಯ ನ್ಯಾಯಮೂರ್ತಿ ಕೆ. ಜಿ. ಬಾಲಕೃಷ್ಣನ್, ನ್ಯಾಯಮೂರ್ತಿಗಳಾದ ಆರ್. ವಿ. ರವೀಂದ್ರನ್ ಮತ್ತು ಮಾರ್ಕಾಂಡೇಯ ಕಟ್ಜು ಅವರನ್ನು ಒಳಗೊಂಡ ನ್ಯಾಯಪೀಠ ಸಿಬಿಐಗೆ ನೋಟಿಸ್ ಜಾರಿಗೊಳಿಸಿತು. ಅಲ್ಲದೆ ಟಾಡಾ ನ್ಯಾಯಾಲಯ ತಮ್ಮನ್ನು ದೋಷಿಯನ್ನಾಗಿ ಮಾಡಿ ಮರಣ ದಂಡನೆ ವಿಧಿಸಿದ್ದನ್ನು ಪ್ರಶ್ನಿಸಿ ಆರೋಪಿಗಳು ಸಲ್ಲಿಸಿದ ಅರ್ಜಿಯನ್ನೂ ವಿಚಾರಣೆಗೆ ಸ್ವೀಕರಿಸಿತು.

2008: ತೀವ್ರ ವಿವಾದಕ್ಕೆ ಒಳಗಾಗಿದ್ದ ಸಕ್ರಮ ಯೋಜನೆಯನ್ನು ಪರಿಷ್ಕರಿಸಿದ ಕರ್ನಾಟಕ ರಾಜ್ಯ ಸರ್ಕಾರ, 20 ಗುಣಿಸು 30 ಮತ್ತು 30 ಗುಣಿಸು 40 ಅಡಿ ಅಳತೆಯ ಅನಧಿಕೃತ ನಿವೇಶನಗಳಿಗೆ ನಿಗದಿ ಪಡಿಸಿದ್ದ ದಂಡ ಶುಲ್ಕದಲ್ಲಿ ದೊಡ್ಡ ಪ್ರಮಾಣದ ರಿಯಾಯಿತಿಯನ್ನು ಪ್ರಕಟಿಸಿತು. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ವ್ಯಾಪ್ತಿಗೆ ಬಂದ 118 ಗ್ರಾಮ ಠಾಣಾಗಳಲ್ಲಿನ ನಿವೇಶನಗಳ ಮಾಲೀಕರು ಸಕ್ರಮಕ್ಕೆ ಅರ್ಜಿ ಸಲ್ಲಿಸಬೇಕಾಗಿಲ್ಲ. ಈ ಪರಿಷ್ಕೃತ ಸಕ್ರಮ ಯೋಜನೆಗೆ ಸರ್ಕಾರದ ಕಾರ್ಯಕಾರಿ ಸಮಿತಿ ಒಪ್ಪಿಗೆ ನೀಡಿತು.

2008: ವಾಣಿಜ್ಯ ಉದ್ಧೇಶದ ಸಾರಿಗೆ ವಾಹನಗಳಿಗೆ ವೇಗ ನಿಯಂತ್ರಕ ಅಳವಡಿಕೆ ಕಡ್ಡಾಯಗೊಳಿಸಿದ ಹೈಕೋರ್ಟ್ ಆದೇಶ ವಿರೋಧಿಸಿ ಲಾರಿ, ಖಾಸಗಿ ಬಸ್ಸು, ಟೂರಿಸ್ಟ್ ಟ್ಯಾಕ್ಸಿ, ಮ್ಯಾಕ್ಸಿ ಕ್ಯಾಬ್ ಮಾಲೀಕರು ಮತ್ತು ಚಾಲಕರು ನೀಡಿದ ಕರೆಯ ಮೇರೆಗೆ ಈದಿನ ಮಧ್ಯರಾತ್ರಿಯಿಂದ ಅನಿರ್ದಿಷ್ಟಾವಧಿ ಮುಷ್ಕರ ಆರಂಭವಾಯಿತು.

2008: ದೋಡಾ ಜಿಲ್ಲೆ ಬದೇರ್ ವಾ ಪಟ್ಟಣಕ್ಕೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಹಾಗೂ ಕೇಂದ್ರ ಗೃಹ ಸಚಿವ ಶಿವರಾಜ್ ಪಾಟೀಲ್ ಭೇಟಿಗೆ ಒಂದು ಗಂಟೆ ಮೊದಲು  ಸುಧಾರಿತ ಸ್ಫೋಟಕ ಸಾಮಗ್ರಿ ಪತ್ತೆಯಾಯಿತು. ಭಾರಿ ಹಿಮಪಾತದಿಂದ ಉಂಟಾದ ಪರಿಸ್ಥಿತಿ ಅವಲೋಕಿಸಲೆಂದು ಸೋನಿಯಾ ಹಾಗೂ ಶಿವರಾಜ್ ಪಾಟೀಲ್ ಪಟ್ಟಣಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ  ಕೇಂದ್ರ ಮೀಸಲು ಪೊಲೀಸ್ ಪಡೆ ಸಿಬ್ಬಂದಿ ಕೂಲಂಕಷ ಪರಿಶೀಲನೆ ಕೈಗೊಂಡಿತ್ತು. ಆಗ ಬದೇವಾರಿನಿಂದ  3 ಕಿ.ಮೀ.ದೂರದ ದಲಿಘರದಲ್ಲಿ ಸುಧಾರಿತ ಸ್ಫೋಟಕ ಸಾಮಗ್ರಿ ಪತ್ತೆಯಾಯಿತು. ಇದನ್ನು ಹಿಮದೊಳಗೆ ಹುದುಗಿಸಿಡಲಾಗಿತ್ತು.

2008:  ವಿವಾದದ ಸುಳಿಗೆ  ಸಿಲುಕಿ ರಾಜಸ್ಥಾನದಲ್ಲಿ ನಿಷೇಧಕ್ಕೆ ಒಳಗಾದ  `ಜೋಧಾ ಅಕ್ಬರ್' ಸಿನೆಮಾ ಮಧ್ಯ ಪ್ರದೇಶ ಸರ್ಕಾರದ ಕೆಂಗಣ್ಣಿಗೂ ಗುರಿಯಾಯಿತು. ಚಿತ್ರ ಪ್ರದರ್ಶನಕ್ಕೆ ಮಧ್ಯಪ್ರದೇಶದ ರಜಪೂತ ಸಮುದಾಯದಿಂದ ಭಾರಿ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ತತ್ ಕ್ಷಣವೇ ಜಾರಿಗೆ ಬರುವಂತೆ ಚಿತ್ರ ಪ್ರದರ್ಶನ ರದ್ದುಗೊಳಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತು.

2008: ವೆನಿಜುವೆಲಾ ವಿಮಾನವೊಂದು ದಟ್ಟಾರಣ್ಯವಿರುವ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಗಿ 46 ಪ್ರಯಾಣಿಕರು ಮೃತರಾದರು. ಅತಿಎತ್ತರದ ಮೆರಿಡಾ ನಗರದಿಂದ ಕಾರಕಾಸ್ಗೆ ಹೊರಟಿದ್ದ ವಿಮಾನ ಮಾರ್ಗ ಮಧ್ಯೆ ದಟ್ಟ ಅರಣ್ಯವಿರುವ ಪರ್ವತ ಪ್ರದೇಶದಲ್ಲಿ ಅಪಘಾತಕ್ಕೀಡಾಯಿತು.

2008: ಉತ್ತರ ಶ್ರೀಲಂಕಾದಲ್ಲಿ ಸೇನೆ ಮತ್ತು ಎಲ್ ಟಿ ಟಿ ಇ ಉಗ್ರರ ನಡುವೆ ನಡೆದ ಕಾಳಗದಲ್ಲಿ ಕನಿಷ್ಠ 45 ಮಂದಿ ಮೃತರಾದರು. ಮೃತರಲ್ಲಿ 43 ಉಗ್ರರು ಮತ್ತು ಇಬ್ಬರು ಯೋಧರು.

2008: 20 ಲಕ್ಷ ರೂ ಆಸ್ತಿ ತೆರಿಗೆ ಪಾವತಿಸದ ಕಾರಣ ನಟಿ, ಸಮಾಜವಾದಿ ಸಂಸದೆ ಜಯಪ್ರದಾ ಮಾಲಿಕತ್ವದ ಪ್ರಸಿದ್ಧ `ಜಯಪ್ರದಾ' ಚಿತ್ರಮಂದಿರ ಸಂಕೀರ್ಣವನ್ನು ಚೆನ್ನೈ ಮಹಾನಗರ ಪಾಲಿಕೆ ಜಪ್ತಿ ಮಾಡಿತು.

2007: ಜಾತಿ ಭೇದವಿಲ್ಲದೆ ಅನ್ನ ಹಾಗೂ ಅಕ್ಷರ ದಾಸೋಹದ ಮೂಲಕ ಸಮಾಜ ಸೇವೆ ಮಾಡುತ್ತಿರುವ ತುಮಕೂರಿನ ಸಿದ್ದಗಂಗಾ ಮಠದ ಡಾ. ಶಿವಕುಮಾರ ಸ್ವಾಮೀಜಿ ಅವರನ್ನು, ಕರ್ನಾಟಕ ಸರ್ಕಾರವು 2007ನೇ ಸಾಲಿನ `ಕರ್ನಾಟಕ ರತ್ನ' ಪ್ರಶಸ್ತಿಗೆ ಆಯ್ಕೆ ಮಾಡಿತು. ಈ ಮೊದಲು ಸಾಹಿತ್ಯ ಕ್ಷೇತ್ರದ ಸಾಧನೆಗಾಗಿ ಕುವೆಂಪು (1992), ಚಲನಚಿತ್ರ ಕ್ಷೇತ್ರದ ಸಾಧನೆಗಾಗಿ ಡಾ. ರಾಜಕುಮಾರ್ (1993), ರಾಜಕೀಯ ಕ್ಷೇತ್ರದ ಸಾಧನೆಗಾಗಿ ಎಸ್. ನಿಜಲಿಂಗಪ್ಪ (1999), ವಿಜ್ಞಾನ ಕ್ಷೇತ್ರದ ಸಾಧನೆಗಾಗಿ ಡಾ. ಸಿ.ಎನ್.ಆರ್. ರಾವ್ (2000), ಸಂಗೀತ ಕ್ಷೇತ್ರದ ಸಾಧನೆಗಾಗಿ ಪಂಡಿತ ಭೀಮಸೇನ ಜೋಶಿ (2005) ಅವರಿಗೆ `ಕರ್ನಾಟಕ ರತ್ನ' ಪ್ರಶಸ್ತಿ ಲಭಿಸಿತು.

2007: ದೆಹಲಿಯ ಪ್ರತಿಷ್ಠಿತ `ಚಮನ್ ಲಾಲ್ ಸ್ಮಾರಕ ರಾಷ್ಟ್ರೀಯ ಪ್ರಶಸ್ತಿ'ಗೆ ಬೆಂಗಳೂರಿನ ನೇಪಥ್ಯ ಕಲಾವಿದ ಅ.ನ. ರಮೇಶ್ ಆಯ್ಕೆಯಾದರು. ರಮೇಶ್ ಅವರು ಬೆಳಕಿನ ವಿನ್ಯಾಸ, ರಂಗಸಜ್ಜಿಕೆ, ವಸ್ತ್ರವಿನ್ಯಾಸ, ಪ್ರಸಾಧನ ಮೊದಲಾದ ಕ್ಷೇತ್ರಗಳಲ್ಲಿ ನೈಪುಣ್ಯ ಪಡೆದ ಕಲಾವಿದ. 

2007: ಬೆಂಗಳೂರಿನಲ್ಲಿರುವ ರಾಜೀವಗಾಂಧಿ ಆರೋಗ್ಯ ವಿಜ್ಞಾನ ವಿಶ್ವವಿದ್ಯಾಲಯದ ಕ್ಯಾಂಪಸ್ಸನ್ನು ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಅವರ ಸ್ವಕ್ಷೇತ್ರ ರಾಮನಗರಕ್ಕೆ ಸ್ಥಳಾಂತರಿಸುವುದರ ಜೊತೆಗೆ ಎರಡು ಆಸ್ಪತ್ರೆ, ವೈದ್ಯಕೀಯ ದಂತವಿಜ್ಞಾನ, ಫಾರ್ಮಸಿ ಕಾಲೇಜುಗಳ ಆರಂಭಕ್ಕೆ ರಾಜ್ಯ ಸಚಿವ ಸಂಪುಟ ತಾತ್ವಿಕ ಒಪ್ಪಿಗೆ ನೀಡಿತು.

2007: ಜವಾಹರಲಾಲ್ ನೆಹರು ಉನ್ನತ ವಿಜ್ಞಾನಗಳ ಕೇಂದ್ರದ ಅಧ್ಯಕ್ಷ ಪ್ರೊ. ಸಿ. ಎನ್. ಆರ್. ರಾವ್ ಅವರು ಇಂಗ್ಲೆಂಡಿನ ಆಕ್ಸ್ ಫರ್ಡ್ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟಿಗೆ ಆಯ್ಕೆಯಾದರು.

2007: ಇಟಲಿ ಪ್ರಧಾನಿ ರೊಮಾನೊ ಪ್ರೊಡಿ ಅವರು ತಮ್ಮ ವಿದೇಶ ನೀತಿ ಮತ್ತು ಆಫ್ಘಾನಿಸ್ಥಾನದಲ್ಲಿ ಇಟಲಿ ಸೇನೆ ಕಾರ್ಯಾಚರಣೆ ವಿಷಯಗಳ ಕುರಿತ ಸರ್ಕಾರದ ಮಸೂದೆಗೆ ಸೆನೆಟಿನಲ್ಲಿ ಸೋಲು ಉಂಟಾದ ಹಿನ್ನೆಲೆಯಲ್ಲಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದರು.

2006: ಹಿರಿಯ ಇತಿಹಾಸಕಾರ್ತೆ, ರಾಷ್ಟ್ರೀಯ ಇಂದಿರಾಗಾಂಧಿ ಕಲಾ ಕೇಂದ್ರದ ಅಧ್ಯಕ್ಷೆ ಕಪಿಲಾ ವಾತ್ಸಾಯನ ಅವರು ರಾಜ್ಯಸಭೆ ಸದಸ್ಯೆಯಾಗಿ ಪ್ರಮಾಣವಚನ ಸ್ವೀಕರಿಸಿದರು. ರಾಜ್ಯಸಭೆ ಅಧ್ಯಕ್ಷ, ಉಪರಾಷ್ಟ್ರಪತಿ ಭೈರೋನ್ ಸಿಂಗ್ ಶೆಖಾವತ್ ಪ್ರಮಾಣವಚನ ಬೋಧಿಸಿದರು.

2006: ಮುಂಬೈ ಕರ್ನಾಟಕ ಸಂಘವು ಪ್ರತಿವರ್ಷವೂ ಕೊಡುವ ವರದರಾಜ ಆದ್ಯ ಪ್ರಶಸ್ತಿಗೆ ಲೇಖಕ- ಕಲಾವಿದ ಡಿ.ಎಸ್ ಚೌಗಲೆ ಆಯ್ಕೆಯಾದರು. 

2006: ಇರಾಕಿನ ಸಮರ್ರಾದಲ್ಲಿ ಇಮಾಮ್ ಅಲಿ ಹಲ್-ಹದಿ ಮತ್ತು ಇಮಾಮ್ ಹಸನ್ ಅಲ್-ಅಸ್ಕರಿ ಸ್ಮರಣಾರ್ಥ ನಿರ್ಮಿಸಲಾದ ಅಲ್ ಅಸ್ಕರಿ ಮಸೀದಿ ಮೇಲೆ ಬಾಂಬ್ ದಾಳಿ ನಡೆದು ಅದನ್ನು ಭಾಗಶಃ ಹಾನಿಗೊಳಿಸಲಾಯಿತು. ಮಸೀದಿಯ ಸ್ವರ್ಣಗುಮ್ಮಟ ಕುಸಿದುಬಿತ್ತು. ನಂತರ ಸಂಭವಿಸಿದ ಗಲಭೆಗಳಲ್ಲಿ ಮೂವರು ಪತ್ರಕರ್ತರು ಸೇರಿದಂತೆ ಹಲವರು ಮೃತರಾದರು.

1965: ಕಲಾವಿದ ಮೈಸೂರು ಕೆ. ಕುಮಾರ್ ಜನನ.

1964: ಬ್ರಿಟಿಷ್ ಸಂಜಾತ ಭಾರತೀಯ ಮಾನವ ಶಾಸ್ತ್ರಜ್ಞ ವೆರೀಯರ್ ಎಲ್ವಿನ್ ನಿಧನರಾದರು. ಗುಡ್ಡಗಾಡು ವ್ಯವಹಾರಗಳಿಗೆ ಸಂಬಂಧಿಸಿದಂತೆ ಭಾರತ ಸರ್ಕಾರಕ್ಕೆ ಸಲಹೆಗಾರರಾಗಿದ್ದ ಇವರು ಮಧ್ಯಪ್ರದೇಶದ `ಗೊಂಡ' ಜನಾಂಗದ ಬಗ್ಗೆ ಅಧ್ಯಯನ ನಡೆಸಿದ್ದರು.

1958: ಭಾರತದ ಶಿಕ್ಷಣ ತಜ್ಞ, ರಾಜನೀತಿಜ್ಞ ಮೌಲಾನಾ ಅಬುಲ್ ಕಲಂ ಆಜಾದ್ ನಿಧನರಾದರು.

1957: ಇಂಗ್ಲೆಂಡಿನ ರಾಣಿ ಎಲಿಜಬೆತ್ ಅವರು ತಮ್ಮ ಪತಿ ಡ್ಯೂಕ್ ಆಫ್ ಎಡಿನ್ ಬರ್ಗ್ ಅವರಿಗೆ `ರಾಜಕುಮಾರ' ಎಂಬ ಬಿರುದನ್ನು ದಯಪಾಲಿಸಿದರು.

1949: ನಿಕಿ ಲೌಡಾ ಹುಟ್ಟಿದ ದಿನ. ಈತ ಆಸ್ಟ್ರೇಲಿಯಾದ ಮೋಟಾರ್ ರೇಸಿಂಗ್ ಚಾಂಪಿಯನ್.

1944: ಮಹಾತ್ಮಾ ಗಾಂಧೀಜಿ ಪತ್ನಿ ಕಸ್ತೂರಬಾ ಗಾಂಧಿ ನಿಧನರಾದರು.

1932: ಅಮೆರಿಕಾದ ಸೆನೆಟರ್ ಹಾಗೂ ಅಧ್ಯಕ್ಷ ಜಾನ್ ಎಫ್. ಕೆನಡಿ ಅವರ ಸಹೋದರ ಎಡ್ವರ್ಡ್ ಕೆನಡಿ ಹುಟ್ಟಿದ ದಿನ. 

1918: ಅತ್ಯಂತ ಎತ್ತರದ ಮನುಷ್ಯ ಎಂಬ ಹೆಗ್ಗಳಿಕೆಗೆ ಪಾತ್ರನಾದ ಅಮೆರಿಕನ್ ರಾಬರ್ಟ್ ಪರ್ಶಿಂಗ್ ವಾಡ್ಲೊ (1918-1940) ಹುಟ್ಟಿದ ದಿನ. ಈತನ ಎತ್ತರ 8 ಅಡಿ 11 ಅಂಗುಲಗಳು.

1902: ಫ್ರಿಟ್ಜ್ ಸ್ಟ್ರಾಸ್ ಮಾನ್ (1902-1980) ಹುಟ್ಟಿದ ದಿನ. ಜರ್ಮನ್ ಭೌತ ರಾಸಾಯನಿಕ ತಜ್ಞರಾಗಿದ್ದ ಇವರು ಒಟ್ಟೋ ಹಾನ್ ಜೊತೆ ಸೇರಿ ಯುರೇನಿಯಮ್ಮಿನಲ್ಲಿ ನ್ಯೂಟ್ರಾನ್ ಪ್ರಚೋದಿತ ಪರಮಾಣು ವಿದಳನವನ್ನು ಕಂಡು ಹಿಡಿದರು. 

1892: ಇಂದುಲಾಲ್ ಯಾಜ್ಞಿಕ್ (1892-1972) ಹುಟ್ಟಿದ ದಿನ. ಇವರು ಭಾರತದ ತತ್ವಜ್ಞಾನಿಯೂ ಸಮಾಜವಾದಿ ನಾಯಕರೂ ಆಗಿದ್ದರು.

1891: ಚಿತ್ರ ಕಲೆಯ ಎಲ್ಲ ಪ್ರಕಾರಗಳಲ್ಲೂ ದುಡಿದ ಕಲಾವಿದ ಅ.ನ. ಸುಬ್ಬರಾಯರು (22-2-1891ರಿಂದ 20-5-1981) ಅಕ್ಕಿಹೆಬ್ಬಾಳು ನರಸಿಂಹಯ್ಯ- ವೆಂಕಮ್ಮ ದಂಪತಿಯ ಮಗನಾಗಿ ಅಕ್ಕಿಹೆಬ್ಬಾಳಿನಲ್ಲಿ ಜನಿಸಿದರು. ಸರ್. ಎಂ. ವಿಶ್ವೇಶ್ವರಯ್ಯ ಅವರ ಸಲಹೆಯಂತೆ ಅವರು ಕಟ್ಟಿದ ಕಲಾಮಂದಿರವು ಕಲೆಯ ಜೊತೆಗೆ ಯಕ್ಷಗಾನ, ಸೂತ್ರದ ಬೊಂಬೆಯಾಟ, ಬಯಲಾಟ, ಜಾನಪದ ಇತ್ಯಾದಿ ಎಲ್ಲ ರಂಗಗಳ ಬೆಳವಣಿಗೆಗೂ ದುಡಿಯಿತು. ಎಲ್. ಶ್ರೀನಿವಾಸ ಮೂರ್ತಿ, ಎಸ್. ರಾಮನಾಥನ್, ಎನ್. ನಾರಾಯಣ್, ನವರತ್ನರಾಮ್, ದಾಶರಥಿ ದೀಕ್ಷಿತ್ ಮುಂತಾದವರೆಲ್ಲ ಈ ಕಲಾಮಂದಿರದಿಂದ ಬಂದವರೇ. ಕಲಾವಿದ ಎ.ಎಸ್. ಮೂರ್ತೆ ಅವರು ಸುಬ್ಬರಾಯರ ಪುತ್ರ.

1857: ಬ್ರಿಟಿಷ್ ಸೇನಾ ಅಧಿಕಾರಿ ಲಾರ್ಡ್ ಬೇಡೆನ್ ಪೊವೆಲ್ (1857-1941) ಹುಟ್ಟಿದರು. ಬಾಯ್ ಸ್ಕೌಟ್ಸ್ ಮತ್ತು ಗರ್ಲ್ ಗೈಡ್ ್ಸನ ಸ್ಥಾಪಕರಾಗಿ ಇವರು ಖ್ಯಾತರಾಗಿದ್ದಾರೆ. 1889ರಲ್ಲಿ ಇದೇ ದಿನ ಬೇಡೆನ್ ಪೊವೆಲ್ ಅವರ ಪತ್ನಿ ಒಲೇವ್ ಬೇಡೆನ್ ಪೊವೆಲ್ (1889-1977) ಹುಟ್ಟಿದರು. ಇವರು 1930ರಿಂದ ಗರ್ಲ್ ಗೈಡ್ಸ್ ಜಾಗತಿಕ ಮುಖ್ಯಸ್ಥೆಯಾಗಿ ಸಂಘಟನೆಯನ್ನು ಮುನ್ನಡೆಸಿದರು.

1732: ಅಮೆರಿಕನ್ ಜನರಲ್ ಜಾರ್ಜ್ ವಾಷಿಂಗ್ಟನ್ (1732-1799) ಹುಟ್ಟಿದರು. ಮುಂದೆ ಇವರೇ ಅಮೆರಿಕಾದ ಪ್ರಥಮ ಅಧ್ಯಕ್ಷರಾದರು. 

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಫೆಬ್ರುವರಿ 21

ಇಂದಿನ ಇತಿಹಾಸ 

ಫೆಬ್ರುವರಿ 21

ಭಾರತ ತಂಡದ ಮಾಜಿ ಆಟಗಾರ ಸುಜಿತ್ ಅವರು ಸೋಮವಾರ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು. ಪ್ರತಿಭಾನ್ವಿತ ಬಲಗೈ ಬ್ಯಾಟ್ಸ್ ಮನ್ ಆಗಿದ್ದ ಸುಜಿತ್ ಸೋಮಸುಂದರ್ 1990-91ರಲ್ಲಿ ಮೊದಲ ಬಾರಿಗೆ ಕರ್ನಾಟಕದ ಪರ ರಣಜಿ ಪಂದ್ಯದಲ್ಲಿ ಆಡಿದ್ದರು.

2008: ಭೂಕಕ್ಷೆ ಪ್ರವೇಶಿಸಲು ಅಣಿಯಾಗುತ್ತಿದ್ದ ನಿರುಪಯುಕ್ತ ಬೇಹುಗಾರಿಕಾ ಉಪಗ್ರವೊಂದನ್ನು ಅಮೆರಿಕದ ಕ್ಷಿಪಣಿಯು ಪೆಸಿಫಿಕ್ ಸಾಗರ ಪ್ರದೇಶದಲ್ಲಿ ಹೊಡೆದುರುಳಿಸಿತು. 133 ನಾವಿಕ ಮೈಲುಗಳ (ಭೂಮಿಯಿಂದ 247 ಕಿ.ಮೀ. ದೂರ) ಅಂತರದಲ್ಲಿ ಈ ಕಾರ್ಯಾಚರಣೆ ನಡೆಸಲಾಯಿತು. ಈ ಸಂದರ್ಭದಲ್ಲಿ ಉಪಗ್ರಹದ ಒಳಗಿನ ವಿಷಾನಿಲ ತುಂಬಿದ ಟ್ಯಾಂಕ್ ಭೂಮಿಯ ಅಥವಾ ಸಾಗರದ ಯಾವ ಪ್ರದೇಶದಲ್ಲಿ  ಸ್ಫೋಟಗೊಂಡಿದೆ ಎಂಬುದು ತಿಳಿದಿಲ್ಲ ಎಂದು ಪೆಂಟಗಾನ್ ಹೇಳಿಕೆ ನೀಡಿತು. 2006ರಲ್ಲಿ ಅಮೆರಿಕ ತನ್ನ ಬೇಹುಗಾರಿಕಾ ಅವಶ್ಯಕತೆಗಾಗಿ ಇದನ್ನು ಪರೀಕ್ಷಾರ್ಥ ಉಡಾಯಿಸಿತ್ತು. ಉಡಾವಣೆಗೊಂಡ ಕೆಲವೇ ಗಂಟೆಗಳಲ್ಲಿ ಇದು ತನ್ನ ಸಂಪರ್ಕ ಕಡಿದುಕೊಂಡಿತ್ತು. ಇದು ವಿರೋಧಿ ಶಕ್ತಿಗಳ ಕೈವಶವಾಗಬಾರದೆಂಬ ಉದ್ದೇಶದಿಂದ ಹೊಡೆದು ಉರುಳಿಸಿರುವುದಾಗಿ ಅಮೆರಿಕ ಹೇಳಿತು.  ಎಸ್ಎಂ-3 ಹೆಸರಿನ ಈ ಕ್ಷಿಪಣಿಯ ತೂಕ 2,270 ಕೆ.ಜಿ.

2008: ಡಾ.ಪು.ತಿ.ನ. ಟ್ರಸ್ಟ್ ಬೆಂಗಳೂರಿನಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಕಮಲಾಕರ ಕಡವೆ ಅವರಿಗೆ `ಡಾ.ಪುತಿನ ಕಾವ್ಯ ಪುರಸ್ಕಾರ' ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಹಿರಿಯ ಸಾಹಿತಿ ಪ್ರೊ.ಎಲ್.ಎಸ್. ಶೇಷಗಿರಿರಾವ್ ಪ್ರಶಸ್ತಿ ಪ್ರದಾನ ಮಾಡಿದರು.

2008: ಶ್ರೀಕ್ಷೇತ್ರ ಶ್ರವಣಬೆಳಗೊಳ ಸ್ಥಾಪಿಸಿರುವ `ಚಾವುಂಡರಾಯ ಪ್ರಶಸ್ತಿ'ಯನ್ನು ಹಿರಿಯ ಸಾಹಿತಿ ಬಿ. ದೇವುಕುಮಾರ ಶಾಸ್ತ್ರಿ ಅವರಿಗೆ ನೀಡಿ ಗೌರವಿಸಲಾಯಿತು. ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಪರಿಷತ್ತಿನ ಅಧ್ಯಕ್ಷ ಪ್ರೊ. ಚಂದ್ರಶೇಖರ ಪಾಟೀಲ ಪ್ರಶಸ್ತಿ ಪ್ರದಾನ ಮಾಡಿದರು.

2008: ಬಾಹ್ಯಾಕಾಶ ವಿಜ್ಞಾನಿ ಪ್ರೊ. ಯು.ಆರ್.ರಾವ್ ಅವರು ಅಮೆರಿಕದ ವಿಶ್ವ ಕಲೆ ಮತ್ತು ವಿಜ್ಞಾನ ಅಕಾಡೆಮಿಯ ಫೆಲೋ ಆಗಿ ಆಯ್ಕೆಯಾದರು. ರಾವ್ ಅವರ ಸಾಮಾಜಿಕ ಸೇವೆ, ವೃತ್ತಿಯಲ್ಲಿ ಮಾಡಿರುವ ಸಾಧನೆಯನ್ನು ಗಮನಿಸಿ ಫೆಲೋ ಆಗಿ ಆಯ್ಕೆ ಮಾಡಲಾಗಿದೆ ಎಂದು ಇಸ್ರೊ ಪ್ರಕಟಣೆ ತಿಳಿಸಿತು.

2007: ಸಮ್ ಜೌತಾ ಎಕ್ಸ್ಪ್ರೆಸ್ ಸ್ಫೋಟಕ್ಕೆ ಸಂಬಂಧಿಸಿದಂತೆ ಜಂಟಿ ತನಿಖೆ ನಡೆಸಬೇಕು ಎಂಬ ಪಾಕ್ ಪ್ರಸ್ತಾವವನ್ನು ಭಾರತ ತಿರಸ್ಕರಿಸಿತು.

2007: ಅಣ್ವಸ್ತ್ರ ಅಪಘಾತ ಅಪಾಯಗಳನ್ನು ಕಡಿಮೆಗೊಳಿಸುವ ಒಪ್ಪಂದ ಒಂದಕ್ಕೆ ಭಾರತ ಮತ್ತು ಪಾಕಿಸ್ಥಾನನವದೆಹಲಿಯಲ್ಲಿ ಸಹಿ ಹಾಕಿದವು. ಭಾರತದ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಕೆ.ಸಿ. ಸಿಂಗ್ ಮತ್ತು ಪಾಕಿಸ್ಥಾನದ ವಿದೇಶಾಂಗ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ತಾರೀಕ್ ಉಸ್ಮಾನ್ ಹೈದರ್ ಒಪ್ಪಂದಕ್ಕೆ ಸಹಿ ಹಾಕಿದರು.

2007: ವಿಧಾನಪರಿಷತ್ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವ ಸಂಬಂಧ ಸರ್ಕಾರ ಮತ್ತು ವಿರೋಧಿ ಕಾಂಗ್ರೆಸ್ ನಡುವೆ ಉಂಟಾಗಿದ್ದ ಬಿಕ್ಕಟ್ಟು ರಾಜ್ಯಪಾಲ ಟಿ.ಎನ್. ಚತುರ್ವೇದಿ ಅವರ ಮಧ್ಯಪ್ರವೇಶದಿಂದ ಕೊನೆಗೊಂಡಿತು. ಮುಂದಿನ ಅಧಿವೇಶನಕ್ಕೆ ಮುಂಚಿತವಾಗಿ ಸಭಾಪತಿ ಸ್ಥಾನಕ್ಕೆ ಚುನಾವಣೆ ನಡೆಸುವಂತೆ ರಾಜ್ಯಪಾಲರು ಪರಿಷತ್ ಸದಸ್ಯರಿಗೆ ಸೂಚಿಸಿದರು.

2007: ಕನ್ನಡಪ್ರಭದ ಮುಖ್ಯವರದಿಗಾರರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದ ಎಚ್. ಜಿ. ಪಟ್ಟಾಭಿರಾಮ್ (65) ನಿಧನರಾದರು. ಅಪರಾಧ ವರದಿಗಾರಿಕೆಗೆ ಅವರು ಖ್ಯಾತರಾಗಿದ್ದರು.

2007: ಭಾರತ ತಂಡದ ಮಾಜಿ ಆಟಗಾರ ಸುಜಿತ್ ಅವರು ಸೋಮವಾರ ಕ್ರಿಕೆಟ್ ಬದುಕಿಗೆ ವಿದಾಯ ಹೇಳಿದರು. ಪ್ರತಿಭಾನ್ವಿತ ಬಲಗೈ ಬ್ಯಾಟ್ಸ್ ಮನ್ ಆಗಿದ್ದ ಸುಜಿತ್ ಸೋಮಸುಂದರ್ 1990-91ರಲ್ಲಿ ಮೊದಲ ಬಾರಿಗೆ ಕರ್ನಾಟಕದ ಪರ ರಣಜಿ ಪಂದ್ಯದಲ್ಲಿ ಆಡಿದ್ದರು.

2007: ಕರ್ನಾಟಕದ ನಿವೃತ್ತ ಪೊಲೀಸ್ ಮಹಾನಿರ್ದೇಶಕ ಸಿ. ದಿನಕರ್ ಮತ್ತು ಇತರರ ವಿರುದ್ಧ ಉದ್ಯಮಿ ವಿ.ಜಿ. ಸಿದ್ಧಾರ್ಥ ಹೂಡಿದ್ದ ಮಾನನಷ್ಟ ಮೊಕದ್ದಮೆಯನ್ನು ದೆಹಲಿ ಹೈಕೋರ್ಟ್ ತಳ್ಳಿ ಹಾಕಿತು. ಕೋರ್ಟ್ ವೆಚ್ಚಕ್ಕಾಗಿ ಅಧಿಕಾರಿಗಳಿಗೆ ಒಂದು ಲಕ್ಷ ರೂಪಾಯಿಗಳನ್ನು ನೀಡುವಂತೆಯೂ ನ್ಯಾಯಾಲಯ ಸಿದ್ಧಾರ್ಥ ಅವರಿಗೆ ನ್ಯಾಯಾಲಯ ಸೂಚಿಸಿತು. ಎಸ್.ಎಂ. ಕೃಷ್ಣ ಅವರು ಕರ್ನಾಟಕದ ಮುಖ್ಯಮಂತ್ರಿಯಾಗ್ದಿದಾಗ ಕಾಡುಗಳ್ಳ ವೀರಪ್ಪನ್ ಅವರು ಡಾ. ರಾಜಕುಮಾರ್ ಅವರನ್ನು ಅಪಹರಿಸಿ, ಬಿಡುಗಡೆ ಮಾಡಿದ ಪ್ರಕರಣ ಬಗ್ಗೆ ದಿನಕರ್ ಅವರು ಬರೆದ `ವೀರಪ್ಪನ್ಸ್ ಪ್ರೈಸ್ ಕ್ಯಾಚ್: ರಾಜಕುಮಾರ' ಪುಸ್ತಕದಲ್ಲಿ ತಮ್ಮ ಘನತೆಗೆ ಕುಂದು ತರುವಂತಹ ಅಂಶಗಳನ್ನು ಪ್ರಸ್ತಾಪಿಸಿದ್ದಾರೆ ಎಂದು ಆರೋಪಿಸಿ ಸಿದ್ಧಾರ್ಥ ಮೊಕದ್ದಮೆ ಹೂಡಿದ್ದರು. 

2007: ಹಠಾತ್ ಬೆಳವಣಿಗೆಯೊಂದರಲ್ಲಿ ಚುನಾವಣಾ ಆಯೋಗವು ಉತ್ತರ ಪ್ರದೇಶ ರಾಜ್ಯ ವಿಧಾನಸಭೆಗೆ ಏಳು ಹಂತಗಳ ಚುನಾವಣೆಯನ್ನು ಘೋಷಿಸಿತು. ಇದರಿಂದಾಗಿ ವಜಾಭೀತಿಯಲ್ಲಿದ್ದ ಮುಲಯಂ ಸಿಂಗ್ ಸರ್ಕಾರವು ಈ ತೂಗುಕತ್ತಿಯಿಂದ ಸದ್ಯಕ್ಕೆ ಪಾರಾಯಿತು.

2006: ಉದರದ ಸಮಸ್ಯೆಗಳಿಗಾಗಿ ಶಸ್ತ್ರಚಿಕಿತ್ಸೆ ನಡೆದ ಎರಡು ತಿಂಗಳುಗಳಿಗೂ ಹೆಚ್ಚು ಕಾಲದ ವಿಶ್ರಾಂತಿಯ ಬಳಿಕ ಅಮಿತಾಭ್ ಬಚ್ಚನ್ ಅವರು ಬಾಬುಲ್ ಹಾಡು ಮುದ್ರಣ ಮಾಡಿಸಿಕೊಂಡರು.

2006: ರಾಷ್ಟ್ರದ್ಯಂತ ಕುತೂಹಲ ಕೆರಳಿಸಿದ್ದ, ನೂರಾರು ಜನರ ಸಮ್ಮುಖದಲ್ಲಿ ನಡೆದಿದ್ದ ರೂಪದರ್ಶಿ ಜೆಸ್ಸಿಕಾಲಾಲ್ ಕೊಲೆ ಪ್ರಕರಣದ ಮುಖ್ಯ ಆರೋಪಿ ಮನುಶರ್ಮಾ ಸೇರಿದಂತೆ ಎಲ್ಲ ಒಂಬತ್ತು ಆರೋಪಿಗಳನ್ನು ದೆಹಲಿ ನ್ಯಾಯಾಲಯವು ಖುಲಾಸೆ ಮಾಡಿತು. 1999ರ ಏಪ್ರಿಲ್ 29ರ ಮಧ್ಯರಾತ್ರಿ ಜೆಸ್ಸಿಕಾಲಾಲ್ ಕೊಲೆ ನಡೆದಿತ್ತು. ದೆಹಲಿಯ ಹೆಚ್ಚುವರಿ ಸೆಷನ್ಸ್ ನ್ಯಾಯಾಧೀಶ ಭಾಯನಾ ಅವರು ಸಾಕ್ಷ್ಯಗಳ ಅಭಾವದ ಕಾರಣಕ್ಕಾಗಿ ಮಾಜಿ ಕೇಂದ್ರ ಸಚಿವ ವಿನೋದ್ ಶರ್ಮಾ ಅವರ ಪುತ್ರ ಸಿದ್ಧಾರ್ಥ ವಸಿಷ್ಠ ಯಾನೆ ಮನು ಶರ್ಮಾ ಮತ್ತು ಇತರರನ್ನು ಆರೋಪಮುಕ್ತಗೊಳಿಸಿ ತೀರ್ಪು ನೀಡಿದರು. ಈ ತೀರ್ಪಿನ ವಿರುದ್ಧ ಸಾರ್ವಜನಿಕರಿಂದ ವ್ಯಾಪಕ ಅಸಮಾಧಾನ ಭುಗಿಲೆದ್ದು, ಜನ ನೇರವಾಗಿ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರಿಗೆ ಪ್ರಕರಣದ ಮರುವಿಚಾರಣೆ ನಡೆಸುವಂತೆ ಆಗ್ರಹಿಸಿ ಪತ್ರಗಳನ್ನು ಬರೆದರು.

1974: ಕಲಾವಿದ ಋತ್ವಿಕ್ ಸಿಂಹ ಜನನ.

1964: ಸುಗಮ ಸಂಗೀತ, ಜಾನಪದ, ರಂಗಭೂಮಿ ಮತ್ತಿತರ ಸಾಂಸ್ಕೃತಿಕ ಸಂಘಟನೆಗಳ ರೂವಾರಿ, ಗಾಯಕ ಕಿಕ್ಕೇರಿ ಕೃಷ್ಣಮೂರ್ತಿ ಅವರು ಬಿ.ಎಸ್. ನಾರಾಯಣ ಭಟ್- ರುಕ್ಮಿಣಮ್ಮ ದಂಪತಿಯ ಮಗನಾಗಿ ಮಂಡ್ಯ ಜಿಲ್ಲೆಯ ಕಿಕ್ಕೇರಿಯಲ್ಲಿ ಜನಿಸಿದರು.

1961: ಕಲಾವಿದ ಮಂಜುಮಯ್ಯ ಜೆ. ಜನನ.

1947: ಎಡ್ವಿನ್ ಎಚ್ ಲ್ಯಾಂಡ್ ಸಾರ್ವಜನಿಕವಾಗಿ ತನ್ನ ಪೋಲರೈಡ್ ಲ್ಯಾಂಡ್ ಕ್ಯಾಮರಾವನ್ನು ಪ್ರದರ್ಶಿಸಿದ. ಈ ಕ್ಯಾಮರಾ 60 ಸೆಕೆಂಡುಗಳಲ್ಲಿ ಕಪ್ಪು ಬಿಳುಪು ಛಾಯಾಚಿತ್ರ ತೆಗೆದುಕೊಡುವ ಸಾಮರ್ಥ್ಯ ಹೊಂದಿತ್ತು.

1924: ರಾಬರ್ಟ್ ಮುಗಾಬೆ ಹುಟ್ಟಿದ ದಿನ. ಇವರು ಜಿಂಬಾಬ್ವೆಯ ಪ್ರಥಮ ಪ್ರಧಾನಿಯಾಗಿ 1980ರಿಂದ 1987ರ ಅವಧಿಯಲ್ಲಿ ಆಡಳಿತ ನಡೆಸಿದರು. 

1916: ಮೊದಲ ಜಾಗತಿಕ ಸಮರ ಕಾಲದ `ವೆರ್ಡನ್ ಹೋರಾಟ' ಆರಂಭವಾಯಿತು. ಫ್ರೆಂಚ್ ಕಡೆಯಲ್ಲಿ ಅಪಾರ ಸಾವು ನೋವು ಆಗುವಂತೆ ಮಾಡುವಲ್ಲಿ ಸಫಲರಾದರೂ ವೆರ್ಡನನ್ನು ವಶಪಡಿಸಿಕೊಳ್ಳುವಲ್ಲಿ ಜರ್ಮನ್ನರು ವಿಫಲರಾದರು.

1894: ಭಾರತೀಯ ವಿಜ್ಞಾನಿ ಶಾಂತಿ ಸ್ವರೂಪ್ ಭಟ್ನಾಗರ್ (1894-1955) ಹುಟ್ಟಿದ ದಿನ. ವಿಜ್ಞಾನ ಕ್ಷೇತ್ರದಲ್ಲಿ ಮಾಡುವ ಸಾಧನೆಗೆ ನೀಡುವ ಸರ್ವೋನ್ನತ ಪ್ರಶಸ್ತಿಗೆ ಇವರ ಹೆಸರನ್ನೇ (ಭಟ್ನಾಗರ್ ಪ್ರಶಸ್ತಿ) ಇಡಲಾಗಿದೆ.

1822: ರಿಚರ್ಡ್ ಸೌತ್ ವೆಲ್ ಬೌರ್ಕೆ (1822-1872) ಹುಟ್ಟಿದ ದಿನ. ಐರಿಷ್ ರಾಜಕಾರಣಿ ಹಾಗೂ ಮೇಯೋವಿನ ಅಧಿಕಾರಿಯಾಗಿದ್ದ ಈತ ಭಾರತದ ವೈಸ್ ರಾಯ್ ಆಗಿದ್ದ ಕಾಲದಲ್ಲಿ ಮೊತ್ತ ಮೊದಲ ಬಾರಿಗೆ ಜನಗಣತಿ ನಡೆಸಿದ. ಅಜ್ಮೀರದಲ್ಲಿ ಮೇಯೊ ಕಾಲೇಜ್ ಸ್ಥಾಪಿಸಿದ. ಕೃಷಿ ಮತ್ತು ವಾಣಿಜ್ಯಕ್ಕಾಗಿ ಪ್ರತ್ಯೇಕ ಇಲಾಖೆಗಳನ್ನು ಆರಂಭಿಸಿದ. 

1804: ಬ್ರಿಟಿಷ್ ಎಂಜಿನಿಯರ್ ರಿಚರ್ಡ್ ಟ್ರಿವಿಥಿಕ್ ಮೊತ್ತ ಮೊದಲ ಬಾರಿಗೆ ಹಳಿಗಳ ಮೇಲೆ ಉಗಿಯಂತ್ರವನ್ನು ಓಡಿಸಿದ.

1741: ಇಂಗ್ಲಿಷ್ ಕೃಷಿ ತಜ್ಞ ಜೆತ್ರೊ ಟುಲ್ (1674-1741) ಮೃತನಾದ. ಬರಹಗಾರ, ಸಂಶೋಧಕ ಹಾಗೂ ಕೃಷಿತಜ್ಞನಾದ ಈತನ ಕಲ್ಪನೆಗಳು ಆಧುನಿಕ ಬ್ರಿಟಿಷ್ ಕೃಷಿಗೆ ಅಡಿಪಾಯ ಹಾಕಿದವು.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Wednesday, February 25, 2009

ಇಂದಿನ ಇತಿಹಾಸ History Today ಫೆಬ್ರುವರಿ 20

ಇಂದಿನ ಇತಿಹಾಸ

ಫೆಬ್ರುವರಿ 20


ರಂಗ ಚಳವಳಿಯ ನೇತಾರ ಕೆ.ವಿ. ಸುಬ್ಬಣ್ಣ (20-2-1932ರಿಂದ 16-7-2005) ಅವರು ಕೆ.ವಿ. ರಾಮಪ್ಪ- ಸಾವಿತ್ರಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಮುಂಡಿಗೇಸರದಲ್ಲಿ ಜನಿಸಿದರು.

2008: ಬಹು ನಿರೀಕ್ಷೆ ಹುಟ್ಟಿಸಿದ ಭಾರತ ಪ್ರೀಮಿಯರ್ ಲೀಗ್(ಐಪಿಎಲ್)ನ ತಂಡಗಳಿಗಾಗಿ ಆಟಗಾರರ ಹರಾಜು ಪ್ರಕ್ರಿಯೆ ಮುಂಬೈಯಲ್ಲಿ ನಡೆದು ಮಹೇಂದ್ರ ಸಿಂಗ್ ದೋನಿ ಅತಿ ಹೆಚ್ಚು ಹಣಕ್ಕೆ ಮಾರಾಟವಾದರು. ಚೆನ್ನೈನ ಸೂಪರ್ ಕಿಂಗ್ಸ್ ತಂಡ ಭಾರತ ಏಕದಿನ ತಂಡದ ನಾಯಕನನ್ನು ಆರು ಕೋಟಿ ರೂಪಾಯಿ ಮೊತ್ತಕ್ಕೆ ಖರೀದಿಸಿತು. ಇದರೊಂದಿಗೆ ದೋನಿ ವಿಶ್ವದ ಬಹು ಬೆಲೆಯುಳ್ಳ ಕ್ರಿಕೆಟಿಗ ಎನಿಸಿದರು. ವಿಶ್ವದ ಕ್ರಿಕೆಟ್ ಇತಿಹಾಸದಲ್ಲೇ ಈ ರೀತಿ ಕ್ರಿಕೆಟಿಗರ ಹರಾಜು ನಡೆದದ್ದು ಇದೇ ಮೊತ್ತ ಮೊದಲು. ಈ ಹರಾಜಿನ ಮೂಲಕ ಭಾರತ ಕ್ರಿಕೆಟಿನಲ್ಲಿ ಹಣದ ಹೊಳೆ ಹರಿಯಿತು. ಇಂಗ್ಲೆಂಡಿನ ರಿಚರ್ಡ್ ಮೆಡ್ಲೆ ಅವರು ಖಾಸಗಿ ಹೋಟೆಲಿನಲ್ಲಿ ಬಿಡ್ ಪ್ರತಿಕ್ರಿಯೆ ನಡೆಸಿಕೊಟ್ಟರು. ಆರು ಸುತ್ತುಗಳ ಹರಾಜು ಪ್ರಕ್ರಿಯೆಯಲ್ಲಿ ಒಟ್ಟು 77 ಆಟಗಾರರನ್ನು ಎಂಟು ತಂಡಗಳು ಖರೀದಿಸಿದವು. ಹರಾಜಿನ ಒಟ್ಟು ಮೊತ್ತ 160 ಕೋಟಿ ರೂ. ಹರಾಜಿನಲ್ಲಿ ಬೆಂಗಳೂರು, ಮುಂಬೈ, ಜೈಪುರ, ದೆಹಲಿ, ಹೈದರಾಬಾದ್, ಕೋಲ್ಕತ್ತ, ಮೊಹಾಲಿ ಹಾಗೂ ಚೆನ್ನೈ ತಂಡಗಳು ಪಾಲ್ಗೊಂಡಿದ್ದವು.

 2008: ಚಿನ್ನದ ಬೆಲೆಯು ದೇಶದ ಪ್ರಮುಖ ಚಿನಿವಾರ ಪೇಟೆಗಳಲ್ಲಿ ಗಗನಕ್ಕೆ ಚಿಮ್ಮಿ, ತಲಾ 10 ಗ್ರಾಂಗಳಿಗೆ ರೂ 12 ಸಾವಿರದ ಗಡಿ ದಾಟಿ ಹೊಸ ದಾಖಲೆ ಬರೆಯಿತು. ಕುಸಿದ ಷೇರುಪೇಟೆ ಮತ್ತು ಹೆಚ್ಚುತ್ತಿರುವ ಕಚ್ಚಾ ತೈಲದ ಬೆಲೆ ಹಿನ್ನೆಲೆಯಲ್ಲಿ ಚಿನ್ನವು ಹಣ ಹೂಡಿಕೆದಾರರಿಗೆ `ಬದಲಿ ಸ್ವರ್ಗ'ವಾಗಿ ಪರಿಣಮಿಸಿತು.

2008: ಸುಮಾತ್ರಾ ದ್ವೀಪದ ಬಳಿ ಸಮುದ್ರದ ಆಳದಲ್ಲಿ ತೀವ್ರ ಸ್ವರೂಪದ ಭೂಕಂಪ ಸಂಭವಿಸಿತು. ಕನಿಷ್ಠ ಮೂವರು ಮೃತರಾಗಿ, ಇತರ 25 ಮಂದಿ ಗಾಯಗೊಂಡರು. ಅನೇಕ ಕಟ್ಟಡಗಳು ನೆಲಸಮವಾದವು. ರಿಕ್ಟರ್ ಮಾಪಕದಲ್ಲಿ ಭೂಕಂಪನ ತೀವ್ರತೆಯು 7.6ರಷ್ಟಿತ್ತೆಂದು ಅಮೆರಿಕ ಹವಾಮಾನ ಇಲಾಖೆ ತಿಳಿಸಿತು. ಸುನಾಮಿ ಭೀತಿ ಇತ್ತಾದರೂ ಅದು ಸಂಭವಿಸಲಿಲ್ಲ.

2008: ಸಂಗೀತ ಕೇಳುವುದು ಆರೋಗ್ಯಕ್ಕೆ ಒಳ್ಳೆಯದು ಎಂಬುದನ್ನು ಹಲವು ಸಂಶೋಧನೆಗಳು ಹೇಳುತ್ತಾ ಬಂದಿವೆ. ಇನ್ನೊಂದು ಹೊಸ ಸಂಶೋಧನೆಯೂ ಇದೇ ಅಭಿಪ್ರಾಯ ವ್ಯಕ್ತಪಡಿಸಿದ್ದು `ಲಕ್ವಾ(ಪಾರ್ಶ್ವವಾಯು) ರೋಗಿಗಳು ಚೇತರಿಸಿಕೊಳ್ಳಲು ಸಂಗೀತವು ಹೆಚ್ಚು ಸಹಕಾರಿ' ಎಂದು ಹೇಳಿತು. ಲಕ್ವಾ ಹೊಡೆದ ಮೊದಲ ಕೆಲವು ದಿನಗಳಲ್ಲಿ ಪ್ರತಿದಿನ ಸಂಗೀತ ಆಲಿಸಿದರೆ ಬೇಗ ಚೇತರಿಸಿಕೊಳ್ಳಬಹುದು. ಇದು ಖರ್ಚಿಲ್ಲದ ಮಾರ್ಗ ಕೂಡ.  ಸಂಗೀತವು ರೋಗಿಗಳ ಸಂವೇದನಾ ಶಕ್ತಿಗೆ ಚುರುಕು ನೀಡಿ ಭಾವನೆಗಳನ್ನು ಉದ್ದೀಪಿಸುತ್ತದೆ ಎಂದು ಲಂಡನ್ನಿನ ಸಂಶೋಧಕರು ವಿವರಿಸಿದರು. ಪಾರ್ಶ್ವವಾಯು ಪೀಡಿತರಾಗಿದ್ದ 60 ರೋಗಿಗಳ ಮೇಲೆ ನಡೆಸಿದ ಪ್ರಯೋಗದಿಂದ ಇದು ಖಚಿತವಾಯಿತು ಎಂದೂ ಅವರು ಹೇಳಿದರು.

2008: ಚೆನ್ನೈಯ ಖ್ಯಾತ ಸುವಾರ್ತಾ ಬೋಧಕ (ಎವಂಜೆಲಿಸ್ಟ್) ಹಾಗೂ `ಜೀಜಸ್ ಕಾಲ್ಸ್' ಮಿನಿಸ್ಟ್ರಿ ಸಂಸ್ಥೆಯ  ಸಂಸ್ಥಾಪಕ ಬ್ರದರ್ ಡಿ. ಜಿ. ಎಸ್. ದಿನಕರನ್ (73) ಅಪೊಲೊ ಆಸ್ಪತ್ರೆಯಲ್ಲಿ ನಿಧನರಾದರು. 

2008: ಕ್ರಾಂತಿಕಾರಿ ದಲಿತ ಕವಿ ಎಂದೇ ಹೆಸರಾಗಿದ್ದ  ಅರುಣ್ ಕಾಳೆ(55) ನಾಸಿಕ್ನಲ್ಲಿ ಹೃದಯಾಘಾತದಿಂದ ನಿಧನರಾದರು. ಕಾಳೆ ಅವರಿಗೆ 2007ರಲ್ಲಿ ಮಹಾರಾಷ್ಟ್ರ ಫೌಂಡೇಷನ್ ಬತ್ಕಾರಿ ಥೊಂಬ್ರೆ ಪುರಸ್ಕಾರ್ ಪ್ರಶಸ್ತಿ ನೀಡಿ ಗೌರವಿಸಿತ್ತು. ಈ ಪುರಸ್ಕಾರದ ಜೊತೆಗೆ ಹತ್ತು  ಹಲವು ಪ್ರಶಸ್ತಿಗಳು ಕಾಳೆಯವರಿಗೆ ಲಭಿಸಿದ್ದವು. ಕವಿ ಅರುಣ್ ಅವರ `ರಾಕ್ ಗಾರ್ಡನ್' ಮತ್ತು 'ಸಾಯಿರಾಂಚೆ ಶಹರ್' ಎಂಬ ಎರಡು ಕವನ ಸಂಕಲನಗಳು ಬಹಳ ಪ್ರಸಿದ್ಧಿಪಡೆದಿವೆ. 'ಸಾಯಿರಾಂಚೆ ಶಹರ್' ಕವನ ಸಂಕಲನ ಹಿಂದಿ, ಮಲಯಾಳ ಮತ್ತು ಬೆಂಗಾಲಿ ಭಾಷೆಗಳಿಗೆ ತರ್ಜುಮೆಯಾಗಿದೆ.

2008: ವಿಶ್ವದ ಮೊದಲ ಬ್ರಾಡ್ ಗೇಜ್ ಕೋಚ್ ರೆಸ್ಟೋರೆಂಟ್ ಎಂಬ ಹೆಗ್ಗಳಿಕೆ ಹೊಂದಿರುವ ಮಧ್ಯಪ್ರದೇಶ ಪ್ರವಾಸೋದ್ಯಮ ಇಲಾಖೆಯ ಆಧೀನದಲ್ಲಿರುವ ಭೂಪಾಲಿನ ಶಾನ್-ಎ-ಭೂಪಾಲ್ ರೈಲಿಗೆ ಮತ್ತೊಂದು ಗರಿ. ಕೇಂದ್ರ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಕೊಡುವ ಅತ್ಯಂತ ಅನ್ವೇಷಣಾತ್ಮಕ, ಅಪೂರ್ವ ಪ್ರವಾಸೋದ್ಯಮ ಯೋಜನಾ ಪ್ರಶಸ್ತಿ ಅದಕ್ಕೆ ಲಭಿಸಿತು.

2008: ಬೆಂಗಳೂರು ಸದಾಶಿವನಗರದ ಕಾವೇರಿ ಜಂಕ್ಷನ್ ಬಳಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಕೈಗೊಂಡ `ಪ್ರೀ-ಕಾಸ್ಟ್' ಅಂಡರ್ಪಾಸ್ ಈದಿನ ಸಂಜೆ 4 ಗಂಟೆಗೆ ಉದ್ಘಾಟನೆಯಾಯಿತು. ಆದರೆ ನಿಗದಿಯಂತೆ ರಾಜ್ಯಪಾಲ ರಾಮೇಶ್ವರ ಠಾಕೂರ್ ಇದನ್ನು ಉದ್ಘಾಟಿಸಲಿಲ್ಲ. ಬದಲಿಗೆ ಪಾಲಿಕೆಯ ಆಡಳಿತಾಧಿಕಾರಿ ದಿಲೀಪ್ ರಾವ್ ಉದ್ಘಾಟಿಸಿ, ಸಾರ್ವಜನಿಕರ ವಾಹನ ಸಂಚಾರಕ್ಕೆ ಹಸಿರು ನಿಶಾನೆ ತೋರಿದರು.

2008: ಕೇಂದ್ರ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಕೇರಳದ ಖ್ಯಾತ ಸಾಹಿತಿ ಎಂ.ಟಿ.ವಾಸುದೇವನ್ ನಾಯರ್ ಅವರನ್ನು ಸೋಲಿಸುವ ಮೂಲಕ ಪಶ್ಚಿಮ ಬಂಗಾಳದ ಬರಹಗಾರ ಸುನಿಲ್ ಗಂಗೋಪಾಧ್ಯಾಯ ಅವರು ಗೆಲುವು ಸಾಧಿಸಿದರು.

2007: ಸಿಐಟಿಯು ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಚಿತ್ರಬ್ರತ ಮಜುಂದಾರ್ (72) ಕೋಲ್ಕತ್ತದಲ್ಲಿ ನಿಧನರಾದರು.

2007: ವಿಧಾನಪರಿಷತ್ತಿನ ಸಭಾಪತಿ ಚುನಾವಣೆಗೆ ಪಟ್ಟು ಹಿಡಿದು ಆರು ದಿನಗಳಿಂದ ವಿಧಾನಸಭೆಯಲ್ಲಿ ಧರಣಿ ನಡೆಸುತ್ತಿದ್ದ ಕಾಂಗ್ರೆಸ್ ಸದಸ್ಯರು ಈದಿನ ವಿಧಾನಸಭಾಧ್ಯಕ್ಷರ ಪೀಠದತ್ತ ನುಗ್ಗಿ ಮೈಕುಗಳನ್ನು ಕಿತ್ತುಹಾಕಿ ದಾಖಲೆಪತ್ರಗಳನ್ನು ತೂರಾಡಿ ಸಭಾಧ್ಯಕ್ಷರನ್ನು ಪೀಠದಿಂದ ಎಳೆದುಹಾಕಲೂ ಯತ್ನಿಸಿದ ಘಟನೆ ನಡೆಯಿತು. ಗದ್ದಲದ ಮಧ್ಯೆ ಸದನವನ್ನು ದಿನದ ಮಟ್ಟಿಗೆ ಮುಂದೂಡಲಾಯಿತು.

2007: ಕೇರಳದ ಎರ್ನಾಕುಲಂ ಜಿಲ್ಲೆಯ ಕೋಥಮಂಗಲಂ ಬಳಿ ಪೆರಿಯಾರ್ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮವಾಗಿ 20 ಶಾಲಾ ಮಕ್ಕಳು, ಮೂವರು ಶಿಕ್ಷಕರು ನೀರು ಪಾಲಾದರು. ಕೊಚ್ಚಿ ಸಮೀಪದ ಡಾ. ಸಲೀಂ ಅಲಿ ಪಕ್ಷಿಧಾಮಕ್ಕೆ ಪ್ರವಾಸ ತೆರಳಿದ್ದಾಗ ಈ ದುರಂತ ಸಂಭವಿಸಿತು.

2007: ಸಮ್ ಜೌತಾ ಎಕ್ಸ್ ಪ್ರೆಸ್ ರೈಲಿನಲ್ಲಿ ಸಂಭವಿಸಿದ ಸ್ಫೋಟಕ್ಕೆ ಸಂಬಂಧಿಸಿದಂತೆ ಕರ್ತವ್ಯ ಲೋಪದ ಆರೋಪದಲ್ಲಿ ಮೂವರನ್ನು ಅಮಾನತುಗೊಳಿಸಲಾಯಿತು. ಹರಿಯಾಣ ಪೊಲೀಸರು ಇಬ್ಬರು ಶಂಕಿತರ ಮುಖಚಹರೆಯ ಚಿತ್ರಗಳನ್ನು ಬಿಡುಗಡೆ ಮಾಡಿದರು.

2007: ಪಶ್ಚಿಮ ಘಟ್ಟ ಅರಣ್ಯ ಪ್ರದೇಶದಲ್ಲಿ ಚಾರಣಕ್ಕೆ ತೆರಳಿ ಕಣ್ಮರೆಯಾಗಿದ್ದ ಮೂವರು ಸಾಹಿಸಿಗರ ಪೈಕಿ ಪತ್ತೆಯಾಗದೇ ಉಳಿದಿದ್ದ ಮೂರನೇ ವ್ಯಕ್ತಿಯ ಕಳೇಬರ ಕೂಡಾ ಪತ್ತೆಯಾಯಿತು. ಇಬ್ಬರು ಚಾರಣಿಗರ ಕಳೇಬರ ದಿನದ ಹಿಂದೆಯಷ್ಟೇ ಪತ್ತೆಯಾಗಿತ್ತು.

2007: ತರಹಳ್ಳಿ ಅರಣ್ಯ ಭೂಮಿ ಒತ್ತುವರಿ ಪ್ರಕರಣದಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ನೋಂದಣಿ ಮಾಡಿದ ಸರ್ಕಾರಿ ಅಧಿಕಾರಿಗಳು ಮತ್ತು ಒತ್ತುವರಿದಾರರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಿ, ಅರಣ್ಯ ಭೂಮಿಯನ್ನು ವಶಕ್ಕೆ ಪಡೆಯುವಂತೆ ಲೋಕಾಯುಕ್ತ ಎನ್. ಸಂತೋಷ ಹೆಗ್ಡೆ ಅವರು ಕರ್ನಾಟಕ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದರು.


2006: ಧಾರವಾಡದ ಹಿರಿಯ ಸಾಹಿತಿ ಡಾ. ಪಂಚಾಕ್ಷರಿ ಹಿರೇಮಠ ಅವರೂ ಸೇರಿದಂತೆ ವಿವಿಧ ಭಾಷೆಗಳ ಒಟ್ಟು 20 ಸಾಹಿತಿಗಳು ಕೇಂದ್ರ ಸಾಹಿತ್ಯ ಅಕಾಡೆಮಿಯ 2005ನೇ ಸಾಲಿನ ಅನುವಾದ ಪ್ರಶಸ್ತಿಗೆ ಪಾತ್ರರಾದರು. ಹಿರೇಮಠ ಅವರ ಹೇಮಂತ ಋತುವಿನ ಸ್ವರಗಳು ಪ್ರಶಸ್ತಿಗೆ ಪಾತ್ರವಾಗಿರುವ ಕೃತಿ. ಇದು ಜ್ಞಾನಪೀಠ ಪ್ರಶಸ್ತಿ ಪುರಸ್ಕತ ಖ್ವಾರತ್-ಉಲ್-ಹೈದರ್ ಅವರ ಪಥ್ ಝಡ್ ಕೀ ಆವಾಜ್ ಕೃತಿಯ ಅನುವಾದ.

2003: ಅಮೆರಿಕದ ರೋಡೆ ದ್ವೀಪದ ಸ್ಟೇಷನ್ ನೈಟ್ ಕ್ಲಬ್ಬಿನಲ್ಲಿ ಸಂಭವಿಸಿದ ಅಗ್ನಿ ದುರಂತದ್ಲಲಿ 100 ಜನ ಮೃತರಾಗಿ 200ಕ್ಕೂ ಹೆಚ್ಚು ಜನ ಸುಟ್ಟಗಾಯಗಳಿಗೆ ಒಳಗಾದರು.

2002: ಈಜಿಪ್ಟಿನ ರೆಖಾ ಅಲ್- ಗಾರ್ಬಿಯಾದ ರೈಲುಗಾಡಿಯಲ್ಲಿ ಸಂಭವಿಸಿದ ಅಗ್ನಿ ದುರಂತದಲ್ಲಿ ಕನಿಷ್ಠ 370 ಜನ ಮೃತರಾಗಿ 65ಕ್ಕೂ ಹೆಚ್ಚು ಮಂದಿ ಪ್ರಯಾಣಿಕರು ಗಾಯಗೊಂಡರು.

1986: ರಷ್ಯಾದ ಬಾಹ್ಯಾಕಾಶ ನಿಲ್ದಾಣ `ಮೀರ್' ಕಕ್ಷೆಗೆ ಉಡಾವಣೆಗೊಂಡಿತು.

1966: ಅಮೆರಿಕದ ಅಡ್ಮಿರಲ್ ಹಾಗೂ ಎರಡನೇ ಜಾಗತಿಕ ಸಮರ ಕಾಲದಲ್ಲಿ ಫೆಸಿಫಿಕ್ ಪಡೆಯ ಕಮಾಂಡರ್ ಆಗಿದ್ದ ಚೆಸ್ಟರ್ ನಿಮಿಟ್ಜ್ ಸಾನ್ ಫ್ರಾನ್ಸಿಸ್ಕೊದಲ್ಲಿ ತನ್ನ 81ನೇ ಹುಟ್ಟು ಹಬ್ಬಕ್ಕೆ ನಾಲ್ಕು ದಿನ ಮೊದಲು ಮೃತರಾದರು.

1962: ಫ್ರೆಂಡ್ ಶಿಪ್-7 ಬಾಹ್ಯಾಕಾಶ ನೌಕೆಯ ಮೇಲೇರಿ 5 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ಭೂಮಿಗೆ 3 ಪ್ರದಕ್ಷಿಣೆ ಹಾಕಿದ ಜಾನ್ ಗ್ಲೆನ್ ಈ ರೀತಿ ಭೂಮಿಗೆ ಪ್ರದಕ್ಷಿಣೆ ಹಾಕಿದ ಮೊದಲ ಅಮೆರಿಕನ್ ಎಂಬ ಹೆಗ್ಗಳಿಕೆಗೆ ಪಾತ್ರನಾದ. 

1947: ಬ್ರಿಟಿಷ್ ಪ್ರಧಾನಿ ಕ್ಲೆಮೆಂಟ್ ಅಟ್ಲೀ `ಜವಾಬ್ದಾರಿಯುತ ಭಾರತೀಯರ ಕೈಗಳಿಗೆ' ಅಧಿಕಾರ ಹಸ್ತಾಂತರಿಸುವುದಾಗಿ ಪ್ರಕಟಿಸಿದರು. 

1932: ರಂಗ ಚಳವಳಿಯ ನೇತಾರ ಕೆ.ವಿ. ಸುಬ್ಬಣ್ಣ (20-2-1932ರಿಂದ 16-7-2005) ಅವರು ಕೆ.ವಿ. ರಾಮಪ್ಪ- ಸಾವಿತ್ರಮ್ಮ ದಂಪತಿಯ ಮಗನಾಗಿ ಶಿವಮೊಗ್ಗ ಜಿಲ್ಲೆಯ ಮುಂಡಿಗೇಸರದಲ್ಲಿ ಜನಿಸಿದರು. ಕಾಲೇಜು ದಿನಗಳಿಂದಲೇ `ಮಿತ್ರ ಮೇಳ' ನಾಟಕ ಬಳಗದ ಸಕ್ರಿಯ ಸದಸ್ಯರಾಗಿದ್ದ ಅವರು ಹೆಗ್ಗೋಡಿನಲ್ಲಿ ಬೆಳೆಸಿದ `ನೀಲಕಂಠೇಶ್ವರ ನಾಟ್ಯ ಸೇವಾ ಸಂಘ' (ನೀನಾಸಂ) ಏಷ್ಯಾದಲ್ಲೇ ವಿನೂತನ ಮಾದರಿಯ ನಾಟಕ ಸೇವಾಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿದೆ. ಈ ಹೆಗ್ಗೋಡು ನಾಟಕ ಕಲಾವಿದರ ಪಾಲಿಗೆ ಇಂದು ಕಾಶಿ. ಇದನ್ನು ಹುಟ್ಟು ಹಾಕಿದ್ದು ಸುಬ್ಬಣ್ಣ ಅವರ ತಂದೆ ರಾಮಪ್ಪ. ತೆಂಗಿನಗರಿಯ ರಂಗಮಂಟಪ ಮೂಲಕ ಸುಬ್ಬಣ್ಣ ಇದಕ್ಕೆ ಹೊಸ ಆಯಾಮ ನೀಡಿದರು. ಅವರು ನಿರ್ಮಿಸಿದ 750 ಆಸನಗಳ ಅಂತಾರಾಷ್ಟ್ರೀಯ ಖ್ಯಾತಿಯ ಗ್ರಾಮೀಣ `ಶಿವರಾಮ ಕಾರಂತ' ರಂಗಮಂದಿರ, ಚಲನಚಿತ್ರ ರಸಗ್ರಹಣ ಶಿಬಿರಗಳು, ನೀನಾಸಂ ನಾಟಕಗಳು, ನೀನಾಸಂ ತಿರುಗಾಟ ಇವೆಲ್ಲ ರಂಗಚಳವಳಿಗೆ ಹೊಸ ಹೊಳಪು ನೀಡಿದ್ದವು. ಅಕ್ಷರ ಪ್ರಕಾಶನದ ಮೂಲಕ ಹಲವಾರು ಕೃತಿಗಳನ್ನು ಪ್ರಕಟಿಸಿದ ಸುಬ್ಬಣ್ಣ ಅವರಿಂದ ಸಾಹಿತ್ಯ ಕ್ಷೇತ್ರಕ್ಕೂ ಅಪಾರ ಕೊಡುಗೆ. ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಏಷ್ಯಾದ ನೊಬೆಲ್ ಎಂದೇ ಖ್ಯಾತವಾಗಿರುವ ಮ್ಯಾಗ್ಸೆಸೆ ಪ್ರಶಸ್ತಿ ಇತ್ಯಾದಿ ಅಸಂಖ್ಯಾತ ಪ್ರಶಸ್ತಿಗಳು ಅವರನ್ನು ಅರಸಿ ಬಂದಿದ್ದವು.

1904: ಅಲೆಕ್ಸಿ ಕೊಸಿಗಿನ್ (1904-1980) ಹುಟ್ಟಿದ ದಿನ. ಇವರು ಸೋವಿಯತ್ ಒಕ್ಕೂಟದ ಪ್ರಧಾನಿಯಾಗಿದ್ದರು.

1893: ವಲಿಲಿಯಮ್ `ಬಿಗ್ ಬಿಲ್' ಟೈಡನ್ (1893-1953) ಹುಟ್ಟಿದ ದಿನ. ಅಮೆರಿಕದ ಟೆನಿಸ್ ಆಟಗಾರನಾದ ಈತ ಏಳು ಅಮೆರಿಕನ್ ಚಾಂಪಿಯನ್ ಶಿಪ್ಗಳು ಹಾಗೂ ಮೂರು ವಿಂಬಲ್ಡನ್ ಪ್ರಶಸ್ತಿಗಳನ್ನು ಗೆದ್ದುಕೊಂಡ ವ್ಯಕ್ತಿ.

1869: ಸಿಸಿರ್ ಕುಮಾರ್ ಘೋಷ್ ಅವರು ಕಲ್ಕತ್ತಾದಲ್ಲಿ (ಈಗಿನ ಕೋಲ್ಕತ್ತಾ) ಭಾಷಾ ವೃತ್ತಪತ್ರಿಕೆಯಾಗಿ `ಅಮೃತಬಜಾರ್ ಪತ್ರಿಕಾ' ಆರಂಭಿಸಿದರು.

1844: ಜೊಶುವಾ ಸ್ಲೊಕಮ್ (1844-1909) ಹುಟ್ಟಿದ ದಿನ. ಕೆನಡಾದ ನೌಕಾಯಾನಿ ಹಾಗು ಸಾಹಸಿಯಾದ ಈತ ಏಕಾಂಗಿಯಾಗಿ ಜಗತ್ತಿನ ಸುತ್ತ ನಾವೆಯಲ್ಲಿ ಪಯಣಿಸಿದ ಮೊದಲ ವ್ಯಕ್ತಿ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

ಇಂದಿನ ಇತಿಹಾಸ History Today ಫೆಬ್ರುವರಿ 19

ಇಂದಿನ ಇತಿಹಾಸ

ಫೆಬ್ರುವರಿ 19

ಕೇಂದ್ರದ ಮಾಜಿ ಸಚಿವೆ, ಬಿಜೆಪಿ ನಾಯಕಿ ಬಸವರಾಜೇಶ್ವರಿ (85) ಅವರು ಬೆಳಿಗ್ಗೆ 11.15ಕ್ಕೆ ಬಳ್ಳಾರಿನಗರದಲ್ಲಿ ನಿಧನರಾದರು. 1957ರಿಂದ ಸಕ್ರಿಯ ರಾಜಕಾರಣ ಪ್ರವೇಶಿಸಿದ ಅವರು 1957, 1962 ಮತ್ತು 1967ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ಜಿಲ್ಲೆ ಮಾನ್ವಿ ಕ್ಷೇತ್ರವನ್ನು ಪ್ರತಿನಿಧಿಸಿ 3 ಬಾರಿ ಶಾಸಕಿಯಾಗಿದ್ದರು. 

2008: ಮೀನು ಪ್ರಿಯರಿಗೊಂದು ಖುಷಿಯ ಸುದ್ದಿ. ಪಶ್ಚಿಮ ಘಟ್ಟದ ಜಲಸಂಪನ್ಮೂಲಗಳಲ್ಲಿ ಮೂರು ಹೊಸ ಜಾತಿಯ ಮೀನುಗಳು ಪತ್ತೆಯಾದವು. ಮಂಗಳೂರು ನಗರದ ಸಾಗರ ಉತ್ಪನ್ನಗಳ ರಫ್ತು ಅಭಿವೃದ್ಧಿ ಪ್ರಾಧಿಕಾರದ ಉಪನಿರ್ದೇಶಕರ ಕಚೇರಿಯ ಅಲಂಕಾರಿಕ ಮೀನು ಅಭಿವೃದ್ಧಿಯ ರಾಜ್ಯ ಸಹನಿಯೋಜಕ ಡಾ. ಪ್ರಮೋದ್ ಪಿ.ಕೆ. ಅವರು ಈ ಮೀನುಗಳನ್ನು ಪತ್ತೆ ಹಚ್ಚಿದರು. ಡೇನಿಯೋ, ಶಿಸ್ತುರಾ ಮತ್ತು ಮೀಸೋನಿಮಕೈಲಸ್ ಪ್ರಬೇಧಗಳಿಗೆ ಸೇರಿದ ಈ ಮೀನುಗಳು ಆಗುಂಬೆ ಪರಿಸರದ ತೊರೆಗಳಲ್ಲಿ ಮತ್ತು ಅದಕ್ಕೆ ಸೇರಿದ ಶಿವಮೊಗ್ಗದ ಸೀತಾನದಿಯ ಕೊನೆಯವರೆಗೂ ಇರುವುದು ಪತ್ತೆಯಾಗಿದೆ ಎಂದು ಡಾ. ಪ್ರಮೋದ್ ಪಿ.ಕೆ. ತಿಳಿಸಿದರು. ಚೆನ್ನೈಯ ಭಾರತೀಯ ಪ್ರಾಣಿ ಸರ್ವೇಕ್ಷಣಾ ಸಂಸ್ಥೆಯ ಡಾ. ಕೆ.ರಮಾದೇವಿ ಹಾಗೂ ಡಾ.ಟಿ.ಜೆ.ಇಂದ್ರ ಅವರು ಈಗ ಪತ್ತೆಯಾಗಿರುವ ಮೀನುಗಳನ್ನು ಹೊಸ ಜಾತಿಯ ಮೀನುಗಳೆಂದು ದೃಢೀಕರಿಸಿದರು. ಈ ಮೀನುಗಳು ವೈವಿಧ್ಯಮಯ ಬಣ್ಣಗಳನ್ನು ಹೊಂದಿದ್ದು ಅಲಂಕಾರಿಕ ಮೀನುಗಳಾಗಿ ಅಭಿವೃದ್ಧಿಪಡಿಸಬಹುದು ಎಂದು ಅವರು ಹೇಳಿದರು.

2008: ಪಾಕಿಸ್ಥಾನದ ಸಂಸದೀಯ ಚುನಾವಣೆಗಳಲ್ಲಿ ಅಧ್ಯಕ್ಷ ಜನರಲ್ ಪರ್ವೇಜ್ ಮುಷರಫ್ ವಿರುದ್ಧ ಜನಾದೇಶ ಹೊರಹೊಮ್ಮಿ ಅವರು ಭಾರಿ ಮುಖಭಂಗ ಅನುಭವಿಸಿದರು. ಯಾವುದೇ ಒಂದು ಪಕ್ಷವೂ ಸ್ಪಷ್ಟ ಬಹುಮತ ಪಡೆಯಲಿಲ್ಲ. ಆದರೆ ಮಾಜಿ ಪ್ರಧಾನಿ ಬೆನಜೀರ್ ಭುಟ್ಟೊ ಹತ್ಯೆಯ ಅನುಕಂಪದಿಂದ ಪಾಕಿಸ್ಥಾನ ಪೀಪಲ್ಸ್ ಪಕ್ಷವು 87 ಸ್ಥಾನಗಳನ್ನು ತನ್ನ ಮಡಿಲಿಗೆ ಹಾಕಿಕೊಂಡು ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಮಾಜಿ ಪ್ರಧಾನಿ ನವಾಜ್ ಷರೀಫ್ ಅವರ ಪಕ್ಷ ಪಿಎಂಎಲ್-ಎನ್ 66 ಸ್ಥಾನಗಳಿಸಿ ಎರಡನೇ ಅತಿದೊಡ್ಡ ಪಕ್ಷವಾಯಿತು. ಮುಷರಫ್ ಅವರ ಪಕ್ಷ ಪಿಎಂಎಲ್ ಕ್ಯೂ-38 ಸ್ಥಾನ ಗಳಿಸಿದರೆ, ಅವರ ಬೆಂಬಲಿಗ ಪಕ್ಷಗಳು ಒಟ್ಟು 19 ಸ್ಥಾನ ಗಳಿಸಿದವು. ಮುಷರಫ್ ಅವರು 1999ರ ಅಕ್ಟೋಬರಿನಲ್ಲಿ ರಕ್ತರಹಿತ ಕ್ರಾಂತಿ ನಡೆಸಿ ಅಧ್ಯಕ್ಷ ಸ್ಥಾನಕ್ಕೇರಿದ್ದರು.

2008: ಕಳೆದ 50 ವರ್ಷಗಳಿಂದ ಅಮೆರಿಕದ ಪಾಲಿಗೆ ಸಿಂಹಸ್ವಪ್ನ ಎನಿಸಿದ್ದ ಪುಟ್ಟ ಕಮ್ಯುನಿಸ್ಟ್ ರಾಷ್ಟ್ರ ಕ್ಯೂಬಾದ ಅಧ್ಯಕ್ಷ ಫಿಡೆಲ್ ಕ್ಯಾಸ್ಟ್ರೊ ಹವಾನಾದಲ್ಲಿ ಅಧ್ಯಕ್ಷ ಪದವಿಗೆ ರಾಜೀನಾಮೆ ನೀಡಿದರು.

2008: ಅಂತರ್ಜಾತೀಯ ವಿವಾಹವಾಗುವ ಮೂಲಕ ಪರಿಶಿಷ್ಟ ಜಾತಿ ಅಥವಾ ಪರಿಶಿಷ್ಟ ಪಂಗಡದವರಿಗಿದ್ದ ಮೀಸಲಾತಿ ಸೌಲಭ್ಯ ಪಡೆಯಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್ ತೀರ್ಪು ನೀಡಿತು. ಜಾತಿ ಆಧಾರಿತಮೀಸಲಾತಿ ಸೌಲಭ್ಯ ಆಧರಿಸಿ  ವ್ಯಕ್ತಿಯೊಬ್ಬ ತಾನು ಹುಟ್ಟಿನಿಂದ ಪರಿಶಿಷ್ಟ ಜಾತಿ ಅಥವಾ ಪಂಗಡದವನಾಗಲು ಸಾಧ್ಯವಿಲ್ಲ. ಕೇವಲ ಆ ಜಾತಿ ಅಥವ ಪಂಗಡದವರನ್ನು ಮದುವೆಯಾಗಿ ಮೀಸಲಾತಿಗೆ ಅರ್ಜಿ ಸಲ್ಲಿಸಿದರೆ ಅದರಿಂದ ಮೂಲ ಉದ್ಧೇಶ ನಿಷ್ಪಲವಾದಂತಾಗುತ್ತದೆ ಎಂದು ವಿಭಾಗೀಯ ಪೀಠ ತೀರ್ಪು ನೀಡಿತು. ಕಕ್ಷಿದಾರರಾದ ಹೇಮಲತಾ ಬಕ್ಚಾವ್ ಅವರು ನಾಸಿಕ್ ಜಿಲ್ಲಾ ಪರಿಷತ್ತಿನಲ್ಲಿ ಪರಿಶಿಷ್ಟ ಜಾತಿ ಅಭ್ಯರ್ಥಿಗೆ ಮೀಸಲಾದ ಹುದ್ದೆಗೆ ಡಿಸೆಂಬರ್ 2003ರಲ್ಲಿ ನೇಮಕಗೊಂಡರು. ಬಕ್ಚಾವ್ ಅವರು ಮೂಲತಃ ಮರಾಠಿಗರು. ಆದರೆ ಆಕೆಯ ಪತಿ ಮಹಾದೇವ್ ಕೋಲಿ, ಪರಿಶಿಷ್ಟ ಪಂಗಡಕ್ಕೆ ಸೇರಿದವರು. ಈಕೆ ತಾನು ಕೋಲಿಯವರನ್ನು ಮದುವೆಯಾಗುವ ಮೂಲಕ ಪರಿಶಿಷ್ಟ ಪಂಗಡಕ್ಕೆ ಸೇರಿರುವುದಾಗಿ ಅರ್ಜಿಯಲ್ಲಿ ನಮೂದಿಸಿದ್ದರು. ಪರಿಶಿಷ್ಟ ಪಂಗಡದ ನೇಮಕ ಪಟ್ಟಿಯನ್ನು ಪರಿಷ್ಕರಣೆಗೆ ಒಳಪಡಿಸಿದಾಗ ಬಕ್ಚಾವ್ ಹುಟ್ಟಿನಿಂದ ಪರಿಶಿಷ್ಟ ಪಂಗಡಕ್ಕೆ ಸೇರಿಲ್ಲ ಎಂದು ತಿಳಿದು, ಅವರ ನೇಮಕವನ್ನು ರದ್ದುಗೊಳಿಸಲಾಗಿತ್ತು. ಆಕೆ ಈ ರದ್ಧತಿಯನ್ನು ಹೈಕೋರ್ಟಿನಲ್ಲಿ ಪ್ರಶ್ನಿಸಿದ್ದರು.

2008: ಖ್ಯಾತ  ಸಂಸ್ಕೃತ ಕವಿ ಸ್ವಾಮಿ ರಾಮಭದ್ರಾಚಾರ್ಯ ಅವರಿಗೆ 2007ನೇ ಸಾಲಿನ 16ನೇ ವಾಚಸ್ಪತಿ ಪುರಸ್ಕಾರ ಘೋಷಿಸಲಾಯಿತು. ರಾಮಭದ್ರಾಚಾರ್ಯರ `ಶ್ರೀ ಭಾರ್ಗವಾರಾಘವೀಯಂ' (ಮಹಾಕಾವ್ಯ) ಕೃತಿಗೆ ಈ ಪ್ರಶಸ್ತಿ ಲಭಿಸಿತು. ಈ ಪ್ರಶಸ್ತಿಯು 1 ಲಕ್ಷ ರೂಪಾಯಿ ನಗದನ್ನು ಒಳಗೊಂಡಿದೆ ಎಂದು ಕೆ.ಕೆ. ಬಿರ್ಲಾ ಪ್ರತಿಷ್ಠಾನ ತಿಳಿಸಿತು. 2ನೇ ವರ್ಷದಲ್ಲೇ ದೃಷ್ಟಿ ಕಳೆದುಕೊಂಡ ರಾಮಭದ್ರಾಚಾರ್ಯ ಹಿಂದಿ ಮತ್ತು ಸಂಸ್ಕೃತದಲ್ಲಿ 50ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿದವರು. ಉತ್ತರ ಪ್ರದೇಶ ಸರ್ಕಾರವು ಅವರನ್ನು ಅಶಕ್ತರ ವಿ.ವಿ.ಯ ಜೀವಮಾನದ ಕುಲಪತಿಯಾಗಿ ನೇಮಿಸಿದೆ.

2008: ಸಿಗರೇಟ್, ಬೀಡಿ ಸೇದುವುದರಿಂದ ಅಥವಾ ಹೆಚ್ಚು ಮದ್ಯಪಾನ ಮಾಡುವುದರಿಂದ ಕ್ಯಾನ್ಸರ್ ಬರುತ್ತದೆ ಎಂಬುದನ್ನು ಸಂಶೋಧನೆಗಳು ಹಿಂದಿನಿಂದಲೂ ಹೇಳುತ್ತಿವೆ. ಆದರೆ, ಹೊಸ ಸಂಶೋಧನೆಯೊಂದು, ಈ ಚಟಗಳು ವ್ಯಕ್ತಿಯ ವಂಶದ ತಳಿಗುಣವನ್ನೇ ಬದಲಾಯಿಸಬಹುದು ಎಂದು ಹೇಳಿತು. ಧೂಮಪಾನ, ಮದ್ಯಪಾನದಿಂದ ಗಂಡಸರ ವೀರ್ಯಾಣುವಿನಲ್ಲಿ ರಾಸಾಯನಿಕ ಬದಲಾವಣೆ ಆಗುತ್ತದೆ. ಇದು ವ್ಯಕ್ತಿಗೆ ಹುಟ್ಟಲಿರುವ ಮಗು ಹಾಗೂ ಆಮೇಲಿನ ಪೀಳಿಗೆಗಳಿಗೆ ತಂತಾನೇ ವರ್ಗಾವಣೆ ಆಗುತ್ತದೆ ಎನ್ನುವುದು ಲಂಡನ್ನಿನ ಸಂಶೋಧಕರ ತಂಡದ ಪ್ರತಿಪಾದನೆ. ಇಲಿಗಳ ಮೇಲೆ ಮಾಡಿದ ಪ್ರಯೋಗದಿಂದ ಇದು ಖಚಿತವಾಗಿದೆ. ಇಂತಹ ಇಲಿಗಳಿಗೆ ಹುಟ್ಟಿದ ಮರಿಗಳಲ್ಲಿ ಜನನೇಂದ್ರಿಯಕ್ಕೆ ಸಂಬಂಧಪಟ್ಟ ಪ್ರೋಸ್ಟೇಟ್ ಗಂಥಿ ಮತ್ತು ವೀರ್ಯ ಉತ್ಪತ್ತಿ ಸಮಸ್ಯೆಗಳು ಕಂಡುಬಂದಿವೆ ಎಂದು ವಿಜ್ಞಾನಿಗಳು ವಿವರ ನೀಡಿದರು.

2008: ಬೆಂಗಳೂರು ನಗರದ ಮಣಿಪಾಲ ಆಸ್ಪತ್ರೆಯ 50 ಕ್ಕೂ ಹೆಚ್ಚು ವಿಶೇಷ ಸೇವಾ ಕ್ಷೇತ್ರಗಳಿಗೆ ರಾಷ್ಟ್ರೀಯ ಆಸ್ಪತ್ರೆಗಳ ಮಂಡಳಿ (ಎನ್ಎಬಿಎಚ್)ಯ ಮಾನ್ಯತೆ ಲಭಿಸಿತು. ನಾಲ್ಕು ವರ್ಷಗಳ ಹಿಂದೆ ಅಳವಡಿಸಿಕೊಳ್ಳಲಾದ ಗುಣಮಟ್ಟ ನಿರ್ವಹಣಾ ವ್ಯವಸ್ಥೆಯಿಂದಾಗಿ ಅಸ್ಪತ್ರೆಗೆ ಈ ಮಾನ್ಯತೆ ದೊರೆತಿದೆ ಎಂದು ಪ್ರಕಟಣೆ ತಿಳಿಸಿತು. ಕ್ಲಿನಿಕಲ್, ನರ್ಸಿಂಗ್, ರೋಗ ಪತ್ತೆ ಮತ್ತು ಸಂಬಂಧಿಸಿದ ಕ್ಷೇತ್ರಗಳಲ್ಲಿ ಐಎಸ್ಒ ಪ್ರಮಾಣ ಪತ್ರದ ಮಾನ್ಯತೆ ಪಡೆದ ಮೊಟ್ಟ ಮೊದಲ ಭಾರತೀಯ ಆಸ್ಪತ್ರೆಯೂ ಇದಾಗಿದೆ.

2008: ಕೇಂದ್ರದ ಮಾಜಿ ಸಚಿವೆ, ಬಿಜೆಪಿ ನಾಯಕಿ ಬಸವರಾಜೇಶ್ವರಿ (85) ಅವರು ಬೆಳಿಗ್ಗೆ 11.15ಕ್ಕೆ ಬಳ್ಳಾರಿನಗರದಲ್ಲಿ ನಿಧನರಾದರು. 1957ರಿಂದ ಸಕ್ರಿಯ ರಾಜಕಾರಣ ಪ್ರವೇಶಿಸಿದ ಅವರು 1957, 1962 ಮತ್ತು 1967ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ರಾಯಚೂರು ಜಿಲ್ಲೆ ಮಾನ್ವಿ ಕ್ಷೇತ್ರವನ್ನು ಪ್ರತಿನಿಧಿಸಿ 3 ಬಾರಿ ಶಾಸಕಿಯಾಗಿದ್ದರು. ಅದೇ ಅವಧಿಯಲ್ಲಿ ಕರ್ನಾಟಕ ರಾಜ್ಯದ ಸಮಾಜ ಕಲ್ಯಾಣ ಮತ್ತು ಸಣ್ಣ ನೀರಾವರಿ ಖಾತೆಯ ಉಪ ಸಚಿವೆಯಾಗಿ ಕಾರ್ಯ ನಿರ್ವಹಿಸಿದರು. 1977ರಿಂದ 6 ವರ್ಷಗಳ ಕಾಲ ರಾಜ್ಯ ವಿಧಾನ ಪರಿಷತ್ ಸದಸ್ಯೆಯಾಗಿ, ಸ್ವಲ್ಪ ಕಾಲ ಹಂಗಾಮಿ ಸಭಾಪತಿಯಾಗಿಯೂ ಸೇವೆ ಸಲ್ಲಿಸಿದ್ದರು. ಬಳ್ಳಾರಿ ಕ್ಷೇತ್ರದಿಂದ 8, 9 ಮತ್ತು 10ನೇ ಲೋಕಸಭೆಗೆ ಸದಸ್ಯರಾಗಿ ಅವರು ಸತತ 3 ಬಾರಿ ಆಯ್ಕೆಯಾಗಿದ್ದರು. 1993ರಿಂದ 1995ರ ವರೆಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆಯ ರಾಜ್ಯ ಸಚಿವೆಯಾಗಿ ಸೇವೆ ಸಲ್ಲಿಸಿದ್ದರು. ಸಚಿವೆಯಾಗಿದ್ದಾಗಲೇ 1995ರಲ್ಲಿ ಚೀನಾದ ಬೀಜಿಂಗಿನಲ್ಲಿ ನಡೆದ ವಿಶ್ವ ಮಹಿಳಾ ಸಮಾವೇಶದಲ್ಲಿ ಭಾರತವನ್ನು ಪ್ರತಿನಿಧಿಸಿದ್ದರು. 

2007: ದೆಹಲಿ ಮತ್ತು ಅಟ್ಟಾರಿ ನಡುವೆ ಸಂಚರಿಸುವ ಭಾರತ- ಪಾಕಿಸ್ತಾನ ನಡುವಣ ಸ್ನೇಹ ಸೇತುವೆಯಾಗಿರುವ ಸಮ್ ಜೌತಾ (ಗೆಳೆತನ) ಎಕ್ಸ್ಪ್ರೆಸ್ ರೈಲಿನಲ್ಲಿ ನಡುರಾತ್ರಿಯ್ಲಲಿ ಸಂಭವಿಸಿದ ಬಾಂಬ್ ಸ್ಫೋಟ ಮತ್ತು ಅಗ್ನಿ ದುರಂತದ್ಲಲಿ 67 ಪ್ರಯಾಣಿಕರು ಸುಟ್ಟು ಕರಕಲಾಗಿ ಇತರ 60 ಮಂದಿ ಗಾಯಗೊಂಡರು. ಹಳೆ ದೆಹಲಿ ಪ್ಲ್ಯಾಟ್ ಫಾರ್ಮಿನಿಂದ ರಾತ್ರಿ 10.40ಕ್ಕೆ ಹೊರಟ ರೈಲಿನಲ್ಲಿ 11.56ಕ್ಕೆ ಪಾಣಿಪತ್ ಸಮೀಪ ಸೂಟ್ ಕೇಸ್ ಸ್ಫೋಟಗೊಂಡು ಈ ದುರಂತ ಸಂಭವಿಸಿತು. ಪರಿಣಾಮವಾಗಿ ಹಿಂದಿನ ಎರಡು ಬೋಗಿಗಳಲ್ಲಿ ಬೆಂಕಿ ಹೊತ್ತಿಕೊಂಡಿತು. ಸತ್ತವರಲ್ಲಿ ಬಹುತೇಕ ಮಂದಿ ಪಾಕಿಸ್ಥಾನೀಯರು.

2007: ಇಡೀ ದೇಶವನ್ನು ತಲ್ಲಣಗೊಳಿಸಿದ್ದ ನೈನಾ ಸಹಾನಿ ಕೊಲೆ ಪ್ರಕರಣದ ಆರೋಪಿ ಸುಶೀಲ ಶರ್ಮಾಗೆ (ತಂದೂರಿ ಶರ್ಮಾ) ವಿಧಿಸಲಾದ ಮರಣದಂಡನೆಯನ್ನು ದೆಹಲಿ ಹೈಕೋರ್ಟ್ ಕಾಯಂಗೊಳಿಸಿತು. ಇದೊಂದು ಪೈಶಾಚಿಕ ಕೃತ್ಯ ಎಂದು ನ್ಯಾಯಾಲಯ ಹೇಳಿತು.

2007: ಬೆಳಗಾವಿ ಜಿಲ್ಲೆಯ ರಂ.ಶಾ. ಲೋಕಾಪುರ ಅವರು ಮರಾಠಿಯಿಂದ ಕನ್ನಡಕ್ಕೆ ತಂದಿರುವ ತುಕಾರಾಂ ಅವರ `ಜ್ಞಾನೇಶ್ವರಿ' ಕೃತಿಯು ಕೇಂದ್ರ ಸಾಹಿತ್ಯ ಅಕಾಡೆಮಿಯ 2006ನೇ ಸಾಲಿನ ಅನುವಾದ ಪ್ರಶಸ್ತಿಗೆ ಆಯ್ಕೆಯಾಯಿತು. ಮರಾಠಿ ಸಂತ ಜ್ಞಾನೇಶ್ವರ ಅವರು 1290ರಲ್ಲಿ ರಚಿಸಿದ್ದ ಸಾಹಿತ್ಯವನ್ನು `ಕನ್ನಡ ಜ್ಞಾನೇಶ್ವರಿ' ಎಂಬ ಕೃತಿ ರಚನೆ ಮೂಲಕ ಲೋಕಾಪುರ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ. ಲೋಕಾಪುರ ಅವರು ರಚಿಸಿದ `ತಾಯಿ ಸಾಹೇಬ' ಕಾದಂಬರಿ ಚಲನಚಿತ್ರವಾಗಿದೆ. `ಸಾವಿತ್ರಿ' ಎಂಬ ಇನ್ನೊಂದು ಕಾದಂಬರಿ ಸುಧಾ ವಾರಪತ್ರಿಕೆಯಲ್ಲಿ ಪ್ರಕಟವಾಗಿತ್ತು. 

2007: ಪಶ್ಚಿಮ ಘಟ್ಟದ ಅರಣ್ಯದಲ್ಲಿ ಚಾರಣಕ್ಕೆ ಹೋದ ಸಂದರ್ಭದಲ್ಲಿ ಕಣ್ಮರೆಯಾಗಿದ್ದ ಬೆಂಗಳೂರಿನ ಮೂವರು ಸಾಹಸಿಗರ ಪೈಕಿ ಇಬ್ಬರ ಕಳೇಬರಗಳು 9 ತಿಂಗಳ ನಂತರ ಪತ್ತೆಯಾದವು. ಅಡ್ವೆಂಚರ್ಸ್ ಕ್ಲಬ್ಬಿನ ಭಾಸ್ಕರ ಬಾಬು, ಎಂಜಿನಿಯರ್ ತೇಜಮೂರ್ತಿ ಮತ್ತು ವಸಂತ ಕುಮಾರ ಅವರು ಮೇ 28ರಂದು ಪಶ್ಚಿಮ ಘಟ್ಟದ ಗುಂಡ್ಯ ಸಮೀಪದ ಚೌಡೇಶ್ವರಿ ದೇವಸ್ಥಾನದಲ್ಲಿ ಕಾರು ನಿಲ್ಲಿಸಿ ಚಾರಣಕ್ಕೆ ಹೊರಟವರು ಕಣ್ಮರೆಯಾಗಿದ್ದರು. ಅವರ ಶೋಧಕ್ಕಾಗಿ ನಡೆಸಿದ ಎಲ್ಲ ಯತ್ನಗಳೂ ವಿಫಲಗೊಂಡಿದ್ದವು.

2006: ಭಾರತೀಯ ಕ್ರಿಕೆಟ್ ತಂಡದ ವಿಕೆಟ್ ಕೀಪರ್ ಮಹೇಂದ್ರ ಸಿಂಗ್ ಧೋನಿ ಪಾಕಿಸ್ಥಾನದ ವಿರುದ್ಧ ನಡೆದ ಐದನೇ ಹಾಗೂ ಅಂತಿಮ ಏಕದಿನ ಪಂದ್ಯದಲ್ಲಿ 77 ರನ್ ಸಿಡಿಸಿ ಅಜೇಯರಾಗಿ ಉಳಿಯುವ ಮೂಲಕ ವಿಶ್ವದಾಖಲೆ ಸ್ಥಾಪಿಸಿದರು. ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶನ ನೀಡುವ ಮೂಲಕ ಅವರು ಪಾಕಿಸ್ಥಾನ ಪ್ರವಾಸದ ಬಳಿಕ 53.95 ಸರಾಸರಿಗೆ ಬಂದಿದ್ದು, ಆಸ್ಟ್ರೇಲಿಯಾದ ಮೈಕೆಲ್ ಬೆವನ್ ಹೆಸರಿನಲ್ಲಿ ಇದ್ದ 53.58ರ ಸರಾಸರಿಯ ವಿಶ್ವದಾಖಲೆ (ಕನಿಷ್ಠ 1000 ರನ್) ಅಳಿಸಿ ಹಾಕಿದರು.

2006: ಬೇಸಾಯ ಮಾಡುತ್ತಾ ಶಾಲೆಯ ಮುಖವನ್ನೇ ನೋಡಿರದೇ ಇದ್ದ ಜಡೇಗೌಡ ಅವರು ಬಿಳಿಗಿರಿ ರಂಗನ ಬೆಟ್ಟದ ಡಾ. ಸುದರ್ಶನ್ ಅವರ ಪ್ರಯತ್ನದ ಫಲವಾಗಿ ವಿದ್ಯೆ ಕಲಿತು ಎಂ.ಎಸ್.ಸಿವರೆಗೂ ಕಲಿತು ಬೆಂಗಳೂರು ಕೃಷಿ ವಿಶ್ವವಿದ್ಯಾಲಯಕ್ಕೆ ಸೇರಿದ ಪೊನ್ನಂಪೇಟೆಯ ಅರಣ್ಯ ಕಾಲೇಜಿನ ಸಹಾಯಕ ಪ್ರಾಧ್ಯಾಪಕರಾಗಿ ನೇಮಕಗೊಂಡರು. ಇದರೊಂದಿಗೆ ಈ ರೀತಿ ನೇಮಕಗೊಂಡ ರಾಜ್ಯದ ಪ್ರಥಮ ಸೋಲಿಗ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

2006: ಪ್ರವಾದಿ ಮಹಮ್ಮದರ ವ್ಯಂಗ್ಯಚಿತ್ರವನ್ನು ಮೊತ್ತ ಮೊದಲ ಬಾರಿಗೆ ಪ್ರಕಟಿಸಿದ ಡೆನ್ಮಾರ್ಕಿನ ಡ್ಯಾನಿಷ್ ದಿನಪತ್ರಿಕೆ `ಜಿಲ್ಲಾಂಡ್ಸ್- ಪೋಸ್ಟೆನ್' ಈ ವ್ಯಂಗ್ಯಚಿತ್ರಗಳಿಗೆ ಜಗತ್ತಿನಾದ್ಯಂತ ಭುಗಿಲೆದ್ದ ಪ್ರತಿಭಟನೆಯ ಹಿನ್ನೆಲೆಯಲ್ಲಿ ಕ್ಷಮಾಪಣೆ ಕೇಳಿತು. ಅದನ್ನು ಸೌದಿ ಸ್ವಾಮ್ಯದ ಪಾನ್ ಅರಬ್ ವೃತ್ತಪತ್ರಿಕೆ `ಆಶ್ರಖ್ ಅಲ್-ಅವಾಸತ್' ಪ್ರಕಟಿಸಿತು. ಕ್ಷಮೆಯಾಚನೆಗೆ ಪತ್ರಿಕೆಯ ಮುಖ್ಯ ಸಂಪಾದಕ ಕಾರ್ಸ್ಟೆನ್ ಜಸ್ಟೆ ಸಹಿ ಹಾಕಿದರು. ಇದನ್ನು ಅರೇಬಿಕ್ ಭಾಷೆಗೆ ಭಾಷಾಂತರಿಸಿ `ಜಿಲ್ಲಾಂಡ್ಸ್- ಪೋಸ್ಟೆನ್'ನ ವೆಬ್ ಸೈಟಿನಲ್ಲೂ ಪ್ರಕಟಿಸಲಾಯಿತು. ಲಿಬಿಯಾ, ನೈಜೀರಿಯಾ ಮತ್ತು ಪಾಕಿಸ್ಥಾನದಲ್ಲಿ ಭುಗಿಲೆದ್ದ ಹಿಂಸಾಚಾರಗಳಿಗೆ 32 ಮಂದಿ ಬಲಿಯಾದ ಬಳಿಕ ಡ್ಯಾನಿಷ್ ಪತ್ರಿಕೆ ಈ ಕ್ಷಮೆಯಾಚನೆ ಕ್ರಮ ಕೈಗೊಂಡಿತು. `ಅಭಿವ್ಯಕ್ತಿ ಸ್ವಾತಂತ್ರ್ಯದ ಮೇಲಿನ ಚರ್ಚೆ' ಅಂಗವಾಗಿ 2005ರ ಸೆಪ್ಟೆಂಬರ್ 30ರಂದು ಮೊದಲಿಗೆ 12 ವ್ಯಂಗ್ಯಚಿತ್ರಗಳನ್ನು ಡೆನ್ಮಾರ್ಕಿನ ಪತ್ರಿಕೆ ಪ್ರಕಟಿಸಿತ್ತು. ಈ ವ್ಯಂಗ್ಯಚಿತ್ರಗಳು ಹಲವಾರು ಐರೋಪ್ಯ ಪತ್ರಿಕೆಗಳಲ್ಲಿ ವ್ಯಾಪಕವಾಗಿ ಮರು ಮುದ್ರಣಗೊಂಡದ್ದಲ್ಲದೆ, ಇಟಲಿಯ ಸುಧಾರಣಾ ಸಚಿವ ರಾಬರ್ಟೊ ಕಾಲ್ಡೆರೋಲಿ ಅವರ ಟೀಶರ್ಟಿನಲ್ಲೂ ಮುದ್ರಣಗೊಂಡಿತ್ತು. ವಿವಾದದ ಹಿನ್ನೆಲೆಯಲ್ಲಿ ರಾಬರ್ಟೊ ರಾಜೀನಾಮೆ ನೀಡಿದ್ದರು.

2006: ಹಾಸನ ಜಿಲ್ಲೆಯ ಶ್ರವಣಬೆಳಗೊಳದಲ್ಲಿ 12 ವರ್ಷಕ್ಕೊಮ್ಮೆ ವೈರಾಗ್ಯಮೂರ್ತಿ ಭಗವಾನ್ ಬಾಹುಬಲಿಗೆ ನಡೆಯುವ ಹನ್ನೆರಡು ದಿನಗಳ ಮಹಾಮಸ್ತಕಾಭಿಷೇಕ ಕೊನೆಗೊಂಡಿತು.  ಸಹಸ್ರಮಾನದ ಮೊದಲ ಮಹಾಮಸ್ತಕಾಭಿಷೇಕದ ಧಾರ್ಮಿಕ ಆಚರಣೆ ಪರಂಪರೆಯ ಮಹತ್ವದ ಘಟ್ಟಕ್ಕೆ ತೆರೆಬಿತ್ತು.

1997: ಚೀನಾದ ಖ್ಯಾತ ನಾಯಕ ಡೆಂಗ್ ಷ್ಯಾವೊಪಿಂಗ್ ಬೀಜಿಂಗಿನಲ್ಲಿ ತಮ್ಮ 93ನೇ ವಯಸ್ಸಿನಲ್ಲಿ ನಿಧನರಾದರು.

1971: ತೈಲವರ್ಣ, ಜಲವರ್ಣ, ಬೆಳಕು- ನೆರಳು ಚಿತ್ರಕಲೆಯಲ್ಲಿ ಅದ್ವಿತೀಯ ಸಾಧನೆ ಮಾಡಿದ ಅನು ಪಾವಂಜೆ ಜನನ. ಇವರ ತಂದೆ ಕೃಷ್ಣಮೂರ್ತಿ, ತಾಯಿ ಶಾರದಾ. ಹುಟ್ಟ್ದಿದ್ದು ಮಂಗಳೂರಿನಲ್ಲಿ.

1978: ಸಂಗೀತ ನಿರ್ದೇಶಕ ಪಂಕಜ್ ಮಲ್ಲಿಕ್ ನಿಧನ.

1956: ಭಾರತೀಯ ಸ್ವಾತಂತ್ರ್ಯ ಯೋಧರಲ್ಲಿ ಒಬ್ಬರೂ, ಪ್ರಜಾ ಸೋಷಿಯಲಿಸ್ಟ್ ಪಕ್ಷದ ಅಧ್ಯಕ್ಷರೂ ಆದ ಆಚಾರ್ಯ ನರೇಂದ್ರ ದೇವ್ ನಿಧನರಾದರು.

1945: ಎರಡನೇ ಜಾಗತಿಕ ಸಮರದ ಸಂದರ್ಭದಲ್ಲಿ ಅಮೆರಿಕದ 30,000 ನೌಕಾಯೋಧರು ಪಶ್ಚಿಮ ಫೆಸಿಫಿಕ್ ದ್ವೀಪ ಇವಾ ಜಿಮಾಕ್ಕೆ ಲಗ್ಗೆ ಹಾಕಲು ಬಂದಿಳಿದರು. ಅಲ್ಲಿ ಅವರು ಜಪಾನ್ ಪಡೆಗಳಿಂದ ತೀವ್ರ ಪ್ರತಿರೋಧ ಎದುರಿಸಬೇಕಾಯಿತು. ಒಂದು ತಿಂಗಳ ಸುದೀರ್ಘ ಸಮರದ ಬಳಿಕ ಅಮೆರಿಕನ್ನರು ಪ್ರಮುಖ ಆಯಕಟ್ಟಿನ ಈ ದ್ವೀಪದ ಮೇಲೆ ಹಿಡಿತ ಸಾಧಿಸಿದರು.

1915: ಭಾರತದ ಸಮಾಜ ಸುಧಾರಕ, ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯ ಸ್ಥಾಪಕ ಗೋಪಾಲ ಕೃಷ್ಣ ಗೋಖಲೆ (1866-1915) ಅವರು ಪುಣೆಯಲ್ಲಿ ತಮ್ಮ 48ನೇ ವಯಸ್ಸಿನಲ್ಲಿ ನಿಧನರಾದರು.

1906: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರಾಗಿದ್ದ ಗುರೂಜಿ ಎಂದೇ ಜನಪ್ರಿಯರಾಗಿದ್ದ ಮಾಧವರಾವ್ ಸದಾಶಿವರಾವ್ ಗೋಲ್ವಲ್ಕರ್ (19/2/1906- 13/5/1973) ಹುಟ್ಟಿದ ದಿನ.  ಇವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಭಾರತದಲ್ಲಿ ಬಲಶಾಲಿಯಾಗಿ ಕಟ್ಟಿದರು.

1878: ಫೋನೋಗ್ರಾಫ್ ಸಂಶೋಧನೆಗಾಗಿ ಥಾಮಸ್ ಆಲ್ವಾ ಎಡಿಸನ್ ಅವರಿಗೆ ಪೇಟೆಂಟ್ ಲಭಿಸಿತು.

1859: ಸ್ವಾಂಟೆ ಆಗಸ್ಟ್ ಆರ್ಹೆನಿಯಸ್ (1859-1927) ಹುಟ್ಟಿದ ದಿನ. ಸ್ವೀಡಿಷ್ ಭೌತ ರಾಸಾಯನಿಕ ತಜ್ಞನಾದ ಈತ `ಹಸಿರುಮನೆ' ಪರಿಣಾಮವನ್ನು (ಕಾರ್ಬನ್ ಡೈ ಆಕ್ಸೈಡ್ನಿಂದ ವಾತಾವರಣದ ಬಿಸಿ ಹೆಚ್ಚುವುದು) ಮೊತ್ತ ಮೊದಲ ಬಾರಿಗೆ ಗುರುತಿಸಿದ. 

1807: ಆರೋನ್ ಬರ್ ಮೆಕ್ಸಿಕೊ ಮೇಲೆ ದಾಳಿ ನಡೆಸಲು ಯೋಜನೆ ರೂಪಿಸಿದ್ದಕ್ಕಾಗಿ ರಾಜದ್ರೋಹದ ಆಪಾದನೆಗೆ ಗುರಿಯಾಗಿ ಬಂಧಿತನಾದ ಅಮೆರಿಕಾದ ಮೊತ್ತ ಮೊದಲ ಉಪಾಧ್ಯಕ್ಷ ಎನಿಸಿದ. ಮುಂದೆ ಆರೋಪಮುಕ್ತನಾದರೂ ಈತನ ಮೇಲಿನ ಸಂಶಯಕ ಕಪ್ಪುಚುಕ್ಕೆ ಹಾಗೆಯೇ ಉಳಿದುಬಿಟ್ಟಿತು.

1670: ಛತ್ರಪತಿ ಶಿವಾಜಿ ಮಹಾರಾಜರ ಜನನ.

1473: ಪೋಲಂಡ್ ಖಗೋಳತಜ್ಞ ನಿಕೋಲಸ್ ಕೊಪರ್ನಿಕಸ್ (1473-1543) ಪೋಲಂಡಿನ ಟೊರುನ್ನಿನಲ್ಲಿ ಜನಿಸಿದ. ಭೂಮಿ ಮತ್ತು ಇತರ ಗ್ರಹಗಳು ಸೂರ್ಯನಿಗೆ ಪ್ರದಕ್ಷಿಣೆ ಹಾಕುತ್ತಿವೆ ಎಂಬುದಾಗಿ ಈತ ಪ್ರತಿಪಾದಿಸಿದ ಸಿದ್ಧಾಂತವನ್ನು 1000 ವರ್ಷಗಳಿಗೂ ಹೆಚ್ಚು ಕಾಲದವರೆಗೆ ಇಡೀ ಜಗತ್ತು ಸಾರ್ವತ್ರಿಕವಾಗಿ ಒಪ್ಪಿಕೊಂಡಿತು. ಆದರೆ ಗ್ರಹಗಳು ವರ್ತುಲಾಕಾರದ ಕಕ್ಷೆಯಲ್ಲಿ ಸುತ್ತುತ್ತಿವೆ ಎಂಬುದಾಗಿ ಈತ ತಪ್ಪು ಲೆಕ್ಕ ಹಾಕಿದ್ದ. (ಗ್ರಹಗಳು ಸುತ್ತುವುದು ಅಂಡಾಕಾರದ ವೃತ್ತದಲ್ಲಿ ಎಂಬುದು ಮುಂದೆ ಖಚಿತಗೊಂಡಿತು.)

(ಸಂಗ್ರಹ: ನೆತ್ರಕೆರೆ ಉದಯಶಂಕರ)

Tuesday, February 24, 2009

ಇಂದಿನ ಇತಿಹಾಸ History Today ಫೆಬ್ರುವರಿ 18


ಇಂದಿನ ಇತಿಹಾಸ

ಫೆಬ್ರುವರಿ 18

ಭಾರತೀಯ ಸಂತ ರಾಮಕೃಷ್ಣ ಪರಮಹಂಸ (1836-1886) ಹುಟ್ಟಿದರು. ಇವರ ಶಿಷ್ಯ ಸಾಮಿ ವಿವೇಕಾನಂದರು ರಾಮಕೃಷ್ಣ ಮಿಷನ್ ಸ್ಥಾಪಿಸಿ ಪರಮಹಂಸರ ತತ್ವ ಪ್ರಸಾರ ಮಾಡಿದರು. 

2008: ಮಾತೃಭಾಷೆ ಬೋಧನೆಗೆ  ಸಂಬಂಧಿಸಿದಂತೆ ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯವನ್ನು ಉಲ್ಲೇಖಿಸಿದ ಸುಪ್ರೀಂಕೋರ್ಟ್, ತಮಿಳುನಾಡಿನ ಶಾಲೆಗಳಲ್ಲಿ ತಮಿಳು ಭಾಷೆ  ಕಡ್ಡಾಯಗೊಳಿಸುವುದರಿಂದ ಏನೂ ತೊಂದರೆಯಾಗದು ಎಂದು ಹೇಳಿತು. ಶಾಲೆಗಳಲ್ಲಿ ಸ್ಥಳೀಯ ಭಾಷೆ ಕಡ್ಡಾಯಗೊಳಿಸಬಾರದು ಎಂದು ಕೆಲವರು ವಿರೋಧ ವ್ಯಕ್ತಪಡಿಸುತ್ತ ಬಂದಿದ್ದು, ಈ ಹಿನ್ನೆಲೆಯಲ್ಲಿ ಸುಪ್ರೀಂಕೋರ್ಟಿನ ಆದೇಶ ಹೆಚ್ಚು ಮಹತ್ವ ಪಡೆಯಿತು. 2006 ರ ತಮಿಳುನಾಡಿನ ತಮಿಳು ಕಲಿಕಾ ಕಾನೂನಿನ ಸಿಂಧುತ್ವವನ್ನು ಎತ್ತಿಹಿಡಿದ ಮದ್ರಾಸ್ ಹೈಕೋರ್ಟ್ ತೀರ್ಪಿನಲ್ಲಿ ಮಧ್ಯ  ಪ್ರವೇಶಿಸಲು ನಿರಾಕರಿಸಿದ  ನ್ಯಾಯಮೂರ್ತಿ ಅರಿಜಿತ್ ಪಸಾಯತ್ ಹಾಗೂ ಜೆ.ಎಂ. ಪಂಚಾಲ್ ಅವರ ಪೀಠ, ರಾಜ್ಯ ನೀತಿ ನಿರ್ಣಯಗಳಲ್ಲಿ ನಾವು ಮಧ್ಯಪ್ರವೇಶಿಸಲಾಗದು' ಎಂದು ಹೇಳಿತು. ತಮಿಳುನಾಡಿನಲ್ಲಿ ತಮಿಳು ಕಡ್ಡಾಯಗೊಳಿಸುವ ನಿರ್ಧಾರವನ್ನು ಪ್ರಶ್ನಿಸಿ ಕನ್ಯಾಕುಮಾರಿ ಜಿಲ್ಲೆಯ `ಮಲಯಾಳ ಸಮಾಜ' ಸಂಸ್ಥೆ ಸಲ್ಲಿಸಿದ್ದ ಅರ್ಜಿಯನ್ನೂ ಕೋರ್ಟ್ ಇದೇ ವೇಳೆ ವಜಾ ಮಾಡಿತು. ಕರ್ನಾಟಕ ಹಾಗೂ ಮಹಾರಾಷ್ಟ್ರ ರಾಜ್ಯಗಳಲ್ಲಿ ಮಾತೃಭಾಷೆ ಕಡ್ಡಾಯಗೊಳಿಸಿರುವುದನ್ನು ಕೋರ್ಟ್ ಈ ಸಂದರ್ಭದಲ್ಲಿ ಉಲ್ಲೇಖಿಸಿತು. ಅಲ್ಪಸಂಖ್ಯಾತ ಶಿಕ್ಷಣ ಸಂಸ್ಥೆಗಳು ತಮ್ಮ ಮಾತೃಭಾಷೆಯಲ್ಲಿಯೇ ಕಲಿಸುವ ಹಕ್ಕಿಗೆ ಈ ಕಾಯ್ದೆ ತೊಡಕಾಗುವುದಿಲ್ಲ ಎಂದು ಈ ಸಂದರ್ಭದಲ್ಲಿ ಕೋರ್ಟ್ ಸ್ಪಷ್ಟಪಡಿಸಿತು.

2008: ಮಹತ್ವದ ಬೆಳವಣಿಗೆಯೊಂದರಲ್ಲಿ ರಾಜ್ಯದ ಹಿರಿಯ ಐಎಎಸ್ ಅಧಿಕಾರಿ ಮತ್ತು ಮುಖ್ಯ ಚುನಾವಣಾಧಿಕಾರಿ ಆರ್. ರಾಮಶೇಷನ್ ಅವರು ಸ್ವಯಂ ನಿವೃತ್ತಿ ಪಡೆಯಲು ನಿರ್ಧರಿಸಿದರು. ಅದಕ್ಕೆ ರಾಜ್ಯ ಸರ್ಕಾರ ಅನುಮತಿಯನ್ನೂ ನೀಡಿತು.

2008: ತೀವ್ರ ಕುತೂಹಲ ಕೆರಳಿಸಿದ್ದ ಪಾಕಿಸ್ಥಾನದ ಸಾರ್ವತ್ರಿಕ ಚುನಾವಣೆ ಮುಗಿಯಿತು. ಹತ್ಯೆಗೆ ಒಳಗಾದ ಬೆನಜೀರ್ ಭುಟ್ಟೋ ಅವರ ಪಾಕಿಸ್ಥಾನ ಪೀಪಲ್ಸ್ ಪಾರ್ಟಿ ಮೇಲುಗೈ ಸಾಧಿಸಿತು. ಚುನಾವಣೆ ಕಾಲದಲ್ಲಿ  ರಾಜಕೀಯ ಪಕ್ಷಗಳ ಕಾರ್ಯಕರ್ತರ ನಡುವೆ ಮಾರಾ ಮಾರಿ ಘಟನೆಗಳು ನಡೆದವು. ವಿವಿಧ ಪ್ರದೇಶಗಳಲ್ಲಿ ಸಂಭವಿಸಿದ ಹಿಂಸಾಚಾರದಲ್ಲಿ 8 ಜನರು ಸಾವನ್ನಪ್ಪಿದರು.

2008: ವಿವಾಹ ನೋಂದಣಿಗೆ ವಾಸಸ್ಥಳ ಪ್ರಮಾಣ ಪತ್ರದಲ್ಲಿ ನಕಲಿ ವಿಳಾಸ ನೀಡಿರುವುದಕ್ಕೆ ನಟ ಸಂಜಯ್ ದತ್ ಅವರ ಪತ್ನಿ ಮಾನ್ಯತಾಗೆ ದಕ್ಷಿಣ ಗೋವಾ ಜಿಲ್ಲಾಧಿಕಾರಿ ಕಚೇರಿ ಷೋಕಾಸ್ ನೋಟಿಸ್ ನೀಡಿತು. ವಾಸಸ್ಥಳ ಪ್ರಮಾಣಪತ್ರ ರದ್ದುಗೊಳಿಸುವ ಸಂಬಂಧ ಮಾನ್ಯತಾ ಅವರ ಮಾರ್ಗೋವಾ ವಿಳಾಸಕ್ಕೆ ನೋಟಿಸ್ ಕಳಿಸಲಾಗಿದೆ ಎಂದು ಕಂದಾಯ ಅಧಿಕಾರಿ ಪರೇಶ್ ಎಂ. ಫಲ್ ದೇಸಾಯಿ ತಿಳಿಸಿದರು. ಫೆಬ್ರುವರಿ 7 ರಂದು ಪಣಜಿಯ ಪಂಚತಾರಾ ಹೋಟೆಲಿನಲ್ಲಿ ಸಂಜಯ್ ಹಾಗೂ ಮಾನ್ಯತಾ ವಿವಾಹವಾಗಿದ್ದರು. 

2008: ನಾಲ್ಕು ಕಿಡ್ನಿಗಳನ್ನು ಹೊಂದಿದ 18ರ ಹರೆಯದ ಅದೃಷ್ಟವಂತೆ ಲಂಡನ್ನಿನ ಲೌರಾ ಮೂನ್ ಎನ್ನುವ ಯುವತಿ ಕಿಡ್ನಿ ದಾನ ಮಾಡಲು ಮುಂದಾದಳು. ತನ್ನ ದೇಹದಲ್ಲಿ ಇರುವ ಹೆಚ್ಚಿನ ಎರಡು ಕಿಡ್ನಿಗಳನ್ನು ದಾನ ಮಾಡುವುದು ಈ ಯುವತಿಯ ಬಯಕೆ. `ಮತ್ತೊಬ್ಬರಿಗೆ ಈ ಮೂಲಕ ನೆರವಾಗುತ್ತೇನೆ ಎನ್ನುವುದು ನನ್ನ ಆಶಯ. ನಾನಿನ್ನೂ ಹರೆಯದ ಹುಡುಗಿ. ಕಿಡ್ನಿ ದಾನಿಯಾಗುವುದು ನನ್ನ ಶಕ್ತಿ ಸಾಮರ್ಥ್ಯದ ನೆಲೆಯಲ್ಲೇ' ಎಂದು ಈ ಯುವತಿ ಎದೆತಟ್ಟಿ ಹೇಳಿದಳು. ಸಾಮಾನ್ಯವಾಗಿ ಪ್ರತಿ 125 ಜನರಲ್ಲಿ ಒಬ್ಬರಿಗೆ ಹೆಚ್ಚಿನ ಒಂದು ಕಿಡ್ನಿ ಇರುತ್ತದೆ. ಆದರೆ ಈ ಯುವತಿಗೆ ಎರಡೂ ಬದಿಯ ಕಿಡ್ನಿಗೆ ತದ್ರೂಪಿ ಕಿಡ್ನಿ ಬೆಳೆದದ್ದು ವಿಶೇಷ ಎನ್ನುತ್ತಾರೆ ಹೆಸರಾಂತ ಕಿಡ್ನಿ ಸರ್ಜನ್ ನಿಯಾಜ್ ಅಹ್ಮದ್. ಈ ಎರಡೂ ಹೆಚ್ಚಿನ ಕಿಡ್ನಿಗಳನ್ನು ದಾನ ಮಾಡಲು ಮುಂದಾಗಿರುವ ಈ ಯುವತಿಯ ನಿರ್ಧಾರಕ್ಕೆ ಕಿಡ್ನಿ ಸರ್ಜನ್ನರು ತಮ್ಮ ಸಮ್ಮತಿ ಸೂಚಿಸಿದರು.

2008: ತಮಿಳಿನ  ರಿಮೇಕ್,  ಅಮೀರ್ ಖಾನ್ ಅಭಿನಯದ ಹಿಂದಿಯ 
 `ಘಜನಿ' ಚಿತ್ರದ ವಿತರಣೆ ಹಕ್ಕನ್ನು  90 ಕೋಟಿ ರೂಪಾಯಿಗಳಿಗೆ ಮಾರಾಟ ಮಾಡಿರುವುದಾಗಿ ವರದಿಯಾಯಿತು. ಕಳೆದ ವರ್ಷ ಶಾರೂಖ್ ಖಾನ್ ಅಭಿನಯದ  `ಓಂ ಶಾಂತಿ ಓಂ' ಚಿತ್ರದ ವಿತರಣೆ ಹಕ್ಕು ಮಾರಾಟದಿಂದ 73 ಕೋಟಿ ರೂಪಾಯಿ ಸಂಗ್ರಹವಾಗಿತ್ತು

2008: ಲಂಡನ್ನಿನಲ್ಲಿ ಇತ್ತೀಚೆಗೆ `ದಯಾಮರಣ'ಕ್ಕೆ ಒಳಗಾದ ಹಸು `ಗಂಗೋತ್ರಿ'ಯ ಚಿತಾಭಸ್ಮವನ್ನು, ಕೆಲವು ಪುರೋಹಿತರ ವಿರೋಧದ ಮಧ್ಯೆ ಹರಿದ್ವಾರದ ಗಂಗೆಯಲ್ಲಿ ತೇಲಿ ಬಿಡಲಾಯಿತು. ಹರ್-ಕಿ-ಪೌರಿ ಹತ್ತಿರ ಚಿತಾಭಸ್ಮವನ್ನು ಗಂಗಾ ನದಿಗೆ ಬಿಡಲಾಯಿತು ಎಂದು ಶ್ರೀಗಂಗಾ ಸಭಾ ಅಧ್ಯಕ್ಷ ರಾಮಕುಮಾರ್ ಮಿಶ್ರ ಹೇಳಿದರು. ಹಿಂದೂ ಧರ್ಮದ ಪ್ರಕಾರ ಈ ಹಸುವಿನ ಚಿತಾಭಸ್ಮವನ್ನು ಗಂಗೆಗೆ ಬಿಡುವುದು ಸರಿಯಲ್ಲ ಎಂದು ಕೆಲವು ಪುರೋಹಿತರು ವಿರೋಧ ಮಾಡಿದ್ದರು. ಆದರೆ, ಕೆಲವು ಹಿರಿಯ ಪುರೋಹಿತರು ಮಧ್ಯಪ್ರವೇಶ ಮಾಡಿ ಮಾತುಕತೆ ನಡೆಸಿದ ಮೇಲೆ ಚಿತಾಭಸ್ಮವನ್ನು ಗಂಗೆಗೆ ಬಿಡಲು ಅವಕಾಶ ಕೊಡಲಾಯಿತು ಎಂದು ಮಿಶ್ರ ತಿಳಿಸಿದರು.

2008: ಕರ್ನಾಟಕ ರಾಜ್ಯ ವೀರಶೈವ ಪಂಚಮಸಾಲಿ ಸಂಘ ಹರಿಹರದಲ್ಲಿ ಆಯೋಜಿಸಿದ್ದ ಅದ್ಧೂರಿ ಸಮಾರಂಭದಲ್ಲಿ ಪಂಚಮಸಾಲಿ ಜಗದ್ಗುರುಗಳ ಪೀಠಾರೋಹಣ ಮಹೋತ್ಸವ ನಡೆಯಿತು. ಹರಹರ ಮಹಾದೇವ, ಜಗದ್ಗುರುಗಳಿಗೆ ಜಯವಾಗಲಿ ಎಂಬ ಘೋಷಣೆಗಳ ನಡುವೆ ಸ್ಥಿರ ಪೀಠಾಧಿಪತಿ ಡಾ. ಮಹಾಂತ ಸ್ವಾಮೀಜಿ ಮತ್ತು ಚರ ಪೀಠಾಧಿಪತಿ ಸಿದ್ದಲಿಂಗೇಶ್ವರ ಸ್ವಾಮೀಜಿಗಳಿಗೆ ರುದ್ರಾಕ್ಷಿ ಕಿರೀಟ ಧಾರಣೆ ಮಾಡುವ ಮೂಲಕ ಪೀಠಾರೋಹಣ ನೆರವೇರಿತು.

2007: ಭಾರತದ ಅಂಚೆ ಕಚೇರಿಯ ಪ್ರಪ್ರಥಮ ಅಂಚೆ ಚೀಟಿ `ಸಿಂಧೆ ಡಾಕ್ಸ್' ನವದೆಹಲಿಯಲ್ಲಿ ಐದು ಸಾವಿರ ಡಾಲರುಗಳಿಗೆ (ಎರಡು ಲಕ್ಷ ರೂಪಾಯಿಗಳು) ಮಾರಾಟವಾಗುವುದರೊಂದಿಗೆ ದಾಖಲೆ ನಿರ್ಮಾಣಗೊಂಡಿತು. ಬ್ರಿಟಿಷ್ ಸಾಮ್ರಾಜ್ಯದ ಆಧೀನದಲ್ಲಿದ್ದ ಭಾರತದ ಸಿಂಧ್ ಪ್ರಾಂತ್ಯದಲ್ಲಿ ಅಂಚೆ ಸೇವೆ ಆರಂಭಿಸುವುದರೊಂದಿಗೆ ಏಷ್ಯಾ ಖಂಡದಲ್ಲಿ ಪ್ರಥಮ ಬಾರಿಗೆ ಅಂಚೆ ವ್ಯವಸ್ಥೆ ಜಾರಿಗೆ ಬಂದಿತ್ತು. 1854ರಲ್ಲಿ ಸಿಂಧೆ ಡಾಕ್ಸ್ ಅಂಚೆ ಚೀಟಿಯನ್ನು ಬಿಡುಗಡೆ ಮಾಡಲಾಯಿತು. ಬ್ರಿಟಿಷರು ಸಿಂಧ್ ಪ್ರಾಂತಕ್ಕೆ ಸಿಂಧೆ ಎಂದು, ಡಾಕ್ ಗೆ (ಅಂಚೆ) ಡಾಕ್ಸ್ ಎಂದೂ ಉಚ್ಚರಿಸುತ್ತಿದ್ದುದರಿಂದ ಅಂಚೆ ಚೀಟಿಯನ್ನು ಸಿಂಧೆ ಡಾಕ್ಸ್ ಎಂದು ಕರೆಯುವುದು ರೂಢಿಯಲ್ಲಿ ಬಂತು. ವಿಶ್ವದಲ್ಲಿ 1840ರಲ್ಲಿ ಪ್ರಥಮ ಬಾರಿಗೆ ಅಂಚೆ ವ್ಯವಸ್ಥೆ ಜಾರಿಗೆ ಬಂದ 14 ವರ್ಷಗಳ ನಂತರ ಅಂದರೆ 1854ರಲ್ಲಿ ಅಂದರೆ ಅಂಚೆ ವ್ಯವಸ್ಥೆ ಇನ್ನೂ ಅಂಬೆಗಾಲಿಡುವ ಸಮಯದಲ್ಲಿ ಪ್ರಥಮ ಅಂಚೆ ಚೀಟಿಯನ್ನು ಬಿಡುಗಡೆ ಮಾಡಿ ಸಿಂಧ್, ಕರಾಚಿ ಮತ್ತು ಮುಂಬೈ ಮಾರ್ಗವಾಗಿ ರವಾನೆಯಾಗುತ್ತ್ದಿದ ಪತ್ರಗಳ ಮೇಲೆ ಅಂಟಿಸಲಾಗುತ್ತಿತ್ತು.

2007: ನೊಬೆಲ್ ಶಾಂತಿ ಪ್ರಶಸ್ತಿ ಪುರಸ್ಕೃತ, ಬಾಂಗ್ಲಾದೇಶದ `ಗ್ರಾಮೀಣ ಬ್ಯಾಂಕ್' ಸ್ಥಾಪಕ ಮಹಮ್ಮದ್ ಯೂನಸ್ ಅವರು ಢಾಕ್ಕಾದಲ್ಲಿ ತಮ್ಮ ಹೊಸ ರಾಜಕೀಯ ಪಕ್ಷದ ಸ್ಥಾಪನೆಯನ್ನು ಘೋಷಿಸಿದರು. ತಿಂಗಳ ಕೊನೆಯಲ್ಲಿ ಪಕ್ಷಕ್ಕೆ `ನಾಗರಿಕ ಶಕ್ತಿ' ಎಂಬುದಾಗಿ ನಾಮಕರಣ ಮಾಡಲಾಗುವುದು ಎಂದು ಅವರು ಪ್ರಕಟಿಸಿದರು.

2007: ಶಿವರಾತ್ರಿ ಆಚರಣೆಗಾಗಿ ಪಾಕಿಸ್ಥಾನಕ್ಕೆ ತೆರಳಿದ್ದ ಭಾರತದ ಹಿಂದೂ ಯಾತ್ರಿಕರು ಲಾಹೋರಿನ ಕೃಷ್ಣ ಮಂದಿರದಲ್ಲಿ ಕೃಷ್ಣ, ಹನುಮಾನ್ ಮತ್ತು ರಾಧೆಯ ವಿಗ್ರಹಗಳನ್ನು ಪ್ರತಿಷ್ಠಾಪಿಸಿದರು. ಭಾರತದ ಪಂಡಿತ ವಿನಯಕುಮಾರ ಭೈರಾಗಿ ನೇತೃತ್ವದಲ್ಲಿ ಈ ಕಾರ್ಯಕ್ರಮ ನಡೆಯಿತು. ದೇಶ ವಿಭಜನೆಯಾದ ಬಳಿಕ ಈ ಮೂವರು ದೇವರ ವಿಗ್ರಹಗಳು ಲಾಹೋರ್ ನಗರದಲ್ಲಿ ಇರಲಿಲ್ಲ.

2007: ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥನಿಗೆ ಕಾವೇರಿ ನೀರಿನಿಂದ ಅಭಿಷೇಕ ಮತ್ತು ರತ್ನಗಿರಿಯಲ್ಲಿ ಭಗವಾನ್ ಬಾಹುಬಲಿ ಸ್ವಾಮಿ ಮೂರ್ತಿಗೆ 5-1 ಕಲಶಗಳಿಂದ ಜಲಾಭಿಷೇಕ ಮಾಡಿ ಕಾವೇರಿ ಸಮಸ್ಯೆಗೆ ಶೀಘ್ರ ಪರಿಹಾರ ಲಭಿಸುವಂತಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ವಿಶೇಷ ಪ್ರಾರ್ಥನೆ ಸಲ್ಲಿಸಿದರು.

2007: ಹಂಪಿ ಕನ್ನಡ ವಿಶ್ವವಿದ್ಯಾಲಯವು ಸಿದ್ಧಪಡಿಸಿರುವ `ಕುವೆಂಪು ಕನ್ನಡ ತಂತ್ರಾಂಶ'ವನ್ನು ಸಾಹಿತಿ ಚಂದ್ರಶೇಖರ ಕಂಬಾರ ಬೆಂಗಳೂರಿನಲ್ಲಿ ಬಿಡುಗಡೆ ಮಾಡಿದರು.

2007: ಗುವಾಹಟಿಯಲ್ಲಿ 33ನೇ ರಾಷ್ಟ್ರೀಯ ಕ್ರೀಡಾಕೂಟಕ್ಕೆ ಪ್ರಧಾನಿ ಮನಮೋಹನ್ ಸಿಂಗ್ ತೆರೆ ಎಳೆದರು. ಅಂತಿಮ ದಿನದ ಸ್ಪರ್ಧೆಯಲ್ಲಿ ಎರಡು ಚಿನ್ನದ ಪದಕ ಗೆದ್ದುಕೊಂಡ ಸರ್ವೀಸಸ್ ತಂಡವು ಒಟ್ಟು 59 ಚಿನ್ನ, 46 ಬೆಳ್ಳಿ, 37 ಕಂಚಿನ ಪದಕಗಳೊಂದಿಗೆ ಅಗ್ರ ತಂಡವಾಗಿ ಹೊರಹೊಮ್ಮಿ `ಸಮಗ್ರ ಪ್ರಶಸ್ತಿ'ಯನ್ನು ಬಾಚಿಕೊಂಡಿತು. ನಂತರದ ಸ್ಥಾನಗಳನ್ನು ಮಣಿಪುರ ಮತ್ತು ಅತಿಥೇಯ ಅಸ್ಸಾಂ ಪಡೆದುಕೊಂಡವು. ಈಜುಕೊಳದಲ್ಲಿ ಕರ್ನಾಟಕ ಮತ್ತೆ ತನ್ನ ಪ್ರಭುತ್ವ ಸ್ಥಾಪಿಸಿತು.

2007: ಚಿತ್ರನಟಿ ರಾಧಿಕಾ ಅವರಿಗೆ ಸೇರಿದ ಬೆಂಗಳೂರಿನ ಬನಶಂಕರಿಯ ಕತ್ರಿಗುಪ್ಪೆಯಲ್ಲಿನ ಮನೆ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ದಾಳಿ ನಡೆಸಿ ಅಪಾರ ಮೊತ್ತದ ಹಣ, ಒಡವೆ ಮತ್ತು ದಾಖಲೆಗಳನ್ನು ವಶಪಡಿಸಿಕೊಂಡರು. ಪ್ರತಿಷ್ಠಿತ ಡಾಲರ್ ಕಾಲೋನಿಯಲ್ಲಿ 13 ಕೋಟಿ ರೂಪಾಯಿ ಬೆಲೆ ಬಾಳುವ ಬಂಗಲೆಯನ್ನು ರಾಧಿಕಾ ಅವರು ಇತ್ತೀಚೆಗೆ ಖರೀದಿಸಿದ ಹಿನ್ನೆಲೆಯಲ್ಲಿ ಈ ದಾಳಿ ನಡೆಯಿತು.

2006: ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಮತ್ತು 7 ಸಚಿವರು ಸೇರಿದಂತೆ 40 ಶಾಸಕರನ್ನು ಜನತಾದಳದಿಂದ (ಎಸ್) ಅಮಾನತುಗೊಳಿಸಲಾಯಿತು. ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಎಚ್. ಡಿ. ದೇವೇಗೌಡ ಅವರ ಮಗ ಕುಮಾರಸ್ವಾಮಿ ಬಂಡಾಯದ ಬಳಿಕ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ತಾವು ನೀಡಿದ್ದ ರಾಜೀನಾಮೆಯನ್ನು ವಾಪಸ್ ಪಡೆದು, ಅಮಾನತು ಪತ್ರಕ್ಕೆ ಸಹಿ ಹಾಕಿದರು. 

2006: ಭಾರತಕ್ಕೆ ಪಕ್ಷಿಜ್ವರ (ಕೋಳಿಜ್ವರ) ಪ್ರವೇಶಿಸಿತು. ಮಹಾರಾಷ್ಟ್ರದ ನಂದೂರ್ ಬರ್ ಮತ್ತು ಧುಲೆ ಜಿಲ್ಲೆಯಲ್ಲಿ ಜ್ವರಕ್ಕೆ ತುತ್ತಾಗಿ ಕೋಳಿಗಳು ಅಸುನೀಗಿದ ಕೆಲವು ಪ್ರಕರಣಗಳನ್ನು ಮಹಾರಾಷ್ಟ್ರ ಸರ್ಕಾರ ದೃಢಪಡಿಸಿತು. ನಂದೂರ್ ಬರ್ ಜಿಲ್ಲೆಯಲ್ಲಿ ಸುಮಾರು 50,000 ಕೋಳಿಗಳು ಜ್ವರದಿಂದ ಸತ್ತವು. 

1957: ಮರಿಟಾ ಕೊಚ್ ಹುಟ್ಟಿದ ದಿನ. ಪೂರ್ವ ಜರ್ಮನಿಯ ಕ್ರೀಡಾಪಟುವಾದ ಈಕೆ 1980ರಲ್ಲಿ ಮಾಸೊದಲ್ಲಿ ನಡೆದ ಒಲಿಂಪಿಕ್ ಕ್ರೀಡಾಕೂಟದಲ್ಲಿ ಅಪೂರ್ವ ಸಾಧನೆ ಮೆರೆದರು. ಈಕೆ ವೈಯಕ್ತಿಕ ಹಾಗೂ ಹೊರಾಂಗಣ ಆಟಗಳಲ್ಲಿ 16 ಜಾಗತಿಕ ದಾಖಲೆಗಳನ್ನು ಹಾಗೂ ಒಳಾಂಗಣ ಕ್ರೀಡೆಗಳಲ್ಲಿ 14 ಜಾಗತಿಕ ದಾಖಲೆಗಳನ್ನು ನಿರ್ಮಿಸಿದರು.

1930: ಅಮೆರಿಕದ ಖಗೋಳತಜ್ಞ ಕ್ಲೈಡ್ ಡಬ್ಲ್ಯೂ ಟೊಂಬಾಗ್ ಪ್ಲೂಟೊ ಗ್ರಹವನ್ನು ಕಂಡು ಹಿಡಿದರು. ಈ ಗ್ರಹ ಇರುವ ಬಗ್ಗೆ ಪರ್ಸಿವಲ್ ಲೊವೆಲ್ ಮತ್ತು ವಿಲಿಯಂ ಎಚ್. ಪಿಕರಿಂಗ್ ಭವಿಷ್ಯ ನುಡಿದಿದ್ದರು. ಇದಕ್ಕಿಂತ ದೊಡ್ಡದಾದ 10ನೇ ಗ್ರಹ ಈಚೆಗಷ್ಟೇ ಪತ್ತೆಯಾಗಿದೆ.

1836: ಭಾರತೀಯ ಸಂತ ರಾಮಕೃಷ್ಣ ಪರಮಹಂಸ (1836-1886) ಹುಟ್ಟಿದರು. ಇವರ ಶಿಷ್ಯ ಸಾಮಿ ವಿವೇಕಾನಂದರು ರಾಮಕೃಷ್ಣ ಮಿಷನ್ ಸ್ಥಾಪಿಸಿ ಪರಮಹಂಸರ ತತ್ವ ಪ್ರಸಾರ ಮಾಡಿದರು. 

1745: ಇಟಲಿಯ ಭೌತತಜ್ಞ ಅಲೆಸ್ಸಾಂಡ್ರೊ ವೋಲ್ಟಾ (1745-1827) ಹುಟ್ಟಿದ ದಿನ. ಇವರು ಸಂಶೋಧಿಸಿದ ಎಲೆಕ್ಟ್ರಿಕ್ ಬ್ಯಾಟರಿ ನಿರಂತರ ವಿದ್ಯುತ್ತಿನ ಮೊದಲ ಮೂಲವಾಯಿತು. 

1564: ಕಲಾವಿದ ಮೈಕೆಲೇಂಜೆಲೋ ತಮ್ಮ 88ನೇ ವಯಸ್ಸಿನಲ್ಲಿ ರೋಮ್ನಲ್ಲಿ ಮೃತನಾದ.

1546: ಜರ್ಮನಿಯ ಪ್ರೊಟೆಸ್ಟೆಂಟ್ ಸುಧಾರಣಾವಾದಿ ನಾಯಕ ಮಾರ್ಟಿನ್ ಲೂಥರ್ ತನ್ನ 62ನೇ ವಯಸ್ಸಿನಲ್ಲಿ ಜರ್ಮನಿಯ ಐಸೆಲ್ ಬೆನ್ನಲ್ಲಿ ಮೃತನಾದ.

(ಸಂಗ್ರಹ: ನೆತ್ರಕೆರೆ ಉದಯಶಂಕರ)

Saturday, February 21, 2009

Free Gavya Chikitsa Shibira

Free Gavya Chikitsa Shibira


Shri Raghavendra Bharati Kalyana Kendra Bangalore and Avalambhana Helpline of Sri Ramachandrapur Mutt have jointly organised free 'Gavya Chikitsa'  Camp at Sri Bharathi Vidyalaya Vijaya Nagara Bangalore on 22 February 2009 .
Click the image for details.

Kamsavadhe at Livermore CA

Kamsavadhe at Livermore CA

 Yakshagana is a traditional theatre form combining dance, music, dialogue, costume-makeup and stage techniques with a distinct blend of classical and folk style. Artistes bring their body, mind, spirit and oration to the rhythm to entertain the audience.

     Kamsa Vadhe (Destruction of Kamsa) is a Yakshagana storyline, depicting the triumph of good over evil. After several attempts to destroy lord Krishna, evil minded Kamsa sends his minister Akroora as a messenger to invite Krishna to a specious archery competition.  Krishna, accompanied by his brother Balarama reaches Kamsa's kingdom Mathura and destroys his evil forces and eventually Kamsa. 

Shiva Vishnu Temple, Livermore California has organised this Yakshagana. Cast:  Kamsa-Ashoka Upadhya; Akroora-Shripada Hegde; Krishna-Girish Hegde; Balarama-Shivarama Bhat; Gopika- Usha Hebbar; Rajaka-Gopal Bhat; Chanoora-Vishwanath Bhat;  Mushtika-Prashant Padubidri .   

Music: KJ Ganesh and Brothers. DJ: Chinmay Hegde. Click the image for details.

Advertisement